Tag: ಹೀರೆಕಾಯಿ ದೋಸೆ

  • ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    ಹೀರೆಕಾಯಿಯನ್ನು ಮಾರುಕಟ್ಟೆಯಿಂದ ತಂದಿದ್ದೀರ. ಆದರೆ ನಿಮಗೆ ಪಲ್ಯ, ಸಾರು ಮಾಡಲು ಇಷ್ಟ ಇಲ್ಲ. ಬೇರೆ ಏನಾದ್ರೂ ಹೊಸ ಅಡುಗೆ ಮಾಡಲು ಟ್ರೈ ಮಾಡಬೇಕು ಅಂದುಕೊಂಡಿದ್ದೀರಾ? ಏನ್ ಮಾಡ್ಬೋದಪ್ಪ ಅಂತ ಯೋಚ್ನೆ ಮಾಡ್ತಾ ಇದ್ದೀರಾ? ಹಾಗಾದ್ರೆ ನಾವಿಂದು ನಿಮಗೆ ಬಿಸಿಬಿಸಿ ಹೀರೆಕಾಯಿ ದೋಸೆ ಹೇಗೆ ಮಾಡೋದು ಅನ್ನೋದನ್ನ ಹೇಳಿಕೊಡಲಿದ್ದೇವೆ. ಹೀರೆಕಾಯಿಂದ ನಾವೆಲ್ಲರೂ ಸಾಮಾನ್ಯವಾಗಿ ಮಾಡೋದು, ಒಂದು ಪಲ್ಯ ಬಿಟ್ರೆ ಸಾಂಬಾರ್. ಆದ್ರೆ ಇದೇ ಹೀರೆಕಾಯಿಂದ ಬೆಳಗ್ಗಿನ ಬ್ರೇಕ್ ಫಾಸ್ಟ್ ಕೂಡ ಮಾಡಬಹುದು.

    ಬೇಕಾಗುವ ಸಾಮಗ್ರಿಗಳು:
    * ಹೀರೆಕಾಯಿ 1 ಕಪ್
    * ಅಕ್ಕಿ -2 ಚಮಚ
    * ಉದ್ದಿನ ಬೇಳೆ- 2 ಚಮಚ
    * ಮೆಂತ್ಯೆ – 2 ಚಮಚ
    * ಒಣಮೆಣಸಿನಕಾಯಿ -2
    * ತೆಂಗಿನಕಾಯಿ- ಅರ್ಧ ಕಪ್
    * ದನಿಯಾ – 1 ಚಮಚ
    * ಜೀರಿಗೆ – 1 ಚಮಚ
    * ಬೆಲ್ಲ- ಸ್ವಲ್ಪ
    * ಹುಣಸೆಹಣ್ಣು- ಸ್ವಲ್ಪ
    * ಅರಿಶಿಣ – ಅರ್ಧ ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 1

    ಮಾಡುವ ವಿಧಾನ:
    *ಮೊದಲನೆಯದಾಗಿ, ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ, ಉದ್ದಿನಬೇಳೆ, ಮೆಂತ್ಯೆ, ಒಣ ಮೆಣಸಿನಕಾಯಿಯನ್ನು ಹಾಕಿ 4 ಗಂಟೆಗಳ ಕಾಲ ನೆನೆಸಿಡಿ. ಇದನ್ನೂ ಓದಿ:  ಕಡಿಮೆ ಸಾಮಾಗ್ರಿ ಬಳಸಿ ಈರುಳ್ಳಿ ಚಟ್ನಿ ಮಾಡಿ

    *ನಂತರ ಅದರ ನೀರನ್ನು ಬಸಿದು ಮಿಕ್ಸಿಗೆ ಹಾಕಿ, ಅದಕ್ಕೆ ತೆಂಗಿನಕಾಯಿ, ದನಿಯಾ, ಜೀರಿಗೆ, ಬೆಲ್ಲ, ಹುಣಸೆಹಣ್ಣು, ಅರಿಶಿಣ, ಉಪ್ಪು ಸೇರಿಸಿ, ಅಗತ್ಯವಿರುವಂತೆ ನೀರನ್ನು ಹಾಕಿ, ನೈಸ್ ಆಗಿ ರುಬ್ಬಿಕೊಳ್ಳಿ.ಈ ಹಿಟ್ಟನ್ನು ದೊಡ್ಡ ಬಟ್ಟಲಿಗೆ ಹಾಕಿಕೊಳ್ಳಿ.

    * ಹೀರೆಕಾಯಿಯ ಸಿಪ್ಪೆ ತೆಗೆದು. ಸ್ಲೈಸ್ ರೀತಿ ಕತ್ತರಿಸಿ. ಈಗ ಹಿರೇಕಾಯಿ ಸ್ಲೈಸ್ ಅನ್ನು ಹಿಟ್ಟಿನಲ್ಲಿ ಅದ್ದಿ, ತವಾದ ಮೇಲೆ ಹಾಕುತ್ತಾ, ಆ ಹೀರೆಕಾಯಿಯ ಹೋಳುಗಳನ್ನೇ ವೃತ್ತಾಕಾರವಾಗಿ ದೋಸೆಯಂತೆ ಇಡುತ್ತಾ ಬನ್ನಿ.

    * ತದನಂತರ, ಅದರ ಮೇಲೆ 1 ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಬೇಯಿಸಿದರೆ ಹೀರೆಕಾಯಿ ದೋಸೆ ಸವಿಯಲು ಸಿದ್ಧವಾಗುತ್ತದೆ.