ಕೋಲ್ಕತ್ತಾ: ತಾಯಂದಿರ ದಿನದ (Mother’s Day) ಸಂದರ್ಭದಲ್ಲಿ, ಪಶ್ಚಿಮ ಬಂಗಾಳದ (West Bengal) ಹೂಗ್ಲಿಯಲ್ಲಿ ನಡೆದ ಚುನಾವಣಾ ರ‍್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಇಬ್ಬರು ಯುವಕರು ಮೋದಿಯವರ ತಾಯಿ ದಿ.ಹೀರಾಬೆನ್ (Heeraben Modi) ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಯುವಕ ನೀಡಿದ ಒಂದು ಚಿತ್ರದಲ್ಲಿ, ಮೋದಿ ನೆಲದ ಮೇಲೆ ಕುಳಿತು ತಾಯಿಯ ಕಾಲ್ಗಳ ಮೇಲೆ ಕೈ ಇಟ್ಟುಕೊಂಡು ಮಾತನಾಡುತ್ತಿರುವ ರೀತಿಯಲ್ಲಿದೆ. ಇನ್ನೊಂದು ಚಿತ್ರದಲ್ಲಿ ತಾಯಿ ಮೋದಿಯವರ ಭುಜದ ಮೇಲೆ ಕೈ ಇರಿಸಿ ನಗುತ್ತಿರುವ ರೀತಿಯಲ್ಲಿದೆ.
– ಹೆಚ್‌ಡಿಕೆಗೆ ಕೊತ್ತಂಬರಿ, ಸೌತೆಕಾಯಿ, ಕಬ್ಬು ಮೋಸಂಬಿ ಸೇರಿ ಹಲವು ಬಗೆಯ ಹಾರ – ಅಭಿಮಾನಿಗಳ ಹಾರೈಕೆ, ಹೆಚ್‌ಡಿಕೆ ಕೃತಜ್ಞತೆ
ತುಮಕೂರು: 2023ರ ವಿಧಾನಸಭಾ ಚುನಾವಣಾ (Assembly Election 2023) ಪ್ರಚಾರದ ಭಾಗವಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ನಡೆಯುತ್ತಿರುವ `ಪಂಚರತ್ನ ಯಾತ್ರೆ’ಯಲ್ಲಿ (PanchaRatna Yatra) ವಿವಿಧ ಬಗೆಯ ಹಾರಗಳು ಗಮನ ಸೆಳೆದಿವೆ. ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಹಾಕಿರುವ ಸುಮಾರು 500 ಬಗೆಯ ವಿಭಿನ್ನ ಹಾರಗಳು ಗಿನ್ನಿಸ್ ದಾಖಲೆ ಮಾಡಿದ್ದು, ಏಷ್ಯಾ ಬುಕ್ ಆಫ್ ರೆಕಾರ್ಡ್‌ಗೆ (Asia Book Of Records) ಸೇರಿವೆ.
ಕೊತ್ತಂಬರಿ, ಮೋಸಂಬಿ, ಕಬ್ಬು, ಸೌತೆಕಾಯಿ, ಸೇಬು, ದಾಳಿಂಬೆ ಸೇರಿದಂತೆ ಪಂಚರತ್ನ ಯಾತ್ರೆಯಲ್ಲಿ ಅಭಿಮಾನಿಗಳು 500ಕ್ಕೂ ಹೆಚ್ಚು ಬಗೆಯ ಹಾರಗಳನ್ನು ಹಾಕಿದ್ದು, ಗಿನ್ನಿಸ್ ದಾಖಲೆಯಾಗಿದೆ. ಇದು ಏಷ್ಯಾ (Asia Book Of Records) ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ (India Book Of Records) ಸೇರಿದೆ. ಇಡೀ ದೇಶದಲ್ಲಿ ಇಷ್ಟು ಬಗೆಯ ಹಾರಗಳನ್ನು ಹಾಕಿದ್ದು ಇದೇ ಮೊದಲಾಗಿದೆ. ಹಾಗಾಗಿ ಏಷ್ಯಾ ಬುಕ್ ಆಫ್ ರೆಕಾರ್ಡ್‌ನ ಪ್ರಮುಖರು ಹೆಚ್‌ಡಿಕೆಗೆ ಮೆಡಲ್ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ಪತ್ನಿ ದೀಪಿಕಾಗಾಗಿ 119 ಕೋಟಿ ಬೆಲೆ ಮನೆ ಖರೀದಿಸಿದ ರಣ್ವೀರ್ ಸಿಂಗ್
