Tag: ಹಿಂಸೆ

  • ನಿಧಿಗಾಗಿ ಪತ್ನಿಗೆ ಮಿತ ಆಹಾರ ಕೊಟ್ಟು ಹಿಂಸಿಸಿದ ಪತಿರಾಯ

    ನಿಧಿಗಾಗಿ ಪತ್ನಿಗೆ ಮಿತ ಆಹಾರ ಕೊಟ್ಟು ಹಿಂಸಿಸಿದ ಪತಿರಾಯ

    ಮುಂಬೈ: ನಿಧಿಯ ಆಸೆಯಿಂದ ಪತಿಯೊಬ್ಬ ತನ್ನ ಪತ್ನಿಗೆ ಬರೋಬ್ಬರಿ 50 ದಿನಗಳ ಕಾಲ ಸರಿಯಾಗಿ ಊಟ ನೀಡದೆ ಹಿಂಸಿಸುವ ಮೂಲಕ ಅಮಾನುಷವಾಗಿ ನಡೆಸಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ನೆರೆ ರಾಜ್ಯದ ಚಂದ್ರಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಿಧಿಯನ್ನು ಹೇಗೆ ವಶಪಡಿಸಿಕೊಳ್ಳಬೇಕು ಎಂದು ಸ್ವಘೋಷಿತ ದೇವಮಾನವನೊಬ್ಬ ತೋರಿಸಿದ ಆಸೆಗೆ ಪತಿರಾಯ, 50 ದಿನಗಳ ಕಾಲ ಪತ್ನಿಗೆ ಮಿತ ಆಹಾರ ನೀಡಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸಿದ್ದಾನೆ.

    2018ರಲ್ಲಿ ಶೆಗಾಂವ್ ಗ್ರಾಮದಲ್ಲಿ ದಂಪತಿ ವಿವಾಹವಾಗಿತ್ತು. ಪತಿ ಹಾಗೂ ಕುಟುಂಬಸ್ಥರಿಗೆ ಸ್ವ-ಘೋಷಿತ ದೇವಮಾನವನೊಬ್ಬ ಗೌಪ್ಯ ನಿಧಿಯೊಂದಿದೆ, ಅದನ್ನ ನೀವು ಪಡೆಯಬಹುದು ಎಂದು ಆಸೆ ತೋರಿಸಿದ್ದನು. ನಿಧಿ ದೊರೆಯಬೇಕೆಂದರೆ ಕೆಲವು ಪೂಜೆಗಳನ್ನು ಮಾಡಬೇಕಾಗುತ್ತದೆ. ಅದಕ್ಕೆ ಮನೆಯಲ್ಲಿದ್ದ ನೂತನ ಸೊಸೆ ಮಿತ ಆಹಾರ ಸೇವನೆ ಮಾಡಿ ಪೂಜೆ ಮಾಡಬೇಕಾಗುತ್ತದೆ ಎಂದು ಷರತ್ತು ವಿಧಿಸಿದ್ದನು. ಈ ಮಾತಿಗೆ ಮರುಳಾದ ಪತಿ ಹಾಗೂ ಆತನ ಕುಟುಂಬಸ್ಥರು ನಿಧಿಯ ಆಸೆಯಿಂದ ಆಮೆಯೊಂದನ್ನು ಸೊಸೆಗೆ ನೀಡಿ, ಪೂಜೆ ಸಲ್ಲಿಸುವಂತೆ ಸದಾ ಹಿಂಸಿಸುತ್ತಿದ್ದರು.

    ಪತಿ ಕೂಡ ಆ ವ್ಯಕ್ತಿಯ ಮಾತು ಕೇಳಿ ಪತ್ನಿಗೆ 50 ದಿನಗಳಿಂದ ಸರಿಯಾದ ಆಹಾರ ನೀಡದೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದನು. ಅಷ್ಟೇ ಅಲ್ಲದೆ ಪತ್ನಿಯ ಮೊಬೈಲನ್ನು ಕೂಡ ಪತಿ ಕಸಿದು ತನ್ನ ಬಳಿಯೇ ಇಟ್ಟುಕೊಂಡಿದ್ದನು. ಈ ಹಿನ್ನೆಲೆ ಹಲವು ದಿನಗಳು ಕಳೆದರೂ ಮಗಳು ಫೋನ್ ಮಾಡಲಿಲ್ಲ ಎಂದು ಮಹಿಳೆಯ ಪೋಷಕರು ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ಮಗಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರೋಣ ಎಂದು ಪೋಷಕರು ಹೋದಾಗ ಮಗಳ ಸ್ಥಿತಿ ಏನಾಗಿದೆ ಎನ್ನುವ ಬಗ್ಗೆ ತಿಳಿದಿದೆ. ನಂತರ ಕೂಡಲೇ ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

