Tag: ಹಿಮಪಾತ

  • ಮೌಂಟ್ ಎವರೆಸ್ಟ್‌ನಲ್ಲಿ ಭಾರಿ ಹಿಮಪಾತ – 1,000 ಜನ ಸಿಲುಕಿರುವ ಶಂಕೆ; 350 ಚಾರಣಿಗರ ರಕ್ಷಣೆ

    ಮೌಂಟ್ ಎವರೆಸ್ಟ್‌ನಲ್ಲಿ ಭಾರಿ ಹಿಮಪಾತ – 1,000 ಜನ ಸಿಲುಕಿರುವ ಶಂಕೆ; 350 ಚಾರಣಿಗರ ರಕ್ಷಣೆ

    ಕಠ್ಮಂಡು: ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್‌ನಲ್ಲಿ (Mount Everest) ತೀವ್ರ ಹಿಮಪಾತವಾದ (Blizzard) ಕಾರಣ ಟಿಬೆಟಿಯನ್ ಇಳಿಜಾರಿನ ಶಿಬಿರಗಳಲ್ಲಿ ಸುಮಾರು ಒಂದು ಸಾವಿರ ಪರ್ವತಾರೋಹಿಗಳು ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

    ಪರ್ವತ ಪ್ರದೇಶವನ್ನು ತಲುಪುವ ಹಾದಿಯೂ ಹಿಮದಿಂದ ಮುಚ್ಚಿದ್ದು, ತೆರವಿಗೆ ನೂರಾರು ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಾಗಲೇ ಹಲವು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಸುಪ್ರೀಂ ಸಿಜೆಐ ಮೇಲೆ ಶೂ ಎಸೆದ ವಕೀಲ – ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ; ಮೋದಿ ತೀವ್ರ ಖಂಡನೆ

    350 ಮಂದಿ ರಕ್ಷಣೆ
    ಹತ್ತಿರದ ಕುಡಾಂಗ್ ಪಟ್ಟಣದಲ್ಲಿ ಸುಮಾರು 350 ಮಂದಿಯನ್ನು ಇಲ್ಲಿಯವರೆಗೆ ರಕ್ಷಿಸಲಾಗಿದೆ ಮತ್ತು ಸುರಕ್ಷಿತ ಸ್ಥಳಕ್ಕೆ ತರಲಾಗಿದೆ. ಟಿಬೆಟ್‌ನ ಬ್ಲೂಸ್ಕೈ ತಂಡದ ಬೆಂಬಲದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ಹವಾಮಾನ ವೈಪರೀತ್ಯದ ಹಿನ್ನೆಲೆ ಎವರೆಸ್ಟ್ ಪರ್ವತಾರೋಹಣಕ್ಕೆ ಟಿಕೆಟ್ ಕಾಯ್ದಿರಿಸುವಿಕೆಯನ್ನೂ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: Bihar Election Dates 2025 | ಬೂತ್ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಲು ಸಹಾಯವಾಣಿ

  • ಬದರಿನಾಥದಲ್ಲಿ ಹಿಮಪಾತ, 47 ಕಾರ್ಮಿಕರ ರಕ್ಷಣೆ – ಮೂವರ ಸ್ಥಿತಿ ಗಂಭೀರ, ಮೋದಿಯಿಂದ ಅಗತ್ಯ ನೆರವಿನ ಭರವಸೆ

    ಬದರಿನಾಥದಲ್ಲಿ ಹಿಮಪಾತ, 47 ಕಾರ್ಮಿಕರ ರಕ್ಷಣೆ – ಮೂವರ ಸ್ಥಿತಿ ಗಂಭೀರ, ಮೋದಿಯಿಂದ ಅಗತ್ಯ ನೆರವಿನ ಭರವಸೆ

    – ಇನ್ನೂ 8 ಮಂದಿ ಕಾರ್ಮಿಕರ ರಕ್ಷಣೆಗೆ ಹರಸಾಹಸ

    ನವದೆಹಲಿ: ಉತ್ತರಾಖಂಡ್‌ನ (Uttarakhand) ಚಮೋಲಿಯಲ್ಲಿ ಹಿಮಸ್ಫೋಟದಿಂದಾಗಿ ಕಾಮಗಾರಿ ನಡೆಸುತ್ತಿದ್ದ 57ಕ್ಕೂ ಹೆಚ್ಚು ಬಾರ್ಡರ್ ರೋಡ್ ಆರ್ಗನೈಸೇಷನ್ (BRO) ಕಾರ್ಮಿಕರು ಸಿಲುಕಿದ್ದು ಇಲ್ಲಿಯವರೆಗೆ 47 ಕಾರ್ಮಿಕರನ್ನು ರಕ್ಷಿಸಲಾಗಿದೆ. ಇನ್ನೂ 8 ಕಾರ್ಮಿಕರು ಹಿಮದಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

    ಈಗಾಗಲೇ ರಕ್ಷಣೆ ಮಾಡಲಾದ ಕಾರ್ಮಿಕರನ್ನು ಹೆಲಿಕಾಪ್ಟರ್ ಮೂಲಕ ಜೋಶಿ ಮಠದಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಮದಡಿ ಸಿಲುಕಿರುವ ಉಳಿದ ಕಾರ್ಮಿಕರ ರಕ್ಷಣೆಗೆ ಸೇನಾ ಕಾರ್ಯಾಚರಣೆ ಮುಂದುವರಿದಿದೆ.

