Tag: ಹಿರಿಯ ಪತ್ರಕರ್ತ

  • ಹಿರಿಯ ಪತ್ರಕರ್ತ ಕೆ.ಎಸ್ ಸಚ್ಚಿದಾನಂದ ಮೂರ್ತಿ ನಿಧನ- ಸಿಎಂ ಸಂತಾಪ

    ಹಿರಿಯ ಪತ್ರಕರ್ತ ಕೆ.ಎಸ್ ಸಚ್ಚಿದಾನಂದ ಮೂರ್ತಿ ನಿಧನ- ಸಿಎಂ ಸಂತಾಪ

    ಬೆಂಗಳೂರು: ಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದ ಮೂರ್ತಿ (Sachidananda Murthy) ಅವರು ಇಂದು (ಶುಕ್ರವಾರ) ನಿಧನರಾಗಿದ್ದಾರೆ.

    ಕೆಲ ದಿನಗಳ ಹಿಂದೆ ಶ್ವಾಸಕೋಶ ಕಸಿಗೆ ಒಳಗಾಗಿದ್ದರು. ಇದೀಗ ಮತ್ತೆ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಸಚ್ಚಿದಾನಂದಮೂರ್ತಿ ಅವರು ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕೋಲಾರ (Kolar) ಮೂಲದ ಸಚ್ಚಿದಾನಂದ ಮೂರ್ತಿಯವರು 1982 ರಲ್ಲಿ ದಿ ವೀಕ್ (The Week) ಸೇರಿದ್ದು, ಬಳಿಕ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದರು. ದೆಹಲಿಯಲ್ಲಿ 4 ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಎಡಿಟರ್ಸ್ ಗಿಲ್ಡ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

    ಸದ್ಯ ಸಚ್ಚಿಯವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇನ್ನು ಸಚ್ಚಿ ನಿಧನಕ್ಕೆ ಮಾಧ್ಯಮ ರಂಗ ಕಂಬನಿ ಮಿಡಿದಿದೆ. ಜಯನಗರ ಟಿ ಬ್ಲಾಕ್‍ನಲ್ಲಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆ 6 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬುದಾಗಿ ಅವರ ಕುಟುಂಬ ಮೂಲಗಳು ತಿಳಿಸಿವೆ.

    ಮಾಧ್ಯಮ ವಲಯದಲ್ಲಿ ಸಚ್ಚಿ ಎಂದೇ ಖ್ಯಾತಿ ಪಡೆದಿದ್ದ ಸಚ್ಚಿದಾನಂದ ಅವರು ಕಳೆದ ವರ್ಷ ನಿವೃತ್ತಿ ಹೊಂದಿದ್ದರು. ನಿವೃತ್ತಿಯಾಗುವವರೆಗೂ ಮಲಯಾಳ ಮನೋರಮಾ ಗ್ರೂಪ್‍ನಲ್ಲೇ ಕಾರ್ಯನಿರ್ವಹಿಸಿದ್ದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಣೆಯಲ್ಲಿ ಸಿದ್ಧಹಸ್ತರಾಗಿದ್ದರು. ನ್ಯೂ ಡೆಲ್ಲಿ ಅಂಕಣದ ಮೂಲಕ ಮನೆಮಾತಾಗಿದ್ದರು. ಸದ್ಯ ಸಚ್ಚಿಯವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇನ್ನು ಸಚ್ಚಿ ನಿಧನಕ್ಕೆ ಮಾಧ್ಯಮ ರಂಗ ಕಂಬನಿ ಮಿಡಿದಿದೆ.

    ಸಿಎಂ ಸಂತಾಪ: ಸಚ್ಚಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಎಕ್ಸ್‍ನಲ್ಲಿ ಬರೆದುಕೊಂಡಿರುವ ಸಿಎಂ, ಹಿರಿಯ ಪತ್ರಕರ್ತ, ‘ಮಲಯಾಳ ಮನೋರಮಾ’ ಮತ್ತು ‘ದಿ ವೀಕ್’ ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದ ಮೂರ್ತಿಯವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬ ಮತ್ತು ಸ್ನೇಹಿತರ ದು:ಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯ ಪತ್ರಕರ್ತ ಜಿಎನ್ ರಂಗನಾಥ್ ರಾವ್ ನಿಧನ

    ಹಿರಿಯ ಪತ್ರಕರ್ತ ಜಿಎನ್ ರಂಗನಾಥ್ ರಾವ್ ನಿಧನ

    ಬೆಂಗಳೂರು: ಹಿರಿಯ ಪತ್ರಕರ್ತ ಮತ್ತು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಜಿಎನ್ ರಂಗನಾಥ್ ರಾವ್ (83) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

    ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಂಗನಾಥ್ ರಾವ್ (GN Ranganath Rao) ಇಂದು ತಮ್ಮ ಪುತ್ರ ಮತ್ತು ಮಗಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಸಂಜೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದೆ.

