Tag: ಹಿರಿಯ ನಟ ರಾಜೇಶ್

  • ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?

    ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?

    ಇಂದು ಅಗಲಿರುವ ಹಿರಿಯ ನಟ ರಾಜೇಶ್ ಅವರ ನಿಜವಾದ ಹೆಸರು ಮುನಿ ಚೌಡಪ್ಪ. ಅವರನ್ನು ವಿದ್ಯಾಸಾಗರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು. ಇವರ ನಟನೆಯ ಮೊದಲ ಸಿನಿಮಾದ ಟೈಟಲ್ ಕಾರ್ಡ್ ನಲ್ಲೂ ವಿದ್ಯಾಸಾಗರ್ ಎಂದೇ ಇದೆ. ಈ ಸಿನಿಮಾದ ನಂತರ ಅವರ ಹೆಸರು ರಾಜೇಶ್ ಅಂತಾಯಿತು. ಹೀಗೆ ಹೆಸರು ಬದಲಾಯಿಸಿದವರು ಕನ್ನಡದ ಖ್ಯಾತ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ. ಇದನ್ನೂ ಓದಿ : ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ


    ರಾಜೇಶ್ ಅವರು ಸಿನಿಮಾ ರಂಗಕ್ಕೆ ಬಂದಿದ್ದು ಆಕಸ್ಮಿಕ ಏನೂ ಅಲ್ಲ. ವಿದ್ಯಾಸಾಗರ್ ಹೆಸರಿನಲ್ಲಿ ಆಗಲೇ ಅವರು ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆದಿದ್ದರು. ಈ ಜನಪ್ರಿಯತೆಯೇ ಅವರನ್ನು ಸಿನಿಮಾ ರಂಗಕ್ಕೆ ಕರೆದು ತಂದಿತ್ತು. 1964ರಲ್ಲಿ ತೆರೆಕಂಡ ವೀರ ಸಂಕಲ್ಪ ಇವರ ಮೊದಲ ಸಿನಿಮಾ. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ


    ರಾಜೇಶ್ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಸಿನಿಮಾ ಸಿ.ವಿ.ಶಿವಶಂಕರ್ ನಿರ್ದೇಶಿಸಿದ ‘ನಮ್ಮ ಊರು’ ಚಿತ್ರ. ಈ ಚಿತ್ರದಿಂದ ಅವರ ವೃತ್ತಿ ಬದುಕಿಗೆ ಮತ್ತೊಂದು ತಿರುವು ಸಿಕ್ಕಿದೆ. ಅಲ್ಲಿಂದ ಅವರು ಈವರೆಗೂ ನಮ್ಮ ಊರು , ಗಂಗೆ ಗೌರಿ , ಸತೀ ಸುಕನ್ಯ , ಬೆಳುವಲದ ಮಡಿಲಲ್ಲಿ , ಕಪ್ಪು ಬಿಳುಪು , ಬೃಂದಾವನ , ಬೋರೆ ಗೌಡ ಬೆಂಗಳೂರಿಗೆ ಬಂದ , ಮರೆಯದ ದೀಪಾವಳ , ಪ್ರತಿಧ್ವನಿ , ಕಾವೇರಿ , ದೇವರ ಗುಡಿ , ಬದುಕು ಬಂಗಾರವಾಯ್ತು , ಸೊಸೆ ತಂದ ಸೌಭಾಗ್ಯ ಸೇರಿದಂತೆ 175ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ, ಪೋಷಕ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.

  • ಮೀಟೂ ಬಂದ್ಮೇಲೆ ನಿಮಗೆಲ್ಲಾ ರೆಕ್ಕೆ-ಪುಕ್ಕ ಬಂತ: ಗುಡುಗಿದ ಸರ್ಜಾ ಮಾವ

    ಮೀಟೂ ಬಂದ್ಮೇಲೆ ನಿಮಗೆಲ್ಲಾ ರೆಕ್ಕೆ-ಪುಕ್ಕ ಬಂತ: ಗುಡುಗಿದ ಸರ್ಜಾ ಮಾವ

    ಬೆಂಗಳೂರು: ಮೀಟೂ ಬಂದ ಮೇಲೆ ನಿಮಗೆಲ್ಲಾ ರೆಕ್ಕೆ ಪುಕ್ಕ ಬಂತಾ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ನಿಮ್ಮ ರೆಕ್ಕೆ ಪುಕ್ಕಾ ಎಂದು ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಗೃಹಿಣಿಯ ಮೇಲೆ ಸರ್ಜಾ ಅವರ ಮಾವ ಹಿರಿಯ ನಟ ರಾಜೇಶ್ ಅವರು ಕಿಡಿಕಾರಿದ್ದಾರೆ.

