Tag: ಹೀಟ್‍ವೇವ್

  • ರಾಜ್ಯದಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ಏರಿಕೆ – ಇಂದು ಕರಾವಳಿಗೆ ಬಿಸಿಗಾಳಿ ಎಚ್ಚರಿಕೆ

    ರಾಜ್ಯದಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ಏರಿಕೆ – ಇಂದು ಕರಾವಳಿಗೆ ಬಿಸಿಗಾಳಿ ಎಚ್ಚರಿಕೆ

    ಬೆಂಗಳೂರು: ರಾಜ್ಯದಲ್ಲಿ ದಿನೇದಿನೇ ಬಿಸಿಲಬ್ಬರ ಹೆಚ್ಚಾಗಿದ್ದು, ದಾಖಲೆ ಪ್ರಮಾಣದ ಉಷ್ಣಾಂಶ ಏರಿಕೆಯಾಗಿದೆ. ಕರಾವಳಿ (Karavali) ಭಾಗದಲ್ಲಿ ಸೂರ್ಯನ ಅಬ್ಬರ ಸಾರ್ವಕಾಲಿಕ ದಾಖಲೆ ಬರೆದಿದೆ.

    ಈ ವರ್ಷ ಫ್ರೆಬ್ರವರಿಯಲ್ಲೇ ರಾಜ್ಯದಲ್ಲಿ ಹೀಟ್ ವೇವ್ (Heat Wave) ಕಾಟ ಶುರುವಾಗಿದೆ. ಉತ್ತರ ಕರ್ನಾಟಕಕ್ಕಿಂತಲೂ ಕರಾವಳಿಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಕರಾವಳಿ ಭಾಗದಲ್ಲಿ ಏಕಾಏಕಿ 5 ಡಿಗ್ರಿಯಷ್ಟು ಗರಿಷ್ಠ ತಾಪಮಾನ ಏರಿಕೆಯಾಗಿದೆ. ಈ ಹಿನ್ನೆಲೆ ಇಂದು ಕರಾವಳಿಗೆ ಬಿಸಿಗಾಳಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಇದನ್ನೂ ಓದಿ: ನಾರಾಯಣಪುರ ಡ್ಯಾಂನಿಂದ ತೆಲಂಗಾಣಕ್ಕೆ ನೀರು – ರೈತರು ಕಿಡಿ

    ವಾಡಿಕೆಯಂತೆ ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳ ವೇಳೆಗೆ ಜನರು ಈ ಪ್ರಮಾಣದ ಬಿಸಿಲಿನ ಅಬ್ಬರವನ್ನು ಎದುರಿಸುತ್ತಿದ್ದರು. ಆದರೆ ಈ ಬಾರಿ ಫೆಬ್ರವರಿಯಲ್ಲೇ ಸೂರ್ಯ ಅಬ್ಬರಿಸುತ್ತಿದ್ದಾನೆ. ಉತ್ತರ, ದಕ್ಷಿಣ ಒಳನಾಡಿನಲ್ಲಿ ಕಳೆದೊಂದು ವಾರದಿಂದ 1-2 ಡಿಗ್ರಿ ವ್ಯತ್ಯಾಸದಲ್ಲಿ ಬಿಸಿಲು ಹೆಚ್ಚಾಗಿದೆ. ಇದನ್ನೂ ಓದಿ: ಕಲಬುರಗಿ | ಇಎಸ್ಐಸಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು

  • ರಾಜ್ಯದಲ್ಲಿ ಇಂದಿನಿಂದ 5 ದಿನ ಹೀಟ್‍ವೇವ್

    ರಾಜ್ಯದಲ್ಲಿ ಇಂದಿನಿಂದ 5 ದಿನ ಹೀಟ್‍ವೇವ್

    ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆ ಮುಗಿದಿದೆ. ಇಂದಿನಿಂದ 5 ದಿನ ರಾಜ್ಯದ ಬಹುತೇಕ ಭಾಗಗಳಲ್ಲಿ ಹೀಟ್ ವೇವ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Department) ನೀಡಿದೆ.

    ವಿಜಯಪುರ, ಯಾದಗಿರಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಬೆಳಗಾವಿ, ಗದಗ, ದಾವಣಗೆರೆ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ (Orange Alert) ನೀಡಿದೆ. ಬೆಳಗ್ಗೆ 11ರಿಂದ ಸಂಜೆ 4ರವರೆಗೂ ಅನಗತ್ಯವಾಗಿ ಹೊರಗೆ ಬರಬೇaಡಿ.. ಆರೋಗ್ಯದ ಕಡೆ ಗಮನ ಇರಲಿ ಎಂದು ತಿಳಿಸಿದೆ.

    ಬೆಂಗಳೂರಲ್ಲಿ ಕಳೆದ ನಾಲ್ಕು ದಿನಗಳಿಂದ ತಾಪಮಾನ ಏರಿಕೆ ಆಗುತ್ತಲೇ ಇದೆ. ತಾಪಮಾನ 37 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಇದು ವಾಡಿಕೆಗಿಂತ ಮೂರ್ನಾಲ್ಕು ಡಿಗ್ರಿ ಜಾಸ್ತಿದೆ. ಬಿಸಿಲ ಹೊಡೆತದ ಕಾರಣ ದ್ವಿಚಕ್ರ ವಾಹನ ಬಿಟ್ಟು ಬಿಎಂಟಿಸಿ, ನಮ್ಮ ಮೆಟ್ರೋ ಏರುವವರ ಸಂಖ್ಯೆ ಸಂಖ್ಯೆ ಹೆಚ್ಚಿದೆ. ಬೇಸಿಗೆ ಕಾರಣ ತರಕಾರಿ ದರವೂ ದಿನೇ ದಿನೇ ಹೆಚ್ಚುತ್ತಿದೆ. ಇದನ್ನೂ ಓದಿ: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಲು ಈ ಮುನ್ನೆಚ್ಚರಿಕೆಗಳಿರಲಿ