Tag: ಹಿರಿಯ ನಟ

  • ನನ್ನನ್ನು ಹಿರಿಯ ನಟ ಎಂದು ಕರೆಯಬೇಡಿ: ಸಹನಟರ ಕಾಲೆಳೆದ ಕಿಚ್ಚ

    ನನ್ನನ್ನು ಹಿರಿಯ ನಟ ಎಂದು ಕರೆಯಬೇಡಿ: ಸಹನಟರ ಕಾಲೆಳೆದ ಕಿಚ್ಚ

    ಶಾಂಕ್ ನಿರ್ದೇಶನದ ಸಿನಿಮಾದ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ (Sudeep) ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಕೆಲ ಕಲಾವಿದರು ಸುದೀಪ್ ಅವರನ್ನು ಹಿರಿಯನಟ ಎಂದು ಕರೆಯುತ್ತಿದ್ದರು. ಅದನ್ನು ಗಮನಿಸಿದ ಕಿಚ್ಚ, ಸಹನಟರಿಗೆ ತಮಾಷೆ ಎನ್ನುವಂತೆ ಕಾಲೆಳೆದಿದ್ದಾರೆ. ನಾನು ಹಿರಿಯ ನಟ ಅಲ್ಲ, ಹಾಗೆ ಕರೆಯಬೇಡಿ ಎಂದು ನಗ್ತಾನೆ ಮಾತನಾಡಿದ್ದಾರೆ.

    ಒಂದು ಕಡೆ ಸಿನಿಮಾ ಸಂಬಂಧಿ ನಾನಾ ಕಾರ್ಯಕ್ರಮಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದರೆ ಮತ್ತೊಂದು ಕಡೆ ಅವರದ್ದೇ ಹೊಸ ಸಿನಿಮಾದ ಕೆಲಸಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸುದೀಪ್ ನಟನೆಯ 46ನೇ ಸಿನಿಮಾಗೆ ತಮಿಳಿನ ಯುವ ನಿರ್ದೇಶಕ ವಿಜಯ್ ಕಾರ್ತಿಕೇಯ (Vijay Karthikeya) ಆ್ಯಕ್ಷನ್ ಕಟ್ ಹೇಳುತಿದ್ದು, ‘ವಿಕ್ರಾಂತ್ ರೋಣ’ ಸಿನಿಮಾದ ಸೂಪರ್ ಸಕ್ಸಸ್ ನಂತರ ಎಂದೂ ಕಾಣಿಸಿಕೊಂಡಿರದ ಹೊಸ ಅವತಾರದಲ್ಲಿ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಸದ್ಯ Kiccha 46 ಸಿನಿಮಾ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.

    ದೊಡ್ಡ ಕಥೆದು ಚಿಕ್ಕ ಸಂದರ್ಭ ಹೇಳೋದಾ ಎಂದು ಹೇಳುವ ಡೈಲಾಗ್ ಮೂಲಕ ಕಿಚ್ಚ ಸುದೀಪ್ ರಾ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಒಬ್ಬನನ್ನ ಮುಗಿಸೋಕೆ ಅಷ್ಟು ಜನ ಹೋಗಿದ್ದಾರಾ. ಇನ್ನೂ ಅವನನ್ನ ಸಾಯಿಸಿಲ್ವ ಅನ್ನೋ ಕೆಡಿ ಖಡಕ್ ಮಾತಿಗೆ ಗನ್ ಹಿಡಿದು ಸುದೀಪ್ ರಗಡ್ ಆಗಿ ಎಂಟ್ರಿ ನೀಡಿದ್ದಾರೆ. ಯುದ್ಧ ನಾ ಹುಟ್ಟು ಹಾಕೋರನ್ನ ಕಂಡರೆ ಆಗಲ್ಲ. ಯುದ್ಧಕ್ಕೆ ಹೆದರಿಕೊಂಡು ಓಡಿಹೋಗೋರನ್ನ ಕಂಡರೂ ನನಗೆ ಆಗಲ್ಲ. ಅಖಾಡಕ್ಕೆ ಇಳಿದು ಎದುರಾಳಿಗಳ ಎದೆ ಬಗೆದು ರಕ್ತ ಚೆಲ್ಲಾಡಿ, ಆ ರಕ್ತ ಸುರಿಸಿಕೊಂಡು ಓಡಿ ಹೋಗೋದನ್ನ ನೋಡೋನು ನಾನು. ಇಳಿದ ಮೇಲೆ ದಯೆ, ಕ್ಷಮೆ, ಸಂಧಾನ ಇದ್ಯಾವುದು ಇರೋದಿಲ್ಲ ಎಂದು ಎದುರಾಳಿಗಳಿಗೆ ಸುದೀಪ್ ಖಡಕ್ ಡೈಲಾಗ್‌ನಿಂದ ವಾರ್ನಿಂಗ್ ನೀಡಿದ್ದಾರೆ. ಚಿತ್ರದ ಮೊದಲ ಟೀಸರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾನು ಮನುಷ್ಯನಲ್ಲ, ರಾಕ್ಷಸ ಎಂದು ಹೇಳುವ ಕಿಚ್ಚನ ಖಡಕ್ ಮಾತು ಅಭಿಮಾನಿಗಳ ಗಮನ ಸೆಳೆದಿದೆ.

    ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಷನ್ಸ್’ ಜೊತೆ ಕಿಚ್ಚ ಸುದೀಪ್ ಕೈ ಜೋಡಿಸಿದ್ದಾರೆ. ಕಿಚ್ಚನ 46ನೇ ಚಿತ್ರಕ್ಕೆ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಕಬಾಲಿ, ತುಪಾಕಿ, ಅಸುರನ್, ಸಿನಿಮಾಗಳಂತಹ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಕಲೈಪುಲಿ ಎಸ್. ಧಾನು ಅವರು ಸುದೀಪ್ ಅವರ ಈ ಚಿತ್ರಕ್ಕೆ ಸಾಥ್ ನೀಡ್ತಿದ್ದಾರೆ.

     

    ಕಿಚ್ಚ ಸುದೀಪ್ ಸಿನಿಮಾಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಖುಷಿ ಪಡೋವಂತಹ ರಗಡ್ ಟೀಸರ್ ಸಿಕ್ಕಿದೆ. ಸುದೀಪ್ ರಣ ರಣ ರಕ್ತ ಸಿಕ್ತ ಅವತಾರ ನೋಡಿ ಕಿಚ್ಚ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಇಂದು ಬೆಳಗಿನ ಜಾವ ನಿಧನರಾದ ಹಿರಿಯ ನಟ ರಾಜೇಶ್ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡುವುದಾಗಿ ನಟ, ರಾಜೇಶ್ ಅವರ ಅಳಿಯ ಅರ್ಜುನ್ ಸರ್ಜಾ ತಿಳಿಸಿದ್ದಾರೆ. ಇದನ್ನೂ ಓದಿ : ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ


    ಕೋವಿಡ್ ಆತಂಕದ ನಡುವೆಯೂ ಸರಕಾರದ ನಿಯಮ ಪಾಲಿಸಿಕೊಂಡು ರಾಜೇಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕುರಿತು ಮಾತನಾಡಿರುವ ಅರ್ಜುನ್ ಸರ್ಜಾ, “ಕಳೆದ ಹತ್ತು ದಿನಗಳಿಂದ ಅವರ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಮೊದಲು ಕೋವಿಡ್ ನಂತರ ಸಿಕೆಡಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಗುರುವಾರವಷ್ಟೇ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ಮನೆಗೆ ಕರೆತಂದಿದ್ದೆವು. ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಅಂದುಕೊಂಡಿರಲಿಲ್ಲ’ ಎಂದರು.  ಇದನ್ನೂ ಓದಿ : ಕಲಾ ತಪಸ್ವಿ ರಾಜೇಶ್‌ ವಿಧಿವಶ


    ಸದ್ಯ ಪಾರ್ಥೀವ ಶರೀರ ರಾಜೇಶ್ ಅವರ ಸ್ವನಿವಾಸ ವಿದ್ಯಾರಣ್ಯಪುರದಲ್ಲಿದ್ದು ಕುಟುಂಬದ ಸದಸ್ಯರು ಪೂಜೆ ನಡೆಸಿದ ಬಳಿಕ 12 ಗಂಟೆಯ ಹೊತ್ತಿಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ.