ಲಿಂಗಾಯತ, ಒಕ್ಕಲಿಗರನ್ನ ಮಂಗ ಮಾಡಿದ್ದಾರೆ: ತುಮಕೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಾಜಿ ಸಿಎಂ, ಮೀಸಲಾತಿ (Reservation) ವಿಚಾರದಲ್ಲಿ ಬಿಜೆಪಿ (BJP) ವಿರುದ್ಧ ಕಿಡಿ ಕಾರಿದ್ದಾರೆ. ಮೀಸಲಾತಿ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡ ಇದೆ. ಕೆಲವು ಮಾರ್ಪಾಡು ಮಾಡಿಕೊಂಡಿದ್ದಾರೆ. ವೀರೇಶ್ವರ ಲಿಂಗಾಯತ ಹಾಗೂ ಒಕ್ಕಲಿಗರನ್ನು ಮಂಗ ಮಾಡಿದ್ದಾರೆ. 3ಎ ಹಾಗೂ 3ಬಿ ಪ್ರವರ್ಗವನ್ನ ಸೈಲೆಂಟ್ ಮಾಡಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಿಳಿ ಸೀರೆಯೊಂದಿಗೆ ಕರವಸ್ತ್ರ ಯಾವಾಗ್ಲೂ ಇರುತ್ತಿತ್ತು- ಹೀರಾಬೆನ್ ಕುತೂಹಲಕಾರಿ ಸಂಗತಿ
ಇವರು ಮೀಸಲಾತಿ ಕೊಡುವಷ್ಟರಲ್ಲಿ ಸರ್ಕಾರವೇ ಇರಲ್ಲ. ಉತ್ತರಪ್ರದೇಶದಲ್ಲಿ ಈಗಾಗಲೇ ಹೈಕೋರ್ಟ್ ಮೀಸಲಾತಿ ತಿರಸ್ಕಾರ ಮಾಡಿದೆ. ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ಬರಬಹುದು. ಬಿಜೆಪಿಯವರು ಚುನಾವಣೆಗಾಗಿ ಈ ರೀತಿ ಮಾಡುತಿದ್ದಾರೆ. ಪಂಚಮ ಸಾಲಿಗರು 2ಎ ಸೇರಿಸಿ ಎಂದು ಬೇಡಿಕೆಯಿಟ್ಟರೆ, 2ಡಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ತೆಗೆದುಕೊಂಡ ಈ ತೀರ್ಮಾನ ಹಲವು ಜನಾಂಗವನ್ನು ಎತ್ತಿಕಟ್ಟುವಂತಾಗಿದೆ. ಮೀಸಲಾತಿ ಅನ್ನೋದು ಧ್ವನಿ ಇಲ್ಲದ ವರ್ಗಕ್ಕೆ ಅನುಕೂಲ ಆಗಬೇಕು, ಆದ್ರೆ ಸರ್ಕಾರ ತೆಗೆದುಕೊಂಡ ತೀರ್ಮಾನದಿಂದ ಜನತೆಗೆ ದ್ರೋಹ ಬಗೆದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ತಾಯಿ ಅಗಲಿಕೆಗೆ ಹೆಚ್‌ಡಿಕೆ ಕಂಬನಿ: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ನಿಧನಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ ಅವರ ಬಿಡುವಿಲ್ಲದ ದಿನಚರಿಯಲ್ಲಿ ತಾಯಿ ಬಗ್ಗೆ ತೋರಿದ ಅಕ್ಕರೆ ಮಾದರಿಯಾಗಿದೆ. ಅವರಿಗೆ ಆ ದುಃಖ ತಡೆಯುವ ಶಕ್ತಿ ಭಗವಂತ ನೀಡಲಿ. ಹೀರಾಬೇನ್ ಶತಾಯುಷಿಯಾಗಿ ಅಗಲಿದ್ದಾರೆ. ಮೋದಿ ಅವರು ದುಃಖದಿಂದ ಹೊರಗೆ ಬಂದು ದೇಶ ಸೇವೆಗೆ ಮರಳಲಿ ಎಂದು ಕೋರುತ್ತೇನೆ ಎಂದು ಭಾವುಕರಾದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರು ಮನೆ ಬಿಟ್ಟು ಹೋದಾಗಲೂ ತಾಯಿ ಹೀರಾಬೆನ್ (Heeraben Modi) ಕುಗ್ಗಿರಲಿಲ್ಲ. ಮೋದಿಯ ಪ್ರತಿ ಹೆಜ್ಜೆ ಗುರುತು ಸಾಧನೆಯ ಹಿಂದೆ ಇದೆ ಅಮ್ಮನ ಶಕ್ತಿ, ಪ್ರೀತಿ ಇದೆ.
ಅಮ್ಮನ ಪ್ರೀತಿಯ ನೆರಳಿನಲ್ಲಿ ಮೋದಿ ಬದುಕು ಕಂಡುಕೊಂಡಿದ್ದರು. ಎಲ್ಲರಂತಲ್ಲ ನನ್ನಮ್ಮ ಅಂತಾ ಪ್ರಧಾನಿ ಮೋದಿ ಹೆಮ್ಮೆಯಿಂದ ಅಮ್ಮನ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಮೋದಿಯ ಬದುಕಿನ ಪ್ರತಿ ಹಂತದಲ್ಲಿಯೂ ಹೀರಾಬೆನ್ ಅವರು ಮಗನ ಆಯ್ಕೆಯನ್ನೇ ಗೌರವಿಸಿದ್ದರು. ಇದನ್ನೂ ಓದಿ: ಎರಡು ಬಾರಿ ಮಾತ್ರ ಮಗನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ಹೀರಾಬೆನ್!
