Tag: ಹಿರಿಯ ವ್ಯಕ್ತಿ

  • ವಿಶ್ವದ ಅತ್ಯಂತ ಹಿರಿಯ ಮಹಿಳೆ 118 ವರ್ಷದ ಲುಸಿಲ್ ರಾಂಡನ್ ನಿಧನ

    ವಿಶ್ವದ ಅತ್ಯಂತ ಹಿರಿಯ ಮಹಿಳೆ 118 ವರ್ಷದ ಲುಸಿಲ್ ರಾಂಡನ್ ನಿಧನ

    ಪ್ಯಾರಿಸ್: ವಿಶ್ವದ ಅತ್ಯಂತ ಹಿರಿಯ ಮಹಿಳೆ (World’s Oldest Person) ಎಂದು ಎನಿಸಿಕೊಂಡಿದ್ದ 118 ವರ್ಷದ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ (Lucile Randon) ಅವರು ಮಂಗಳವಾರ ನಿಧರಾಗಿದ್ದಾರೆ.

    ವಿಶ್ವದ ಅತ್ಯಂತ ಹಿರಿಯ ಮಹಿಳೆ ಮೊದಲ ಮಹಾಯುದ್ಧಕ್ಕೂ 1 ದಶಕದ ಮೊದಲೇ 1904ರ ಫೆಬ್ರವರಿ 11 ರಂದು ದಕ್ಷಿಣ ಫ್ರಾನ್ಸ್‌ನಲ್ಲಿ (France) ಜನಿಸಿದ್ದರು. ರಾಂಡನ್ ಮಂಗಳವಾರ ತಮ್ಮ 118 ನೇ ವಯಸ್ಸಿನಲ್ಲಿ ಟೌಲೋನ್‌ನಲ್ಲಿರುವ ನರ್ಸಿಂಗ್ ಹೊಮ್‌ನಲ್ಲಿ ನಿದ್ರೆಗೆ ಜಾರಿದ್ದ ವೇಳೆಯೇ ಸಾವನ್ನಪ್ಪಿದ್ದಾರೆ ಎಂದು ನರ್ಸಿಂಗ್ ಹೋಮ್ ವಕ್ತಾರ ಡೇವಿಡ್ ಟವೆಲ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ನಾಲ್ವರು ಕಳ್ಳರ ಕೈ ಕಟ್ ಮಾಡಿದ ತಾಲಿಬಾನ್ ಸರ್ಕಾರ

    ರಾಂಡನ್ ಸಾವು ತುಂಬಾ ನೋವು ತಂದಿದೆ. ಆದರೆ ಆಕೆಯ ಪ್ರೀತಿಯ ಸಹೋದರನನ್ನು ಸೇರುವುದು ಆಕೆಯ ಬಯಕೆಯಾಗಿತ್ತು. ಆಕೆಯ ಸಾವು ಒಂದು ವಿಮೋಚನೆಯಾಗಿದೆ ಎಂದು ಟವೆಲ್ಲಾ ಹೇಳಿದ್ದಾರೆ.

    ಕಳೆದ ವರ್ಷ ಜಪಾನ್ ಮೂಲದ ಕೇನ್ ತನಕಾ ತಮ್ಮ 119ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರ ಸಾವಿನ ಬಳಿಕ ಲುಸಿಲ್ ರಾಂಡನ್ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನಿಸಿಕೊಂಡರು. ಅದಕ್ಕೂ ಮೊದಲು ರಾಂಡನ್ ಯುರೋಪ್‌ನ ಅತ್ಯಂತ ಹಿರಿಯ ವ್ಯಕ್ತಿ ಎಂದು ಕರೆಯಲ್ಪಟ್ಟಿದ್ದರು. 2022ರ ಏಪ್ರಿಲ್‌ನಲ್ಲಿ ಭೂಮಿಯ ಮೇಲೆ ಬದುಕಿರುವ ಅತ್ಯಂತ ಹಿರಿಯ ಮಹಿಳೆ ಎಂದು ರಾಂಡನ್ ಹೆಸರು ಗಿನ್ನೆಸ್ ದಾಖಲೆಯಲ್ಲಿ ಸೇರ್ಪಡೆಗೊಂಡಿತ್ತು. ಇದನ್ನೂ ಓದಿ: ಭಾರತದೊಂದಿಗೆ ಭಿನ್ನಾಭಿಪ್ರಾಯ ಮರೆತು ನಮ್ಮ ಲಸಿಕೆಯನ್ನು ತರಿಸಿಕೊಳ್ಳಿ: ಚೀನಾಗೆ ಪೂನಾವಾಲಾ ಸಲಹೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ

    ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ

    ಮ್ಯಾಡ್ರಿಡ್: ವಿಶ್ವದ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ರೆಕಾರ್ಡ್ ದಾಖಲಿಸಿದ ಸ್ಪೇನ್ ನ 112 ವರ್ಷದ ಸ್ಯಾಟಿರ್ನಿನೊ ಡೆ ಲಾ ಫ್ಯೂಯೆಂಟ್ ಮಂಗಳವಾರ ತಮ್ಮ ನಿವಾಸದಲ್ಲಿ ನಿಧನರಾದರು.

    1909ರ ಫೆಬ್ರವರಿ 11ರಂದು ಲಿಯಾನ್‍ನ ಪುಯೆಂಟೆ ಅವರು ಕ್ಯಾಸ್ಟ್ರೋದಲ್ಲಿ ಜನಿಸಿದ್ದರು. ಮಂಗಳವಾರ ವಾಯುವ್ಯ ಸ್ಪೇನ್‍ನ ಲಿಯೋನ್‍ನಲ್ಲಿರುವ ಮನೆಯಲ್ಲಿ ನಿಧನರಾದರು. ಕಳೆದ ಸಪ್ಟೆಂಬರ್‍ನಲ್ಲಿ ಡೆ ಲಾ ಫ್ಯೂಯೆಂಟೆಯನ್ನು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ರೆಕಾರ್ಡ್‍ನಲ್ಲಿ ದಾಖಲಿಸಲಾಗಿತ್ತು.

    ಡೆ ಲಾ ಫ್ಯೂಯೆಂಟ್ ಅವರು ವ್ಯಾಪಾರದಲ್ಲಿ ಚಮ್ಮಾರರಾಗಿದ್ದರು. ತಮ್ಮ 13ನೇ ವಯಸ್ಸಿನಲ್ಲಿ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದರು. ಆಂಟೋನಿನಾ ಅವರ ಪತ್ನಿ. ದಂಪತಿಗೆ 8 ಮಕ್ಕಳು, 14 ಮೊಮ್ಮಕ್ಕಳು ಮತ್ತು 22 ಮರಿ ಮೊಮ್ಮಕ್ಕಳು ಇದ್ದಾರೆ. ಅವರನ್ನು ಸ್ಥಳೀಯ ಸ್ಮಶಾನದಲ್ಲಿ ಇಂದು ಅಂತ್ಯಸಂಸ್ಕಾರ ಮಾಡಲಾಯಿತು.  ಇದನ್ನೂ ಓದಿ:  ಚರಣ್​ಜಿತ್ ಸಿಂಗ್ ಚೆನ್ನಿ ಸಂಬಂಧಿ ಮನೆಯ ಮೇಲೆ ಇಡಿ ದಾಳಿ

  • ಓಡಿಹೋದ ಯುವತಿಯನ್ನು ಕರೆತಂದು ಥಳಿಸಿದ ಗ್ರಾಮಸ್ಥರು

    ಓಡಿಹೋದ ಯುವತಿಯನ್ನು ಕರೆತಂದು ಥಳಿಸಿದ ಗ್ರಾಮಸ್ಥರು

    ಹೈದರಾಬಾದ್: ಅಪ್ರಾಪ್ತ ಯುವಕನ ಜೊತೆ ಓಡಿಹೋದ ಯುವತಿಯನ್ನು ಗ್ರಾಮಸ್ಥರು ಕರೆತಂದು ಮನಬಂದತೆ ಥಳಿಸಿರುವ ಘಟನೆ ಆಂಧ್ರ ಪ್ರದೇಶದ ಅನಂತ್‍ಪುರ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಸ್ಥರ ಸಮ್ಮುಖದಲ್ಲೇ ಯುವತಿಯನ್ನು ಆ ಗ್ರಾಮದ ಹಿರಿಯ ವ್ಯಕ್ತಿಯೊಬ್ಬರು ಕೋಲಿನಿಂದ ಭೀಕರವಾಗಿ ಥಳಿಸುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಈಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