  • ಹಿರಿಯ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ

    ಹಿರಿಯ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ

    ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹಿರಿನ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

    ಉಸಿರಾಟದ ತೊಂದರೆಯಿಂದ ಬಳಲ್ತಿದ್ದ ರಾಜೇಶ್ ಅವರ ಆರೋಗ್ಯ ಸ್ಥಿತಿ ಎರಡು ದಿನಗಳ ಹಿಂದೆ ಗಂಭೀರವಾಗಿತ್ತು. ಸದ್ಯ ವೈದ್ಯರು ಇಂದಿನ ಆರೊಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ರಾಜೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಹೆಣ್ಣುಮಕ್ಕಳ ಶಿಕ್ಷಣ, ರಕ್ಷಣೆ ಸರ್ಕಾರದ ಕರ್ತವ್ಯ: ಡಿಕೆ ಸುರೇಶ್

    82 ವರ್ಷ ವಯಸ್ಸಿನ ರಾಜೇಶ್, ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕಸ್ತೂರಿ ಬಾ ನಗರದ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತಿಚೆಗೆ ಪತ್ನಿಯನ್ನ ಕಳೆದುಕೊಂಡಿರುವ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.

  • ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ

    ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ

    ಬೆಂಗಳೂರು: ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 82 ವರ್ಷ ವಯಸ್ಸಿನ ರಾಜೇಶ್, ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕಸ್ತೂರಿ ಬಾ ನಗರದ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸದ್ಯ ವೆಂಟಿಲೇಟರ್ ನಲ್ಲಿ ಉಸಿರಾಡುತ್ತಿದ್ದಾರೆ. ಇತ್ತಿಚೆಗೆ ಪತ್ನಿಯನ್ನ ಕಳೆದುಕೊಂಡಿರುವ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.

    ರಾಜೇಶ್ ಆರೋಗ್ಯದ ಬಗ್ಗೆ ಆಸ್ಪತ್ರೆ ನಿರ್ದೇಶಕ ಡಾಕ್ಟರ್ ಗಂಗಾಧರ್ ಮಾತನಾಡಿ, ಫೆಬ್ರವರಿ 9 ಕ್ಕೆ ರಾಜೇಶ್ ಅವರು ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಅಂತ ಆಸ್ಪತ್ರೆಗೆ ಬಂದಿದ್ರು. ಚಿಕಿತ್ಸೆಗೆ ರಾಜೇಶ್ ಅವರು ಸ್ಪಂದಿಸ್ತಿದ್ದಾರೆ. ಸ್ವಲ್ಪ ಕಾಲಾವಕಾಶ ಬೇಕಾಗುತ್ತೆ. ಸಂಬಂಧಪಟ್ಟ ವೈದ್ಯರು ಕೂಡ ಬಂದು ಚಿಕಿತ್ಸೆ ಕೊಡ್ತಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಧರಿಸಿ ನರ್ಸಿಂಗ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು – ಬ್ರೀಮ್ಸ್ ಮೆಡಿಕಲ್ ಕಾಲೇಜು ಅನುಮತಿ

    ಅಡ್ಮಿಟ್ ಆಗಿ ನಾಲ್ಕೈದು ದಿನಗಳಾಗಿದೆ. ಇನ್ನೂ ಎರಡ್ಮೂರು ದಿನ ಚಿಕಿತ್ಸೆ ಕೊಡಬೇಕಾಗುತ್ತೆ. ಅವರ ಮಗಳು ಮತ್ತು ಮೊಮ್ಮಗ ರಾಜೇಶ್ ಅವರನ್ನ ನೋಡಿಕೊಳ್ತಿದ್ದಾರೆ. ಉಳಿದ ಕುಟುಂಬಸ್ಥರಿಗೆ ಫೋನ್ ಮೂಲಕ ಮಾಹಿತಿ ಕೊಡಲಾಗ್ತಿದೆ. ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣ್ತಿದೆ ಎಂದು ಭರತ್ ವಿವರಿಸಿದ್ದಾರೆ.

  • ಶಿವರಾಂ ಕೋಮಾದಲ್ಲಿದ್ದು ಮೆದುಳು, ಹೃದಯ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ: ವೈದ್ಯ ಭಾವುಕ

    ಶಿವರಾಂ ಕೋಮಾದಲ್ಲಿದ್ದು ಮೆದುಳು, ಹೃದಯ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ: ವೈದ್ಯ ಭಾವುಕ

