Tag: ಹಿಂದೂ ರಾಷ್ಟ್ರ

  • ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು: ಗಣಪತಿಗೆ ಭಕ್ತನ ಮನವಿ

    ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು: ಗಣಪತಿಗೆ ಭಕ್ತನ ಮನವಿ

    ಚಿಕ್ಕಮಗಳೂರು: ಭಾರತ (India) ಸಂಪೂರ್ಣ ಹಿಂದೂ (Hindu) ರಾಷ್ಟ್ರವಾಗಬೇಕು. 140 ಕೋಟಿ ಭಾರತೀಯರು ಹಿಂದೂಗಳಾಗಬೇಕು. ಗಣಪತಿ ಇದಕ್ಕೆ ಕೃಪೆ ತೋರು ತಂದೆ ಎಂದು ಭಕ್ತನೋರ್ವ ಗಣಪತಿ ಕಾಣಿಕೆ ಹುಂಡಿಗೆ ಕಾಣಿಕೆ ಬದಲು ಚೀಟಿ ಬರೆದು ಹಾಕಿ ಬೇಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.

    ಇಷ್ಟು ದಿನಗಳ ಕಾಲ ನಾವೆಲ್ಲಾ ದೇವರೇ ಮದುವೆ ಮಾಡು. ಬೇಗ ಹುಡುಗಿ ಸಿಗಲಿ. ಪರೀಕ್ಷೆಯಲ್ಲಿ ಪಾಸ್ ಮಾಡು. ನನ್ನ ಪ್ರೀತಿ ಗೆಲ್ಲುವಂತೆ ಮಾಡು. ಸರ್ಕಾರಿ ಕೆಲಸ ಸಿಗಲಿ ಹೀಗೆ ನಾನಾ ರೀತಿಯ ಬೇಡಿಕೆಯನ್ನು ಬರೆದು ಚೀಟಿಯನ್ನ ಕಾಣಿಕೆ ಹುಂಡಿಯಲ್ಲಿ ಹಾಕಿರುವುದನ್ನು ನೋಡಿರುತ್ತೇವೆ. ಆದರೆ, ಇದೇ ಮೊದಲ ಬಾರಿಗೆ ಭಕ್ತರು ನಾನಾ ಬೇಡಿಕೆಗಳನ್ನ ಗಣಪತಿ ಮುಂದೆ ಇಟ್ಟಿದ್ದಾರೆ. ಇದನ್ನೂ ಓದಿ: ಜಾರ್ಖಂಡ್‍ನಿಂದ ನೀರು ಜಾಸ್ತಿ ಬಿಟ್ಟಿದ್ದಕ್ಕೆ ಬಂಗಾಳದಲ್ಲಿ ಪ್ರವಾಹ: ಮಮತಾ ಆಕ್ರೋಶ

    ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಓಂಕಾರೇಶ್ವರ ದೇಗುಲದ ಪಕ್ಕದಲ್ಲಿ ಇಟ್ಟಿದ್ದ ಹಿಂದೂ ಮಹಾ ಸಭಾ ಗಣಪತಿಯನ್ನು ಸೆ.18ರಂದು ವಿಸರ್ಜನೆ ಮಾಡಲಾಯಿತು. ವಿಸರ್ಜನೆ ಮೆರವಣಿಗೆಯಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದ ಕಾಣಿಕೆ ಹುಂಡಿ ಹಣ ಎಣಿಕೆಯನ್ನು ಇಂದು (ಶುಕ್ರವಾರ) ಹಮ್ಮಿಕೊಂಡಿದ್ದರು. ಹುಂಡಿಯಲ್ಲಿ ಹಣದ ಜೊತೆ ನಾನಾ ಬೇಡಿಕೆಯ ಚೀಟಿಗಳು ಪತ್ತೆಯಾಗಿವೆ. ಇದನ್ನೂ ಓದಿ: Tirupati Laddu Row| ತಮಿಳುನಾಡು ಮೂಲದ ಕಂಪನಿಯಿಂದ ಕಲಬೆರೆಕೆ ತುಪ್ಪ: ಟಿಡಿಡಿ ಇಓ

