Tag: ಹಿಂದೂ

  • ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರಿಗೆ 36 ಜನರ ಲಿಸ್ಟ್‌ ರೆಡಿ – ಪೊಲೀಸರಿಂದ ಕಾನೂನು ಪ್ರಕ್ರಿಯೆ ಶುರು!

    ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರಿಗೆ 36 ಜನರ ಲಿಸ್ಟ್‌ ರೆಡಿ – ಪೊಲೀಸರಿಂದ ಕಾನೂನು ಪ್ರಕ್ರಿಯೆ ಶುರು!

    ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಹಿಂದೂ ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಸೇರಿದಂತೆ ಒಟ್ಟು 36 ಜನರ ಗಡಿಪಾರಿಗೆ ಪೊಲೀಸ್‌ ಇಲಾಖೆ ಕಾನೂನು ಪ್ರಕ್ರಿಯೆ ಶುರು ಮಾಡಿದೆ.

    ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ವಿಟ್ಲ, ಸುಳ್ಯ, ಬೆಳ್ಳಾರೆ, ಬೆಳ್ತಂಗಡಿ, ಪುಂಜಾಲಕಟ್ಟೆ, ಕಡಬ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿನ 15 ಜನ ಮುಸ್ಲಿಮರು ಸೇರಿದಂತೆ ಒಟ್ಟು 36 ಜನರನ್ನ ಗಡಿಪಾರು ಮಾಡಲು ಪೊಲೀಸ್‌ ಇಲಾಖೆ ಮುಂದಾಗಿದೆ. ಭರತ್ ಕುಮ್ಡೇಲು, ಮಹೇಶ್ ಶೆಟ್ಟಿ ತಿಮರೋಡಿ ಕೂಡ ಗಡಿಪಾರು ಲಿಸ್ಟ್‌ನಲ್ಲಿದ್ದಾರೆ. ಇದನ್ನೂ ಓದಿ: ರಾಕೇಶ್‌ ಪೂಜಾರಿ ನಿವಾಸಕ್ಕೆ ರಿಷಬ್‌ ಶೆಟ್ಟಿ ದಂಪತಿ ಭೇಟಿ – ತಾಯಿ, ತಂಗಿಗೆ ಸಾಂತ್ವನ ಹೇಳಿದ ನಟ

    ಸಾಲು ಸಾಲು ಹತ್ಯೆಗಳಿಂದ ಪ್ರಕ್ಷುಬ್ಧಗೊಂಡಿದ್ದ ದಕ್ಷಿಣ ಕನ್ನಡದಲ್ಲೀಗ.. ಆಪರೇಷನ್ ಶಾಂತಿ ಶುರುವಾಗಿದೆ. ಮಂಗಳೂರಿನಲ್ಲಿ ಕಳೆದ ವಾರ ಮುಸ್ಲಿಂ ಯುವಕ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ದಕ್ಷಿಣ ಕನ್ನಡ ಸ್ವಲ್ಪಮಟ್ಟಿಗೆ ಉದ್ವಿಗ್ನಗೊಂಡಿತ್ತು. ಬೆನ್ನಲ್ಲೇ ಮಂಗಳೂರು ಕಮಿಷನರ್, ದಕ್ಷಿಣ ಕನ್ನಡ ಎಸ್‌ಪಿಯನ್ನು ಸರ್ಕಾರ ಬದಲಿಸಿತ್ತು. ಇದೀಗ ಆರೋಪಿಗಳಿಗೆ ಸಹಕರಿಸುವ, ಆಶ್ರಯ ನೀಡುವ ಎಲ್ಲರನ್ನೂ ನಾವು ಆರೋಪಿಗಳೇ ಎಂದು ಪರಿಗಣಿಸುತ್ತೇವೆ ಅಂತ ಇಬ್ಬರೂ ಎಚ್ಚರಿಕೆ ಕೊಟ್ಟಿದ್ದರು. ಇದನ್ನೂ ಓದಿ:  ಕಲ್ಲಡ್ಕ ಪ್ರಭಾಕರ್ ಭಟ್ ಸೇರಿ 15 ಜನರ ವಿರುದ್ಧ ಎಫ್‌ಐಆರ್; ಕೇಸ್ ವಾಪಸ್ ಪಡೆಯಲು ಬಿಜೆಪಿ ಒತ್ತಾಯ

    ಬೆನ್ನಲ್ಲೇ ಶಾಂತಿ ಕದಡುವವರ ವಿರುದ್ಧ ಎಫ್‌ಐಆರ್‌ಗಳು ದಾಖಲಾಗ್ತಿವೆ. ಆದರೆ, ಕಾಂಗ್ರೆಸ್ ಸರ್ಕಾರ ಬಿಜೆಪಿ ಶಾಸಕರು, ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡ್ತಿದೆ ಅನ್ನೋ ಆರೋಪ ಜೋರಾಗಿದೆ. ದಕ್ಷಿಣ ಕನ್ನಡ, ತುಮಕೂರು ಹಾಗೂ ಹುಬ್ಬಳ್ಳಿಯಲ್ಲಿ ಸರ್ಕಾರ ನಡೆ ದ್ವೇಷ ರಾಜಕೀಯ ಅಂತ ಬಿಜೆಪಿ ಕೆಂಡಕಾರಿದೆ. ಇದನ್ನೂ ಓದಿ: ಶಾಲೆಗಳ ಸಹಯೋಗದಲ್ಲಿ ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್‌ಗಳ ರಚನೆ: ಡಿ.ಕೆ ಶಿವಕುಮಾರ್

  • ಜೈಲಿನಲ್ಲಿ ನಿತ್ಯ ಒಂದೊಂದು ಸೌಲಭ್ಯ ನೀಡುವಂತೆ ಹರ್ಷ ಕೊಲೆ ಆರೋಪಿಗಳು ಕಿರಿಕ್‌

    ಜೈಲಿನಲ್ಲಿ ನಿತ್ಯ ಒಂದೊಂದು ಸೌಲಭ್ಯ ನೀಡುವಂತೆ ಹರ್ಷ ಕೊಲೆ ಆರೋಪಿಗಳು ಕಿರಿಕ್‌

    – ಬಳ್ಳಾರಿ ಜೈಲಿನಲ್ಲಿರುವ ಜಿಲಾನ್, ಸೈಯ್ಯದ್ ನಿಹಾಲ್

    ಬಳ್ಳಾರಿ: ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ (Harsha Muder Case)  ಆರೋಪಿಗಳು ಬಳ್ಳಾರಿ ಜೈಲಿನಲ್ಲಿ (Ballari Jail) ರಂಪಾಟ ಮಾಡುತ್ತಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯ್ಯದ್ ನಿಹಾಲ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಈ ಇಬ್ಬರೂ ಜೈಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ನಿತ್ಯ ಜಗಳ ಮಾಡಿ ಅವಾಜ್ ಹಾಕಿ, ಕಿರಿಕ್ ಮಾಡುತ್ತಿದ್ದಾರೆ. ಕಿರಿಕ್‌ ಮಾಡುತ್ತಿರುವ ವಿಡಿಯೋ ಈಗ ಲಭ್ಯವಾಗಿದೆ.

