Tag: ಹಿಮಪಾತ

  • ಪಾಕಿಸ್ತಾನದ ಮರ‍್ರೆಯಲ್ಲಿ ಭಾರೀ ಹಿಮಪಾತ – 10 ಮಕ್ಕಳು ಸೇರಿ 22 ಮಂದಿ ಬಲಿ

    ಪಾಕಿಸ್ತಾನದ ಮರ‍್ರೆಯಲ್ಲಿ ಭಾರೀ ಹಿಮಪಾತ – 10 ಮಕ್ಕಳು ಸೇರಿ 22 ಮಂದಿ ಬಲಿ

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಸಿದ್ಧ ಪ್ರವಾಸಿ ತಾಣ ಮರ‍್ರೆಯಲ್ಲಿ ಭಾರೀ ಹಿಮಪಾತದಿಂದಾಗಿ, ಪ್ರವಾಸಿಗರು ಹಿಮಾವೃತವಾದ ತಮ್ಮ ವಾಹನಗಳಲ್ಲೇ ಸಿಲುಕಿದ್ದಾರೆ. ನಿನ್ನೆಯಿಂದ ಒಟ್ಟು 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಾವಿರಾರು ಪ್ರವಾಸಿಗರು ರಾವಲ್ಪಿಂಡಿ ಜಿಲ್ಲೆಯ ಮರ‍್ರೆಗೆ ತೆರಳಿದ್ದು, ತಮ್ಮ ವಾಹನಗಳನ್ನು ಹಿಮದ ರಾಶಿಯಿಂದ ತೆಗೆಯಲಾಗದೇ ಸಿಲುಕಿಕೊಂಡಿದ್ದಾರೆ. ಸದ್ಯ ಪಾಕಿಸ್ತಾನ ಸರ್ಕಾರ ಮರ‍್ರೆ ಪ್ರವಾಸವನ್ನು ನಿರ್ಬಂಧಿಸಿದೆ. ಇದನ್ನೂ ಓದಿ: ಹಿಮಪಾತದಿಂದ 8 ಪ್ರವಾಸಿಗರ ದುರ್ಮರಣ – ತುರ್ತು ಪರಿಸ್ಥಿತಿ ಘೋಷಿಸಿದ ಪಾಕಿಸ್ತಾನ

    ಮರ‍್ರೆಯಲ್ಲಿ ಸಿಲುಕಿಕೊಂಡಿರುವ ಸಾವಿರಾರು ಪ್ರವಾಸಿಗರನ್ನು ರಕ್ಷಿಸಲು ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ಜರ್, ರಕ್ಷಣಾ ಪಡೆಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಪೊಲೀಸ್ ಠಾಣೆ ಹಾಗೂ ಆಡಳಿತ ಕಚೇರಿಗಳಲ್ಲಿ ತುರ್ತು ಪರಿಸ್ಥಿತಿ ಹೇರಿದೆ. ಇದನ್ನೂ ಓದಿ: ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ

    ಇದೀಗ ಮರ‍್ರೆಯಲ್ಲಿ ಸಿಲುಕಿದ್ದ 1,122 ಜನರನ್ನು ರಕ್ಷಿಸಲಾಗಿದೆ. 22 ಮಂದಿ ಮೃತರಲ್ಲಿ 10 ಮಕ್ಕಳೂ ಸೇರಿದ್ದಾರೆ ಎಂದು ಮಾಹಿತಿ ದೊರಕಿದೆ. ರಸ್ತೆಗಳನ್ನು ತೆರವುಗೊಳಿಸಲು ಮತ್ತು ಸಿಲುಕಿರುವ ಜನರನ್ನು ರಕ್ಷಿಸಲು ಮಿಲಿಟರಿಯನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಉತ್ತರಾಖಂಡ್ ಹಿಮ ಪ್ರಳಯ – ಸಾವಿನ ಸಂಖ್ಯೆ 31ಕ್ಕೆ ಏರಿಕೆ, 160 ಮಂದಿ ನಾಪತ್ತೆ

    ಉತ್ತರಾಖಂಡ್ ಹಿಮ ಪ್ರಳಯ – ಸಾವಿನ ಸಂಖ್ಯೆ 31ಕ್ಕೆ ಏರಿಕೆ, 160 ಮಂದಿ ನಾಪತ್ತೆ

    ಡೆಹ್ರಾಡೂನ್: ಹಿಮ ಪ್ರಳಯಕ್ಕೆ ತುತ್ತಾದ ಉತ್ತರಾಖಂಡ್‍ನ ಚಮೋಲಿ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ  ರಕ್ಷಣಾ ಕಾರ್ಯ ಮುಂದುವರಿದಿದೆ.