    ಚೀಟಿಗಳಯಲ್ಲಿ ಏನೆಲ್ಲಾ ಬೇಡಿಕೆ ಇತ್ತು?
    ಭಾರತ ಸಂಪೂರ್ಣ ಹಿಂದೂ ರಾಷ್ಟ್ರವಾಗಬೇಕು. ದೇಶದ 140 ಕೋಟಿ ಜನರೂ ಹಿಂದೂಗಳಾಗಬೇಕು. ಸಿ.ಟಿ ರವಿ ( C T Ravi) ಮುಂದಿನ ಸಿಎಂ ಆಗಬೇಕು. ಹಿಂದೂಗಳೆಲ್ಲಾ ಒಗ್ಗಟ್ಟಾಗಿ ಇರಬೇಕು. ದತ್ತಪೀಠ ಆದಷ್ಟು ಬೇಗ ಹಿಂದೂಗಳ ಪೀಠವಾಗಬೇಕು ಹೀಗೆ ಭಕ್ತರು ನಾನಾ ರೀತಿ ಬೇಡಿಕೊಂಡಿದ್ದಾರೆ. ಅದರಲ್ಲಿ ಓರ್ವ ಭಕ್ತ ಮಾತ್ರ ನನ್ನ ಮಗನಿಗೆ ಮದುವೆ ಮಾಡು, ಮುಂದಿನ ವರ್ಷ ನಿನ್ನ ಸೇವೆ ಮಾಡುತ್ತೇನೆ ಎಂದು ಬರೆದು ಹಾಕಿದ್ದನು. ಇದನ್ನೂ ಓದಿ: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು: ಕೆಇಎ

  • ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ದೇಶಕ್ಕೇ ತೊಂದರೆ: ಯತೀಂದ್ರ ಸಿದ್ದರಾಮಯ್ಯ

    ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ದೇಶಕ್ಕೇ ತೊಂದರೆ: ಯತೀಂದ್ರ ಸಿದ್ದರಾಮಯ್ಯ

    ದಾವಣಗೆರೆ: ನಮ್ಮ ದೇಶ ಹಿಂದೂ ರಾಷ್ಟ್ರ (Hindu Nation) ಆಗಬಾರದು. ಹಿಂದೂ ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಇದನ್ನು ಅಂಬೇಡ್ಕರ್ (Dr B.R Ambedkar) ಅವರೇ ಹೇಳಿದ್ದಾರೆ. ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ದೇಶಕ್ಕೇ ತೊಂದರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ದಾವಣಗೆರೆಯ (Davanagere) ರುದ್ರನಕಟ್ಟೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಥರನೇ ಆಗುತ್ತದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡಿ ದಿವಾಳಿಯಾಗಿವೆ. ದೇಶ ಜಾತ್ಯಾತೀತ ತತ್ವ ಬಿಟ್ಟು ಧರ್ಮದ ಹಿಂದೆ ಹೋದರೆ ಅಭಿವೃದ್ಧಿ ಕಾಣಲ್ಲ ಎಂದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ನಂತರ ಕೋಟ್ಯಂತರ ಭಕ್ತರಿಗೆ ಅವಕಾಶ: ಪೇಜಾವರ ಶ್ರೀ

    ಇವತ್ತು ಜಾತ್ಯಾತೀತ ತತ್ವಕ್ಕೆ ಅಪಾಯ ಬಂದಿದೆ. ಬಿಜೆಪಿ (BJP) ಹಾಗೂ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ನಿಂದ ಅಪಾಯ ಶುರುವಾಗಿದೆ. ಬಿಜೆಪಿಯ ಅಂಗ ಸಂಘಟನೆಗಳು ಹಿಂದೂ ದೇಶ ಮಾಡೋಕೆ ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟರೆ ನಮ್ಮ ದೇಶ ಕೂಡ ಪಾಕಿಸ್ತಾನ ಅಪ್ಘಾನಿಸ್ತಾನ ಆಗುತ್ತದೆ. ಧರ್ಮದ ಮೇಲೆ ರಾಜಕೀಯ ಮಾಡುವ ಪಕ್ಷಗಳ ಬಗ್ಗೆ ನಾವು ಹುಷಾರಾಗಿರಬೇಕು. ಧರ್ಮದಿಂದ ಹಿಂದುಳಿದವರು ಮೇಲೇಳೋಕೆ ಸಾಧ್ಯವಾಗುತ್ತಿಲ್ಲ. ಇತಿಹಾಸವನ್ನು ನೋಡಿ ನಾವು ಪಾಠ ಕಲಿಯಬೇಕು. ಇತಿಹಾಸ ನೋಡಿ ನಾವು ದೇಶವನ್ನು ಕಟ್ಟಬೇಕು. ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ: ರೇಣುಕಾಚಾರ್ಯ ಕಿಡಿ

    ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಯಾರು ಹಿಂದುಳಿದವರು, ಅಲ್ಪ ಸಂಖ್ಯಾತ ಜಡ್ಜ್‌ಗಳು ಎಷ್ಟು ಜನರಿದ್ದಾರೆ. ಮೇಲ್ವರ್ಗದವರೇ ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ನಮಗೂ ಕೂಡ ಸಮಾಜದಲ್ಲಿ ಉನ್ನತ ಸ್ಥಾನಗಳು ಸಿಗಬೇಕು. ಧರ್ಮಕ್ಕಾಗಿ ಇನ್ನೊಬ್ಬರ ಜೊತೆ ಹೋರಾಟ ಮಾಡಲು ಹೋದರೆ ನಮ್ಮ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಾವು ಬದಲಾಗಬೇಕು ಎಂದು ನುಡಿದರು. ಇದನ್ನೂ ಓದಿ: ಬಿ.ಕೆ ಹರಿಪ್ರಸಾದ್ ಹಿಂದೂವೇ ಅಲ್ಲ, ದೇಶದ್ರೋಹಿ: ಯಶ್‌ಪಾಲ್ ಸುವರ್ಣ

  • ಭಾರತ ಹಿಂದೂ ರಾಷ್ಟ್ರವಲ್ಲ, ಆಗಿರಲೂ ಇಲ್ಲ: RSS ವಿರುದ್ಧ ಎಸ್‌ಪಿ ನಾಯಕ ಕಿಡಿ

    ಭಾರತ ಹಿಂದೂ ರಾಷ್ಟ್ರವಲ್ಲ, ಆಗಿರಲೂ ಇಲ್ಲ: RSS ವಿರುದ್ಧ ಎಸ್‌ಪಿ ನಾಯಕ ಕಿಡಿ

    ನವದೆಹಲಿ: ಭಾರತ ಎಂದಿಗೂ ಹಿಂದೂ ರಾಷ್ಟ್ರವಲ್ಲ, ಹಿಂದೂ ರಾಷ್ಟ್ರ ಆಗಿರಲೂ ಇಲ್ಲ ಎಂದು ಸಮಾಜವಾದಿ ಪಕ್ಷದ (SP) ನಾಯಕ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya), ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕಿಡಿ ಕಾರಿದ್ದಾರೆ.

    ಭಾರತವು ಹಿಂದೂ ರಾಷ್ಟ್ರ ಎಂದು ಹೇಳಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ವಿರುದ್ಧ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಟ್ವೀಟ್‌ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ.

    ಭಾರತ ಹಿಂದೂ ರಾಷ್ಟ್ರ ಅಲ್ಲ, ಅದು ಎಂದಿಗೂ ಹಿಂದೂ ರಾಷ್ಟ್ರ ಆಗಿರಲಿಲ್ಲ. ಭಾರತವು ಅಂತರ್ಗತವಾಗಿ ಒಂದು ಬಹುತ್ವದ ದೇಶವಾಗಿದೆ. ನಮ್ಮ ಸಂವಿಧಾನವು ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ ಆಧಾರದಲ್ಲಿ ರಚನೆಯಾಗಿದೆ. ಭಾರತದಲ್ಲಿ ಇರುವ ಎಲ್ಲಾ ಜನರೂ ಭಾರತೀಯರೇ. ನಮ್ಮ ಭಾರತೀಯ ಸಂವಿಧಾನವು ಎಲ್ಲಾ ಧರ್ಮ, ನಂಬಿಕೆಗಳು, ಪಂಥ ಹಾಗೂ ಸಂಸ್ಕೃತಿಗಳ ಪ್ರಾತಿನಿಧಿತ್ವ ಪ್ರತಿನಿಧಿಸುತ್ತದೆ ಎಂದು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಮೋಹನ್‌ ಭಾಗವತ್ ಹೇಳಿದ್ದೇನು?
    ನಾಗಪುರದಲ್ಲಿ ಮಧುಕರ ಭವನ ಉದ್ಘಾಟಿಸಿ ಮಾತನಾಡಿದ್ದ ಮೋಹನ್ ಭಾಗವತ್, ಭಾರತವು ಒಂದು ಹಿಂದೂ ರಾಷ್ಟ್ರ. ಎಲ್ಲಾ ಭಾರತೀಯರೂ ಹಿಂದೂಗಳು ಮತ್ತು ಹಿಂದೂಗಳು ಎಲ್ಲಾ ಭಾರತೀಯರನ್ನ ಪ್ರತಿನಿಧಿಸುತ್ತಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಪೋರ್ಟ್‌ ಮಾಡ್ತಿದ್ದಾರೆ ʻಐರಾವತʼಬೆಡಗಿ – ಊರ್ವಶಿ ರೌಟೇಲಾ ಕಾಲೆಳೆದ ಟ್ರೋಲ್‌ ಗೆಳೆಯರು

