Tag: ಹಿಟ್ ಅಂಡ್ ರನ್

  • ಚಿಕ್ಕಮಗಳೂರು ಹೈವೆಯಲ್ಲಿ ಹಿಟ್ & ರನ್ – 100 ಅಡಿ ದೂರ ಎಳೆದೊಯ್ದ ಕಾರು

    ಚಿಕ್ಕಮಗಳೂರು ಹೈವೆಯಲ್ಲಿ ಹಿಟ್ & ರನ್ – 100 ಅಡಿ ದೂರ ಎಳೆದೊಯ್ದ ಕಾರು

    ಚಿಕ್ಕಮಗಳೂರು: ನಗರದ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದಿದೆ. ಈ ವೇಳೆ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ.

    ತಡರಾತ್ರಿ 10 ಗಂಟೆಯ ಸುಮಾರಿಗೆ ಈ ಅಪಘಾತ ನಡೆದಿದ್ದು, ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ನಂತರ ಕಾರಿನಡಿ ಸಿಲುಕಿದ್ದ ಬೈಕ್‍ನ್ನು ಚಾಲಕ ಸುಮಾರು 100 ಅಡಿಗಳಷ್ಟು ದೂರ ಎಳೆದೊಯ್ದಿದ್ದಾನೆ. ಈ ವೇಳೆ ಬೈಕ್‍ಗೆ ಬೆಂಕಿ ಹೊತ್ತಿಕೊಂಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಿಮಾಚಲ, ಉತ್ತರಾಖಂಡದಲ್ಲಿ ವರುಣನ ಆರ್ಭಟ – 54 ಮಂದಿ ಸಾವು

    ಈ ವೇಳೆ ರಸ್ತೆಯ ಪಕ್ಕದಲ್ಲಿದ್ದ ಜನ ಅಪಘಾತದ ಸ್ಥಳಕ್ಕೆ ಬಂದಿದ್ದಾರೆ. ಬಳಿಕ ಚಾಲಕ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬೈಕ್ ಸವಾರನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಸಂಬಂಧ ಕಾರು ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ (Police) ಹಿಟ್ & ರನ್ ಕೇಸ್ (Hit and Run) ದಾಖಲಾಗಿದೆ. ಇದನ್ನೂ ಓದಿ: ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ 24ರ ವಿವಾಹಿತೆ 54ರ ಪೂಜಾರಿ ಜೊತೆಯೇ ಜೂಟ್!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೆಹಲಿ ಮಾದರಿಯಲ್ಲೇ Hit & Run Case: ಬೈಕ್‌ಗೆ ಡಿಕ್ಕಿ ಹೊಡೆದು ಸವಾರನನ್ನು 12 ಕಿಮೀ ಎಳೆದೊಯ್ದ ಕಾರು – ವ್ಯಕ್ತಿ ಸಾವು

    ದೆಹಲಿ ಮಾದರಿಯಲ್ಲೇ Hit & Run Case: ಬೈಕ್‌ಗೆ ಡಿಕ್ಕಿ ಹೊಡೆದು ಸವಾರನನ್ನು 12 ಕಿಮೀ ಎಳೆದೊಯ್ದ ಕಾರು – ವ್ಯಕ್ತಿ ಸಾವು

    ಗಾಂಧೀನಗರ: ದೆಹಲಿಯಲ್ಲಿ (Delhi) ಯುವತಿಗೆ ಕಾರು ಡಿಕ್ಕಿ ಹೊಡೆದು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಮಾದರಿಯಲ್ಲೇ ಗುಜರಾತ್‌ನಲ್ಲೂ (Gujarat Hit And Run) ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೈಕ್‌ ಸವಾರನಿಗೆ ಕಾರು ಡಿಕ್ಕಿ ಹೊಡೆದು 12 ಕಿಮೀ ಎಳೆದೊಯ್ದ ಪರಿಣಾಮ, ಸವಾರ ಸಾವಿಗೀಡಾಗಿದ್ದಾನೆ.

