Tag: ಹಿಮೇಶ್ ರೇಶ್ಮಿಯಾ

  • ರಾನು ಮೊಂಡಲ್ ಹಾಡು ಕೇಳಿ ಬಿಕ್ಕಿಬಿಕ್ಕಿ ಅತ್ತ ಹಿಮೇಶ್: ವಿಡಿಯೋ

    ರಾನು ಮೊಂಡಲ್ ಹಾಡು ಕೇಳಿ ಬಿಕ್ಕಿಬಿಕ್ಕಿ ಅತ್ತ ಹಿಮೇಶ್: ವಿಡಿಯೋ

    ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ಅವರ ಹಾಡು ಕೇಳಿ ಗಾಯಕ ಹಿಮೇಶ್ ರೇಶ್ಮಿಯಾ ಬಿಕ್ಕಿಬಿಕ್ಕಿ ಅತ್ತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಹಿಂದಿಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂಡಿಯನ್ ಐಡಲ್ ಸೀಸನ್-11’ ಗ್ರ್ಯಾಂಡ್ ಫಿನಾಲೆ ಇಂದು ಪ್ರಸಾರವಾಗಲಿದೆ. ಈ ಫಿನಾಲೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಗಾಯಕ ಹಿಮೇಶ್, ಸ್ಪರ್ಧಿಗಳು ಹಾಡಿದ ರಾನು ಅವರ ಹಾಡು ಕೇಳಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ರಾನು: ವಿಡಿಯೋ

    ಕಾರ್ಯಕ್ರಮದ ಐವರು ಫಿನಾಲೆ ಸ್ಪರ್ಧಿಗಳು ಹಿಮೇಶ್ ಅವರು ಕಂಪೋಸ್ ಮಾಡಿರುವ ‘ತೇರಿ ಮೇರಿ ಕಹಾನಿ’ ಹಾಡನ್ನು ಹಾಡಿದ್ದಾರೆ. ಇದನ್ನು ಕೇಳಿ ಹಿಮೇಶ್ ಭಾವುಕರಾಗಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಹಿಮೇಶ್ ಬಿಕ್ಕಿಬಿಕ್ಕಿ ಅತ್ತಿರುವುದನ್ನು ನೋಡಿದ ಗಾಯಕರಾದ ವಿಶಾಲ್ ದದ್ಲಾನಿ ಹಾಗೂ ನೇಹಾ ಕಕ್ಕರ್ ತಕ್ಷಣ ಎದ್ದು ನಿಂತು ಅವರನ್ನು ಸಮಾಧಾನ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ರಾನು ವರ್ತನೆ ನೋಡಿ ನೆಟ್ಟಿಗರು ಗರಂ: ವಿಡಿಯೋ ವೈರಲ್

    ತೇರಿ ಮೇರಿ ಕಹಾನಿ ಹಾಡನ್ನು ರಾನು ಮೊಂಡಲ್ ಹಾಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ರಾನು ಹಾಡನ್ನು ಹಾಡುತ್ತಿರುವಾಗ ಯುವಕನೊಬ್ಬ ಅವರ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿ ಹಿಮೇಶ್ ರಾನು ಅವರಿಗೆ ತಮ್ಮ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ್ದರು. ಈ ಹಾಡು ಸ್ಪರ್ಧಿಗಳು ಹಾಡುತ್ತಿದ್ದಂತೆ ಹಿಮೇಶ್ ಭಾವುಕರಾದರು.

  • ರಾನು ಮೊಂಡಲ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಿಮೇಶ್ ಗರಂ

    ರಾನು ಮೊಂಡಲ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಹಿಮೇಶ್ ಗರಂ

    ಮುಂಬೈ: ಇಂಟೆರ್‌ನೆಟ್ ಸ್ಟಾರ್ ರಾನು ಮೊಂಡಲ್ ಅವರ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗಾಯಕ ಹಿಮೇಶ್ ರೇಶ್ಮಿಯಾ ಗರಂ ಆಗಿದ್ದಾರೆ.

