Tag: ಹಿಮಂತ್ ಬಿಸ್ವಾ ಶರ್ಮಾ

  • ಮದರಸಾದಲ್ಲಿ ಓದಿದ ಬಳಿಕ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ: ಹಿಮಂತ್ ಬಿಸ್ವಾ ಶರ್ಮಾ

    ಮದರಸಾದಲ್ಲಿ ಓದಿದ ಬಳಿಕ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ: ಹಿಮಂತ್ ಬಿಸ್ವಾ ಶರ್ಮಾ

    ಡಿಸ್ಪುರ್: ಶಾಲೆಗಳು ಆಧುನಿಕ ಶಿಕ್ಷಣವನ್ನು ನೀಡಬೇಕು ಇದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನು ಬೇಕಾದರೂ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಆದರೆ ಧಾರ್ಮಿಕ ಶಿಕ್ಷಣವನ್ನು ಮನೆಯಲ್ಲಿಯೇ ನೀಡಬಹುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

    ASSAM MADARASA MADRASA

    ಮಕ್ಕಳಿಗೆ ಮದರಸಾಗಳಲ್ಲಿ ನೀಡುತ್ತಿರುವ ಶಿಕ್ಷಣವನ್ನು ವಿರೋಧಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಕ್ಕಳಿಗೆ ನೀವು ಮದರಸಾದಲ್ಲಿ ಓದಿದ ಬಳಿಕ ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರೆ ಅವರು ಮದರಸಾಗೆ ಹೋಗಲು ಸಿದ್ಧರಿರುವುದಿಲ್ಲ. ಅಂತಹ ಧಾರ್ಮಿಕ ಶಾಲೆಗಳಿಗೆ ಅವರನ್ನು ಸೇರಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ.  ಇದನ್ನೂ ಓದಿ: ಜನರಲ್ ಟಿಕೆಟ್‍ಗಾಗಿ ರೈಲು ಪ್ರಯಾಣಿಕರ ನೂಕಾಟ

    ಮದರಸಾ ಎಂಬ ಪದ ಮನಸ್ಸಿನಲ್ಲಿ ಇರುವವರೆಗೂ ಮಕ್ಕಳು ಎಂದಿಗೂ ಡಾಕ್ಟರ್ ಅಥವಾ ಇಂಜಿನಿಯರ್ ಆಗಲು ಸಾಧ್ಯವಿಲ್ಲ. ಮದರಸಾಗಳಲ್ಲಿನ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಏನನ್ನಾದರೂ ಮಾಡಲು ಆಯ್ಕೆಗಳಿರುವುದಿಲ್ಲ. ಯಾವುದೇ ಧಾರ್ಮಿಕ ಸಂಸ್ಥೆಗೆ ಪ್ರವೇಶಸುವ ವ್ಯಕ್ತಿ ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಯಸ್ಸಿನಲ್ಲಿರಬೇಕು. ಇದನ್ನೂ ಓದಿ:  ಮದುವೆಯಲ್ಲಿ ಕಳ್ಳರ ಕೈಚಳಕ- ಕಣ್ಣಾಮುಚ್ಚಾಲೆ ಆಡುವ ನೆಪದಲ್ಲಿ ಚಿನ್ನಾಭರಣ ಕಳ್ಳತನ

    ಔಪಚಾರಿಕ ಶಿಕ್ಷಣಕ್ಕಿಂತ ಧಾರ್ಮಿಕ ಶಿಕ್ಷಣಕ್ಕೆ ಆದ್ಯತೆ ನೀಡುವ ಮದರಸಾಗಳು ಅಸ್ತಿತ್ವದಲ್ಲಿಲ್ಲ ಎಂದು ನಾನು ಯಾವಾಗಲೂ ಪ್ರತಿಪಾದಿಸುತ್ತೇನೆ. ಪ್ರತಿ ಮಗುವೂ ವಿಜ್ಞಾನ, ಗಣಿತ ಮತ್ತು ಆಧುನಿಕ ಶಿಕ್ಷಣದ ಜ್ಞಾನವನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ.

  • ಅಲ್ಪಸಂಖ್ಯಾತರನ್ನು ರಕ್ಷಿಸುವುದು ಮುಸ್ಲಿಮರ ಕರ್ತವ್ಯ: ಅಸ್ಸಾಂ ಸಿಎಂ

    ಅಲ್ಪಸಂಖ್ಯಾತರನ್ನು ರಕ್ಷಿಸುವುದು ಮುಸ್ಲಿಮರ ಕರ್ತವ್ಯ: ಅಸ್ಸಾಂ ಸಿಎಂ

    ಡಿಸ್ಪುರ್:  ಅಸ್ಸಾಂನ ಜನಸಂಖ್ಯೆಯಲ್ಲಿ ಶೇ.35 ರಷ್ಟು ಮುಸ್ಲಿಮರಿದ್ದು, ಇನ್ನು ಮುಂದೆ ಅವರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುವುದಿಲ್ಲ ಎಂದು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.

    ಅಸ್ಸಾಂ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಮಾಡುತ್ತಿರುವಾಗ ಶರ್ಮಾ ಅವರು, ಮುಸ್ಲಿಂ ಸಮುದಾಯದ ಜನರು ವಿರೋಧ ಪಕ್ಷದ ನಾಯಕರು, ಶಾಸಕರು, ಸಮಾನ ಅವಕಾಶ ಮತ್ತು ಅಧಿಕಾರವನ್ನು ಹೊಂದಿದ್ದಾರೆ. ಅದನ್ನು ಖಚಿತಪಡಿಸಿಕೊಳ್ಳುವುದು ಅವರ ಕರ್ತವ್ಯವಾಗಿದೆ ಎಂದು ಮಾತನ್ನು ಆರಂಭಿಸಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ

    ಅಧಿಕಾರವು ಜವಾಬ್ದಾರಿಯೊಂದಿಗೆ ಬರುತ್ತೆ. ಮುಸ್ಲಿಮರು ಅಸ್ಸಾಂನ ಜನಸಂಖ್ಯೆ ಶೇ.35 ರಷ್ಟಿದ್ದಾರೆ. ಇಲ್ಲಿನ ಅಲ್ಪಸಂಖ್ಯಾತರನ್ನು ರಕ್ಷಿಸುವುದು ಅವರ ಕರ್ತವ್ಯ. ಅಸ್ಸಾಮಿಗರು ಭಯದಲ್ಲಿದ್ದಾರೆ. ತಮ್ಮ ಸಂಸ್ಕೃತಿ ಮತ್ತು ನಾಗರಿಕತೆ ರಕ್ಷಣೆಯಾಗುತ್ತ ಎಂಬ ಭಯವಿದೆ. ಸಾಮರಸ್ಯ ಎರಡು ಧರ್ಮಗಳ ನಡುವೆ ತುಂಬಾ ಮುಖ್ಯ. ಸಂಕರಿ ಸಂಸ್ಕೃತಿ, ಸತ್ರಿಯಾ ಸಂಸ್ಕೃತಿ ರಕ್ಷಣೆ ಬಗ್ಗೆ ಮುಸ್ಲಿಮರು ಮಾತನಾಡಲಿ. ಆಗ ಎಲ್ಲರ ನಡುವೆ ಸೌಹಾರ್ದತೆ ಇರುತ್ತದೆ. ಹತ್ತು ವರ್ಷಗಳ ಹಿಂದೆ, ನಾವು ಅಲ್ಪಸಂಖ್ಯಾತರಾಗಿರಲಿಲ್ಲ ಆದರೆ ಈಗ ನಾವಿದ್ದೇವೆ ಎಂದು ತಿಳಿಸಿದರು.

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಅಸ್ಸಾಂ ಜನರೊಂದಿಗೆ ಸಮೀಕರಿಸಿ ಮಾತನಾಡಿದ ಅವರು, ಅಸ್ಸಾಮಿಗಳು ಕಾಶ್ಮೀರಿ ಪಂಡಿತರಂತೆಯೇ ಅದೇ ಭವಿಷ್ಯವನ್ನು ಎದುರಿಸುತ್ತಾರೆಯೇ ಎಂದು ಜನರು ನನ್ನನ್ನು ಕೇಳುತ್ತಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತೋರಿಸಿದಂತೆ ಎಲ್ಲಿ ನಮ್ಮ ಪರಿಸ್ಥಿತಿಯಾಗುತ್ತೆ ಎಂದು ಕೆಲವರು ಭಯಪಟ್ಟುಕೊಂಡಿದ್ದಾರೆ. ಈ ಭಯವನ್ನು ಹೋಗಲಾಡಿಸುವುದು ಮುಸ್ಲಿಮರ ಕರ್ತವ್ಯ. ಮುಸ್ಲಿಮರು ಬಹುಸಂಖ್ಯಾತರಂತೆ ವರ್ತಿಸಬೇಕು ಮತ್ತು ಇಲ್ಲಿ ಕಾಶ್ಮೀರದ ರೀತಿ ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಹಿಜಬ್ ಪರ ವಾದಿಗಳ ಬೆದರಿಕೆಗೆ ಸರ್ಕಾರ ಮಣಿಯದು: ಅಶ್ವತ್ಥನಾರಾಯಣ

  • ರಾಹುಲ್ ಗಾಂಧಿ ಆಧುನಿಕ ಜಿನ್ನಾ : ಹಿಮಂತ ಬಿಸ್ವಾ ಶರ್ಮಾ

    ರಾಹುಲ್ ಗಾಂಧಿ ಆಧುನಿಕ ಜಿನ್ನಾ : ಹಿಮಂತ ಬಿಸ್ವಾ ಶರ್ಮಾ

    ಡೆಹ್ರಾಡೂನ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಧುನಿಕ ದಿನದ ಜಿನ್ನಾ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

    ಪಾಕಿಸ್ತಾನದ ಪ್ರದೇಶದೊಳಗೆ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿರುವುದಕ್ಕೆ ಪುರಾವೆ ಕೇಳುತ್ತಾರೆ. ಆದರೆ ನಾವೆಂದೂ ಒಂದು ವೇಳೆ ನೀವು ನಿಜವಾಗಿಯೂ ರಾಜೀವ್ ಗಾಂಧಿಯ ಮಗ ರಾಹುಲ್ ಹೌದಾ ಅಥವಾ ಅಲ್ಲವೇ ಎಂದು ಹೇಳಿದ್ದೇವೆಯೇ ಎಂದು ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ.

    ರಾಹುಲ್ ಗಾಂಧಿ ಭಾಷೆ ಮತ್ತು ಭಾಷಣ 1947ಕ್ಕಿಂತ ಹಿಂದಿನ ಜಿನ್ನಾ ಅವರಂತೆಯೇ ಇದೆ. ಒಂದು ರೀತಿಯಲ್ಲಿ ರಾಹುಲ್ ಗಾಂಧಿ ಆಧುನಿಕ ಜಿನ್ನಾ ರೀತಿ ವರ್ತಿಸುತ್ತಿರುವುದಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

    ಅಸ್ಸಾಂನಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಭಾರತವೆಂದರೆ ಗುಜರಾತ್‍ನಿಂದ ಪಶ್ಚಿಮ ಬಂಗಾಳದವರೆಗೆ ಮಾತ್ರ. ಕಳೆದ ಹತ್ತು ದಿನಗಳಿಂದ ಅವರು ಹೇಳುತ್ತಿರುವುದನ್ನು ಗಮನಿಸುತ್ತಿದ್ದೇನೆ. ಒಮ್ಮೆ ಅವರು ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಇನ್ನೊಂದು ಬಾರಿ ಭಾರತ ಎಂದರೆ ಗುಜರಾತಿನಿಂದ ಬಂಗಾಳದವರೆಗೆ ಎನ್ನುತ್ತಾರೆ. ಹೀಗಾಗಿ ರಾಹುಲ್ ಗಾಂಧಿಯಲ್ಲಿ ಜಿನ್ನಾ ದೆವ್ವ ಪ್ರವೇಶಿಸಿದೆ ಎಂದು ನಾನು ಹೇಳುತ್ತಿದ್ದೇನೆ ಎಂದಿದ್ದಾರೆ,

  • ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂನ ಮುಂದಿನ ಸಿಎಂ

    ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂನ ಮುಂದಿನ ಸಿಎಂ

    ನವದೆಹಲಿ: ಅಸ್ಸಾಂ ಸಿಎಂ ಯಾರು ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಹಿಮಂತ್ ಬಿಸ್ವಾ ಶರ್ಮಾ ಮುಖ್ಯಮಂತ್ರಿಯಾಗಲಿದ್ದಾರೆ. ಚುನಾಯಿತ ಎಲ್ಲ ಕಮಲ ಶಾಸಕರ ಸಹಮತದ ಮೇರೆಗೆ ಹಿಮಂತ್ ಬಿಸ್ವಾ ಶರ್ಮಾ ಅವರನ್ನ ಬಿಜೆಪಿ ಆಯ್ಕೆ ಮಾಡಿದೆ. ಇಂದು ಸಂಜೆ ನಾಲ್ಕು ಗಂಟೆಗೆ ರಾಜ್ಯಪಾಲರನ್ನ ಭೇಟಿಯಾಗಲಿರುವ ಹಿಮಂತ್ ಬಿಸ್ವಾ, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಸೋಮವಾರವೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ.

    ಚುನಾವಣೆ ಮತದಾನ ಆರಂಭಕ್ಕೂ ಮುನ್ನವೇ ಹಿಮಂತ್ ಬಿಸ್ವಾ ಶರ್ಮಾ ಮುಂದಿನ ಸಿಎಂ ಅನ್ನೋ ಸುದ್ದಿಗಳು ಪ್ರಕಟವಾಗಿದ್ದವು. ಆದ್ರೆ ಹಾಲಿ ಸಿಎಂ ಆಗಿದ್ದ ಸರ್ಬಾನಂದ್ ಸೋನೋವಾಲಾ ವಿರುದ್ಧ ಹೇಳಿಕೆ ನೀಡಲು ಬಿಜೆಪಿ ನಾಯಕರು ಹಿಂದೇಟು ಹಾಕಿದ್ದರು. ಇದೀಗ ಪಕ್ಷದ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಹಿಮಂತ್ ಬಿಸ್ವಾ ಪರವಾಗಿ ಮತ ಚಲಾಯಿಸಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಸ್ಪರ್ಧೆ ಹಿನ್ನೆಲೆ ಬಹುಮತ ಪಡೆದಿದ್ರೂ ಬಿಜೆಪಿಗೆ ಸರ್ಕಾರ ರಚನೆಗೆ ಒಂದು ವಾರ ಸಮಯ ಪಡೆದುಕೊಂಡಿತ್ತು.

    ಶನಿವಾರ ಇಬ್ಬರು ನಾಯಕರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡು ವಿಶೇಷ ಸಭೆ ನಡೆಸಿತ್ತು. ಇನ್ನು ಸಿಎಂ ಸ್ಥಾನದಿಂದ ವಂಚಿತರಾಗಿರುವ ಸೋನೋವಾಲರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ವರದಿಯಾಗುತ್ತಿದೆ. ಸರ್ಬಾನಂದ್ ಸೋನೋವಾಲ 2014 ರಿಂದ 2019ರವರೆಗೆ ಮೋದಿ ಅವರ ಸಂಪುಟದಲ್ಲಿ ಕ್ರೀಡಾ ಸಚಿವರಾಗಿದ್ದರು.

    126 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 60ರಲ್ಲಿ ಕಮಲ ಧ್ವಜ ಹಾರಿಸುವ ಮೂಲಕ ಅಸ್ಸಾಂ ತನ್ನ ತೆಕ್ಕೆಯಲ್ಲಿ ಉಳಿಸಿಕೊಂಡಿತ್ತು. ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಎಜಿಪಿ 9, ಯುಪಿಪಿಎಲ್ 6ರಲ್ಲಿ ಜಯ ಸಾಧಿಸಿವೆ.