ಕಠ್ಮಂಡು: ನೇಪಾಳದ (Nepal) ಕರ್ನಾಲಿ (Karnali) ಪ್ರಾಂತ್ಯದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ (Avalanche) ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಭಾನುವಾರ ತಿಳಿಸಿದೆ.
ಪ್ರಾಂತ್ಯದ ಮುಗು ಜಿಲ್ಲೆಯ ಚ್ಯಾರ್ಖು ಪಾಸ್‌ನಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಜಿಲ್ಲೆಯ ಪಾತರಸಿ ಪುರಸಭೆಯಿಂದ ಹದಿನಾಲ್ಕು ಜನರು ಯರ್ಶಗುಂಬ (ಕಂಬಳಿಹುಳು ಶಿಲೀಂಧ್ರ) ಸಂಗ್ರಹಿಸಲು ಚ್ಯಾರ್ಖುಗೆ ಹೋಗಿದ್ದಾರೆ. ಅವರಲ್ಲಿ ಮೂವರು ಸಾವನ್ನಪ್ಪಿದ್ದು, ಒಂಬತ್ತು ಮಂದಿಗೆ ಹಿಮಪಾತದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಭಾರತ – ಪಾಕಿಸ್ತಾನ ಕಾಶ್ಮೀರದ ವಿವಾದವನ್ನು ವಿಶ್ವಸಂಸ್ಥೆ ನಿರ್ಣಯದಂತೆ ಬಗೆಹರಿಸಬೇಕು: ಚೀನಾ
ಮೇ 18ರ ಮೊದಲು ಸ್ಥಳೀಯ ಅಧಿಕಾರಿಗಳು ಪಿಕ್ಕರ್‌ಗಳಿಗೆ ಅವಕಾಶ ನೀಡದಿದ್ದರೂ ನೂರಾರು ಜನರು ಮುಗು ಜಿಲ್ಲೆಯ ಎತ್ತರದ ಪ್ರದೇಶಗಳಿಗೆ ಕಂಬಳಿಹುಳು ಶಿಲೀಂಧ್ರವನ್ನು (Caterpillar Fungus) ಸಂಗ್ರಹಿಸಲು ಪ್ರಯಾಣಿಸಿದ್ದಾರೆ. ಹಿಮಪಾತದಲ್ಲಿ ಸಾವನ್ನಪ್ಪಿದ ಮೂವರು ಅಡ್ಡ ದಾರಿಗಳನ್ನು ಮಾರ್ಗಗಳನ್ನು ಬಳಸಿಕೊಂಡು ಎತ್ತರದ ಪ್ರದೇಶಗಳಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಖಲಿಸ್ತಾನಿ ಕಮಾಂಡೋ ಹತ್ಯೆ
ಡೆಹ್ರಾಡೂನ್: ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಭಾರೀ ಮಳೆ (Rain) ಮತ್ತು ಹಿಮಪಾತವಾಗುವ (Snowfall) ಸಾಧ್ಯತೆಯ ಹಿನ್ನೆಲೆಯಲ್ಲಿ, ಹವಾಮಾನ ಇಲಾಖೆಯು ಮುಂದಿನ 2-3 ದಿನಗಳವರೆಗೆ ಎಚ್ಚರಿಕೆಯನ್ನು ನೀಡಿದೆ. ಹವಾಮಾನ ಉತ್ತಮವಾಗುವವರೆಗೆ ತಂಗಿರುವ ಸ್ಥಳದಲ್ಲಿಯೇ ಇರುವಂತೆ ಕೇದಾರನಾಥ (Kedarnath) ಯಾತ್ರಾರ್ಥಿಗಳಿಗೆ (Pilgrims) ತಿಳಿಸಲಾಗಿದೆ.