    ಇತ್ತೀಚೆಗೆ ಹಿಮೇಶ್ ಮುಂಬೈನಲ್ಲಿ ಲೈವ್ ಪರ್ಫಾರ್ಮೆನ್ಸ್ ನೀಡಲು ಬಂದಿದ್ದರು. ಈ ವೇಳೆ ಮಾಧ್ಯಮದವರು ಹಿಮೇಶ್ ಅವರ ಬಳಿ ರಾನು ಅವರನ್ನು ಪ್ರಶ್ನಿಸಿದ್ದಾರೆ. ಪ್ರಶ್ನೆ ಕೇಳುತ್ತಿದ್ದಂತೆ ಹಿಮೇಶ್, ನಾನು ರಾನು ಅವರ ಮ್ಯಾನೇಜರ್ ಅಲ್ಲ. ನೀವು ಅವರ ಬಗ್ಗೆ ಏಕೆ ಕೇಳುತ್ತಿದ್ದೀರಿ. ಕೇವಲ ರಾನು ಅವರಿಗೆ ನಾನು ಹಾಡುವ ಅವಕಾಶ ನೀಡಲಿಲ್ಲ ಆರ್ಯನ್, ದರ್ಶನ್, ಶೈನ್, ಪಲಕ್ ಸೇರಿದಂತೆ ಹಲವರಿಗೆ ನಾನು ಹಾಡಲು ಅವಕಾಶ ನೀಡಿದ್ದೇನೆ ಎಂದು ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

    ಇದೇ ವೇಳೆ ಹಿಮೇಶ್, ರಾನು ಅವರನ್ನು ಹೊಗಳಿದ್ದಾರೆ. ರಾನು ಅವರ ಹಾಡು ತುಂಬಾ ಚೆನ್ನಾಗಿದೆ. ನಾನು ಕೆಲವು ಸಂಗೀತ ನಿರ್ದೇಶಕ ಹಾಗೂ ನಿರ್ಮಾಪಕರ ಜೊತೆ ಮಾತನಾಡಿ ಚಿತ್ರರಂಗದಲ್ಲಿ ಕೆಲಸ ಕೊಡಲು ಹೇಳುತ್ತೇನೆ. ಏಕೆಂದರೆ ರಾನು ಅವರ ಧ್ವನಿ ಅದ್ಭುತವಾಗಿದೆ ಎಂದು ಹೇಳಿದ್ದಾರೆ. ಕೆಲವು ದಿನಗಳಿಂದ ನೆಟ್ಟಿಗರು ನನ್ನನ್ನು ಟ್ರೋಲ್ ಮಾಡುತ್ತಿಲ್ಲ. ರಾನು ಅವರ ಟ್ರೋಲಿಂಗ್ ಬಗ್ಗೆ ನನಗೆ ಪ್ರಶ್ನಿಸಬೇಡಿ. ಈ ಬಗ್ಗೆ ನೀವು ರಾನು ಅವರನ್ನೇ ಪ್ರಶ್ನಿಸಿ ಅವರ ಬಳಿಯೇ ಉತ್ತರ ಪಡೆದುಕೊಳ್ಳಿ ಎಂದು ಹಿಮೇಶ್ ತಿಳಿಸಿದ್ದಾರೆ.

    ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ರಾನು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆದ ಬೆನ್ನಲೇ ರಾನು ಅವರಿಗೆ ರಿಯಾಲಿಟಿ ಶೋನಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಬಳಿಕ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಚಿತ್ರದಲ್ಲಿ ಹಾಡಲು ರಾನು ಅವರಿಗೆ ಅವಕಾಶ ಕೊಟ್ಟಿದ್ದರು.

    ಚಿತ್ರದಲ್ಲಿ ರಾನು ಹಾಡಿದ ಹಾಡನ್ನು ಹಿಮೇಶ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾನು ಅವರ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಅಲ್ಲದೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿತ್ತು. ರಾನು ಹಾಡಿದ ಮೊದಲ ಹಾಡಿಗೆ ಹಿಮೇಶ್ ಅವರು 6ರಿಂದ 7 ಲಕ್ಷ ರೂ. ಸಂಭಾವನೆ ಸಹ ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ಇದಾದ ಬಳಿಕ ಹಿಮೇಶ್ ಮತ್ತೆ ತಮ್ಮ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ಕೊಟ್ಟಿದ್ದರು.

  • ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

    ರಾನು ಮೊಂಡಲ್‍ಗೆ ಅವಕಾಶ ನೀಡಿದ್ದೇಕೆ – ಹಿಮೇಶ್ ಸ್ಪಷ್ಟನೆ

    ಮುಂಬೈ: ಇಂಟರ್ ನೆಟ್ ಸ್ಟಾರ್ ರಾನು ಮೊಂಡಲ್ ಅವರಿಗೆ ಸಿನಿಮಾದಲ್ಲಿ ಅವಕಾಶ ನೀಡಿದ್ದೇಕೆ ಎಂಬುದನ್ನು ಗಾಯಕ ಹಿಮೇಶ್ ರೇಶ್ಮಿಯಾ ರಿವೀಲ್ ಮಾಡಿದ್ದಾರೆ.

    ಹಿಮೇಶ್ ಅವರು ತಮ್ಮ ಮುಂಬರುವ ‘ಹ್ಯಾಪಿ ಹಾರ್ಡಿ ಔರ್ ಹೀರ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಖಾಸಗಿ ವಾಹಿನಿಯಲ್ಲಿ ಸಂದರ್ಶನ ನೀಡುವಾಗ ರಾನು ಮೊಂಡಲ್ ಅವರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಅವರಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದು ಏಕೆ ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

    ನನ್ನ ಚಿತ್ರದ 5-6 ಹಾಡುಗಳು ರೆಕಾರ್ಡ್ ಆಗಿತ್ತು. ಉಳಿದ ಹಾಡುಗಳಿಗೆ ಕೆಲವು ಅಂಶಗಳನ್ನು ಹುಡುಕುತ್ತಿದ್ದೆ. ನನ್ನ ಚಿತ್ರಕ್ಕಾಗಿ ನಾನು ಎಂತಹ ಮಹಿಳಾ ಗಾಯಕಿಯನ್ನು ಹುಡುಕುತ್ತಿದ್ದೆ ಎಂದರೆ ಆ ಕಾಲದಲ್ಲಿ ಲತಾ ಅವರು ಹೇಗೆ ಹಾಡುತ್ತಿದ್ದರೋ ಈ ಕಾಲದಲ್ಲಿ ಅವರ ಧ್ವನಿಯಂತೆ ಇರುವ ಮಹಿಳಾ ಗಾಯಕಿಯನ್ನು ಹುಡುಕುತ್ತಿದ್ದೆ ಎಂದು ಹೇಳಿದ್ದಾರೆ.

    ರಾನು ಅವರು ರಿಯಾಲಿಟಿ ಶೋಗೆ ಬಂದಾಗ ಇವರು ನನ್ನ ಚಿತ್ರದಲ್ಲಿ ಹಾಡಲು ಪರ್ಫೆಕ್ಟ್ ಎಂದು ನನಗೆ ಅನಿಸಿತ್ತು. ನಾನು ಒಂದು ಕನೆಕ್ಷನ್ ಹುಡುಕುತ್ತಿದೆ. ಅದು ನನಗೆ ರಾನು ಅವರ ಧ್ವನಿಯಲ್ಲಿ ಸಿಕ್ಕಿತ್ತು. ಅವರು ರಿಯಾಲಿಟಿ ಶೋನಲ್ಲಿ ಕೇವಲ 2 ನಿಮಿಷ ‘ಏಕ್ ಪ್ಯಾರ್ ಕಾ ನಗ್ಮಾ ಹೇ’ ಹಾಡನ್ನು ಹಾಡಿದ್ದರು. ಅಂದು ಅವರು ಆ 2 ನಿಮಿಷದಲ್ಲಿ ಅಷ್ಟು ಚೆನ್ನಾಗಿ ಹಾಡಿರಲಿಲ್ಲ ಎಂದರೆ ಇಂದು ಇದೆಲ್ಲಾ ಆಗಲು ಸಾಧ್ಯವಿರುತ್ತಿರಲಿಲ್ಲ ಎಂದರು.

    ರಾನು ಅವರ ಹಾಡು ಕೇಳಿದ ಮರುದಿನವೇ ನಾನು ಅವರಿಗೆ ಕರೆ ಮಾಡಿ ಸಿನಿಮಾದಲ್ಲಿ ಹಾಡುವಂತೆ ಹೇಳಿದೆ. ಅವರು ನನ್ನ ಮಾತು ಕೇಳಿ ಹಾಡು ಕೂಡ ಹಾಡಿದ್ದರು. ನಂತರ ರಾನು ಅವರು ಹಾಡಿದ ಹಾಡನ್ನು ನಾನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ ಅಷ್ಟೇ. ನಂತರ ನಾನು ಏನೂ ಮಾಡಿಲ್ಲ. ಜನರೇ ಎಲ್ಲವನ್ನು ಮಾಡಿದ್ದಾರೆ. ‘ತೇರಿ ಮೇರಿ ಕಹಾನಿ’ ಈಗ ಗ್ಲೋಬಲ್ ನಂಬರ್ 1 ಹಾಡು ಆಗಿದೆ ಎಂದು ಹಿಮೇಶ್ ತಿಳಿಸಿದ್ದಾರೆ.

  • ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ: ಲತಾ ಹೇಳಿಕೆಗೆ ರಾನು ಪ್ರತಿಕ್ರಿಯೆ

    ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ: ಲತಾ ಹೇಳಿಕೆಗೆ ರಾನು ಪ್ರತಿಕ್ರಿಯೆ

    ಮುಂಬೈ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ ಎಂದು ಈ ಹಿಂದೆ ರಾನು ಮೊಂಡಲ್ ಅವರ ಬಗ್ಗೆ ಹೇಳಿದ್ದರು. ಈಗ ಸ್ವತಃ ರಾನು ಮೊಂಡಲ್ ಅವರು ಲತಾ ಮಂಗೇಶ್ಕರ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಬುಧವಾರ ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಮೊಂಡಲ್ ಅವರ ಹಾಡನ್ನು ಲಾಂಚ್ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾನು ಮೊಂಡಲ್, ಹಿಮೇಶ್ ರೇಶ್ಮಿಯಾ ಹಾಗೂ `ಹ್ಯಾಪಿ ಹಾರ್ಡಿ ಅಂಡ್ ಹೀರ್’ ಚಿತ್ರತಂಡ ಭಾಗವಹಿಸಿದ್ದರು. ಈ ವೇಳೆ ಮಾಧ್ಯಮದವರು ರಾನು ಹಾಗೂ ಹಿಮೇಶ್ ಅವರಿಗೆ ಲತಾ ಮಂಗೇಶ್ಕರ್ ಹೇಳಿಕೆ ಬಗ್ಗೆ ಪ್ರಶ್ನಿಸಿದ್ದರು. ಇದನ್ನೂ ಓದಿ: ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ: ರಾನು ಹಾಡಿಗೆ ಲತಾ ಪ್ರತಿಕ್ರಿಯೆ

    ಇದಕ್ಕೆ ಪ್ರತಿಕ್ರಿಯಿಸಿದ ಹಿಮೇಶ್ ಅವರು, ಪ್ರತಿಯೊಬ್ಬರು ಒಬ್ಬರು ಅಲ್ಲದೆ ಮತ್ತೊಬ್ಬರಿಂದ ಸ್ಫೂರ್ತಿ ಪಡೆಯುತ್ತಾರೆ. ಹಾಗೆಯೇ ರಾನು ಮೊಂಡಲ್ ಅವರು ಲತಾ ಮಂಗೇಶ್ಕರ್ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಈಗ ಹೇಗೆ ಗಾಯಕ ಕುಮಾರ್ ಸಾನು ಅವರು ಕಿಶೋರ್ ಕುಮಾರ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳುತ್ತಾರೋ ಇದು ಕೂಡ ಹಾಗೆ. ಲತಾ ಅವರಂತೆ ಆಗಲು ಯಾರಿಗೂ ಸಾಧ್ಯವಿಲ್ಲ. ಏಕೆಂದರೆ ಅವರು ಶ್ರೇಷ್ಠ ಗಾಯಕಿ, ಅವರ ಜೀವನದ ಪಯಣದಿಂದ ಯಾರು ಬೇಕಾದರೂ ಸ್ಫೂರ್ತಿ ಪಡೆಯಬಹುದು. ಹಾಗೆಯೇ ರಾನು ಅವರು ಸ್ಫೂರ್ತಿ ಪಡೆದಿದ್ದಾರೆ. ಆದರೆ ಒಂದು ಮಾತು ಸತ್ಯ ರಾನು ಹುಟ್ಟು ಗಾಯಕಿ. ಅವರಲ್ಲಿ ಪ್ರತಿಭೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ರಾನು ಧನ್ಯವಾದ ತಿಳಿಸಿದ್ದಕ್ಕೆ ಭಾವುಕರಾದ ಗಾಯಕ ಹಿಮೇಶ್

    ಅರಿಜಿತ್ ಸಿಂಗ್ ಅವರ ಹಾಡನ್ನು ಯಾರಾದರೂ ಹಾಡಿದರೆ ಮತ್ತು ಅವರಂತೆ ಹಾಡಿದರೆ ಅದು ಕಾಪಿ ಮಾಡಿದ್ದಾರೆ ಎಂದು ಅಲ್ಲ. ಅವರು ಆ ಗಾಯಕರಿಂದ ಸ್ಫೂರ್ತಿ ಪಡೆದಿದ್ದಾರೆ ಎಂದರ್ಥ. ಲತಾ ಅವರ ಮಾತಿನ ಅರ್ಥ ಇದೆ ಎಂದು ನಾನು ಭಾವಿಸುತ್ತೇನೆ ಎಂದು ಹಿಮೇಶ್ ಅವರು ಹೇಳಿದ್ದಾರೆ. ಬಳಿಕ ಈ ಬಗ್ಗೆ ಮಾತನಾಡಿದ ರಾನು ಅವರು, ನಾನು ಬಾಲ್ಯದಿಂದಲೂ ಲತಾ ಅವರ ಹಾಡು ಹಾಡುತ್ತಾ ಬಂದಿದ್ದೇನೆ. ಲತಾ ಅವರ ಈ ಹಾಡು ನನಗೆ ತುಂಬಾ ಇಷ್ಟ. ಅಲ್ಲದೆ ಎಲ್ಲರೂ ನನ್ನ ಧ್ವನಿ ಲತಾ ಮಂಗೇಶ್ಕರ್ ರೀತಿ ಇದೇ ಎಂದು ಹೇಳುತ್ತಾರೆ. ಜನರ ಮಾತನ್ನು ಕೇಳಿ ನಾನು ಅದೃಷ್ಟವಂತೆ ಎಂದು ಭಾವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ- ಕುಟುಂಬದ ಕಹಾನಿ ಬಿಚ್ಚಿಟ್ಟ ರಾನು

    ಲತಾ ಹೇಳಿದ್ದೇನು?
    ಈ ಹಿಂದೆ ಲತಾ ಅವರು, ನನ್ನ ಹೆಸರು ಹಾಗೂ ಕೆಲಸದಿಂದ ಯಾರಿಗಾದರೂ ಒಳ್ಳೆಯದ್ದು ಆಗಿದ್ದರೆ, ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ. ನಾನು, ಕಿಶೋರ್, ರಫಿ, ಮುಕೇಶ್ ಅಥವಾ ಆಶಾ ಅವರು ಹಾಡಿದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಬಹುದು. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ. ಹಳೆ ಗಾಯಕರ ಹಾಡುಗಳನ್ನು ಹಾಡುವುದು ಸರಿ. ಆದರೆ ಒಂದು ದಿನ ಅವರು ತಾವು ಹಾಡಿದ ಹಾಡಿನ ಮೂಲಕ ಜನರಿಗೆ ಪರಿಚಯವಾಗಬೇಕು ಎಂದು ಹೇಳಿದ್ದರು. ಇದನ್ನೂ ಓದಿ:  ಬೇಡ ಎಂದ್ರೂ ರಾನುಗೆ 7 ಲಕ್ಷ ಸಂಭಾವನೆ ನೀಡಿದ ಹಿಮೇಶ್

  • ರಾನು ಧನ್ಯವಾದ ತಿಳಿಸಿದ್ದಕ್ಕೆ ಭಾವುಕರಾದ ಗಾಯಕ ಹಿಮೇಶ್

    ರಾನು ಧನ್ಯವಾದ ತಿಳಿಸಿದ್ದಕ್ಕೆ ಭಾವುಕರಾದ ಗಾಯಕ ಹಿಮೇಶ್

    ಮುಂಬೈ: ಇಂಟರ್‌ನೆಟ್‌ ಸೆನ್ಸೇಷನ್ ರಾನು ಮೊಂಡಲ್ ಅವರು ಹಾಡಿದ ಮೊದಲ ಹಾಡನ್ನು ಗಾಯಕ ಹಿಮೇಶ್ ರೇಶ್ಮಿಯಾ ಅವರು ಅದ್ಧೂರಿಯಾಗಿ ಲಾಂಚ್ ಮಾಡಿದ್ದಾರೆ. ಈ ವೇಳೆ ರಾನು ಅವರು ಧನ್ಯವಾದ ತಿಳಿಸಿದ್ದಕ್ಕೆ ಹಿಮೇಶ್ ಭಾವುಕರಾಗಿದ್ದಾರೆ.

    ಬುಧವಾರ ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಮೊಂಡಲ್ ಅವರ ಹಾಡನ್ನು ಲಾಂಚ್ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ರಾನು ಮೊಂಡಲ್, ಹಿಮೇಶ್ ರೇಶ್ಮಿಯಾ ಹಾಗೂ ‘ಹ್ಯಾಪಿ ಹಾರ್ಡಿ ಅಂಡ್ ಹೀರ್’ ಚಿತ್ರತಂಡ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾನು ಮೊಂಡಲ್, ನಾನು ಮೊದಲು ಹಿಮೇಶ್ ಅವರಿಗೆ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ಏಕೆಂದರೆ ಹಿಮೇಶ್ ಅವರು ನನಗೆ ಅವಕಾಶ ಕೊಡದಿದ್ದರೆ, ನಾನು ಎಂದಿಗೂ ಹಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 10 ವರ್ಷದ ಬಳಿಕ ರಾನು ಮೊಂಡಲ್ ಭೇಟಿಯಾದ ಮಗಳು

    ರಾನು ಮಾತು ಕೇಳಿ ಭಾವುಕರಾದ ಹಿಮೇಶ್, ನಾನು ಕೇವಲ ಒಬ್ಬರ ಪ್ರತಿಭೆಯನ್ನು ಎಲ್ಲರ ಮುಂದೆ ತಂದಿದ್ದೇನೆ ಅಷ್ಟೇ. ಅದನ್ನು ಬಿಟ್ಟು ನಾನು ಬೇರೆ ಏನೂ ಮಾಡಿದ್ದೇನೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಆದರೆ ವಾಸ್ತವವಾಗಿ ನಾನು ಏನನ್ನೂ ಮಾಡಿಲ್ಲ. ಎಲ್ಲವು ಮೇಲಿರುವವರ ಕೈಯಲ್ಲಿ ಇರುತ್ತದೆ. ನಾವು ಅವರ ಕೈಗೊಂಬೆಗಳು ಅಷ್ಟೇ. ನಮ್ಮಿಂದ ಏನೂ ಆಗುತ್ತದೋ ನಾವು ಅದನ್ನು ಮಾಡಿದ್ದೇವೆ. ಈಗ ರಾನು ಮೊಂಡಲ್ ಅವರನ್ನು ನೀವು ಯಶಸ್ಸಿನತ್ತ ಕರೆದುಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಯಾಕೆ ದೂಷಿಸುತ್ತೀರಾ, ಉಳಿದ ಮಕ್ಕಳನ್ನು ಯಾಕೆ ಪ್ರಶ್ನಿಸಲ್ಲ: ರಾನು ಪುತ್ರಿ

    ಅಲ್ಲದೆ ಎಲ್ಲಿ ಪ್ರತಿಭೆ ಕಾಣುತ್ತಿರೋ ಅದನ್ನು ಪ್ರೋತ್ಸಾಹಿಸಿ. ಏಕೆಂದರೆ ಈ ಹಿಂದೆ ನಮಗೂ ಯಾರೋ ಒಬ್ಬರು ಬೆಂಬಲ ನೀಡಿದ್ದರಿಂದ ಜೀವನದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ಹಿಮೇಶ್ ಭಾವುಕರಾಗಿ ಮಾತನಾಡಿದ್ದಾರೆ. ಯೂಟ್ಯೂಬ್‍ನಲ್ಲಿ ರಾನು ಮೊಂಡಲ್ ಅವರು ಹಾಡಿದ ‘ತೇರಿ ಮೇರಿ ಕಹಾನಿ’ ರಿಲೀಸ್ ಆಗಿ ಈವರೆಗೂ 30 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದೆ. ತೇರಿ ಮೇರಿ ಕಹಾನಿ ಹಾಡಲ್ಲದೇ ಹಿಮೇಶ್ ಚಿತ್ರದಲ್ಲಿ ರಾನು ಅವರು ಮತ್ತೆ ಎರಡು ಹಾಡನ್ನು ಹಾಡಿದ್ದಾರೆ. ಇದನ್ನು ಓದಿ:ನಾನು ಫುಟ್‍ಪಾತ್‍ನಲ್ಲಿ ಹುಟ್ಟಿದವಳಲ್ಲ- ಕುಟುಂಬದ ಕಹಾನಿ ಬಿಚ್ಚಿಟ್ಟ ರಾನು

  • ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಹಾಡಿದ ಮೊದಲ ಹಾಡು ಬಿಡುಗಡೆ

    ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಹಾಡಿದ ಮೊದಲ ಹಾಡು ಬಿಡುಗಡೆ

    ಮುಂಬೈ: ಇಂಟರ್‌ನೆಟ್‌ ಸೆನ್ಸೇಷನ್ ರಾನು ಮೊಂಡಲ್ ಅವರು ಹಾಡಿದ ಮೊದಲ ಹಾಡು ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಆಗಲಿದೆ.

    ರಾನು ಅವರು ಗಾಯಕ ಹಿಮೇಶ್ ರೇಶ್ಮಿಯಾ ನಟಿಸಿದ ‘ಹ್ಯಾಪಿ ಹಾರ್ಡಿ ಹಾಗೂ ಹೂರ್’ ಚಿತ್ರದಲ್ಲಿ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಿದ್ದಾರೆ. ರಾನು ಅವರು ಹಾಡುತ್ತಿದ್ದ ವಿಡಿಯೋವನ್ನು ಹಿಮೇಶ್ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

    ಇತ್ತೀಚೆಗೆ ತೇರಿ ಮೇರಿ ಕಹಾನಿ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿತ್ತು. ಈ ವಿಡಿಯೋ ಸಾಕಷ್ಟು ಹಿಟ್ ಕೂಡ ಆಗಿತ್ತು. ಜನರು ಈ ವಿಡಿಯೋವನ್ನು ಶೇರ್ ಮಾಡುವುದರ ಮೂಲಕ ರಾನು ಅವರಿಗೆ ತಮ್ಮ ಪ್ರೀತಿಯನ್ನು ತೋರಿಸಿದ್ದರು.

    ಇಂದು ಅದ್ಧೂರಿ ಕಾರ್ಯಕ್ರಮದಲ್ಲಿ ರಾನು ಅವರು ಹಾಡಿದ ಮೊದಲ ಹಾಡು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಲ್ಲದೆ ಚಿತ್ರದ ನಿರ್ಮಾಪಕರಾದ ದೀಪ್ಷಿಕಾ ದೇಶ್‍ಮುಖ್ ಹಾಗೂ ಸಬಿತಾ ಮನಕ್ಚಂದ್ ಅವರು ಮೊದಲು ಚಿತ್ರದ ಎಲ್ಲಾ ಹಾಡುಗಳನ್ನು ಬಿಡುಗಡೆ ಮಾಡಿ ನಂತರ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಹಿಮೇಶ್ ರೇಶ್ಮಿಯಾ ಅವರು, “ಹ್ಯಾಪಿ, ಹಾರ್ಡಿ ಹಾಗೂ ಹೀರ್ ಚಿತ್ರಕ್ಕೆ ಜನರು ಪ್ರೀತಿ ತೋರಿಸುತ್ತಿರುವುದು ನೋಡಿ ನನಗೆ ಸಾಕಷ್ಟು ಖುಷಿ ಆಗುತ್ತಿದೆ. ದೇವರ ದಯೆಯಿಂದ ಈ ಚಿತ್ರ ಹೊಸ ಪ್ರವೃತ್ತಿಯನ್ನು ಹೊಂದುತ್ತದೆ ಎಂಬ ವಿಶ್ವಾಸ ನನಗೆ ಇದೆ. ರಾನು ಅವರು ಕೂಡ ತುಂಬಾ ಅದ್ಭುತವಾಗಿ ಹಾಡುಗಳನ್ನು ಹಾಡಿದ್ದಾರೆ. ಪ್ರೇಕ್ಷಕರು ಹಾಡನ್ನು ಇಷ್ಟಪಡುತ್ತಾರೆ ಹಾಗೂ ಎಂಜಾಯ್ ಮಾಡುತ್ತಾರೆ ಎಂದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.

  • ಬೇಡ ಎಂದ್ರೂ ರಾನುಗೆ 7 ಲಕ್ಷ ಸಂಭಾವನೆ ನೀಡಿದ ಹಿಮೇಶ್

    ಬೇಡ ಎಂದ್ರೂ ರಾನುಗೆ 7 ಲಕ್ಷ ಸಂಭಾವನೆ ನೀಡಿದ ಹಿಮೇಶ್

    ಮುಂಬೈ: ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡುವ ಮೂಲಕ ಬಾಲಿವುಡ್‍ಗೆ ರಾನು ಮೊಂಡಲ್ ಎಂಟ್ರಿ ಕೊಟ್ಟಿದ್ದಾರೆ. ರಾನು ಅವರ ಮೊದಲ ಹಾಡಿಗೆ 6ರಿಂದ 7 ಲಕ್ಷ ರೂ. ಸಂಭಾವನೆ ಸಿಕ್ಕಿದ್ದು, ಇದನ್ನು ಅವರು ನಿರಾಕರಿಸಿದ್ದಾರೆ. ಬಳಿಕ ಗಾಯಕ ಹಿಮೇಶ್ ರೇಶ್ಮಿಯಾ ಅವರು ಬಲವಂತವಾಗಿ ಆ ಹಣವನ್ನು ರಾನು ಅವರಿಗೆ ನೀಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

    ಹಿಮೇಶ್ ರೇಶ್ಮಿಯಾ ಅವರು ತಮ್ಮ ಮುಂಬರುವ `ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ನೀಡಿದ್ದರು. ರಾನು ಅವರು ಈ ಚಿತ್ರದ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಿದ್ದಾರೆ. ವರದಿಗಳ ಪ್ರಕಾರ ರಾನು ಅವರು ಈ ಹಾಡು ಹಾಡಿದ್ದಕ್ಕೆ ಹಿಮೇಶ್ ಅವರಿಗೆ 6ರಿಂದ 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ರಾನು ಈ ಹಣವನ್ನು ಪಡೆಯಲು ನಿರಾಕರಿಸಿದ್ದು, ಹಿಮೇಶ್ ಅವರು ಬಲವಂತವಾಗಿ ಈ ಹಣವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ರಾನು ಮೊದಲು ತಮ್ಮ ಸಂಭಾವನೆ ಪಡೆಯಲು ನಿರಾಕರಿಸುತ್ತಿದ್ದರು. ಈ ವೇಳೆ ಹಿಮೇಶ್ ಅವರು, ನೀವು ಬಾಲಿವುಡ್‍ನಲ್ಲಿ ಸೂಪರ್ ಸ್ಟಾರ್ ಆಗುವುದನ್ನು ಯಾರು ತಡೆಯಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹಣವನ್ನು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಕೂಡ ತಮ್ಮ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ನೀಡುತ್ತಾರೆ ಎಂದು ಎಂಬ ಮಾತುಗಳು ಹರಿದಾಡುತ್ತಿದೆ. ಇದನ್ನೂ ಓದಿ: ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ

    ಯಾರಿದ್ದು ರಾನು ಮೊಂಡಲ್?
    ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಮೊಂಡಲ್ ಅವರ ಈ ವಿಡಿಯೋವನ್ನು `ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿತ್ತು. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದರು. ಇದನ್ನೂ ಓದಿ: 10 ವರ್ಷದ ಬಳಿಕ ರಾನು ಮೊಂಡಲ್ ಭೇಟಿಯಾದ ಮಗಳು

  • ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ

    ಬಾಲಿವುಡ್‍ಗೆ ಕಾಲಿಟ್ಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ

    ಮುಂಬೈ: ಕಳೆದ ತಿಂಗಳು ರೈಲ್ವೆ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡು ಹಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆಗೆ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಆದರೆ ಈಗ ಅವರು ಬಾಲಿವುಡ್‍ಗೂ ಎಂಟ್ರಿ ಕೊಟ್ಟಿದ್ದಾರೆ.

    ಖ್ಯಾತ ಬಾಲಿವುಡ್ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಹೊಸ ಚಿತ್ರದಲ್ಲಿ ಹಾಡಲು ರಾನು ಮೊಂಡಲ್ ಅವರಿಗೆ ಅವಕಾಶ ನೀಡಿದ್ದಾರೆ. ಈ ವಿಷಯವನ್ನು ಸ್ವತಃ ಹಿಮೇಶ್ ರೇಶ್ಮಿಯಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಹಿಳೆ ಈಗ ರಿಯಾಲಿಟಿ ಶೋಗೆ ಎಂಟ್ರಿ

    ಈ ವಿಡಿಯೋದಲ್ಲಿ ರಾನು ಮೊಂಡಲ್ ಅವರು ಹಾಡು ರೆಕಾರ್ಡ್ ಮಾಡುತ್ತಿದ್ದಾಗ ಹಿಮೇಶ್ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಹಿಮೇಶ್ ಅವರನ್ನು ಹೊಗಳುತ್ತಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಕೂಡ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ವರದಿಗಳ ಪ್ರಕಾರ ಹಿಮೇಶ್ ಅವರು ತಮ್ಮ ಮುಂಬರುವ ‘ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದಲ್ಲಿ ಹಾಡು ಹಾಡಲು ಅವಕಾಶ ನೀಡಿದ್ದಾರೆ. ರಾನು ಅವರು ಈ ಚಿತ್ರದ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಲಿದ್ದಾರೆ. ಇದರ ಜೊತೆ ರಾನು ಅವರು ರಿಯಾಲಿಟಿ ಶೋನಲ್ಲಿ ಭಾಗಿಯಾಗಲಿದ್ದಾರೆ.

    ಯಾರಿದ್ದು ರಾನು ಮೊಂಡಲ್?
    ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಮೊಂಡಲ್ ಎಂಬವರು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಮೊಂಡಲ್ ಅವರ ಈ ವಿಡಿಯೋವನ್ನು `ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿತ್ತು. ಈ ವಿಡಿಯೋ ವೈರಲ್ ಆಗಿದ್ದು, ಮೊಂಡಲ್ ಅವರಿಗೆ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿತ್ತು. ಮಹಿಳೆಯೊಬ್ಬರು ಮೊಂಡಲ್ ಅವರನ್ನು ಗುರುತಿಸಿ ಅವರನ್ನು ಸಂಪೂರ್ಣವಾಗಿ ಬದಲಾಯಿಸಿದ್ದರು.