Tag: ಹಿರಿಯ ನಟಿ

  • ಲೀಲಾವತಿ ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

    ಲೀಲಾವತಿ ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಸೋಂಕಿಗೆ ಬಲಿ

    ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಸೋಂಕಿಗೆ ಬಲಿ

    ಬೆಂಗಳೂರು: ಬಹುಭಾಷಾ ನಟಿ ಕವಿತಾ ಅವರ ಮಗ, ಪತಿ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

    ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟಿ ಕವಿತಾ ಅವರು ಕೈ ಹಿಡಿದ ಪತಿ ದಶರಥ ರಾಜ್ ಮತ್ತು ಹೆತ್ತ ಮಗ ಸಂಜಯ್ ರೂಪ್ ಅವರನ್ನು ಕಳೆದುಕೊಂಡ ನಟಿ ಕವಿತಾ ದುಃಖದ ಮಡುವಿನಲ್ಲಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನ ಎಂಬ ವೈರಸ್‍ಗೆ ಕೈ ಹೈಕಮಾಂಡ್ ವ್ಯಾಕ್ಸಿನ್ ನೀಡಬೇಕು: ಶ್ರೀರಾಮುಲು

    ಮಗ ಸಂಜಯ್ ರೂಪ್ ಎರಡು ವಾರಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೇ ಸಂದರ್ಭದಲ್ಲಿ ಕವಿತಾ ಪತಿಗೂ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪದಾಧಿಕಾರಿಗಳ ನೇಮಕಕ್ಕೆ ವೀಕ್ಷಕರ ನೇಮಕ: ಡಿ.ಕೆ. ಶಿವಕುಮಾರ್

    ಕವಿತಾ 11ನೇ ವಯಸ್ಸಿಗೆ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಅವರು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದರು. 1977ರಲ್ಲಿ ತೆರೆಗೆ ಬಂದ ಸಹೋದರರ ಸವಾಲು ಸಿನಿಮಾ ಮೂಲಕ ಕವಿತಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇದಾದ ನಂತರ ಖಿಲಾಡಿ ಕಿಟ್ಟು ಸೇರಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು. 2009ರಲ್ಲಿ ತೆರೆಕಂಡ ಉಲ್ಲಾಸ ಉತ್ಸಾಹ ಅವರ ಕನ್ನಡದ ಕೊನೆಯ ಚಿತ್ರ. ಸದ್ಯ, ಕವಿತಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

    ಕೊವಿಡ್‍ನಿಂದ ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಳಾಂ ಚಿತ್ರರಂಗದ ಸಾಕಷ್ಟು ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ಕೊರೊನಾದಿಂದ ಮೃತಪಟ್ಟಿದ್ದಾರೆ.

  • ಮೊದಲ ಕನ್ನಡ ವಾಕ್ಚಿತ್ರದಲ್ಲಿ ನಟಿಸಿದ್ದ ಎಸ್. ಕೆ. ಪದ್ಮಾದೇವಿ ಇನ್ನಿಲ್ಲ

    ಮೊದಲ ಕನ್ನಡ ವಾಕ್ಚಿತ್ರದಲ್ಲಿ ನಟಿಸಿದ್ದ ಎಸ್. ಕೆ. ಪದ್ಮಾದೇವಿ ಇನ್ನಿಲ್ಲ

    ಬೆಂಗಳೂರು: ಕನ್ನಡದಲ್ಲಿ ಸೆಟ್ಟೇರಿದ ಮೊದಲ ವಾಕ್ಚಿತ್ರ `ಭಕ್ತಧ್ರುವ’ (1934)ದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಹಿರಿಯ ನಟಿ ಎಸ್. ಕೆ. ಪದ್ಮಾದೇವಿ ವಿಧಿವಶರಾಗಿದ್ದಾರೆ.

    ಅವರಿಗೆ 95 ವರ್ಷ ವಯಸ್ಸಾಗಿತ್ತು. ಬೆಂಗಳೂರು ಹುಟ್ಟೂರು. ಬಳ್ಳಾರಿ ರಾಘವಾಚಾರ್ಯರ ಮೂಲಕ ರಂಗಭೂಮಿ ಪ್ರವೇಶಿಸಿದ್ದರು. ಹೆಚ್.ಎಲ್.ಎನ್.ಸಿಂಹ ಅವರ ನಾಟಕ ಕಂಪನಿಯಲ್ಲಿ ಅಭಿನಯಿಸುತ್ತಾ, ಸ್ವಂತ ನಾಟಕ ಸಂಸ್ಥೆಯನ್ನು ಕಟ್ಟಿದ್ದರು. `ಸಂಸಾರ ನೌಕ’ (1936) ಚಿತ್ರ ಪದ್ಮಾದೇವಿ ಅವರಿಗೆ ಹೆಸರು ತಂದು ಕೊಟ್ಟಿತ್ತು. ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಹಾಡಿದ್ದರು. ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದರು.