ಪ್ರಧಾನಿಯಾಗುವುದಕ್ಕೂ ಮುನ್ನ ಮೋದಿಯ ಬದುಕಿನ ಪ್ರತಿ ಹಂತದಲ್ಲೂ ಅವರ ನಿರ್ಧಾರಗಳನ್ನು ಗೌರವಿಸಿದ್ದರು. ಅಮ್ಮ ನಾನು ಮನೆಬಿಟ್ಟು ಹೋಗ್ತೀನಿ, ನನ್ನ ಬದುಕು ಇಲ್ಲ. ನನ್ನ ಬದುಕಿನ ಆಯ್ಕೆಯೂ ಇದಲ್ಲ, ಮನೆ ಬಿಟ್ಟು ಹೋಗುತ್ತೇನೆ ದೇಶಕ್ಕಾಗಿ ದುಡಿಯುತ್ತೇನೆ ಅಂದಾಗ ಮಗನನ್ನು ತಾಯಿ ತಡೆದಿರಲಿಲ್ಲ. ಇದನ್ನೂ ಓದಿ: ದೇಶಕ್ಕೆ ಪ್ರಧಾನಿ, ತಾಯಿಗೆ ಮುದ್ದಿನ ಮಗ- ಮೋದಿ, ಹೀರಾಬೆನ್ ಅದ್ಭುತ ಬಾಂಧವ್ಯ ಹೀಗಿತ್ತು!
ಮನೆ ಬಿಟ್ಟು ಹೋಗು, ನಿನ್ನ ಬದುಕಿನ ಹಾದಿಯನ್ನು ಆಯ್ಕೆ ಮಾಡು ಅಂತ ಮಗನನ್ನು ಹಾರೈಸಿ ಕಳಿಸಿದ್ದರು. ಈ ಮೂಲಕ ಮೋದಿಯವರು ಮನೆ ಬಿಡಲು ನಿರ್ಧರಿಸಿದಾಗ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ರು. ನಿನ್ನ ಮನಸ್ಸಿಗೆ ತೋಚಿದಂತೆ ಮಾಡು ಎಂದು ಆಶೀರ್ವದಿಸಿ ಕಳಿಸಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಹೀರಾಬೆನ್ ಅಗಲಿಕೆಗೆ ಗಣ್ಯರ ಸಂತಾಪ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ತಾಯಿಯನ್ನು ಕಳೆದುಕೊಂಡರೂ ಮತ್ತೆ ಕೆಲಸ ಮಾಡ್ತಿದ್ದಾರೆ. ಇದು ಮೋದಿ ಅವರ ಬದ್ಧತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಬೆಂಗಳೂರಿನ (Bengaluru) ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮೋದಿ ಅವರ ತಾಯಿ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೆ ಇದೊಂದು ದುಃಖದ ಸಂಗತಿ. ಮೋದಿ ಅವರು ಸಿಎಂ ಆಗಿದ್ದಾಗಿನಿಂದ, ಪಿಎಂ (Prime Minister) ಆಗಿದ್ದಾಗಲೂ ತಮ್ಮ ತಾಯಿಗೆ ತೋರಿಸಿದ ಗೌರವ, ಪ್ರೀತಿ ದೊಡ್ಡದು. ಹಾಗೆಯೇ ತಾಯಿ ತಮ್ಮ ಮಗನಿಗೆ ತೋರಿಸುತ್ತಿದ್ದ ಮಮತೆ, ವಾತ್ಸಲ್ಯ ನೋಡುವ ಭಾಗ್ಯವೂ ನಮಗೆ ಸಿಕ್ಕಿತ್ತು ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಮೋದಿ ಸಹೋದರರು
`ನನ್ನ ತಾಯಿ ಸರಳ, ಆದ್ರೆ ಅಷ್ಟೇ ವಿಶೇಷ’ ಎಂದು ಮೋದಿ ಅನೇಕ ಬಾರಿ ಹೇಳ್ತಿದ್ರು. ಇದು ವಿಶೇಷವಾದ ತಾಯಿ-ಮಗನ ಸಂಬಂಧ. ಮೋದಿ ದೇಶಕ್ಕೆ ಪ್ರಧಾನಿಯಾದರೂ, ತಾಯಿಗೆ ಮಗನಾಗಿಯೇ ಇದ್ದರು. ತಾಯಿಯಿಂದ ದೇಶಭಕ್ತಿ, ಆದರ್ಶ ಎಲ್ಲವನ್ನೂ ಮೈಗೂಡಿಸಿಕೊಂಡು ಬೆಳೆದಿದ್ದಾರೆ. ಆ ಎಲ್ಲಾ ಗುಣಗಳನ್ನು ನಾವು ಮೋದಿ ಅವರನ್ನು ನೋಡಬಹುದಾಗಿದೆ. ಮೋದಿ ಅವರು ತಾಯಿಯನ್ನ ಭೇಟಿಯಾದಾಗ ಊಟ ಮಾಡಿಸಿ ಪ್ರೀತಿ ಕೊಟ್ಡಿದ್ದಾರೆ. ಈ ವಯಸ್ಸಿನಲ್ಲೂ ತಾಯಿ ತಮ್ಮ ಪ್ರೀತಿ ತೋರಿಸಿದ್ದಾರೆ. ಮೋದಿ ತಾಯಿ ಮಡಿಲಲ್ಲಿ ಕೂತು, ಅವರ ಭಾವನೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಸ್ಮರಿಸಿದ್ದಾರೆ.