    ನಿತ್ಯ ಒಂದೊಂದು ಸೌಲಭ್ಯ ಕೇಳಿ ಜೈಲು ಸಿಬ್ಬಂದಿಗೆ ಧಮ್ಕಿ ಹಾಕುತ್ತಿದ್ದಾರೆ. ಜೈಲಿನಲ್ಲಿ ನಡೆದ ಹಳೆ ಘಟನೆಗಳ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳುತ್ತಿದ್ದಾರೆ. ನಮ್ಮನ್ನು ಸಾಮಾನ್ಯ ಕೈದಿಗಳಂತೆ ಟ್ರೀಟ್ ಮಾಡಿ ಪ್ರತ್ಯೇಕ ಕೊಠಡಿ ಕೊಡಿ, ವಿಶೇಷ ಸೌಲಭ್ಯ ನೀಡಿ ಎಂದು ಇಬ್ಬರು ಗಲಾಟೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಯೋಧರಿಂದಲೇ `ಆಪರೇಷನ್ ಸಿಂಧೂರ’ ಲೋಗೋ ವಿನ್ಯಾಸ

    ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ

    ಜೈಲಿನಲ್ಲಿ ಬೇರೇ ಬೇರೆ ಕೋಣೆಗೆ ಅಥವಾ ಜೈಲರ್ ಕೊಠಡಿಗೆ ಹೋಗುವಾಗ ಕಡ್ಡಾಯವಾಗಿ ಚೆಕಪ್ ಮಾಡಲಾಗುತ್ತದೆ. ಆದರೆ ನಮ್ಮನ್ನು ನೀವು ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಸಣ್ಣ ಪುಟ್ಟ ವಿಚಾರಕ್ಕೂ ಜೈಲು ಸಿಬ್ಬಂದಿಯನ್ನು ಆರೋಪಿಗಳು ನಿಂದಿಸುತ್ತಿದ್ದಾರೆ. ಇದನ್ನೂ ಓದಿ: ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

    ಆರೋಪಿಗಳು ಇದೇ ರೀತಿ ಕಿರಿಕ್ ಮಾಡಿ ಬೆಂಗಳೂರು, ಗುಲ್ಬರ್ಗ, ಧಾರವಾಡ ಜೈಲಿಗೆ ಹೋಗಿದ್ದರು. ಈಗ ಅದೇ ಚಾಳಿಯನ್ನು ಬಳ್ಳಾರಿ ಜೈಲಿನಲ್ಲೂ ಮುಂದುವರಿಸುತ್ತಿದ್ದಾರೆ.

  • ಅಬ್ದುಲ್‌ ರಹೀಂ ಹತ್ಯೆ| ರಾತ್ರಿ ಆಸ್ಪತ್ರೆ ಮುಂದೆ ಮುಸ್ಲಿಮರ ಪ್ರತಿಭಟನೆ – ಮಂಗಳೂರಿಗೆ ಹೆಚ್ಚುವರಿ ಪೊಲೀಸರ ನಿಯೋಜನೆ

    ಅಬ್ದುಲ್‌ ರಹೀಂ ಹತ್ಯೆ| ರಾತ್ರಿ ಆಸ್ಪತ್ರೆ ಮುಂದೆ ಮುಸ್ಲಿಮರ ಪ್ರತಿಭಟನೆ – ಮಂಗಳೂರಿಗೆ ಹೆಚ್ಚುವರಿ ಪೊಲೀಸರ ನಿಯೋಜನೆ

    – ಸುಹಾಸ್‌ ಶೆಟ್ಟಿ ಹತ್ಯೆಯ ಬಳಿಕ ಮತ್ತೊಂದು ಕೊಲೆ
    – ಮೇ 30ರವರೆಗೆ ನಿಷೇಧಾಜ್ಞೆ ಜಾರಿ

    ಮಂಗಳೂರು: ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಬಂಟ್ವಾಳ ಸಮೀಪ ಮುಸ್ಲಿಂ (Muslim) ಯುವಕನನ್ನು  ಬರ್ಬರವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ (Murder) ಮಾಡಲಾಗಿದೆ. ಆರೋಪಿಗಳನ್ನು ಬಂಧಿಸುವಂತೆ ಮುಸ್ಲಿಮರು ಒತ್ತಾಯಿಸಿ ರಾತ್ರಿಯೇ ಪ್ರತಿಭಟನೆ ನಡೆಸಿದ್ದಾರೆ.  ಇಂದಿನಿಂದ ಮೇ 30ರ ಸಂಜೆ 6ಗಂಟೆವರೆಗೂ ಮಂಗಳೂರು ಕಮೀಷನರೇಟ್ ಹಾಗು ಮಂಗಳೂರು (Mangaluru) ಪೊಲೀಸ್‌ ವ್ಯಾಪ್ತಿಯಡಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ್ದು ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.

    ಕೊಲೆಯಾಗಿದ್ದು ಹೇಗೆ?
    ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ತಿಂಗಳು ಕಳೆಯುವ ಮೊದಲೇ ಮುಸ್ಲಿಂ ಯುವಕನ ಬರ್ಬರ ಹತ್ಯೆ ನಡೆದಿದೆ. ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಬಂಟ್ವಾಳದ ಕೂರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಕೊಳತ್ತಮಜಲ್ ನಿವಾಸಿ ಅಬ್ದುಲ್ ರಹಿಮಾನ್‌ ಯಾನೆ ರಹೀಂ(34) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

    ಪಿಕಪ್ ವಾಹನ ಹೊಂದಿರೋ ಅಬ್ದುಲ್ ರಹೀಂ (Abdul Rahim) ಬಳಿ ಒಂದು ಲೋಡ್‌ ಮರಳು ಬೇಕೆಂದು ದುಷ್ಕರ್ಮಿಗಳು ಕುರಿಯಾಳದ ಇರಾಕೋಡಿಗೆ ಕರೆಸಿಕೊಂಡಿದ್ದಾರೆ. ಮರಳು ಇಳಿಸಿದ ಕೆಲವೇ ಕ್ಷಣದಲ್ಲಿ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಬಂಧನ – ಜಾಮೀನು

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಬ್ದುಲ್ ರಹೀಂ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆ ಮೃತಪಟ್ಟಿದ್ದಾರೆ. ರಹೀಂ ಜೊತೆಗಿದ್ದ ಕಲಂಧರ್ ಶಾಫಿ ಎಂಬವರಿಗೂ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.