    ನಸುಕಿನ 2.45ರಿಂದ ರಾತ್ರಿವರೆಗೂ ಪತ್ನಿಗೆ ಸದಾ ಪೂಜೆ ಮಾಡುತ್ತಿರುವಂತೆ ಪತಿ ಹಿಂಸೆ ನೀಡುತ್ತಿದ್ದ. ಈ ನಡುವೆ ಏನಾದರೂ ತಪ್ಪಾದರೆ ಕುಟುಂಬಸ್ಥರೆಲ್ಲರೂ ಸೇರಿ ಆಕೆಗೆ ಹೊಡೆದು ಚಿತ್ರಹಿಂಸೆ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಮಾನವ ಬಲಿ ಹಾಗೂ ಅಮಾನವೀಯ ಅಂಧಶ್ರದ್ಧೆಗಳ ನಿರ್ಮೂಲನೆ ಹಾಗೂ ತಡೆ ಕಾಯ್ದೆ ಅನ್ವಯ ಕೂಡ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.

    ಹಾಗೆಯೇ ಮೂಢನಂಬಿಕೆಗಳನ್ನು ಬಂಡವಾಳವಾಗಿ ಮಾಡಿಕೊಂಡು ಜನರಿಗೆ ಮೋಸ ಮಾಡಿದ ಸ್ವ-ಘೋಷಿತ ದೇವಮಾನವನನ್ನು ಕೂಡ ಪೊಲೀಸರು ಬಂಧಿಸಿದ್ದು, ಗುರುವಾರಂದು ಸ್ಥಳೀಯ ಕೋರ್ಟ್ ಗೆ ಹಾಜರುಪಡಿಸಿದ್ದರು. ಸದ್ಯ ಈ ಬಗ್ಗೆ ವಿಚಾರಣೆ ಮುಂದುವರಿದಿದೆ.

  • ನಾಗರ ಹಾವಿಗೆ ಹಿಂಸೆ ಕೊಟ್ಟ ಜನ – ಉರಗ ತಜ್ಞರಿಂದ ಆಕ್ರೋಶ

    ನಾಗರ ಹಾವಿಗೆ ಹಿಂಸೆ ಕೊಟ್ಟ ಜನ – ಉರಗ ತಜ್ಞರಿಂದ ಆಕ್ರೋಶ

    ಬೆಂಗಳೂರು: ನಾಗರಹಾವಿಗೆ ಹಿಂಸೆ ಕೊಟ್ಟ ಜನರ ವಿರುದ್ಧ ಉರಗ ತಜ್ಞರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

    ಜಕ್ಕೂರಿನ ಅಪಾರ್ಟ್ ಮೆಂಟ್‍ನಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಹಾವನ್ನು ನೋಡಿದ ಸ್ಥಳೀಯ ನಿವಾಸಿಗಳು ಅದನ್ನು ಹಿಡಿಯಲು ಉರಗ ತಜ್ಞರಿಗೆ ಕರೆ ಮಾಡಲಿಲ್ಲ. ಅಲ್ಲದೆ ತಾವೇ ಆ ನಾಗರಹಾವನ್ನು ಹಿಡಿಯಲು ಯತ್ನಿಸಿದ್ದಾರೆ.

    ಸ್ಥಳೀಯ ನಿವಾಸಿಗಳು ಕೋಲಿನಿಂದ ಹಾವಿನ ಬಾಲ ಹಿಡಿದು ದರ ದರನೇ ಎಳೆದುಕೊಂಡು ಹೋಗಿ ಅದಕ್ಕೆ ಹೊಡೆದು ಹಿಂಸೆ ನೀಡಿದ್ದಾರೆ. ಇದರಿಂದ ಹಾವು ಸಿಟ್ಟಿನಿಂದ ಬುಸುಗುಟ್ಟಿದರೂ ಅದನ್ನು ಬಿಡದೇ ನಿವಾಸಿಗಳು ಹಿಂಸೆ ನೀಡಿದ್ದಾರೆ.

    ಕೊನೆಗೆ ಸ್ಥಳೀಯರು ಎಲ್ಲರು ಸೇರಿ ನಾಗರ ಹಾವನ್ನು ಬುಟ್ಟಿಯೊಳಗೆ ಹಾಕಲು ಯತ್ನಿಸಿದ್ದಾರೆ. ಅಲ್ಲದೆ ನಾಗರ ಹಾವಿಗೆ ಈ ರೀತಿ ಹಿಂಸೆ ಕೊಟ್ಟಿರೋದಕ್ಕೆ ಉರಗ ತಜ್ಞರು ಸ್ಥಳೀಯರ ಮೇಲೆ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

    ಬೆಂಗಳೂರಿನ ಇನ್ನೊಂದು ಖಾಸಗಿ ಕಂಪನಿಯ ಸಿಬ್ಬಂದಿಯಿಂದಲೂ ಹಾವಿಗೆ ಹಿಂಸೆ ನೀಡಿದೆ. ಹಾವು ಹಿಡಿಯೋದಕ್ಕೆ ಗೊತ್ತಿಲ್ಲದೇ ಇದ್ರೂ ಹಾವನ್ನು ಕೋಲಿನಿಂದ ಹೊಡೆಯಲು ಯತ್ನಿಸಿ ಹಿಂಸೆ ನೀಡಿದ್ದಾರೆ.