    1942ರಲ್ಲಿ ಬೆಂಗಳೂರು ಜಿಲ್ಲೆಯ ಹಾರೋಹಳ್ಳಿಯಲ್ಲಿ ಹುಟ್ಟಿದ ಜಿಎನ್ ರಂಗನಾಥ್ ಅವರು ಹೊಸಕೋಟೆ ಹಾಗೂ ಬೆಂಗಳೂರು ನಗರದಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. 1962 ರಲ್ಲಿ ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯಲ್ಲಿ ಉಪಸಂಪಾದಕರಾಗಿ ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ನಂತರ ಅವರು ಪ್ರಜಾವಾಣಿಗೆ ಸೇರಿಕೊಂಡು ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಇದನ್ನೂ ಓದಿ: ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ- ಪಬ್ಲಿಕ್ ಟಿವಿಗೆ ಸಿಎಂ EXCLUSIVE ಸಂದರ್ಶನ

    ಬಹುಮುಖ ವ್ಯಕ್ತಿತ್ವ ಹೊಂದಿದ್ದ ಅವರು ‘ನವರಂಗ’ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳು, ಸಣ್ಣ ಕಥೆಗಳು, ನಾಟಕಗಳು, ವಿಮರ್ಶಾತ್ಮಕ ಪ್ರಬಂಧಗಳನ್ನು ಬರೆದಿದ್ದಾರೆ. ಕವಿಯಾಗಿ ಅವರು ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಅವರು ಮಾಧ್ಯಮಕ್ಕೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ – ನ.7 ಕ್ಕೆ ಮೊದಲ, ನ.30 ರಂದು ಕೊನೆ ಚುನಾವಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣಗೆ ಶ್ರದ್ಧಾಂಜಲಿ

    ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣಗೆ ಶ್ರದ್ಧಾಂಜಲಿ

    ಬೆಂಗಳೂರು: ಇಲ್ಲಿನ ಪ್ರೆಸ್‌ ಕ್ಲಬ್‌ ಸಭಾಂಗಣದಲ್ಲಿ ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ (K.Sathyanarayana) ಅವರಿಗೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಸಹದ್ಯೋಗಿಗಳು, ಹಿರಿಯ ಪತ್ರಕರ್ತರು, ಕುಟುಂಬದ ಸದಸ್ಯರು ಸತ್ಯನಾರಾಯಣ ಅವರನ್ನು ಸ್ಮರಿಸಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌ ಕ್ಲಬ್‌ (Press Club Bengaluru), ಕರ್ನಾಟಕ ಮಾಧ್ಯಮ ಅಕಾಡೆಮಿ (Karnataka Media Academy), ಕರ್ನಾಟಕ ಪತ್ರಕರ್ತರ ಸಹಕಾರ ಸಂಘ ಹಾಗೂ ಕೆ.ಸತ್ಯನಾರಾಯಣ ಅವರ ಅಭಿಮಾನಿಗಳ ಬಳಗ ಸಹಯೋಗದಲ್ಲಿ ಕೆ.ಸತ್ಯನಾರಾಯಣ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನಕ್ಕೆ ಗಣ್ಯರ ಸಂತಾಪ

    ಈ ವೇಳೆ ಮಾತನಾಡಿದ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಸತ್ಯನಾರಾಯಣ ಅವರನ್ನು ಇಳಿವಯಸ್ಸಿನಲ್ಲಿ ಶಿಷ್ಯ ವರ್ಗ ಪ್ರೀತಿಯಿಂದ ನೋಡಿಕೊಂಡಿದೆ ಎಂದು ನೆನಪಿಸಿಕೊಂಡರು.

    ನಮ್ಮನ್ನು ಅಗಲಿದ 40 ಹಿರಿಯ ಪತ್ರಕರ್ತರ ಬಗ್ಗೆ ಪುಸ್ತಕಗಳನ್ನು ಹೊರತರುತ್ತಿದ್ದೇವೆ. ಮುಂದಿನ ತಿಂಗಳು ಪುಸ್ತಕ ಬಿಡುಗಡೆ ಮಾಡಲಾಗುವುದು. ಸತ್ಯನಾರಾಯಣ ಅವರ ಜೀವನ ಚರಿತ್ರೆ ಪುಸ್ತಕವನ್ನು ಹೊರತರುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

    ಸತ್ಯನಾರಾಯಣ ಅವರ ಪುತ್ರಿ ಅಪೂರ್ವ ತಮ್ಮ ತಂದೆಯ ವ್ಯಕ್ತಿತ್ವ ಕುರಿತು ಮಾತನಾಡಿದರು. ಈಗಿನ ಮಕ್ಕಳು, ನಮ್ಮಪ್ಪ ನನಗೆ ಸೈಕಲ್‌ ತುಳಿಯುವುದನ್ನು ಹೇಳಿಕೊಟ್ರು. ಬೈಕ್‌ ಓಡಿಸೋದನ್ನು ಕಲಿಸಿಕೊಟ್ರು ಅಂತಾ ಹೇಳ್ತಾರೆ. ಆದರೆ ನಮ್ಮ ತಂದೆ ಬಜೆಟ್‌ ಕುರಿತು ಪ್ರಬಂಧ ಬರೆಯುವಾಗ, “ನೀನು ಬರಿ ಬಜೆಟ್‌ ನೋಡಿದರೆ ಸಾಲದು. ಆರ್ಥಿಕ ಸಮೀಕ್ಷೆಯನ್ನೂ ನೋಡಿಕೊಳ್ಳಬೇಕೆಂದು” ಸಲಹೆ ನೀಡಿದ್ದರು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನವಾದ ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ

    ಹಿರಿಯ ಪತ್ರಕರ್ತ ಡಿ.ಉಮಾಪತಿ ಮಾತನಾಡಿ, ಸತ್ಯ ಅವರು ಅಧಿಕಾರ ಕೇಂದ್ರಗಳಿಂದ ದೂರ ಇದ್ದವರು. ಅಧಿಕಾರ ಕೇಂದ್ರಗಳನ್ನು ಅತ್ಯಂತ ಅಸಡ್ಡೆಯಿಂದ ನೋಡಿದವರು. ಈಗ ಅಂತಹವರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ. ಅಧಿಕಾರ ಕೇಂದ್ರಗಳ ಕಣ್ಣು ಕೋರೈಸುವ ಪ್ರಭೆಯ ಮುಂದೆ ಪತ್ರಕರ್ತರಾದ ನಾವು ಕುರುಡಾಗಿದ್ದೇವೆ ಎಂದು ಹೇಳಿದರು.

    ನನ್ನ ಕೆಲಸ ಮುಗಿತಪ್ಪ ಅಂತಾ ಹೆಗಲಿಗೆ ಚೀಲ ಹಾಕಿಕೊಂಡು ಸತ್ಯನಾರಾಯಣ ಅವರು ಹೊರಟು ಹೋಗಿದ್ದಾರೆ. ಪತ್ರಿಕೆಗಳಲ್ಲಿ ಕೆಲಸ ಮಾಡುವುದೆಂದರೆ ಬೇರೆ ಉದ್ಯೋಗಗಳಂತೆ ಅಲ್ಲ ಎಂಬ ಪಾಠವನ್ನು ಅವರು ನಮಗೆ ಹೇಳಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸತ್ಯನಾರಾಯಣರಂಥ ಹಿರಿಯರು ಸುದ್ದಿಮನೆಯಲ್ಲಿ ಹಾಕಿದ ಆದರ್ಶವನ್ನು ಕಾಪಿಟ್ಟುಕೊಂಡು ಹೋದರೆ ನಮಗೆ ಗೌರವ. ಸತ್ಯನಾರಾಯಣ ಅವರು ಆದರ್ಶದ ಬದುಕನ್ನು ಜೀವಿಸಿದ್ದಾರೆ ಎಂದು ಮಾತನಾಡಿದರು.

    ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್ ಮಾತನಾಡಿ, ಸತ್ಯನಾರಾಯಣ ಅವರು ಬರೆದ ವರದಿಗಳು, ಲೇಖನ ವಿರುದ್ಧವಾಗಿ ಯಾವ ಮಾತುಗಳು ಸಹ ಬರುತ್ತಿರಲಿಲ್ಲ. ಏಕೆಂದರೆ ಅವರು ಎಂದೂ ಅಸತ್ಯ ಬರೆದಿರಲಿಲ್ಲ. ಸತ್ಯವನ್ನು ಬರೆಯುತ್ತಾ ಪತ್ರಕರ್ತರಾಗಿದ್ದರು ಎಂದು ಬಣ್ಣಿಸಿದರು. ಇದನ್ನೂ ಓದಿ: ಹಿರಿಯ ಪತ್ರಕರ್ತ ಕೆ.ಸತ್ಯನಾರಾಯಣ ನಿಧನ

    ʼಪಬ್ಲಿಕ್‌ ಟಿವಿʼ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌, ಕನ್ನಡಪ್ರಭ ಪತ್ರಿಕೆ ಸಂಪಾದಕರಾದ ರವಿ ಹೆಗಡೆ, ಹಿರಿಯ ಪತ್ರಕರ್ತ ಇಮ್ರಾನ್‌ ಕುರೇಶಿ,‌ ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಹಿರಿಯ ಪತ್ರಕರ್ತ ರಾಮಕೃಷ್ಣ ಉಪಾಧ್ಯಾಯ, ಹಿರಿಯ ಪತ್ರಕರ್ತರಾದ ನಾಗಮಣಿ, ಟಿ.ರಾಮಯ್ಯ, ಹಿರಿಯ ಸಾಹಿತಿ ವಿಜಯಮ್ಮ ಅವರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • VIDEO: ಹಿರಿಯ ಪತ್ರಕರ್ತ ಸತ್ಯನಾರಾಯಣ ನಿಧನಕ್ಕೆ ʼಪಬ್ಲಿಕ್‌ ಟಿವಿʼ ಹೆಚ್‌.ಆರ್.ರಂಗನಾಥ್‌ ಸಂತಾಪ

    VIDEO: ಹಿರಿಯ ಪತ್ರಕರ್ತ ಸತ್ಯನಾರಾಯಣ ನಿಧನಕ್ಕೆ ʼಪಬ್ಲಿಕ್‌ ಟಿವಿʼ ಹೆಚ್‌.ಆರ್.ರಂಗನಾಥ್‌ ಸಂತಾಪ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿರಿಯ ಪತ್ರಕರ್ತ, ಸಾಹಿತಿ ಎಂ.ಎಸ್ ಪ್ರಭಾಕರ್ ನಿಧನ

    ಹಿರಿಯ ಪತ್ರಕರ್ತ, ಸಾಹಿತಿ ಎಂ.ಎಸ್ ಪ್ರಭಾಕರ್ ನಿಧನ

    ಕೋಲಾರ: ಹಿರಿಯ ಪತ್ರಕರ್ತ (Senior Journalist) ಹಾಗೂ ಸಾಹಿತಿ ಎಂ.ಎಸ್ ಪ್ರಭಾಕರ್ (87) ನಿಧನರಾಗಿದ್ದಾರೆ.