    ರಾತ್ರಿ ಪ್ರತಿಭಟನೆ:
    ರಹೀಂ ಹತ್ಯೆ ಸುದ್ದಿ ಹಬ್ಬುತ್ತಿದ್ದಂತೆ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದರು. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದಲೇ ಇದೀಗ ಅಮಾಯಕ ಮುಸ್ಲಿಂ ಯುವಕನ ಹತ್ಯೆಯಾಗಿದೆ ಎಂದು ಸೇರಿದ ಜನ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿ ಪೊಲೀಸರ ವಿರುದ್ಧ ಸಿಟ್ಟು ಹೊರಹಾಕಿದರು.

    ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಪಿಕಪ್ ವಾಹನದಲ್ಲಿ ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದು ಸ್ಥಳೀಯ ಮಸೀದಿಯ ಕಾರ್ಯದರ್ಶಿಯಾಗಿದ್ದರು. ಮದುವೆಯಾಗಿ ಎರಡು ಮಕ್ಕಳು ಇರೋ ರಹೀಂ ಯಾವುದೇ ಕೃತ್ಯಗಳಲ್ಲೂ ಭಾಗಿಯಾಗಿಲ್ಲ, ಯಾವುದೇ ಸಂಘಟನೆಗಳಲ್ಲೂ ಗುರುತಿಸಿಕೊಂಡಿಲ್ಲ.ಅಮಾಯಕನಾಗಿರೋ ವ್ಯಕ್ತಿಯನ್ನ ಹತ್ಯೆ ಮಾಡಲಾಗಿದೆ, ಈ ಹತ್ಯೆ ಹಿಂದೆ ಇರೋ ಎಲ್ಲರನ್ನೂ ತಕ್ಷಣ ಬಂಧಿಸಬೇಕೆಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಆಗ್ರಹಿಸಿದ್ದಾರೆ.

    ಅಬ್ದುಲ್ ರಹಿಮಾನ್ ಹತ್ಯೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಜಿಲ್ಲಾದ್ಯಂತ ಮೇ 30 ರವರೆಗೆ ನಿಷೇಧಾಜ್ಞೆ ಹಾಕಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೊರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ತರಿಸಿಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದು ಭದ್ರತೆ ಪರಿಶೀಲಿಸಲಿದ್ದಾರೆ. ಮೃತ ಅಬ್ದುಲ್ ರಹಿಮಾನ್ ಅಂತ್ಯ ಸಂಸ್ಕಾರ ಇಂದು ಅವರ ಸ್ವಗ್ರಾಮ ಕೊಳ್ತಮಜಲ್ ನಲ್ಲಿ ನಡೆಯಲಿದೆ.

  • ಮಳೆಯಿಂದ ಅಡ್ಡಿ – ಒಂದೇ ವೇದಿಕೆಯಲ್ಲಿ ನೆರವೇರಿತು ಹಿಂದೂ-ಮುಸ್ಲಿಂ ಜೋಡಿಯ ವಿವಾಹ

    ಮಳೆಯಿಂದ ಅಡ್ಡಿ – ಒಂದೇ ವೇದಿಕೆಯಲ್ಲಿ ನೆರವೇರಿತು ಹಿಂದೂ-ಮುಸ್ಲಿಂ ಜೋಡಿಯ ವಿವಾಹ

    ಮದುವೆ ಅಂದ್ರೆ ಕೇವಲ ಎರಡು ಜೀವಗಳು ಒಂದಾಗುವುದಲ್ಲ, ಎರಡು ಕುಟುಂಬ, ಎರಡು ಹೃದಯಗಳು, ಎರಡು ಭಿನ್ನ ಪರಂಪರೆಗಳು ಒಂದಾಗುವ ಕ್ಷಣ. ಇಂತಹ ವಿವಾಹ ಇದೀಗ ಹಿಂದೂ-ಮುಸ್ಲಿಮರ (Hindu Muslims) ಸಾಮರಸ್ಯ ಬೆಸೆಯುವ ವೇದಿಕೆಯಾಗಿ ಗುರುತಿಸಿಕೊಂಡ ಅಪರೂಪದ ಘಟನೆ ಪುಣೆಯಲ್ಲಿ ನಡೆದಿದೆ.

    ಹೌದು. ಭಾರಿ ಮಳೆ ಹಿನ್ನೆಲೆಯಲ್ಲಿ ಮುಸ್ಲಿಂ ಆರತಕ್ಷತೆ ಸಮಾರಂಭದ ವೇದಿಕೆಯಲ್ಲೇ ಹಿಂದೂ (Hindu) ದಂಪತಿಯೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದ್ದು, ಮಾನವೀಯತೆಗೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋ ಏರ್‌ಪೋರ್ಟ್‌ನಲ್ಲಿ ಡ್ರೋನ್‌ ದಾಳಿ!

    ಪುಣೆಯ ಅಲಂಕಾರನ್ ಲಾನ್ಸ್ ಎಂಬ ಬಯಲು ಮೈದಾನದಲ್ಲಿ ಮಂಗಳವಾರ ಸಂಜೆ 6.56ಕ್ಕೆ ನಡೆಯಬೇಕಿದ್ದ ಹಿಂದೂ ಕುಟುಂಬದ ಸಂಕ್ರತಿ ಕವಡೆ ಮತ್ತು ನರೇಂದ್ರ ಗಲಾಂಡೆ ಅವರ ವಿವಾಹ (Hindu Weddin) ಸಂಭ್ರಮಕ್ಕೆ ಎಲ್ಲ ಸಿದ್ಧತೆಗಳು ನಡೆದಿತ್ತು. ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲು ವೇದಿಕೆ ಸಜ್ಜಾಗಿತ್ತು, ಮಂತ್ರಗಳು ಘೋಷಗಳಷ್ಟೆ ಬಾಕಿ ಇತ್ತು. ಮದುವೆಗೆ ಬಂದ ಅತಿಥಿಗಳು ಕೂಡ ಮದುವೆ ಮನೆಯಲ್ಲಿ ಸಂತಸದಿಂದ ಇದ್ದರು.

