Tag: ಹಿಟ್‌ ಅಂಡ್‌ ರನ್‌ ಕೇಸ್‌

  • ದಿವ್ಯಾ ಸುರೇಶ್ ಹಿಟ್ & ರನ್ ಕೇಸ್; ಸಾಲ ಮಾಡಿ ಚಿಕಿತ್ಸೆ ಪಡೆದುಕೊಂಡ ಗಾಯಾಳು ಅನಿತಾ

    ದಿವ್ಯಾ ಸುರೇಶ್ ಹಿಟ್ & ರನ್ ಕೇಸ್; ಸಾಲ ಮಾಡಿ ಚಿಕಿತ್ಸೆ ಪಡೆದುಕೊಂಡ ಗಾಯಾಳು ಅನಿತಾ

    – ಚಿಕಿತ್ಸೆಗೆ ಲಕ್ಷ ಲಕ್ಷ ಖರ್ಚಾಗಿದೆ -‌ ʻಪಬ್ಲಿಕ್‌ ಟಿವಿʼ ಎದುರು ಕಣ್ಣೀರಿಟ್ಟ ಸಂತ್ರಸ್ತೆ

    ಬಿಗ್‌ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಹಿಟ್ ಅಂಡ್ ರನ್ ಪ್ರಕರಣದ ಗಾಯಾಳು ಅನಿತಾ ʻಪಬ್ಲಿಕ್ ಟಿವಿʼ ಜೊತೆ ಅಳಲು ತೋಡಿಕೊಂಡಿದ್ದಾರೆ.

    ಸಾಲ ಮಾಡಿ ಚಿಕಿತ್ಸೆ ಪಡೆದುಕೊಂಡ ಗಾಯಾಳು ಅನಿತಾ ಮಾತಾಡುತ್ತಾ ಕಣ್ಣೀರಿಟ್ಟಿದ್ದಾರೆ. ತಾವು ಟೈಲರಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ತಮ್ಮ ಗಂಡ ಆಟೋ ಓಡಿಸುತ್ತಿದ್ದಾರೆ. ಗುಂಡ್ಲುಪೇಟೆಯಿಂದ ಇಲ್ಲಿ ಬಂದು ಬದುಕು ಕಟ್ಟಿಕೊಂಡ ಈ ಕುಟುಂಬಕ್ಕೆ ಈ ಘಟನೆ ಆಘಾತವನ್ನೇ ಉಂಟು ಮಾಡಿದೆ.

    ಅಸಲಿಗೆ ಘಟನೆ ಆಗಿದ್ದು, ಅಕ್ಟೋಬರ್ 4ರ ರಾತ್ರಿ ಗಾಯಾಳು ಅನಿತಾ ಸಹೋದರಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ನಾಯಿಗಳು ಅಟ್ಟಿಸಿಕೊಂಡು ಬಂದಿವೆ. ಹೀಗಾಗಿ ಗಾಡಿ ಸ್ವಲ್ಪ ಜೋರಾಗಿ ಓಡಿಸಿದ್ದಾರೆ. ಅದೇ ವೇಳೆಗೆ ಬ್ಯಾಟರಾಯನಪುರ ಎಂಎಂ ರಸ್ತೆಯ ಟರ್ನಿಂಗ್‌ನಲ್ಲಿ ಸ್ಪೀಡಾಗಿ ಕಾರ್ ಚಲಾಯಿಸಿಕೊಂಡು ಬಂದ ದಿವ್ಯಾ ಸುರೇಶ್, ಕಿರಣ್, ಅನಿತಾ ಹಾಗೂ ಸಹೋದರಿ ಅನುಷಾ ಇದ್ದ ಬೈಕ್‌ಗೆ ಗುದ್ದಿ ಕಾರ್ ನಿಲ್ಲಿಸೇ ಹೊರಟಿದ್ದಾರೆ. ಕಿರಣ್ ಬೈಕ್ ಚಲಾಯಿಸುತ್ತಿದ್ದರು, ಅನುಷಾ ಹಾಗೂ ಅನಿತಾ ಹಿಂಬದಿಯಲ್ಲಿ ಕುಳಿತಿದ್ದರು. ಅನಿತಾ ಅವರ ಕಾಲಿಗೆ ಕಾರ್ ಗುದ್ದಿದ ಪರಿಣಾಮ ಮಂಡಿ ಚಿಪ್ಪು ಒಡೆದಿದೆ. ವೈದ್ಯರು ಕನಿಷ್ಠ ಒಂದು ವರ್ಷವಾದರೂ ರೆಸ್ಟ್ ಮಾಡಲು ಸಲಹೆ ನೀಡಿದ್ದಾರೆ.