ಹೀರಾಬೆನ್ (Heeraben Modi) ಮೋದಿ ಅವರನ್ನು ಆದರ್ಶ ವ್ಯಕ್ತಿಯಾಗಿ ಬೆಳೆಸಿದ್ದಾರೆ. ಹೀರಾಬೆನ್ ಅವರೂ ಸಹ ಕರ್ಮ ಯೋಗಿ, ಅದೇ ರೀತಿ ಮೋದಿಯೂ ಹಾಗೇ ಕರ್ಮಯೋಗಿ ಆಗಿದ್ದಾರೆ. ತಾಯಿ ಅಂತ್ಯಕ್ರಿಯೆ ಮಾಡಿ ಮತ್ತೆ ಕೆಲಸ ಮಾಡ್ತಿದ್ದಾರೆ. ಇದು ಅವರ ಕೆಲಸದ ಬದ್ಧತೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯಿಂದ 113 ಬಾರಿ ಭದ್ರತಾ ನಿಯಮ ಉಲ್ಲಂಘನೆ: CRPF
ಮೀಸಲಾತಿ (Reservation) ಮಾಹಿತಿ ಬಿಡುಗಡೆ ಮಾಡ್ತೀನಿ: ಅಮಿತ್ ಶಾ (Amit Shah) ಕಾರ್ಯಕ್ರಮದ ನಂತರ ಎಲ್ಲರ ಸಭೆ ಮಾಡಿ, ಮೀಸಲಾತಿ ಬಗ್ಗೆ ಮಾಹಿತಿ ಸಂಪೂರ್ಣವಾಗಿ ಮಧ್ಯಾಹ್ನ ಬಿಡುಗಡೆ ಮಾಡ್ತೀನಿ. ಹಿಂದುಳಿದ ವರ್ಗಗಳ ಆಯೋಗ ಕೊಟ್ಟಿರುವ ವರದಿ, ಅದರ ಜಾರಿ ಬಗ್ಗೆ ಸಂಬಂಧ ಪಟ್ಟವರ ಬಳಿ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ಸಂಪುಟದಲ್ಲಿ ಮೀಸಲಾತಿ ಬಗ್ಗೆ ತೆಗೆದುಕೊಂಡ ಎಲ್ಲಾ ಮಾಹಿತಿಗಳನ್ನ ಮಧ್ಯಾಹ್ನ ಬಿಡುಗಡೆ ಮಾಡ್ತೀನಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಸರಳ ವ್ಯಕ್ತಿತ್ವದ ಹೀರಾಬೆನ್ ಮೋದಿ (Heeraben Modi) ಯವರು ತಮ್ಮ ಪುತ್ರ, ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾ ವಿರಳ.
ಹೌದು. ಎರಡು ಬಾರಿ ಮಾತ್ರ ಮಗನ ಜೊತೆ ಹೀರಾಬೆನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಮಗ ವಿಶ್ವವಿಖ್ಯಾತನಾಗಿದ್ರೂ ಎಂದೂ ಮಗನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಹೀರಾಬೆನ್ ಅವರು ಪೋಸ್ ಕೊಟ್ಟವರಲ್ಲ.
ಏಕತಾ ಯಾತ್ರೆ ಪೂರ್ಣಗೊಳಿಸಿ, ಲಾಲ್ ಛೌಕದಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ, ಶ್ರೀನಗರದಿಂದ ವಾಪಸ್ ಆದ ಬಳಿಕ ಅಹಮದಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಹಣೆಗೆ ತಾಯಿ ತಿಲಕವನ್ನಿಟ್ಟಿದ್ದರು. ಎರಡನೇ ಬಾರಿ, 2001ರಲ್ಲಿ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ ಮೋದಿ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಹೀರಾಬೆನ್ ಅಗಲಿಕೆಗೆ ಗಣ್ಯರ ಸಂತಾಪ
ಅದಾದ ಬಳಿಕ ರಾಜಕೀಯ ಕಾರ್ಯಕ್ರಮದಲ್ಲಿ ಹೀರಾಬೆನ್ ತಮ್ಮ ಪುತ್ರನ ಜೊತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮನೆಗೆ ಬಂದಾಗ ಮಾತ್ರ ಮಗನೊಂದಿಗೆ ಕುಶಲೋಪರಿ ವಿಚಾರಿಸುತ್ತಿದ್ದರು. ಶತಾಯುಷಿ ತಾಯಿಯ ಬಗ್ಗೆ ಪ್ರಧಾನಿ ಮೋದಿ (Narendra Modi) ಸದಾ ಹೆಮ್ಮೆ ಪಡುತ್ತಿದ್ದರು. ಇದನ್ನೂ ಓದಿ: ಅಮ್ಮನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಪ್ರಧಾನಿ ಮೋದಿ
ಕರ್ತವ್ಯ ನಿಷ್ಠ ನಾಗರಿಕರಾಗಿದ್ದ ಮೋದಿ ತಾಯಿ, ಮತದಾನ (Vote) ದ ಮಹತ್ವವನ್ನು ಅದ್ಭುತವಾಗಿ ಅರಿತಿದ್ದರು. ಹೀರಾಬೆನ್ ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೂ ಚುನಾವಣೆಗಳು ಆರಂಭವಾದಾಗಿನಿಂದಲೂ ಪ್ರತಿಯೊಂದು ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರಂತೆ. ಇದುವರೆಗೂ ಮತದಾನವನ್ನು ಮಿಸ್ ಮಾಡದ ಮೋದಿ ತಾಯಿ, ಮೊನ್ನೆ ಕೂಡ ಗುಜರಾತ್ ಚುನಾವಣೆ (Gujarat Election) ಯಲ್ಲಿ ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿ ಗಮನಸೆಳೆದಿದ್ದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪ್ರಧಾನಿ ಮೋದಿ (Narendra Modi) ಯವರು ತಮ್ಮ ತಾಯಿ ಹೀರಾಬೆನ್ (Heeraben Modi) ಜೊತೆಗೆ ಅದ್ಭುತ ಬಾಂಧವ್ಯ ಹೊಂದಿದ್ದರು.