    `ವಸಂತಸೇನ’, `ಭಕ್ತ ಸುಧಾಮ’, `ಜಾತಕ ಫಲ’ ಚಿತ್ರಗಳಲ್ಲಿಯೂ ನಟಿಸಿದ್ದಾರೆ. `ಭಕ್ತಸುಧಾಮ’ದಲ್ಲಿ ಮಧುಗಿರಿ ಮೀನಾಕ್ಷಿ ಎಂದು ಹೆಸರು ಬದಲಾಯಿಸಿಕೊಂಡರು. ಎರಡು ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ರಂಗಭೂಮಿಯಲ್ಲೇ ತೊಡಗಿಕೊಂಡು ಬಹಳ ಕಾಲ ಚಲನಚಿತ್ರದ ಅಭಿನಯ ನಿಲ್ಲಿಸಿದರು. `ಮುಕ್ತಿ’, `ಅಮರ ಮಧುರ ಪ್ರೇಮ’, `ಸಂಕ್ರಾಂತಿ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ

    ಗಿರೀಶ್ ಕಾಸರವಳ್ಳಿ ನಿರ್ದೇಶನದ `ಕ್ರೌರ್ಯ’ ಚಿತ್ರದ ರೇಣುಕಮ್ಮ ಮುರಗೊಡು ಅವರ ಪಾತ್ರಕ್ಕೆ ಕಂಠದಾನ ಮಾಡಿದರು. ಮಗ ನಂದಕಿಶೋರ್ ನಿರ್ದೇಶಿಸಿದ `ಕಿರಣ’ ಟೆಲಿ ಫಿಲಂನಲ್ಲಿ ಅಜ್ಜಿ ಪಾತ್ರ ಮಾಡಿದರು. ಆಕಾಶವಾಣಿಯಲ್ಲಿ ಅನೇಕ ವರ್ಷಗಳು ಕೆಲಸ ಮಾಡಿದ ಪದ್ಮಾದೇವಿಯವರು ಮಾಧ್ಯಮದಲ್ಲಿಯೂ ಹೆಸರು ಮಾಡಿದ್ದರು.

  • ಕನ್ನಡದ ಕಲಾವಿದೆಗೆ ಯಾಕೆ ತೊಂದರೆ ನೀಡ್ತೀರಿ: ಲೀಲಾವತಿ ಪರ ಬರೆದಿದ್ದ ಕರುಣಾನಿಧಿ

    ಕನ್ನಡದ ಕಲಾವಿದೆಗೆ ಯಾಕೆ ತೊಂದರೆ ನೀಡ್ತೀರಿ: ಲೀಲಾವತಿ ಪರ ಬರೆದಿದ್ದ ಕರುಣಾನಿಧಿ

    ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಕರುಣಾನಿಧಿ ಅವರು ಒಳ್ಳೆಯ ಸಾಹಿತಿ. ಮಾತ್ರವಲ್ಲದೆ ಸಕಲಕಲಾವಲ್ಲಭರಾಗಿದ್ದರು. ಎಲ್ಲಾ ಕಲೆಯಲ್ಲಿಯೂ ಅವರಿದ್ದರು. ಸಾಧ್ಯವಾಗಲ್ಲ ಅನ್ನೋ ವಿಷಯಗಳೇ ಅವರಿಗೆ ಇರಲಿಲ್ಲ ಅಂತ ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 60 ವರ್ಷ ತಮಿಳುನಾಡಿನಲ್ಲಿ ತೋಟ ಮಾಡಿಕೊಂಡಿದ್ದೆ. ನಾನು ಮಾತ್ರವಲ್ಲ ಎನ್ ಟಿ ರಾಮ್ ರಾವ್, ಚಿರಂಜಿವಿ ಹೀಗೆ ಎಲ್ಲ ಶ್ರೇಷ್ಠ ನಟರು ಅಲ್ಲೇ ಇದ್ದು ಬಂದವರು. ಇಲ್ಲಿ ನಮ್ಮ ಮೇಲೆ ಶೂಟೌಟ್ ಆಗಿದ್ದಾಗ ಅಲ್ಲಿನ ಪೇಪರ್ ನಲ್ಲಿ ಹಾಕಿದ್ದರು. ಪಾಪ ಕನ್ನಡದ ಕಲಾವಿದೆ ಲೀಲಾವತಿಗೆ ಅವರಿಗೆ ಯಾಕೆ ಅಲ್ಲಿ ತೊಂದರೆ ಮಾಡುತ್ತಿದ್ದಾರೆ ಅಂತ ಬರೆದಿದ್ದರಂತೆ. ಈ ಬಗ್ಗೆ ನಾನು ನೋಡಿಲ್ಲ. ಕೆಲ ಜನರು ಬಂದು ನನಗೆ ಹೇಳಿದ್ದರು ಎಂದು ತಿಳಿಸಿದರು.