    ಈ ಬಗ್ಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಜೊತೆಗೆ ಅಗತ್ಯ ನೆರವಿನ ಭರವಸೆಯನ್ನೂ ನೀಡಿದ್ದಾರೆ.

    ಚಮೋಲಿ ಜಿಲ್ಲೆಯಲ್ಲಿ ಏಕಾಏಕಿ ಹಿಮಪರ್ವತ ಜಾರಿ ಬಂದಿದ್ದು, ಘಸ್ತೋಲಿಗೆ ಸಂಪರ್ಕ ಕಲ್ಪಿಸುವ ಮಾನಾ ಗ್ರಾಮದಲ್ಲಿ ಅವಾಂತರ ಸೃಷ್ಟಿಯಾಗಿದೆ. ಹಿಮದಡಿ ಸಿಲುಕಿರುವ ಇನ್ನೂ 8 ಕಾರ್ಮಿಕರಿಗಾಗಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಪಿಬಿ, ಬಿಆರ್‌ಓ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸ್ತಿದ್ದಾರೆ.

    ಮೇಲ್ಭಾಗದ ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಲು ಜಿಲ್ಲೆಯ ಶಾಸ್ತ್ರಿನಗರದಲ್ಲಿ ನೋಡನೋಡ್ತಿದ್ದಂತೆ ಕಾರುಗಳು-ಬೈಕ್‌ಗಳು ಕೊಚ್ಚಿ ಹೋಗಿವೆ. ತಗ್ಗು ಪ್ರದೇಶದಜನರನ್ನು ಸುರಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಲಾಗಿದೆ.

    ಶಿಮ್ಲಾ, ಚಂಬಲ್, ಕಿನ್ನೌರ್, ಲಹೌಲ್‌ನಲ್ಲೂ ಹಾನಿಯಾಗಿದೆ. ಕಿರಾತ್‌ಪುರ- ಮನಾಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಿಮ್ಲಾ- ಕಿನ್ನೌರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿತವಾಗಿದೆ. ಕುಲು, ಮಂಡಿ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್‌ಜಾಮ್ ಉಂಟಾಗಿದೆ. ಬಿಯಾಸ್, ಉಹಾಲ್ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

    ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ (Srinagar) ದಟ್ಟ ಹಿಮ ಬೀಳುತ್ತಿದೆ. ಉತ್ತರಾಖಂಡ್‌ನ ಪರ್ವತ ಪ್ರದೇಶದಲ್ಲಿ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, 20 ಸೆಂಟಿಮೀಟರ್‌ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್‌ಗಳಲ್ಲೂ ಗುಡುಗು-ಸಿಡಿಲು-ಮಿಂಚು ಸಹಿತ ಭಾರೀ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

  • ಬದರಿನಾಥದಲ್ಲಿ ಹಿಮಪಾತ, 32 ಕಾರ್ಮಿಕರ ರಕ್ಷಣೆ – ಕುಲುವಿನಲ್ಲಿ ವರ್ಷಧಾರೆ, ಶ್ರೀನಗರದಲ್ಲಿ ದಟ್ಟ ಮಂಜು

    ಬದರಿನಾಥದಲ್ಲಿ ಹಿಮಪಾತ, 32 ಕಾರ್ಮಿಕರ ರಕ್ಷಣೆ – ಕುಲುವಿನಲ್ಲಿ ವರ್ಷಧಾರೆ, ಶ್ರೀನಗರದಲ್ಲಿ ದಟ್ಟ ಮಂಜು

    ನವದೆಹಲಿ: ಕರ್ನಾಟಕದಲ್ಲಿ ಬಿಸಿಲ ಪ್ರತಾಪ ದಿನೇ ದಿನೇ ಕಾಡುತ್ತಿದ್ದರೆ ಉತ್ತರ ಭಾರತದಲ್ಲಿ (North India) ಮಳೆ, ಹಿಮದ ಆರ್ಭಟ ಶುರುವಾಗಿದೆ. ಉತ್ತರಾಖಂಡ್‌ನ (Uttarakhand) ಬದರಿನಾಥ ದೇಗುಲದ (Badrinath Temple) 3 ಕಿ.ಮೀ. ಸಮೀಪದಲ್ಲಿ ಹಿಮಸ್ಫೋಟವಾಗಿದೆ.