ಮೋದಿಯವರು ದೇಶಕ್ಕೆ ಪ್ರಧಾನಿ, ಆದರೆ ಅಮ್ಮನ ಪಾಲಿಗೆ ಸದಾ ಮೋದಿ ಮುದ್ದಿನ ಮಗನಾಗಿದ್ದರು. ತಾಯಿ ನೂರನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಮೋದಿ ಭಾವನಾತ್ಮಕ ಬ್ಲಾಗ್ ಬರೆದಿದ್ದರು. ಅದರಲ್ಲಿ ಅಮ್ಮನ ಬದುಕು ಹಾಗೂ ಅವರೊಂದಿಗಿನ ಭಾಂದವ್ಯವನ್ನು ಬಿಚ್ಚಿಟ್ಟಿದ್ದರು. ಅಮ್ಮನೊಂದಿಗೆ ಕಳೆದ ತಮ್ಮ ಬಾಲ್ಯದ ವಿಶೇಷ ಕ್ಷಣಗಳನ್ನು ಅಂದು ಮೆಲುಕು ಹಾಕಿಕೊಂಡಿದ್ದರು. ಇದನ್ನೂ ಓದಿ: ಇಂದೇ ಮೋದಿ ತಾಯಿ ಹೀರಾಬೆನ್ ಅಂತ್ಯಕ್ರಿಯೆ
ಭಾವನಾತ್ಮಕ ಪತ್ರ: ಇಂದು, ನನ್ನ ತಾಯಿ ಹೀರಾಬೆನ್ ಬಾಯಿ ಮೋದಿ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ ಎಂದು ಹಂಚಿಕೊಳ್ಳಲು ನಾನು ತುಂಬಾ ಸಂತೋಷವಾಗುತ್ತಿದೆ ಮತ್ತು ನನಗೆ ಅಂತಹ ಅದೃಷ್ಟ ಸಿಕ್ಕಿದೆ. ಇದು ಅವರ ಜನ್ಮ ಶತಮಾನೋತ್ಸವ ವರ್ಷವಾಗಲಿದೆ. ತಮ್ಮ ಬಾಲ್ಯದಲ್ಲಿ ತಮ್ಮ ತಾಯಿ ಎದುರಿಸಿದ ಕಷ್ಟಗಳನ್ನು ಸ್ಮರಿಸಿಕೊಂಡ ಮೋದಿ ಅವರು, ನನ್ನ ತಾಯಿ ಎಷ್ಟು ಅಸಾಮಾನ್ಯರೋ, ಇತರೆ ತಾಯಂದಿರಂತೆ ಅಷ್ಟೇ ಸರಳ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೀರಾಬೆನ್ ವಿಧಿವಶ- ತಾಯಿ ಮಾತುಗಳನ್ನು ಸ್ಮರಿಸಿಕೊಂಡು ಮೋದಿ ಭಾವುಕ ಟ್ವೀಟ್
ಬಾಲ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ತಮ್ಮ ತಾಯಿಯನ್ನು ಕಳೆದು ಕೊಂಡಿದ್ದರು. ಆಕೆಗೆ ನನ್ನ ಅಜ್ಜಿಯ ಮುಖವೂ ಕೂಡ ನೆನಪಿನಲ್ಲಿಲ್ಲ ಅಥವಾ ಆಕೆಯ ಮಡಿಲಲ್ಲಿ ಮಲಗಿದ್ದು ನೆನಪಿಲ್ಲ. ಆಕೆ ತನ್ನ ಇಡೀ ಬಾಲ್ಯವನ್ನು ತಾಯಿಯಿಲ್ಲದೆ ಕಳೆದರು. ವಡ್ನಗರದಲ್ಲಿ ಮಣ್ಣಿನ ಗೋಡೆಗಳು ಮತ್ತು ಮೇಲ್ಛಾವಣಿಗೆ ಮಣ್ಣಿನ ಹೆಂಚು ಹೊಂದಿದ್ದ ಪುಟ್ಟ ಮನೆಯಲ್ಲಿ ಪೋಷಕರು ಹಾಗೂ ಒಡಹುಟ್ಟಿದವರೊಂದಿಗೆ ಜೊತೆ ವಾಸಿಸುತ್ತಿದ್ದುದನ್ನು ಅವರು ಸ್ಮರಿಸಿದ್ದಾರೆ. ಪ್ರತಿ ದಿನ ತಮ್ಮ ತಾಯಿ ಎದುರಿಸುತ್ತಿದ್ದ ಹಲವು ಅಡೆತಡೆಗಳು ಮತ್ತು ಅದರಿಂದ ಅವರು ಯಶಸ್ವಿಯಾಗಿ ಹೊರಬರುತ್ತಿದ್ದ ಹಲವು ಘಟನೆಗಳನ್ನು ಉಲ್ಲೇಖಿಸಿದ್ದರು.