    ಅಷ್ಟರಲ್ಲಿ ಸಂಭವಿಸಿದ ಭಾರೀ ಮಳೆಯಿಂದ ಬಂಧುಗಳಲ್ಲಿ ಗೊಂದಲ ಸೃಷ್ಟಿಯಾಯಿತು. ಅಲ್ಲದೇ ಮದುವೆ ಸಂಪ್ರದಾಯಗಳಿಗೂ ಮಳೆ ಅಡ್ಡಿಯಾಯ್ತು. ಇದರಿಂದ ಮದುವೆ ನಿಂತೇ ಹೋಯ್ತು ಅನ್ನೋ ಆತಂಕ ಶುರುವಾಗಿತ್ತು. ಆದ್ರೆ ಮುಸ್ಲಿಂ ಕುಟುಂಬವೊಂದರ ನೆರವಿನಿಂದ ಹಿಂದೂ ವಧು-ವರ ದಾಂಪತ್ಯ ಜೀವನಕ್ಕೆ ಕಾಲಿಡುವಂತಾಯಿತು. ಇದನ್ನೂ ಓದಿ: ಸಂತ್ರಸ್ತೆ ಜೊತೆ ವಿವಾಹ; ಪೋಕ್ಸೊ ಕೇಸ್‌ ಅಪರಾಧಿಯನ್ನು ಜೈಲು ಶಿಕ್ಷೆಯಿಂದ ಪಾರು ಮಾಡಿದ ಸುಪ್ರೀಂ

    ಮಳೆ ಶುರುವಾದ ತಕ್ಷಣ ಅಲಂಕಾರನ್ ಲಾನ್ಸ್ ಎಂಬ ಬಯಲು ಮೈದಾನದ ಸಮೀಪದಲ್ಲಿದ್ದ ಸಭಾಂಗಣವೊಂದರಲ್ಲಿ ಮುಸ್ಲಿಂ ಕುಟುಂಬದ ಮಾಹೀನ್ ಮತ್ತು ಮೊಹ್ಸಿನ್ ಕಾಜಿ ಅವರ ವಿವಾಹ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಗಲಾಂಡೆ ಪಾಟೀಲ್ ಕುಟುಂಬದ ಸದಸ್ಯರೊಬ್ಬರು ಸಪ್ತಪದಿ ಆಚರಣೆ ಪೂರ್ಣಗೊಳಿಸಲು ಸ್ವಲ್ಪ ಸಮಯದವರೆಗೆ ಸಭಾಂಗಣ ಬಳಸಲು ಅವಕಾಶ ಕೊಡುವಂತೆ ಕೇಳಿಕೊಂಡರು. ಇದಕ್ಕೆ ಮುಸ್ಲಿಂ ಕುಟುಂಬಸ್ಥರೂ ಒಪ್ಪಿ ಮದುವೆ ಆಚರಣೆಗೆ ಅವಕಾಶ ಮಾಡಿಕೊಟ್ಟರು.

    ಬಳಿಕ ಪರಸ್ಪರ ಸಂಪ್ರದಾಯ ಮತ್ತು ಪೂರ್ಣ ಗೌರವದ ಆಚರಣೆಗಳೊಂದಿಗೆ ಹಿಂದೂ – ಮುಸ್ಲಿಂ ಜೋಡಿಯ ವಿವಾಹ ನೆರವೇರಿತು. ಬಳಿಕ ಎರಡೂ ಸಮುದಾಯದ ಜನರು ಜಂಟಿಯಾಗಿ ಔತಣ ಕೂಟ ನಡೆಸಿದರು. ಇದನ್ನೂ ಓದಿ: Delhi Election| ಆಪ್‌ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್‌ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ

  • ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ ಮಾಡಿದ್ದ ಆರೋಪಿಗಳು!

    ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ ಮಾಡಿದ್ದ ಆರೋಪಿಗಳು!

    ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆಗೂ ಮುನ್ನ ಆರೋಪಿಗಳು ಭರ್ಜರಿ ಪಾರ್ಟಿ ಮಾಡಿದ್ದ ಫೋಟೋ ಈಗ ಲಭ್ಯವಾಗಿದೆ.

    ಚಿಕ್ಕಮಗಳೂರಿನ (Chikkamagaluru) ಕಳಸದ ರೆಸಾರ್ಟ್ (Kalasa Resort) ಒಂದರಲ್ಲಿ ಏ.2 ರಂದು ಆರೋಪಿಗಳು ನೈಟ್‌ ಪಾರ್ಟಿ ಮಾಡಿದ್ದಾರೆ. ಹತ್ಯೆಗೆ ಸ್ಕೆಚ್ ರೂಪಿಸಲೆಂದೇ ಪಾರ್ಟಿ ಮಾಡಿರುವ ಅನುಮಾನ ವ್ಯಕ್ತವಾಗಿದೆ.

    ಕ್ಯಾಂಪ್ ಫೈರ್ ಹಾಕಿ ಸುಹಾಸ್‌ ಶೆಟ್ಟಿ ಹತ್ಯೆಯ ಆರೋಪಿಗಳಾದ ಮುಝಮ್ಮಿಲ್, ನಿಯಾಜ್ ಹಾಗೂ ಚಿಕ್ಕಮಗಳೂರು ಮೂಲದ ರಂಜಿತ್ ಪಾರ್ಟಿ ಮಾಡಿದ್ದಾರೆ. ಈ ಮೂವರ ಜೊತೆ ಇನ್ನೂ ಐದು ಜನ ಅಪರಿಚಿತರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ 50 ಲಕ್ಷ ಫಂಡಿಂಗ್‌ – ಪ್ರಭಾವಿ ಮುಸ್ಲಿಮರ ಬ್ಯಾಂಕ್ ಖಾತೆ ಮೇಲೆ ಕಣ್ಣು!

    ಈ ಪಾರ್ಟಿಯಲ್ಲಿ ರಂಜಿತ್‌ನನ್ನು ಮುಝಮ್ಮಿಲ್‌ಗೆ ನಿಯಾಜ್‌ ಪರಿಚಯ ಮಾಡಿಕೊಟ್ಟಿದ್ದ. ಈ ಪಾರ್ಟಿಯಲ್ಲೇ ಸುಹಾಸ್ ಹತ್ಯೆ ಬಗ್ಗೆ ಮಾತುಕತೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಸುಹಾಸ್ ಶೆಟ್ಟಿ ಹತ್ಯೆಗೆ ಫಾಝಿಲ್‌ ಸಹೋದರ ಆದಿಲ್‌ (Adil) 5 ಲಕ್ಷ ರೂ. ಸುಪಾರಿ ನೀಡಿದ್ದ. ಈ ಹಣದ ಪೈಕಿ 3 ಲಕ್ಷ ರೂ.ಹಣವನ್ನು ಮುಂಗಡವಾಗಿ ಪಾವತಿಸಲಾಗಿತ್ತು. ಈ ಹಣದಲ್ಲೇ ಪಾರ್ಟಿ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್

    ಮಂಗಳೂರಿನ ಮೊಹಮ್ಮದ್ ಮುಝಮ್ಮಿಲ್‌ 4 ತಿಂಗಳ ಹಿಂದೆ ಸೌದಿ ಅರೇಬಿಯಾದಿಂದ ಬಂದಿದ್ದು ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಮೇಸ್ತ್ರಿ ಕೆಲಸ ಮಾಡುತ್ತಿರುವ ನಿಯಾಜ್ ಬಜ್ಪೆ ಶಾಂತಿಗುಡ್ಡೆ ಮಸೀದಿ ಬಳಿ ನೆಲೆಸಿದ್ದ. ಕಳಸ ತಾಲೂಕಿನ ರುದ್ರ ಪಾದದ ರಂಜಿತ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಸುಹಾಸ್ ಮೇಲೆ ದಾಳಿ ಮಾಡಲು ಈತನೇ ಲಾಂಗ್ ತಂದುಕೊಟ್ಟ ಆರೋಪವಿದೆ.