    ತಪೋವನ ಜಲವಿದ್ಯುತ್ ಕೇಂದ್ರದ ಸುರಂಗದಲ್ಲಿ ತುಂಬಿದ ಕೆಸರನ್ನು ತೆರವು ಮಾಡಲಾಗಿದ್ದು, ಈ ವೇಳೆ ಹಲವು ಶವ ಪತ್ತೆಯಾಗಿವೆ. ಇದುವರೆಗೂ ಮೃತರ ಸಂಖ್ಯೆ 31ಕ್ಕೆ ಹೆಚ್ಚಳವಾಗಿದೆ. ಸರಿಸುಮಾರು 30 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 160 ಮಂದಿ ಪತ್ತೆಯಾಗಬೇಕಿದೆ.

    ಹಿಮಸುನಾಮಿಗೆ ತುತ್ತಾದ ಗ್ರಾಮಗಳಲ್ಲಿಯೂ ರಕ್ಷಣಾ ಕಾರ್ಯಚರಣೆಗಳು ಭರದಿಂದ ನಡೆಯುತ್ತಿವೆ. ಹೆಲಿಕಾಪ್ಟರ್ ಮೂಲಕ ಆಹಾರ ವಿತರಣೆ ಮುಂದುವರಿದಿದೆ. ಈ ಮಧ್ಯೆ ಹಿಮಪ್ರಳಯಕ್ಕೆ ಮುನ್ನ ಹಾಗೂ ಹಿಮಪ್ರಳಯದ ನಂತರ ಎಂಬ ಎರಡು ಸ್ಯಾಟಲೈಟ್ ಇಮೇಜ್‍ಗಳನ್ನು ಪ್ಲಾನೆಟ್ ಲ್ಯಾಬ್ಸ್ ಇಂಕ್ ರಿಲೀಸ್ ಮಾಡಿದೆ. ಇದನ್ನೂ ಓದಿ: ನಂದಾದೇವಿ ಹಿಮಪರ್ವತ ಕುಸಿತ, ಕೊಚ್ಚಿ ಹೋಯ್ತು ಸೇತುವೆ – ನಡೆದಿದ್ದು ಏನು?

    ಹಿಮ ಪ್ರಳಯಕ್ಕೆ ಮುನ್ನ ಅಂದ್ರೆ ಫೆಬ್ರವರಿ 6ರಂದು ನಿರ್ಗಲ್ಲುಗಳು ಇರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಫೆಬ್ರವರಿ 7ರಂದು ನಿರ್ಗಲ್ಲುಗಳು ಮುರಿದು ಬಿದ್ದಿರೋದು ಸ್ಯಾಟಲೈಟ್ ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. 1970ರಲ್ಲಿ ನಡೆದಿದ್ದ ಚಿಪ್ಕೋ ಚಳಿವಳಿಯ ಕೇಂದ್ರಬಿಂದು ರೇಣಿ ಗ್ರಾಮದ ಸುತ್ತಮುತ್ತಲೇ ಈ ದುರಂತ ನಡೆದಿರೋದು ವಿಪರ್ಯಾಸ.  ಇದನ್ನೂ ಓದಿ: ಹಿಮ ಪ್ರಳಯ- ಒಂದು ಫೋನ್ ಕರೆಯಿಂದ ಉಳಿಯಿತು 12 ಜನರ ಜೀವ

  • ಹಿಮ ಪ್ರಳಯ- ಒಂದು ಫೋನ್ ಕರೆಯಿಂದ ಉಳಿಯಿತು 12 ಜನರ ಜೀವ

    ಹಿಮ ಪ್ರಳಯ- ಒಂದು ಫೋನ್ ಕರೆಯಿಂದ ಉಳಿಯಿತು 12 ಜನರ ಜೀವ

    ಡೆಹರಾಡೂನ್: ಭಾನುವಾರ ಬೆಳಗ್ಗೆ ಸಂಭವಿಸಿದ ಹಿಮ ಪ್ರಳಯದಿಂದ ಉತ್ತರಾಖಂಡ ಇನ್ನೂ ಚೇತರಿಸಿಕೊಂಡಿಲ್ಲ. ಒಂದು ಫೋನ್ ಕಾಲ್ ನಿಂದ 12 ಜನರ ಜೀವ ಉಳಿದ ವಿಷಯ ಬೆಳಕಿಗೆ ಬಂದಿದೆ. ಸುರಂಗದಲ್ಲಿ ಸಿಲುಕಿದ್ದ 12 ಜನರ ಜೀವವನ್ನ ಒಂದು ಫೋನ್ ಕರೆ ಉಳಿಸಿದೆ.