    ಕೋಲಾರ ಮೂಲದ ಕಾಮರೂಪಿ ಎಂ.ಎಸ್.ಪ್ರಭಾಕರ್ ಅವರು ವಯೋಸಹಜ ಕಾಯಿಲೆ, ಅನಾರೋಗ್ಯದಿಂದ ಬಳಲುತ್ತಿದ್ದರು. ಕೋಲಾರ (Kolar) ನಗರದ ಕಠಾರಿ ಪಾಳ್ಯದಲ್ಲಿ ಇಂದು ಕೊನೆಯುಸಿರೆಳೆದರು.

    ಲಂಕೇಶ್ ಸೇರಿದಂತೆ ಹಿರಿಯ ಪತ್ರಕರ್ತರೊಂದಿಗೆ ಪ್ರಭಾಕರ್ ಒಡನಾಡಿಯಾಗಿದ್ದರು. ಅಸ್ಸಾಂ ನಲ್ಲಿ ಪತ್ರಿಕೋದ್ಯಮ ಆರಂಭ ಮಾಡಿದ್ದ ಇವರು, ದಿ ಹಿಂದೂ ಪತ್ರಿಕೆ ಮೂಲಕ ನೆಲ್ಸನ್ ಮಂಡೇಲಾ ಅವರನ್ನ ಸಂದರ್ಶನ ಮಾಡಿದ ಏಕೈಕ ಕನ್ನಡ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    ತುಂಬಾ ಕಡಿಮೆ ಪುಸ್ತಕ ಬರೆದಿದ್ದರೂ ಹಲವು ಓದುಗರನ್ನ ಹೊಂದಿದ್ದ ಹಿರಿಯ ಸಾಹಿತಿಯಾಗಿದ್ದಾರೆ. 2021 ರಲ್ಲಿ ಕನ್ನಡ ರಾಜ್ಯೋತ್ಸವ (Kannada Rajyotsava) ಪ್ರಶಸ್ತಿ ಪಡೆದಿದ್ರು. ಸದ್ಯ ಅವರ ಇಚ್ಛೆಯಂತೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕುಟುಂಬಸ್ಥರು ದೇಹದಾನ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನ ಹಿರಿಯ ನಾಟಕಕಾರ, ಪತ್ರಕರ್ತ ರತ್ನಾಕರ ರಾವ್ ಕಾವೂರು ನಿಧನ

    ಮಂಗಳೂರಿನ ಹಿರಿಯ ನಾಟಕಕಾರ, ಪತ್ರಕರ್ತ ರತ್ನಾಕರ ರಾವ್ ಕಾವೂರು ನಿಧನ

    ಮಂಗಳೂರು: ಹಿರಿಯ ನಾಟಕಕಾರ, ನಿರ್ದೇಶಕ, ವಜ್ರನೇತ್ರ ಪತ್ರಿಕೆ ಸಂಪಾದಕ, ರತ್ನಾಕರ ರಾವ್ ಕಾವೂರುರವರು(81) ಇಂದು ಬೆಳಗ್ಗೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

    ಸಾಮಾಜಿಕ, ಪೌರಾಣಿಕ, ಆಧ್ಯಾತ್ಮಿಕ, ನವ್ಯ ಮತ್ತು ಐತಿಹಾಸಿಕ ಹೀಗೆ ಐದು ಬಗೆಯ ನಾಟಕ ರಚನೆಯಲ್ಲಿ ಅವರದ್ದು ಗಮನಾರ್ಹ ಸಾಧನೆಯಾಗಿತ್ತು. ವಜ್ರನೇತ್ರ ಎಂಬ ಕನ್ನಡ ಪತ್ರಿಕೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಿ ಸರ್ಕಾರದ ಗಮನ ಸೆಳೆಯುತ್ತಿದ್ದ ಅವರು ಸುದೀರ್ಘ 60 ವರ್ಷಗಳ ಕಾಲ ಸರಸ್ವತಿಯ ಸೇವೆಗೈದಿದ್ದರು. ಇದನ್ನೂ ಓದಿ: ನಮ್ಮಂತಹ ಹೋರಾಟಗಾರರು, ಹಿಂದುತ್ವವಾದಿಗಳಿಗೆ BJPಯಲ್ಲಿ ಪ್ರವೇಶವಿಲ್ಲ; ಭ್ರಷ್ಟರಿಗಷ್ಟೇ ಮಣೆ – ಮುತಾಲಿಕ್‌