    – ಕ್ಷಣದಿಂದ ಕ್ಷಣಕ್ಕೂ ಕ್ಷೀಣಿಸುತ್ತಿದೆ ಹಿರಿಯ ನಟನ ಆರೋಗ್ಯ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟ ಶಿವರಾಂ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿರುವ ಕುರಿತಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ವೈದ್ಯ ಡಾ. ಮೋಹನ್, ಅವರ ಆರೋಗ್ಯ ಚೇತರಿಕೆಗಾಗಿ ನಾವು ಕಾಯುತ್ತಿದ್ದೆವು. ಆ ಆದರೆ ಅವರ ಬ್ರೈನ್‍ಗೆ ಅತಿ ಹೆಚ್ಚಿನ ಹಾನಿಯಾಗಿದೆ. ನಾನು ಶಿವರಾಂ ಅವರ ಸಂಬಂಧಿ ಮತ್ತು ಡಾಕ್ಟರ್ ಆಗಿ ಇವತ್ತು ನಿಮ್ಮ ಮುಂದೆ ಬಂದು ನಿಲ್ಲಲು ನನಗೆ ತುಂಬಾ ಕಷ್ಟವಾಗುತ್ತಿದೆ. ಮಿರಾಕಲ್ ಆಗುತ್ತದೆ ಎನ್ನುವ ಭಾವನೆ ನಮಗೆ ಕಮ್ಮಿಯಾಗುತ್ತಿದೆ. ನಾವು ಏನೇ ಮಾಡಿದರೂ ಅವರಿಗೆ ಹಿಂಸೆ ಆಗುತ್ತದೆ. ಕಿಡ್ನಿ, ಲಿವರ್ ವರ್ಕ್ ಆಗುತ್ತಿದೆ. ಆದರೆ ಹೃದಯ ಸ್ಪಂದಿಸುತ್ತಿಲ್ಲ. ಅವರು ತುಂಬಾ ಸಮಯ ನಮ್ಮ ಜೊತೆಗೆ ಇರಲ್ಲ ಎಂದು ಹೇಳುತ್ತಾ ವೈದ್ಯರು ಭಾವುಕರಾಗಿದ್ದಾರೆ. ಇದನ್ನೂ ಓದಿ: ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

    ನಮಗೆ ಜೀವನಾಡಿಯಾಗಿದ್ದರು. ಒಬ್ಬ ರೋಗಿಗಿಂತ ನನಗೆ ಅಪ್ಪನ ಸ್ಥಾನದಲ್ಲಿ ಇದ್ದರು. ಅವರನ್ನು ನಾನು ಈ ಪರಿಸ್ಥಿತಿಯನ್ನು ನಾನು ಚಿಕಿತ್ಸೆ ಕೊಡಲು ತುಂಬಾ ಕಷ್ಟವಾಗುತ್ತಿದೆ. ಚಿಕಿತ್ಸೆ ನೀಡುತ್ತಿದ್ದೇವೆ, ಆದರೆ ಅವರು ಚಿಕಿತ್ಸೆಗೆ ಸ್ಪಂಧಿಸುತ್ತಾರೆ ಎನ್ನುವ ನಂಬಿಕೆ ಇಲ್ಲ. ಅವರು ರಿಕವರಿ ಆಗುವ ಚಾನ್ಸ್ ತುಂಬಾ ಕಡಿಮೆ ಇದೆ. ಎಷು ದಿನ, ಎಷ್ಟು ಗಂಟೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ: ವೈದ್ಯರು

    ಅವರ ಕುಟುಂಬದವರು ನಮ್ಮ ಜೊತೆಗೆ ಇದ್ದಾರೆ. ಅವರಿಗೆ ತುಂಬಾ ಹಿಂಸೆ ಮಾಡುವುದು ಬೇಡ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಪ್ರಯತ್ನವನ್ನು ಕೊನೆ ಗಳಿಗೆವರೆಗೂ ಮಾಡಿ ಎಂದು ಹೇಳುತ್ತಿದ್ದಾರೆ. ಎಂಐಆರ್ ಮಾಡಲು ಆಗುತ್ತಿಲ್ಲ ಅವರನ್ನು ಬೇರೆ ಬೆಡ್‍ಗೆ ಶಿಫ್ಟ್ ಮಾಡಿದರೆ ಅವರ ಬಿಪಿಗೆ ಕಷ್ಟವಾಗುತ್ತದೆ ಎನ್ನುವ ಭಯವಿದೆ, ಕಂಡಿಶನ್ ಕ್ರಿಟಿಕಲ್ ಇದೆ ಎಂದು ಹೇಳಿದ್ದಾರೆ.

  • ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

    ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

    ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ಶಿವರಾಮ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

    84 ವರ್ಷದ ಶಿವರಾಮ್ ಅವರ ತಲೆಗೆ ಗಂಭೀರ ಗಾಯವಾಗಿದ್ದು ಬ್ರೈನ್ ಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ ಶಿವರಾಮ್ ಅವರನ್ನು ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಿಂದ ಶಿವರಾಮ್ ಅವರ ಅರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ನಟ ಶ್ರೀನಿವಾಸ್ ಮೂರ್ತಿ ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ತಂದೆಯ ಆರೋಗ್ಯದ ಬಗ್ಗೆ ಹಿರಿಯ ಪುತ್ರ ರವಿಶಂಕರ್ ಮಾಹಿತಿ ನೀಡಿ, ಮೂರು ದಿನಗಳ ಹಿಂದೆ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಕಾರ್ ಆಕ್ಸಿಡೆಂಟ್ ಆಗಿತ್ತು. ಮೂರು ದಿನಗಳಿಂದ ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಮೊನ್ನೆ ರಾತ್ರಿ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದರು. ಆ ವೇಳೆ ರೂಂನಲ್ಲಿ ಬಿದ್ದ ಹಿನ್ನೆಲೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಂದು ರಾತ್ರಿಯೇ ಅಸ್ಪತ್ರೆಗೆ ಕರೆದುಕೊಂಡು ಬಂದು ಸ್ಕ್ಯಾನಿಂಗ್ ಮಾಡಿಸಿದ್ದೀವಿ. ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಯಿತು. ವೈದ್ಯರು ಸರ್ಜರಿ ಮಾಡಬೇಕು ಎಂದು ಹೇಳಿದ್ರು. ಆದರೆ ನಮ್ಮ ತಂದೆಗೆ ವಯಸ್ಸಾದ ಹಿನ್ನೆಲೆ ಸರ್ಜರಿ ಮಾಡಲು ಆಗಿಲ್ಲ. ಸದ್ಯ ಐಸಿಯುನಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದರು. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ – ತಲಾ 25 ಲಕ್ಷ ದೇಣಿಗೆ ನೀಡಿದ ಚಿರಂಜೀವಿ, ರಾಮ್‍ಚರಣ್

  • ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್‍ವುಡ್ ಏಕೆ ಟಾರ್ಗೆಟ್ ಮಾಡಲಾಗ್ತಿದೆ?: ಜೈ ಜಗದೀಶ್

    ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್‍ವುಡ್ ಏಕೆ ಟಾರ್ಗೆಟ್ ಮಾಡಲಾಗ್ತಿದೆ?: ಜೈ ಜಗದೀಶ್

    ಮಡಿಕೇರಿ: ಬೆಂಗಳೂರಿನ ಬಹುತೇಕ ಕಾಲೇಜುಗಳು, ಗೂಡಂಗಡಿ ಸೇರಿದಂತೆ ಎಲ್ಲೆಡೆ ಡ್ರಗ್ಸ್ ದಂಧೆ ನಡೆಯುತ್ತಿದೆ. ಇದನ್ನು ಪೊಲೀಸರು ಏಕೆ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹಿರಿಯ ಚಿತ್ರನಟ ಜೈ ಜಗದೀಶ್ ಪ್ರಶ್ನಿಸಿದ್ದಾರೆ.

    ಸ್ಯಾಂಡಲ್‍ವುಡ್‍ಗೆ ಡ್ರಗ್ ನಂಟಿನ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಡ್ರಗ್ಸ್ ಎನ್ನುವುದು ಎಲ್ಲೆಡೆ ಇದ್ದರೂ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಮಾತ್ರ ದೊಡ್ಡ ಸುದ್ದಿಯಾಗಿದೆ. ಮಾಧ್ಯಮಗಳು ಕೊರೊನಾ ಹಾಗೂ ಡ್ರಗ್ಸ್ ವಿಚಾರಗಳಿಗಷ್ಟೇ ಏಕೆ ಪ್ರಾಮುಖ್ಯತೆ ನೀಡುತ್ತಿವೆ ತಿಳಿಯುತ್ತಿಲ್ಲ. ಇದುವರೆಗೆ ಕನ್ನಡ ಚಿತ್ರರಂಗದಲ್ಲೇ ಇಂತಹ ಸಂಗತಿಗಳು ಪ್ರಸ್ತುತದಲ್ಲಿ ಮುನ್ನಲೆಗೆ ಬರುತ್ತಿವೆ. ಉದಯೋನ್ಮುಖ ನಟಿಯಯರಾದ ಸಂಜನಾ ಹಾಗೂ ರಾಗಿಣಿ ಇಬ್ಬರೂ ಇದರಲ್ಲಿ ಸಿಲುಕಿಕೊಂಡು ಜಾಮೀನಿಗಾಗಿ ಒದ್ದಾಡುತ್ತಿದ್ದಾರೆ ಎಂದರು.

