Tag: ಹಿರಿಯ ಪತ್ರಕರ್ತೆ

  • ಗೌರಿ ಕೊಂದವನು ಪರಶುರಾಮ್ ವಾಗ್ಮೋರೆ- ಪ್ರಕರಣದ ಭೇದಿಸಲು ನೆರವಾಗಿದ್ದು 6 ಸೆಕೆಂಡಿನ ಫೂಟೇಜ್

    ಗೌರಿ ಕೊಂದವನು ಪರಶುರಾಮ್ ವಾಗ್ಮೋರೆ- ಪ್ರಕರಣದ ಭೇದಿಸಲು ನೆರವಾಗಿದ್ದು 6 ಸೆಕೆಂಡಿನ ಫೂಟೇಜ್

    – ಫೊರೆನ್ಸಿಕ್ ಗೇಟ್ ಅನಾಲೀಸಿಸ್ ನಲ್ಲಿ ಸಾಬೀತು

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಬುಧವಾರಕ್ಕೆ(ಸೆ.5)ಕ್ಕೆ ಬರೋಬ್ಬರಿ ಒಂದು ವರ್ಷ ಭರ್ತಿಯಾಗುತ್ತಿದ್ದು, ಈ ಹಂತದಲ್ಲಿ ಹತ್ಯೆ ತನಿಖೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ಗೌರಿಯನ್ನು ಗುಂಡಿಟ್ಟು ಕೊಂದಿದ್ದು ಪರಶುರಾಮ್ ವಾಗ್ಮೋರೆ ಅಂತ ಎಸ್‍ಐಟಿ ಸಾಬೀತುಪಡಿಸಿದೆ.

    ಕೇವಲ 6 ಸೆಕೆಂಡ್‍ನ ಫೂಟೇಜ್ ಹಿಡಿದು ಎಸ್‍ಐಟಿ ಈ ಆರೋಪವನ್ನು ಸಾಬೀತು ಮಾಡಿದೆ. `ಫೊರೆನ್ಸಿಕ್ ಗೇಟ್ ಅನಾಲೀಸಿಸ್’ ಟೆಕ್ನಿಕ್ ಮೂಲಕ ತಾಂತ್ರಿಕವಾಗಿ ಈ ಆರೋಪ ಸಾಬೀತಾಗಿದೆ. ಇದರಲ್ಲಿ ಸಿಸಿಟಿವಿ ದೃಶ್ಯಾವಳಿ ಮತ್ತು ಕ್ರೈಮ್ ಸೀನ್ ಮರುಚಿತ್ರೀಕರಣದ ವಿಡಿಯೋ ಮ್ಯಾಚಾಗುತ್ತಿತ್ತು. ಹೆಲ್ಮೆಟ್ ಧರಿಸಿದ್ದರೂ ಬೈಕ್‍ನಲ್ಲಿ ಇದ್ದಿದ್ದು ಪರಶುರಾಮ್ ವಾಗ್ಮೋರೆ ಎಂಬುದು ಸ್ಪಷ್ಟವಾಗಿದ್ದು, ಗುಜರಾತ್‍ನ ವಿಧಿವಿಜ್ಞಾನ ಪ್ರಯೋಗಾಲಯ ಈ ವರದಿ ನೀಡಿದೆ. ಇದನ್ನೂ ಓದಿ: ಗೌರಿ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್‍ಐಟಿ ಪೊಲೀಸರಿಗೇ ಫುಲ್ ಶಾಕ್

    ಭಾರತದಲ್ಲಿ ಇದೇ ಮೊದಲ ಬಾರಿಗೆ ಫೊರೆನ್ಸಿಕ್ ಗೇಟ್ ಅನಾಲೀಸಿಸ್ ಟೆಕ್ನಿಕ್ ಬಳಕೆ ಮಾಡಲಾಗಿದೆ. ಈ ಟೆಕ್ನಿಕ್ ಮೂಲಕ ಆರೋಪಿ ಪರಶುರಾಮ್ ವಾಗ್ಮೋರೆ ಶೂಟ್ ಮಾಡಿರುವುದು ಸ್ಪಷ್ಟವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ತಾಂತ್ರಿಕವಾಗಿ ಸಾಬೀತಾದ ಮೊದಲ ಪ್ರಕರಣ ಇದಾಗಿದ್ದು, ಲಂಡನ್‍ನಲ್ಲಿ 18 ವರ್ಷಗಳ ಹಿಂದೆ ಮೊದಲ ಬಾರಿಗೆ ಈ ಟೆಕ್ನಿಕ್ ಬಳಸಲಾಗಿತ್ತು. ಇದ್ರೊಂದಿಗೆ ಎಸ್‍ಐಟಿ ಇದೀಗ ಗೌರಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಯಶಸ್ಸು ಸಾಧಿಸಿದೆ. ಇದನ್ನೂ ಓದಿ: ನೀನ್ ಹುಟ್ಟಿದ್ದೇ ಗೌರಿ ಹತ್ಯೆ ಮಾಡಲು, ನಿನ್ನ ಹೆಸರಲ್ಲಿದೆ ಧರ್ಮರಕ್ಷಣೆಯ ಸಂಕೇತ- ಪರಶುರಾಮ್ ವಾಗ್ಮೋರೆಗೆ ಮಾಡಿದ್ರಂತೆ ಬ್ರೈನ್‍ವಾಶ್..!