    ‘ನಾಟಕ ಕಲಾ ರತ್ನ’ ಬಿರುದಾಂಕಿತ ರತ್ನಾಕರ ರಾವ್ ಕಾವೂರುರವರು, ‘ಅಮ್ಮಾ ಕಟೀಲಮ್ಮಾ’, ತಬುರನ ತೆಲಿಕೆ, ಹಸುರು ಹೆಣ್ಣು, ಮಹಾತ್ಮಾ, ಸಾಮ್ರಾಟ್ ಸಂಕಣ್ಣ, ಶ್ರೀ ಗುರುರಾಘವೇಂದ್ರ, ನಳದಮಯಂತಿ, ಅಮರ ನಾರಿ ಅಬ್ಬಕ್ಕ, ಕನಕನ ಕೃಷ್ಣ, ಕತ್ತಿ ಪತ್ತಿ ಕಲ್ಯಾಣಪ್ಪೆ, ಪ್ರಚಂಡ ಪರಶುರಾಮ, ಸ್ವಾಮಿ ಶರಣಂ ಐಯ್ಯಪ್ಪೆ, ರಾಷ್ಟ್ರವೀರ ರಾಣಾಪ್ರತಾಪ, ಭೂತಾಳ ಪಾಂಡ್ಯೆ, ಮಿನಿಸ್ಟರ್ ಮುಂಡಪ್ಪಣ್ಣೆ, ಯಮೆ ತೆಲಿಪುವೆ, ಅಬ್ಬರದ ಆದಿಶಕ್ತಿ, ಕಾರ್ನಿಕದ ಕೋಟಿಚೆನ್ನಯೆ, ತುಳುನಾಡ ಸಿರಿ ನಾಗಬ್ರಹ್ಮೆ, ಮಹಾವೀರ ಮಾರುತಿ, ಪೊಣ್ಣ ಮನಸ್ ಬಂಗಾರ್, ಇತ್ಯಾದಿ ಸುಮಾರು ನೂರಕ್ಕೂ ಹೆಚ್ಚು ಕನ್ನಡ ಮತ್ತು ತುಳು ನಾಟಕಗಳನ್ನು ಬರೆದ ಅವರು ಪೊಲೀಸ್ ಪತ್ನಿ, ಕೆಂಪು ಹೆಣ್ಣು ಮುಂತಾದ ಕಾದಂಬರಿಯನ್ನೂ ಬರೆದಿದ್ದರು. ಇದನ್ನೂ ಓದಿ: ತರಗತಿಗೆ ಚಕ್ಕರ್ – ವಿದ್ಯಾರ್ಥಿನಿಯರ ಕೈಯಲ್ಲಿ ಟಾಯ್ಲೆಟ್ ಕ್ಲೀನ್ ಮಾಡಿಸಿ ಶಿಕ್ಷೆ

    ‘ನ್ಯಾಯೊಗಾದ್ ಎನ್ನ ಬದ್‍ಕ್’ ಬಂಗಾರ್ ಪಟ್ಲೇರ್ ಮುಂತಾದ ಸಿನಿಮಾದಲ್ಲೂ ಬಣ್ಣ ಹಚ್ಚಿದ ಅವರಿಗೆ ಇತ್ತೀಚೆಗೆ ತುಳು ಸಾಹಿತ್ಯ ಅಕಾಡೆಮಿಯ ಜೀವಮಾನ ಸಾಧನೆಯ ಗೌರವ ಲಭಿಸಿತ್ತು. ಮೃತ ರತ್ನಾಕರ ರಾವ್ ಪತ್ನಿ ಜಯಂತಿ ರಾವ್. ಕೆ, ಮಕ್ಕಳಾದ ಪ್ರಾಧ್ಯಾಪಿಕೆ ಡಾ. ಸುಮಂಗಲ ರಾವ್, ಪತ್ರಕರ್ತ ರಜನ್ ಕುಮಾರ್, ನ್ಯಾಯವಾದಿ ಶಶಿರಾಜ್ ಕಾವೂರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನಗೆ ಸಂಬಳ ಕೊಡುವ ಒಡೆಯನಂತಿರ್ಲಿಲ್ಲ, ಗೆಳೆಯನ ರೀತಿ ಇದ್ರು: ಸೆಕ್ಯೂರಿಟಿ ಕಣ್ಣೀರು

    ನನಗೆ ಸಂಬಳ ಕೊಡುವ ಒಡೆಯನಂತಿರ್ಲಿಲ್ಲ, ಗೆಳೆಯನ ರೀತಿ ಇದ್ರು: ಸೆಕ್ಯೂರಿಟಿ ಕಣ್ಣೀರು

    ಬೆಂಗಳೂರು: ರವಿ ಬೆಳಗೆರೆಯವರು ನನಗೆ ಸಂಬಳ ಕೊಡುವ ಒಡೆಯನ ರೀತಿ ಇರಲಿಲ್ಲ. ಅವರು ನನ್ನನ್ನು ಗೆಳೆಯನಂತೆ ನೋಡಿಕೊಂಡರು ಎಂದು ಮನೆಯ ಸೆಕ್ಯೂರಿಟಿ ಕಣ್ಣೀರು ಹಾಕಿದ್ದಾರೆ.