    ಸೂರತ್‌ನಲ್ಲಿ (Surat) ಜನವರಿ 18 ರಂದು 24 ವರ್ಷದ ಬೈಕ್ ಸವಾರನಿಗೆ ಕಾರು ಡಿಕ್ಕಿ ಹೊಡದು 12 ಕಿಮೀ ಎಳೆದೊಯ್ದಿದೆ. ಘಟನೆಯ ವೀಡಿಯೋವನ್ನು ವಾಹನದ ಹಿಂದೆಯೇ ಚಲಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ ಚಿತ್ರೀಕರಿಸಿದ್ದಾನೆ. ಪ್ರಕರಣದ ತನಿಖೆ ನಡೆಸುತ್ತಿರುವ ಸೂರತ್ ಪೊಲೀಸರಿಗೆ ಆ ವ್ಯಕ್ತಿ ವೀಡಿಯೋವನ್ನು ಹಸ್ತಾಂತರಿಸಿದ್ದಾನೆ. ಇದನ್ನೂ ಓದಿ: ಮೋದಿ ಸಾಕ್ಷ್ಯಚಿತ್ರ ದಂಗಲ್ – ಜೆಎನ್‍ಯುನಲ್ಲಿ ಇಂಟರ್‌ನೆಟ್, ವಿದ್ಯುತ್ ಸ್ಥಗಿತ

    ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಸಾಗರ್‌ ಪಾಟೀಲ್‌ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿಯೊಂದಿಗೆ ಜ.18 ರ ರಾತ್ರಿ ಕಡೋದರಾ-ಬಾರ್ಡೋಲಿ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ. ನಂತರ ಹಿಟ್ ಅಂಡ್ ರನ್ ಅಪಘಾತ ಸಂಭವಿಸಿದೆ.

    “ಸಂತ್ರಸ್ತ ಸಾಗರ್ ಪಾಟೀಲ್ ತನ್ನ ಪತ್ನಿ ಅಶ್ವಿನಿಬೆನ್ ಕೂರಿಸಿಕೊಂಡು ದ್ವಿಚಕ್ರವಾಹನದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಕಾರು ನಿಲ್ಲಿಸದೆ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ” ಎಂದು ಸೂರತ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ಜೋಯ್ಸರ್ ತಿಳಿಸಿದ್ದಾರೆ. ಇದನ್ನೂ ಓದಿ: Viral Video: ನಾಗವಲ್ಲಿ ವೇಷ ತೊಟ್ಟು ಮೆಟ್ರೋ ಪ್ರಯಾಣಿಕರನ್ನು ಹೆದರಿಸಿದ ಮಹಿಳೆ – ಬೇಸತ್ತು ಸೀಟ್‌ ಬಿಟ್ಟ ಯುವಕ

    ಕಾಮ್ರೇಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪಘಾತದ ಸ್ಥಳದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕಾರಿನಡಿ ಸಿಲುಕಿ ರಸ್ತೆಯಲ್ಲಿ ಎಳೆದೊಯ್ದು ಕೊಲೆ ಮಾಡಲಾಗಿದೆ. ನಾಗರಿಕರೊಬ್ಬರು ಈ ದೃಶ್ಯವನ್ನು ವೀಡಯೋ ಮಾಡಿ ಕ್ಲಿಪ್ ಅನ್ನು ಕಳುಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇದು ಕಾರಿನ ವಿವರಗಳನ್ನು ಪಡೆಯಲು ಮತ್ತು ಅಪರಾಧವನ್ನು ಪತ್ತೆಹಚ್ಚಲು ಸಹಾಯ ಮಾಡಿತು ಎಂದು ಅವರು ತಿಳಿಸಿದ್ದಾರೆ.

    20 ವರ್ಷದ ಯುವತಿ ಸ್ಕೂಟರ್‌ ಕಾರಿಗೆ ಡಿಕ್ಕಿ ಹೊಡೆದು ಇತ್ತೀಚೆಗೆ ಸಾವನ್ನಪ್ಪಿದ್ದಳು. ದೆಹಲಿಯ ಕಾಂಝಾವಾಲಾ ಪ್ರದೇಶದಲ್ಲಿ ಘಟನೆ ನಡೆದಿತ್ತು. ಆಕೆಯನ್ನು ಸಹ ಕಾರು 12 ಕಿಮೀ ಎಳೆದೊಯ್ದು ಮೃತಪಟ್ಟಿದ್ದಳು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಟ್ ಅಂಡ್ ರನ್‍ಗೆ ವ್ಯಕ್ತಿ ಸಾವು

    ಹಿಟ್ ಅಂಡ್ ರನ್‍ಗೆ ವ್ಯಕ್ತಿ ಸಾವು

    ದೊಡ್ಡಬಳ್ಳಾಪುರ: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರದ ತಂಬೇನಹಳ್ಳಿ ಬಳಿ ನಡೆದಿದೆ.

    ವೆಂಕಟೇಶ್ (35) ಸ್ಥಳದಲ್ಲಿಯೇ ಸಾವನಪ್ಪಿದ ಮೃತ ದುರ್ದೈವಿ. ವ್ಯಕ್ತಿಯು ತಂಬೇನಹಳ್ಳಿಯ ನಿವಾಸಿಯಾಗಿದ್ದು, ಪಟ್ಟಣಕ್ಕೆ ಹೋಗಿ ವಾಪಸ್ ಹಿಂದಿರುಗುತ್ತಿದ್ದ ವೇಳೆ ವಾಹನವೊಂದು ವ್ಯಕ್ತಿ ಮೇಲೆ ಹರಿದು ಹೋದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತನ ಮೇಲೆ ವಾಹನ ಹರಿಸಿದ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕಟ್ಟಪ್ಪ

    ಸ್ಥಳಕ್ಕೆ ದೊಡ್ಡಬೆಳವಂಗಲ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಡಿಸೆಂಬರ್ 1 ರಿಂದ ಜಿಯೋ ದುಬಾರಿ – ಹಿಂದೆ ಎಷ್ಟಿತ್ತು? ಈಗ ಎಷ್ಟು ಏರಿಕೆಯಾಗಿದೆ?

  • ಲಾರಿ ಡಿಕ್ಕಿಯಾಗಿ ಟ್ರಾಫಿಕ್ ಹೆಡ್ ಕಾನ್ಸ್ ಸ್ಟೇಬಲ್ ಸ್ಥಳದಲ್ಲೇ ಸಾವು

    ಲಾರಿ ಡಿಕ್ಕಿಯಾಗಿ ಟ್ರಾಫಿಕ್ ಹೆಡ್ ಕಾನ್ಸ್ ಸ್ಟೇಬಲ್ ಸ್ಥಳದಲ್ಲೇ ಸಾವು

    ಬೆಂಗಳೂರು: ಹಿಟ್ ಅಂಡ್ ರನ್‍ಗೆ ಟ್ರಾಫಿಕ್ ಹೆಡ್ ಕಾನ್ಸ್ ಸ್ಟೇಬಲ್ ಬಲಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಲಾರಿ ಡಿಕ್ಕಿ ಹೊಡೆದು ಮುಖ್ಯಪೇದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಮುಖ್ಯ ಪೇದೆಯಾಗಿದ್ದ ರವಿಶಂಕರ್ ಮೃತ ದುರ್ದೈವಿ. ದೇವೇಗೌಡ ಸರ್ಕಲ್ ಬಳಿ ನಿಯೋಜನೆಗೊಂಡಿದ್ದ ರವಿಶಂಕರ್ ಅವರಿಗೆ ಇಂದು ಲಾರಿ ಗುದ್ದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಅವರು ಅಲ್ಲೇ ಜೀವ ಬಿಟ್ಟಿದ್ದಾರೆ. ಇವರ ಜೊತೆಗಿದ್ದ ಹೋಂ ಗಾರ್ಡ್ ವೆಂಕೂಬ್ ರಾವ್ ಗಾಯಗೊಂಡಿದ್ದಾರೆ.

    ಬ್ಯಾಟರಾಯನಪುರ ಸಂಚಾರಿ ಠಾಣೆ ಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಡ್ರಗ್ಸ್ ಸೇವಿಸಿ ಸ್ಯಾಂಡಲ್‍ವುಡ್ ಖ್ಯಾತ ನಟರ ರಾದ್ಧಾಂತ – ಸಿಕ್ಕಸಿಕ್ಕವರಿಗೆ ಗುದ್ದಿ ಆಕ್ಸಿಡೆಂಟ್

    ಡ್ರಗ್ಸ್ ಸೇವಿಸಿ ಸ್ಯಾಂಡಲ್‍ವುಡ್ ಖ್ಯಾತ ನಟರ ರಾದ್ಧಾಂತ – ಸಿಕ್ಕಸಿಕ್ಕವರಿಗೆ ಗುದ್ದಿ ಆಕ್ಸಿಡೆಂಟ್

    – ಬೆಂಜ್ ಕಾರಲ್ಲಿತ್ತು ಗಾಂಜಾ
    – ಸಾರ್ವಜನಿಕರಿಂದ ಉದ್ಯಮಿ ಮೊಮ್ಮಗನಿಗೆ ಹಿಗ್ಗಾಮಗ್ಗಾ ಥಳಿತ

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟರು ಡ್ರಗ್ಸ್ ಸೇವಿಸಿ ಸಿಕ್ಕಸಿಕ್ಕವರಿಗೆ ಕಾರಿನಿಂದ ಗುದ್ದಿರೋ ಘಟನೆ ಬೆಂಗಳೂರಿನ ಸೌತ್ ಎಂಡ್ ಸರ್ಕಲ್‍ನಲ್ಲಿ ನಡೆದಿದೆ.

    ನಟರು ಉದ್ಯಮಿ ಮೊಮ್ಮಗನ ಜೊತೆ ಗಾಂಜಾ ಸೇವಿಸಿ ಆಕ್ಸಿಡೆಂಟ್ ಮಾಡಿದ್ದು, ಸಾರ್ವಜನಿಕರಿಂದ ಗೂಸಾ ಬೀಳ್ತಿದ್ದಂತೆ ಮುಖ ಮುಚ್ಕೊಂಡು ಎಸ್ಕೇಪ್ ಆಗಿದ್ದಾರೆ.

     

    ಲಾಲ್‍ಬಾಗ್ ರಸ್ತೆ ಮೂಲಕ ಬಂದ ಟಾಪ್ ಹೀರೋಗಳಿದ್ದ ಆ ಬೆಂಜ್ ಕಾರು ಮೊದಲು ರಸ್ತೆ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಿಬಿಎಂಪಿ ಬೋರ್ಡ್ ಅಷ್ಟೇ ಅಲ್ಲ, ಫುಟ್‍ಪಾತ್‍ಗೆ ಹಾಕಿದ್ದ ಕಬ್ಬಿಣದ ಗ್ರಿಲ್‍ಗಳೇ ಮುರಿದುಹೋಗಿವೆ.

     

    ವಿದ್ಯುತ್ ಕಂಬ, ಓಮ್ನಿ ಕಾರ್ ಹಾಗೂ ಇತರೆ ವಾಹನಗಳಿಗೂ ಡಿಕ್ಕಿ ಹೊಡೆದಿದ್ದು, ಸಿಕ್ಕಸಿಕ್ಕವರಿಗೆಲ್ಲಾ ಗುದ್ದಿ ಪರಾರಿಯಾಗಿದ್ದಾರೆ. ಇವರ ಆಟಾಟೋಪದಿಂದ ತಾಳ್ಮೆಗೆಟ್ಟ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಉದ್ಯಮಿಯ ಮೊಮ್ಮಗನಿಗೆ ಒದೆ ಬೀಳುತ್ತಲೇ ಆ `ಸ್ಟಾರ್’ಗಳು ಎಸ್ಕೇಪ್ ಆಗಿದ್ದಾರೆ.

    ಇಷ್ಟೆಲ್ಲಾ ಆದ್ಮೇಲೆ ಬೆಂಜ್ ಸೀಜ್ ಮಾಡಿದ ಪೋಲೀಸರಿಗೆ ಶಾಕ್ ಕಾದಿತ್ತು. ಕಾರ್‍ನಲ್ಲಿ ಕೋಟಿ ಮೌಲ್ಯದ ಮಾದಕ ದ್ರವ್ಯ ಪತ್ತೆಯಾಗಿದೆ. ಇಷ್ಟಾದರೂ ಪೊಲೀಸರು ಮಾತ್ರ ಎಫ್‍ಐಆರ್ ದಾಖಲಿಸಿಲ್ಲ.

    ಒದೆ ತಿಂದ ಉದ್ಯಮಿ ಮೊಮ್ಮಗ ಆಸ್ಪತ್ರೆಯಲ್ಲಿ ಟ್ರೀಟ್‍ಮೆಂಟ್ ಪಡೆದು ಎಸ್ಕೇಪ್ ಆಗಿದ್ದಾನೆ. ಹಿಟ್ ಅಂಡ್ ರನ್‍ನಿಂದ ಗಾಯಗೊಂಡವರಿಗೆ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.