    ನಟಿ ಶೃತಿ ಹರಿಹರನ್ ಬೆನ್ನಲ್ಲೇ ಗೃಹಿಣಿಯೊಬ್ಬರು ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪವನ್ನು ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಸಿದ ಸರ್ಜಾ ಅವರ ಮಾವ ಹಿರಿಯ ನಟ ರಾಜೇಶ್ ಅವರು, 15 ವರ್ಷ ಈ ಘಟನೆ ನಡೆದಿದೆ. ಆಗ ಪೊಲೀಸರಿಗೆ, ಕಲಾವಿದರ ಸಂಘದವರಿಗೆ ಮತ್ತು ಚೇಂಬರಿಗೆ ದೂರು ಕೊಡಬಹುದಿತ್ತು. ಆಗ ಯಾಕೆ ದೂರು ಕೊಟ್ಟಿಲ್ಲ ಎಂದು ಪ್ರಶ್ನೆ ಕೇಳಿ ಗೃಹಿಣಿ ಮೇಲೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ರೂಂ ನಂಬರ್ ನೀಡಿ ರೂಂಗೆ ಬನ್ನಿ ಎಂದಿದ್ರು – ಅರ್ಜುನ್ ಸರ್ಜಾ ವಿರುದ್ಧ ಬೆಂಗ್ಳೂರು ಗೃಹಿಣಿ ಆರೋಪ

    ಶೂಟಿಂಗ್ ನಲ್ಲಿ ನಿರ್ದೇಶಕರು ಇರುತ್ತಾರೆ. ಅವರ ಬಳಿ ಹೋಗಿ ನನ್ನ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರ ಕೊಡಬೇಕು ಎಂದರು. ಆಗ ಗೃಹಿಣಿ ನನಗೆ ಧೈರ್ಯ ಇರಲಿಲ್ಲ ಎಂದು ಹೇಳಿದ್ದಾರೆ. ಈ ವೇಲೆ ರಾಜೇಶ್ ಅವರು ಧೈರ್ಯ ಇಲ್ಲ ಎಂದ ಮೇಲೆ ಚಿತ್ರರಂಗಕ್ಕೆ ಯಾಕೆ ಬಂದ್ರಿ, ಮನೆಯಲ್ಲಿ ಇರಬೇಕು. ಮೀಟೂ ಬಂದ ಮೇಲೆ ನಿಮಗೆಲ್ಲಾ ರೆಕ್ಕೆ ಪುಕ್ಕ ಬಂತಾ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ನಿಮ್ಮ ರೆಕ್ಕೆ ಪುಕ್ಕ. ಮೀಟೂ ಬಂದು ಅವಕಾಶ ಕಲ್ಪಿಸಿಕೊಟ್ಟಿದೆ. ಇದಕ್ಕೆ ಮುಂಚೆ ಎಲ್ಲಿ ಹೋಗಿತ್ತು ಎಂದು ಗೃಹಿಯ ವಿರುದ್ಧ ಗುಡುಗಿದ್ದಾರೆ.

    80 ವರ್ಷದಿಂದ ಇಲ್ಲದಿರುವ ಕಂಪ್ಲೇಂಟ್ ಈಗ ಯಾಕೆ ಬಂತು. ಸಿನಿಮಾ ರಂಗಕ್ಕೆ ಬಂದ ಮೇಲೆ ಅಡ್ಜೆಸ್ಟ್ ಮಾಡಿಕೊಂಡು ಹೋಗಬೇಕು. ಅದು ಬಿಟ್ಟು, ಅವರ ತಪ್ಪು ಹುಡುಕಿಕೊಂಡು ಹೋಗಿ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ,

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=LFKlX3O1iuM