Tag: ಹಿರಿಯೂರು

  • ವಾಣಿವಿಲಾಸ ಸಾಗರ ಜಲಾಶಯದ ನೀರಿನಲ್ಲಿ ಕೊಚ್ಚಿಹೋದ ಯುವಕ – ಅದೃಷ್ಟವಶಾತ್ ಪಾರು

    ವಾಣಿವಿಲಾಸ ಸಾಗರ ಜಲಾಶಯದ ನೀರಿನಲ್ಲಿ ಕೊಚ್ಚಿಹೋದ ಯುವಕ – ಅದೃಷ್ಟವಶಾತ್ ಪಾರು

    ಚಿತ್ರದುರ್ಗ: ಜಲಾಶಯದ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನೋರ್ವ ಅದೃಷ್ಟವಶಾತ್ ಪಾರಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರಿನ (Hiriyur) ವಾಣಿವಿಲಾಸ ಜಲಾಶಯದ (Vani Vilas Dam) ಬಳಿ ನಡೆದಿದೆ.

    ಒಂದೇ ವರ್ಷದಲ್ಲಿ ಸತತ ಎರಡನೇ ಬಾರಿಗೆ ಕೋಡಿ ಬಿದ್ದಿರುವ ಬರದನಾಡಿನ ಜೀವನಾಡಿ ವಿವಿಸಾಗರ ಜಲಾಶಯದ ಕೋಡಿನೀರು ವೀಕ್ಷಿಸಲು ನಿತ್ಯ ಸಾವಿರಾರು ಜನ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ಈ ವೇಳೆ ಯುವಕನೋರ್ವ ಹುಚ್ಚು ಸಾಹಸಕ್ಕೆ ಮುಂದಾಗಿದ್ದು, ಆಯತಪ್ಪಿ ಹರಿಯುವ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದ. ಆದರೆ ಅಲ್ಲಿನ ಸಾರ್ವಜನಿಕರು ಹಾಗು ಪೊಲೀಸರ ಸಮಯಪ್ರಜ್ಞೆಯಿಂದ ಹಗ್ಗದ ಸಹಾಯದೊಂದಿಗೆ ಪ್ರಾಣಾಪಾಯದಿಂದ ಯುವಕ ಸೇಫಾಗಿ ದಡ ಸೇರಿದ್ದಾನೆ. ಇದನ್ನೂ ಓದಿ: ಶಿವಮೊಗ್ಗ | ಕಾರ್ಮಿಕ ಇಲಾಖೆಯ ಕಟ್ಟಡ ಕುಸಿದು ಓರ್ವ ಸಾವು – ಮತ್ತೋರ್ವನಿಗೆ ಗಂಭೀರ ಗಾಯ

    ಅಲ್ಲದೇ ವಿವಿಸಾಗರದ ಹಿನ್ನೀರಿನಲ್ಲಿ ಈಜಾಡದಂತೆ ಹಾಗೂ ನೀರಿಗೆ ಇಳಿಯದಂತೆ ಪೊಲೀಸರು ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಸಹ ಯುವಕರು ಈ ರೀತಿ ಹುಚ್ಚು ಸಾಹಸಕ್ಕೆ ಕೈ ಹಾಕಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಲು ಮುಂದಾಗಿರೋದು ಮಾತ್ರ ವಿಪರ್ಯಾಸ. ಇದನ್ನೂ ಓದಿ: Cyclone Montha| ಎರಡು ದಿನ ಬೆಂಗಳೂರು ಸೇರಿದಂತೆ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

  • ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ

    ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ

    ಚಿತ್ರದುರ್ಗ: ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ (Police Constable) ಲಾರಿ (Lorry) ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyur) ತಾಲೂಕಿನ ಐಮಂಗಲ ಗ್ರಾಮದ ಬಳಿ ನಡೆದಿದೆ.