    ‘ಅಕ್ಷರ ಮಾಂತ್ರಿಕ’ನ ನಿಧನ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರವಿ ಅವರು ನನ್ನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ನೋಡಿಕೊಳ್ತಾ ಇದ್ದರು. ಮನೆಯಲ್ಲಿ ಒಟ್ಟು ಮೂರು ನಾಯಿಗಳು ಇವೆ. ಇನ್ನು ಕಚೇರಿಯಲ್ಲಿ ಒಟ್ಟು 10 ನಾಯಿಗಳನ್ನು ಸಾಕಿಕೊಂಡಿದ್ದರು ಎಂದು ತಿಳಿಸಿದರು. ಇದೇ ವೇಳೆ ಸೆಕ್ಯೂರಿಟಿ ಪತ್ನಿ ಭಾವುಕರಾಗಿ, ಹಾರ್ಟ್ ಅಪರೇಷನ್, ಮಗಳ ಮದುವೆ ಹೀಗೆ ಎಲ್ಲದಕ್ಕೂ ಅವರು ಸಹಾಯ ಮಾಡಿದ್ದರು. ನಮ್ಮ ಪಾಲಿನ ದೇವರು ಅಂತ ಹೇಳಿ ಗಳಗಳನೇ ಅತ್ತುಬಿಟ್ಟರು. ಇದನ್ನೂ ಓದಿ: ಸಾವು ಬಂದು ಕರೆದಾಗ ಅತ್ಲಾಗೆ ನೋಡೋಣ ನಡಿ ಅಂತ ಹೊರಟುಬಿಟ್ಟಿದ್ದಾರೆನೋ: ಯೋಗರಾಜ್ ಭಟ್

    ರವಿ ಬೆಳಗೆಯವರು ಇಂದು ಬೆಳಗ್ಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ದಿಢೀರ್ ನಿಧನಕ್ಕೆ ಗಣ್ಯರು, ಅಭಿಮಾನಿಗಳು ಎಲ್ಲರೂ ಕಂಬನಿ ಮಿಡಿಯುತ್ತಿದ್ದಾರೆ. ಪತಿಯ ಶರೀರದ ಮುಂಭಾಗ ಎರಡನೆ ಪತ್ನಿ ಯಶೋಮತಿ ಕಣ್ಣೀರು ಹಾಕಿದ್ದಾರೆ. ಇತ್ತ ಅಪ್ಪನ ಪ್ರಾರ್ಥಿವ ಶರೀರದೆದುರು ಮಗಳು ಭಾವನಾ ಬೆಳಗೆರೆ ಕಣ್ಣೀರು ಹಾಕಿದ್ದಾರೆ. ಅಪ್ಪನ ಪ್ರಾರ್ಥೀವ ಶರೀರವನ್ನು ತಬ್ಬಿಕೊಂಡು ಅಪ್ಪಾ.. ಎಂದು ರೋಧಿಸಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮಿಸ್ ಮಾಡಿಕೊಳ್ತೇವೆ- ಅಕ್ಷರ ಮಾಂತ್ರಿಕ ನಿಧನಕ್ಕೆ ಸುದೀಪ್ ಸಂತಾಪ

    ಅಂತಿಯ ವಿದಾಯಯದ ಸಮಯಲ್ಲೂ ಬೆಳಗೆರೆಗೆ ಇಷ್ಟವಾಗಿದ್ದ ಹಿಂದಿ ಗಝಲ್ಸ್ ಅನ್ನು ಮನೆಯವರು ಹಾಕಿದ್ದಾರೆ. ಒಟ್ಟಿನಲ್ಲಿ ರವಿ ನಿಧನದ ಹಿನ್ನೆಲೆಯಲ್ಲಿ ಬೆಳಗೆರೆ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಮೃತದೇಹವನ್ನು ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಸಂಜೆ ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಅಮ್ಮ ಅಂತ ಕರೀತಿದ್ರಿ, ನಿಮ್ಮ ಹೆಸರು ಅಮರವಾಗಲಿ: ಲೀಲಾವತಿ ಕಣ್ಣೀರು

  • ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಇನ್ನಿಲ್ಲ – ಹೃದಯಾಘಾತದಿಂದ ಸಾವು

    ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಇನ್ನಿಲ್ಲ – ಹೃದಯಾಘಾತದಿಂದ ಸಾವು

    ಉಡುಪಿ: ಸುದ್ದಿವಾಹಿನಿಗಳ ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಘಾತದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

    ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ನಿವಾಸದಲ್ಲಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆ ಸೇರುವ ಮೊದಲೇ ಕೊನೆಯುಸಿರೆಳೆದಿದ್ದಾರೆ. ಎದೆ ನೋವು ಬಂದ ಕೂಡಲೇ ನಗರದ ಮಿಷನ್ ಕಂಪೌಂಡ್ ನಲ್ಲಿರುವ ಲೋಂಬಾರ್ಡ್ ಆಸ್ಪತ್ರೆಗೆ ಸ್ನೇಹಿತನ ಜೊತೆ ತೆರಳಿದ್ದರು.