    ಹಿಮಸ್ಫೋಟದಿಂದ (Avalanche) ಕಾಮಗಾರಿ ನಡೆಸುತ್ತಿದ್ದ 57ಕ್ಕೂ ಹೆಚ್ಚು ಬಾರ್ಡರ್ ರೋಡ್ ಆರ್ಗನೈಸೇಷನ್ (BRO) ಕಾರ್ಮಿಕರು ಸಿಲುಕಿದ್ದು ಇಲ್ಲಿಯವರೆಗೆ 32 ಕಾರ್ಮಿಕರನ್ನು ರಕ್ಷಿಸಲಾಗಿದೆ. ಚಮೋಲಿ ಜಿಲ್ಲೆಯಲ್ಲಿ ಏಕಾಏಕಿ ಹಿಮಪರ್ವತ ಜಾರಿ ಬಂದಿದ್ದು, ಘಸ್ತೋಲಿಗೆ ಸಂಪರ್ಕ ಕಲ್ಪಿಸುವ ಮಾನಾ ಗ್ರಾಮದಲ್ಲಿ ಅವಾಂತರ ಸೃಷ್ಟಿಯಾಗಿದೆ. ಇದನ್ನೂ ಓದಿ: ಯಮುನಾ ಸ್ವಚ್ಛತೆಗೆ ಮಿಷನ್ ಮೋಡ್; ಮಾಸ್ಟರ್ ಪ್ಲ್ಯಾನ್ ಸಿದ್ಧ

    ಹಿಮದಡಿ ಸಿಲುಕಿರುವ 25 ಕಾರ್ಮಿಕರಿಗಾಗಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಐಟಿಪಿಬಿ, ಬಿಆರ್‌ಓ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸ್ತಿದ್ದಾರೆ. ಸಿಎಂ ಧಾಮಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದಾರೆ.

    ಮೇಲ್ಭಾಗದ ಹಿಮಾಚಲ ಪ್ರದೇಶದಲ್ಲಿ (Himachal Pradesh) ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಲು ಜಿಲ್ಲೆಯ ಶಾಸ್ತ್ರಿನಗರದಲ್ಲಿ ನೋಡನೋಡ್ತಿದ್ದಂತೆ ಕಾರುಗಳು-ಬೈಕ್‌ಗಳು ಕೊಚ್ಚಿ ಹೋಗಿವೆ. ತಗ್ಗು ಪ್ರದೇಶದಜನರನ್ನು ಸುರಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಲಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಜನಜೀವನ ಅಸ್ತವ್ಯಸ್ಥ

    ಶಿಮ್ಲಾ, ಚಂಬಲ್, ಕಿನ್ನೌರ್, ಲಹೌಲ್‌ನಲ್ಲೂ ಹಾನಿಯಾಗಿದೆ. ಕಿರಾತ್‌ಪುರ- ಮನಾಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶಿಮ್ಲಾ- ಕಿನ್ನೌರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿತವಾಗಿದೆ. ಕುಲು, ಮಂಡಿ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್‌ಜಾಮ್ ಉಂಟಾಗಿದೆ. ಬಿಯಾಸ್, ಉಹಾಲ್ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ.

    ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ (Srinagar) ದಟ್ಟ ಹಿಮ ಬೀಳುತ್ತಿದೆ. ಉತ್ತರಾಖಂಡ್‌ನ ಪರ್ವತ ಪ್ರದೇಶದಲ್ಲಿ 30-40 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, 20 ಸೆಂಟಿಮೀಟರ್‌ವರೆಗೆ ಮಳೆಯಾಗುವ ಸಾಧ್ಯತೆ ಇದೆ.

    ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್‌ಗಳಲ್ಲೂ ಗುಡುಗು-ಸಿಡಿಲು-ಮಿಂಚು ಸಹಿತ ಭಾರೀ ವರ್ಷಧಾರೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

     

  • ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಜನಜೀವನ ಅಸ್ತವ್ಯಸ್ಥ

    ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತ – ಜನಜೀವನ ಅಸ್ತವ್ಯಸ್ಥ

    ಶಿಮ್ಲಾ: ಹಿಮಾಚಲ ಪ್ರದೇಶದ (Himachal Pradesh) ಬುಡಕಟ್ಟು ಜಿಲ್ಲೆಗಳಾದ ಲಹೌಲ್, ಸ್ಪಿತಿ, ಚಂಬಲ್ ಮತ್ತು ಮಂಡಿ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಹಿಮಪಾತದ (Heavy snowfall) ಜೊತೆಗೆ ಮಳೆಯಾಗುತ್ತಿದ್ದು, ಈ ನಡುವೆ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    ಮೂರು ದಿನಗಳ ನಂತರವೂ ಲಾಹೌಲ್-ಸ್ಪಿಟಿಯಲ್ಲಿ ಹಿಮಪಾತ ಮುಂದುವರೆದಿದೆ. ಹಲವಾರು ಪ್ರದೇಶಗಳಲ್ಲಿ ಮೂರು ಅಡಿಗೂ ಹೆಚ್ಚು ಹಿಮ ಸಂಗ್ರಹವಾಗಿದ್ದು, ಭಾರೀ ಹಿಮಪಾತದ ಅಪಾಯವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 50 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ

    ಮತ್ತೊಂದೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಲ್ಲು ಜಿಲ್ಲೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಭೂತ್‌ನಾಥ್ ನಾಲಾ ಪ್ರದೇಶದಲ್ಲಿ ಹಲವಾರು ವಾಹನಗಳು ಕೊಚ್ಚಿ ಹೋಗಿವೆ. ಗಾಂಧಿನಗರದಲ್ಲಿ ಅವಶೇಷಗಳ ಅಡಿಯಲ್ಲಿ ವಾಹನಗಳು ಸಿಲುಕಿವೆ. ಹಿಮಾಚಲ ಪ್ರದೇಶದ ಹವಾಮಾನ ಇಲಾಖೆಯು ಅರೆಂಜ್ ಅಲರ್ಟ್ ನೀಡಿದೆ. ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ವಂಚನೆ ಕೇಸ್‌ – ಸ್ಟಾರ್‌ ನಟಿಯರಾದ ತಮನ್ನಾ, ಕಾಜಲ್‌ ಅಗರ್ವಾಲ್‌ಗೆ ಸಂಕಷ್ಟ

    ನಿರಂತರವಾದ ಭಾರೀ ಹಿಮಪಾತವನ್ನು ಪರಿಗಣಿಸಿ, ಜಿಲ್ಲಾಡಳಿತವು ಶುಕ್ರವಾರ ಲಹೌಲ್-ಸ್ಪಿಟಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಸೂಚಿಸಿದೆ. ಮಂಡಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಬಸ್‌ವೊಂದು ಅಪಘಾತಕ್ಕೀಡಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ, ಅಧಿಕಾರಿಗಳು ರಸ್ತೆ ತೆರವು ಕಾರ್ಯ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಚಲಿಸುತ್ತಿದ್ದ ಬೈಕ್‌ನಲ್ಲಿ ಪ್ರೇಯಸಿ ಜೊತೆ ರೊಮ್ಯಾನ್ಸ್ – ರೋಡ್‌ ರೋಮಿಯೋ ಅರೆಸ್ಟ್‌!

  • ಭಾರೀ ಹಿಮಪಾತ; ಹಿಮಾಚಲದ ಕುಲುವಿನಲ್ಲಿ ಸಿಲುಕಿದ್ದ 5,000 ಪ್ರವಾಸಿಗರ ರಕ್ಷಣೆ

    ಭಾರೀ ಹಿಮಪಾತ; ಹಿಮಾಚಲದ ಕುಲುವಿನಲ್ಲಿ ಸಿಲುಕಿದ್ದ 5,000 ಪ್ರವಾಸಿಗರ ರಕ್ಷಣೆ

    ಡೆಹ್ರಾಡೂನ್: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತದ ನಡುವೆ ಶುಕ್ರವಾರ ಹಿಮಾಚಲ ಪ್ರದೇಶದ ಕುಲುವಿನ ಸ್ಕೀ ರೆಸಾರ್ಟ್ ಸೊಲಾಂಗ್ ನಾಲಾದಲ್ಲಿ ಸಿಲುಕಿದ್ದ ಸುಮಾರು 5,000 ಪ್ರವಾಸಿಗರನ್ನು ಪೊಲೀಸರು ರಕ್ಷಿಸಿದ್ದಾರೆ.

    ಸೋಲಾಂಗ್ ನಾಲಾದಲ್ಲಿ ಸುಮಾರು 1,000 ವಾಹನಗಳು ಸಿಲುಕಿಕೊಂಡಿದ್ದವು. ಶುಕ್ರವಾರ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದು ಕುಲು ಪೊಲೀಸರು ತಿಳಿಸಿದ್ದಾರೆ.

    ಭಾರೀ ಹಿಮಪಾತದಿಂದಾಗಿ ಸುಮಾರು 1,000 ಪ್ರವಾಸಿಗರು ಮತ್ತು ಇತರ ವಾಹನಗಳು ಸೋಲಾಂಗ್ ನಾಲಾದಲ್ಲಿ ಸಿಲುಕಿಕೊಂಡಿವೆ. ಈ ವಾಹನಗಳಲ್ಲಿ ಸುಮಾರು 5,000 ಪ್ರವಾಸಿಗರು ಇದ್ದರು. ವಾಹನಗಳು ಮತ್ತು ಪ್ರವಾಸಿಗರನ್ನು ಕುಲು ಪೊಲೀಸರು ರಕ್ಷಿಸಿದ್ದು, ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ದಿದ್ದಾರೆ. ರಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಕುಲು ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು.

    ಭಾರೀ ಹಿಮಪಾತ ಮತ್ತು ಶೀತ ಅಲೆಗಳು ಹಿಮಾಚಲ ಪ್ರದೇಶವನ್ನು ಮತ್ತಷ್ಟು ಕಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ತಿಳಿಸಿದೆ. ಹಿಮಾಚಲ ಪ್ರದೇಶವು ಲಾಹೌಲ್-ಸ್ಪಿತಿ, ಚಂಬಾ, ಕಂಗ್ರಾ, ಕುಲು, ಶಿಮ್ಲಾ ಮತ್ತು ಕಿನ್ನೌರ್ ಸೇರಿದಂತೆ ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತಕ್ಕೆ ಸಾಕ್ಷಿಯಾಗಿದೆ.

    ಡಿ.29 ರಿಂದ ಬಿಲಾಸ್ಪುರ್, ಹಮೀರ್ಪುರ್ ಮತ್ತು ಉನಾ ಜಿಲ್ಲೆಗಳನ್ನು ಒಳಗೊಂಡಂತೆ ಬಯಲು ಪ್ರದೇಶಗಳ ಮೇಲೆ ಚಳಿಗಾಳಿಯು ಪರಿಣಾಮ ಬೀರುವ ನಿರೀಕ್ಷೆಯಿದೆ. ಮಂಡಿ, ಕುಲು ಮತ್ತು ಚಂಬಾ ಸೇರಿದಂತೆ ಈ ಪ್ರದೇಶಗಳಲ್ಲಿ ಜ.1 ರವರೆಗೆ ತೀವ್ರ ಚಳಿ ಇರಲಿದೆ.

  • ಗುಲ್ಮಾರ್ಗ್‌ನಲ್ಲಿ ಈ ಸೀಸನ್ನಿನ ಮೊದಲ ಹಿಮಪಾತ, ಶ್ರೀನಗರದಲ್ಲಿ ಮಳೆ

    ಗುಲ್ಮಾರ್ಗ್‌ನಲ್ಲಿ ಈ ಸೀಸನ್ನಿನ ಮೊದಲ ಹಿಮಪಾತ, ಶ್ರೀನಗರದಲ್ಲಿ ಮಳೆ

    ಶ್ರೀನಗರ: ಕಾಶ್ಮೀರದ (Kashmir) ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಲ್ಲಿ ಶನಿವಾರದಂದು ಮೊದಲ ಹಿಮಪಾತವಾಗಿದೆ. ಬಯಲು ಪ್ರದೇಶಗಳಲ್ಲಿ ಮಳೆ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಕಣಿವೆಯ ಬಹುತೇಕ ಬಯಲು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಇನ್ನು ಕೆಲವೆಡೆ ಹಗುರದಿಂದ ಸಾಧಾರಣ ಹಿಮಪಾತವಾಗುತ್ತಿದೆ. ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಮತ್ತು ಗುಲ್ಮಾರ್ಗ್ ಮತ್ತು ಗುರೇಜ್ ಕಣಿವೆಯಲ್ಲಿ ಮುಂಜಾನೆ ಹಿಮಪಾತವಾಗಿದೆ. ಗುಲ್ಮಾರ್ಗ್ನಲ್ಲಿ ಲಘು ಹಿಮಪಾತ ದಾಖಲಾಗಿದ್ದರೆ, ಗುರೇಜ್ ಕಣಿವೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಮಧ್ಯಾಹ್ನದ ನಂತರ ಹವಾಮಾನದಲ್ಲಿ ಸುಧಾರಣೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ಸಾಲ ಬಾಧೆ – ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ

    ಗುಲ್ಮಾರ್ಗ್‌ನಲ್ಲಿ (Gulmarg) ಶನಿವಾರ ಬೆಳಗ್ಗೆ ಒಂದು ಇಂಚು ಹಿಮಪಾತವಾಗಿದ್ದು, ಬಂಡಿಪೋರಾ ಗುರೇಜ್ ರಸ್ತೆ ಸಂಚಾರವನ್ನು ಸದ್ಯಕ್ಕೆ ಮುಚ್ಚಲಾಗಿದೆ. ನ.17ರಿಂದ 23ರವರೆಗೆ ಸಾಮಾನ್ಯವಾಗಿ ಶುಷ್ಕ ವಾತಾವರಣದಿಂದ ಕೂಡಿರುವ ಸಾಧ್ಯತೆ ಇರುತ್ತದೆ. ನ.24 ರಂದು ಕೆಲವು ಸ್ಥಳಗಳಲ್ಲಿ ಸ್ವಲ್ಪ ಮಳೆ ಮತ್ತು ಹಿಮಪಾತ ಆಗುವ ಸಾಧ್ಯತೆಯಿದೆ. ಪ್ರವಾಸಿಗರು ಮತ್ತು ಪ್ರಯಾಣಿಕರು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮ ಪ್ರಯಾಣ ಮಾಡುವಂತೆ ಹವಾಮಾನ ಇಲಾಖೆಯ ಉಪನಿರ್ದೇಶಕ ಡಾ. ಮುಖ್ತಾರ್ ಅಹ್ಮದ್ ಸೂಚಿಸಿದ್ದಾರೆ. ಇದನ್ನೂ ಓದಿ: ಕಬ್ಬು ಕಟಾವು ಹಿನ್ನೆಲೆ, ಮೆಟ್ರಿಕ್ ಟನ್ ಕಬ್ಬಿಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ- ಬಿ.ಫೌಜಿಯಾ ತರನ್ನುಮ್

    ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಕೆಲವು ಭಾಗಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ಹಿಮಪಾತವಾಗುತ್ತಿದೆ. ಹಿಮದ ತೆಳುವಾದ ಪದರವು ಮನೆಗಳ ಮೇಲ್ಛಾವಣಿ, ಕಾರು, ಮೈದಾನ, ಹುಲ್ಲು ಪ್ರದೇಶ, ಮರ-ಗಿಡ, ಹೂವು-ಬಳ್ಳಿಗಳ ಮೇಲೆ ಆವರಿಸಿದೆ. ಕಣಿವೆ ರಾಜ್ಯದ ಕೆಲವು ಭಾಗಗಳಲ್ಲಿ ಎಡಬಿಡದೇ ಮಂಜು ಸುರಿತುತ್ತಿರುವ ಕಾರಣ ನಗರದ ಬೀದಿಗಳು ಕೂಡ ಹಿಮದಿಂದ ಆವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 20 ವರ್ಷಗಳ ಬಳಿಕ ರಿಂಗ್‌ನಲ್ಲಿ ಘರ್ಜಿಸಿದ ಮೈಕ್‌ ಟೈಸನ್‌ – ಜೇಕ್ ಪಾಲ್ ವಿರುದ್ಧ ಸೋಲು

  • ಕರ್ತವ್ಯದಲ್ಲಿದ್ದಾಗ ಭಾರೀ ಹಿಮಪಾತ – ಬೀದರ್ ಯೋಧ ಹುತಾತ್ಮ

    ಕರ್ತವ್ಯದಲ್ಲಿದ್ದಾಗ ಭಾರೀ ಹಿಮಪಾತ – ಬೀದರ್ ಯೋಧ ಹುತಾತ್ಮ

    ಬೀದರ್: ಭಾರೀ ಹಿಮಪಾತ (Avalanche) ಸಂಭವಿಸಿ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತದಿಂದ ಬೀದರ್‌ನ (Bidar) ಯೋಧರೊಬ್ಬರು ಸಿಕ್ಕಿಂನಲ್ಲಿ (Sikkim) ಹುತಾತ್ಮರಾಗಿದ್ದಾರೆ.

    20 ವರ್ಷಗಳಿಂದ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದ ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಕೊರಿಯಾಳ ಗ್ರಾಮದ ಯೋಧ (Soldier) ಅನಿಲ್ ಕುಮಾರ್ ಉಮಾಕಾಂತರಾವ್ ನವಾಡೆ (40) ಕರ್ತವ್ಯದಲ್ಲಿರುವಾಗಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ನಿಂದ 1.30 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆ

    2004 ರಲ್ಲಿ ಭಾರತೀಯ ಸೇನೆ (Indian Army) ಸೇರಿದ್ದ ಅನಿಲ್‌ ಕುಮಾರ್ ಜಮ್ಮು ಕಾಶ್ಮೀರ, ರಾಜಸ್ಥಾನ, ನಾಗಲಾಂಡ್, ಶಿಮ್ಲಾ, ಮಣಿಪುರ ಹಾಗೂ ಸಿಕ್ಕಿಂ ಸೇರಿದಂತೆ ಹಲವು ರಾಜ್ಯದ ಗಡಿಯಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಸಿಕ್ಕಿಂ ರಾಜ್ಯದಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅನಿಲ್ ಕುಮಾರ್ ಪಾರ್ಥಿವ ಶರೀರ ಭಾನುವಾರ ಸಂಜೆ ಸ್ವಗ್ರಾಮಕ್ಕೆ ಬರುವ ಸಾಧ್ಯತೆಯಿದೆ.

  • ಉತ್ತರಾಖಂಡ ದುರಂತ- ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗ್ಳೂರಿಗೆ ವಾಪಸ್

    ಉತ್ತರಾಖಂಡ ದುರಂತ- ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗ್ಳೂರಿಗೆ ವಾಪಸ್

    ಬೆಂಗಳೂರು: ಉತ್ತರಾಖಂಡ (Uttarakhand) ಸಹಸ್ತ್ರ ತಾಲ್ ಶಿಖರದ ಟ್ರೆಕ್ಕಿಂಗ್‍ನಲ್ಲಿ  ಸಿಲುಕಿ ಬದುಕುಳಿದ ಚಾರಣಿಗರು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಸಚಿವ ಕೃಷ್ಣಬೈರೇಗೌಡ (Krishna Byre Gowda)  ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ಇಂದು ಸಂಜೆ 5.50 ರ ವಿಮಾನದಲ್ಲಿ ಬದುಕುಳಿದ ಎಲ್ಲಾ 13 ಮಂದಿ ಚಾರಣಿಗರು ಬೆಂಗಳೂರಿಗೆ ಹಿಂದಿರುಗಲು ಟಿಕೆಟ್ ಕಾಯ್ದಿರಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಸಾವನ್ನಪ್ಪಿದ 9 ಚಾರಣಿಗರ ಮೃತದೇಹಗಳು ಚಾರ್ಟರ್ ಫ್ಲೈಟ್ ಮೂಲಕ ಬೆಂಗಳೂರಿಗೆ: ಕೃಷ್ಣಬೈರೇಗೌಡ

    ಇನ್ನು ಮೃತ 9 ಜನ ಚಾರಣಿಗರ ದೇಹಗಳನ್ನು ಎಂಬಾಮಿಂಗ್‍ಗಾಗಿ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಬಾಮಿಂಗ್ ನಂತರ ಮೃತದೇಹಗಳನ್ನು ಅಂಬುಲೆನ್ಸ್‍ಗಳ ಮೂಲಕ ದೆಹಲಿ ವಿಮಾನ ನಿಲ್ದಾಣಕ್ಕೆ ಸಾಗಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ ದೆಹಲಿ-ಬೆಂಗಳೂರು ವಿಮಾನಗಳಲ್ಲಿ ಮೃತ ದೇಹಗಳನ್ನು ರವಾನಿಸಲು ಸ್ಥಳವನ್ನು ಕಾಯ್ದಿರಿಸಿದ್ದೇವೆ ಎಂದಿದ್ದಾರೆ.

     

    ಈ ಪ್ರಕಾರ, ಈಗಾಗಲೇ ಡೆಹ್ರಾಡೂನ್ ತಲುಪಿರುವ ಬದುಕಿರುವ ಚಾರಣಿಗರು ಇಂದು ರಾತ್ರಿ 8:45 ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಟರ್ಮಿನಲ್ 1 ಗೆ ಸಚಿವ ಕೃಷ್ಣ ಬೈರೇಗೌಡ ಜೊತೆಗೆ 13 ಮಂದಿ ಚಾರಣಿಗರು ಬರುತ್ತಾರೆ.

  • ಸಿಕ್ಕಿಂನಲ್ಲಿ ಹಿಮಪಾತ – ಸಿಲುಕಿಕೊಂಡಿದ್ದ 800 ಪ್ರವಾಸಿಗರನ್ನು ರಕ್ಷಿಸಿದ ಸೇನೆ

    ಸಿಕ್ಕಿಂನಲ್ಲಿ ಹಿಮಪಾತ – ಸಿಲುಕಿಕೊಂಡಿದ್ದ 800 ಪ್ರವಾಸಿಗರನ್ನು ರಕ್ಷಿಸಿದ ಸೇನೆ

    ಗ್ಯಾಂಗ್ಟಾಕ್: ಪೂರ್ವ ಸಿಕ್ಕಿಂನ (Sikkim) ಪರ್ವತ ಪ್ರದೇಶದಲ್ಲಿ ಹಿಮಪಾತವಾದ (Snowfall) ಹಿನ್ನೆಲೆ ಸಿಲುಕಿಕೊಂಡಿದ್ದ 800ಕ್ಕೂ ಹೆಚ್ಚು ಪ್ರವಾಸಿಗರನ್ನು ಸೇನಾ ಅಧಿಕಾರಿಗಳು ಬುಧವಾರ ರಕ್ಷಿಸಿದ್ದಾರೆ.

    ಬುಧವಾರ ಹಿಮಪಾತವಾದ ಹಿನ್ನೆಲೆ ಭಾರತೀಯ ಸೇನೆಯ ವಿಭಾಗವಾದ ತ್ರಿಶಕ್ತಿ ಕಾರ್ಪ್ಸ್‌ನ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಕ್ಷಣಾ ಕಾರ್ಯಾಚರಣೆ ಸಂಜೆಯವರೆಗೂ ಮುಂದುವರಿದಿದೆ. ಇದನ್ನೂ ಓದಿ: ಸಂಸತ್ತಿನಲ್ಲಿ ಭದ್ರತಾ ಲೋಪ – 8 ಲೋಕಸಭಾ ಸಿಬ್ಬಂದಿಯ ಅಮಾನತು

    ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಅವರಿಗೆ ಆಶ್ರಯ, ಬೆಚ್ಚಗಿನ ಬಟ್ಟೆ, ವೈದ್ಯಕೀಯ ನೆರವು ಹಾಗೂ ಬಿಸಿ ಊಟವನ್ನೂ ಒದಗಿಸಲಾಗಿದೆ. ಇದನ್ನೂ ಓದಿ: ಸಂಸತ್ ಭವನದಲ್ಲಿ ಸ್ಮೋಕ್ ದಾಳಿ – ‘ಕೈ’ ಕಾರ್ಯಕರ್ತರಿಂದ ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ

  • ಭಾರೀ ಮಳೆ.. ಹಿಮಪಾತ – ಲಡಾಕ್‌ನಲ್ಲಿ ಬೆಂಗಳೂರಿಗರು ಲಾಕ್

    ಭಾರೀ ಮಳೆ.. ಹಿಮಪಾತ – ಲಡಾಕ್‌ನಲ್ಲಿ ಬೆಂಗಳೂರಿಗರು ಲಾಕ್

    ಬೆಂಗಳೂರು: ಹಿಮಪಾತ ಹಾಗೂ ಭಾರೀ ಮಳೆ ಹಿನ್ನೆಲೆಯಲ್ಲಿ ಲಡಾಕ್‌ನಲ್ಲಿ (Ladakh) ಬೆಂಗಳೂರಿಗರು (Bengaluru People) ಸಿಲುಕಿಕೊಂಡಿದ್ದಾರೆ. ಲಡಾಕ್‌ನ ರಾಷ್ಟ್ರೀಯ ಹೆದ್ದಾರಿಗಳು ಭೂ ಕುಸಿತವಾಗಿದ್ದು, ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ.

    ಲಡಾಕ್‌ನಲ್ಲಿ ವಿಮಾನಗಳ ಹಾರಾಟವೂ ರದ್ದಾಗಿದೆ. ವಿಮಾನ ಸಿಗದೆ ಕಳೆದ ಎರಡು ದಿನಗಳಿಂದ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ವೈದ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ಖತರ್ನಾಕ್ ರಾಬರ್ ಕಾಲಿಗೆ ಪೊಲೀಸರ ಗುಂಡೇಟು

    ಭಾರೀ ಮಳೆ, ದಟ್ಟ ಮಂಜು, ವಿಪರೀತ ಚಳಿಯಲ್ಲಿ ನಡುಗುತ್ತಲೇ ಬೆಂಗಳೂರಿಗರು ವೀಡಿಯೋ ಹಂಚಿಕೊಂಡಿದ್ದಾರೆ. ಹೇಗಾದ್ರೂ ಮಾಡಿ ಬೆಂಗಳೂರಿಗೆ ಕರೆಸಿಕೊಳ್ಳಿ. ತುಂಬಾ ಕಷ್ಟ ಆಗ್ತಿದೆ. ದಯವಿಟ್ಟು ಬೆಂಗಳೂರಿಗೆ ತಲುಪಿಸುವ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ವಿಮಾನಗಳ ಹಾರಾಟ ಸ್ಥಗಿತಗೊಂಡ ಹಿನ್ನೆಲೆ ಏರ್‌ಪೋರ್ಟ್‌ನಲ್ಲಿ ಜನರ ದಂಡೇ ನೆರೆದಿದೆ. ನಿರಂತರ ಮಳೆಗೆ ಆರೋಗ್ಯ ಕೈಕೊಡ್ತಿದೆ. ಇಲ್ಲಿ ಇನ್ನೂ ಸುಮಾರು ಕನ್ನಡಿಗರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಲ್ಲಿನ ಪರಿಸ್ಥಿತಿಯನ್ನ ಬೆಂಗಳೂರು ಮೂಲದ ವೈದ್ಯರು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]