    ತರಬೇತಿಗಾಗಿ ಐಮಂಗಲ ಪೊಲೀಸ್ ತರಬೇತಿ ಶಾಲೆಗೆ ಆಗಮಿಸಿದ್ದ ಬೆಳಗಾವಿಯ ಪೊಲೀಸ್ ಕಾನ್ಸ್ಟೇಬಲ್‌ ಸಂಗಮೇಶ್ ನಾಯಕ್ (29) ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ- ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ

    ಲಾರಿ ಡಿಕ್ಕಿಯ ರಭಸಕ್ಕೆ ಸಂಗಮೇಶ್ ಕಾಲು, ತಲೆ ಮತ್ತು ಮುಖಕ್ಕೆ ತೀವ್ರ ಪೆಟ್ಟುಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವೈಭವದಿಂದ ನೆರವೇರಿದ ಅಮ್ಮನವರ ರಥೋತ್ಸವ

  • ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಕಾರು – ಯುವಕ ಸಜೀವ ದಹನ

    ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಕಾರು – ಯುವಕ ಸಜೀವ ದಹನ

    ಚಿತ್ರದುರ್ಗ: ಕಾರಿನಲ್ಲಿ (Car) ಆಕಸ್ಮಿಕವಾಗಿ ಬೆಂಕಿ (Fire) ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಕಾರಿನಲ್ಲಿದ್ದ ಯುವಕನೋರ್ವ ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲೂಕಿನ ಅರಳೀಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಅರಳೀಕಟ್ಟೆ ಗ್ರಾಮದ ಸಿದ್ದೇಶ್ವರ್ (35) ಮೃತ ದುರ್ದೈವಿ. ಸಿದ್ದೇಶ್ವರ್ ಟಾಟಾ ನೆಕ್ಸಾನ್ ಕಾರಿನಲ್ಲಿ ಹಿರಿಯೂರಿನಿಂದ ಅರಳೀಕಟ್ಟೆಗೆ ಮರಳುತ್ತಿದ್ದರು. ಈ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಇದನ್ನೂ ಓದಿ: ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಬೆಂಕಿಯ ಕೆನ್ನಾಲಿಗೆ ಸಿಲುಕಿ ಕಾರಿನಲ್ಲಿದ್ದ ಸಿದ್ದೇಶ್ವರ್ ಸಂಪೂರ್ಣ ಸುಟ್ಟು ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • Chitradurga | ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು

    Chitradurga | ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು

    – ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದ ಸಚಿವ ಡಿ.ಸುಧಾಕರ್

    ಚಿತ್ರದುರ್ಗ: ಬೇಸಿಗೆ (Summer) ವೇಳೆ ಒಂದೊತ್ತಿನ ಊಟವಿಲ್ಲವಾದರೂ ಪರವಾಗಿಲ್ಲ, ಕುಡಿಯುವ ನೀರಿದ್ದರೆ (Drinking Water) ಸಾಕೆಂದು ಜನ ಭಾವಿಸುತ್ತಾರೆ. ಆದರೆ ಕಳೆದ ಮೂರು ತಿಂಗಳಿಂದ ನೀರಿಗಾಗಿ ಗ್ರಾಮಸ್ಥರು ಪರದಾಡುತ್ತಿರುವ ಪರಿಸ್ಥಿತಿ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲೂಕಿನ ಗಂಜಲಗುಂಟೆ (Ganjalagunte) ಗ್ರಾಮದಲ್ಲಿ ನಿರ್ಮಾಣವಾಗಿದೆ.

    ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ. ಸುಮಾರು 3-4 ಕಿಲೋಮೀಟರ್ ದೂರದ ತೋಟದಿಂದ ನೀರು ತರುವ ಪರಿಸ್ಥಿತಿ ಎದುರಾಗಿದೆ. ಈ ಗ್ರಾಮದ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ನೀರಿಗಾಗಿ ಪರದಾಡಿ ಹೈರಾಣಾಗಿದ್ದಾರೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸ್ವಕ್ಷೇತ್ರದಲ್ಲಿಯೇ ಈ ಸಮಸ್ಯೆ ತಲೆದೂರಿದ್ದು, ಚುನಾವಣೆಗೆ ಬರುವ ರಾಜಕಾರಣಿಗಳು ಮತ್ತೆ ಈ ಗ್ರಾಮಕ್ಕೆ ಬರಲ್ಲವೆಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗಲಭೆಕೋರರಿಗೆ ದಂಡವೇ ಒಳ್ಳೆ ಚಿಕಿತ್ಸೆ: ಬಂಗಾಳ ಹಿಂಸಾಚಾರಕ್ಕೆ ಯೋಗಿ ಆದಿತ್ಯನಾಥ್‌ ಕಿಡಿ

    ನೀರಿನ ಸಂಕಷ್ಟ ಆಲಿಸದ ಜಿಲ್ಲಾಡಳಿತ ವಿರುದ್ಧವೂ ಗುಡುಗಿರುವ ಗ್ರಾಮಸ್ಥರು, ಪ್ರತಿವರ್ಷ ಬೇಸಿಗೆ ವೇಳೆ ನಾವು ನೀರಿನ ಸಮಸ್ಯೆ ಎದುರಿಸುತ್ತೇವೆ. ಕಳೆದ ಚುನಾವಣೆ ವೇಳೆ ಸಚಿವ ಸುಧಾಕರ್ ಅವರು ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಮತ್ತೆ ನಮ್ಮ ಗ್ರಾಮದತ್ತ ಸಚಿವರು ಸುಳಿದಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ. ಸಚಿವರ ವಿರುದ್ಧ ಖಾಲಿ ಕೊಡ ಪ್ರದರ್ಶಿಸಿ, ಮುಂದಿನ ಚುನಾವಣೆ ವೇಳೆ ಸಚಿವರಿಗೆ ತಕ್ಕಪಾಠ ಕಲಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬಂದು ಜಡ್ಜ್ ಮನೆಯಲ್ಲಿ ಕಳ್ಳತನ – 8 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಗಳು ಅರೆಸ್ಟ್

  • ವಾಣಿ ವಿಲಾಸ ಸಾಗರ ಜಲಾಶಯ ಭರ್ತಿ – ಯದುವೀರ್ ಒಡೆಯರ್ ಬಾಗಿನ ಅರ್ಪಣೆ

    ವಾಣಿ ವಿಲಾಸ ಸಾಗರ ಜಲಾಶಯ ಭರ್ತಿ – ಯದುವೀರ್ ಒಡೆಯರ್ ಬಾಗಿನ ಅರ್ಪಣೆ

    ಚಿತ್ರದುರ್ಗ: ವಾಣಿ ವಿಲಾಸ ಸಾಗರ (Vani Vilas Sagar) ಜಲಾಶಯ ಭರ್ತಿ ಹಿನ್ನೆಲೆ ವಿವಿ ಸಾಗರ ಜಲಾಶಯಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ (Yaduveer Wadiyar) ಬಾಗಿನ ಅರ್ಪಿಸಿದ್ದಾರೆ.

    ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿ ಸಾಗರ ಜಲಾಶಯ ಸತತ ನೂರು ವರ್ಷಗಳಲ್ಲಿ ಮೂರನೇ ಬಾರಿಗೆ ಕೋಡಿಬಿದ್ದಿದೆ. ಮೈಸೂರು ಒಡೆಯರಾದ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪನಂಜಮ್ಮಣ್ಣಿ ನೆನಪಿಗಾಗಿ ವಿವಿ ಸಾಗರ ಜಲಾಶಯ ಕಟ್ಟಲಾಗಿದೆ. ಇದನ್ನೂ ಓದಿ: ಹಾವೇರಿ| ಟ್ರ‍್ಯಾಕ್ಟರ್‌ಗೆ ಲಾರಿ ಡಿಕ್ಕಿ – ರಸ್ತೆಗೆ ಬಿದ್ದ ಕ್ರೂಡ್ ಆಯಿಲ್ ತುಂಬಿಕೊಳ್ಳಲು ಮುಗಿಬಿದ್ದ ಜನ