    ವಿಪರೀತ ಎದೆನೋವು ಆದಾಗ ಕೂಡಲೇ ಆದರ್ಶ ಆಸ್ಪತ್ರೆಗೆ ಸ್ವತಃ ರವಿರಾಜ್ ಕರೆ ಮಾಡಿ ಬರುತ್ತಿರುವುದಾಗಿ ಹೇಳಿದ್ದಾರೆ. ಡಾ. ಚಂದ ಶೇಖರ್ ಅವರಿಗೆ ಕರೆ ಮಾಡಿದ ಕೂಡಲೇ ಕಾರಿನೊಳಗೆ ಕುಸಿದಿದ್ದಾರೆ. ಆಸ್ಪತ್ರೆ ಹೋಗುವ ಮೊದಲೇ ದಾರಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಉಡುಪಿಯಲ್ಲಿ ಈಟಿವಿ ವರದಿಗಾರನಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ರವಿರಾಜ್ ನಂತರ ಸುವರ್ಣ ವಾಹಿನಿಯಲ್ಲಿ ಬೆಂಗಳೂರು ರಾಜಕೀಯ ಬೆಳವಣಿಗೆಗಳ ಹಿರಿಯ ವರದಿಗಾರನಾಗಿ ಕೆಲಸ ಮಾಡಿದ್ದರು. ಅದಾದ ಬಳಿಕ ಉಡುಪಿಯ ಸ್ಥಳೀಯ ವಾಹಿನಿ ಪ್ರೈಮ್ ಟಿವಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

    ರವಿರಾಜ್ ಪತ್ನಿ, ಅವಳಿ- ಜವಳಿ ಪುತ್ರಿಯರನ್ನು ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನವರಾದ ರವಿರಾಜ್ ಅವರ ಅಂತ್ಯಕ್ರಿಯೆ ವಳಲಂಬೆಯಲ್ಲೇ ನಡೆಯಲಿದೆ.

  • ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಟೀಯೆಸ್ಸಾರ್ ಪ್ರಶಸ್ತಿ

    ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಟೀಯೆಸ್ಸಾರ್ ಪ್ರಶಸ್ತಿ

    ಮೈಸೂರು: ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿರುವವರಿಗೆ ನೀಡಲಾಗುವ ಪ್ರತಿಷ್ಠಿತ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಒಂದು ಕನ್ನಡ ಪತ್ರಿಕೆಯನ್ನು ಹುಟ್ಟು ಹಾಕಿ ಬೆಳೆಸಿದವರಿಗೆ ನೀಡಲಾಗುವ ವಿಶೇಷ ಗೌರವದ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

    2017ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯು ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆಯ ನಿವೃತ್ತ ಸಂಪಾದಕ ಧೃವರಾಜ್ ವೆಂಕಟರಾವ್ ಮುತಾಲಿಕ್ ದೇಸಾಯಿ ಲಭಿಸಿತ್ತು. 2018 ನೇ ಸಾಲಿನಲ್ಲಿ ಮೈಸೂರಿನ ಕನ್ನಡಿಗರ ಪ್ರಜಾ ನುಡಿ ಪತ್ರಿಕೆಯ ಸಂಪಾದಕ ಡಿ.ಮಹಾದೇವಪ್ಪ ಅವರಿಗೆ ಲಭಿಸಿತ್ತು.

     

    2017 ನೇ ಸಾಲಿನ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ತುಮಕೂರು ಪ್ರಾದೇಶಿಕ ಪತ್ರಿಕೆಯ ಸಂಪಾದಕ ಎಸ್.ನಾಗಣ್ಣ ಹಾಗೂ 2018 ನೇ ಸಾಲಿನ ಇದೇ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ ಯು.ಪಿ. ಶಿವಾನಂದ ಅವರು ಭಾಜನರಾಗಿದ್ದಾರೆ. ಜನವರಿ ಮೊದಲನೇ ವಾರದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

