ಪ್ರತಿಭಟನೆ ಯಾಕೆ?
ಈ ಮೊದಲು ಹಿಟ್ ಆಂಡ್ ರನ್ ಪ್ರಕರಣದ (Hit and Run) ಆರೋಪ ಸಾಬೀತಾದರೆ ಐಪಿಸಿ ಅಡಿ ಚಾಲಕನಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.
ಈಗ ಹೊಸದಾಗಿ ಬಂದಿರುವ ಭಾರತೀಯ ನ್ಯಾಯ ಸಂಹಿತೆಯ (Bharatiya Nyaya Sanhita) ಅಡಿಯಲ್ಲಿ ಹಿಟ್ ಆಂಡ್ ರನ್ ಪ್ರಕರಣದಲ್ಲಿ ದಂಡದ ಜೊತೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
ಈ ಶಿಕ್ಷೆಯ ಪ್ರಮಾಣ ಬಹಳ ಹೆಚ್ಚಾಯಿತು. ಇದರಿಂದಾಗಿ ಮುಂದೆ ಚಾಲಕ ವೃತ್ತಿ ಜನ ಬರುವುದು ಕಡಿಮೆಯಾಗಬಹುದು. ಹೀಗಾಗಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.
ಬೆಂಗಳೂರು: ನಗರದ ಉಲ್ಲಾಳ ರಸ್ತೆಯಲ್ಲಿ (Ullala Road) ನಡೆದಿದ್ದ ಹಿಟ್ ಅಂಡ್ ರನ್ ಕೇಸ್ (Hit And Run Case) ಸಂಬಂಧ ಮತ್ತಷ್ಟು ಸ್ಫೋಟಕ ಸತ್ಯಗಳು ಹೊರಬರುತ್ತಿವೆ. ಹಿಟ್ ಅಂಡ್ ರನ್ ಕೇಸ್ ಸಂಬಂಧ ಪ್ರತ್ಯಕ್ಷ ದರ್ಶಿಗಳು, ಸ್ಥಳದಲ್ಲಿದ್ದ ಸಿಸಿಟಿವಿಗಳು ಆಸಲಿಗೆ ಘಟನೆ ಏನಾಯ್ತು ಎನ್ನುವುದರ ಬಗ್ಗೆ ಮಾಹಿತಿಗಳನ್ನು ಬಿಚ್ಚಿಟ್ಟಿವೆ.
ಮೊದಲ ಬಾರಿಗೆ ಉಲ್ಲಾಳ ಜಂಕ್ಷನ್‌ನಲ್ಲಿ ನೇಕ್ಸಾನ್ ಕಾರು ಚಾಲಕಿ ಪ್ರಿಯಾಂಕಾ, ಸ್ವಿಫ್ಟ್ ಕಾರು ಚಾಲಕ ದರ್ಶನ್ ನಡುವೆ ಮಾತಿನ ಚಕಮಕಿ ಆಗಿತ್ತು. ಅಲ್ಲಿಂದ ಹೋಗುವ ವೇಳೆ ಸ್ವಿಫ್ಟ್ ಕಾರು ಚಾಲಕ ದರ್ಶನ್‌ಗೆ ಪ್ರಿಯಾಂಕಾ ಮಧ್ಯದ ಬೆರಳು ತೋರಿಸಿ ಎಸ್ಕೇಪ್ ಆಗಿದ್ದಳು. ಈ ವೇಳೆ ಹಿಂಬಾಲಿಸಿದ ದರ್ಶನ್ ಕಾರನ್ನು ಅಡ್ಡಗಟ್ಟಿ ಮತ್ತೆ ಪ್ರಶ್ನೆ ಮಾಡಿದ್ದ.
