Tag: ಹೀಟ್‌ಸ್ಟ್ರೋಕ್‌

  • ಒಡಿಶಾದಲ್ಲಿ ಹೆಚ್ಚಿದ ತಾಪಮಾನ – 3 ದಿನದಲ್ಲಿ ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

    ಒಡಿಶಾದಲ್ಲಿ ಹೆಚ್ಚಿದ ತಾಪಮಾನ – 3 ದಿನದಲ್ಲಿ ಹೀಟ್‌ಸ್ಟ್ರೋಕ್‌ಗೆ 20 ಮಂದಿ ಸಾವು

    ಭುವನೇಶ್ವರ: ಒಡಿಶಾದಲ್ಲಿ (Odisha) ಬಿಸಿಲಿನ ತಾಪ ಹೆಚ್ಚುತ್ತಿದ್ದು, ಕಳೆದ ಮೂರು ದಿನಗಳಿಂದ ಹೀಟ್‌ಸ್ಟ್ರೋಕ್‌ಗೆ (Heatstroke) 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಶುಕ್ರವಾರದಿಂದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 99 ಶಂಕಿತ ಸನ್‌ಸ್ಟ್ರೋಕ್‌ ಸಾವುಗಳು ವರದಿಯಾಗಿವೆ. ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆಯ ಬಳಿಕ 20 ಸನ್‌ಸ್ಟ್ರೋಕ್‌ ಸಾವುಗಳು ಎಂದು ದೃಢಪಡಿಸಲಾಗಿದೆ. ಉಳಿದವರು ಇತರ ಕಾರಣಗಳಿಂದ ಸಾವನ್ನಪ್ಪಿದ್ದು, ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಅಧಿಕೃತ ವರದಿ ಹೇಳಿದೆ. ಇದನ್ನೂ ಓದಿ: ಸೆನ್ಸೆಕ್ಸ್, ನಿಫ್ಟಿ ಸಾರ್ವಕಾಲಿಕ ದಾಖಲೆ – Zerodha, CDSL ಸರ್ವರ್‌ ಡೌನ್‌, ಹೂಡಿಕೆದಾರರ ಆಕ್ರೋಶ

    ಇದಕ್ಕೂ ಮೊದಲು 42 ಶಂಕಿತ ಸನ್‌ಸ್ಟ್ರೋಕ್‌ ಸಾವುಗಳು ವರದಿಯಾಗಿದ್ದು, ಅವುಗಳಲ್ಲಿ ಆರು ಪ್ರಕರಣಗಳು ದೃಢಪಟ್ಟಿದೆ. ಇನ್ನೂ ಆರು ಸಾವುಗಳು ಇತರ ಕಾರಣಗಳಿಂದ ಸಂಭವಿಸಿವೆ ಎನ್ನಲಾಗಿದೆ. ಬೋಲಂಗಿರ್, ಸಂಬಲ್‌ಪುರ್, ಝಾರ್ಸುಗುಡಾ, ಕಿಯೋಂಜರ್, ಸೋನೆಪುರ್, ಸುಂದರ್‌ಗಢ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ಸಾವುಗಳು ಹೆಚ್ಚಾಗಿ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಸಿಕ್ಕಿಬಿದ್ದ ಲಷ್ಕರ್‌ ಟಾಪ್‌ ಕಮಾಂಡರ್ಸ್‌

    ಮುಖ್ಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಜೆನಾ ಮತ್ತು ವಿಶೇಷ ಪರಿಹಾರ ಆಯುಕ್ತ ಸತ್ಯಬ್ರತ ಸಾಹು ಅವರು ಭಾನುವಾರ ಜಿಲ್ಲಾಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿ ಬಿಸಿಗಾಳಿಯ ಕುರಿತು ಸೂಚನೆಗಳನ್ನು ಜಾರಿಗೊಳಿಸಲು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದರು. ಇದನ್ನೂ ಓದಿ: ಗಾಳಿ, ಮಳೆ ರಭಸಕ್ಕೆ ಭಾರೀ ಗಾತ್ರದ ಮರ ನೆಲಸಮ – ಸ್ಯಾಂಟ್ರೋ ಕಾರು ಜಖಂ

    ಮೃತ ಕುಟುಂಬಕ್ಕೆ ಪರಿಹಾರ ಮಂಜೂರಾತಿಗಾಗಿ ಪ್ರತಿ ಸಾವಿನ ಮರಣೋತ್ತರ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಗಳಿಗೆ ತಿಳಿಸಲಾಗಿದೆ. ಅಲ್ಲದೆ ಪ್ರತಿ ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಕಂದಾಯ ಅಧಿಕಾರಿ ಮತ್ತು ಸ್ಥಳೀಯ ವೈದ್ಯಾಧಿಕಾರಿ ಜಂಟಿ ವಿಚಾರಣೆ ನಡೆಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವತಿಯನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಯುವಕನಿಗೆ ಹಲ್ಲೆ

