Tag: ಹಿಟ್

  • ಗಂಧದ ಗುಡಿ ಟ್ರೇಲರ್ ಸೂಪರ್ ಹಿಟ್ : ಒಂದೇ ದಿನಕ್ಕೆ ಕೋಟಿ ವೀಕ್ಷಣೆ

    ಗಂಧದ ಗುಡಿ ಟ್ರೇಲರ್ ಸೂಪರ್ ಹಿಟ್ : ಒಂದೇ ದಿನಕ್ಕೆ ಕೋಟಿ ವೀಕ್ಷಣೆ

    ಪುನೀತ್ ರಾಜ್ ಕುಮಾರ್ (Puneeth Rajkumar) ನಟಿಸಿ, ನಿರ್ಮಾಣ ಮಾಡಿದ್ದ ಗಂಧದ ಗುಡಿ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಟ್ರೇಲರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಬಿಡುಗಡೆಯಾದ ಒಂದೇ ದಿನಕ್ಕೆ ಕೋಟಿ  ವೀಕ್ಷಣೆ ಪಡೆದದ್ದು, ಅಪ್ಪು ಕೆಲಸಕ್ಕೆ ನೋಡುಗರು ಹಾಡಿ ಹೊಗಳಿದ್ದಾರೆ. ಅಲ್ಲೇ, ಅಪ್ಪು ಟ್ರೇಲರ್ ಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಸೇರಿದಂತೆ ಸಾಕಷ್ಟು ಸಿಲಿಬ್ರಿಟಿಗಳು ಶುಭ ಹಾರೈಸಿದ್ದಾರೆ.

    ಗಂಧದ ಗುಡಿಯಲ್ಲಿ ಏನಿಲ್ಲ, ಎಲ್ಲವೂ ಇದೆ. ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ಅರಣ್ಯ, ಕಾಡು ಪ್ರಾಣಿಗಳು, ಕಾಡಂಚಿನ ಜನರು, ದೇವರು, ದೈವ ಎಲ್ಲವನ್ನೂ ಒಂದೇ ಉಸಿರಿಗೆ ಹಿಡಿದಿಟ್ಟಿದ್ದಾರೆ ಪುನೀತ್ ರಾಜ್‍ಕುಮಾರ್. ರಾತ್ರಿ ಅವರು ಕಾಡಿನೊಳಗೆ ನುಗ್ಗಿದಾಗ ನಾವೇ ಭಯಪಡುವಷ್ಟು ಸುಂದರವಾಗಿ ಸೆರೆ ಹಿಡಿದಿದ್ದಾರೆ ಆ ರಾತ್ರಿಯನ್ನು. ಸಮುದ್ರದಾಳಕ್ಕೆ ಅಪ್ಪು ಜಿಗಿದಾಗ ಇಲ್ಲಿ ನಾವೇ ಒದ್ದೆಯಾಗುವಂತೆ ಸಿನಿಮಾಟೋಗ್ರಫಿ ಇದೆ. ಎಲ್ಲವೂ ಚಂದ, ಚಂದ. ಇದನ್ನೂ ಓದಿ:ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ

    ಗಂಧದ ಗುಡಿ (Gandhad Gudi) ಟ್ರೈಲರ್ ನ ಮತ್ತೊಂದು ಸೊಗಸು ಅಂದರೆ, ಅಪ್ಪು ಹಾಗೂ ಅವರ ಅಪ್ಪಾಜಿ ಬಾಳಿ ಬದುಕಿದ ಮನೆಯನ್ನು ತೋರಿಸಿದ್ದಾರೆ. ಸ್ವತಃ ಆ ಮನೆಯ ಬಗ್ಗೆ ಪುನೀತ್ ರಾಜ್‍ಕುಮಾರ್ ಅವರೇ ವಿವರಿಸುತ್ತಾರೆ. ಮನೆಯನ್ನು ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಡಾ.ರಾಜ್ ಕುಮಾರ್ (Rajkumar) ಪ್ರವೇಶ. ಥ್ರಿಲ್ ಅನಿಸುವಷ್ಟು ಮಜಾ ಕೊಡುತ್ತದೆ ಟ್ರೇಲರ್.

    ಇಂದು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗಾಗಿ ಟ್ರೇಲರ್ (Trailer) ಪ್ರದರ್ಶನ ಏರ್ಪಡಿಸಲಾಗಿತ್ತು. ಗಂಧದ ಗುಡಿಯ ಅಂದವನ್ನು ಕಣ್ತುಂಬಿಕೊಂಡ ಕಂಗಳಲ್ಲಿ ಅಪ್ಪು ಇಲ್ಲ ಅನ್ನುವ ಕಂಬನಿ ಸುರಿಯುತ್ತಿತ್ತು. ರಾಘವೇಂದ್ರ ರಾಜಕುಮಾರ ಸೇರಿದಂತೆ ಅಲ್ಲಿದ್ದವರ ಅಷ್ಟೂ ಕಣ್ಣುಗಳು ಒದ್ದೆ ಆಗಿದ್ದವು. ಟ್ರೇಲರೇ ಇಷ್ಟೊಂದು ಭಾವುಕತೆ ಸೃಷ್ಟಿ ಮಾಡಿದೆ. ಇದೇ ತಿಂಗಳು ಕೊನೆಯಲ್ಲಿ ಪೂರ್ತಿ ಚಿತ್ರವೇ ಬಿಡುಗಡೆ ಆಗುತ್ತಿದೆ. ಹೃದಯ ಒಡೆಯುವ ಕಾಲವದು.

    Live Tv
    [brid partner=56869869 player=32851 video=960834 autoplay=true]