ಕೇದಾರನಾಥಕ್ಕೆ ಭೇಟಿ ನಿಡಲು ಬರುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮನವಿ ಮಾಡಲಾಗುತ್ತಿದೆ. ಹವಾಮಾನ ಉತ್ತಮವಾಗುವವರೆಗೆ ಪ್ರಯಾಣಿಕರು ಅದೇ ಸ್ಥಳದಲ್ಲಿ ಇರಿ. ಮುಂಜಾಗೃತ ಕ್ರಮಗಳನ್ನು ಅನುಸರಿಸಿಯೇ ಯಾತ್ರೆಯನ್ನು ಮುಂದುವರಿಸಿ ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದರು.
ಕೇದಾರನಾಥ ಧಾಮದಲ್ಲಿ ನಿರಂತರವಾಗಿ ಹಿಮಪಾತವಾಗುತ್ತಿದ್ದು, ಯಾತ್ರೆಯನ್ನು ನಿಯಂತ್ರಿಸಲಾಗುತ್ತಿದೆ. ಸೋನ್‌ಪ್ರಯಾಗದಿಂದ ಬೆಳಗ್ಗೆ 10:30ರ ಬಳಿಕ ಕೇದಾರನಾಥಕ್ಕೆ ಹೋಗಲು ಅನುಮತಿ ನೀಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ
ಎಲ್ಲ ಪ್ರಯಾಣಿಕರು ತಮ್ಮ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಹವಾಮಾನ ಉತ್ತಮವಾದ ಬಳಿಕ ಮಾತ್ರ ಎಲ್ಲಾ ಯಾತ್ರಾರ್ಥಿಗಳು ಕೇದಾರನಾಥಕ್ಕೆ ತಮ್ಮ ಪ್ರಯಾಣವನ್ನು ಬೆಳೆಸಬಹುದು ಎಂದು ದೀಕ್ಷಿತ್ ಹೇಳಿದ್ದಾರೆ.
ಏಪ್ರಿಲ್ 25 ರಂದು ಯಾತ್ರಾರ್ಥಿಗಳಿಗೆ ಕೇದಾರನಾಥದ ಬಾಗಿಲನ್ನು ತೆರೆಯಲಾಯಿತು. ಆದರೆ ಯಾತ್ರೆಯ ಮಾರ್ಗದಲ್ಲಿ ಹಿಮಪಾತ ಹಾಗೂ ಹವಾಮಾನ ಪ್ರತಿಕೂಲತೆಯ ಹಿನ್ನೆಲೆ ಉತ್ತರಾಖಂಡ (Uttarakhand) ಸರ್ಕಾರ ಕೇದಾರನಾಥ ಯಾತ್ರೆಗೆ ಯಾತ್ರಿಕರಿಂದ ನೋಂದಣಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿತು. ಇದನ್ನೂ ಓದಿ: ಬೊಂಬಾಟ್ ಬೌಲಿಂಗ್, ಮ್ಯಾಜಿಕ್ ಫೀಲ್ಡಿಂಗ್ – RCBಗೆ 18 ರನ್‌ಗಳ ಭರ್ಜರಿ ಜಯ
ಗ್ಯಾಂಗ್ಟಾಕ್: ಸಿಕ್ಕಿಂನ (Sikkim) ನಾಥುಲಾ (Nathula) ಪ್ರದೇಶದಲ್ಲಿ ಮಂಗಳವಾರ ಭಾರೀ ಹಿಮಪಾತ (Avalanche) ಉಂಟಾಗಿದ್ದು, ಘಟನೆಯಲ್ಲಿ 6 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಂನ ಭಾರತ-ಚೀನಾ ಗಡಿಯ ಸಮೀಪವಿರುವ ಎತ್ತರದ ಪರ್ವತದ ಹಾದಿಯಾದ ನಾಥುಲಾ ಬಳಿ ಮಧ್ಯಾಹ್ನ 12:20ರ ವೇಳೆಗೆ ಹಿಮಪಾತ ಸಂಭವಿಸಿದೆ. ಈ ಪ್ರದೇಶ ಸಮುದ್ರ ಮಟ್ಟದಿಂದ 4,310 ಮೀ. (14,140 ಅಡಿ) ಎತ್ತರದಲ್ಲಿದೆ ಮತ್ತು ಇದು ಪ್ರಮುಖ ಪ್ರವಾಸಿ ತಾಣವಾಗಿದೆ.