    ವಿವಿಪುರದಲ್ಲಿ ಸ್ಥಳೀಯರು ಸಂಸದ ಯದುವೀರ್ ಒಡೆಯರ್‌ಗೆ ಅದ್ಧೂರಿ ಸ್ವಾಗತಕೋರಿ ಜೆಸಿಬಿಯಲ್ಲಿ ಹೂವಿನ ಮಾಲಾರ್ಪಣೆ ಮಾಡಿದರು. ಬಳಿಕ ಯದುವೀರ್ ವಿವಿಸಾಗರ ಜಲಾಶಯಕ್ಕೆ ವಿಶೇಷ ಪೂಜಾ ಕೈಂಕಾರ್ಯ ನೆರವೇರಿಸಿ ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಯದುವೀರ್ ಒಡೆಯರ್‌ಗೆ ಬಿಜೆಪಿ ಮುಖಂಡರಾದ ಲಕ್ಷ್ಮಿಕಾಂತ್, ರಾಜಣ್ಣ, ಜೆಡಿಎಸ್ ಮುಖಂಡರಾದ ಯಶೋಧರ್, ಜಯಣ್ಣ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಭೂ ಕಬಳಿಸುತ್ತಾ ಬರುತ್ತಿದೆ ಸಮುದ್ರ; ಕಡಲಿನ ಮುಂದೆ ತಾಪಃಹಾರ ಮಂತ್ರ ಪಠಣಕ್ಕೆ ವೇದಿಕೆ ಸಜ್ಜು

  • ಚಿತ್ರದುರ್ಗ| ಕಿಡ್ನ್ಯಾಪ್ ಕೇಸ್‌ಗೆ ಟ್ವಿಸ್ಟ್ – ಹೋಂವರ್ಕ್, ಟ್ಯೂಷನ್‌ನಿಂದ ತಪ್ಪಿಸಿಕೊಳ್ಳಲು ಕಥೆ ಕಟ್ಟಿದ ಬಾಲಕರು

    ಚಿತ್ರದುರ್ಗ| ಕಿಡ್ನ್ಯಾಪ್ ಕೇಸ್‌ಗೆ ಟ್ವಿಸ್ಟ್ – ಹೋಂವರ್ಕ್, ಟ್ಯೂಷನ್‌ನಿಂದ ತಪ್ಪಿಸಿಕೊಳ್ಳಲು ಕಥೆ ಕಟ್ಟಿದ ಬಾಲಕರು

    ಚಿತ್ರದುರ್ಗ: ಟ್ಯೂಷನ್‌ಗೆ (Tuition) ಹೋಗುವುದರಿಂದ ತಪ್ಪಿಸಿಕೊಳ್ಳಲು 11 ವರ್ಷದ ಬಾಲಕರು ಸಿನಿಮಾ ಶೈಲಿಯಲ್ಲಿ ಕಿಡ್ನ್ಯಾಪ್ (Kidnap) ಕಥೆ ಕಟ್ಟಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ನಡೆದಿದೆ.