  • ಸುಹಾಸ್ ಶೆಟ್ಟಿ ಹತ್ಯೆಗೆ 50 ಲಕ್ಷ ಫಂಡಿಂಗ್‌ – ಪ್ರಭಾವಿ ಮುಸ್ಲಿಮರ ಬ್ಯಾಂಕ್ ಖಾತೆ ಮೇಲೆ ಕಣ್ಣು!

    ಸುಹಾಸ್ ಶೆಟ್ಟಿ ಹತ್ಯೆಗೆ 50 ಲಕ್ಷ ಫಂಡಿಂಗ್‌ – ಪ್ರಭಾವಿ ಮುಸ್ಲಿಮರ ಬ್ಯಾಂಕ್ ಖಾತೆ ಮೇಲೆ ಕಣ್ಣು!

    – ವಿದೇಶದಿಂದಲೂ ಭಾರೀ ಪ್ರಮಾಣದಲ್ಲಿ ಖಾತೆಗೆ ಹಣ
    – ಬ್ಯಾಂಕ್‌ ಖಾತೆ ಪರಿಶೀಲನೆಗೆ ಮುಂದಾದ ಪೊಲೀಸರು

    ಮಂಗಳೂರು: ಹಿಂದೂ (Hindu) ಕಾರ್ಯಕರ್ತ ಸುಹಾಸ್ ಶೆಟ್ಟಿಯ (Suhas Shetty) ಹತ್ಯೆ ಪ್ರತೀಕಾರಕ್ಕೆ ನಡೆದರೂ ಈ ಹತ್ಯೆಯ ಹಿಂದೆ ಲಕ್ಷಾಂತರ ರೂ. ಹಣ ಹರಿದಾಡಿದೆ. ಕೇವಲ ಐದು ಲಕ್ಷಕ್ಕಾಗಿ ಮಾತ್ರ ಈ ಹತ್ಯೆ ನಡೆದಿಲ್ಲ ಎನ್ನುವ ಸ್ಪೋಟಕ ಮಾಹಿತಿ ತನಿಖೆ ವೇಳೆ ಪ್ರಕಟವಾಗಿದೆ.

    ಹೌದು. ಫಾಝಿಲ್ ಹತ್ಯೆಯನ್ನು (Fazil Murder) ಅರಗಿಸಿಕೊಳ್ಳಲಾಗದ ಪ್ರಭಾವಿ ಮುಸ್ಲಿಮರು (Muslims) ಫಾಝಿಲ್ ಸಹೋದರನ ಕೈ ಬಲಪಡಿಸಿದ್ದಾರೆ. ಲಕ್ಷಾಂತರ ರೂಪಾಯಿ ಫಂಡಿಂಗ್ ಆಗಿರುವ ಬಗ್ಗೆ ಮಾಹಿತಿ ಸಿಕ್ಕ ಪೊಲೀಸರು ಇದೀಗ ಹಲವು‌ ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಫಾಝಿಲ್ ತಮ್ಮ ಆದಿಲ್ ಮೆಹರೂಫ್ ನೀಡಿದ ಸುಪಾರಿಯಂತೆ ಈ ಹತ್ಯೆಯನ್ನು ಹಂತಕರು ನಡೆಸಿದ್ದಾರೆ. ಆದಿಲ್ 5 ಲಕ್ಷ ರೂ. ನೀಡುವುದಾಗಿ ಸುಪಾರಿ ನೀಡಿ ಅದರಲ್ಲಿ 3 ಲಕ್ಷ ರೂ. ಮುಂಗಡ ಪಾವತಿಸಿದ್ದ. ಇನ್ನುಳಿದ 2 ಲಕ್ಷ ರೂ. ಕೆಲಸ ಮುಗಿಸಿದ ಮೇಲೆ ನೀಡುವುದಾಗಿ ಹೇಳಿದ್ದ ಎಂದು ಬಂಧನದ ಬಳಿಕ ಆರೋಪಿಗಳು ಬಾಯ್ಬಿಟ್ಟಿದ್ದರು. ಇದನ್ನೂ ಓದಿ: ಕೋಮುದ್ವೇಷ ಭಾಷಣ ಆರೋಪ – ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

     

    ಪ್ರತೀಕಾರಕ್ಕೆ ಪಣ
    ಫಾಝಿಲ್ ಹತ್ಯೆಯನ್ನು ಅರಗಿಸಿಕೊಳ್ಳಲಾಗದ ಪ್ರಭಾವಿ ಮುಸ್ಲಿಮರು ಪ್ರತೀಕಾರಕ್ಕಾಗಿ ಪಣ ತೊಟ್ಟಿದ್ದರು. ಪ್ರತೀಕಾರ ತೀರಿಸುವ ಯಾರಿಗಾದರೂ ಎಷ್ಟೇ ಹಣ ನೀಡಬೇಕಾದರೂ ನೀಡಲು ಸಿದ್ದರಿದ್ದರು. ಹತ್ಯೆ ನಡೆಸುವವರಿಗೆ ಫಂಡಿಂಗ್ ಮಾಡಲು ಸಾಕಷ್ಟು ಜನ ಮುಂದೆ ಬಂದಿದ್ದರು. ಸುಹಾಸ್ ಹತ್ಯೆಯ ಪ್ಲಾನ್ ನಡೆಸುವ ವೇಳೆಯೇ 50 ಲಕ್ಷ ರೂ. ಹೆಚ್ಚು ಹಣ ಸಂಗ್ರಹವಾಗಿದೆ ಎಂಬ ಸ್ಫೋಟಕ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸ್ಕೆಚ್

    ಎಲ್ಲಾ ಆರೋಪಿಗಳನ್ನು 14 ದಿನ ಪೊಲೀಸ್ ಕಸ್ಟಡಿಗೆ ಪಡೆದಿರುವ ತನಿಖಾಧಿಕಾರಿಗೆ ಲಕ್ಷ ಲಕ್ಷ ಫಂಡಿಂಗ್ ಆಗಿರುವ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ಹೀಗಾಗಿ ವಿವಿಧ ಬ್ಯಾಂಕ್ ಖಾತೆಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು ವಿದೇಶದಿಂದಲೂ ಭಾರೀ ಪ್ರಮಾಣದಲ್ಲಿ ಫಂಡಿಂಗ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ.