ವರದಿಗಳ ಪ್ರಕಾರ 150ಕ್ಕೂ ಹೆಚ್ಚು ಪ್ರವಾಸಿಗರು 15 ಮೈಲುಗಳಷ್ಟು ಮುಂದೆ ಸಾಗಿದ್ದು, ಅಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಈ ನಡುವೆ ಹಿಮದ ಅಡಿಯಲ್ಲಿ ಸಿಲುಕಿದ ಸುಮಾರು 30 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ರಾಜ್ಯ ರಾಜಧಾನಿ ಗ್ಯಾಂಗ್ಟನ್‌ನ ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಅವಘಡ ತಪ್ಪಿಸಲು ರೈಲನ್ನೇ ನಿಲ್ಲಿಸಿದ ದಿಟ್ಟ ಮಹಿಳೆ!
ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ನಾಪತ್ತೆಯಾದವರ ಹುಡುಕಾಟದಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಪ್ರಸ್ತುತ ಸಿಕ್ಕಿಂ ಪೊಲೀಸರು, ಸಿಕ್ಕಿಂನ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮತ್ತು ವಾಹನ ಚಾಲಕರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 47 ಜನ ಪ್ರಯಾಣಿಕರಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: ಪ್ರಯಾಣಿಕರು ಬಚಾವ್
ಬೆಂಗಳೂರು: ಉತ್ತರಾಖಂಡದ ದ್ರೌಪದಿ ದಂಡ-2 ಶಿಖರದಲ್ಲಿ ಸಂಭವಿಸಿದ ಹಿಮಪಾತದಲ್ಲಿ(Uttarakhand Avalanche ) ಇಬ್ಬರು ಕನ್ನಡಿಗರು ಸೇರಿದಂತೆ ಈವರೆಗೂ 29 ಮಂದಿ ಮೃತಪಟ್ಟಿದ್ದಾರೆ.
ಬೆಂಗಳೂರು ಮೂಲದ ವಿಕ್ರಮ್ ಮತ್ತು ರಕ್ಷಿತ್ ಮೃತದೇಹಗಳು ಪತ್ತೆಯಾಗಿದ್ದು, ಡೆಹ್ರಾಡೂನ್‍ನಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿದೆ. ಇಬ್ಬರು ಕನ್ನಡಿಗರ ಮೃತದೇಹ ತರುವ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಇದನ್ನೂ ಓದಿ: ಶೇ.10ಕ್ಕೆ ಮೀಸಲಾತಿ ಹೆಚ್ಚಳಕ್ಕೆ ಒಕ್ಕಲಿಗರ ಸಂಘ ಒತ್ತಾಯ
ಮೃತದೇಹಗಳನ್ನ ಶಿಫ್ಟ್ ಮಾಡಲು ಒಂದೇ ಒಂದು ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿಲ್ಲ. ಬೆಂಗಳೂರು ಜಿಲ್ಲಾಡಳಿತದ ವತಿಯಿಂದ ಮೃತದೇಹ ತರಲಾಗ್ತಿದೆ. ಮೃತದೇಹ ಗುರುತಿಸಲು ತೆರಳಿದ್ದ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ವಿಮಾನ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಸರ್ಕಾರದ ವಿರುದ್ಧ ಮೃತರ ಕುಟುಂಬಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಮೃತದೇಹ ಬೆಂಗಳೂರು ತಲುಪುವ ಸಾಧ್ಯತೆಗಳಿವೆ.
Live Tv
[brid partner=56869869 player=32851 video=960834 autoplay=true]
ಮಡಿಕೇರಿ: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯದಲ್ಲಿದ್ದ ಕೊಡಗು ಮೂಲದ ಯೋಧ ಹವಾಲ್ದಾರ್ ಅಲ್ತಾಫ್ ಅಹಮ್ಮದ್(37) ಹಿಮಪಾತಕ್ಕೆ ಸಿಲುಕಿ ಹುತಾತ್ಮರಾಗಿದ್ದಾರೆ.
ಭಾರತೀಯ ಸೇನೆಯ ಎಒಸಿ ರೆಜಿಮೆಂಟಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಅಲ್ತಾಫ್ ಅಹಮ್ಮದ್ ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆಯವರಾಗಿದ್ದರು. ಕಳೆದ ಒಂದು ದಶಕದಿಂದ ಇವರ ಪೋಷಕರು ಕೇರಳದ ಮಟ್ಟನ್ನೂರಿನಲ್ಲಿ ನೆಲೆಸಿದ್ದಾರೆ. ಅಲ್ತಾಫ್ ಪತ್ನಿ ವಿರಾಜಪೇಟೆ ಬಳಿಯ ಎಡಪಾಲ ನಿವಾಸಿಯಾಗಿದ್ದಾರೆ. ಇದನ್ನೂ ಓದಿ: ಅಪಪ್ರಚಾರ ಮಾಡಿದವರು ಕೊನೆಗೆ ಲಸಿಕೆ ಹಾಕಿಸಿಕೊಂಡರು: ಅಖಿಲೇಶ್‍ಗೆ ಮೋದಿ ಟಾಂಗ್
ವಿರಾಜಪೇಟೆಯ ಮೀನುಪೇಟೆಯಲ್ಲಿ ಹುಟ್ಟಿ ಬೆಳೆದಿದ್ದ ಅಲ್ತಾಫ್ ಅಹಮ್ಮದ್ ದ್ವಿತೀಯ ಪಿಯುಸಿವರೆಗೂ ವಿರಾಜಪೇಟೆಯಲ್ಲಿ ವಿದ್ಯಾಭ್ಯಾಸ ಮಾಡಿ ಬಳಿಕ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಕಳೆದ ಹತ್ತೊಂಬತ್ತು ವರ್ಷಗಳಿಂದ ಅಲ್ತಾಫ್ ಸೈನ್ಯದಲ್ಲಿ ಸೇವೆಸಲ್ಲಿಸುತ್ತಿದ್ದರು. ಇದನ್ನೂ ಓದಿ: ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಕಂದಾಯ ಇಲಾಖೆ ಸಿಬ್ಬಂದಿ
ಇಟಾನಗರ: ಫೆಬ್ರವರಿ 6 ರಂದು ಅರುಣಾಚಲ ಪ್ರದೇಶದಲ್ಲಿ ನಡೆದ ಹಿಮಕುಸಿತದಲ್ಲಿ 7 ಸೈನಿಕರು ಹಿಮದ ಅಡಿ ಹೂತು ಹೋಗಿದ್ದರು. ಹಿಮದಲ್ಲಿ ಸಿಲುಕಿಕೊಂಡಿದ್ದ 7 ಸೈನಿಕರು ಮೃತಪಟ್ಟಿದ್ದಾರೆ ಎಂದು ಮಂಗಳವಾರ ಘೋಷಿಸಲಾಗಿದೆ.
ಹಿಮಪಾತವಾಗಿದ್ದ ಚುಮೆ ಗಯಾಟರ್ ಪ್ರದೇಶಕ್ಕೆ ರಕ್ಷಣಾ ತಂಡಗಳನ್ನು ವಿಮಾನದ ಮೂಲಕ ಕಳುಹಿಸಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ಪ್ರದೇಶ ತವಾಂಗ್ ಜಿಲ್ಲಾ ಕೇಂದ್ರದಿಂದ 100 ಕಿಮೀ ದೂರದಲ್ಲಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಅರುಣಾಚಲ ಪ್ರದೇಶದಲ್ಲಿನ ಹಿಮಪಾತದಲ್ಲಿ ನಮ್ಮ 7 ವೀರ ಯೋಧರ ದುರದೃಷ್ಟಕರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಯೋಧರು ನಿಸ್ವಾರ್ಥವಾಗಿ ನಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಶ್ರಮಿಸುತ್ತಿದ್ದರು. ಯೋಧರಿಗೆ ನನ್ನ ನಮನಗಳು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: Karnataka Hijab Row: ಹೈಸ್ಕೂಲ್, ಕಾಲೇಜುಗಳಿಗೆ 3 ದಿನ ರಜೆ
ಶಿಮ್ಲಾ: ಮುಂದಿನ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಜನಪ್ರಿಯ ಪ್ರವಾಸಿ ತಾಣಗಳಾದ ಚಂಬಾ, ಸ್ಪಿತಿ, ಕುಲು, ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ.
ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತೀಯಾದ ಹಿಮಪಾತವಾಗಿದೆ. ಇನ್ನೂ ಮುಂಬರುವ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ನಗರದ ಐಎಮ್‍ಡಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸುರೇಂದರ್ ಪಾಲ್ ಅವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ
ಹವಾಮಾನ ಇಲಾಖೆಯು ಸೋಮವಾರ ತನ್ನ ಮುನ್ಸೂಚನೆಯಲ್ಲಿ ಭಾರೀ ಹಿಮಪಾತದಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತದ ಅಲೆಗಳು ಬರುವ ನಿರೀಕ್ಷೆಯಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಫೆಬ್ರವರಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಿರುತ್ತದೆ. ಆದರೆ ಪಂಜಾಬ್ ಮತ್ತು ಹರಿಯಾಣದಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ
ಭಾರತದ ಪರ್ಯಾಯ ದ್ವೀಪದ ಪೂರ್ವ ಮತ್ತು ನೈಋತ್ಯ ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ತಿಳಿಸಿದೆ.
ಇದರ ಮಧ್ಯೆ ದೆಹಲಿಯಲ್ಲಿ ಬುಧವಾರ ಬೆಳಗ್ಗೆ ಮಂಜು ಕಾಣಿಸಿಕೊಂಡಿದ್ದು, ಕನಿಷ್ಠ ತಾಪಮಾನವು 11.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜಧಾನಿಯ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತ್ಯಂತ ಕಳಪೆ ವರ್ಗದಲ್ಲಿದೆ. ಏಕೆಂದರೆ ಬುಧವಾರ ಬೆಳಗ್ಗೆ 7.05 ಕ್ಕೆ ವಾಯು ಗುಣಮಟ್ಟ ಸೂಚ್ಯಂಕ 341 ಆಗಿತ್ತು. ಆದರೆ ದೆಹಲಿಯ ನೆರೆಯ ಪ್ರದೇಶಗಳಲ್ಲಿ ಫರಿದಾಬಾದ್ (283), ಗಾಜಿಯಾಬಾದ್ (356), ಗ್ರೇಟರ್ ನೋಯ್ಡಾ (216), ಗುರುಗ್ರಾಮ್ (274) ಮತ್ತು ನೋಯ್ಡಾ (327) ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತೋರಿಸಿವೆ.
ನ್ಯೂಯಾರ್ಕ್: ಚಳಿಗಾಲದ ಚಂಡಮಾರುತ ಕೆನಾನ್ ಭೀಕರತೆಯಿಂದಾಗಿ ನ್ಯೂಯಾರ್ಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹಿಮಪಾತ ಮತ್ತು ಗಾಳಿ ಬೀಸಲು ತೊಡಗಿದೆ. ಹೀಗಾಗಿ ಪೂರ್ವ ಅಮೆರಿಕಾವು ತುರ್ತು ಪರಿಸ್ಥಿತಿ ಘೋಷಿಸಿದೆ.
ಶುಕ್ರವಾರ ಸಂಜೆಯಿಂದ ಭಾನುವಾರದ ಆರಂಭದವರೆಗೆ ನ್ಯೂಯಾರ್ಕ್ ನಗರವು 8 ರಿಂದ 12 ಇಂಚುಗಳಷ್ಟು ಹಿಮಪಾತವನ್ನು ದಾಖಲಿಸುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನ್ಯೂಯಾರ್ಕ್ ರಾಜ್ಯಪಾಲ ಕ್ಯಾಥಿ ಹೊಚುಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶನಿವಾರ ಬೆಳಗ್ಗೆ ನೆಲದಿಂದ 7 ರಿಂದ 11 ಇಂಚುಗಳಷ್ಟು ಹಿಮ ಬಿದ್ದಿರುವುದರಿಂದ ಸಫೋಲ್ಕ್ ಮತ್ತು ನಸ್ಸೌ ಕೌಂಟಿಗಳು ಹೆಚ್ಚು ಹಾನಿಗೊಳಗಾಗುತ್ತಿವೆ. ಇದು ಇನ್ನೂ 5 ರಿಂದ 12 ಇಂಚುಗಳಷ್ಟು ಹೆಚ್ಚಾಗುವ ನಿರೀಕ್ಷೆಯಲ್ಲಿದೆ. ನ್ಯೂಯಾರ್ಕ್ ನಗರವು ಇಲ್ಲಿಯವರೆಗೆ 4 ಇಂಚುಗಳಷ್ಟು ಹಿಮಪಾತವನ್ನು ದಾಖಲಿಸಿದೆ. 3 ಗಂಟೆಗೆ ಮೊದಲು ಮತ್ತೊಂದು 4-7 ಇಂಚುಗಳಷ್ಟು ಹೆಚ್ಚಾಗುವ ಸಂಭವವಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ ದಾಳಿ- 6 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ
ಇದಕ್ಕೂ ಮುನ್ನ, ರಾಜ್ಯಪಾಲರು ಶುಕ್ರವಾರ ಸಂಜೆಯಿಂದಲೇ ನ್ಯೂಯಾರ್ಕ್‍ನಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಪೂರ್ವ ಅಮೆರಿಕಾದ ಇತರ ರಾಜ್ಯಗಳಲ್ಲಿಯೂ ಸಹ ಭಾರೀ ಹಿಮಪಾತವನ್ನು ನಿರೀಕ್ಷಿಸಲಾಗಿದೆ. ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಲಾಗಾರ್ಡಿಯಾ ವಿಮಾನ ನಿಲ್ದಾಣ ಮತ್ತು ಸೆಂಟ್ರಲ್ ಪಾರ್ಕ್‍ನಲ್ಲಿ ಕಳೆದ 12 ಗಂಟೆಗಳಲ್ಲಿ ಹಿಮ ಪ್ರಮಾಣವು 5 ಇಂಚುಗಳನ್ನು ಮೀರಿದೆ ಎಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ರಾಷ್ಟ್ರೀಯ ಹವಾಮಾನ ಇಲಾಖೆಯು ಟ್ವಿಟರ್ ಮೂಲಕ ತಿಳಿಸಿದೆ.
ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಿಂದ ಒಟ್ಟು 80 ಪ್ರತಿಶತದಷ್ಟು 460 ವಿಮಾನಗಳ ಹಾರಾಟವು ರದ್ದಾಗಿದೆ. ಇದರ ಮಧ್ಯೆ ನೆವಾರ್ಕ್ ಲಿಬರ್ಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 90 ಪ್ರತಿಶತ ವಿಮಾನಗಳು ಮತ್ತು ಲಾಗಾರ್ಡಿಯಾ ವಿಮಾನ ನಿಲ್ದಾಣದಿಂದ 97 ಪ್ರತಿಶತ ವಿಮಾನಗಳು ಕ್ರಮವಾಗಿ 322 ಮತ್ತು 279 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಟ್ರಾವೆಲ್ ಇನ್ಫರ್ಮೇಷನ್ ಪ್ಲಾಟ್‍ಫಾರ್ಮ್ ಫ್ಲೈಟ್ ಅವೇರ್.ಕಾಮ್ ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಭೇಟಿ ನೀಡಲಿದ್ದಾರೆ ಒಮಾನ್ ರಕ್ಷಣಾ ಅಧಿಕಾರಿಗಳು
ಇದೇ ಮಾದರಿಯಲ್ಲಿ ರಾಜ್ಯದಲ್ಲಿ 3 ವಿಮಾನ ನಿಲ್ದಾಣಗಳಿಗೆ ಹಾರಾಟವನ್ನು ರದ್ದುಗೊಳಿಸಲಾಗಿದೆ. ಭಾರೀ ಹಿಮಪಾತದಿಂದಾಗಿ ರಸ್ತೆಗಳು ಮತ್ತು ಮೇಲ್ಮೈಗಳು ಜಾರು ಆಗಿರಬಹುದು. ನ್ಯೂಯಾರ್ಕ್ ನಿವಾಸಿಗಳು ಅನಗತ್ಯ ಪ್ರಯಾಣದಿಂದ ದೂರವಿರಲು ಸಲಹೆ ನೀಡಲಾಗುತ್ತದೆ ಎಂದು ನ್ಯೂಯಾರ್ಕ್ ಸಿಟಿ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಸಾಮಾಜಿಕ ಜಾಲತಾಣದ ಮೂಲಕ ಮುನ್ನೆಚ್ಚರಿಕೆಯನ್ನು ನೀಡಿದೆ.
ನ್ಯೂಯಾರ್ಕ್ ನಿವಾಸಿಗಳು ಪ್ರಯಾಣಿಸಬೇಕಾದರೆ ಸಮೂಹ ಸಾರಿಗೆಯನ್ನು ಬಳಸಲು ಒತ್ತಾಯಿಸಲಾಗಿದೆ. ಆದಾಗ್ಯೂ, ನ್ಯೂಯಾರ್ಕ್ ನಗರದಲ್ಲಿ ಹಡಗು ಸೇವೆಯನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ. ಆದರೆ ಲಾಂಗ್ ಐಲ್ಯಾಂಡ್ ರೈಲು ರಸ್ತೆ ಸೇವೆಯನ್ನು ಮುನ್ನೆಚ್ಚರಿಕೆಯಾಗಿ ರಾತ್ರಿಯಿಡೀ ಸ್ಥಗಿತಗೊಳಿಸಲಾಗಿದೆ. ಲಾಂಗ್ ಐಲ್ಯಾಂಡ್‍ನ ಸಫೆÇಲ್ಕ್ ಕೌಂಟಿ ಮತ್ತು ಕನೆಕ್ಟಿಕಟ್‍ನ ನ್ಯೂ ಲಂಡನ್ ಕೌಂಟಿಯಲ್ಲಿ ಗಂಟೆಗೆ 60 ಮೈಲುಗಳಷ್ಟು ಬಲವಾದ ಗಾಳಿಯೊಂದಿಗೆ ಹಿಮಪಾತದ ಎಚ್ಚರಿಕೆ ಜಾರಿಯಲ್ಲಿದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.
ಕಾಬೂಲ್: ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭಾರೀ ಹಿಮಪಾತದಿಂದಾಗಿ 42 ಮಂದಿ ದುರ್ಮರಣಕ್ಕೀಡಾಗಿದ್ದು, 76 ಮಂದಿ ಗಾಯಗೊಂಡಿದ್ದಾರೆ.
ಇಸ್ಲಾಮಿಕ್ ಎಮಿರೇಟ್ ಆಫ್ ಆಫ್ಘಾನಿಸ್ತಾನದ (ಐಇಎ) ವಿಪತ್ತು ನಿರ್ವಹಣಾ ವ್ಯವಹಾರಗಳ ರಾಜ್ಯ ಸಚಿವಾಲಯವು, ಕಳೆದ 20 ದಿನಗಳಿಂದ ಹಿಮಪಾತದ ತೀವ್ರತೆಯಿಂದಾಗಿ 2,000 ಮನೆಗಳು ನಾಶವಾಗಿವೆ. ಹಿಮಪಾತದಿಂದಾಗಿ 42 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!
ಭಾರೀ ಹಿಮಪಾತದಿಂದಾಗಿ ನೂರಾರು ಜನರು ಹಲವು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲದೇ ಹೆಚ್ಚಿನ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದೆ.
ವಿವಿಧ ಏಜೆನ್ಸಿಗಳು ಕೂಡ ಸಂತ್ರಸ್ತರ ನೆರವಿಗೆ ಧಾವಿಸಿವೆ. ಹಿಮಪಾತಕ್ಕೂ ಮೊದಲು ಪಶ್ಚಿಮ ಬದ್ಘಿಸ್ ಪ್ರಾಂತ್ಯದಲ್ಲಿ ಸಂಭವಿಸಿದ ಎರಡು ಭೂಕಂಪಗಳಲ್ಲಿ 28 ಮಂದಿ ಮೃತಪಟ್ಟಿದ್ದರು. ಆಗ 1 ಸಾವಿರ ಮನೆಗಳು ನಾಶವಾಗಿದ್ದವು ಎಂದು ಹೇಳಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಕಾಳಿ ವಿಗ್ರಹ ವಿರೂಪಗೊಳಿಸಲು ಯತ್ನ
ತಾಲಿಬಾನ್ ಆಡಳಿತದಿಂದಾಗಿ ನಿರುದ್ಯೋಗ, ಹಸಿವು, ಬರದಿಂದ ತತ್ತರಿಸಿರುವ ಅಫ್ಘಾನಿಸ್ತಾನದ ಜನತೆಗೆ ಹಿಮಪಾತವು ಮತ್ತೊಂದು ಹೊಡೆತ ನೀಡಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಂಗಳವಾರ ಚಲಿಸುತ್ತಿದ್ದ ವಾಹನದ ಮೇಲೆ ಹಿಮಪಾತವಾಗಿದ್ದು, ಅದರಲ್ಲಿ ಸಿಲುಕಿಕೊಂಡಿದ್ದ ಮಗು ಸೇರಿ 30 ಮಂದಿಯನ್ನು ಸತತ 6 ಗಂಟೆಗಳ ಕಾರ್ಯಾಚರಣೆ ನಡೆಸಿ ಭಾರತೀಯ ಸೇನೆ ಯೋಧರು ರಕ್ಷಿಸಿದ್ದಾರೆ.
ಈ ವೇಳೆ ತಕ್ಷಣ ಭಾರತೀಯ ಸೇನೆಯ ಹಿಮಪಾತ ರಕ್ಷಣಾ ತಂಡಗಳಾದ 2 ರಕ್ಷಣಾ ತಂಡಗಳು ಮತ್ತು (ಜಿಆರ್‍ಇಎಫ್) ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್ ಸತತ 6 ಗಂಟೆಗಳ ಕಾರ್ಯಾಚರಣೆ ನಡೆಸಿತ್ತು. ವಾಹನದಲ್ಲಿದ್ದ ಜನರನ್ನು ರಕ್ಷಸಿದ್ದೇವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಭಾರತೀಯ ಯೋಧರು ಹಿಮಪಾತದಲ್ಲಿ ಸಿಲುಕಿರುವ 30 ಮಂದಿಯನ್ನು ರಕ್ಷಿಸಿ 14 ಜನರನ್ನು ನಿಲಂಗೆ ಮತ್ತು ಇನ್ನೂ 16 ಜನರನ್ನು ನಗರದ ಎಸ್‍ಸಿ ಪಾಸ್‍ಗೆ ಸ್ಥಳಾಂತರಿಸಲಾಗಿದೆ. ರಕ್ಷಿಸಲ್ಪಟ್ಟ ನಾಗರಿಕರಿಗೆ ರಾತ್ರಿ ಆಹಾರ, ವೈದ್ಯಕೀಯ ಸೌಲಭ್ಯಗಳನ್ನು ಸಹ ನೀಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: BJP ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಪಕ್ಷದ ಮೊದಲ ಗುರಿ: ಓವೈಸಿ
ಅದೇ ರಸ್ತೆಯ ಇನ್ನೊಂದು ಭಾಗದಲ್ಲಿ 16 ಜನರ ಮತ್ತೊಂದು ಗುಂಪು ಸಿಲುಕಿಕೊಂಡಿದ್ದು, ಅವರನ್ನೂ ಸಹ ರಕ್ಷಿಸುವ ಭರವಸೆ ನೀಡಿದ್ದಾರೆ.