    ಉತ್ತರ ಭಾರತದಿಂದ ಬಂದಂತಹ ಇಬ್ಬರನ್ನೂ ಟಾರ್ಗೆಟ್ ಮಾಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳು ಆದಷ್ಟು ಕಾನೂನು ರೀತಿಯಲ್ಲಿ ಶೀಘ್ರವಾಗಿ ತನಿಖೆ ನಡೆಸಬೇಕು. ಬಂಧಿತರಿಗೆ ಜಾಮೀನು ಸಿಗಬೇಕು. ದೋಷದಿಂದ ಮುಕ್ತರಾಗಬೇಕು ಎಂದು ಇದೇ ವೇಳೆ ಹಿರಿಯ ನಟ ಒತ್ತಾಯಿಸಿದರು. ಇದನ್ನೂ ಓದಿ: ರಾಗಿಣಿ, ಸಂಜನಾ ಜಾಮೀನು ಅರ್ಜಿ ವಜಾ- ಮತ್ತೆ ಜೈಲುವಾಸ

    ಡ್ರಗ್ಸ್ ದೇಶದಾದ್ಯಂತ ವ್ಯಾಪಿಸಿದೆ. ರಾಜ ಮಹಾರಾಜರ ಕಾಲದಿಂದಲೂ ಡ್ರಗ್ಸ್ ಬಳಸುತ್ತಿದ್ದರು. ಇಂದು ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಏಕೆ ಮೌನವಹಿಸಿದೆ. ದೇಶಕ್ಕೆ ಡ್ರಗ್ ಹೇಗೆ ಬಂತು?. ಪೆಡ್ಲರ್‍ಗಳು ಹೇಗೆ ಹುಟ್ಟಿಕೊಂಡರು ಎಂದು ಅವರು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.

    https://www.youtube.com/watch?v=yncED482G14&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF

  • ನಿನ್ನೆ ಹುಟ್ಟುಹಬ್ಬ ಆಚರಣೆ – ಇಂದು ಹೃದಯಾಘಾತದಿಂದ ಹಿರಿಯ ನಟ ಸಿದ್ಧರಾಜ್ ನಿಧನ

    ನಿನ್ನೆ ಹುಟ್ಟುಹಬ್ಬ ಆಚರಣೆ – ಇಂದು ಹೃದಯಾಘಾತದಿಂದ ಹಿರಿಯ ನಟ ಸಿದ್ಧರಾಜ್ ನಿಧನ

    ಬೆಂಗಳೂರು: ಕನ್ನಡ ಹಿರಿಯ ಕಲಾವಿದ ಮತ್ತು ಪೋಷಕ ನಟ ಸಿದ್ಧರಾಜ್ ಕಲ್ಯಾಣಕರ್ ಅವರು ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಕನ್ನಡದಲ್ಲಿ ಸುಮಾರು 70ಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿರುವ ಸಿದ್ಧರಾಜ್ ಅವರು, ಮೂಲತಃ ಹುಬ್ಬಳ್ಳಿಯವರಾಗಿದ್ದಾರೆ. ಸೋಮವಾರ ತಾನೇ ಧಾರಾವಾಹಿ ಸೆಟ್‍ವೊಂದರಲ್ಲಿ ತಮ್ಮ 60 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ ತಡರಾತ್ರಿ ಆಸ್ಪತ್ರೆಯಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಸಿದ್ಧರಾಜ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಗಿಣಿರಾಮ ಮತ್ತು ಪ್ರೇಮಲೋಕ ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದರು. 60 ವರ್ಷದ ಸಿದ್ದರಾಜ್ ತಮ್ಮ ಪತ್ನಿ ಮತ್ತು ಮಗನನ್ನು ಆಗಲಿದ್ದಾರೆ. ಹಿರಿಯ ನಟನ ಸಾವಿಗೆ ನಿರ್ದೇಶಕ ಬಿ ಸುರೇಶ್ ಮತ್ತು ಸೃಜನ್ ಲೋಕೇಶ್ ಅವರು ಸೇರಿದಂತೆ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಸಿದ್ಧರಾಜ್ ಅವರು, ಶ್ರೀಮಂಜುನಾಥ, ಸೂಪರ್, ಬುದ್ಧಿವಂತ ಸೇರಿದಂತೆ ಹಲವಾರು ಜನಪ್ರಿಯ ಸಿನಿಮಾದಲ್ಲಿ ನಟಿಸಿದ್ದರು.