    ಸುರಂಗದಲ್ಲಿ ಸಿಲುಕಿದ್ದ ಓರ್ವ ಕಾರ್ಮಿಕ ತಾವು ಹೊರ ಬಂದ ಅಚ್ಚರಿಯ ವಿಷಯವನ್ನ ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ದಿಢೀರ್ ಅಂತ ಸುರಂಗದೊಳಗೆ ನೀರು ಮತ್ತು ಕೆಸರು ಸೇರಿಕೊಳ್ಳಲಾರಂಭಿಸಿತು. ಹೊರ ಬರುವ ಎಲ್ಲ ಮಾರ್ಗಗಳು ಬಂದ್ ಆಗಿದ್ದರಿಂದ ಸುರಂಗದಲ್ಲಿದ್ದ 12 ಜನರು ಜೀವದ ಆಸೆಯನ್ನ ಚೆಲ್ಲಿ ಭಯದ ಸ್ಥಿತಿಯಲ್ಲಿದ್ದೀವಿ. ಈ ವೇಳೆ ನಮ್ಮ ಜೊತೆಯಲ್ಲಿದ್ದ ಓರ್ವ ವ್ಯಕ್ತಿಯ ಮೊಬೈಲ್ ನಲ್ಲಿ ನೆಟ್‍ವರ್ಕ್ ಸಿಕ್ತು. ಕೂಡಲೇ ನಮ್ಮ ಅಧಿಕಾರಿಗಳಿಗೆ ಫೋನ್ ಮಾಡಿ ತಾವು ಸಿಲುಕಿರುವ ವಿಷಯ ಮತ್ತು ಸ್ಥಳವನ್ನ ತಿಳಿಸಿದ್ದೀವಿ. ಕೆಲ ಗಂಟೆಗಳ ಬಳಿಕ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸರು ನಮ್ಮೆಲ್ಲರನ್ನ ರಕ್ಷಿಸಿದರು ಎಂದು ಹೇಳಿದ್ದಾರೆ.

    ನಾನು ಚಮೋಲಿಯ ಧಾಕಾ ಗ್ರಾಮದ ನಿವಾಸಿ. ತಪೋವನ ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಸುರಂಗದೊಳಗೆ ನೀರು ಬಂದಾಗ ಜೀವದ ಮೇಲಿನ ಆಸೆಯನ್ನೇ ಬಿಟ್ಟಿದ್ದೆ. ಕೊನೆಗೆ ಸುರಂಗದಿಂದ ಸಣ್ಣದಾದ ಬೆಳಕಿನ ಕಿರಣ ಕಾಣಿಸಿದ್ದರಿಂದ ಉಸಿರಾಡಲ ಸಮಸ್ಯೆಯಾಗಲಿಲ್ಲ. ನಮ್ಮ ಸಹದ್ಯೋಗಿ ಫೋನ್ ಮಾಡಿದ್ದರಿಂದ ನಾವು ಬದುಕುಳಿದಿದ್ದೇವೆ ಎಂದು ಮತ್ತೋರ್ವ ನೌಕರ ತಿಳಿಸಿದ್ದಾರೆ.

    ಹಿಮ ಸುನಾಮಿಯಲ್ಲಿ ಕೊಚ್ಚಿಹೋದ 170 ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇಂದು ನಾಲ್ವರ ಶವ ಪತ್ತೆಯಾಗಿದ್ದು, ಮೃತರ ಸಂಖ್ಯೆ 18ಕ್ಕೆ ಹೆಚ್ಚಿದೆ. ರಕ್ಷಣಾ ಪಡೆಗಳು ಹರಸಾಹಸ ನಡೆಸಿ ತಪೊವನ ಸುರಂಗದಲ್ಲಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಿದ್ದಾರೆ. ಸುರಂಗದಲ್ಲಿ ತುಂಬಿಹೋಗಿರುವ ಕೆಸರಿನ ರಾಶಿಯನ್ನು ಹೊರಹಾಕಲು ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.

    250 ಮೀಟರ್ ಉದ್ದದ ಸುರಂಗದೊಳಗೆ 150 ಮೀಟರ್‍ವರೆಗೂ ಎಸ್‍ಡಿಆರ್‍ಎಫ್ ಪಡೆಗಳು ಅತೀಕಷ್ಟದಿಂದ ಹೋಗಿ ಕೆಸರಿನಲ್ಲಿ ಸಿಲುಕಿದ್ದ 30 ಮಂದಿಯನ್ನು ರಕ್ಷಿಸಿವೆ. ಮತ್ತೊಂದೆಡೆ ಧೌಲಿ ಗಂಗಾ ನದಿ ನೀರಿನ ಮಟ್ಟ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ದಿಢೀರ್ ಹಿಮ ಪ್ರಳಯದ ಕಾರಣ ತಪೋವನ್-ವಿಷ್ಣುಘಡ ಜಲವಿದ್ಯುತ್ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ 170 ಕಾರ್ಮಿಕರು ಕೊಚ್ಚಿಹೋಗಿದ್ರು. ಈ ಮಧ್ಯೆ, ಜಲವಿಲಯದಿಂದ ಪ್ರಾಣನಷ್ಟದ ಜೊತೆಗೆ ಭಾರೀ ಆಸ್ತಿ ಹಾನಿ ಸಂಭವಿಸಿದೆ.

  • ಉತ್ತರಾಖಂಡ್‍ನಲ್ಲಿ ಹಿಮ ಸುನಾಮಿ – ನದಿಯಲ್ಲಿ ದಿಢೀರ್ ಪ್ರವಾಹ

    ಉತ್ತರಾಖಂಡ್‍ನಲ್ಲಿ ಹಿಮ ಸುನಾಮಿ – ನದಿಯಲ್ಲಿ ದಿಢೀರ್ ಪ್ರವಾಹ

    – ನದಿಭಾಗದಲ್ಲಿ ಕಟ್ಟೆಚ್ಚರ ಘೋಷಣೆ
    – ನದಿಯಂತೆ ಹರಿದ ಹಿಮ

    ಡೆಹ್ರಾಡೂನ್:  ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದ ರೈನಿ ಗ್ರಾಮದಲ್ಲಿನ ವಿದ್ಯುತ್ ಯೋಜನೆಯ ಬಳಿ ಹಿಮಪಾತ ಸಂಭವಿಸಿದ ಹಿನ್ನೆಲೆಯಲ್ಲಿ ಧೌಲಿಗಂಗಾ ನದಿಯಲ್ಲಿ ನೀರಿನ ಮಟ್ಟ ಹಠಾತ್ತನೆ ಏರಿಕೆಯಾಗಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದ್ದು, 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

    ಈ ಪ್ರವಾಹದಿಂದಾಗಿ ಅನೇಕ ನದಿ ತೀರಗಳ ಅಂಚಿನಲ್ಲಿರುವ ಮನೆಗಳನ್ನು ನಾಶಪಡಿಸಿದೆ. ಹಿಮಪಾತದಲ್ಲಿ ಸಿಲುಕಿರುವ ಸಂತ್ರಸ್ತರ ರಕ್ಷಣೆಗಾಗಿ ನೂರಾರು ಐಟಿಬಿಪಿ ಸಿಬ್ಬಂದಿ ಕಾರ್ಯಚರಣೆ ಮಾಡುತ್ತಿದ್ದಾರೆ.

    ಧೌಲಿಗಂಗಾ ನದಿಯ ದಡದಲ್ಲಿರುವ ಹಳ್ಳಿಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವಂತೆ ಚಮೋಲಿ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ತೆರಳಿ ಪರಿಶೀಲನೆ ಮಾಡುತ್ತಿದ್ದಾರೆ.

    ಚಮೋಲಿ ಜಿಲ್ಲೆಯಲ್ಲಿ ನಡೆದಿರುವ ಘಟನೆ ತಿಳಿಯಿತು. ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ, ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ.

  • ಹಿಮಪಾತಕ್ಕೆ ರಸ್ತೆ ಬಂದ್ – ಸೇನೆಯ ವಾಹನದಲ್ಲಿಯೇ ಹೆರಿಗೆ

    ಹಿಮಪಾತಕ್ಕೆ ರಸ್ತೆ ಬಂದ್ – ಸೇನೆಯ ವಾಹನದಲ್ಲಿಯೇ ಹೆರಿಗೆ

    ಶ್ರೀನಗರ: ಕುಪ್ವಾರದಲ್ಲಿ ಹಿಮಪಾತದಿಂದ ರಸ್ತೆ ಬಂದ್ ಆಗಿದ್ದರಿಂದ ಸೈನಿಕರ ವಾಹನದಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಆರ್ಮಿ ಅಂಬುಲೆನ್ಸ್ ಮೂಲಕ ತಾಯಿ ಮತ್ತು ಮಗುವವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸೋಮವಾರ ಬೆಳಗ್ಗೆ ಕಲರೂಸ್ ಕಂಪನಿ ಕಮಾಂಡರ್ ಗೆ ಕೆರೆ ಮಾಡಿದ ಆಶಾ ಕಾರ್ಯಕರ್ತೆ ಗರ್ಭಿಣಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಹಿಮಪಾತದಿಂದಾಗಿ ಗ್ರಾಮಕ್ಕೆ ಯಾವುದೇ ಅಂಬುಲೆನ್ಸ್ ಬರುತ್ತಿಲ್ಲ. ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದರು.

    ಕೂಡಲೇ ಕಾರ್ಯಪ್ರವೃತ್ತರಾದ ಕಮಾಂಡರ್ ಆಶಾ ಕಾರ್ಯಕರ್ತೆ ಸೂಚಿಸಿ ದ ನಾರಿಕೂಟ್ ಸ್ಥಳಕ್ಕೆ ಸೇನೆ ವೈದ್ಯಕೀಯ ಟೀಂ ಕಳುಹಿಸಿದ್ದಾರೆ. ಸೇನಾ ವಾಹನದಲ್ಲಿ ಮಹಿಳೆಯನ್ನ ಆಸ್ಪತ್ರೆಗೆ ಕರೆ ತರುವ ಮಾರ್ಗದಲ್ಲಿ ಹೆರಿಗೆಯಾಗಿದೆ. ವಾಹನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ನಂತರ ಮಗು ಮತ್ತು ತಾಯಿಯನ್ನ ಕಲರೂ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಹಿಮದಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಿಸಿದ ವೀರ ಯೋಧರು

    ಹಿಮದಲ್ಲಿ ಸಿಲುಕಿದ್ದ 10 ಜನರನ್ನು ರಕ್ಷಿಸಿದ ವೀರ ಯೋಧರು

    – ಹಿಮಪಾತದಲ್ಲಿ 5 ಗಂಟೆ ನಡೆದ ಸೈನಿಕರು

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು, ಅಲ್ಲಿನ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ಜನ ಹಿಮದಡಿಯೇ ಸಿಲುಕುತ್ತಿದ್ದಾರೆ. ಇದೇ ರೀತಿ ಹಿಮದಲ್ಲಿ ಸಿಲುಕಿದ್ದ 10 ಜನರನ್ನು ನಮ್ಮ ವೀರ ಯೋಧರು ರಕ್ಷಿಸಿದ್ದಾರೆ.

    ಭಾರೀ ಪ್ರಮಾಣದಲ್ಲಿ ಹಿಮಪಾತವಾಗುತ್ತಿರುವುದರಿಂದ ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ರಸ್ತೆಗಳು ಬಂದ್ ಆಗಿವೆ. ಹೀಗಾಗಿ ಸಿಂಥಾನ್ ಪಾಸ್ ಬಳಿ ಚಿಂಗಮ್ ಮಾರ್ಗದ ಎನ್‍ಎಚ್-244 ನಲ್ಲಿ ಸಿಲುಕಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಸೈನಿಕರು ಹಾಗೂ ಜಮ್ಮು ಕಾಶ್ಮೀರ ಪೊಲೀಸರು ತಂಡ ಅವರನ್ನು ರಕ್ಷಿಸಿದೆ.

    ತೀವ್ರ ದುಸ್ತರ ದಾರಿಯಲ್ಲಿ ಸಾಗಿ 10 ಜನರನ್ನು ಯೋಧರು ರಕ್ಷಿಸಿದ್ದು, ರಾತ್ರಿ ಇಡೀ ಬರೋಬ್ಬರಿ 5 ಗಂಟೆಗಳ ಕಾಲ ನಡೆದುಕೊಂಡು ಹೋಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮಂಜು ಆವರಿಸಿದೆ, ಕತ್ತಲಾಗಿದೆ, ದಾರಿ ಸಹ ತಿಳಿಯುತ್ತಿಲ್ಲ. ಇಂತಹ ದುಸ್ತರ ಸ್ಥಿತಿಯಲ್ಲಿ ಸೈನಿಕರು ಕಾರ್ಯಾಚರಣೆ ನಡೆಸಿ 10 ಜನರನ್ನು ರಕ್ಷಿಸಿದ್ದಾರೆ.

    ರಕ್ಷಿಸಿದ 10 ಜನ ನಾಗರಿಕರನ್ನು ಸಿಂಥಾನ್ ಮೈದಾನಕ್ಕೆ ಕರೆ ತರಲಾಗಿದ್ದು, ಅವರಿಗೆ ಆಹಾರ ಹಾಗೂ ವಸತಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಜಮ್ಮು ಕಾಶ್ಮೀರದ ಬಹುತೇಕ ಭಾಗಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಕುಸಿದಿದ್ದು, ಕಳೆದ 24 ಗಂಟೆಗಳಲ್ಲಿ ಭಾರೀ ಪ್ರಮಾಣದ ಮಳೆ ಹಾಗೂ ಹಿಮಪಾತವಾಗುತ್ತಿದೆ.

    ಗುಲ್ಮಾರ್ಗ್ ಹಾಗೂ ಪಹಲ್ಗಮ್ ನಂತರ ಗಿರಿಧಾಮಗಳು ಸೇರಿದಂತೆ ಕಾಶ್ಮೀರ ಕಣಿವೆಯ ಮೇಲ್ಭಾಗದಲ್ಲಿ ಹೆಚ್ಚು ಹಿಮಪಾತವಾಗುತ್ತಿದೆ. ಬಹುತೇಕ ಬಯಲು ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ವಿಪರೀತ ಮಳೆಯಾಗಿದೆ. ಅಧಿಕೃತ ಮೂಲಗಳ ಪ್ರಕಾರ ಶ್ರೀನಗರದಲ್ಲಿ ಕಳೆದ ಸೋಮವಾರ 3.7 ಮಿ.ಮೀ. ಮಳೆಯಾಗಿದೆ. ಮಾತ್ರವಲ್ಲದೆ ರಾತ್ರಿ ವೇಳೆ 2.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

    ಖಾಜಿಗುಂಡ್‍ನ ಕಾಶ್ಮೀರದ ಗೇಟ್‍ವೇ ಬಳಿ 16.2 ಮಿ.ಮೀ. ಪಹಲ್ಗಮ್ 15.0 ಮಿ.ಮೀ. ಮಳೆ ಸುರಿದರೆ, 10 ಮಿ.ಮೀ.ಹಿಮಪಾತವಾಗಿದೆ. ಗುಲ್ಮಾರ್ಗ್ ಬಳಿ ಮಳೆ 30.6 ಮಿ.ಮೀ ಮಳೆ ಹಾಗೂ ಹಿಮಪಾತವಾಗಿದೆ. ಮುಂದಿನ 24 ಗಂಟೆಗಳ ನಂತರ ಶುಷ್ಕ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  • ಸಿಕ್ಕಿಂನಲ್ಲಿ ಹಿಮಪಾತ-  ಇಬ್ಬರು ಯೋಧರು ಹುತಾತ್ಮ

    ಸಿಕ್ಕಿಂನಲ್ಲಿ ಹಿಮಪಾತ- ಇಬ್ಬರು ಯೋಧರು ಹುತಾತ್ಮ

    ನವದೆಹಲಿ: ಸಿಕ್ಕಿಂನಲ್ಲಿ ಹಿಮಪಾತ ಸಂಭವಿಸಿದ್ದು, ಕರ್ನಲ್ ಮತ್ತು ಭಾರತೀಯ ಸೈನಿಕ ಹುತಾತ್ಮರಾಗಿದ್ದಾರೆ.

    ಹಿಮಪಾತದಲ್ಲಿ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಮತ್ತು ಸೈನಿಕ ಸಪಾಲ ಸನ್ಮಮುಖ ರಾವ್ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಉತ್ತರ ಸಿಕ್ಕಿಂನ ಲುಗ್ನಾಕ್ ಪ್ರದೇಶದಲ್ಲಿ ಇರುವ ಪರ್ವತದಲ್ಲಿ ಈ ಹಿಮಪಾತ ನಡೆದಿದೆ. 16 ಮಂದಿ ಸೈನಿಕರನ್ನು ರಕ್ಷಣೆ ಮಾಡಲಾಗಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು, ಲುಗ್ನಾಕ್ ಪ್ರದೇಶದಲ್ಲಿ ಒಬ್ಬರು ಕರ್ನಲ್ ಒಳಗೊಂಡಂತೆ 18 ಜನ ಭಾರತೀಯ ಸೈನಿಕರ ತಂಡ ಕಾರ್ಯನಿರ್ವಹಿಸುತ್ತಿತ್ತು. ಈ ವೇಳೆ ಹಿಮಪಾತ ಸಂಭವಿಸಿದೆ. ಆಗ ತಕ್ಷಣ ಸ್ಥಳಕ್ಕೆ ಹೋದ ನಮ್ಮ ರಕ್ಷಣಾ ತಂಡ ಹಿಮಪಾತದಲ್ಲಿ ಸಿಲುಕಿದ್ದ 18 ಜನರ ಪೈಕಿ 16 ಜನರನ್ನು ಕಾಪಾಡಿದ್ದಾರೆ. ಆದರೆ ಕರ್ನಲ್ ಮತ್ತು ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    2019ರಲ್ಲಿ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಉತ್ತರ ಭಾಗದಲ್ಲಿ ಸಂಭವಿಸಿದ ಹಿಮಪಾತಕ್ಕೆ ನಾಲ್ವರು ಯೋಧರು ಹಾಗೂ ಇಬ್ಬರು ನಾಗರಿಕರು ಬಲಿಯಾಗಿದ್ದರು. ಯೋಧರು ಎಂದಿನಂತೆ ಗಸ್ತಿನಲ್ಲಿದ್ದಾಗ ಈ ಅವಘಡ ಸಂಭವಿಸಿತ್ತು. ತಕ್ಷಣ ಸೈನಿಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಹಿಮದಡಿ ಸಿಲುಕಿದ ದುರ್ಗ ರೆಜಿಮೆಂಟ್‍ನ 6 ಯೋಧರು ಮತ್ತು ಇಬ್ಬರು ನಾಗರಿಕರನ್ನು ಹೊರ ತೆಗೆದು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅದರಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದ ಕಾರಣ ಮೃತಪಟ್ಟಿದ್ದರು.

    2016ರಲ್ಲೂ ಹೀಗೆಯೇ ಆಗಿತ್ತು: 2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಅವರು ವೀರ ಮರಣ ಹೊಂದಿದ್ದರು. ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ವೀರಯೋಧ ಹನುಮಂತಪ್ಪ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

    1984 ರಲ್ಲೂ ಇದೇ ರೀತಿ ಹಿಮಪಾತವಾಗಿ ಭಾರತ ಸೇನೆಯ ಸಾವಿರಕ್ಕೂ ಹೆಚ್ಚಿನ ಯೋಧರು ಹುತಾತ್ಮರಾಗಿದ್ದರು. ಇದರಲ್ಲಿ 35 ಜನ ಮಿಲಿಟರಿ ಆಫೀಸರ್ ಗಳು ಇದ್ದರು.

  • ಭಾರೀ ಹಿಮಪಾತದಲ್ಲೂ ವಧುವಿನ ಮನೆಗೆ 4 ಕಿ.ಮೀ ನಡೆದುಕೊಂಡು ಹೋದ ವರ

    ಭಾರೀ ಹಿಮಪಾತದಲ್ಲೂ ವಧುವಿನ ಮನೆಗೆ 4 ಕಿ.ಮೀ ನಡೆದುಕೊಂಡು ಹೋದ ವರ

    ಡೆಹ್ರಾಡೂನ್: ವರನೊಬ್ಬ ಭಾರೀ ಹಿಮಪಾತದಲ್ಲೂ ವಧುವಿನ ಮನೆಗೆ 4 ಕಿ.ಮೀ ನಡೆದುಕೊಂಡು ಹೋದ ಅಪರೂಪದ ಸಂಗತಿಯೊಂದು ಉತ್ತರಖಂಡದ ಚಾಮೋಲಿ ಜಿಲ್ಲೆಯ ಬಿಜ್ರಾ ಗ್ರಾಮದಲ್ಲಿ ನಡೆದಿದೆ.

    ಬಿಜ್ರಾ ಗ್ರಾಮದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದೆ. ಹೀಗಾಗಿ ವರ ಹಾಗೂ ಆತನ ಸಂಬಂಧಿಕರು ಕೊಡೆ ಹಿಡಿದುಕೊಂಡು ಭಾರೀ ಹಿಮಪಾತದಲ್ಲಿ ನಡೆದುಕೊಂಡು ಹೋಗಿದ್ದಾರೆ. ಈ ಫೋಟೋ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಿಮದಲ್ಲಿ 4 ಗಂಟೆ ನಡೆದು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ 100 ಯೋಧರು: ವಿಡಿಯೋ

    ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರಿನಲ್ಲಿ ಫೋಟೋ ಹಾಕಿ ಅದಕ್ಕೆ, ಭಾರೀ ಹಿಮಪಾತವಾಗುತ್ತಿರುವ ಕಾರಣ ರಸ್ತೆಗಳು ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ವರನೊಬ್ಬ ಚಾಮೋಲಿ ಜಿಲ್ಲೆಯ ಬಿಜ್ರಾ ಗ್ರಾಮದಲ್ಲಿರುವ ತನ್ನ ವಧುವಿನ ಮನೆಗೆ ನಡೆದುಕೊಂಡು ಹೋಗಿದ್ದಾನೆ ಎಂದು ಟ್ವೀಟ್ ಮಾಡಿದೆ.

    ವೈರಲ್ ಆಗಿರುವ ಫೋಟೋದಲ್ಲಿ ವರ ಕೊಡೆ ಹಿಡಿದುಕೊಂಡು ನಗುತ್ತಾ ನಡೆದುಕೊಂಡು ಹೋಗುತ್ತಿದ್ದಾರೆ. ಈ ಫೋಟೋಗೆ ಇದುವರೆಗೂ 7 ಸಾವಿರ ಲೈಕ್ಸ್ ಪಡೆದಿದ್ದು, ಅನೇಕ ಮಂದಿ ಕಮೆಂಟ್ಸ್ ಮಾಡುವ ಮೂಲಕ ವರನಿಗೆ ಶುಭ ಕೋರಿದ್ದಾರೆ.

    ಈ ಫೋಟೋ ನೋಡಿ ಕೆಲವರು, ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರ ‘ದಿಲ್‍ವಾಲೇ ದುಲ್ಹಾನಿಯಾ ಲೆ ಜಾಯಂಗೆ’ ಚಿತ್ರದ ಹೆಸರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಇಷ್ಟು ಆದರೂ ವರ ನಗುತ್ತಿದ್ದಾರೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ನನ್ನ ಪತಿ ನನಗೆ ಅಡುಗೆ ಮನೆಯಿಂದ ನೀರು ತಂದು ಕೊಡುವುದಿಲ್ಲ, ಆದರೆ ನೀವು ಭಾರೀ ಹಿಮಪಾತದಲ್ಲಿ 4 ಕಿ.ಮೀ ನಡೆದುಕೊಂಡು ಹೋಗಿದ್ದೀರಾ’ ಎಂದು ಕಮೆಂಟ್ ಮಾಡಿದ್ದಾರೆ.

    https://twitter.com/iamsickofhumans/status/1222702558780755969?ref_src=twsrc%5Etfw%7Ctwcamp%5Etweetembed%7Ctwterm%5E1222702558780755969&ref_url=https%3A%2F%2Fwww.timesnownews.com%2Fthe-buzz%2Farticle%2Fdilwale-dulhaniya-le-jayenge-groom-walks-4-km-during-heavy-snowfall-reach-brides-house-in-uttarakhand%2F547038

  • ಹಿಮದಲ್ಲಿ 4 ಗಂಟೆ ನಡೆದು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ 100 ಯೋಧರು: ವಿಡಿಯೋ

    ಹಿಮದಲ್ಲಿ 4 ಗಂಟೆ ನಡೆದು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ 100 ಯೋಧರು: ವಿಡಿಯೋ

    ಶ್ರೀನಗರ: ಭಾರತೀಯ ಸೇನೆ ಇಂದು 72ನೇ ಸೇನಾ ದಿನವನ್ನು ಆಚರಿಸುತ್ತಿದೆ. ಈ ನಡುವೆ ಜಮ್ಮು- ಕಾಶ್ಮೀರದಲ್ಲಿ ನಡೆದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ 100 ಯೋಧರು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಹಿಮದಲ್ಲಿ 4 ಗಂಟೆ ನಡೆದಿದ್ದಾರೆ.

    ಮಂಗಳವಾರ ಭಾರೀ ಹಿಮಪಾತ ಆಗುತ್ತಿದ್ದ ಕಾರಣ ಗರ್ಭಿಣಿ ಶಮೀಮಾ ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಸೊಂಟದ ಮಟ್ಟದವರೆಗೆ ಹಿಮವಿದ್ದ ಕಾರಣ ಶಮೀಮಾ ಆಸ್ಪತ್ರೆಗೆ ಹೋಗುವುದು ಹೇಗೆ ಎನ್ನುವುದೇ ದೊಡ್ಡ ಸಮಸ್ಯೆಯಾಗಿತ್ತು. ಶಮೀಮಾ ಅವರು ಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ 100 ಮಂದಿ ಯೋಧರು ಹಿಮದಲ್ಲಿ 4 ಗಂಟೆ ನಡೆದು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

    ಶಮೀಮಾ ಅವರನ್ನು ಸ್ಟ್ರೇಚರ್ ನಲ್ಲಿ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಗುವಿಗೆ ಜನ್ಮ ನೀಡಿದ್ದಾರೆ. ವರದಿಗಳ ಪ್ರಕಾರ ತಾಯಿ-ಮಗು ಆರೋಗ್ಯವಾಗಿದ್ದಾರೆ. ಸದ್ಯ ಸೈನಿಕರು ಶಮೀಮಾ ಅವರನ್ನು ಸ್ಟ್ರೇಚರ್ ನಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಗರ್ಭಿಣಿ ಶಮೀಮಾ ಹಾಗೂ ಅವರ ಮಗುವಿಗೆ ದೇವರು ಒಳ್ಳೆಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.

    ಈ ನಡುವೆ ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಿಮ ಬೀಳುತ್ತಿರುವ ಕಾರಣ ರಸ್ತೆ ಹಾಗೂ ಹೈವೇಗಳು ಸಂಪೂರ್ಣವಾಗಿ ಬಂದ್ ಆಗಿದೆ.

  • ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ – ಮೂವರು ಯೋಧರು ಹುತಾತ್ಮ

    ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ – ಮೂವರು ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉತ್ತರ ಭಾಗದಲ್ಲಿ ಭಾರೀ ಹಿಮಪಾತವಾಗಿದ್ದು, ಕರ್ತವ್ಯ ನಿರತ ಮೂವರು ಯೋಧರು ಹುತಾತ್ಮರಾಗಿದ್ದು, ಓರ್ವ ಯೋಧ ನಾಪತ್ತೆಯಾಗಿದ್ದಾರೆ.

    ಜಮ್ಮು-ಕಾಶ್ಮೀರದ ಕುಪ್ವಾರ, ಬಾರಾಮುಲ್ಲಾ, ಗಂದರ್ಬಲ್, ಮಚಿಲ್ ಸೆಕ್ಟರ್ ನಲ್ಲಿ ಭಾರೀ ಹಿಮಪಾತವಾಗಿದೆ. ಈ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಯ ಯೋಧರು ಕಾರ್ಯನಿರ್ವಹಿಸುತ್ತಿದ್ದು, ಕಳೆದ 48 ಗಂಟೆಗಳಿಂದ ಈ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿದೆ. ಈ ವೇಳೆ ಹಿಮದಡಿಗೆ ಸಿಲುಕಿಕೊಂಡಿದ್ದ ಅನೇಕ ಯೋಧರನ್ನು ರಕ್ಷಿಸಲಾಗಿದೆ.

    ಆದರೆ ದುರಾದೃಷ್ಟವಶಾತ್ ಮೂವರು ಯೋಧರು ಹಿಮದಡಿಗೆ ಸಿಲುಕಿ ಹುತಾತ್ಮರಾಗಿದ್ದು, ಓರ್ವ ಯೋಧ ನಾಪತ್ತೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಜಮ್ಮು-ಕಾಶ್ಮೀರದ ಉತ್ತರ ಭಾಗದಲ್ಲಿ ಆಗುತ್ತಿರುವ ಭಾರೀ ಹಿಮಪಾತದಿಂದ ಕರ್ತವ್ಯ ನಿರತ ಯೋಧರು ಸಂಕಷ್ಟಕ್ಕೆ ಸಿಲುಕಿದ್ದಾರೆ.