  • ಪ್ರೀತಿಸಿ ಮದ್ವೆಯಾದ ಪತ್ನಿಯ ಗುಪ್ತಾಂಗವನ್ನು ಇಸ್ತ್ರಿಪೆಟ್ಟಿಗೆಯಿಂದ ಸುಟ್ಟ ಕಿರಾತಕ

    ಪ್ರೀತಿಸಿ ಮದ್ವೆಯಾದ ಪತ್ನಿಯ ಗುಪ್ತಾಂಗವನ್ನು ಇಸ್ತ್ರಿಪೆಟ್ಟಿಗೆಯಿಂದ ಸುಟ್ಟ ಕಿರಾತಕ

    ತುಮಕೂರು: ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾಗಿ, ಪತ್ನಿಯ ಕೈಕಾಲು ಕಟ್ಟಿ ಆಕೆಯ ಗುಪ್ತಾಂಗವನ್ನು ಇಸ್ತ್ರಿಪೆಟ್ಟಿಗೆಯಿಂದ ಸುಟ್ಟಿರುವ ಹೀನ ಕೃತ್ಯ ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ.

    ಆರೋಪಿ ರಂಗನಾಥ್ ಪ್ರೀತಿಯ ನಾಟಕವಾಡಿ ಯುವತಿಗೆ ಮೋಸ ಮಾಡಿ ಈ ಹೀನ ಕೃತ್ಯ ಎಸಗಿದ್ದಾನೆ. ಆರೋಪಿ ಖಾಸಗಿ ಬಸ್ ಡ್ರೈವರ್ ಆಗಿದ್ದು, ವಿವಿಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಮಾಡಿರುವ ಮಂಜುಳಾನನ್ನು ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದ.

    ಮಂಜುಳಾ ಪದವಿ ಓದುವ ವೇಳೆ ಪ್ರವಾಸಕ್ಕೆ ಹೋಗಿದ್ದಾಗ ಚಾಲಕ ರಂಗನಾಥ ಆಕೆಗೆ ಪ್ರಪೋಸ್ ಮಾಡಿ ಪ್ರೀತಿಯ ನಾಟಕವಾಡಿದ್ದಾನೆ. ಆಕೆಯನ್ನ ನಂಬಿಸಿ ದೈಹಿಕ ಸಂಪರ್ಕ ಕೂಡ ಬೆಳೆಸಿ ಗರ್ಭವತಿಯನ್ನಾಗಿ ಮಾಡಿದ್ದಾನೆ. ಈಗಾಗಲೇ ತನಗೆ ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು ಈ ರೀತಿ ಪ್ರೀತಿಯ ನಾಟಕವಾಡಿದ್ದಾನೆ. ಸಂತ್ರಸ್ತೆ ಮಂಜುಳಾ ನನ್ನನ್ನು ಮದುವೆಯಾಗು ಅಂದಾಗಲೆಲ್ಲಾ ಉಲ್ಟಾ ಹೊಡೆಯುತ್ತಿದ್ದ ರಂಗನಾಥನ ವಿರುದ್ಧ ಮಂಜುಳಾ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದರು.

    ಇದರಿಂದ ಭಯಗೊಂಡ ರಂಗನಾಥ ಮೊದಲ ಪತ್ನಿ ಒಪ್ಪಿಗೆ ಪಡೆದು ಮಂಜುಳಾರನ್ನು ಮದುವೆಯಾಗಿದ್ದ. ಇಬ್ಬರು ಹೆಂಡತಿಯರ ಜೊತೆ ಒಂದೇ ಮನೆಯಲ್ಲಿ ಸಂಸಾರ ಕೂಡ ನಡೆಸುತ್ತೇನೆ ಎಂದು ಹೇಳಿ ಮದುವೆ ಮಾಡಿಕೊಂಡಿದ್ದ. ಆದರೆ ಮದುವೆಯಾದ ಬಳಿಕ ರಾಕ್ಷಸನಾಗಿ ಕೆಲ ದಿನಗಳ ಬಳಿಕ ಮಂಜುಳಾಗೆ ಟಾರ್ಚರ್ ಕೊಡಲು ಶುರುಮಾಡಿದ್ದಾನೆ. ಆಕೆಯ ಕೈ, ಕಾಲು ಕಟ್ಟಿ ಗುಪ್ತಾಂಗಕ್ಕೆ ಇಸ್ತ್ರಿಪೆಟ್ಟಿಗೆ ಇಟ್ಟು ಚಿತ್ರಹಿಂಸೆ ಕೊಟ್ಟಿದ್ದಾನೆ.