    ಸಿದ್ಧರಾಜ್ ಅವರ ಸಾವಿನ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿರುವ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು, ಇದು ಅತ್ಯಂತ ದುರಿತ ಕಾಲ. ಮುಕ್ತದಲ್ಲಿ ತಾತನ ಪಾತ್ರ ಮಾಡಿದ್ದರು. ಭಾರ್ಗವಿ ನಾರಾಯಣ್ ಅಜ್ಜಿ, ಇವರು ತಾತ. ಈ ಧಾರಾವಾಹಿಯಲ್ಲಿ ಈ ಜೋಡಿಯ ದೃಶ್ಯಗಳನ್ನು ವೀಕ್ಷಕರು ತುಂಬಾ ಇಷ್ಟ ಪಡುತ್ತಿದ್ದರು. ಅನನ್ಯ ರೀತಿಯ ಕಲಾವಿದ. ತುಂಬಾ ಸಜ್ಜನ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದವರಲ್ಲ, ಕೋಪ ಮಾಡಿಕೊಂಡವರಲ್ಲ. ಮುಖದ ಮೇಲೆ ಸದಾ ಮುಗುಳುನಗೆ. ಅಪರೂಪದ ಮನುಷ್ಯರಲ್ಲಿ ಒಬ್ಬ ಎಂದಿದ್ದಾರೆ.

    https://www.facebook.com/talagavar.seetaram/posts/10223678134520836

    ಜೊತೆಗೆ ನಿನ್ನೆಯ ದಿನವೇ ಅವರ ಹುಟ್ಟುಹಬ್ಬ. ನಮ್ಮ ಸಂಸ್ಥೆಯಲ್ಲಿ ಶುರುವಾಗಲಿರುವ ಹೊಸ ಧಾರಾವಾಹಿಯಲ್ಲೂ ಇವರಿಗೆ ಒಂದು ಮುಖ್ಯ ಪಾತ್ರ ಕೊಡಬೇಕೆಂದು ತೀರ್ಮಾನ ವಾಗಿತ್ತು. ಅಷ್ಟರಲ್ಲಿ ಈ ಹೃದಯಾಘಾತ ಬಹಳ ಕೆಟ್ಟ ಕಾಲ. ತೀರಾ ಬೇಸರ ನೋವು ಆಗುತ್ತಿದೆ. ಹೋಗಿ ಬನ್ನಿ ಸಿದ್ಧರಾಜ್ ಕಲ್ಯಾಣಕರ್ ಎಂದು ಬರೆದುಕೊಂಡಿದ್ದಾರೆ.

  • ಹಿರಿಯ ನಟರೊಬ್ಬರ ಜೀವ ಕಾಪಾಡಿದ ಪ್ರಕಾಶ್ ರಾಜ್

    ಹಿರಿಯ ನಟರೊಬ್ಬರ ಜೀವ ಕಾಪಾಡಿದ ಪ್ರಕಾಶ್ ರಾಜ್

    ಹೈದರಾಬಾದ್: ಪಂಚ ಭಾಷಾ ನಟ ಪ್ರಕಾಶ್ ರಾಜ್ ತಮ್ಮ ಅದ್ಭುತವಾದ ಅಭಿನಯ ಮಾತ್ರವಲ್ಲ ಸಾಮಾಜಿಕ ಕಳಕಳಿ, ಬರವಣಿಗೆ, ಮಾತುಗಾರಿಕೆಯಿಂದಲೂ ಖ್ಯಾತಿ ಗಳಿಸಿದವರು. ಆದರೆ ಇತ್ತೀಚೆಗೆ ಅವರು ಮಾಡಿದ ಸಹಾಯದಿಂದ ಒಬ್ಬರು ಹಿರಿಯ ನಟರ ಜೀವ ಉಳಿದಿದೆ.

    ಕೇವಲ ಚಿತ್ರರಂಗ ಮಾತ್ರವಲ್ಲದೇ ರಾಜಕೀಯದಲ್ಲೂ ಆಸಕ್ತಿಯುಳ್ಳ ಪ್ರಕಾಶ್ ರಾಜ್ ಚುನಾವಣೆಗೂ ಸ್ಪರ್ಧಿಸಿದ್ದರು. ಅಷ್ಟೇ ಅಲ್ಲದೆ ಕಲಾವಿದರ ಅಭಿವೃದ್ಧಿ, ಭದ್ರತೆ ಕುರಿತು ಕೂಡ ಪ್ರಕಾಶ್ ರಾಜ್ ಅವರಿಗೆ ಕಾಳಜಿ ಹೆಚ್ಚಾಗಿದ್ದು, ಇದೇ ಕಾಳಜಿಯಿಂದ ಇಂದು ಹಿರಿಯ ನಟರೊಬ್ಬರ ಜೀವ ಉಳಿದಿದೆ. ಈ ಬಗ್ಗೆ ತೆಲುಗು ನಟ ರಾಜ ರವೀಂದ್ರ ಅವರು ಪ್ರಕಾಶ್ ರಾಜ್ ಅವರ ಒಳ್ಳೆತನದ ಬಗ್ಗೆ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ.