ತಮ್ಮ ತಾಯಿ ಮನೆಯ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತಿದ್ದುದಲ್ಲದೆ, ಕುಟುಂಬದ ಅಲ್ಪ ಆದಾಯಕ್ಕೆ ಪೂರಕವಾಗಿಯೂ ಕೆಲಸ ಮಾಡುತ್ತಿದ್ದರು. ಆಕೆ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು ಮತ್ತು ಮನೆ ಖರ್ಚುಗಳನ್ನು ನಿಭಾಯಿಸಲು ಚರಕ ತಿರುಗಿಸಲು ಸಮಯ ಹೊಂದಿಸಿಕೊಳ್ಳುತ್ತಿದ್ದರು. ಮಳೆ ಬಂದಾಗ ನಮ್ಮ ಮನೆಯ ಛಾವಣಿ ಸೋರುತ್ತಿತ್ತು ಮತ್ತು ಮನೆಯಲ್ಲಿ ಪ್ರವಾಹ ಏರ್ಪಡುತ್ತಿತ್ತು. ನನ್ನ ತಾಯಿ ಮಳೆ ನೀರನ್ನು ಸಂಗ್ರಹಿಸಲು ನೀರು ಸೋರುತ್ತಿದ್ದ ಜಾಗದಲ್ಲಿ ಬಕೆಟ್ ಹಾಗೂ ಪಾತ್ರೆಗಳನ್ನು ಇಡುತ್ತಿದ್ದರು. ಇಂತಹ ಪ್ರತಿಕೂಲ ಸಂದರ್ಭಗಳಲ್ಲೂ ನನ್ನ ತಾಯಿ ಪುಟಿದೇಳುವ ಅಥವಾ ಸ್ಥೈರ್ಯದ ಸಂಕೇತವಾಗಿದ್ದಾರೆ ಎಂದು ನರೇಂದ್ರ ಮೋದಿ ಭಾವನಾತ್ಮಕವಾಗಿ ಬರೆದು ಕೊಂಡಿದ್ರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ವಹೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಧಾನಿಯವರ ತಾಯಿ ಹೀರಾಬೆನ್ (Heeraben Modi) ಅವರು ವಿಧಿವಶರಾಗಿದ್ದು, ನರೇಂದ್ರ ಮೋದಿ (Narendra Modi) ಯವರು ಭಾವುಕರಾಗಿ ತಾಯಿ ಬಗ್ಗೆ ಬರೆದುಕೊಂಡಿದ್ದಾರೆ.
ಭವ್ಯವಾದ ಶತಮಾನವು ದೇವರ ಪಾದದ ಮೇಲೆ ನಿಂತಿದೆ. ತಾಯಿಯಲ್ಲಿ ನಾನು ಯಾವಾಗಲೂ ಆ ತ್ರಿಮೂರ್ತಿಗಳನ್ನು ಅನುಭವಿಸಿದ್ದೇನೆ. ಅದು ತಪಸ್ವಿಯ ಪ್ರಯಾಣ, ನಿಸ್ವಾರ್ಥ ಕರ್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿದೆ ಅಂತ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.
शानदार शताब्दी का ईश्वर चरणों में विराम… मां में मैंने हमेशा उस त्रिमूर्ति की अनुभूति की है, जिसमें एक तपस्वी की यात्रा, निष्काम कर्मयोगी का प्रतीक और मूल्यों के प्रति प्रतिबद्ध जीवन समाहित रहा है। pic.twitter.com/yE5xwRogJi
ನನ್ನ ತಾಯಿಯ 100 ನೇ ವರ್ಷದ ಹುಟ್ಟುಹಬ್ಬದಂದು ನಾನು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಹೇಳಿದ ಮಾತುಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಪರಿಶುದ್ಧತೆಯಿಂದ ಜೀವನ ಮಾಡಿ. ಅಂದರೆ ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಮತ್ತು ಜೀವನವನ್ನು ಪರಿಶುದ್ಧತೆಯಿಂದ ಬದುಕಿರಿ, ಎಂದು ಅವರು ಹೇಳಿದ್ದರು ಅಂತ ಪ್ರಧಾನಿ ತಾಯಿಯ ಮಾತುಗಳನ್ನು ಸ್ಮರಿಸಿಕೊಂಡಿದ್ದಾರೆ.