    ಫೊರೆನ್ಸಿಕ್ ಗೇಟ್ ಅನಾಲೀಸಿಸ್ ಎಂದರೇನು? ಪತ್ತೆ ಹಚ್ಚುವುದು ಹೇಗೆ?
    ಪರಶುರಾಮ್ ವಾಗ್ಮೋರೆ ಬಂಧನಕ್ಕೂ ಮೊದಲು ಸಿಸಿಟಿವಿ ಆಧರಿಸಿ ಆರೋಪಿ ಎತ್ತರದ ನಕಲಿ ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಹೋಗಿ ಗೌರಿ ಹತ್ಯೆಯ ಅನಾಲಿಸಿಸ್ ಮಾಡಲಾಗಿತ್ತು. ಈ ವೇಳೆ ಆರೋಪಿಯ ಎತ್ತರ 5.2 ಅಡಿ ಎಂಬ ಸುಳಿವು ದೊರಕಿತ್ತು. ನಂತರ ಆತನ ಶೂ ಮತ್ತು ಹೆಲ್ಮೆಟನ್ನು ಹಾಕಿಕೊಂಡ್ರೆ 5.3ರಿಂದ 5.4ರಷ್ಟು ಆರೋಪಿಯ ಎತ್ತರ ಬರುತ್ತೆ ಅಂತ ಅನಾಲಿಸಿಸ್ ಮಾಡಲಾಗಿತ್ತು. ಇದನ್ನೂ ಓದಿ: ಗೌರಿ ಹತ್ಯೆ ನಡೆದಿದ್ದು ಹೇಗೆ? – ‘ಆ’ ಆರು ಗುಂಡುಗಳ ಕಥೆ ಇಲ್ಲಿದೆ

    ಬಳಿಕ ಬೇರೆ ಬೇರೆ ಸುಳಿವುಗಳ ಮೂಲಕ ಅಮೊಲ್ ಕಾಳೆ, ಸಜಿತ್ ಹಾಗೂ ಅಮಿತ್ ಮೊದಲಾದವರ ಹೇಳಿಕೆಗಳನ್ನು ಆಧರಿಸಿ ಪರಶುರಾಮ್ ವಾಗ್ಮೋರೆಯನ್ನು ಬಂಧಿಸುತ್ತಾರೆ. ಬಂಧನದ ಬಳಿಕ ಘಟನಾ ಸ್ಥಳಕ್ಕೆ ವಾಗ್ಮೊರೆಯನ್ನು ಕರೆದುಕೊಂಡು ಹೋಗಿ ಆತನಿಗೆ ಶೂ ಹಾಗೂ ಹೆಲ್ಮೆಟ್ ಹಾಕಿ, ಬೈಕ್ ಓಡಿಸುವ ಮೂಲಕ ಪ್ರಕರಣವನ್ನು ಮರುಸೃಷ್ಟಿ ಮಾಡಲಾಗಿತ್ತು. ಈ ಘಟನೆಯನ್ನು ಗೌರಿ ಮನೆಯಲ್ಲಿರುವ ಕೇವಲ ಎರಡು ಸಿಸಿಟಿವಿಯಲ್ಲಿ ಮಾತ್ರ ಸೆರೆಹಿಡಿಯಲಾಗಿತ್ತು. ಅದರಲ್ಲಿ ಆತ ಶೂ, ಹೆಲ್ಮೆಟ್ ತೆಗೆಯುವತಂಹ ರೀತಿಯನ್ನೂ ಸೆರೆಹಿಡಿಯಲಾಗಿತ್ತು. ಹೀಗಾಗಿ ಹೆಲ್ಮೆಟ್ ಇಲ್ಲದೆ, ಶೂ ಇಲ್ಲದೇ ಮರು ಸೃಷ್ಟಿ ಮಾಡಿದಾಗಲೂ ವಿಡಿಯೋ ಹೊಂದಾಣಿಕೆ ಕಂಡಿತ್ತು.