    ಈ ವಿಡಿಯೋದಲ್ಲಿ ಯುವಕ ತಲೆ ಬಗ್ಗಿಸಿ ಕುಳಿತಿರುತ್ತಾನೆ. ಯುವತಿಯನ್ನು ಗ್ರಾಮದ ಹಿರಿಯ ವ್ಯಕ್ತಿಯೊಬ್ಬ ವಿಚಾರಣೆ ನಡೆಸುತ್ತಿರುತ್ತಾನೆ. ಹಿರಿಯ ವ್ಯಕ್ತಿ ಕೇಳಿದ ಪ್ರಶ್ನೆಗೆ ಯುವತಿ ನೀಡಿದ ಉತ್ತರದಿಂದ ಕೋಪಗೊಂಡ ಆತ ಆಕೆಯನ್ನು ಕಾಲಿನಿಂದ ಒದ್ದು, ಮೊದಲು ಕೈಯಲ್ಲಿ ಥಳಿಸುತ್ತಾನೆ. ನಂತರ ಕೋಲನ್ನು ತೆಗೆದುಕೊಂಡು ಯುವತಿಗೆ ಮನಬಂದಂತೆ ಹಲ್ಲೆ ಮಾಡುತ್ತಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅನಂತ್‍ಪುರದ ಪೊಲೀಸ್ ಮುಖ್ಯಸ್ಥ ಬಿ ಯೆಸುದಾಸ್, ಈ ಪ್ರಕರಣದಲ್ಲಿ ಗ್ರಾಮದ ಹಿರಿಯ ವ್ಯಕ್ತಿಯ ಬಗ್ಗೆ ದೂರು ನೀಡಲು ಯಾರೂ ಮುಂದೆ ಬರುತ್ತಿಲ್ಲ. ಅವರ ಪೋಷಕರು ದೂರು ನೀಡುತ್ತಿಲ್ಲ. ಹಿರಿಯರು ಈ ವಿಚಾರದಲ್ಲಿ ತಮ್ಮ ಪರವಾಗಿ ಮಧ್ಯಪ್ರವೇಶ ಮಾಡಿದ್ದಾರೆ ಆದ್ದರಿಂದ ನಾವು ದೂರು ನೀಡಲ್ಲ ಎಂದು ಪೋಷಕರು ಹೇಳಿದ್ದಾರೆ. ಈ ಪ್ರಕರಣ ವಿರುದ್ಧ ಅ ಯುವತಿಯೇ ದೂರು ನೀಡುತ್ತಾಳಾ ಎಂದು ಕೇಳಲು ಮಹಿಳಾ ಪೇದೆಯೊಬ್ಬರನ್ನು ಕಳಿಸಿದ್ದೇವೆ, ಆಕೆ ದೂರು ನೀಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

    ಈ ಘಟನೆಯ ಕುರಿತು ಮಾತನಾಡಿರುವ ಮಕ್ಕಳ ಹಕ್ಕುಗಳ ಸಂಘದ ಕಾರ್ಯಕರ್ತ ಅಚ್ಯುತ್ ರಾವ್, ಮಕ್ಕಳ ವಿರುದ್ಧ ಕೊಲೆ ಯತ್ನ ಮತ್ತು ಹಲ್ಲೆ ಪ್ರಕರಣಗಳನ್ನು ಜೆಜೆ(ಭಾಲಾಪರಾಧಿ ನ್ಯಾಯ ಮತ್ತು ಮಕ್ಕಳ ರಕ್ಷಣೆ) ಕಾಯ್ದೆ ಅಡಿಯಲ್ಲಿ ದಾಖಲಿಸಬೇಕೆಂದು ಒತ್ತಾಯ ಮಾಡಿದ್ದಾರೆ. ಇದು ಅವರಿಗೆ ಅರಿವಿಲ್ಲದೆ ಮಾಡಿದ್ದಾರೆ. ಈ ರೀತಿ ಆದಾಗ ಹಿರಿಯರು ಅವರಿಗೆ ಬುದ್ಧಿವಾದ ಹೇಳಬೇಕು. ಅದನ್ನು ಬಿಟ್ಟು ಪೊಲೀಸರ ರೀತಿಯಲ್ಲಿ ವರ್ತಿಸಬಾರದು ಎಂದು ಹೇಳಿದ್ದಾರೆ.