    ನಿತ್ಯ ಟ್ಯೂಷನ್‌ಗೆ ಹೋಗಿಬರುತ್ತಿದ್ದ ಇಬ್ಬರು ಮಕ್ಕಳು ಟ್ಯೂಷನ್‌ನಲ್ಲಿ ಕೊಟ್ಟಿದ್ದ ಹೋಂವರ್ಕ್ (Homework) ಮಾಡಲಾಗದೇ, ಹೊಸ ಕಥೆಯೊಂದನ್ನು ಹೆಣೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಟ್ಯೂಷನ್‌ಗೆ ತೆರಳಿದ್ದ ಇಬ್ಬರು ಬಾಲಕರು, ನಮ್ಮ ಅಪಹರಣಕ್ಕೆ ಕಳ್ಳರು ಯತ್ನಿಸಿದ್ರು. ಕಳೆದ 15 ದಿನಗಳಿಂದ ಈ ಮಕ್ಕಳ ಅಪಹರಣಕ್ಕೆ ನಾಲ್ವರ ತಂಡ ಸ್ಕೆಚ್ ಹಾಕಿದ್ದು, ಬಹಿರ್ದೆಸೆಗೆ ತೆರಳಿದ್ದವರನ್ನು ರಾಸಾಯನಿಕ ಸ್ಪ್ರೇ ಸಿಂಪಡಿಸಿ ಓಮ್ನಿ ಕಾರಲ್ಲಿ ಕಿಡ್ನಾಪ್ ಮಾಡಿದ್ದು, 10 ಕಿಲೋಮೀಟರ್ ದೂರದಲ್ಲಿ ಬಿಟ್ಟು ಎಸ್ಕೇಪ್ ಆದರು ಎಂದು ಎಲ್ಲರನ್ನು ನಂಬಿಸಿದ್ದರು. ಈ ಪ್ರಕರಣದಿಂದ ಆತಂಕಗೊಂಡ ಮಕ್ಕಳ ಪೋಷಕರು ಅಬ್ಬಿನಹೊಳೆ ಠಾಣೆಗೆ ದೂರು ನೀಡಿ, ಕೂಡಲೇ ಈ ಪ್ರಕರಣ ಭೇದಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಅಪಹರಣಕಾರರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಇದನ್ನೂ ಓದಿ: ಬಾಣಂತಿಯರ ಸಾವು ಪ್ರಕರಣ – ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಪತ್ರ ಬರೆದ ಸಂಸದ ಸುಧಾಕರ್‌

    ಇನ್ನು ಈ ವಿಚಾರ ಕೇಳಿ ಬೆಚ್ಚಿಬಿದ್ದ ಹಿರಿಯೂರು ಡಿವೈಎಸ್ಪಿ ಶಿವಕುಮಾರ್ ಮತ್ತು ತಂಡ ಪ್ರಕರಣದ ಬೆನ್ನತ್ತಿದೆ. ಬಾಲಕರು ಓದುತಿದ್ದ ಶಾಲೆ ಹಾಗೂ ಟ್ಯೂಷನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಧರ್ಮಪುರದಲ್ಲಿನ ಸಿಸಿಟಿವಿಗಳಲ್ಲಿ ತಲಾಶ್ ನಡೆಸಿದ್ದಾರೆ. ಆದರೆ ಬಾಲಕರು ಹೇಳಿದಂತೆ ಓಮ್ನಿ ಓಡಾಡಿರುವ ಕುರುಹು ಎಲ್ಲೂ ಪತ್ತೆಯಾಗಲಿಲ್ಲ. ಆಗ ಅಲರ್ಟ್ ಆದ ಪೊಲೀಸರು, ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಿ, ಬುದ್ದಿವಂತಿಕೆಯಿಂದ ಮಕ್ಕಳ ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಕಹಾನಿಯ ಅಸಲಿ ಸತ್ಯವನ್ನು ಬಾಲಕರು ಬಾಯಿ ಬಿಟ್ಟಿದ್ದಾರೆ ಎಂದು ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ ಬಜೆಟ್; ಆರ್ಥಿಕ ಸುಧಾರಣೆಗೆ ಐದು ವಲಯಗಳಲ್ಲಿ ಬದಲಾವಣೆ ನಿರೀಕ್ಷೆ