    ಆತ್ಮಹತ್ಯೆ ನಿರ್ಣಯ ಮಾಡಿದ್ದ ತೆಲುಗು ಚಿತ್ರರಂಗದ ಹಿರಿಯ ನಟರೊಬ್ಬರ ಜೀವವನ್ನ ಪ್ರಕಾಶ್ ರಾಜ್ ಹೇಗೆ ಉಳಿಸಿದರು ಅನ್ನೋದನ್ನ ರಾಜ ರವೀಂದ್ರ ವಿವರಿಸಿದ್ದಾರೆ. ಹಿರಿಯ ನಟ ಸುಮಾರು 50 ಲಕ್ಷ ಸಾಲ ಮಾಡಿಕೊಡ್ಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡಿದ್ದರು. ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಆದರೆ ಈ ವಿಷಯ ತಿಳಿದ ಪ್ರಕಾಶ್ ರಾಜ್ ಅವರು ಅವರಿಗೆ ಹಣ ಸಹಾಯ ಮಾಡಿ ನೆರವಾಗಿದ್ದಾರೆ. ಒಂದು ಜೀವ ಉಳಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಹಿರಿಯ ನಟನ ಕಷ್ಟದ ಬಗ್ಗೆ ತಿಳಿದ ತಕ್ಷಣ ಪ್ರಕಾಶ್ ಅವರು ನನಗೆ ಕರೆ ಮಾಡಿ, ಆ ಹಿರಿಯ ನಟರನ್ನು ಕರೆತರುವಂತೆ ಹೇಳಿದರು. ಪ್ರಕಾಶ್ ಅವರ ಬಳಿ ಹಿರಿಯ ನಟರನ್ನು ಕರೆದುಕೊಂಡು ಹೋದಾಗ ಕಷ್ಟವನ್ನೆಲ್ಲಾ ಕೇಳಿ ಅವರಿಗೆ 50 ಲಕ್ಷ ರೂ. ಹಣ ಸಹಾಯ ಮಾಡಿದರು. ಜೊತೆಗೆ ಅವರಿಗೆ ಧೈರ್ಯ ತುಂಬಿ ನಿಮ್ಮ ಕಷ್ಟಕ್ಕೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿ ಕಳುಹಿಸಿದರು ಎಂದು ರಾಜ ರವೀಂದ್ರ ಅವರು ಹೇಳಿದ್ದಾರೆ.

    ಪ್ರಕಾಶ್ ರಾಜ್ ಅವರು ನೀಡಿದ ಹಣದಿಂದ ತಮ್ಮ ಸಾಲವನ್ನು ತೀರಿಸಿಕೊಂಡ ಹಿರಿಯ ನಟ ಈಗ ಆರಾಮಾಗಿದ್ದಾರೆ. ಆದರೆ ಇಷ್ಟು ದಿನವಾದರೂ ಕೊಟ್ಟ ಹಣವನ್ನು ಮಾತ್ರ ಪ್ರಕಾಶ್ ಅವರು ಹಿಂಪಡೆದಿಲ್ಲ ಎಂದು ರಾಜ ರವೀಂದ್ರ ಅವರು ಹೇಳಿದರು. ಪ್ರಕಾಶ್ ರಾಜ್ ತಮ್ಮ ಸಿಟ್ಟಿನ ವರ್ತನೆಯಿಂದ ಕೆಲ ಬಾರಿ ತೆಲುಗು ಸಿನಿರಂಗದಿಂದ ಬಹಿಷ್ಕಾರ ಅನುಭವಿಸಿದ್ದಾರೆ. ಆದರೆ ಆ ಸಿಟ್ಟಿನ ಸ್ವಭಾವದ ಮನಸ್ಸಿನಲ್ಲೂ ಪ್ರೀತಿ, ಇತರರಿಗೆ ಸಹಾಯ ಮಾಡುವ ಗುಣ ಇರೋದು ನಿಜಕ್ಕೂ ಮೆಚ್ಚಬೇಕಾದ ಸಂಗತಿ.