मैं जब उनसे 100वें जन्मदिन पर मिला तो उन्होंने एक बात कही थी, जो हमेशा याद रहती है कि કામ કરો બુદ્ધિથી, જીવન જીવો શુદ્ધિથી यानि काम करो बुद्धि से और जीवन जियो शुद्धि से।
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹೀರಾಬೆನ್ ಅವರು ಬುಧವಾರ ಅಹಮ್ಮದಾಬಾದ್‍ನ ಮೆಹ್ತಾ ಆಸ್ಪತ್ರೆ (Mehta Hospital) ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಬಳಿಕ ಅವರ ಆರೋಗ್ಯ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಇತ್ತ ಆಸ್ಪತ್ರೆಗೆ ದಾಖಲಾದಂದೇ ಪ್ರಧಾನಿಯವರು ತಾಯಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.
ಇಂದು ಮುಂಜಾನೆ 3.39ರ ಸುಮಾರಿಗೆ ಹೀರಾಬೆನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ತಾಯಿ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ತಮ್ಮ ಪಶ್ಚಿಮ ಬಂಗಾಳ ಪ್ರವಾಸ ರದ್ದುಗೊಳಿಸಿರುವ ಮೋದಿ, ತಾಯಿಯ ಅಂತಿಮ ದರ್ಶನ ಪಡೆಯಲಿದ್ದಾರೆ. ಇತ್ತ ಗಣ್ಯರು ಕೂಡ ಸಂತಾಪ ಸೂಚಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ತಾಯಿ ಹೀರಾಬೆನ್ ಮೋದಿ (Heeraben Modi) ವಿಧಿವಶರಾಗಿದ್ದಾರೆ.
ಕಳೆದ ಜೂನ್ ನಲ್ಲಿ 100 ವರ್ಷ ಪೂರೈಸಿದ್ದ ಮೋದಿ ತಾಯಿ, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಇಂದು ಬೆಳಗ್ಗಿನ ಜಾವ 3.39ರ ಸುಮಾರಿಗೆ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಬುಧವಾರ ಅಹಮದಾಬಾದ್‌ನ (Ahmedabad)ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರ ಅವರ ಆರೋಗ್ಯ ಸುಧಾರಿಸಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ್ದವು. ಇದನ್ನೂ ಓದಿ: ಬೆಂಗಳೂರಿಗೆ ಬಂದಿಳಿದ ಅಮಿತ್ ಶಾ
ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ https://t.co/7dLUarH8Qz
ಹೀರಾಬೆನ್ ನಿಧನಕ್ಕೆ ಗಣ್ಯರೆಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ಪ್ರಧಾನಿಯವರು ತಮ್ಮ ಪಶ್ಚಿಮ ಬಂಗಾಳ ಪ್ರವಾಸ ರದ್ದುಗೊಳಿಸಿದ್ದು, ತಾಯಿಯ ಅಂತಿಮ ದರ್ಶನ ಪಡೆಯಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಗಾಂಧೀನಗರ: ಗುಜರಾತ್ ವಿಧಾನಸಭಾ ಚುನಾವಣೆಯ (Gujarat Assembly Polls) 2ನೇ ಹಂತದ ಮತದಾನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಾಯಿ, ಶತಾಯುಷಿ ಹೀರಾಬೆನ್ (Heeraben) ಅವರು ಮತದಾನ ಮಾಡಿದರು.
ಗಾಂಧೀನಗರ ಸಮೀಪದ ರೇಸನ್ ಗ್ರಾಮದ ಮತಗಟ್ಟೆಯಲ್ಲಿ ಮೋದಿ ತಾಯಿ ತಮ್ಮ ಹಕ್ಕು ಚಲಾಯಿಸಿದರು. ಜೂನ್‌ನಲ್ಲಿ 100ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ಅವರ ತಾಯಿ, ತಮ್ಮ ಕಿರಿಯ ಮಗ ಪಂಕಜ್ ಮೋದಿಯೊಂದಿಗೆ ಗಾಂಧಿನಗರ ನಗರದ ರೇಸನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇದನ್ನೂ ಓದಿ: ಗುಜರಾತ್ ಚುನಾವಣೆ – ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ಮೋದಿ
ಪಂಕಜ್ ಮೋದಿ ಮತ್ತು ಕುಟುಂಬದ ಇತರೆ ಸದಸ್ಯರ ಸಹಾಯದಿಂದ ಮೋದಿ ತಾಯಿ ಗಾಲಿಕುರ್ಚಿಯಲ್ಲಿ ಮತಗಟ್ಟೆಗೆ ತಲುಪಿ ಮತದಾನ ಮಾಡಿದರು. ಮತದಾನಕ್ಕೂ ಮುನ್ನಾದಿನ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ ಭಾನುವಾರ ಸಂಜೆ ತಮ್ಮ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಪ್ರಧಾನಿ ಮೋದಿ ಅವರು ಸಹ ಇಂದು ನಿಶಾನ್ ಪಬ್ಲಿಕ್ ಸ್ಕೂಲ್‌ನಲ್ಲಿರುವ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.