  • ಕೂಲರ್‌, ಫ್ಯಾನ್‌ ಇಲ್ಲದ ಕೋಣೆಯಲ್ಲಿ ವಾಸ – ಹೀಟ್‌ಸ್ಟ್ರೋಕ್‌ನಿಂದ ವ್ಯಕ್ತಿ ಸಾವು

    ಕೂಲರ್‌, ಫ್ಯಾನ್‌ ಇಲ್ಲದ ಕೋಣೆಯಲ್ಲಿ ವಾಸ – ಹೀಟ್‌ಸ್ಟ್ರೋಕ್‌ನಿಂದ ವ್ಯಕ್ತಿ ಸಾವು

    ನವದೆಹಲಿ: ಬಿಹಾರ ಮೂಲದ (Bihar Man) ವ್ಯಕ್ತಿಯೊಬ್ಬರು ಹೀಟ್‌ಸ್ಟ್ರೋಕ್‌ನಿಂದ ದೆಹಲಿ ಆಸ್ಪತ್ರೆಯಲ್ಲಿ (Delhi Hospital) ಸಾವನ್ನಪ್ಪಿದ್ದಾರೆ. ಶಾಖಾಘಾತದಿಂದ ವ್ಯಕ್ತಿಯನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ವ್ಯಕ್ತಿ ಕೂಲರ್ ಅಥವಾ ಫ್ಯಾನ್ ಇಲ್ಲದ ಕೋಣೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ತೀವ್ರ ಜ್ವರವಿತ್ತು ಎಂದು ವೈದ್ಯರು ಹೇಳಿದ್ದರು. ದೇಹದ ಉಷ್ಣತೆಯು 107 ಡಿಗ್ರಿ ಸೆಲ್ಸಿಯಸ್ ಮಾರ್ಕ್ ಅನ್ನು ದಾಟಿತ್ತು. ಅದು ಸಾಮಾನ್ಯಕ್ಕಿಂತ ಸುಮಾರು 10 ಡಿಗ್ರಿ ಹೆಚ್ಚಾಗಿತ್ತು. ಬಿರು ಬೇಸಿಗೆಯಲ್ಲಿ ದೆಹಲಿಯಲ್ಲಿ ವರದಿಯಾದ ಹೀಟ್‌ಸ್ಟ್ರೋಕ್‌ ಸಾವು ಪ್ರಕರಣ ಇದು ಎನ್ನಲಾಗಿದೆ. ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಜೂನ್‌ 9 ರಂದು ಮೋದಿ ಪ್ರಮಾಣ ವಚನ!

    ಶಾಖದ ಅಲೆ ರಾಷ್ಟ್ರ ರಾಜಧಾನಿಯನ್ನು ಕಂಗೆಡಿಸಿದೆ. ಹೆಚ್ಚಿದ ತಾಪಮಾನ, ನೀರಿನ ಬಿಕ್ಕಟ್ಟಿನಿಂದ ಇಲ್ಲಿನ ಜನ ಸಂಕಷ್ಟಕ್ಕೀಡಾಗಿದ್ದಾರೆ. ನಗರದ ಹೊರವಲಯದಲ್ಲಿರುವ ಮುಂಗೇಶ್‌ಪುರ ಹವಾಮಾನ ಕೇಂದ್ರವು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ.

    ದೆಹಲಿ ನಗರದಾದ್ಯಂತ ಸರಾಸರಿ 45-50% ಸೆಲ್ಸಿಯಸ್ ವ್ಯಾಪ್ತಿಯಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಂ. ಮಹಪಾತ್ರ ಹೇಳಿದ್ದಾರೆ. ರಾಜಧಾನಿಯ ಜನತೆ ಕಳೆದ ವಾರದಿಂದ ತೀವ್ರ ಶಾಖದ ಅಲೆಗೆ ತತ್ತರಿಸುತ್ತಿದ್ದಾರೆ. ತಾಪ ಹೆಚ್ಚಳದ ಜೊತೆಗೆ ದೆಹಲಿಯ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ – ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಆಪ್ತ ಸಹಾಯಕ ಬಂಧನ

    ದಿನನಿತ್ಯ ಟ್ಯಾಂಕರ್ ಬರುತ್ತಿದೆ. ಆದರೆ 3,000 ರಿಂದ 4000 ಜನರಿರುವ ನಮಗೆ ಅರ್ಧ ಟ್ಯಾಂಕರ್ ನೀರಷ್ಟೇ ಸಿಗುತ್ತಿದೆ. ಬಿಸಿಯೂಟ, ನೀರು ಬೇಕು. ಆದರೆ ನಮಗೆ ಸಾಕಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ವಿನಯ್ ಅಳಲು ತೋಡಿಕೊಂಡಿದ್ದಾರೆ.