  • ಚಿತ್ರದುರ್ಗ| ಅಡಿಕೆ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ದುರ್ಮರಣ

    ಚಿತ್ರದುರ್ಗ| ಅಡಿಕೆ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ದುರ್ಮರಣ

    ಚಿತ್ರದುರ್ಗ: ವಿದ್ಯುತ್ ತಂತಿ (Electric Wire) ಸ್ಪರ್ಶಿಸಿ ಇಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyur) ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಮಧ್ಯಪ್ರದೇಶ ಮೂಲದ ಮೋಹಿತ್(24), ಕತರ್ವ (38) ಎಂದು ಗುರುತಿಸಲಾಗಿದೆ. ಕೃಷ್ಣಾಪುರ ಗ್ರಾಮದ ಜಯರಾಂ ಎಂಬವರ ಅಡಿಕೆ ತೋಟದಲ್ಲಿ ಘಟನೆ ನಡೆದಿದ್ದು, ಕಳೆದ ರಾತ್ರಿ ಶ್ರೀಗಂಧ ಕಳ್ಳತನಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಅಮ್ಮನಿಲ್ಲದ ಜೀವನ ಎಷ್ಟು ಕಷ್ಟ ಅಂತ ಗೊತ್ತಿದೆ: ಸುದೀಪ್ ತಾಯಿ ಅಂತಿಮ ದರ್ಶನ ಪಡೆದ ರಾಘಣ್ಣ

    ಜಯರಾಂ ಅಡಿಕೆ ತೋಟದಲ್ಲಿ ಕೆಲ ಶ್ರೀಗಂಧದ ಮರಗಳಿದ್ದು, ಕಳ್ಳತನಕ್ಕೆ ಆಗಮಿಸಿ ಈ ರೀತಿ ಸಾವಿಗೀಡಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಬ್ಬಿನಹೊಳೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ರಾಜಸ್ತಾನ| ಬಸ್-ರಿಕ್ಷಾ ನಡುವೆ ಭೀಕರ ಅಪಘಾತ; 8 ಮಕ್ಕಳು ಸೇರಿ 12 ಮಂದಿ ಸಾವು

  • ಚಿತ್ರದುರ್ಗದಲ್ಲಿ ಲಾರಿಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ – ಇಬ್ಬರು ದುರ್ಮರಣ

    ಚಿತ್ರದುರ್ಗದಲ್ಲಿ ಲಾರಿಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ – ಇಬ್ಬರು ದುರ್ಮರಣ

    ಚಿತ್ರದುರ್ಗ: ಲಾರಿಗೆ (Lorry) ಮಿನಿ ಗೂಡ್ಸ್ ವಾಹನ (Goods Vehicle) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿ ನಡೆದಿದೆ.

    ಅಪಘಾತದ ಪರಿಣಾಮ ಮಿನಿಗೂಡ್ಸ್ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರಮೇಶ್ (55), ಬೆಳಗೆರೆ ಗ್ರಾಮದ ಶಿವಲಿಂಗಪ್ಪ (65) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಚಳ್ಳಕೆರೆಯಿಂದ ಹಿರಿಯೂರು ಕುರಿ ಮಾರುಕಟ್ಟೆಗೆ ತೆರಳುತ್ತಿದ್ದ ಸಂದರ್ಭ ರಾಷ್ಟ್ರೀಯ ಹೆದ್ದಾರಿ 150ಎರಲ್ಲಿ ಲಾರಿಗೆ ಹಿಂಬದಿಯಿಂದ ಗೂಡ್ಸ್ ವಾಹನ ಡಿಕ್ಕಿಯಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಹೋಗಿದ್ದು ಎಲ್ಲಿಗೆ? – ಬೆಂಗಳೂರು ಕಂಪನಿಗಳೇ ಅಧಿಕ

    ಘಟನಾ ಸ್ಥಳಕ್ಕೆ ಹಿರಿಯೂರು ಠಾಣೆ ಸಿಪಿಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಕೇಸ್ – ಆರೋಪಿ ಅಪ್ರಾಪ್ತನ ತಾಯಿ ಬಂಧನ