    ತವರು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ತಪ್ಪಿಗೆ ಮಂಜುಳಾ ಪರಿತಪಿಸುತ್ತಿದ್ದು, ಪತಿಯ ಚಿತ್ರಹಿಂಸೆಯನ್ನು ತಾಳಲಾಗದೆ ನೊಂದು ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

  • ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಫಸ್ಟ್ ನೈಟ್‍ನಲ್ಲೇ ರಾಕ್ಷಸನಾದ ಪತಿ- ಚೂರಿಯಿಂದ ಇರಿದು, ಅಂಗಾಂಗ ಕಚ್ಚಿ ಹಲ್ಲೆ

    ಹೈದರಾಬಾದ್: ಮದುವೆಯಾದ ಮೊದಲ ರಾತ್ರಿಯೇ ಗಂಡನೊಬ್ಬ ಪತ್ನಿಯ ಜೊತೆ ರಾಕ್ಷಸನಂತೆ ನಡೆದುಕೊಂಡು ಆಕೆಯನ್ನು ಹಿಂಸಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಮೋತರಂಗನಪಲ್ಲಿ ಗ್ರಾಮದ ಗಂಗಾಧರ ನೆಲ್ಲೂರು ಬ್ಲಾಕ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪತ್ನಿಯನ್ನ ಚೂರಿಯಿಂದ ಇರಿದು, ದೇಹದ ಭಾಗಗಳನ್ನು ಕಚ್ಚಿ, ಮುಖ ಮತ್ತು ಸೂಕ್ಷ್ಮ ಭಾಗಗಳನ್ನ ಗುದ್ದಿ ಪತಿ ವಿಕೃತಿ ಮೆರೆದಿದ್ದಾನೆ.

    ಹಲ್ಲೆಗೊಳಗಾದ 24 ವರ್ಷದ ನವವಿವಾಹಿತೆಯ ಸ್ಥಿತಿ ಗಂಭೀರವಾಗಿದ್ದು, ಚಿತ್ತೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಕೆಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಶನಿವಾರದಂದು ರಾಕ್ಷಸ ಪತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ನಡೆದಿದ್ದೇನು: ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಆರೋಪಿಗೆ ಎಂಬಿಎ ಪದವೀಧರೆಯ ಜೊತೆ ಗುರುವಾರ ಮದುವೆಯಾಗಿತ್ತು. ವರದಕ್ಷಿಣೆ ಎಂದು ಹುಡುಗಿಯ ಕುಟುಂಬಸ್ಥರು 1 ಕೋಟಿ ರೂ. ಕೊಟ್ಟಿದ್ದಾಗಿ ಹೇಳಿದ್ದಾರೆ. ಆದರೆ ಶುಕ್ರವಾರ ಮೊದಲ ರಾತ್ರಿ ಏರ್ಪಡಿಸಿದ್ದರು. ವಧು ಪತಿಯ ರೂಮಿಗೆ ಹೋಗಿದ್ದಾರೆ. ಆಕೆ ರೂಮಿಗೆ ಬರುತ್ತಿದ್ದಂತೆ ಆರೋಪಿ ಏಕಾಏಕಿ ಮುಖಕ್ಕೆ ಹೊಡೆಯಲು ಆರಂಭಿಸಿದ್ದಾನೆ. ನಂತರ ಚಾಕುವಿನಿಂದ ಇರಿದು, ಅಂಗಾಂಗಗಳನ್ನ ಕಚ್ಚಿದ್ದಲ್ಲದೆ ಸೂಕ್ಷ್ಮ ಭಾಗಗಳಿಗೆ ಗುದ್ದಿ ಗಾಯಗೊಳಿಸಿದ್ದಾನೆಂದು ವಧು ಹೇಳಿದ್ದಾರೆ. ಪ್ರಾಣಾಪಾಯದ ಭಯದಿಂದ ವಧು ಕೂಡಲೇ ರೂಮಿನಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ.

    ನನ್ನ ಮಗಳು ಹೇಗೋ ಅವನಿಂದ ತಪ್ಪಿಸಿಕೊಂಡು ರೂಮಿನಿಂದ ಹೊರಗೆ ಬಂದಳು. ಹೊರ ಬಂದಾಗ ಅವಳು ಗಾಬರಿಯಾಗಿದ್ದಳು. ಮುಖವೆಲ್ಲಾ ಊದಿಕೊಂಡಿತ್ತು. ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆವು ಎಂದು ವಧುವಿನ ತಾಯಿ ತಿಳಿಸಿದ್ದಾರೆ.