    ಊರಿಂದ ಬೆಂಗಳೂರಿಗೆ ಬಂದು ನಿತ್ಯ ದುಡಿದು ಜೀವನ ನಡೆಸುವ ಈ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು ಅನಿತಾ. ಈ ಘಟನೆ ನಡೆದ ಬಳಿಕ ದಿವ್ಯಾ ಸುರೇಶ್ ಕನಿಷ್ಠ ಮಾನವೀಯ ದೃಷ್ಟಿಯಿಂದಲೂ ಭೇಟಿ ಮಾಡಿ ಮಾತಾಡಿಸಿಲ್ಲ. ಆಸ್ಪತ್ರೆಯ ಖರ್ಚು ಲಕ್ಷ ಲಕ್ಷ ಆಗಿದೆ. ಆಸ್ಪತ್ರೆಗಾಗಿ ಸಾಲ ಮಾಡಿದ್ದೇವೆ ಅಂತಾ ಅನಿತಾ ʻಪಬ್ಲಿಕ್ ಟಿವಿʼ ಜೊತೆ ಮಾತಾಡುತ್ತಾ ಕಣ್ಣೀರಿಟ್ಟಿದ್ದಾರೆ. ಸದ್ಯ ಪ್ರಕರಣ ಪೊಲೀಸ್ ಠಾಣೆಯಲ್ಲಿದ್ದು, ಪೊಲೀಸರಿಗೆ ಎಲ್ಲಾ ಮಾಹಿತಿ ಕೊಟ್ಟಿದ್ದೇವೆ. ವಿಚಾರಣೆ ನಡೆಸಿ ತಿಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

  • ಬೆಂಗಳೂರು ಹೊರವಲಯದಲ್ಲಿ ರಸ್ತೆ ಗುಂಡಿಗೆ ಬಿ.ಕಾಂ ಪದವೀಧರೆ ಬಲಿ

    ಬೆಂಗಳೂರು ಹೊರವಲಯದಲ್ಲಿ ರಸ್ತೆ ಗುಂಡಿಗೆ ಬಿ.ಕಾಂ ಪದವೀಧರೆ ಬಲಿ

    – ರಸ್ತೆಯಲ್ಲಿ ಸ್ಕಿಡ್‌ ಆಗಿ ಬಿದ್ದ ಪದವೀಧರೆ ಮೇಲೆ ಹರಿದ ಟಿಪ್ಪರ್‌ ಲಾರಿ

    ಬೆಂಗಳೂರು: ರಸ್ತೆ ಗುಂಡಿಗಳನ್ನ ಮುಚ್ಚುವ ಬಗ್ಗೆ ಸಿಎಂ ಡಿಸಿಎಂ ತಾಕೀತು ಮಾಡಿದ್ರೂ ಇನ್ನೂ ರಸ್ತೆಗಳಲ್ಲಿ ಗುಂಡಿಗಳು ಮಾಯವಾಗಿಲ್ಲ. ಇದೀಗ ಬೆಂಗಳೂರು ಹೊರ ವಲಯದಲ್ಲಿ ರಸ್ತೆ ಗುಂಡಿಗೆ ಪದವೀಧರೆ ಬಲಿಯಾಗಿದ್ದಾಳೆ.