ಬಳಿಕ ಮತ್ತೆ ಮಾತಿನ ಚಕಮಕಿ ಮುಂದುವರಿದು ದರ್ಶನ್, ಪ್ರಿಯಾಂಕಾಳ ನೆಕ್ಸಾನ್ ಕಾರಿನ ಮುಂದೆ ಅಡ್ಡಗಟ್ಟಿ ನಿಂತಿದ್ದಾನೆ. ಈ ವೇಳೆ ದರ್ಶನ್ ಕಾರಿನ ಮುಂಭಾಗ ಬಂದಿದ್ದು, ಬದಿಗೆ ಸರಿಯದೇ ಹೋಗಿದ್ದರಿಂದ ಆಕೆ ಕಾರು ಚಾಲನೆ ಮಾಡುವ ವೇಳೆ ಬಾನೆಟ್ (Bonnet) ಮೇಲೆ ಹತ್ತಿದ್ದಾನೆ. ಪ್ರಿಯಾಂಕಾ ಕಾರು ನಿಲ್ಲಿಸದೇ ವೇಗವಾಗಿ ಸುಮಾರು 3 ಕಿ.ಮೀ ದೂರ ಚಾಲನೆ ಮಾಡಿದ್ದಾಳೆ. ಇದನ್ನು ನೋಡಿದ ಸಾರ್ವಜನಿಕರು ಕಾರು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆಕೆಗೆ ಎಷ್ಟೇ ಹೇಳಿದರೂ ಪ್ರಿಯಾಂಕಾ ಕಾರು ನಿಲ್ಲಿಸದೇ ಹತ್ತಾರು ಹಂಪ್‌ಗಳನ್ನು ಎಗರಿಸಿಕೊಂಡು ಹೋಗಿದ್ದಾಳೆ. ಇದನ್ನೂ ಓದಿ: ಜಮ್ಮುವಿನಲ್ಲಿ ಅವಳಿ ಬ್ಲಾಸ್ಟ್- ಭಾರತ್ ಜೋಡೋ ಯಾತ್ರೆಗೆ ಹೈಅಲರ್ಟ್
ಬೆಂಗಳೂರು: ನಗರದಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ (Hit And Run Case) ದಾಖಲಾಗಿದೆ. ಬೈಕ್ (Bike) ಸವಾರನಿಗೆ ಗುದ್ದಿದ ಫಾರ್ಚುನರ್ ಕಾರನ್ನು (Car) ತಡೆಯಲು ಯತ್ನಿಸಿದ ಜನರ ಮೇಲೂ ಕಾರು ಹತ್ತಿಸಲು ಯತ್ನಿಸಿ ಎಸ್ಕೇಪ್ ಆಗಿರುವ ಘಟನೆ ರಾಜಾಜಿನಗರದಲ್ಲಿ (Rajajinagar) ನಡೆದಿದೆ.
ನಾಲ್ವರು ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರೊಂದು ರಾಜಾಜಿನಗರದ ಮಧುಲೋಕ ಬಾರ್ ಬಳಿ ಬೈಕ್ ಸವಾರನಿಗೆ ಗುದ್ದಿದೆ. ಈ ವೇಳೆ ಬೈಕ್ ಸವಾರ ಸುಮಾರು ದೂರ ಹಾರಿ ಬಿದ್ದಿದ್ದಾನೆ. ಕೂಡಲೇ ಕಾರು ಚಾಲಕ ಕಾರು ನಿಲ್ಲಿಸದೇ ಸ್ಥಳದಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ಕಾರು ಚಾಲಕ ಸಾರ್ವಜನಿಕರ ಮೇಲೆ ಕಾರು ಹತ್ತಿಸಲು ಯತ್ನಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಬಾನೆಟ್ ಮೇಲೆ ಸವಾರನನ್ನು ಎಳೆದೊಯ್ದ ಕಾರು ಚಾಲಕಿ
ಘಟನೆಯಲ್ಲಿ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಪ್ರಾಣಪಾಯದಿಂದ ಪಾರಾಗಿದ್ದು, ಇದೀಗ ಅಪಘಾತ ಮತ್ತು ಸಾರ್ವಜನಿಕರ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕಾರಿನ ಬಾನೆಟ್ ಮೇಲೆ ಹೋದವನೇ ಅರೆಸ್ಟ್- ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಬಂಧನ
Live Tv
[brid partner=56869869 player=32851 video=960834 autoplay=true]