  • ಧಗಧಗನೆ ಹೊತ್ತಿ ಉರಿದ ಕಾರು – ಅದೃಷ್ಟವಶಾತ್ ಚಾಲಕ ಪಾರು

    ಧಗಧಗನೆ ಹೊತ್ತಿ ಉರಿದ ಕಾರು – ಅದೃಷ್ಟವಶಾತ್ ಚಾಲಕ ಪಾರು

    ಚಿತ್ರದುರ್ಗ: ಚಲಿಸುತ್ತಿದ್ದ ಕಾರಿನಲ್ಲಿ (Car) ಏಕಾಏಕಿ ಬೆಂಕಿ (Fire Accident) ಕಾಣಿಸಿಕೊಂಡ ಪರಿಣಾಮ ಕಾರು ಸುಟ್ಟು ಭಸ್ಮವಾದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು (Hiriyuru) ನಗರದ ಹೊರವಲಯದಲ್ಲಿ ನಡೆದಿದೆ.

    ಹಿರಿಯೂರು ನಗರದ ವಿವಿ ಸಾಗರ ರಸ್ತೆ ಬಳಿಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಸುಟ್ಟುಹೋದ ಕಾರು ಹೊನ್ನಾಳ್ಳಿ ಮೂಲದ ರಮೇಶ್ ಆಚಾರಿ ಎನ್ನುವವರಿಗೆ ಸೇರಿದ್ದು ಎನ್ನಲಾಗಿದೆ. ಕಾರು ಚಲಿಸುತ್ತಿದ್ದ ವೇಳೆ ದಿಢೀರ್ ಕಾಣಿಸಿಕೊಂಡ ಬೆಂಕಿಯಿಂದಾಗಿ ಎಚ್ಚೆತ್ತ ಕಾರಿನ ಚಾಲಕ ರಸ್ತೆಬದಿಗೆ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ. ಇದನ್ನೂ ಓದಿ: ದೇವರ ಪ್ರಸಾದ ತಿಂದು ನೂರಾರು ಜನ ಅಸ್ವಸ್ಥ – ಓರ್ವ ಮಹಿಳೆ ಸಾವು

    ಇನ್ನು ಬೆಂಕಿ ಕಾಣಿಸಿಕೊಳ್ಳುವ ಮುನ್ನ ಹೊಗೆಯಿಂದಾಗಿ ಎಚ್ಚೆತ್ತ ಚಾಲಕ ಕಾರಿನಿಂದ ಇಳಿದ ಪರಿಣಾಮ, ಪ್ರಾಣಪಾಯದಿಂದ ಪಾರಾಗಿದ್ದಾರೆ. ದಾವಣಗೆರೆಯಿಂದ (Davangere) ಬೆಂಗಳೂರು (Bengaluru) ಕಡೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕದಳಕ್ಕೆ ವಿಷಯ ತಿಳಿಸಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಗೆಳತಿ ಮೇಲೆ ಪ್ರೀತಿ; ಲಿಂಗ ಬದಲಿಸಿಕೊಂಡ್ರೂ ಮದುವೆಗೆ ಒಪ್ಪದ ಮಹಿಳಾ ಟೆಕ್ಕಿಯನ್ನ ಜೀವಂತ ಸುಟ್ಟು ಹತ್ಯೆ

  • ಹಿರಿಯೂರಿನಲ್ಲೊಂದು ವಿಶಿಷ್ಟ ಆಚರಣೆ- ಏನಿದು ಅತ್ತಿಗೆ, ನಾದಿನಿ ಡಿಚ್ಚಿ ಕಾಳಗ?

    ಹಿರಿಯೂರಿನಲ್ಲೊಂದು ವಿಶಿಷ್ಟ ಆಚರಣೆ- ಏನಿದು ಅತ್ತಿಗೆ, ನಾದಿನಿ ಡಿಚ್ಚಿ ಕಾಳಗ?