    ಸುಹಾಸ್ ಶೆಟ್ಟಿ ಹತ್ಯೆಯ ಆರೋಪಿಗಳ ಬಂಧನದ ಬಳಿಕ ಕೇವಲ ಲಕ್ಷ ಸುಪಾರಿ‌ ನೀಡಲಾಗಿತ್ತು ಎನ್ನುವುದು ಗೊತ್ತಾದಾಗಲೇ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಬೊಲೆರೋ ಪಿಕಪ್ ಮತ್ತು ಸ್ವಿಫ್ಟ್ ಕಾರಿನ ಮೌಲ್ಯ ಎರಡು ಸೇರಿದರೆ 10 ಲಕ್ಷರೂ. ಅಧಿಕ ಆಗುತ್ತದೆ. ಕೇವಲ 5 ಲಕ್ಷ ರೂ.ಗೆ ಈ ಹತ್ಯೆ‌ ನಡೆದಿರುವ‌ ಸಾಧ್ಯತೆ ಇಲ್ಲ ಎಂದು ಜನ ಅನುಮಾನ ವ್ಯಕ್ತಪಡಿಸಿದ್ದರು. ಈ ಅನುಮಾನ ನಿಜವಾಗಿದ್ದು ತನಿಖೆಯ ವೇಳೆ ಲಕ್ಷ ಲಕ್ಷ ಫಂಡಿಂಗ್ ಆಗಿರುವುದು ಬೆಳಕಿಗೆ ಬಂದಿದೆ.

  • ಮಥುರಾದಲ್ಲಿ ಮುಸ್ಲಿಂ ಕುಟುಂಬದ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರ

    ಮಥುರಾದಲ್ಲಿ ಮುಸ್ಲಿಂ ಕುಟುಂಬದ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರ

    ಲಕ್ನೋ: ಮಥುರಾದ (Mathura) ಜಮುನಾಪರ್ ಪ್ರದೇಶದ ಮುಸ್ಲಿಂ ಕುಟುಂಬದ (Muslim Family) ಎಂಟು ಸದಸ್ಯರು ವೃಂದಾವನದ ಆಶ್ರಮದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಹಿಂದೂ ಧರ್ಮಕ್ಕೆ (Hinduism) ಮತಾಂತರ ಆಗಿದ್ದಾರೆ.

    ಮುಸ್ಲಿಂ ಕುಟುಂಬ ಸದಸ್ಯರು ಕೇಸರಿ ಬಣ್ಣದ ವಸ್ತ್ರಗಳನ್ನು ಧರಿಸಿದ್ದರು. ಪುರೋಹಿತರ ಸಮ್ಮುಖದಲ್ಲಿ ಕುಟುಂಬವು ಒಂದು ಗಂಟೆಗೂ ಹೆಚ್ಚು ಕಾಲ ಹವನ-ಯಜ್ಞ ಆಚರಣೆಯನ್ನು ಮಾಡಿತು. ಇದನ್ನೂ ಓದಿ: ಚಾರ್‌ಧಾಮ್ ಯಾತ್ರೆಗೆ ಚಾಲನೆ – ಶಾಸ್ತ್ರೋಕ್ತವಾಗಿ ಕೇದಾರನಾಥ ಧಾಮದ ಬಾಗಿಲು ಓಪನ್

    ಕುಟುಂಬದ ಯಜಮಾನ ಜಾಕೀರ್‌ ಎಂಬಾತ ಜಗದೀಶ್‌ ಎಂದು ಹೆಸರು ಬದಲಾಯಿಸಿಕೊಂಡರು. ‘ತಮ್ಮ ಮೂಲ ಗುರುತು ಹಿಂದೂ ಎಂಬ ನಂಬಿಕೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಪೂರ್ವಜರು ಮೊಘಲರ ಯುಗದವರೆಗೂ ಹಿಂದೂಗಳಾಗಿದ್ದರು. ಬಳಿಕ ಒತ್ತಡದಿಂದಾಗಿ ಇಸ್ಲಾಂಗೆ ಮತಾಂತರಗೊಂಡರು. ನಾನು ಕಾಳಿ ದೇವಿಯನ್ನು ಪೂಜಿಸುತ್ತೇನೆ ಎಂದು ತಿಳಿಸಿದ್ದಾರೆ.

    ಹಿಂದೂ ಧರ್ಮಕ್ಕೆ ಮರಳುವ ಆಲೋಚನೆ ಕಳೆದ ಮೂರು ವರ್ಷಗಳಿಂದ ಕುಟುಂಬದ ಮನಸ್ಸಿನಲ್ಲಿತ್ತು. ‘ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನಮಗೆ ಯಾರೂ ಒತ್ತಡ ಹಾಕಿಲ್ಲ. ಯಾರ ಪ್ರಚೋದನೆಯೂ ಇಲ್ಲ. ಹಿಂದೂ ಧರ್ಮದ ನಂಬಿಕೆಯೊಂದಿಗೆ ಈ ಹೆಜ್ಜೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೋನಿಯಾ, ರಾಹುಲ್‌ ಗಾಂಧಿಗೆ ದೆಹಲಿ ಕೋರ್ಟ್‌ ನೋಟಿಸ್‌

    ವೃಂದಾವನದ ಶ್ರೀ ಜಿ ವಾಟಿಕಾ ಕಾಲೋನಿಯಲ್ಲಿರುವ ಭಾಗವತ್ ಧಾಮ ಆಶ್ರಮದಲ್ಲಿ ಮತಾಂತರ ನಡೆಯಿತು. ಬಲಪಂಥೀಯ ಹಿಂದೂ ಸಂಘಟನೆಯಾದ ಹಿಂದೂ ಯುವ ವಾಹಿನಿ ಇದಕ್ಕೆ ನೆರವು ನೀಡಿತು. ಜಗದೀಶ್ ಜೊತೆಗೆ, ಅವರ ಪತ್ನಿ, ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಎಲ್ಲರೂ ಸಮಾರಂಭದಲ್ಲಿ ಭಾಗವಹಿಸಿದ್ದರು.

  • ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ

    ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ

    – ಫಾಜಿಲ್ ಹತ್ಯೆಯ ಆರೋಪಿ ಸುಹಾಸ್ ಶೆಟ್ಟಿ ಕೊಲೆ

    ಮಂಗಳೂರು: ಬಜಪೆಯ ಕಿನ್ನಿಪದವು ಬಳಿ ಹಿಂದೂ (Hindu) ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ.