  • ಗೋವಾಗಿಂತ ದೊಡ್ಡದಾದ ಕೊಡಗಿನ ಬಗ್ಗೆ ಮಾತ್ನಾಡೋರು ಯಾರಿಲ್ಲ- ಪಾಟೀಲ ಪುಟ್ಟಪ್ಪ

    ಗೋವಾಗಿಂತ ದೊಡ್ಡದಾದ ಕೊಡಗಿನ ಬಗ್ಗೆ ಮಾತ್ನಾಡೋರು ಯಾರಿಲ್ಲ- ಪಾಟೀಲ ಪುಟ್ಟಪ್ಪ

    ಧಾರವಾಡ: ಕೊಡಗು ಅನಾಥ ಸ್ಥಿತಿ ಅನುಭವಿಸುತ್ತಿದೆ. ಕೊಡಗು ಗೋವಾಗಿಂತ ದೊಡ್ಡದು. ಆದರೆ ಅದರ ಪರ ಮಾತನಾಡುವವರು ಯಾರೂ ಇಲ್ಲ ಅಂತ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರಂತ ಏನಂದ್ರೆ ಲೋಕಸಭೆಯಲ್ಲಿ ಒಬ್ಬ ಮನುಷ್ಯ ಆರಿಸಿ ಬರುತ್ತಾನೆ. ಆದ್ರೆ ಅವನು ಕೊಡಗಿನವನಲ್ಲ. ಅವನು ಮೈಸೂರಿನವನು. ಅವನು ಸ್ಫರ್ಧೆ ಮಾಡಿ ಆರಿಸಿ ಬರುತ್ತಾನೆ. ಕೊಡಗಿನ ಪ್ರತಿನಿಧಿ ಅವನು ತಮ್ಮವನು ಅಂತ ಅವರು ತಿಳಿದುಕೊಳ್ಳಬೇಕು. ಆದ್ರೆ ಕೊಡಗಿನ ಪ್ರತಿನಿಧಿ ಯಾರೂ ಕೇಂದ್ರ ಸರ್ಕಾರದಲ್ಲಿಲ್ಲ. ಕೊಡಗು ಒಂದು ದೃಷ್ಟಿಯಿಂದ ಅನಾಥ ಸ್ಥಿತಿಯನ್ನು ಅನುಭವಿಸಬೇಕಾಗಿ ಬಂದಿದೆ. ಈಗ ಕೊಡಗನ್ನು ಮೈಸೂರಿನ ಒಬ್ಬ ಮನುಷ್ಯ ಕೇಂದ್ರ ಪಾರ್ಲಿಮೆಂಟಿನಲ್ಲಿ ಪ್ರತಿನಿಧಿಸುತ್ತಾ ಇದ್ದಾನೆ. ಅವನಿಗೂ ಕೊಡಗಿಗೂ ಏನೂ ಸಂಬಂಧ ಇಲ್ಲ. ಆದ್ರೆ ಅವನು ಕೊಡಗಿನ ಪ್ರತಿನಿಧಿ. ಸ್ವತಂತ್ರ ರಾಜ್ಯವಾಗಿದ್ದ ಕೊಡಗು ಇವತ್ತು ಅನಾಥ ಸ್ಥಿತಿಯಲ್ಲಿದೆ ಅಂತ ಅವರು ಹೇಳಿದ್ರು.

    ಗೋವಾ ಭಾರತ ಒಕ್ಕೂಟದಲ್ಲಿ ಒಂದು ರಾಜ್ಯವಾಗಿದೆ. ಆದ್ರೆ ಕೊಡಗು ಏನೂ ಲೆಕ್ಕಕ್ಕೇ ಇಲ್ಲ. ಕೊಡಗು ಗೋವೆಗಿಂತ ದೊಡ್ಡದಾಗಿತ್ತು. ಆದ್ರೆ ಇವತ್ತು ಅದರ ಪರವಾಗಿ ಮಾತನಾಡುವವರು ಯಾರು ಇಲ್ಲದಂತಾಗಿದೆ. ಅದರ ಪರವಾಗಿ ಧ್ವನಿಯೆತ್ತುವಂತಹ ಒಂದು ಸೌಹಾರ್ದ ಸಹಾಯವಾಗುತ್ತಿಲ್ಲ ಅಂದ್ರು.

    ಯಾರಿಂದಲೂ ಸೋಲಿಸಲು ಸಾಧ್ಯವಾಗದ ಕೊಡಗನ್ನು ಇಂದು ವರುಣ ಸೋಲಿಸಿದ್ದಾನೆ. ಇತ್ತೀಚೆಗೆ ಕೊಡಗಿನ ಬಗ್ಗೆ ಒಂದು ಕನಸು ಬಿತ್ತು. ಇಡೀ ದಿನ ಅದೇ ಕನಸು. ಅಲ್ಲಿ ಕೊಡಗಿನ ಶಾಲೆಗಳನ್ನು ನೋಡಬೇಕು ಅಂತ ಹೋದೆ. ಆದ್ರೆ ಅಲ್ಲಿ ಶಾಲೆಗಳು ಇದ್ದವು ಎಂಬುದಕ್ಕೆ ಕುರುಹು ಕೂಡ ಇರಲಿಲ್ಲ. ಇವತ್ತಿಗೂ ಕೂಡ ಅದೇ ಪರಿಸ್ಥಿತಿ ಇದೆ. ನನಗೆ ಈಗ ಅಪರಾಧಿ ಮನೋಭಾವ ಕಾಡುತ್ತಿದೆ. ಕೊಡಗನ್ನ ನೂತನ ರಾಜ್ಯದಲ್ಲಿ ಸೇರಿಸುವ ಪ್ರಯತ್ನ ಮಾಡಿದ್ದೆ. ಇವತ್ತು ನನಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ರಾಕ್ಷಸ ಮಳೆಗೆ ಕಾಫಿ, ಏಲಕ್ಕಿ, ಮೆಣಸು ಕೊಚ್ಚಿ ಹೋಗಿದೆ. ಸರ್ಕಾರ ಅವರನ್ನ ಉಳಿಸುವ ಕೆಲಸ ಮಾಡಬೇಕು. ಹಣ ಎತ್ತಿ ಜೆಬಿಗೆ ತುಂಬಿಕೊಳ್ಳೊ ಜನರು ಇದ್ದಾರೆ. ಅದರ ದುರುಪಯೋಗ ಆಗಬಾರದು ಅಂತ ಅವರು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv