Tag: ಹಿರಿಯ ಸಂಸದ ಪ್ರಹ್ಲಾದ್ ಜೋಶಿ

  • ಇತ್ತೀಚೆಗೆ ದಾವೂದ್ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದೀರಿ- ಸಿಎಂಗೆ ಪ್ರಹ್ಲಾದ್ ಜೋಶಿ ಪತ್ರ

    ಇತ್ತೀಚೆಗೆ ದಾವೂದ್ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದೀರಿ- ಸಿಎಂಗೆ ಪ್ರಹ್ಲಾದ್ ಜೋಶಿ ಪತ್ರ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ದಾವೂದ್ ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದಾರೆಂದು ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ, ಹಿರಿಯ ಸಂಸದ ಪ್ರಹ್ಲಾದ್ ಜೋಶಿ ಸಿಎಂಗೆ ಪತ್ರ ಬರೆದಿದ್ದಾರೆ.

    ದಕ್ಷಿಣ ಕನ್ನಡದಲ್ಲಿ ನಡೆದ ಕೋಮು ಗಲಭೆ ಸಂಬಂಧ ಸಿಎಂಗೆ ಬರೆದಿರುವ ಪತ್ರದಲ್ಲಿ ಪ್ರಹ್ಲಾದ್ ಜೋಶಿ ಈ ಆರೋಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಚಿಕ್ಕಪ್ಪನಿದ್ದಂತೆ. ನಿಮ್ಮ ಕೊಳಕು ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸಾಕ್ಷಿಯಾಗಿದ್ದೀರಿ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಆಪಾದಿಸಿದ್ದಾರೆ.

    ಕೋಮು ದಳ್ಳುರಿ ಎಂದಾಗ ನಿಮ್ಮ ಬಾಯಲ್ಲಿ ಹಿಂದೂಗಳು ಎಂಬ ಪದ ತಕ್ಷಣವೇ ಬರುವುದು. ಆದರೆ ಮುಸ್ಲಿಂ ಎಂಬ ಪದ ಬಳಸುವಷ್ಟು ನಿಮಗೆ, ಕಾಂಗ್ರೆಸ್‍ಗೆ ಎಂದಿಗೂ ಧೈರ್ಯ ಬರದು. ಇತ್ತೀಚೆಗಂತೂ ನೀವು ದಾವೂದು ಇಬ್ರಾಹಿಂ ಚಿಕ್ಕಪ್ಪನಂತೆ ವರ್ತಿಸುತ್ತಿದ್ದೀರಿ. ಪಿಎಫ್‍ಐ, ಕೆಎಫ್‍ಡಿಯಂತ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿ. ಕೇವಲ ಬಿಜೆಪಿ, ಆರ್‍ಎಸ್‍ಎಸ್ ಮಂತ್ರ ಜಪಿಸುತ್ತಲೇ ಇದ್ದರೆ ಜನ ಚುನಾವಣೆಯಲ್ಲಿ ದಾರಿ ತೋರಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯಗೆ ಜೋಶಿ ಪತ್ರ ಬರೆದಿದ್ದಾರೆ.