    ಸುಹಾಸ್ ಶೆಟ್ಟಿ ಕೊಲೆಯಾದ ಕಾರ್ಯಕರ್ತ. ಸುರತ್ಕಲ್‌ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ರಾತ್ರಿ ಹೊಂಚು ಹಾಕಿ ಸುಮಾರು 10 ಮಂದಿ ಸೇರಿ ತಲವಾರಿನಿಂದ ಹತ್ಯೆ ಮಾಡಿದ್ದಾರೆ.  ಇದನ್ನೂ ಓದಿ: ಕಾರಿಗೆ ಮೀನಿನ ಟೆಂಪೋ ಗುದ್ದಿಸಿ ಸಾರ್ವಜನಿಕವಾಗಿ ಸುಹಾಸ್ ಶೆಟ್ಟಿ ಹತ್ಯೆ 

    ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ 2022ರ ಜುಲೈ 28ರಂದು ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ನಡೆದಿತ್ತು. ಈ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಮತ್ತು ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ:ಪ್ರೇಮ ವಿವಾಹವಾದ ಹಿಂದೂ, ಮುಸ್ಲಿಮ್‌ ಜೋಡಿ – ಈಗ ರಕ್ಷಣೆಗೆ ಪೊಲೀಸರ ಮೊರೆ

    ಸುರತ್ಕಲ್‌ನಲ್ಲಿ ಕೊಲೆಯಾಗಿದ್ದ ಫಾಝಿಲ್

    ಈ ಹಿಂದೆ ಬಜರಂಗದಳದ ಗೋರಕ್ಷಾ ವಿಭಾಗದ ಸದಸ್ಯನಾಗಿದ್ದ ಸುಹಾಸ್‌ ಶೆಟ್ಟಿಗೆ ಜೈಲಿನಿಂದ ಹೊರ ಬಂದ ನಂತರ ಯಾವುದೇ ಜವಾಬ್ದಾರಿ ಇರಲಿಲ್ಲ.

    ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಸುಹಾಸ್‌ ಶೆಟ್ಟಿಯನ್ನು ಸ್ಥಳೀಯರು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸುಹಾಸ್‌ ಶೆಟ್ಟಿ ಮೃತಪಟ್ಟಿದ್ದು ಆಸ್ಪತ್ರೆ ಎದುರು ಭಾರೀ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಸೇರಿದ್ದಾರೆ. ಇದನ್ನೂ ಓದಿ: ರಕ್ಷಣೆಗೆ ಅಮೆರಿಕ, ಚೀನಾಗೆ ಪಾಕ್ ಮೊರೆ – ಪ್ರತೀಕಾರ ಕಟ್ಟಿಟ್ಟಬುತ್ತಿ: ಭಾರತ ಗುಡುಗು

    ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆ ಎದುರು ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಆಸ್ಪತ್ರೆಗೆ  ಮಾಜಿ‌ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಾ.ವೈ. ಭರತ್ ಶೆಟ್ಟಿ ಆಗಮಿಸಿದ್ದಾರೆ.

    ಹಲವು ಕೊಲೆ ಯತ್ನ ಪ್ರಕರಣದ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಫಾಝಿಲ್‌ ಹತ್ಯೆಗೆ ಪ್ರತಿಯಾಗಿ ಈ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು  ಪೊಲೀಸರು ಆರೋಪಿಗಳ ಬಂಧನಕ್ಕೆ ಈಗ ಬಲೆ ಬೀಸಿದ್ದಾರೆ.

  • ಪ್ರೇಮ ವಿವಾಹವಾದ ಹಿಂದೂ, ಮುಸ್ಲಿಮ್‌ ಜೋಡಿ – ಈಗ ರಕ್ಷಣೆಗೆ ಪೊಲೀಸರ ಮೊರೆ

    ಪ್ರೇಮ ವಿವಾಹವಾದ ಹಿಂದೂ, ಮುಸ್ಲಿಮ್‌ ಜೋಡಿ – ಈಗ ರಕ್ಷಣೆಗೆ ಪೊಲೀಸರ ಮೊರೆ

    ಕೊಪ್ಪಳ: ಪ್ರೇಮ ವಿವಾಹದ ಹಿಂದೂ-ಮುಸ್ಲಿಮ್‌ (Hindu-Muslim0 ಜೋಡಿಯೊಂದು ಕೊಪ್ಪಳ (Koppala) ನಗರ ಠಾಣೆಗೆ ಆಗಮಿಸಿ ರಕ್ಷಣೆಗಾಗಿ ಮೊರೆ ಇಟ್ಟಿದೆ.

    ಕೊಪ್ಪಳದ ಭಾಗ್ಯನಗರದ ನಿವಾಸಿಗಳಾದ ಪ್ರಜ್ವಲ್ ಹಾಗೂ ಥೈಶಿನ್ ಕಳೆದ 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಈಗ ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ರಕ್ಷಣೆಗೆ ಅಮೆರಿಕ, ಚೀನಾಗೆ ಪಾಕ್ ಮೊರೆ – ಪ್ರತೀಕಾರ ಕಟ್ಟಿಟ್ಟಬುತ್ತಿ: ಭಾರತ ಗುಡುಗು

     

    ಏಪ್ರಿಲ್ 23 ರಂದು ಪ್ರೇಮಿಗಳು ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯಾದ ಬೆನ್ನಲ್ಲೇ ಯುವತಿಯ ಮನೆಯವರು ಪ್ರೇಮಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಬೆಂದ ಬೆನ್ನಲ್ಲೇ ಜೋಡಿಗಳು ರಕ್ಷಣೆಗೆ ಠಾಣೆಯ ಮೊರೆ ಹೋಗಿದ್ದಾರೆ.  ಇದನ್ನೂ ಓದಿ: ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್‌

  • ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ: ಆರ್‌ಬಿ ತಿಮ್ಮಾಪುರ ಯೂ ಟರ್ನ್

    ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ: ಆರ್‌ಬಿ ತಿಮ್ಮಾಪುರ ಯೂ ಟರ್ನ್

    ಬಾಗಲಕೋಟೆ: ಪಹಲ್ಗಾಮ್ ದಾಳಿಯಲ್ಲಿ ಉಗ್ರರು (Pahalgam Terror Attack) ಹಿಂದೂಗಳನ್ನ ಹುಡುಕಿ ಹುಡುಕಿ ಕೊಂದ್ರು ಎಂಬ ಆರೋಪಕ್ಕೆ ಆಕ್ಷೇಪವೆತ್ತಿದ್ದ ಸಚಿವ ಆರ್‌ಬಿ ತಿಮ್ಮಾಪುರ (RB Timmapur), ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ ಎಂದು ಇದೀಗ ಯೂ ಟರ್ನ್ ಹೊಡೆದಿದ್ದಾರೆ.