    ಧನುಶ್ರೀ (21) ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ ವಿದ್ಯಾರ್ಥಿನಿ. ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದ ಪದವೀಧರೆ ಇಂದು ಬೆಳಗ್ಗೆ ಬೂದಿಗೆರೆ ಕ್ರಾಸ್ ಬಳಿ ಬೆಳಗ್ಗೆ 8.50ರ ಸುಮಾರಿಗೆ ಸ್ಕೂಟರ್ ನಲ್ಲಿ ಬರ್ತಿದ್ದಾಗ ರಸ್ತೆಗುಂಡಿಗೆ ಬಿದ್ದು ಸ್ಕೂಟರ್ ನಿಂದ ಕೆಳಗೆ ಬಿದ್ದಿದ್ದಾಳೆ. ಗುಂಡಿಯಿಂದ ಸ್ಕಿಡ್ ಆಗಿ ಬಿದ್ದ ವಿದ್ಯಾರ್ಥಿನಿ ಮೇಲೆ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪಿದ್ದಾಳೆ.

    ನಾರಾಯಣ ಮಠದ ನಿವಾಸಿಯಾದ ಧನುಶ್ರೀ ಖಾಸಗಿ ಕಾಲೇಜಿನಲ್ಲಿ ಬಿಕಾಂ ವ್ಯಾಸಾಂಗ ಮಾಡುತ್ತಿದ್ದಳು. ಬೆಳಗ್ಗೆ ಕಾಲೇಜಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಧನುಶ್ರೀ, ರಸ್ತೆ ಗುಂಡಿ ತಪ್ಪಿಸಲು ಹೋಗಿದ್ದು ಟಿಪ್ಪರ್ ಡಿಕ್ಕಿ ಹೊಡೆದಿದೆ.‌ ಬೈಕ್‌ನಿಂದ ಬಿದ್ದವಳ ಮೇಲೆ ಟಿಪ್ಪರ್ ಹರಿಸಿ, ಟಿಪ್ಪರ್ ನಿಲ್ಲಿಸದೇ ಚಾಲಕ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ಸಂಬಂಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಟಿಪ್ಪರ್ ಚಾಲಕನಿಗಾಗಿ ಹುಡುಕಾಟ ನಡೆಸಲಾಗ್ತಿದೆ. ಸರ್ಕಾರ ಜನ್ರ ಜೀವಗಳ ಜೊತೆ ಆಟವಾಡುವ ಬದಲು ರಸ್ತೆ ಗುಂಡಿಗಳನ್ನ ಆದಷ್ಟು ಬೇಗ ಮುಚ್ಚಿಸಬೇಕಿದೆ.

  • ಅಪಘಾತಕ್ಕೂ ಮುನ್ನ 18,730 ರೂ. ಮದ್ಯ ಕುಡಿದಿದ್ದ ಮಿಹಿರ್‌ ಶಾ – ಮಗ ಮಾಡಿದ ತಪ್ಪಿಗೆ ತಂದೆಗೆ ಜೈಲು!

    ಅಪಘಾತಕ್ಕೂ ಮುನ್ನ 18,730 ರೂ. ಮದ್ಯ ಕುಡಿದಿದ್ದ ಮಿಹಿರ್‌ ಶಾ – ಮಗ ಮಾಡಿದ ತಪ್ಪಿಗೆ ತಂದೆಗೆ ಜೈಲು!

    ಮುಂಬೈ: ಬಿಎಂಡಬ್ಲ್ಯೂ ಹಿಟ್‌ ಅಂಡ್‌ ರನ್‌ ಕೇಸ್‌ನ (BMW Hit And Run Case) ಪ್ರಮುಖ ಆರೋಪಿ ಶಿಂಧೆ ಬಣದ ನಾಯಕ ರಾಜೇಶ್ ಶಾ (Rajesh Shah) ಅವರ ಪುತ್ರ ಮಿಹಿರ್ ಶಾ 15,000 ರೂ. ಪಾವತಿಸಿ ತಾತ್ಕಾಲಿಕ ಷರತ್ತುಬದ್ಧ ಜಾಮೀನು ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಆತ ದೇಶ ತೊರೆಯದಂತೆ ಸೂಚನೆ ನೀಡಲಾಗಿದೆ. ಈ ನಡುವೆ ಪ್ರಕರಣದ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.

    ಸಾವಿರಾರು ರೂ.ಗೆ ಮದ್ಯ ಕುಡಿದಿದ್ದ:
    ರಸ್ತೆ ಅಪಘಾತ ಸಂಭವಿಸುವುದಕ್ಕೂ ಮುನ್ನ ಪ್ರಮುಖ ಆರೋಪಿ ಮಿಹಿರ್‌ ಶಾ (Mihir Shah) ಮದ್ಯ ಕುಡಿದಿದ್ದ ಎಂದು ತಿಳಿದುಬಂದಿದೆ. ಅದಕ್ಕೆ ಪೂರಕ ಸಾಕ್ಷ್ಯವೂ ಲಭ್ಯವಾಗಿದೆ. ಮುಂಬೈನ ಜುಹುದಲ್ಲಿರುವ ಬಾರ್‌ವೊಂದರಲ್ಲಿ (Bar) 18,730 ರೂ.ನಷ್ಟು ಬಿಲ್‌ (Liquor Bill) ಮಾಡಿದ್ದಾನೆ. ಇದನ್ನೂ ಓದಿ: ಋತುಚಕ್ರದ ವೇಳೆ ಮಹಿಳೆಯರಿಗೆ ರಜೆ ನೀಡೋದು ಸರ್ಕಾರದ ನೀತಿಯ ವಿಷಯ- ವಿಚಾರಣೆ ನಡೆಸಲು ಸುಪ್ರೀಂ ನಕಾರ

    ಪೊಲೀಸರಿಗೆ (Mumbai Police) ದೊರೆತ ಪ್ರಾಥಮಿಕ ಮಾಹಿತಿ ಪ್ರಕಾರ, ಮಿಹಿರ್‌ ಶಾ ಶನಿವಾರ ತಡರಾತ್ರಿವರೆಗೂ ಜುಹುವಿನ ಬಾರ್‌ನಲ್ಲಿ ಮದ್ಯ ಸೇವಿಸಿದ್ದಾನೆ. ಆತ ಬಾರ್‌ನಿಂದ ಹೊರಬರುತ್ತಿದ್ದಂತೆ, ಚಾಲಕ ಆತನನ್ನ ಕರೆದೊಯ್ಯುತ್ತಿದ್ದ. ಆದ್ರೆ ಮಾರ್ಗಮಧ್ಯದಲ್ಲಿ ಮಿಹಿರ್‌ ಶಾ ಹಠ ಹಿಡಿದು ತಾನೇ ಡ್ರೈವಿಂಗ್‌ ಮಾಡಲು ಮುಂದಾಗಿದ್ದಾನೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ. ಈ ವೇಳೆ ಅದೇ‌ ಮಾರ್ಗವಾಗಿ ಮೀನು ವ್ಯಾಪಾರಿ ಮಹಿಳೆ ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದರು. ಮಿಹಿರ್‌ ಶಾ ಬೈಕ್‌ಗೆ ಗುದ್ದಿದ ರಭಸಕ್ಕೆ ಪತಿ ಕೆಳಗೆ ಬಿದ್ದಿದ್ದಾನೆ. ಮಹಿಳೆ ಕೆಳಗೆ ಬಿದ್ದಾಗ ಕಾರಿನ ಚಕ್ರಕ್ಕೆ ಸಿಕ್ಕಿಕೊಂಡಿದ್ದರೂ, ಆತ ನೋಡದೇ ಎಳೆದೊಯ್ದಿದ್ದಾನೆ. ಪತಿ ಹಿಂದೆಯೇ ಕಾರು ನಿಲ್ಲಿಸುವಂತೆ ಕಾರಿನ ಹಿಂದೆಯೇ ಸ್ವಲ್ಪ ದೂರ ಓಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾರು ನಿಲ್ಲಿಸಿ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೂ ಚಿಕಿತ್ಸೆ ನೀಡುವುದಕ್ಕೂ ಮುನ್ನವೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಹೊಸ ಕ್ರಿಮಿನಲ್‌ ಕಾನೂನುಗಳ ಅಡಿ ಕೊಲೆ ಅಪರಾಧ, ನರಹತ್ಯೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಡ್ರಂಕ್‌ ಅಂಡ್‌ ಡ್ರೈವ್‌, ವೇಗದ ಚಾಲನೆ, ಸಾಕ್ಷ್ಯ ನಾಶಪಡಿಸುವಿಕೆ, ಮೋಟಾರು ವಾಹನ ಕಾಯ್ದೆಗಳ ಅಡಿಯಲ್ಲೂ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ. ಅಪಘಾತಕ್ಕೀಡಾದ ಕಾರು ಮಿಹಿರ್‌ ಶಾ ಹೆಸರಿನಲ್ಲೇ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರರ ದಾಳಿ – 2 ದಿನಗಳಲ್ಲಿ 2ನೇ ಅಟ್ಯಾಕ್‌!

    ಮಗ ಮಾಡಿದ ತಪ್ಪಿಗೆ ಅಪ್ಪನಿಗೆ ಜೈಲು:
    ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಮಗ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂಬ ಆರೋಪದಲ್ಲಿ ಮಿಹಿರ್ ಶಾ ಅವರ ತಂದೆ ಹಾಗೂ ಅವರ ಕಾರು ಚಾಲಕ ಇಬ್ಬರನ್ನೂ ಬಂಧಿಸಲಾಗಿದೆ. ಘಟನೆ ಬಳಿಕ ಮಿಹಿರ್‌ ತನ್ನ ತಂದೆಗೆ ಕರೆ ಮಾಡಿ ಅಪಘಾತದ ಬಗ್ಗೆ ತಿಳಿಸಿದ್ದಾನೆ. ಅಂದಿನಿಂದ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಸೋಮವಾರ ರಾಜೇಶ್‌ ಶಾರನ್ನ ಮುಂಬೈ ಸಿಟಿ ಕೋರ್ಟ್‌ಗೆ ಹಾಜರುಪಡಿಸಿದ್ದು, ಕೋರ್ಟ್‌ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ, ನಂತರ ಅವರನ್ನು ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: BMW ಡಿಕ್ಕಿ ಹೊಡೆದು ಮಹಿಳೆ ಸಾವು – ಸಿಎಂ ಏಕನಾಥ್‌ ಶಿಂಧೆ ಬಣದ ನಾಯಕನ ಪುತ್ರ ಆರೋಪಿ

  • ಕುಮಾರಸ್ವಾಮಿ ಯಾವತ್ತೂ ಹಿಟ್‌ & ರನ್ ಕೇಸ್‌ – ಸಿಎಂ ತಿರುಗೇಟು

    ಕುಮಾರಸ್ವಾಮಿ ಯಾವತ್ತೂ ಹಿಟ್‌ & ರನ್ ಕೇಸ್‌ – ಸಿಎಂ ತಿರುಗೇಟು

    ಬೆಂಗಳೂರು: ಕುಮಾರಸ್ವಾಮಿ ಯಾವಗ್ಲೂ ಹಿಟ್ ಅಂಡ್ ರನ್ ಕೇಸ್ (Hit and Run Case). ಇದುವರೆಗೆ ಮಾಡಿರೋ ಆರೋಪಗಳಲ್ಲಿ ಯಾವುದನ್ನ ಕುಮಾರಸ್ವಾಮಿ ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗಿದ್ದಾರೆ ಹೇಳಲಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿ ಕಾರಿದ್ದಾರೆ.

    ಕಾಂಗ್ರೆಸ್‌ ಸರ್ಕಾರದ ಮೇಲೆ ಸಾಲು ಸಾಲು ಆರೋಪ ಮಾಡ್ತಿರೋ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಆರೋಪಗಳಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಪಾಪ ಹತಾಶರಾಗಿದ್ದಾರೆ. ಹತಾಶೆಯಾಗಿ ದ್ವೇಷದಿಂದ ಹೀಗೆಲ್ಲ ಮಾತಾಡ್ತಾ ಇದ್ದಾರೆ ಅಂತಾ ಕುಟುಕಿದ್ದಾರೆ.

    ಈಗ ಹೊಸ ಸರ್ಕಾರ ಬಂದಿದೆ, ಇದು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ. ಜನರಲ್ ವರ್ಗಾವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆ ಮಾಡಲೇಬೇಕು. ಅದಕ್ಕೆ ದಂಧೆ (Transfer Scam) ನಡೆದಿದೆ, ‌ಲಂಚ ನಡೆದಿದೆ ಅಂತಾ ಹೇಳ್ತಿರೋದು ಸುಳ್ಳು ಎಂದು ಹೆಚ್‌ಡಿಕೆ ಆರೋಪಗಳನ್ನ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಮಳೆ ಹಾನಿಗೊಳಗಾದ ದ.ಕನ್ನಡ, ಉ. ಕನ್ನಡ, ಉಡುಪಿ ಜಿಲ್ಲೆಗೆ ಶೀಘ್ರವೇ ಪರಿಹಾರ ನೀಡಿ: ಸಿಎಂ ಸೂಚನೆ

    ಕುಮಾರಸ್ವಾಮಿ ಕಾಲದಲ್ಲಿ ವರ್ಗಾವಣೆ ಆಗಿರಲಿಲ್ಲವಾ? ಹಾಗಾದ್ರೆ ಅವರು ದುಡ್ಡು ತಗೊಂಡಿದ್ರಾ? ವರ್ಗಾವಣೆ ಆದಾಗೆಲ್ಲ ದಂಧೆ ನಡೆದಿದೆ, ದುಡ್ಡು ತಗೊಂಡಿದ್ದಾರೆ ಅಂದರೆ ಹೇಗೆ? ಹಾಗಾದ್ರೆ ಕುಮಾರಸ್ವಾಮಿನೂ ದುಡ್ಡು ತಗೊಂಡಿದ್ರಾ? ಹಾಗಾದ್ರೆ ನಾವು ಅವರ ಮೇಲೂ‌ ಹೇಳ್ತೀವಿ ದುಡ್ಡು ತಗೊಂಡಿದ್ರು ಅಂತಾ ಎಂದು ಹರಿಹಾಯ್ದಿದ್ದಾರೆ.

    ಸಾಮಾನ್ಯ ವರ್ಗಾವಣೆ ಆಡಳಿತಾತ್ಮಕ ದೃಷ್ಟಿಯಿಂದ ಮಾಡಬೇಕಾಗುತ್ತದೆ, ಊಹಿಸಿಕೊಂಡು ಹೇಳಬಾರದು. ಹೊಸ ಸರ್ಕಾರ ಬಂದಾಗ ಸ್ವಾಭಾವಿಕವಾಗಿ ವರ್ಗಾವಣೆ ಆಗುತ್ತವೆ. ಎಲೆಕ್ಷನ್ ಬಂದಿತ್ತು, ನೀತಿ ಸಂಹಿತೆ ಇತ್ತು, ಹೀಗಾಗಿ ವರ್ಗಾವಣೆ ಮಾಡಿರಲಿಲ್ಲ. ಈಗ ಸಾಮಾನ್ಯ ವರ್ಗಾವಣೆ ನಡೆಯುತ್ತಿದೆ ಇದನ್ನ ದಂಧೆ ಅಂದರೆ ಹೇಗೆ? ಹೆಚ್‌ಡಿಕೆ ಅವರಿಗೆ ಮರುಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    ಇನ್ನೂ ಕುಮಾರಸ್ವಾಮಿ ಪೆನ್ ಡ್ರೈವ್ ತೋರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ಇದುವರೆಗೆ ಮಾಡಿರೋ ಆರೋಪಗಳಲ್ಲಿ ಯಾವುದನ್ನ ಕುಮಾರಸ್ವಾಮಿ ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗಿದ್ದಾರೆ ಹೇಳಲಿ.. ಅವರು ದಾಖಲೆ ಬಿಡುಗಡೆ ಮಾಡಲಿ ಅದಕ್ಕೆ ಉತ್ತರ ಕೊಡ್ತೀವಿ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗ್ಳೂರಿನಲ್ಲಿ ಹಿಟ್‌ ಅಂಡ್‌ ರನ್‌ ಕೇಸ್‌ – ಬೈಕ್ ಸವಾರ ಸ್ಥಳದಲ್ಲೇ ಸಾವು

    ಬೆಂಗ್ಳೂರಿನಲ್ಲಿ ಹಿಟ್‌ ಅಂಡ್‌ ರನ್‌ ಕೇಸ್‌ – ಬೈಕ್ ಸವಾರ ಸ್ಥಳದಲ್ಲೇ ಸಾವು

    ಬೆಂಗಳೂರು: ಕಂಟೇನರ್‌ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಡಿವಾಳ ಸಮೀಪದ ಮೈಕೋಬಂಡೆ ಬಳಿ ನಡೆದಿದೆ.

    ಕಂಟೇನರ್ ಲಾರಿ ಚಾಲಕ ಬೈಕ್‌ಗೆ ಡಿಕ್ಕಿ (Bike Accident) ಹೊಡೆದು ಎಸ್ಕೇಪ್‌ ಆಗಿದ್ದಾನೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಗಾಯಗೊಂಡ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸದ್ಯ ಮೃತನ ಹೆಸರು ಹಾಗೂ ವಿಳಾಸ ತಿಳಿದು ಬಂದಿಲ್ಲ. ಆಡುಗೋಡಿ ಸಂಚಾರ ಪೊಲೀಸ್(Adugodi Traffic Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಪತ್ತೆಗಾಗಿ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ – ಕಾಂಗ್ರೆಸ್‍ನಿಂದ 5ನೇ ಗ್ಯಾರಂಟಿ ಘೋಷಣೆ

    ಈ ಹಿಂದೆಯೂ ಮೇಡಹಳ್ಳಿ ಫ್ಲೈ ಓವರ್ ಬಳಿ ಕಾರೊಂದು ಎದುರು ಬಂದ ಆಟೋರಿಕ್ಷಾಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಬಳಿಕ ತನಿಖೆ ನಡೆಸಿದ್ದ ಕೆ.ಆರ್.ಪುರಂ ಸಂಚಾರ ಪೊಲೀಸರು ಟೆಕ್ಕಿಯನ್ನು ಬಂಧಿಸಿದ್ದರು. ಇದನ್ನೂ ಓದಿ: 4 ರನ್‌ಗಳಿಗೆ 3 ವಿಕೆಟ್‌ ಪತನ – ಚೆನ್ನೈಗೆ ಸೋಲು, ಮೊದಲ ಸ್ಥಾನಕ್ಕೆ ರಾಜಸ್ಥಾನ ಜಿಗಿತ