ನವದೆಹಲಿ: ಭಯಾನಕ ಹಿಟ್ ಆಂಡ್ ರನ್ ಪ್ರಕರಣಕ್ಕೆ(Hit and Run Case) ಸ್ಫೋಟಕ ಟ್ವಿಸ್ಟ್ ಸಿಕ್ಕಿದ್ದು ಮೃತಪಟ್ಟ ಅಂಜಲಿ(Anjali) ಮದ್ಯಪಾನ ಮಾಡಿ ಸ್ಕೂಟಿ ಚಲಾಯಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೋಟೆಲ್ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಅಂಜಲಿ ಜೊತೆ ಇದ್ದ ಸ್ನೇಹಿತೆ ನಿಧಿಯನ್ನು(Nidhi) ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ ಘಟನೆ ಹೇಗಾಯ್ತು ಎಂಬುದನ್ನು ವಿವರಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ನಿಧಿ, ಅಂಜಲಿ ಕುಡಿದು ಸ್ಕೂಟಿ ಓಡಿಸಲು ಹಠ ಮಾಡಿದ್ದಳು. ಈ ಸಂದರ್ಭದಲ್ಲಿ ಆಕೆಗೆ ಮತ್ತು ನನಗೆ ಜಗಳ ನಡೆದಿತ್ತು. ನನಗೆ ಪ್ರಜ್ಞೆ ಇದೆ ನಾನು ಚಲಾಯಿಸುತ್ತೇನೆ ಎಂದು ಹೇಳಿದರೂ ಆಕೆ ಹಠ ಹಿಡಿದು ಸ್ಕೂಟಿ ಓಡಿಸಿದ್ದಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ಯುವತಿ ಹತ್ಯೆ ಕೇಸ್ – ಬಂಧಿತ ಐವರಲ್ಲಿ ಓರ್ವ ಬಿಜೆಪಿ ಸದಸ್ಯ: ಎಎಪಿ ಆರೋಪ
ಕಾರು ನಮಗೆ ಡಿಕ್ಕಿ ಹೊಡೆದ ನಂತರ ನಾನು ಒಂದು ಬದಿಗೆ ಬಿದ್ದೆ. ಸ್ನೇಹಿತೆ ಕಾರಿನ ಕೆಳಗಡೆ ಸಿಕ್ಕಿಕೊಂಡಿದ್ದಳು. ಕಾರಿನಲ್ಲಿದ್ದ ಪುರುಷರಿಗೆ ಮಹಿಳೆ ಕಾರಿನ ಕೆಳಗೆ ಸಿಲುಕಿಕೊಂಡಿದ್ದ ವಿಚಾರ ತಿಳಿದಿತ್ತು. ಅಪಘಾತದ ನಂತರ ನಾನು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಭಯಗೊಂಡು ಮನೆಗೆ ಹೋಗಿದ್ದೆ ಎಂದು ವಿವರಿಸಿದ್ದಾರೆ.
ಹೋಟೆಲ್ ಮ್ಯಾನೇಜರ್ ಪ್ರತಿಕ್ರಿಯಿಸಿ ಜ.1 ನಸುಕಿನ ಜಾವ 1:30ಕ್ಕೆ ಇಬ್ಬರು ಜಗಳವಾಡುತ್ತಿದ್ದರು. ನಾನು ಇಲ್ಲಿ ಜಗಳವಾಡಬೇಡಿ ಎಂದು ಹೇಳಿದರೂ ಅವರು ಮತ್ತೆ ಜಗಳ ಮುಂದುವರಿಸಿ ಸ್ಕೂಟಿ ಹತ್ತಿ ತೆರಳಿದ್ದರು ಎಂದು ತಿಳಿಸಿದ್ದಾರೆ.
ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ರೂಮ್ ಬುಕ್ ಮಾಡಿದ್ದ ಹುಡುಗರ ಜೊತೆ ಇಬ್ಬರು ಮಾತನಾಡುತ್ತಿದ್ದರು ಎಂದು ಹೋಟೆಲ್ ಮ್ಯಾನೇಜರ್ ತಿಳಿಸಿದ ಹಿನ್ನೆಲೆಯಲ್ಲಿ ಈಗ ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅಂಜಲಿ ಮತ್ತು ನಿಧಿ ಜನವರಿ 1 ರಂದು ಹೋಟೆಲ್‌ನಿಂದ ಹೊರಟಿದ್ದಾರೆ. ದಾರಿಯಲ್ಲಿ ಬರುತ್ತಿದ್ದಾಗ ಅವರ ಸ್ಕೂಟಿಗೆ ಕಾರಿಗೆ ಡಿಕ್ಕಿ ಹೊಡೆದಿದೆ. ನಿಧಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅಂಜಲಿಯ ಕಾಲು ಮುಂಭಾಗದ ಆಕ್ಸಲ್‌ಗೆ ಸಿಲುಕಿಕೊಂಡಿದ್ದರಿಂದ ಕಾರು ದೇಹವನ್ನು ಸುಮಾರು 13 ಕಿ.ಮೀ ದೂರ ರಸ್ತೆಯಲ್ಲಿ ಎಳೆದುಕೊಂಡು ಹೋಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ವಿರುದ್ಧ ನರಹತ್ಯೆ ಅಡಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನಗರದಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದ್ದು, ಕುಮಾರಸ್ವಾಮಿ ಲೇಔಟ್‍ನ ಸಾರಕ್ಕಿ ಸಿಗ್ನಲ್‍ನಲ್ಲಿ ರಾತ್ರಿ ವೇಳೆ ನಡೆದಿದೆ.
ಡಿಸೆಂಬರ್ 16ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಿನಾಂಕ 16 ರಾತ್ರಿ ಸುಮಾರು 11 ಗಂಟೆಗೆ ಮಲ್ಲೇಶ್ ಎಂಬವರು ಕೆಲಸ ಮುಗಿಸಿ ಬೈಕಿನಲ್ಲಿ ಮನೆ ಕಡೆ ಹೊರಟಿದ್ದರು. ಸಾರಕ್ಕಿ ಸಿಗ್ನಲ್‍ನ ಮಾರ್ಕೆಟ್ ಬಳಿ ಯೂ ಟರ್ನ್ ತೆಗೆದುಕೊಳ್ಳೋಕೆ ಮುಂದಾಗಿದ್ದರು. ಈ ವೇಳೆ ಅತಿವೇಗವಾಗಿ ಬಂದ ಕಾರೊಂದು ಮಲ್ಲೇಶ್ ಬೈಕಿಗೆ ಡಿಕ್ಕಿ ಹೊಡೆದಿದೆ.
ಕಾರಿನ ಡಿಕ್ಕಿಯ ರಭಸಕ್ಕೆ ಮಲ್ಲೇಶ್ ಹೋಗುತ್ತಿದ್ದ ಬೈಕ್ ಸುಮಾರು 20 ಅಡಿಗೂ ದೂರಕ್ಕೆ ಬಿದ್ದಿತ್ತು. ಈ ಭಯಾನಕ ಅಪಘಾತ ನೋಡಿದ ಅಕ್ಕಪಕ್ಕದಲ್ಲಿದ್ದ ಜನರಿಗೆ ಏನಾಯ್ತು, ಅಂತ ಗೊತ್ತಾಗೋ ಮುನ್ನವೇ ಕಾರು ಅದೇ ವೇಗದಲ್ಲಿ ಎಸ್ಕೇಪ್ ಆಗಿದೆ.
ಹೆಲ್ಮೆಟ್ ಹಾಕದೇ ರೈಡ್ ಮಾಡುತ್ತಿದ್ದ ನಮ್ಮ ತಂದೆಯ ತಲೆ ಮತ್ತು ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಮಲ್ಲೇಶ್ ಮಗ ಮಂಜುನಾಥ್ ಹೇಳಿದ್ದಾರೆ.
ಸದ್ಯಕ್ಕೆ ಈ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿ ಲೇಔಟ್ ಪೊಲೀಸರು, ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರು: ಮದ್ಯದ ಮತ್ತಲ್ಲಿ ಹಿಟ್ ಅಂಡ್ ರನ್ ಮಾಡಿದ್ದ ಉದ್ಯಮಿ ಆದಿಕೇಶವುಲು ಮೊಮ್ಮಗ ವಿಷ್ಣು ಪೊಲೀಸರಿಗೆ ಶರಣಾಗಿದ್ದಾನೆ. ಸಿಸಿಬಿ ಪೊಲೀಸರ ಮುಂದೆ ಶರಣಾಗಿರೋ ಆರೋಪಿಯನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಿ 5 ದಿನ ಪೊಲೀಸ್ ಕಸ್ಟಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ಸೆಪ್ಟೆಂಬರ್ 28ರ ಬೆಳಗಿನ ಜಾವ ಬೆಂಗಳೂರಿನ ಜಯನಗರದ ಸೌತ್ ಎಂಡ್ ಸರ್ಕಲ್‍ನಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ಐಷಾರಾಮಿ ಬೆಂಜ್ ಕಾರಿನಲ್ಲಿ ಗುದ್ದಿ ಎಸ್ಕೇಪ್ ಆಗಿದ್ದ ಉದ್ಯಮಿ ಆದಿಕೇಶವುಲು ಮೊಮ್ಮಮ ಗೀತಾವಿಷ್ಣು. ಆತನ ಕಾರಿನಲ್ಲಿ ಡ್ರಗ್ಸ್ ಹಾಗೂ ಕೊಕೇನ್ ಸಿಕ್ಕಿತ್ತು. ಅಲ್ಲದೇ ಆತನ ಜೊತೆ ಕೆಲ ನಟರೂ ಇದ್ದರು. ರೇವ್ ಪಾರ್ಟಿಗೆ ಹೋಗಬೇಕಾದ್ದರೆ ಆಕ್ಸಿಡೆಂಟ್ ಮಾಡಿದ್ದರು ಎಂದು ಹೇಳಲಾಗಿತ್ತು. ಇಡೀ ಸುದ್ದಿ ದೊಡ್ಡ ಸದ್ದು ಮಾಡುತ್ತಿದ್ದಂತೆ ಆ ರಾತ್ರಿಯೇ ವಿಷ್ಣು ಎಸ್ಕೇಪ್ ಆಗಿದ್ದ. ವಿಷ್ಣುಗಾಗಿ ಪೊಲೀಸರೆಲ್ಲಾ ಆತನ ತಂದೆ ಸಹಾಯದಿಂದ ಹುಡುಕಾಡದ ಜಾಗವೇ ಇರಲಿಲ್ಲ.
ನಿರೀಕ್ಷಣಾ ಜಾಮೀನು ಸಿಗದ ಭಯಕ್ಕೆ ಶರಣಾಗತಿ?: ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ ವಿಷ್ಣು ಮಂಗಳವಾರ ಸಂಜೆ ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಬಂದು ಶರಣಾಗಿದ್ದಾನೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತಾಡಿದ ತಂದೆ ಶ್ರೀವಾಸಮೂರ್ತಿ ನನ್ನ ಮಗ ತಪ್ಪು ಮಾಡಿಲ್ಲ. ಡ್ರಗ್ಸ್ ಸೇವಿಸೋ ಅಭ್ಯಾಸ ಇಲ್ಲ. ಯಾರೋ ಆತನ ಕಾರಿನಲ್ಲಿ ಡ್ರಗ್ಸ್ ಇಟ್ಟಿರಬಹುದು ಅಂತಾ ಹೇಳಿದ್ದಾರೆ.
ಪೊಲೀಸರಿಗೆ ಫೋನ್ ಮಾಡಿ ಕರೆಸಿಕೊಂಡನಾ?: ತಲೆ ಮರೆಸಿಕೊಂಡಿದ್ದ ವಿಷ್ಣು ಯಾರಿಗೂ ಗೊತ್ತಾಗಬಾರದು ಅಂತಾ ಕೂದಲು ಕತ್ತರಿಸಿ, ಮೀಸೆ ಬೋಳಿಸಿಕೊಂಡು ವೇಷ ಬದಲಿಸಿಕೊಂಡಿದ್ದ. ನಾನು ಮಡಿಕೇರಿಯ ರಾಣಿಪೇಟ್‍ನಲ್ಲಿದ್ದೀನಿ. ಬನ್ನಿ ಸಾರ್ ಸರೆಂಡರ್ ಆಗ್ತೀನಿ ಅಂತಾ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನ ಕರೆಸಿಕೊಂಡು ಶರಣಾಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತೆ. ಆದರೆ ಇಂದು ವಕೀಲರು ಇಂದು ಕೋರ್ಟ್ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ಮಾಡಲಿದ್ದಾರೆ. ಹೀಗಾಗಿ ವಿಷ್ಣು ಇಂದು ಪೊಲೀಸರ ವಶದಲ್ಲೇ ಇರಬೇಕಾಗುತ್ತೆ.
ಸತ್ಯ ಹೊರ ಬರುತ್ತಾ?: ವಿಷ್ಣು ಜೊತೆ ಯಾರೆಲ್ಲಾ ಇದ್ದರು? ನಟ-ನಟಿಯರು ಇದ್ದರ? ಅವರರೆಲ್ಲಾ ಕುಡಿದಿದ್ದರ? ಡ್ರಗ್ಸ್ ಸೇವನೆ ಮಾಡಿದ್ದರಾ? ರೇವ್ ಪಾರ್ಟಿಗೆ ಹೋಗುತ್ತಿದ್ದರಾ? ಇನ್ನೂ ಅನೇಕ ಪ್ರಶ್ನೆಗಳಿಗೆ ವಿಷ್ಣುವೇ ಉತ್ತರ ನೀಡಬೇಕಿದೆ.