    ಜನರನ್ನು ಆಕರ್ಷಣೆ ಮಾಡುವ ಶಕ್ತಿ ಕರುಣಾನಿಧಿ ಅವರಲ್ಲಿತ್ತು. ಥಳ್ಳುವ ಗಾಡಿಯೊಂದಿಗೆ ಬಂದಾದ್ರೂ ಅವರು ಜನಗಳ ಜೊತೆಯೇ ಇರುತ್ತಿದ್ದರು. ಎಷ್ಟೋ ಜನರು ಸತ್ತಾಗ ಅವರ ಜೊತೆಗೆ ನಾನು ಸತ್ತು ಸತ್ತು ಹೋಗುತ್ತಿದ್ದೆ. ಆದ್ರೆ ಕರುಣಾನಿಧಿ ಅವರನ್ನು ನೋಡಿದಾಗ ನಾನು ಬದುಕಬೇಕು ಅನ್ನೋ ಆಸೆ ಹುಟ್ಟಿದೆ.

    ಎಷ್ಟೇ ಕಷ್ಟ ಆದ್ರೂ ಚಕ್ರದ ಗಾಡಿಯಲ್ಲಿ ಬಂದು ಜನರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು. ಕೈ ಎತ್ತಕ್ಕೆ ಆಗದಿದ್ದರೂ ಕಷ್ಟು ಪಟ್ಟಾದ್ರೂ ಕೈ ಎತ್ತಿ ಜನರಿಗೆ ಧನ್ಯವಾದ ತಿಳಿಸುತ್ತಿದ್ದರು ಅಂತ ಕಣ್ಣೀರು ಸುರಿಸಿದ್ರು.

    https://www.youtube.com/watch?v=XBSxkFb20h4

  • ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ

    ಬಾಲಿವುಡ್ ಹಿರಿಯ ನಟಿ ರೀಟಾ ಬಾದುರಿ ಇನ್ನಿಲ್ಲ

    ಮುಂಬೈ: ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಾಯಿಯ ಪಾತ್ರದಲ್ಲಿ ನಟಿಸಿದ ಹಿರಿಯ ನಟಿ ರೀಟಾ ಬಾದುರಿ ನಿಧನರಾಗಿದ್ದಾರೆ.

    ರೀಟಾ ಅವರ ನಿಧನವಾಗಿರುವ ವಿಷಯವನ್ನು ಹಿರಿಯ ನಟ ಶಿಶಿರ್ ಶರ್ಮಾ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. “ಬಹಳ ದುಃಖದಿಂದ ನಾನು ಈ ವಿಷಯವನ್ನು ಹೇಳುತ್ತಿದ್ದೇನೆ. ರೀಟಾ ಬಾದುರಿ ಅವರು ನಮ್ಮೊಂದಿಗೆ ಇಲ್ಲ. ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಅವರು ನಮಗೆಲ್ಲಾ ತಾಯಿಯಾಗಿದ್ದರು. ಅವರು ನಮಗೆ ತುಂಬಾ ನೆನಪಾಗುತ್ತಾರೆ” ಎಂದು ಟ್ವೀಟ್ ಮಾಡಿದ್ದಾರೆ.

    ಮೂಲಗಳ ಪ್ರಕಾರ ರೀಟಾ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರೀಟಾ ಎರಡು ದಿನಕ್ಕೆ ಒಂದು ಬಾರಿ ಆಸ್ಪತ್ರೆಗೆ ಹೋಗುತ್ತಿದ್ದರು ಎನ್ನಲಾಗಿದೆ. ರೀಟಾ ಈ ನಡುವೆ ‘ನಿಮಕಿ ಮುಖಿಯಾ’ದಲ್ಲಿ ಇಮರತಿ ದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದರು. ಸೆಟ್‍ನಲ್ಲಿ ಕೆಲಸವಿಲ್ಲದ ಸಮಯದಲ್ಲಿ ರೀಟಾ ವಿಶ್ರಾಂತಿ ಪಡೆಯುತ್ತಿದ್ದರು. ರೀಟಾ ಅವರಿಗೆ 62 ವರ್ಷಗಳಾಗಿದ್ದು, ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಶೂಟಿಂಗ್ ಶೆಡ್ಯೂಲ್ ನಿರ್ಧರಿಸಲಾಗುತ್ತಿತ್ತು ಎಂದು ವರದಿಯಾಗಿದೆ.