    ಈ ಮೂಲಕ ಪ್ರಕರಣದ ಘಟನೆಯನ್ನು ಮರುಸೃಷ್ಟಿ ಮಾಡಿ ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕೊಡಲಾಗಿತ್ತು. ಇಲ್ಲಿ ಪ್ರತಿಯೊಂದು ಚಲನವಲನವನ್ನು ಗಮನಿಸಲಾಯಿತು. ಈ ವೇಳೆ ವಾಗ್ಮೋರೆಯೇ ಹಂತಕ ಅನ್ನೋ ಸ್ಪಷ್ಟ ಚಿತ್ರಿಕರಣವನ್ನು ಗುಜರಾತಿನ ವಿಧಿವಿಜ್ಞಾಲಯ ವರದಿ ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=enMwHOKcDts

  • ಗೌರಿ ಹತ್ಯೆ ಪ್ರಕರಣ- ಇಂದು ಮಹಾರಾಷ್ಟ್ರದ ಜೊತೆ ಕರ್ನಾಟಕ ಎಸ್‍ಐಟಿ ಮಾತುಕತೆ

    ಗೌರಿ ಹತ್ಯೆ ಪ್ರಕರಣ- ಇಂದು ಮಹಾರಾಷ್ಟ್ರದ ಜೊತೆ ಕರ್ನಾಟಕ ಎಸ್‍ಐಟಿ ಮಾತುಕತೆ

    ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಸ್‍ಐಟಿ ಜೊತೆ ಇಂದು ಕರ್ನಾಟಕ ಎಸ್‍ಐಟಿ ಮಾತುಕತೆ ನಡೆಸಲಿದೆ. ಈ ವೇಳೆ ಆರೋಪಿಗಳನ್ನು ಕರ್ನಾಟಕ ಎಸ್‍ಐಟಿ ವಶಕ್ಕೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

    ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ಬಾಡಿವಾರೆಂಟ್ ಮೇಲೆ ವಶಕ್ಕೆ ನೀಡುವಂತೆ ಎಸ್‍ಐಟಿ ಮನವಿ ಸಲ್ಲಿಸಲಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

    ಕರ್ನಾಟಕ ಎಸ್‍ಐಟಿ ಆರೋಪಿಗಳ ಬಂಧನಕ್ಕೆ ಸುಳಿವು ನೀಡಿತ್ತು. ಕರ್ನಾಟಕ ಎಸ್‍ಐಟಿ ನೀಡಿದ ಮಾಹಿತಿ ಆಧರಿಸಿ ಮುಂಬೈನಲ್ಲಿ ವೈಭವ್ ರಾವತ್ ಬಂಧನವಾಗಿತ್ತು. ಬಳಿಕ ಶರದ್ ಕಲಾಸ್ಕರ್ ಮತ್ತು ಸುಧನ್ವ ಗೊಂಧಾಲೇಕರ್ ಬಂಧನವಾಗಿತ್ತು. ಬಂಧಿತ ಆರೋಪಿಗಳಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, 11 ಕಂಟ್ರಿಮೇಡ್ ಪಿಸ್ತೂಲ್‍ಗಳು, ಜೀವಂತ ಗುಂಡುಗಳು ಜಪ್ತಿಯಾಗಿತ್ತು.

    ಈ ಐವರು ಆರೋಪಿಗಳ ಪೈಕಿ ಒಬ್ಬರು ಗೌರಿ ಹತ್ಯೆಗೆ ಪಿಸ್ತೂಲ್ ರವಾನೆ ಮಾಡಿರೋ ಬಗ್ಗೆ ಮಾಹಿತಿ ಕಲೆಹಾಕಲಾಗಿತ್ತು. ಪಿಸ್ತೂಲ್ ವಶಕ್ಕೆ ಪಡೆಯಲು ಆರೋಪಿಗಳ ವಿಚಾರಣೆ ಅಗತ್ಯ ಎಂದು ಕೋರ್ಟ್ ಮೊರೆ ಹೋಗಲಾಗಿತ್ತು. ಸದ್ಯ ಎಸ್‍ಐಟಿ ಮುಂಬೈ ಕೋರ್ಟ್‍ನಲ್ಲಿ ಇಂದು ಅರ್ಜಿ ಸಲ್ಲಿಸಿ ಗೌರಿ ಹತ್ಯೆಗೆ ಇವರೇ ಪ್ರಮುಖ ಕಾರಣ ಎಂಬ ಮಾಹಿತಿ ಮೇಲೆ ವಶಕ್ಕೆ ಕೇಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv