ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾ (Shimla) ಜಿಲ್ಲೆಯ ರಾಮ್‍ಪುರದ ಹಿಂದೂ ದೇವಾಲಯದ (Temple) ಆವರಣದಲ್ಲಿ ಮುಸ್ಲಿಂ ಜೋಡಿಗಳು (Muslim Couple) ಇಸ್ಲಾಮಿಕ್ ಪದ್ಧತಿಯಂತೆ ವಿವಾಹವಾಗುವ (Marriage) ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾದರು.
ಹಿಮಾಚಲ ಪ್ರದೇಶದ ವಿಶ್ವ ಹಿಂದೂ ಪರಿಷತ್ತಿನ ಠಾಕೂರ್ ಸತ್ಯನಾರಾಯಣ ದೇವಸ್ಥಾನದಲ್ಲಿ ಈ ಅಪರೂಪದ ವಿವಾಹ ನೆರವೇರಿತು. ದೇವಸ್ಥಾನದಲ್ಲಿ ನಡೆದ ಮುಸ್ಲಿಂ ಜೋಡಿಯ ವಿವಾಹ ಸಮಾರಂಭಕ್ಕೆ ಮುಸ್ಲಿಂ ಹಾಗೂ ಹಿಂದೂ ಸಮುದಾಯದ ಜನರು ಸಾಕ್ಷಿಯಾದರು. ವಧು ಎಂಟೆಕ್ ಸಿವಿಲ್ ಇಂಜಿನಿಯರ್ ಆಗಿದ್ದು, ವರ ಸಿವಿಲ್ ಇಂಜಿನಿಯರ್ ಆಗಿದ್ದಾರೆ.
ವಿವಾಹ ಸಂದರ್ಭದಲ್ಲಿ ಮೌಲ್ವಿ, ವಕೀಲರು, ಅತಿಥಿಗಳು ದೇವಾಲಯದ ಆವರಣದಲ್ಲಿ ಪಾಲ್ಗೊಂಡಿದ್ದರು. ಧಾರ್ಮಿಕ ಸೌಹಾರ್ದತೆ ಹಾಗೂ ಸಹೋದರತ್ವದ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಮದುವೆಯನ್ನು ದೇವಸ್ಥಾನದ ಆವರಣದಲ್ಲಿ ಮಾಡಲಾಗಿತ್ತು ಎಂದು ವಧುವಿನ ತಂದೆ ತಿಳಿಸಿದ್ದಾರೆ. ಇದನ್ನೂ ಓದಿ: ಜೀವನದಿ ಕಾವೇರಿ ತೀರ್ಥ ಪ್ರಸಾದ ಇನ್ಮುಂದೆ ಭಕ್ತರ ಮನೆ ಬಾಗಿಲಿಗೆ
ಸತ್ಯನಾರಾಯಣ ದೇವಾಲಯ ಸಂಕೀರ್ಣವು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಚೇರಿಯಾಗಿರುವುದು ಗಮನಾರ್ಹ ವಿಷಯವಾಗಿತ್ತು. ಈ ಬಗ್ಗೆ ದೇವಸ್ಥಾನ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಮಾತನಾಡಿ, ವಿಶ್ವ ಹಿಂದೂ ಪರಿಷತ್ ಹಾಗೂ ಆರ್‌ಎಸ್‍ಎಸ್ ಅನ್ನು ಆಗಾಗ ಮುಸ್ಲಿಂ ವಿರೋಧಿ ಎಂದು ಆರೋಪಿಸಲಾಗುತ್ತದೆ. ಆದರೆ ಇಲ್ಲಿ ಮುಸ್ಲಿಂ ಜೋಡಿ ವಿವಾಹವಾಗುವ ಮೂಲಕ ಸನಾತನ ಧರ್ಮವು ಯಾವಾಗಲೂ ಎಲ್ಲರನ್ನು ಪ್ರೇರೆಪಿಸುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ ಎಂದರು. ಇದನ್ನೂ ಓದಿ: ಐವರು ಮಕ್ಕಳಿದ್ದರೂ, ಆಸ್ತಿಯೆಲ್ಲಾ UP ಸರ್ಕಾರದ ಹೆಸರಿಗೆ ಬರೆದ ವೃದ್ಧ
ಶಿಮ್ಲಾ: ಹಿಮಾಚಲಪ್ರದೇಶ (Himachal Pradesh) ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದ 28 ವರ್ಷದ ವೇಗಿ ಸಿದ್ಧಾರ್ಥ್ ಶರ್ಮಾ (Sidharth Sharma) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.
ಹಿಮಾಚಲಪ್ರದೇಶ ತಂಡ ಗುಜರಾತ್ ಪರ ರಣಜಿ (Ranji) ಪಂದ್ಯವಾಡಲು ಪ್ರವಾಸದಲ್ಲಿತ್ತು. ಈ ವೇಳೆ ಸಿದ್ಧಾರ್ಥ್ ಶರ್ಮಾ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ ಕೂಡಲೇ ಗುಜರಾತ್‍ನ ವಡೋದರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಆ ಬಳಿಕ 2 ವಾರಗಳಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜ.12 ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಹಾಕಿಯಲ್ಲಿ ಭಾರತ ಶುಭಾರಂಭ – ಸ್ಪೇನ್ ವಿರುದ್ಧ ಗೆಲುವು
ಈ ಬಗ್ಗೆ ಹಿಮಾಚಲಪ್ರದೇಶ ರಾಜ್ಯ ಕ್ರಿಕೆಟ್ ಮಂಡಳಿ ಮಾಹಿತಿ ಹಂಚಿಕೊಂಡಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಾರ್ಥ್ ಮಧ್ಯರಾತ್ರಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಕೆಲದಿನಗಳ ಹಿಂದೆ ಪಂದ್ಯಕ್ಕೂ ಮುನ್ನ ಆರೋಗ್ಯದಲ್ಲಿ ಏರುಪೇರು ಕಂಡು ಬಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
मुख्यमंत्री श्री @SukhuSukhvinder ने हिमाचल की विजय हजारे ट्रॉफी विजेता क्रिकेट टीम के सदस्य रहे और प्रदेश के स्टार तेज गेंदबाज सिद्धार्थ शर्मा के निधन पर गहरा शोक व्यक्त किया है। मुख्यमंत्री ने शोक संतप्त परिजनों के साथ अपनी गहरी संवेदनाएं व्यक्त की हैं।
ಲಕ್ನೋ: ಈಗ ಪ್ರತಿ ಹಿಂದೂ ಪೋಷಕರು ಕನಿಷ್ಠ ನಾಲ್ಕು ಮಕ್ಕಳನ್ನು ಹೊಂದಿರಬೇಕು. ಅವರಲ್ಲಿ ಇಬ್ಬರನ್ನು ಆರ್‌ಎಸ್‌ಎಸ್ ಅಥವಾ ವಿಶ್ವಹಿಂದೂ ಪರಿಷತ್‌ಗೆ ಹಸ್ತಾಂತರಿಸಬೇಕು ಎಂದು ಆಧ್ಯಾತ್ಮಿಕ ಮುಖಂಡರಾದ ಸಾಧ್ವಿ ಋತಂಭರಾ ಕರೆ ನೀಡಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಶ್ವ ಹಿಂದೂ ಪರಿಷತ್ (VHP) ವತಿಯಿಂದ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ಪ್ರತಿಯೊಬ್ಬ ಹಿಂದೂ ಕನಿಷ್ಠ 4 ಮಕ್ಕಳನ್ನು ಹೊಂದಿರಬೇಕು. ಅವರಲ್ಲಿ ಇಬ್ಬರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ವಿಶ್ವ ಹಿಂದೂ ಪರಿಷತ್‌ಗೆ ಹಸ್ತಾಂತರಿಸಿದರೆ, ಅವರು ರಾಷ್ಟçತ್ಯಾಗಕ್ಕೆ ಕೊಡುಗೆ ನೀಡಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ 50ಜನ ಸಂತರು ಸ್ಪರ್ಧಿಸಲಿದ್ದಾರೆ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
ರಾಮೋತ್ಸವವನ್ನುದ್ದೇಶಿಸಿ ಮಾತನಾಡುತ್ತಾ, ರಾಮನ ಭಕ್ತನಾಗಲು, ರಾಮತ್ವವನ್ನು ಅಳವಡಿಸಿಕೊಳ್ಳಬೇಕು. ಏಕೆಂದರೆ ರಾಮನು ಅಜೇಯ ಪುರುಷತ್ವದ ಸಂಕೇತ. ರಾಜಕೀಯ ಪಕ್ಷಗಳು ಹಿಂದೂಗಳನ್ನು ವಿಭಜಿಸುತ್ತವೆ. ಆದರೆ ಶ್ರೀರಾಮನ ನಡವಳಿಕೆಯು ಇಡೀ ಸಮಾಜವನ್ನು ಒಂದುಗೂಡಿಸುತ್ತದೆ ಎಂದು ಅವರು ಹೇಳಿದರು.
ಹೆಚ್ಚಿನ ಮಕ್ಕಳಿಗೆ ಜನ್ಮನೀಡಿ: ಅಖಿಲ ಭಾರತೀಯ ಸಂತ ಪರಿಷತ್ತಿನ ಹಿಮಾಚಲ ಪ್ರದೇಶ ಉಸ್ತುವಾರಿ ಯತಿ ಸತ್ಯದೇವಾನಂದ ಸರಸ್ವತಿ ಮಾತನಾಡಿ, ಹಿಂದೂಗಳು ಬಹುಸಂಖ್ಯಾತರಾಗಿರುವುದರಿಂದ ಭಾರತವು ಪ್ರಜಾಪ್ರಭುತ್ವ ರಾಷ್ಟçವಾಗಿದೆ. ಆದರೆ ಮುಸ್ಲಿಮರು ಯೋಜಿತ ರೀತಿಯಲ್ಲಿ ಅನೇಕ ಮಕ್ಕಳಿಗೆ ಜನ್ಮ ನೀಡುವ ಮೂಲಕ ತಮ್ಮ ಜನಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಭಾರತವು ಇಸ್ಲಾಮಿಕ್ ರಾಷ್ಟçವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ದಲಿತರ ಓಲೈಕೆಗಾಗಿ SC, ST ಸಮಾವೇಶ ಮಾಡಿದ ರೇಣುಕಾಚಾರ್ಯ – ಮಹಿಳೆಯರೊಂದಿಗೆ ಸಖತ್ ಸ್ಟೆಪ್
ಸಾಂದರ್ಭಿಕ ಚಿತ್ರ
ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶ ಪೊಲೀಸರು ಸರಸ್ವತಿ ಅವರಿಗೆ ಪೊಲೀಸ್ ಕಾಯ್ದೆ- 2007ರ ಸೆಕ್ಷನ್ 64ರ (ಕೂಮುಪ್ರಚೋದನಕಾರಿ ಭಾಷಣ) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿದೆ. ಸೂಚನೆಯನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದೆ.
ಶಿಮ್ಲಾ: ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕೆಂದು ಅರ್ಚಕ ಯತಿ ಸತ್ಯದೇವಾನಂದ ಸರಸ್ವತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹೆಚ್ಚುತ್ತಿರುವ ಮುಸ್ಲಿಮರ ಜನಸಂಖ್ಯೆಯು ಹಿಂದೂಗಳ ಅವನತಿಯನ್ನು ಸೂಚಿಸುತ್ತದೆ. ಹಿಂದೂಗಳು ತಮ್ಮ ಕುಟುಂಬಗಳನ್ನು ಬಲಪಡಿಸಬೇಕು. ಅವರು ತಮ್ಮ ಕುಟುಂಬ, ಮಾನವೀಯತೆ ಮತ್ತು ಸನಾತನ ಧರ್ಮವನ್ನು ರಕ್ಷಿಸಲು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಒತ್ತಾಯಿಸಿದರು.
ಮುಸ್ಲಿಮರು ಯೋಜಿತ ರೀತಿಯಲ್ಲಿ ಅನೇಕ ಮಕ್ಕಳನ್ನು ಹೇರುವುದರ ಮೂಲಕ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಮುಸ್ಲಿಮರು ಭಾರತದಲ್ಲಿ ಬಹುಸಂಖ್ಯಾತರಾಗುತ್ತಾರೆ. ಆಗ ಭಾರತವನ್ನು ನೆರೆಯ ಪಾಕಿಸ್ತಾನದಂತೆ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುತ್ತಾರೆ. ಇದಕ್ಕಾಗಿಯೇ ಭಾರತವು ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಬೇಕು ಎಂದರು. ಇದನ್ನೂ ಓದಿ:ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ
ಶಿಮ್ಲಾ(ಹಿಮಾಚಲ ಪ್ರದೇಶ): ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಹಿಮಾಚಲ ಪ್ರದೇಶದ ಮಂಡಿಯಲ್ಲಿಂದು `ಮಿಷನ್ ಹಿಮಾಚಲ್’ ರೋಡ್ ಶೋ ನಡೆಸಿದರು.
ರೋಡ್‌ಶೋ ವೇಳೆ ಮಾತನಾಡಿದ ಕೇಜ್ರಿವಾಲ್, ಮೊದಲು ನಾವು ದೆಹಲಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿದೆವು. ನಂತರ ಪಂಜಾಬ್‌ನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆವು. ಇದೀಗ ಹಿಮಾಚಲ ಪ್ರದೇಶದಿಂದ ಭ್ರಷ್ಟಾಚಾರ ಕಿತ್ತೊಗೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಈ ವರ್ಷಾಂತ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಎಪಿ 92 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿಯೂ ಗೆದ್ದು ಹಿಮಾಚಲ ಪ್ರದೇಶದಿಂದ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಜನಕಲ್ಯಾಣ ಯೋಜನೆ ರೂಪಿಸುವಾಗ ಬಜೆಟ್ ಮಿತಿಯಿರಲಿ: ಸುಪ್ರೀಂಕೋರ್ಟ್
Himachal Pradesh | AAP national convenor & Delhi CM Arvind Kejriwal along with Punjab CM Bhagwant Mann hold a roadshow in Mandi
First, we eradicated corruption in Delhi & then in Punjab, now it's time to uproot corruption from Himachal Pradesh: Arvind Kejriwal pic.twitter.com/UprzNyOeoo
ನಾವು ಸಾಮಾನ್ಯ ಜನರು, ನಮಗೆ ರಾಜಕೀಯ ಮಾಡುವುದು ಗೊತ್ತಿಲ್ಲ. ಬದಲಾಗಿ, ಜನರಿಗಾಗಿ ಕೆಲಸ ಮಾಡುವುದು, ಶಾಲೆಗಳನ್ನು ನಿರ್ಮಿಸುವುದು ಮತ್ತು ಭ್ರಷ್ಟಾಚಾರ ಕೊನೆಗೊಳಿಸುವುದು ಹೇಗೆ? ಎಂಬುದು ಗೊತ್ತಿದೆ. ಭಗವಂತ್ ಮಾನ್ ಮುಖ್ಯಮಂತ್ರಿಯಾದ ನಂತರ ನಾವು ಪಂಜಾಬ್‌ನಲ್ಲಿ ಕೇವಲ 20 ದಿನಗಳಲ್ಲಿ ಭ್ರಷ್ಟಾಚಾರವನ್ನು ಕೊನೆಗೊಳಿಸಿದ್ದೇವೆ. ಈಗ ಹಿಮಾಚಲ ಪ್ರದೇಶದಲ್ಲೂ ಕ್ರಾಂತಿ ನಡೆಯಬೇಕು ಎಂದು ಕರೆ ನೀಡಿದರು.
ಶಿಮ್ಲಾ: ರಷ್ಯಾ, ಉಕ್ರೇನ್ ನಡುವಿನ ಯುದ್ಧದಲ್ಲಿ ಸಿಲುಕಿದ್ದ ಮಗಳನ್ನು ಅಪಾಯದಿಂದ ಪಾರು ಮಾಡಿ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಕಾರಣಕ್ಕೆ ತಂದೆಯೊಬ್ಬರು ಪಿಎಂ ಕೇರ್ಸ್ ಫಂಡ್‍ಗೆ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಯುದ್ಧದ ನಡುವೆ ಬಂಕರ್‌ನಲ್ಲಿ ಉಳಿದುಕೊಂಡಿದ್ದ 32 ಜನ ಹಿಮಾಚಲಪ್ರದೇಶದ ವಿದ್ಯಾರ್ಥಿಗಳ ತಂಡ ಭಾನುವಾರ ಸುರಕ್ಷಿತವಾಗಿ ದೆಹಲಿ ಬಂದು ತಲುಪಿತ್ತು. ಈ ತಂಡದಲ್ಲಿ ಅಂಕಿತಾ ಠಾಕೂರ್ ಕೂಡ ಒಬ್ಬರಾಗಿದ್ದರು. ಅಂಕಿತಾ ಠಾಕೂರ್ ಹಿಮಾಚಲಪ್ರದೇಶದ ಹಮೀರ್‍ಪುರ ಜಿಲ್ಲೆಯ ಚುನ್ಹಾಲ್ ಗ್ರಾಮದವರು. ಉನ್ನತ ವ್ಯಾಸಂಗಕ್ಕಾಗಿ ಉಕ್ರೇನ್‍ಗೆ ತೆರಳಿದ್ದರು. ಈ ಮಧ್ಯೆ ಉಕ್ರೇನ್‍ನಲ್ಲಿ ಯುದ್ಧ ಆರಂಭವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನೂ ಓದಿ: ಭಾರತದ ಮೇಲೆ ಯುದ್ಧದ ಎಫೆಕ್ಟ್: ಖಾದ್ಯತೈಲ, ಗೋಧಿ, ಸಿಮೆಂಟ್, ಕಬ್ಬಿಣ ದುಬಾರಿ
ಅಂಕಿತಾ ಠಾಕೂರ್ ತಂದೆ ಜಿಪಿ ಸಿಂಗ್ ಆರ್ಯುವೇದ ವೈದ್ಯರು. ತಾಯಿ ಅನಿತಾ ದೇವಿ ಗೃಹಿಣಿ. ಮಗಳು ಅಂಕಿತಾ ಠಾಕೂರ್‌ರನ್ನು ಉನ್ನತ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‍ಗೆ ಕಳುಹಿಸಿದ್ದರು. ಈ ನಡುವೆ ಏಕಾಏಕಿ ರಷ್ಯಾ, ಉಕ್ರೇನ್ ಮೇಲೆ ಯುದ್ಧ ಘೋಷಿಸಿತ್ತು. ಈ ವೇಳೆ ಮಗಳ ಸ್ಥಿತಿಯನ್ನು ಕಂಡು ಮರುಗಿದ್ದ ಪೋಷಕರು ಮಗಳನ್ನು ಹೇಗಾದರೂ ಮಾಡಿ ಕರೆ ತನ್ನಿ ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಖಾರ್ಕಿವ್‌ನಲ್ಲಿ ಸಿಲುಕಿದ್ದ ಎಲ್ಲಾ ಭಾರತೀಯರ ರಕ್ಷಣೆ – ಎಂಇಎ
ಕಡೆಗೂ ಯುದ್ಧದ ನಡುವೆ ಕೆಂದ್ರ ಸರ್ಕಾರದ ಯಶಸ್ವಿ ಕಾರ್ಯಚರಣೆ ಆಪರೇಷನ್ ಗಂಗಾದಡಿ ಅಂಕಿತಾ ಠಾಕೂರ್‌ರನ್ನು ಯಶಸ್ವಿಯಾಗಿ ತಾಯ್ನಾಡಿಗೆ ಮರಳಿದರು. ಇದರಿಂದ ಆಕೆಯ ಪೋಷಕರು ತುಂಬಾ ಸಂತೋಷಗೊಂಡಿದ್ದಾರೆ. ಮಗಳ ಮುಖ ಮತ್ತೆ ನೋಡಳು ಸಿಗುತ್ತೋ ಇಲ್ಲವೋ ಎಂಬ ಆತಂಕದಲ್ಲಿದ್ದ ಜಿಪಿ ಸಿಂಗ್ ಮತ್ತು ಅನಿತಾ ದೇವಿಗೆ ಮಗಳು ಮತ್ತೆ ಮನೆಗೆ ಬಂದಾಗ ಸಂತಸವಾಗಿದೆ. ಈ ಸಂತಸದ ನಡುವೆ ಅಂಕಿತಾ ಠಾಕೂರ್‍ರನ್ನು ಸುರಕ್ಷಿತವಾಗಿ ಕರೆತಂದ ಕಾರಣಕ್ಕಾಗಿ ಅದರ ಖರ್ಚು ಎಂಬಂತೆ, ಜಿಪಿ ಸಿಂಗ್ ಕೇಂದ್ರ ಸರ್ಕಾರದ ಪಿಎಂ ಕೇರ್ಸ್ ಫಂಡ್‍ಗೆ 21 ಸಾವಿರ ರೂ. ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಪರಿಹಾರ ನಿಧಿಗೆ 11 ಸಾವಿರ ರೂ. ದೇಣಿಗೆಯಾಗಿ ನೀಡಿದ್ದಾರೆ.
ಹಿಮಾಚಲ ಪ್ರದೇಶದ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಶಿಕ್ಷಣ ಪಡೆಯುತ್ತಿದ್ದರು ಎಂಬ ಮಾಹಿತಿ ಸರ್ಕಾರ ನೀಡಿದೆ. ಅಲ್ಲದೆ ಬಜೆಟ್ ಅಧಿವೇಶನದಲ್ಲಿ ಸಿಎಂ ಜೈ ರಾಮ್ ಠಾಕೂರ್ ಉಕ್ರೇನ್‍ನಲ್ಲಿ ಸಿಲುಕಿರುವ ಹಿಮಾಚಲ ಪ್ರದೇಶದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಚರಣೆ ಬಗ್ಗೆ ವಿದೇಶಾಂಗ ಸಚಿವಾಲಯದ ಜೊತೆ ಮಾತನಾಡಿದ್ದರು. ಈಗಾಗಲೇ ಕೆಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ರಾಜ್ಯಕ್ಕೆ ಆಗಮಿಸಿದ್ದು, ಇನ್ನಷ್ಟು ವಿದ್ಯಾರ್ಥಿಗಳು ಬರಬೇಕಾಗಿದೆ.
ಉಕ್ರೇನ್‍ಗೆ ವಿದ್ಯಾರ್ಥಿಗಳು ಸ್ವತಂ ಖರ್ಚಿನಲ್ಲಿ ಹೋಗಿದ್ದಾರೆ. ಹೀಗಾಗಿ ಅವರನ್ನು ಭಾರತ ಸರ್ಕಾರ ಮಾನವೀಯತೆ ದೃಷ್ಟಿಯಿಂದ ಉಚಿತವಾಗಿ ಕರೆ ತಂದರೂ ವಿಮಾನ ಪ್ರಯಾಣದ ವೆಚ್ಚವನ್ನು ಅವರು ನೀಡಬೇಕು. ಜನರ ತೆರಿಗೆ ದುಡ್ಡಿನಿಂದ ಅವರು ವಿದೇಶದಿಂದ ಬರುವುದು ಸರಿಯಲ್ಲ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡಯುತ್ತಿದೆ. ಈ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮಗಳ ವಿಮಾನ ಪ್ರಯಾಣದ ಖರ್ಚನ್ನು ಪಿಎಂ ಕೇರ್ಸ್ ಫಂಡ್‌ಗೆ ಜಿಪಿ ಸಿಂಗ್ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಶಿಮ್ಲಾ: ಕೋಣದ ಮುಂದೆ ಕಿನ್ನರಿ ಬಾರಿಸಿದರೆ ಪ್ರಯೋಜನವಿಲ್ಲ ಎಂಬ ಗಾದೆ ಮಾತೊಂದಿದೆ. ಆದರೆ ಈ ವೀಡಿಯೋ ಗಾದೆಯನ್ನು ಸುಳ್ಳಾಗಿಸಿದೆ.
ಹೌದು. ಮನೆಯೊಡತಿಯ ಜೊತೆಗೆ ಎಮ್ಮೆಯೊಂದು ತಾನು ಕುಣಿದು ಕುಪ್ಪಳಿಸುವ ಮೂಲಕ ನೆಟ್ಟಿಗರ ಮನಸೆಳೆದಿದೆ. ಹಿಮಾಚಲಪ್ರದೇಶದ ಗ್ರಾಮವೊಂದರಲ್ಲಿ ನಡೆದ ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವೀಡಿಯೋದಲ್ಲಿ ಎಮ್ಮೆ ಬಹಳ ಜೋಶ್ ನಿಂದಲೇ ಕುಣಿಯುವುದನ್ನು ನಾವು ಕಾಣಬಹುದಾಗಿದೆ. ಮನೆಯ ಒಡತಿ ಎಮ್ಮೆಯ ಮುಂದೆ ಹಾಡಿನೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಎಮ್ಮೆಯನ್ನು ಕೂಡ ಕುಣಿಯುವಂತೆ ಪ್ರೇರೇಪಿಸಿದ್ದಾರೆ.
ಹಟ್ಟಿಯಲ್ಲಿ ಎಮ್ಮೆಯನ್ನು ಕಟ್ಟಿ ಹಾಕಲಾಗಿದೆ. ಅಲ್ಲದೆ ಅದರ ಮೇಲೆ ಕಂಬಳಿ ಕೂಡ ಹೊದಿಸಲಾಗಿದೆ. ಮಹಿಳೆಯ ಹಾಡು ಹೇಳಿ, ಡ್ಯಾನ್ಸ್ ಮಾಡುತ್ತಿದ್ದಂತೆಯೇ ಎಮ್ಮೆ ಕೂಡ ಕುಣಿಯಲು ಆರಂಭಿಸಿದೆ. ಈ ವೇಳೆ ಅಲ್ಲೆ ಇದ್ದ ಪುಟ್ಟ ಮಕ್ಕಳು ಜೋರಾಗಿ ನಗುತ್ತಿರುವುದು ಕೇಳುತ್ತಿದೆ. ಡ್ಯಾನ್ಸ ಮಾಡುವ ರಭಸದಲ್ಲಿ ಎಮ್ಮೆ ಮೇಲಿದ್ದ ಕಂಬಳಿ ಕೂಡ ಕೆಳಗೆ ಬಿದ್ದಿದೆ.
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಎಮ್ಮೆಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಮೆಚ್ಚುಗೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಶಿಮ್ಲಾ: ಜೋರಾಗಿ ಮಾತನಾಡಿದರೆ ಕೊರೊನಾ ವೈರಸ್ ಹರಡಬಹುದು ಎಂದು ಹಿಮಾಚಲಪ್ರದೇಶದ ವಿಧಾನಸಭೆ ಸ್ಪೀಕರ್ ವಿಪಿನ್ ಸಿಂಗ್ ಪಾರ್ಮರ್ ಹೇಳಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ಕೋವಿಡ್ 19 ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಶಾಸಕರ ಬಳಿ ಸ್ಪೀಕರ್ ಮನವಿ ಮಾಡಿದರು. ಸೋಮವಾರ ಬಿಜೆಪಿ ಶಾಸಕಿ ರೀಟಾ ದೇವಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿತ್ತು.
ರೀಟಾ ದೇವಿ ಅವರು ಸೋಮವಾರ ಸಂಜೆ ಕೋವಿಡ್ 19 ಟೆಸ್ಟ್ ಮಾಡಿದ್ದು, ಇದಕ್ಕೂ ಮೊದಲು ಅವರು ಅಧಿವೇಶನದಲ್ಲಿ ಹಾಜರಾಗಿದ್ದರು. ಆದರೆ ವಿಧಾನಸಭೆಯಲ್ಲಿ ಅವರು ಇತರ ಶಾಸಕರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು.
ಅಧಿವೇಶನದ ಎರಡನೇ ದಿನವಾದ ಇಂದು ಆರಂಭದಲ್ಲಿ ಸ್ಪೀಕರ್ ಅವರು. ಕೊರೊನಾ ಮಾರ್ಗದರ್ಶಿ ನಿಯಮಗಳ ಪ್ರಕಾರ, ಜೋರಾಗಿ ಮಾತನಾಡುವುದು ಸಹ ಕೋವಿಡ್ 19 ವೈರಸ್ ಹರಡಲು ಕಾರಣವಾಗಬಹುದು. ಹೀಗಾಗಿ ಕೊರೊನಾ ವೈರಸ್ ಹರಡದಂತೆ ತಡೆಯಲು ಸಾಮಾನ್ಯ ರೀತಿಯಲ್ಲಿ(ಸ್ವಲ್ಪ ಮೆತ್ತಗೆ) ಮಾತನಾಡಿ ಎಂದು ಸಲಹೆ ನೀಡಿದರು. ಸ್ಪೀಕರ್ ಈ ರೀತಿಯಾಗಿ ಹೇಳುತ್ತಿದ್ದಂತೆಯೇ ಇಡೀ ಅಧಿವೇಶನ ಒಂದು ಬಾರಿ ನಡೆಗಡಲಲ್ಲಿ ತೇಲಾಡಿತು. ಅಲ್ಲದೆ ಚರ್ಚೆಯ ವೇಳೆ ಹಲವರು ಜೋರಾಗಿಯೇ ಮಾತನಾಡಿದರು.
ಈ ಮಧ್ಯೆ ಕೊರೊನಾ ವೈರಸ್ ನಿಂದ ಈಗತಾನೇ ಚೇತರಿಸಿಕೊಂಡ ಬಳಿಕ ಇಂದು ಅಧಿವೇಶನಕ್ಕೆ ಹಾಜರಾದ ಬಿಜೆಪಿ ಶಾಸಕ ಪರಮ್‍ಜಿತ್ ಸಿಂಗ್ ಪಮ್ಮಿಯನ್ನು ಸ್ಪೀಕರ್ ಸ್ವಾಗತಿಸಿದರು. ಪರಮ್‍ಜಿತ್ ಅವರಿಗೆ ಆಗಸ್ಟ್ 17ರಂದು ನಡೆಸಿದ ಟೆಸ್ಟ್ ವೇಳೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಸಚಿವ ಸುಖ್ ರಾಮ್‍ಚೌಧರಿ ಅವರು ಸೋಮವಾರ ಮತ್ತು ಮಂಗಳವಾರದ ಅಧಿವೇಶನದಲ್ಲಿ ಭಾಗಿಯಾದರು. ಇವರು ಕೂಡ ಆಗಸ್ಟ್ 6ರಂದು ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಸದ್ಯ ಕೋವಿಡ್ 19ನಿಂದ ಚೇತರಿಸಿಕೊಂಡಿದ್ದಾರೆ.
ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಯಾವ ಶಾಸಕರು ಕೂಡ ಅಸೆಂಬ್ಲಿಗೆ ಹಾಜರಾಗಬೇಡಿ. ಅಲ್ಲದೆ ಒಳಪ್ರವೇಶಿಸುವಾಗ ಎಲ್ಲರೂ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಗಾಗುವಂತೆ ಸ್ಪೀಕರ್ ತಿಳಿಸಿದರು.
ಶಿಮ್ಲಾ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ತಾನು ಸಾಕಿದ ಹಸುವನ್ನೇ ಮಾರಿ ಆನ್‍ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಕೊಡಿಸಿದ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಸದಾ ಮಾನವೀಯತೆಯ ಮೂಲಕ ರಿಯಲ್ ಲೈಫ್‍ನಲ್ಲಿ ಹೀರೋ ಆಗಿರೋ ಬಾಲಿವುಡ್ ನಟ ಸೋನು ಸೂದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಹೌದು. ಹಸು ಮಾರಿದ ತಂದೆಯ ಸುದ್ದಿಗೆ ಟ್ವೀಟ್ ಮಾಡಿರುವ ಸೋನು ಸೂದ್, ಆನ್‍ಲೈನ್ ಶಿಕ್ಷಣಕ್ಕಾಗಿ ಮಾರಿದ ಹಸುವನ್ನು ಮಕ್ಕಳ ತಂದೆಗೆ ವಾಪಸ್ ಕೊಡಿಸುತ್ತೇನೆ. ಸದ್ಯ ನಂಗೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಯಾರಾದರೂ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಟ ಈ ರೀತಿ ಮನವಿ ಮಾಡಿಕೊಳ್ಳುತ್ತಿದ್ದಂತೆಯೇ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೊದಲು ಅಂದರೆ ಲಾಕ್‍ಡೌನ್ ಸಮಯದಲ್ಲಿ ಹಲವಾರು ಪ್ರವಾಸಿ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಕಾರ್ಯ ಮಾಡಿದ್ದರು. ಅಲ್ಲದೆ 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದರು. ಇತ್ತೀಚೆಗೆ ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್ ಶೀಲ್ಡ್ ನೀಡುವ ಮೂಲಕ ಅನೇಕ ಮಾನವೀಯ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಿಲುಕಿದ್ದ ನೂರಾರು ಕನ್ನಡಿಗರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ ಸೋನು ಸೂದ್
ಇದೀಗ ಹಸು ವಾಪಸ್ ಮಾಡುತ್ತೇನೆ ಎಂದು ಬಡ ಕುಟುಂಬದ ಬೆನ್ನಿಗೆ ನಿಂತಿರುವ ನಟನ ಪೋಸ್ಟ್ ಗೆ ಹಲವಾರು ಕಮೆಂಟ್ ಗಳು ಬಂದಿವೆ. ಒಬ್ಬ ನಟ ಏಕಾಂಗಿಯಾಗಿ ನಮ್ಮ ದೇಶದ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದಾರೆ. ಅಂತೆಯೇ ದೇಶದಲ್ಲಿರುವ ಎಲ್ಲಾ ರಾಜಕೀಯ ವ್ಯಕ್ತಿಗಳಿಂದ ಎಷ್ಟು ಇಂತಹ ಮಾನವೀಯ ಕೆಲಸಗಳು ಆಗಬಹುದು ಎಂದು ನೀವೇ ಊಹಿಸಿಕೊಳ್ಳಿ. ಸೋನು ಸೂದ್ ಅವರು ಮಾಡುತ್ತಿರುವ ಕೆಲಸಕ್ಕೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಲು ಇಷ್ಟಪಡುತ್ತೇನೆ. ದೇವರು ನಿಮಗೆ ಹೆಚ್ಚಿನ ಆರೋಗ್ಯ ಹಾಗೂ ಸಂಪತ್ತನ್ನು ಕರುಣಿಸಲಿ. ನಿಮ್ಮಿಂದ ಇನ್ನಷ್ಟು ಒಳ್ಳೆಯ ಕಾರ್ಯಗಳು ಆಗಲಿ. ಜೈ ಹಿಂದ್ ಸರ್ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಈ ಕಾರಣಕ್ಕಾಗಿಯೇ ನಾನು ಈ ವ್ಯಕ್ತಿಯನ್ನು ತುಂಬಾ ಇಷ್ಟಪಡುತ್ತಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೋನು ಸೂದ್ ಆರ್ಥಿಕ ನೆರವು
ಏನಿದು ಘಟನೆ:
ಕೋವಿಡ್ 19 ಲಾಕ್‍ಡೌನ್ ಪರಿಣಾಮ ಶಾಲೆಯ ಮಕ್ಕಳಿಗೆ ಆನ್‍ಕ್ಲಾಸ್ ಆರಂಭಿಸಲಾಗುತ್ತಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಕಡು ಬಡ ಕುಟುಂಬದ ಕುಲ್ದೀಪ್ ಕುಮಾರ್ ತನ್ನ ಮಕ್ಕಳು ಇತರರಂತೆ ಓದಬೇಕು ಎಂದು ತಾನು ಸಾಕಿದ್ದ ಹಸುವನ್ನೇ ಮಾರಿ 6 ಸಾವಿರ ರೂ. ಕೊಟ್ಟು ಮೊಬೈಲ್ ಖರೀದಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಕುಲ್ದೀಪ್, ನನ್ನ ಮಕ್ಕಳು ಆನ್‍ಲೈನ್ ತರಗತಿಗೆ ಹಾಜರಾಗಲು ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಲು ನನ್ನ ಕೈಯಲ್ಲಿ ಸಾಧ್ಯವಿರಲಿಲ್ಲ. ಹೀಗಾಗಿ ನಾನು ಸಾಕಿದ್ದ ಹಸುವನ್ನು ಮಾರಲು ನಿರ್ಧರಿಸಿದೆ. ಅಲ್ಲದೆ 6 ಸಾವಿರ ರೂಪಾಯಿಗೆ ಹಸುವನ್ನು ಮಾರಿಬಿಟ್ಟೆ ಎಂದು ಕುಮಾರ್ ಗದ್ಗದಿತರಾಗಿದ್ದರು. ಇದನ್ನೂ ಓದಿ: ‘ಮಹಾ’ ಪೊಲೀಸರಿಗೆ 25 ಸಾವಿರ ಫೇಸ್‍ಶೀಲ್ಡ್ ನೀಡಿದ ನಟ ಸೋನು ಸೂದ್
ಶಿಮ್ಲಾ: ತಿಂಡಿ ತಗೊಂಡು ಬಾ ಎಂದು 9 ವರ್ಷದ ಬಾಲಕಿ ಕೈಯಲ್ಲಿ 10 ರೂ ಕೊಟ್ಟು, ಆಕೆ ಅಂಗಡಿಗೆ ಹೋಗುತ್ತಿದ್ದಂತೆಯೇ ಆಕೆಯನ್ನು ದೂಡಿ ಅತ್ಯಾಚಾರವೆಸಗಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಕುಲು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಕೇಂದ್ರದ ಬಳಿಯೇ ಭಾನುವಾರ ನಡೆದಿದೆ. ಘಟನೆ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನಂತೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯನ್ನು ದೇವೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಭರೇಶ್ ಗ್ರಾಮದವನು ಎನ್ನಲಾಗಿದೆ. ಜಿಲ್ಲೆಯ ಅನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮತದಾನ ಕೇಂದ್ರದ ಬಳಿಯ ಶಾಲಾ ಮೈದಾನದಲ್ಲಿ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಆಕೆಯನ್ನು ಕರೆದ ಆರೋಪಿ ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ.
ಆರೋಪಿ ಬಾಲಕಿಗೆ 10 ರೂ. ಕೊಟ್ಟು ತಿಂಡಿ ತರುವಂತೆ ಕಳುಹಿಸಿದ್ದಾನೆ. ಹೀಗಾಗಿ ಬಾಲಕಿ ಹಣ ಹಿಡಿದುಕೊಂಡು ಅಂಗಡಿಯತ್ತ ತೆರಳುತ್ತಿದ್ದಳು. ಈ ವೇಳೆ ಆರೋಪಿ ಆಕೆಯನ್ನು ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದೊಳಗೆ ಎಳೆದುಕೊಂಡು ಆಕೆಯನ್ನು ರೇಪ್ ಮಾಡುವ ಮೂಲಕ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.
ಸಂತ್ರಸ್ತೆಯ ತಾಯಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಬಾಲಕಿ ಆರೋಪಿಯ ಮನೆಗೆ ಆಟವಾಡಲು ತೆರಳಿರಬಹುದೆಂದು ನಂಬಿದ್ದರು. ಆದರೆ ಆತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ತಾಯಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಸ್‍ಪಿ ತೇಜಿಂದ್ರ ವರ್ಮಾ ತಿಳಿಸಿದ್ದಾರೆ.