    ಬಾಗಲಕೋಟೆ (Bagalkote) ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಖಡಾಖಂಡಿತವಾಗಿ ಹಾಗೆ ಮಾಡಿಲ್ಲ ಎಂದು ಹೇಳಿಲ್ಲ. ನಾನು ನೋಡಿದ ಟಿವಿ ಚಾನೆಲ್‌ಗಳಲ್ಲಿ ಅದು ಬಂದಿರಲಿಲ್ಲ. ಹಾಗಾಗಿ ನಾನು ಸಂಶಯ ವ್ಯಕ್ತಪಡಿಸಿದ್ದೇನೆ ವಿನಃ ಹಿಂದೂಗಳನ್ನು ನೋಡಿ ಮಾಡಿಲ್ಲ ಎಂದು ನಾನು ಹೇಳಿಲ್ಲ. ನಾನು ಭಯೋತ್ಪಾದಕರ ಪರವಾಗಿಯೇ ಮಾತನಾಡಿದ್ದೇನೆ ಎಂಬ ರೀತಿ ಬಿಂಬಿತವಾಗಿದೆ. ನಾನು ಭಯೋತ್ಪಾದನೆಯನ್ನು ಖಂಡನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – ಕೇಂದ್ರದ ನಿರ್ಧಾರಕ್ಕೆ ನಮ್ಮ ಸಹಕಾರವಿದೆ: ದೇವೇಗೌಡ

    ಅಲ್ಲಿನ ಪ್ರವಾಸಿಗರಿಗೆ ರಕ್ಷಣೆ ಕೊಡೋದು ನಮ್ಮ ಧರ್ಮ. ಅದು ಪಾಲನೆಯಾಗಿಲ್ಲ ಎಂಬ ನೋವಿದೆ. ನಾವು ಎಲ್ಲರೂ ದೇಶದ ಪಕ್ಷ, ಪಂಗಡ, ರಾಜಕಾರಣ ತರದೇ ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕೆ ವಿನಃ ಅದರಲ್ಲಿ ಸಣ್ಣಪುಟ್ಟ ವಿಷಯಗಳನ್ನ ತರುವುದು ದೇಶಕ್ಕೆ ಒಳ್ಳೆಯದಲ್ಲ. ಧರ್ಮ ನೋಡಿ ಹೊಡಿದಿಲ್ಲ ಎಂದು ನಾನು ಹೇಳಿಯೇ ಇಲ್ಲ. ನಾನು ಕಾರವಾರದ ಘಟನೆ ಬಗ್ಗೆ ಹೇಳಿದೆ. ಕಾರವಾರದಲ್ಲಿ ಹಿಂದೂ ಕೊಲೆ ಆಯ್ತು ಅಂದ್ರು, ನಂತರ ಸಹಜ ಸಾವು ಅಂತಾ ಬಂತು. ಹಾಗೆಯೇ ಇಂತಹದರಲ್ಲಿ ರಾಜಕಾರಣ ಬೇಡ ಅಂದಿದ್ದೆ. ನಾನು ನೋಡಿದ ಚಾನೆಲ್ ಪ್ರಕಾರ ನನಗೆ ಡೌಟ್ ಇದೆ ಅಂತಾ ಹೇಳಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: Kolar | ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು

    ಪಾಕ್ ಮೇಲೆ ಯುದ್ಧ ಬೇಕೋ ಬೇಡವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ದೇಶದ ಪರಿಸ್ಥಿತಿ ಇದೆ. ನಮ್ಮ ದೇಶದ ಪ್ರಧಾನಿಗಳು ನಿರ್ಧರಿಸಲಿ. ನಾವೆಲ್ಲ ಬದ್ಧತೆ ತೋರಿಸಬೇಕಲ್ಲ. ಯುದ್ಧ ಎಷ್ಟರಮಟ್ಟಿಗೆ ಬೇಕು ಬೇಡಾ ಎಂದು ಯೋಚನೆ ಮಾಡಿ ಅಂತಾ ಹೇಳಿರಬೇಕೆ ವಿನಃ ಯುದ್ಧ ಬೇಡ ಅಂತಾ ಯಾರೂ ಹೇಳಲ್ಲ. ಬೇಹುಗಾರಿಕೆಯನ್ನ ಬಲಪಡಿಸಲಿ. ನಾಗರಿಕರು ಹಾಗೂ ಪ್ರವಾಸಿಗರ ಮೇಲೆ ಈ ರೀತಿ ಆದರೆ ಹೇಗೆ? ಈಗ ಹೋಗಿ ನಾವು ಹೊಡೆದು ಹಾಕಿದ್ದೇವೆ ಅಂದ್ರೆ ಹೇಗೆ?
    ನಾನು ಈ ಹಿಂದೆಯೂ ಹೇಳಿದ್ದೆ, ಪುಲ್ವಾಮಾ ಏನಾಯ್ತು ಅಂತಾ ಹೇಳಿದ್ದೇನೆ. ಈ ದೇಶದ ವಿಚಾರದಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಿದೆ ವಿನಃ ರಾಜಕಾರಣ ಬೇಡ ಎಂದಿದ್ದೇನೆ. ಅದನ್ನ ಬಿಟ್ಟು ಸಣ್ಣಪುಟ್ಟ ವಿಚಾರಗಳನ್ನ ದೇಶಕ್ಕೆ ತೋರಿಸುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್‌ ಸಭೆ

    ಸಿಎಂ (CM Siddaramaiah) ಎಎಸ್‌ಪಿ ಮೇಲೆ ಕೈ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಏಯ್ ನೀನ್ಯಾಕೆ ಹೀಗೆ ಮಾಡಿದೆ ಅಂದಿರಬೇಕು. ಅವರ ಮೇಲೆ ಕೈ ಮಾಡಿದ್ದು ಅಂತಾ ಯಾಕೆ ಹೇಳ್ತೀರಿ? ನೀವು ಕೈ ಮಾಡಿದ್ದಾರೆ ಅಂತಾ ಯಾಕೆ ಅಂದುಕೊಳ್ಳುತ್ತೀರಿ? ಹಿಂದೆ ಯಡಿಯೂರಪ್ಪನವರು ಐಎಎಸ್ ಅಧಿಕಾರಿಗಳ ಮೇಲೆ ಕೈ ಮಾಡಿದ್ದೂ ಗೊತ್ತಿದೆ. ಎಮೋಷನ್‌ನಲ್ಲಿ ಮಾಡಿದ್ದರೂ ಮಾಡಿರಬಹುದು. ಹಿಂದೆ ಯಡಿಯೂರಪ್ಪನವರು ಈ ರೀತಿ ಮಾಡಿಲ್ಲ ಎಂದು ವಿಜಯೇಂದ್ರ ಅವರು ಹೇಳಲಿ ನೋಡೋಣ ಎಂದರು. ಇದನ್ನೂ ಓದಿ: ಮಗುವಿನ ಕಾಲಿಗೆ ಪೆಟ್ಟು – ಮಗುಗೆ ಏನಾಗುತ್ತೋ ಅನ್ನೋ ಆತಂಕದಲ್ಲಿ 12ರ ಬಾಲಕ ಆತ್ಮಹತ್ಯೆ