    ವಯಸ್ಸಾದ ಕಾಲದಲ್ಲಿ ಬರುವ ಕಾಯಿಲೆಗಳಿಂದ ಹೆದರಿ ಕೆಲಸ ಬಿಡಲು ಆಗುತ್ತಾ?. ನನಗೆ ಕೆಲಸ ಮಾಡಲು ಹಾಗೂ ನನ್ನನ್ನು ನಾನು ಬ್ಯುಸಿಯಾಗಿಡಲು ಇಷ್ಟಪಡುತ್ತೇನೆ. ನನಗೆ ಎಲ್ಲ ಸಮಯದಲ್ಲೂ ನನ್ನ ಕಾಯಿಲೆ ಬಗ್ಗೆ ಯೋಚಿಸುತ್ತಾ ಇರೋದಕ್ಕೆ ಇಷ್ಟವಿಲ್ಲ. ಹಾಗಾಗಿ ನಾನು ಯಾವಗಲೂ ಕೆಲಸದಲ್ಲಿ ತೊಡಗಿಕೊಂಡಿರುತ್ತೇನೆ. ನನ್ನನ್ನು ಅರ್ಥ ಮಾಡಿಕೊಳ್ಳುವ ಹಾಗೂ ಸಪೋರ್ಟ್ ಮಾಡುವ ಶೂಟಿಂಗ್ ತಂಡ ಸಿಕ್ಕಿದ್ದು ಅದೃಷ್ಟ ಎಂದು ರೀಟಾ ಈ ಹಿಂದೆ ಹೇಳಿದ್ದರು.

    ರೀಟಾ ‘ಸಾರಾ ಬಾಯಿ ವಸ್‍ರ್ಸ್ ಸಾರಾ ಬಾಯಿ’, ‘ಅಮಾನತ್’, ‘ಏಕ್ ನಯೀ ಪೆಹೆಚಾನ್’ ಹಾಗೂ ‘ಬೈಬಲ್ ಕೀ ಕಹಾನೀಯಾ’ ಎಂಬ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  • ಸಚಿವ ಜಯಚಂದ್ರರನ್ನು ದಿಢೀರ್ ಭೇಟಿ ಮಾಡಿದ ಹಿರಿಯ ನಟಿ ಲೀಲಾವತಿ

    ಸಚಿವ ಜಯಚಂದ್ರರನ್ನು ದಿಢೀರ್ ಭೇಟಿ ಮಾಡಿದ ಹಿರಿಯ ನಟಿ ಲೀಲಾವತಿ

    ಬೆಂಗಳೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಹಿರಿಯ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ಕುಮಾರ್ ಭೇಟಿ ಮಾಡಿದ್ದಾರೆ.

    ವಿಧಾನಸೌಧದ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿದ ತಾಯಿ-ಮಗ, ನೆಲಮಂಗಲ ತಾಲೂಕು ಸೋಲದೇವನಹಳ್ಳಿಯನ್ನು ಅರಣ್ಯ ಭೂಮಿ ಎಂದು ಪರಿಗಣಿಸಿ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ. ಅದು ಕಂದಾಯ ಭೂಮಿ ಎಂದು ಕಾನೂನು ತಿದ್ದುಪಡಿ ಮಾಡಬೇಕಾಗಿದೆ. ಜತೆಗೆ ಬ್ಯಾರೇಜ್ ನಿರ್ಮಾಣಕ್ಕೂ ಸಚಿವರಲ್ಲಿ ಮನವಿ ಸಲ್ಲಿಸಿದರು.

    ಇದಕ್ಕೆ ಜನವರಿ 27 ರಂದು ಸ್ಥಳ ಪರಿಶೀಲನೆ ಮಾಡಿ ವಿವಾದ ಬಗೆ ಹರಿಸುವುದಾಗಿ ಸಚಿವ ಜಯಚಂದ್ರ ಭರವಸೆ ನೀಡಿದ್ದಾರೆ ಅಂತ ಭೇಟಿ ಬಳಿಕ ಸುದ್ದಿಗಾರರಿಗೆ ನಟಿ ಲೀಲಾವತಿ ತಿಳಿಸಿದರು.