    ಚಿತ್ರದುರ್ಗ: ಅದು ಟಗರು ಕಾಳಗವಲ್ಲ, ಮನೆಮನ ಬೆಸೆಯುವ ಕಾಳಗವಾಗಿದೆ. ಇಂಥದ್ದೊಂದು ವಿಶಿಷ್ಟ ಆಚರಣೆ ನಡೆದಿರುವುದು ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ. ಈ ವಿಭಿನ್ನ ಆಚರಣೆಗೆ ಡಿಚ್ಚಿ ಕಾಳಗ ಎಂದು ಕರೆಯುತ್ತಾರೆ.

    ಹೌದು. ಜಿಲ್ಲೆಯ ಹಿರಿಯೂರು (Hiriyur) ತಾಲೂಕಿನ ಸಿಎನ್ ಮಾಳಿಗೆ ಗ್ರಾಮದಲ್ಲಿ ಪೂರ್ವಜರ ಕಾಲದಿಂದ ಬಂದತಹ ಸಂಪ್ರದಾಯ ಇಂದು ಕೂಡ ಜೀವಂತವಾಗಿ ಉಳಿದಿದೆ. ಅಹೋಬಲನರಸಿಂಹಸ್ವಾಮಿ ಕಾರ್ತಿಕ ಉತ್ಸವದಲ್ಲಿ ಈ ವಿಭಿನ್ನ ಆಚರಣೆ ನಡೆಯುತ್ತದೆ. ಈ ಕಾಳಗ ನೋಡೋಕೆ ಸಾವಿರಾರು ಜನ ಭಕ್ತರ ದಂಡೇ ಹರಿದುಬರುತ್ತದೆ. ಇದನ್ನೂ ಓದಿ: ಸಾಲಮನ್ನಾ ಆಸೆಗಾಗಿ ರೈತರು ಬರಗಾಲಕ್ಕೆ ಕಾಯುತ್ತಾರೆ- ಶಿವಾನಂದ್ ಪಾಟೀಲ್ ವಿವಾದಾತ್ಮಕ ಹೇಳಿಕೆ

    ಏನಿದು ಆಚರಣೆ..?: ಮನಸ್ತಾಪದಿಂದ ತವರಿಗೆ ಬಾರದ ನಾದಿನಿ, ಮುನಿದ ಅತ್ತಿಗೆ ಮಧ್ಯೆ ಡಿಚ್ಚಿ ಸಂಭ್ರಮದ ಆಚರಣೆ ಇದಾಗಿದೆ. ಇಬ್ಬರ ನಡುವೆ ರಾಜಿ ಸಂಧಾನ ಮಾಡುವ ಸಂಪ್ರದಾಯ ಇದಾಗಿದೆ. ಒಂದು ಬದಿಯಲ್ಲಿ ಅತ್ತಿಗೆಯರು, ಮತ್ತೊಂದು ಬದಿಯಿಂದ ನಾದಿನಿಯರು ಓಡೋಡಿ ಬಂದು ಎದುರು- ಬದುರು ನಿಂತು ಡಿಚ್ಚಿ ಹೊಡೆದುಕೊಳ್ಳುವುದಾಗಿದೆ. ಯಾವುದೇ ಮನಸ್ತಾಪವಿದ್ದರೂ ಈ ಆಚರಣೆ ವೇಳೆ ಅತ್ತಿಗೆ, ನಾದಿನಿ ರಾಜಿ ಫಿಕ್ಸ್ ಆಗಿರುತ್ತದೆ. ಈ ಆಚರಣೆಯಿಂದ ಮನೆ, ಗ್ರಾಮದಲ್ಲಿ ಶಾಂತಿ ನೆಲೆಸುವ ನಂಬಿಕೆ ಇಲ್ಲಿನ ಜನರಲ್ಲಿದೆ.

    ಒಟ್ಟಿನಲ್ಲಿ ಕುಟುಂಬದಲ್ಲಿ ಬಾಂಧವ್ಯದ ಬೆಸುಗೆ ಬೆಸೆಯುವ ಡಿಚ್ಚಿ ಹಬ್ಬ ಭಾನುವಾರ ನಡೆದಿದ್ದು, ಇದೀಗ ಇದರ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.