Tag: ಹೀರೆಕಾಯಿ ಬಜ್ಜಿ

  • ಚಳಿಗೆ ಬಿಸಿಬಿಸಿ ಹೀರೆಕಾಯಿ ಬಜ್ಜಿ ಮಾಡುವ ವಿಧಾನ

    ಚಳಿಗೆ ಬಿಸಿಬಿಸಿ ಹೀರೆಕಾಯಿ ಬಜ್ಜಿ ಮಾಡುವ ವಿಧಾನ

    ಗಾಗಲೇ ಚಳಿಗಾಲ ಆರಂಭವಾಗಿದೆ. ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ಚಳಿ ಸ್ವಲ್ಪ ಜೋರಾಗಿಯೇ ಇರುತ್ತದೆ. ಹೀಗಾಗಿ ಸಂಜೆಯ ಹೊತ್ತಿಗೆ ಏನಾದ್ರೂ ಬಿಸಿಬಿಸಿಯಾಗಿ ತಿನ್ನೋಣ ಅನ್ನಿಸುತ್ತದೆ. ಆದ್ದರಿಂದ ನಿಮಗಾಗಿ ಸುಲಭವಾದ ಹೀರೆಕಾಯಿ ಬಜ್ಜಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಕಡ್ಲೆ ಹಿಟ್ಟು – ಒಂದು ಕಪ್
    2. ಹೀರೆಕಾಯಿ – 1
    3. ಗರಂ ಮಸಾಲ – 1/2 ಚಮಚ
    4. ಖಾರದ ಪುಡಿ – 1 ಚಮಚ
    5. ಅರಿಶಿಣ – 1/4 ಚಮಚ
    6. ಉಪ್ಪು – ರುಚಿಗೆ ತಕ್ಕಷ್ಟು
    7. ಸೋಡ – ಚಿಟಿಕೆ
    8. ಎಣ್ಣೆ – ಕರಿಯಲು
    9. ನೀರು

    ಮಾಡುವ ವಿಧಾನ
    * ಒಂದು ಬೌಲ್ ಗೆ ಕಡ್ಲೆ ಹಿಟ್ಟು, ಖಾರದ ಪುಡಿ, ಗರಂ ಮಸಲಾ, ಉಪ್ಪು, ಸೋಡ, ಅರಿಶಿಣ ಹಾಕಿಕೊಳ್ಳಿ.
    * ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ(ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು)
    * ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಲು ಬಿಡಿ.
    * ಕಾದ ಎಣ್ಣೆಗೆ ಒಂದೊಂದೇ ಹಿರೇಕಾಯಿ ಮಿಶ್ರಣವನ್ನು ಡಿಪ್ ಮಾಡಿ ಹಾಕಿ.
    * ಬೆಂಕಿಯ ಉರಿಯನ್ನು ಮೀಡಿಯಂನಲ್ಲಿಟ್ಟು ಹೀರೆಕಾಯಿ ಬ್ರೌನ್ ಕಲರ್ ಬರೋವರೆಗೆ ಬೇಯಿಸಿಕೊಳ್ಳಿ.
    * ಬೆಂದ ಬಳಿಕ ಒಂದು ಪ್ಲೇಟ್ ಗೆ ಹಾಕಿ
    * ಈಗ ಬಿಸಿಬಿಸಿ ಹೀರೆಕಾಯಿ ಬಜ್ಜಿಗೆ ಸ್ವಲ್ಪ ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ತುರಿದ ಕ್ಯಾರೇಟ್ ಹಾಕಿ ಸವಿಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv