Tag: ಹಿಜಬ್ ವಿವಾದ

  • ನಾನು ಹಿಜಬ್ ಬಗ್ಗೆ ಮಾತಾಡುವವನೇ, ನಾನ್ಯಾಕೆ ಕ್ಷಮೆ ಕೇಳಬೇಕು – ಡಿಕೆಶಿಗೆ ಜಮೀರ್ ಟಾಂಗ್

    ನಾನು ಹಿಜಬ್ ಬಗ್ಗೆ ಮಾತಾಡುವವನೇ, ನಾನ್ಯಾಕೆ ಕ್ಷಮೆ ಕೇಳಬೇಕು – ಡಿಕೆಶಿಗೆ ಜಮೀರ್ ಟಾಂಗ್

    ಹುಬ್ಬಳ್ಳಿ: ನಾನು ಹಿಜಬ್ ಬಗ್ಗೆ ಮಾತನಾಡುವವನೇ. ನಾನು ಯಾಕೆ ಕ್ಷಮೆ ಕೇಳಬೇಕು ಎಂದು ಹೇಳುವ ಮೂಲಕ ಮಾಜಿ ಸಚಿವ ಜಮೀರ್ ಹೇಳಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಜಮೀರ್ ಅಹ್ಮದ್ ಕೌಂಟರ್ ನೀಡಿ ಮಾತನಾಡಿದ್ದು, ನಾನ್ ಹಿಜಬ್ ಬಗ್ಗೆ ಮಾತನಾಡುವವನೇ, ಯಾಕೆ ನಾನು ಕ್ಷಮೆ ಕೇಳಬೇಕು. ಕ್ಷಮೆ ಕೇಳುವಂತಹ ಹೇಳಿಕೆ ನಾನೇನು ನೀಡಿದ್ದೀನಿ ಎಂದು ಕಿಡಿಕಾರಿದರು.

    ನಾನು ಹಿಜಬ್ ಹಾಕಬೇಕು ಅಂತ ಹೇಳಿದ್ದೆ, ಮಾಧ್ಯಮದವರು ಅದನ್ನು ತಿರುಚಿದ್ದಾರೆ. ಹೆಲ್ಮೇಟ್ ರೀತಿ ಹಿಜಬ್ ಹಾಕೋಬೇಕು, ಹೆಲ್ಮೇಟ್ ಹೇಗೆ ಸೇಫ್ಟಿ ಕೊಡುತ್ತೊ ಹಾಗೇ ಹಿಜಬ್ ಕೂಡಾ ನೀಡುತ್ತೆ ಎಂದರು. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

    ಡಿಕೆಶಿ ಹೇಳಿದ್ದೇನು..?
    ಹಿಜಬ್ ವಿವಾದದ ಬಗ್ಗೆ ಶಾಸಕ ಜಮೀರ್ ಅಹ್ಮದ್ ಕೊಟ್ಟಿರುವ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಈ ಬಗ್ಗೆ ಅವರಿಗೆ ಕಾರಣ ಕೇಳಿ ನೋಟಿಸ್ ಕೊಡುತ್ತೇವೆ. ಅವರು ಆ ಮಾತನ್ನು ವಾಪಸ್ ಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಡಿಕೆಶಿ ಹೇಳಿದ್ದರು.

    ನಿನ್ನೆ ಜಮೀರ್, ಬುರ್ಖಾ ಪದ್ಧತಿ ಇಲ್ಲದ ಕಾರಣವೇ ಭಾರತದಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ ಅಂತ ಪರೋಕ್ಷವಾಗಿ ಹೇಳಿಕೆ ನೀಡಿ, ಯುವತಿಯರ ಸೌಂದರ್ಯ ರಕ್ಷಣೆಗೆ ಬುರ್ಖಾ, ಹಿಜಬ್ ಪದ್ಧತಿ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಜಮೀರ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇದನ್ನೂ ಓದಿ: ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಕ್ಷಮೆ ಕೇಳಬೇಕು: ಡಿಕೆಶಿ

  • ಹಿಜಬ್ ಧರಿಸಿಯೇ ಶಾಲೆಗೆ ಬಂದ ವಿದ್ಯಾರ್ಥಿನಿಯರು

    ಹಿಜಬ್ ಧರಿಸಿಯೇ ಶಾಲೆಗೆ ಬಂದ ವಿದ್ಯಾರ್ಥಿನಿಯರು

    ಕಲಬುರಗಿ: ಹೈಕೋರ್ಟ್ ಆದೇಶವನ್ನು ಧಿಕ್ಕರಸಿ ಇಂದು ಕಲಬುರಗಿ ನಗರದ ಉರ್ದು ಶಾಲೆಯ ವಿದ್ಯಾರ್ಥಿನಿಯರು ಶಾಲೆಗೆ ಹಿಜಬ್ ಧರಿಸಿ ಆಗಮಿಸಿದ್ದರು.

    ಇಂದಿನಿಂದ ಪ್ರೌಢ ಶಾಲೆಯ ಪ್ರಾರಂಭದ ಹಿನ್ನಲೆ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಉರ್ದು ಪ್ರೌಢ ಶಾಲೆಯ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಹಿಜಬ್ ಧರಿಸಿ ಶಾಲಾ ಕೊಠಡಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದರು. ಇದನ್ನೂ ಓದಿ: ಬಿಜೆಪಿ ಶಾಸಕನ ಕಚೇರಿ ಮೇಲೆ ಕಲ್ಲೆಸೆದ ಯುವಕ

     

    ವಿದ್ಯಾರ್ಥಿಗಳು ಹಿಜಬ್, ಕೇಸರಿ ಶಾಲು ಸೇರಿದಂತೆ ಯಾವುದೇ ಧಾರ್ಮಿಕ ಭಾವನೆಯನ್ನು ಬಿಂಬಿಸುವ ವಸ್ತ್ರಗಳನ್ನು ಧರಿಸುವಂತಿಲ್ಲ ಅಂತ ಹೈಕೋರ್ಟ್ ಸೂಚಿಸಿದ್ದು, ಸಮವಸ್ತ್ರ ನಿಯಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರಗೊಂಡಿತ್ತು.

    ಸುದ್ದಿ ಪ್ರಸಾರವಾದ ಬೆನ್ನಲ್ಲೇ ಶಿಕ್ಷಕರು ಮಕ್ಕಳಿಗೆ ತಿಳಿ ಹೇಳಿ ಹಿಜಬ್ ತೆಗೆಯುವಂತೆ ಸೂಚಿಸಿದ್ದರು. ಶಿಕ್ಷಕರ ಮಾತಿಗೆ ಬೆಲೆ ಕೊಟ್ಟು ವಿದ್ಯಾರ್ಥಿಗಳು ಹಿಜಬ್ ತೆಗೆದು ಈಗ ಪಾಠ ಕೇಳುತ್ತಿದ್ದಾರೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಪ್ರಜಾಪ್ರಭುತ್ವದ ಹಬ್ಬ ಮಾಡಿ: ಮೋದಿ

    ಹಲವಾರು ಶಿಕ್ಷಕಿಯರು ಹಿಜಬ್ ಧರಿಸಿಕೊಂಡೆ ಸ್ಟಾಫ್ ರೂಮಿಗೆ ಆಗಮಿಸಿದ್ದರು. ಸರ್ಕಾರಿ ಪ್ರೌಢ ಶಾಲೆಗೆ ಜಿಲ್ಲಾಧಿಕಾರಿ ಯಶವಂತ ಗುರುಕಾರ್, ಜಿಲ್ಲಾಧಿಕಾರಿ ಗೆಸಾಥ್ ನೀಡಿರುವ ಡಿಸಿಪಿ ಮತ್ತು ಇನ್ನಿತರ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪ್ರೌಢ ಶಾಲೆಯ ಪ್ರಾರಂಭದ ಹಿನ್ನಲೆ ನಗರದ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಶಾಲೆಗೆ ಶಾಲಾ ಸಮವಸ್ತ್ರ ಧರಿಸಿಕೊಂಡು ಬರಲು ಮಾತ್ರ ಅವಕಾಶ ಇದೆ. ಎಲ್ಲರು ನಿಯಮಗಳನ್ನು ಕಡ್ಡಾಯ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಶಿಕ್ಷಕರು ಹಿಜಾಬ್ ಧರಿಸಿಕೊಂಡು ಬರುವದರ ಬಗ್ಗೆ ನಾನು ಮಾತನಾಡುವದಿಲ್ಲ. ಹಿಜಬ್ ವಿವಾದದ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಅದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ನ್ಯಾಯಾಲಯದ ತೀರ್ಪಿನಲ್ಲಿ ಶಿಕ್ಷಕರ ಉಡುಪಿನ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಜಿಲ್ಲೆಯಲ್ಲಿ ಎಲ್ಲಿಯೂ 144 ಸೆಕ್ಷನ್ ವಿಧಿಸಿಲ್ಲ. ಜಿಲ್ಲಾದ್ಯಂತ ಎಲ್ಲಾ ಕಡೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದರು.

  • ಪಾಠ ಮುಗಿದಿಲ್ಲ, ರಿವಿಜನ್ ಆಗಿಲ್ಲ: ವಿದ್ಯಾರ್ಥಿನಿ

    ಪಾಠ ಮುಗಿದಿಲ್ಲ, ರಿವಿಜನ್ ಆಗಿಲ್ಲ: ವಿದ್ಯಾರ್ಥಿನಿ

    ಉಡುಪಿ: ಹಿಜಬ್ ವಿವಾದದ ಆ ಆರು ಮಂದಿ ಹಿಜಬ್ ಹೋರಾಟಗಾರ್ತಿಯರಿಂದ 900 ವಿದ್ಯಾರ್ಥಿನಿಯರ ಓದಿಗೆ ಕಷ್ಟವಾಗಿದೆ ಎಂದು ನಗರದ ಸರ್ಕಾರಿ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ವಿದ್ಯಾರ್ಥಿಬಿ ಭಾರತಿ ಮಾತನಾಡಿ, ನಮಗೆ ಬಹಳ ಭಯದ ವಾತಾವರಣ ಉಂಟಾಗಿದೆ. ಇನ್ನೆರಡು ತಿಂಗಳಲ್ಲಿ ಪಿಯು ಬೋರ್ಡ್ ಪರೀಕ್ಷೆ ನಡೆಯಲಿದೆ. ಪಾಠ ಇನ್ನೂ ಕಂಪ್ಲೀಟ್ ಆಗದೆ ಬಹಳ ಸಮಸ್ಯೆಯಾಗಿದೆ. ಪಾಠ ಮುಗಿಯುವುದು ಯಾವಾಗ? ರಿವಿಜನ್ ಮಾಡುವುದು ಯಾವಾಗ? ಅವರು ಇನ್ನೂ ಹೋರಾಟ ಬಿಡುವ ಲಕ್ಷಣ ಕಾಣುತ್ತಿಲ್ಲ ಎಂದರು.

    ಬೇರೆ ಬೇರೆ ಸಂಘಟನೆಗಳನ್ನು ಕರೆಸಿ ತರಗತಿ, ಕಂಪೌಂಡಿನಲ್ಲಿ ಗಲಾಟೆ ಮಾಡುತ್ತಿದ್ದಾರೆ. ನಾನು ಅದೇ ಕಾಲೇಜು ಕ್ಯಾಂಪಸ್‍ನಲ್ಲಿ 5 ವರ್ಷಗಳಿಂದ ಓದುತ್ತಿದ್ದೇನೆ. ತರಗತಿಯಲ್ಲಿ ಹಿಜಬ್‍ಗೆ ಮೊದಲಿನಿಂದಲೂ ಅವಕಾಶ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    ಈ ಹಿಂದೆ ಹಿಜಬ್ ಹೋರಾಟಗಾರ್ತಿಯರು ಹಿಜಬ್‍ಗೆ ಎಲ್ಲರೂ ಬೆಂಬಲಿಸಿ ಎಂದಿದ್ದರು. ನಾವು ಯಾರೂ ಹಿಜಬ್ ಹೋರಾಟಕ್ಕೆ ಬೆಂಬಲ ನೀಡಿಲ್ಲ. ಯಾವ ಶಿಕ್ಷಕರು ಕೂಡಾ ಅವರಿಗೆ ಬೆಂಬಲಿಸಿಲ್ಲ. ಸಂಸ್ಥೆಯಲ್ಲಿ 90 ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದವರಿದ್ದಾರೆ. ಉಳಿದ ಎಲ್ಲರೂ ಕಲಿಕೆಯಲ್ಲಿ ತಲ್ಲೀನರಾಗಿದ್ದು, ಎಜುಕೇಶನ್ ಇಂಪಾರ್ಟೆಂಟ್ ಅಂತ ಯಾರೂ ಹಿಜಬ್ ಧರಿಸುತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ

    ಆದರೆ ಆ ಆರು ಜನ ಹಿಜಬ್ ಹೋರಾಟಗಾರ್ತಿಯರು ಯಾರು ಹೇಳಿದರು ಕೇಳುತ್ತಿಲ್ಲ. ಹಿಜಬ್ ತೆಗೆದು ತರಗತಿಗೆ ಬಂದರೆ ಎಂದಿನಂತೆ ಪಾಠ ನಡೆಯುತ್ತದೆ. ಆದರೆ ಅವರು ಹಿಜಬ್ ತೆಗೆದು ತರಗತಿಗೆ ಬರುವ ಹಾಗೇ ಕಾಣುತ್ತಿಲ್ಲ ಎಂದು ಹೇಳಿದರು.

  • ನಾಳೆಯಿಂದ 9 ಮತ್ತು 10ನೇ ತರಗತಿ ಆರಂಭವಾಗಲಿದೆ: ಬಿ.ಸಿ.ನಾಗೇಶ್

    ನಾಳೆಯಿಂದ 9 ಮತ್ತು 10ನೇ ತರಗತಿ ಆರಂಭವಾಗಲಿದೆ: ಬಿ.ಸಿ.ನಾಗೇಶ್

    ಹಾಸನ: ನಾಳೆಯಿಂದ 9 ಮತ್ತು 10ನೇ ತರಗತಿ ಆರಂಭವಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿಸಿ.ನಾಗೇಶ್ ತಿಳಿಸಿದ್ದಾರೆ.

    ಹಿಜಬ್ ಮತ್ತು ಕೇಸರಿ ಶಾಲಿನ ವಿವಾದ ಜೋರಾಗುತ್ತಲೇ ಸರ್ಕಾರ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಿತ್ತು. ಇದೀಗ ನಾಳೆಯಿಂದ ಒಂಬತ್ತು ಮತ್ತು ಹತ್ತನೇ ತರಗತಿ ಆರಂಭವಾಗುತ್ತಿದ್ದು ಸೋಮವಾರ ನಡೆಯುವ ಸಿಎಂ ಸಭೆಯ ನಂತರ ಪಿಯುಸಿ ಹಾಗೂ ಪದವಿ ತರಗತಿಗಳನ್ನು ತೆರೆಯುವ ಬಗ್ಗೆ ಯೋಚನೆ ಮಾಡಿ ಸದ್ಯದಲ್ಲಿಯೇ ಈ ಬಗ್ಗೆ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

    ಇದೇ ವೇಳೆ ಹಿಜಬ್ ಯೂನಿಫಾರ್ಮ್ ಅಂಗ ಅಲ್ಲ. ಯಾವ ಕಾರಣಕ್ಕೆ ಆ ಹೆಣ್ಣುಮಕ್ಕಳು ಆ ರೀತಿ ವರ್ತನೆ ಮಾಡಿದರು ಅರ್ಥ ಆಗುತ್ತಿಲ್ಲ. ಈ ಹಿಜಬ್ ವಿವಾದದ ಹಿಂದೆ ಕೆಲ ಮುಸ್ಲಿಂ ಸಂಘಟನೆಗಳ ಕೈವಾಡ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಎಲ್ಲ ಹೊರಬರಲಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ನೀಡಲು ಸಾಧ್ಯವಾಗದ ಚನ್ನಿ ಪಂಜಾಬ್‍ನ್ನು ಹೇಗೆ ಕಾಪಾಡಿಕೊಳ್ಳುವರು: ಅಮಿತ್ ಶಾ

    ಒಟ್ಟಾರೆ ವಿದ್ಯಾ ದೇಗುಲದಲ್ಲಿ ಹಿಜಬ್ ಮತ್ತು ಕೇಸರಿ ಶಾಲಿನ ಗಲಾಟೆ ಆರಂಭವಾಗಿ ಶಿಕ್ಷಣ ವ್ಯವಸ್ಥೆಗೆ ಸಮಸ್ಯೆಯಾಗತೊಡಗಿತ್ತು. ಈ ಹಿನ್ನೆಲೆಯಲ್ಲಿ ಶಾಲಾ, ಕಾಲೇಜಿಗೆ ರಜೆ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಒಂಬತ್ತು ಹತ್ತನೇ ತರಗತಿ ಆರಂಭವಾಗುತ್ತಿದ್ದು, ಇದಕ್ಕೆ ಪೋಷಕರು ಮತ್ತು ವಿದ್ಯಾರ್ಥಿಗಳು ಯಾವ ರೀತಿ ಸಹಕರಿಸುತ್ತಾರೆ ಕಾದು ನೋಡಬೇಕಿದೆ. ಇದನ್ನೂ ಓದಿ: ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ

  • ಎಪಿವಿಬಿನಲ್ಲಿದ್ದ 6 ಜನ ಹಿಜಬ್ ಧರಿಸಿದವರು ಈಗ ಸಿಎಫ್‍ಐಗೆ ಬಂದಿದ್ದಾರೆ: ಡಿಕೆಶಿ

    ಎಪಿವಿಬಿನಲ್ಲಿದ್ದ 6 ಜನ ಹಿಜಬ್ ಧರಿಸಿದವರು ಈಗ ಸಿಎಫ್‍ಐಗೆ ಬಂದಿದ್ದಾರೆ: ಡಿಕೆಶಿ

    ಗದಗ: ಎಬಿವಿಪಿನಲ್ಲಿದ್ದ 6 ಮಂದಿ ಹಿಜಬ್ ಧರಿಸಿದವರು ಈಗ ಸಿಎಫ್‍ಐಗೆ ಬಂದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಹಿಜಾಬ್ ಮತ್ತು ಕೇಸರಿ ವರ್ಸಸ್ ಶಾಲು ವಿವಾದ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಸಂವಿಧಾನ ಇದೆ, ಅದೇ ನಮ್ಮ ಧರ್ಮವಾಗಿದೆ. ರಾಷ್ಟ್ರಧ್ವಜವೇ ನಮ್ಮ ಧರ್ಮ ನಾವೂ ಹಿಂದೂಗಳೇ ಎಂದರು.

    ಇದೇ ವೇಳೆ ಹಿಜಬ್ ವಿವಾದದಲ್ಲಿ ಕಾಂಗ್ರೆಸ್ ಸಾಫ್ಟ್ ಕಾರ್ನರ್ ಆರೋಪಕ್ಕೆ ಪ್ರತಿಕ್ರಿಯಿಸಿ, ಹಿಜಬ್ ವಿಚಾರವನ್ನು ನಾವು ಮಾತನಾಡೋದಿಲ್ಲ. ಹಿಂದುಳಿದವರ ಕುರಿತು ನಾವು ಮಾತನಾಡೋದಿಲ್ಲ. ಮೈನಾರಿಟಿಸ್ ನಾವು ಮೊದಲಿನಿಂದಲೂ ರಕ್ಷಣೆ ಮಾಡುತ್ತಾ ಬಂದಿದ್ದೇವೆ ಮುಂದಕ್ಕೂ ಮಾಡುತ್ತೇವೆ ಎಂದು ಹೇಳಿದರು.

    ಹಿಜಬ್ ಕುರಿತು ವಿದ್ಯಾರ್ಥಿಗಳು ಟ್ವಿಟ್ಟರ್ ಫ್ರೀ ಪ್ಲಾನ್ ವಿಚಾರದ ಕುರಿತು ಮಾತನಾಡಿ, 6 ಜನ ಹಿಜಬ್ ವಿದ್ಯಾರ್ಥಿನಿಯರು ಎಪಿವಿಬಿ ನಲ್ಲಿದ್ದರು. ಅದೇ ಹೆಣ್ಣು ಮಕ್ಕಳು ಈಗ ಸಿಎಫ್‍ಐ ಗೆ ಬಂದಿದ್ದಾರೆ. ಯಾರಿಗೆ ಯಾರ ಜೊತೆ ಸಂಪರ್ಕ ಇದೆ, ಎಪಿವಿಬಿನಲ್ಲಿ ಯಾವಾಗ ಇದು, ಅದೆಲ್ಲವನ್ನೂ ಸರ್ಕಾರ ನೋಡಿಕೊಳ್ಳಲಿ ಎಂದು ತಿಳಿಸಿದರು. ಇದನ್ನೂ ಓದಿ: ಸ್ವಾತಂತ್ರ್ಯ ಪೂರ್ವದಿಂದಲೂ ಹಿಜಬ್‌ ಧರಿಸುತ್ತಿದ್ದಾರೆ: ಜಮೀರ್ ಅಹ್ಮದ್

    ವಿದ್ಯಾರ್ಥಿಗಳ ಟ್ವೀಟ್ ಬಗ್ಗೆ ಸರ್ಕಾರ ನೋಡಿಕೊಳ್ಳಲಿ. ಅವರ ಭಾವನೆ ಅವರ ವಿಚಾರ ಅವರು ಮಾತನಾಡೋದಕ್ಕೆ ನಾವು ಜವಾಬ್ದಾರರಲ್ಲ. ನಮ್ಮ ಸರ್ಕಾರ ಇದ್ದಿದ್ರೆ ನಾನು ರಿಯಾಕ್ಟ್ ಮಾಡ್ತಿದ್ದೆ. ಸರ್ಕಾರವೇ ಈ ವಿವಾದಕ್ಕೆ ಪ್ರೋತ್ಸಾಹ ನೀಡಿದೆ. ಪ್ರಾರಂಭದಲ್ಲೇ ನಿಯಂತ್ರಣ ಮಾಡಬಹುದಿತ್ತು. ಇದಕ್ಕೆ ಸರ್ಕಾರವೇ ಹೊಣೆ ಎಂದು ಡಿಕೆಶಿ ಕಿಡಿಕಾರಿದರು.

  • ಹಿಜಬ್ ವಿವಾದದಿಂದ ಅನಾಹುತವಾದ್ರೆ, ಸಿಎಂ ಆಂಡ್ ಟೀಂ ಹೊಣೆ ಹೊರಬೇಕಾಗುತ್ತೆ: ಚಲುವರಾಯಸ್ವಾಮಿ

    ಹಿಜಬ್ ವಿವಾದದಿಂದ ಅನಾಹುತವಾದ್ರೆ, ಸಿಎಂ ಆಂಡ್ ಟೀಂ ಹೊಣೆ ಹೊರಬೇಕಾಗುತ್ತೆ: ಚಲುವರಾಯಸ್ವಾಮಿ

    ಚಾಮರಾಜನಗರ: ರಾಜ್ಯದಲ್ಲಿ ಹಿಜಬ್ ವಿವಾದದಿಂದ ಅನಾಹುತಗಳಾದರೆ ಸಿಎಂ ಬೊಮ್ಮಾಯಿ ಅಂಡ್ ಟೀಂ ಹೊಣೆ ಹೊರಬೇಕಾಗುತ್ತದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

    ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ತಪ್ಪು ನಡೆಯಿಂದ ಹಿಜಬ್ ವಿವಾದ ಭುಗಿಲೆದ್ದಿದೆ. ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನ ಕೈಗೊಂಡಿದ್ದರೆ ಪರಿಸ್ಥಿತಿ ಇಷ್ಟೊಂದು ವಿಕೋಪಕ್ಕೆ ಹೋಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಕುರಿತಾಗಿ ಕುರಾನ್‍ನಲ್ಲಿ ಯಾವುದೇ ಉಲ್ಲೇಖ ಕಾಣುವುದಿಲ್ಲ : ಮೊಹಮ್ಮದ್ ಖಾನ್

    ಹಿಜಾಬ್ ವಿವಾದದಲ್ಲಿ ಕಾಂಗ್ರೆಸ್ ಪಾತ್ರ ಇದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು ಬಿಜೆಪಿ, ಆರ್‌ಎಸ್‌ಎಸ್‌, ಎಬಿವಿಪಿ ಮತ್ತಿತರ ಸಂಘ ಪರಿವಾರದ ಸಂಘಟನೆಯ ಪ್ರಚೋದನೆಯೇ ಇದಕ್ಕೆ ಕಾರಣವಾಗಿದ್ದು, ಆಡಳಿತ ಪಕ್ಷ ಇದರ ಹೊಣೆಹೊರಬೇಕು. ರಾಜ್ಯ ಬಿಜೆಪಿ ಸರ್ಕಾರ ತನ್ನ ವೈಫಲ್ಯ ಮುಚ್ಚಿ ಹಾಕಲು, ಜನರ ಗಮನ ಬೇರೆಡೆ ಸೆಳೆಯಲು ಈ ವಿವಾದ ಸೃಷ್ಟಿಸಿದೆ ಎಂದಿದ್ದಾರೆ. ಇದನ್ನೂ ಓದಿ:  ರಾಜ್ಯಗಳಲ್ಲಿ ಹಿಜಬ್‌ ವಿವಾದ – ಹೈಕೋರ್ಟ್‌ಗಳ ತೀರ್ಪುಗಳೇನು? ಇಲ್ಲಿದೆ ಮಾಹಿತಿ

    ಮಂಡ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಗೆ ಕಾಂಗ್ರೆಸ್ ನಾಯಕರ ಸನ್ಮಾನ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ಗೂ ಅದಕ್ಕೂ ಸಂಬಂಧವಿಲ್ಲ. ಪಕ್ಷದ ಶಾಸಕಾಂಗ ನಾಯಕರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ ಸನ್ಮಾನ ಮಾಡಿಲ್ಲ, ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡ ಕೆಲವರು ವೈಯಕ್ತಿಕ ಸನ್ಮಾನ ಮಾಡಿದ್ದಾರೆ. ಸನ್ಮಾನ ಮಾಡುವವರನ್ನು ನಾವು ತಡೆಯಲಾಗುವುದಿಲ್ಲ ಎಂದು ಹೇಳಿದ್ದಾರೆ.

  • ಹೈಕೋರ್ಟ್‌ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋದವರಿಗೆ ತಲೆಕೆಟ್ಟಿದೆ: ಅಪ್ಪಚ್ಚು ರಂಜನ್‌

    ಹೈಕೋರ್ಟ್‌ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋದವರಿಗೆ ತಲೆಕೆಟ್ಟಿದೆ: ಅಪ್ಪಚ್ಚು ರಂಜನ್‌

    ಮಡಿಕೇರಿ: ಹಿಜಬ್‌-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಸೂಚನೆ ಮತ್ತು ಮೇಲ್ವಿಚಾರಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿರುವವರಿಗೆ ತಲೆ ಕೆಟ್ಟಿದೆ ಎಂದು ಶಾಸಕ ಅಪ್ಪಚ್ಚು ರಂಜನ್‌ ವಾಗ್ದಾಳಿ ನಡೆಸಿದರು.

    ಹಿಜಬ್, ಕೇಸರಿ ಶಾಲು ಕುರಿತು ಹೈಕೋರ್ಟ್ ಸೂಚನೆ ನೀಡಿರುವುದು ಸ್ವಾಗತಾರ್ಹ. ಆದರೆ ಹೈಕೋರ್ಟ್‌ನಲ್ಲಿ ನೀಡಿರುವ ಸೂಚನೆ ಮತ್ತು ಮೇಲ್ವಿಚಾರಣೆ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಹೋಗಿರುವವರಿಗೆ ತಲೆಕೆಟ್ಟಿರಬಹುದು. ಸುಪ್ರೀಂ ಕೋರ್ಟಿಗೆ ಹೋಗಿರುವವರಿಗೆ ತಮ್ಮ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ಬೇಕಾಗಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐ ಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಸಲ್ಲಿಸಿರಬಹುದು. ಹಿಜಬ್ ಅಥವಾ ಕೇಸರಿ ಶಾಲು ಎರಡನ್ನೂ ಧರಿಸಿ ಶಾಲಾ-ಕಾಲೇಜಿಗೆ ಬರೋದು ತಪ್ಪು. ನಾವು ಶಾಲಾ-ಕಾಲೇಜಿಗೆ ಹೋಗುವಾಗ ಯಾವ ಧರ್ಮ, ಜಾತಿಯವರೆಂದೇ ಗೊತ್ತಾಗುತ್ತಿರಲಿಲ್ಲ. ಅವರ ಹೆಸರನ್ನು ಕೇಳುವಾಗ ಅವರು ಮುಸ್ಲಿಂ ಎಂದು ಗೊತ್ತಾಗುತಿತ್ತು ಎಂದು ತಿಳಿಸಿದರು.

    SUPREME COURT

    ಶಾಲಾ-ಕಾಲೇಜಿಗೆ ಬರೋದು ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕಾಗಿಯೇ ಹೊರತು ಬೇರೆ ಯಾವುದಕ್ಕೂ ಅಲ್ಲ. ಬೇಕಾದರೆ ಹಿಜಬ್ ಧರಿಸಿ ಮಸೀದಿ, ಮದರಸಾಗಳಿಗೆ ಹೋಗಲಿ. ಕೇಸರಿ ಶಾಲು ಧರಿಸಿ ದೇವಾಲಯಗಳಿಗೆ ಹೋಗಲಿ. ಅದಕ್ಕೆ ನಮ್ಮ ಯಾವ ತಕರಾರು ಇಲ್ಲ. ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಯಾವ ಧರ್ಮ ಆಚರಣೆ ಬೇಕಾದರೂ ಅವರ ಮನೆಗಳಲ್ಲಿ ಆಚರಿಸಿಕೊಳ್ಳಲಿ. ಆದರೆ ಶಾಲಾ-ಕಾಲೇಜಿಗೆ ಸಮವಸ್ತ್ರಗಳಲ್ಲೇ ವಿದ್ಯಾರ್ಥಿಗಳು ಬರಲಿ ಎಂದು ಹೇಳಿದರು. ಇದನ್ನೂ ಓದಿ: ತಲೆ ಮೇಲೆ ಸೆರಗು ಹಾಕಿಕೊಳ್ಳೋದನ್ನ ಬೇಡ ಅನ್ನೋದು ಎಷ್ಟು ಸರಿ: ಸಿಎಂ ಇಬ್ರಾಹಿಂ

  • ಇದನ್ನು ನಾವು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ: ಸಿಎಫ್‍ಐ

    ಇದನ್ನು ನಾವು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ: ಸಿಎಫ್‍ಐ

    ಉಡುಪಿ: ಹಿಜಬ್ ವರ್ಸಸ್ ಕೇಸರಿ ವಿವಾದಕ್ಕೆ ರಾಜ್ಯ ಹೈಕೋರ್ಟ್ ಮೌಖಿಕ ಆದೇಶ ನೀಡಿದೆ. ಈ ಆದೇಶ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಗೆ(ಸಿಎಫ್‍ಐ) ತೃಪ್ತಿ ನೀಡಿಲ್ಲ. ಸೋಮವಾರದ ನಂತರದ ತ್ರಿಸದಸ್ಯ ಪೀಠದ ವಿಚಾರಣೆ ಮೇಲೆ ಸಿಎಫ್‍ಐ ಕಣ್ಣಿಟ್ಟಿದೆ.

    ನಾವು ಇದನ್ನು ಇಷ್ಟು ಬೇಗ ನಿರೀಕ್ಷಿಸಿರಲಿಲ್ಲ. ನಾವು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಯಾವುದೇ ಒತ್ತಡ ಹಾಕಲ್ಲ. ಹಿಜಬ್ ಧರಿಸುವ ಬಗ್ಗೆ ಯಾವುದೇ ಸಲಹೆ ನೀಡಲ್ಲ. ಹಿಜಬ್ ತೆಗೆದು ಕಾಲೇಜಿಗೆ ಹೋಗುವ ವಿಚಾರ ಪೋಷಕರು ಹಾಗೂ ವಿದ್ಯಾರ್ಥಿನಿಯರ ಅಭಿಪ್ರಾಯಕ್ಕೆ ಬಿಟ್ಟಿದೆ ಎಂದು ಸಿಎಫ್‍ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲ್ ಕಟ್ಟೆ ತಿಳಿಸಿದ್ದಾರೆ. ಇದನ್ನೂ ಓದಿ: ಹಿಂದೆ ನಡೆದ ಎಲ್ಲಾ ಘಟನೆಗಳನ್ನು ಮರೆಯೋಣ – ವಿದ್ಯಾರ್ಥಿಗಳಿಗೆ ರಘುಪತಿ ಭಟ್ ಕರೆ

    ಹಿಜಬ್ ವಿವಾದದ ಮಧ್ಯಂತರ ತೀರ್ಪಿಗೆ ಪಿಎಫ್‍ಐ ತಕ್ಷಣದ ಪ್ರತಿಕ್ರಿಯೆ ನೀಡಿದೆ. ಕೋರ್ಟ್‍ನ ಆದೇಶ ಸಂಘಟನೆ ಸ್ವೀಕರಿಸಿದೆ. ಸೋಮವಾರ ನಂತರದ ವಿಚಾರಣೆ ಸಂದರ್ಭ ನಮ್ಮ ಪರವಾಗಿ ತೀರ್ಪುಗಳು ಬರಬಹುದು ಎಂಬ ನಂಬಿಕೆ ವ್ಯಕ್ತಪಡಿಸಿದೆ. ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಇದನ್ನು ಹೊರತಾಗಿ ಶನಿವಾರ ಅಥವಾ ಸೋಮವಾರದಿಂದ ಕಾಲೇಜಿಗೆ ತೆರಳುವುದು ವಿದ್ಯಾರ್ಥಿನಿಯರ ಇಚ್ಚೆಗೆ ಬಿಟ್ಟಿದ್ದು ಎಂದಿದೆ. ಇದನ್ನೂ ಓದಿ: ಹಿಜಬ್‌- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್‌ – ಹೈಕೋರ್ಟ್‌ ಕಲಾಪದ ಪೂರ್ಣ ಪಾಠ ಇಲ್ಲಿದೆ

  • ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

    ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

    ಚೆನ್ನೈ: ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಬ್-ಕೇಸರಿ ಶಾಲು ವಿವಾದವು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಧಾರ್ಮಿಕ ಪ್ರಕರರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ರಾಷ್ಟ್ರವೋ ಅಥವಾ ಧರ್ಮವೋ, ಯಾವುದು ಮುಖ್ಯ ಎಂದು ಪ್ರಶ್ನಿಸಿದೆ.

    ದೇವಾಲಯಗಳಲ್ಲಿ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ಎನ್.ಭಂಡಾರಿ ಮತ್ತು ನ್ಯಾಯಮೂರ್ತಿ ಡಿ.ಭರತ ಚಕ್ರವರ್ತಿ ಅವರಿದ್ದ ಪೀಠವು, ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಕೆಲವರು ಹಿಜಬ್‌ಗಾಗಿ ಹೋಗುತ್ತಾರೆ. ಮತ್ತೆ ಕೆಲವರು ಟೋಪಿಗಾಗಿ ಹೋರಾಡುತ್ತಾರೆ. ಇನ್ನೂ ಕೆಲವರು ತಮಗೆ ಅಗತ್ಯವಿರುವುದಕ್ಕಾಗಿ ಪ್ರತಿಭಟಿಸುತ್ತಾರೆ. ಇದು ಒಂದು ರಾಷ್ಟ್ರವೋ ಅಥವಾ ಧರ್ಮದಿಂದ ವಿಭಜನೆಯಾಗಿದೆಯೋ ಅಥವಾ ಬೇರೆ ಇನ್ಯಾವುದೋ ಎಂದು ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ಕಾಲೇಜುಗಳಿಗೆ ಯಾರೂ ಧಾರ್ಮಿಕ ಬಟ್ಟೆಗಳನ್ನು ಧರಿಸಿ ಹೋಗುವಂತಿಲ್ಲ: ಹೈಕೋರ್ಟ್‌ ಮಧ್ಯಂತರ ಆದೇಶ

    ಭಾರತ ಜಾತ್ಯತೀತ ರಾಷ್ಟ್ರ. ಪ್ರಚಲಿತ ವಿದ್ಯಾಮಾನಗಳಿಂದ ಕಂಡು ಬರುತ್ತಿರುವುದು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಪ್ರಯತ್ನವಲ್ಲದೇ ಬೇರೇನೂ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಭಂಡಾರಿ ಕಟು ಪದಗಳಿಂದ ಧರ್ಮದ ಹೆಸರಿನಲ್ಲಿ ದೇಶ ಒಡೆಯುವವರ ವಿರುದ್ಧ ಚಾಟಿ ಬೀಸಿದ್ದಾರೆ.

    ತಿರುಚಿರಪಳ್ಳಿ ಜಿಲ್ಲೆಯ ರಂಗರಾಜನ್ ನರಸಿಂಹನ್ ಎಂಬವರು ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಭಕ್ತರಿಗೆ ವಸ್ತ್ರ ಸಂಹಿತೆ ರೂಪಿಸಬೇಕು. ರಾಜ್ಯಾದ್ಯಂತ ಇರುವ ದೇವಾಲಯಗಳಿಗೆ ಹಿಂದೂಯೇತರರು ಕಾಲಿಡದಂತೆ ಮತ್ತು ದೇವಸ್ಥಾನಗಳ ಆವರಣದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

    ಈ ಅರ್ಜಿ ವಿಚಾರಣೆ ನಡೆಸಿದ ಪೀಠವು, ಮನವಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನೀಡುವಂತೆ ಅರ್ಜಿದಾರನನ್ನು ಪ್ರಶ್ನಿಸಿದೆ. ಆಗಮಗಳ ಯಾವ ಭಾಗವು ಪ್ಯಾಂಟ್, ಧೋತಿ ಮತ್ತು ಶರ್ಟ್‌ಗಳ ಕುರಿತು ಉಲ್ಲೇಖ ಮಾಡಿದೆ ಎಂದು ಪೀಠ ಕೇಳಿದೆ. ಅಂತಿಮವಾಗಿ ವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ವಿವರಣೆಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆ ಪೀಠ ಸೂಚಿಸಿದೆ.

  • ಹಿಜಬ್ ಸವಾಲಿಗೆ ಕೇಸರಿ ಶಾಲು ಪ್ರತಿಸವಾಲು – ಕುಂದಾಪುರದ ಬಹುತೇಕ ಕಾಲೇಜುಗಳಲ್ಲಿ ಟೆನ್ಶನ್

    ಹಿಜಬ್ ಸವಾಲಿಗೆ ಕೇಸರಿ ಶಾಲು ಪ್ರತಿಸವಾಲು – ಕುಂದಾಪುರದ ಬಹುತೇಕ ಕಾಲೇಜುಗಳಲ್ಲಿ ಟೆನ್ಶನ್

    ಬೆಂಗಳೂರು: ಹಿಜಬ್- ಕೇಸರಿ ವಿವಾದ ಉಡುಪಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹಬ್ಬಿದೆ. ಅದರಲ್ಲೂ ಕುಂದಾಪುರದ ಪ್ರತಿಯೊಂದು ಕಾಲೇಜಿನಲ್ಲೂ ಹಿಜಬ್-ಕೇಸರಿ ಫೈಟ್ ನಡೆದಿದೆ.

    ನಿನ್ನೆ ಮೊನ್ನೆಯೆಲ್ಲಾ ಬರೀ ಹುಡುಗರು ಕೇಸರಿ ಶಾಲಿನೊಂದಿಗೆ ಕಾಣಿಸಿಕೊಳ್ತಿದ್ರು. ಇದೀಗ ಭಂಡಾರ್ಕಾರ್ಸ್ ಕಾಲೇಜಿನ ಹೆಣ್ಮಕ್ಕಳು ಕೂಡ ಕೇಸರಿ ಶಾಲು ಹಾಕಿಕೊಂಡು ಕುಂದಾಪುರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅವರು ಹಿಜಬ್ ಕಳಚುವ ತನಕ ನಾವು ಕೇಸರಿ ಶಾಲು ತೆಗೆಯಲ್ಲ ಎಂದು ಆ ಹೆಣ್ಮಕ್ಕಳು ಶಪಥ ಮಾಡಿದ್ದಾರೆ.

    ಎನ್‍ಆರ್ ಶೆಟ್ಟಿ ಕಾಲೇಜಿನಲ್ಲಿಯೂ ಹಿಜಬ್-ಕೇಸರಿಧಾರಿಗಳ ಪ್ರತಿಭಟನೆ ನಡೆದಿದೆ. ಜೈಶ್ರೀರಾಮ್-ಹರಹರ ಮಹಾದೇವ್ ಘೋಷಣೆಗಳು ಮುಗಿಲುಮುಟ್ಟಿವೆ. ಇದರಿಂದ ಎಚ್ಚೆತ್ತ ಆಡಳಿತ ಮಂಡಳಿ ಹೈಕೋರ್ಟ್ ಆದೇಶ ಬರುವ ತನಕ ಕಾಲೇಜಿಗೆ ರಜೆ ಘೋಷಿಸಿದೆ. ಪೊಲೀಸರ ಸೂಚನೆ ಮೇರೆಗೆ ಮಕ್ಕಳು ಮನೆಗೆ ವಾಪಸ್ ಆಗಿವೆ. ಇದನ್ನೂ ಓದಿ: ಹಿಜಬ್‍ಗೆ ಬ್ರೇಕ್ – ಏಕರೂಪ ವಸ್ತ್ರಸಂಹಿತೆ ಜಾರಿಮಾಡಿದ ಸರ್ಕಾರ

    ಈ ಮಧ್ಯೆ ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಇನ್ಮುಂದೆ ಹಿಜಬ್, ಕೇಸರಿ ಶಲ್ಯಕ್ಕೆ ಅವಕಾಶ ಇಲ್ಲ. ಸೋಮವಾರದಿಂದ ಮಕ್ಕಳು ಕೇವಲ ಸಮವಸ್ತ್ರದಲ್ಲಿ ಬರಬೇಕು ಎಂದು ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಯಾರೂ ಕೂಡ ಕಾಲೇಜಿನ ಹೊರಗೆ ಕುಳಿತುಕೊಳ್ಳಬಾರದು. ಹಿಜಬ್‍ಗಾಗಿ ಒತ್ತಾಯಿಸುವವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುವುದು ಎಂದು ಆದೇಶ ಹೊರಡಿಸಿದೆ.

    ಅತ್ತ ಭಂಡಾಕಾರ್ಸ್ ಕಾಲೇಜಿನಲ್ಲಿ ಪೋಷಕರ ಸಭೆ ನಡೀತು. ಹಿಜಬ್ ಧರಿಸಲು ಅವಕಾಶ ಕೊಡಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪ್ರಾಂಶುಪಾಲರನ್ನು ಕೋರಿದ್ರು. ರಾಜಕೀಯ ಸಂಘಟನೆಗಳ ಎಂಟ್ರಿಗೆ ಅವಕಾಶ ಕೊಡಬೇಡಿ ಅಂತಲೂ ಮನವಿ ಮಾಡಿಕೊಂಡರು. ಇದನ್ನೂ ಓದಿ: ಕೇಂದ್ರದ ಬೇಟಿ ಬಚಾವೋ, ಬೇಟಿ ಪಡಾವೋ ಈಗ ಬೇಟಿ ಹಠಾವೋ ಆಗಿ ಬದಲಾಗುತ್ತಿದೆ: ಹೆಚ್‍ಡಿಕೆ