2017ರ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಈ ಕ್ಷೇತ್ರಗಳಲ್ಲಿ 51 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 39 ಹಾಗೂ ಇತರರು 3 ಸ್ಥಾನ ಪಡೆದುಕೊಂಡಿದ್ದರು. ಡಿಸೆಂಬರ್ 8ರಂದ ಮತ ಎಣಿಕೆ ನಡೆಯಲಿದೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat assembly election) ಎಎಪಿ (AAP) ಪಕ್ಷವೇ ನಾಶವಾಗಲಿದೆ. ರಾಜಕೀಯದ ಆಸೆಗಾಗಿ ಎಎಪಿ ಪ್ರಧಾನಿ ಮೋದಿಯವರ (Narendra Modi) ತಾಯಿಯನ್ನು ಅಗೌರವಗೊಳಿಸಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಎಪಿ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ (Gopal Italia) ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಎಪಿ ವಿರುದ್ಧ ಶುಕ್ರವಾರ ಚಾಟಿ ಬೀಸಿದ್ದಾರೆ.
ನಮ್ಮ ಪ್ರಧಾನಿಯವರ 100 ವರ್ಷದ ತಾಯಿಯನ್ನು ಎಎಪಿ ನಾಯಕರು ಅವಮಾನಿಸಿ, ತಮ್ಮ ರಾಜಕೀಯವನ್ನು ಬೆಳಗಿಸಲು ಮುಂದಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಎಪಿ ಪಕ್ಷವನ್ನು ನಾಶ ಮಾಡುವುದಾಗಿ ಗುಜರಾತ್‌ನ ಜನರು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದರು.
ಮೋದಿಯವರ ತಾಯಿ ಮಾಡಿದ ಒಂದು ತಪ್ಪು ಏನೆಂದರೆ, ಅವರು ಕೇಜ್ರಿವಾಲ್ ಅವರ ರಾಜಕೀಯ ಆಸೆಗಳನ್ನು ಈಡೇರಿಸದಂತೆ ತಡೆಯುವ ಮಗನಿಗೆ ಜನ್ಮ ನೀಡಿದರು. ಈಗ ಅವರು ನೀಡಿರುವ ಅಗೌರವಕ್ಕೆ ಗುಜರಾತ್ ನ್ಯಾಯ ಒದಗಿಸುತ್ತದೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ನ.12ಕ್ಕೆ ಚುನಾವಣೆ, ಡಿ. 8ಕ್ಕೆ ಮತ ಎಣಿಕೆ
ಅರವಿಂದ್ ಕೇಜ್ರಿವಾಲ್ ಅವರೆ, ನಿಮ್ಮ ಆಶೀರ್ವಾದದಿಂದ ಗೋಪಾಲ್ ಇಟಾಲಿಯಾ ತಮ್ಮ ಚರಂಡಿ ಬಾಯಿಯಿಂದ ಹೀರಾಬೆನ್ (Heeraben Modi) ಅವರನ್ನು ನಿಂದಿಸಿದ್ದಾರೆ. ನಾನು ಯಾವುದೇ ಆಕ್ರೋಶವನ್ನು ವ್ಯಕ್ತಪಡಿಸುವುದಿಲ್ಲ. ಗುಜರಾತಿಗಳು ಎಷ್ಟು ಕೋಪಗೊಂಡಿದ್ದಾರೆಂದು ತೋರಿಸಲು ಬಯಸುವುದಿಲ್ಲ. ಆದರೆ ಈಗಾಗಲೇ ನಿಮ್ಮ ಭವಿಷ್ಯದ ಬಗ್ಗೆ ತೀರ್ಮಾನ ಆಗಿದೆ. ಚುನಾವಣೆಯ ಸಂದರ್ಭದಲ್ಲಿ ಗುಜರಾತ್‌ನ ಜನರೇ ನಿಮಗೆ ಪಾಠ ಕಲಿಸುತ್ತಾರೆ ಎಂದು ಕಿಡಿ ಕಾರಿದರು.
AAP पार्टी के नेता ने प्रधान सेवक की 100 वर्षीय मां का अपमान इसलिए किया, क्योंकि वो अपनी राजनीति चमकाना चाहते हैं।
गुजरात और गुजरातियों ने ये संकल्प लिया है कि AAP पार्टी को आगामी चुनाव में ध्वस्त करेंगे।
ಎಎಪಿ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರು ಹೀರಾಬೆನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಆ ವೀಡಿಯೋ ಯಾವ ದಿನಾಂಕದ್ದು ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ನವೆಂಬರ್‌ನಲ್ಲಿ ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು
Live Tv
[brid partner=56869869 player=32851 video=960834 autoplay=true]