    ಹಿಂದೂಸ್ತಾನವು ಒಂದು ಹಿಂದೂ ದೇಶ ಮತ್ತು ಇದು ವಾಸ್ತವ. ಸೈದ್ಧಾಂತಿಕವಾಗಿ, ಎಲ್ಲಾ ಭಾರತೀಯರೂ ಹಿಂದೂಗಳು ಮತ್ತು ಹಿಂದೂಗಳು ಎಂದರೆ ಭಾರತೀಯರು. ಭಾರತದಲ್ಲಿ ಇಂದು ಇರುವವರೆಲ್ಲರೂ ಹಿಂದೂ ಸಂಸ್ಕೃತಿಗೆ, ಹಿಂದೂ ಪೂರ್ವಜರಿಗೆ ಮತ್ತು ಹಿಂದೂ ಭೂಮಿಗೆ ಸಂಬಂಧಿಸಿದವರು. ಇದಕ್ಕಿಂತ ಬೇರೇನೂ ಅಲ್ಲ ಎಂದು ತಿಳಿಸಿದ್ದರು.

    ಅಸ್ಸಾಂನ ಗುವಾಹಟಿಯಲ್ಲಿನ ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ಭಾಗವತ್, ಇಂಡಿಯಾ ಹೆಸರಿನ ಬದಲು ದೇಶವನ್ನ ಭಾರತ ಎಂಬ ಹೆಸರಿನಿಂದ ಕರೆಯಬೇಕು. ಏಕೆಂದರೆ ಭಾರತ ಎನ್ನುವುದು ಬಹಳ ಪುರಾತನ ಕಾಲದಿಂದ ಇದೆ ಅಂತ ಹೇಳಿದ್ದರು. ಇದನ್ನೂ ಓದಿ: Asia Cup 2023: ಕೈಕೊಟ್ಟ ಕೊಹ್ಲಿ, ರೋಹಿತ್‌, ಗಿಲ್‌ – ಪಾಕಿಸ್ತಾನಕ್ಕೆ 267 ರನ್‌ ಗುರಿ ನೀಡಿದ ಭಾರತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ ಕೊಡುತ್ತೇನೆ – ಧೀರೇಂದ್ರ ಶಾಸ್ತ್ರಿ

    ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ ಕೊಡುತ್ತೇನೆ – ಧೀರೇಂದ್ರ ಶಾಸ್ತ್ರಿ

    ರಾಯ್ಪುರ್‌: ನನಗೆ ಬೆಂಬಲ ಕೊಡಿ.. ನಾನು ನಿಮಗೆ ಹಿಂದೂ ರಾಷ್ಟ್ರ (Hindu Nation) ಕೊಡುತ್ತೇನೆ ಎಂದು ಬಾಗೇಶ್ವರ ಧಾಮ (Bageshwar Dham) ಮುಖ್ಯಸ್ಥ ಧೀರೇಂದ್ರ ಶಾಸ್ತ್ರಿ (Dhirendra Shastri) ಹೇಳಿದ್ದಾರೆ. ಹಿಂದೂಗಳು ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.

    ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಅವರು “ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ. ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ” ಎಂಬ ಘೋಷಣೆ ನೀಡಿದ್ದರು. ಆದರೆ ಇಂದು ನಾವು ಹಿಂದೂ ರಾಷ್ಟ್ರ ಮಾಡಬೇಕಾಗಿದೆ. ಇಂದು ನಾನು ಒಂದು ಘೋಷಣೆಯನ್ನು ನೀಡುತ್ತೇನೆ. ನೀವು ನನ್ನನ್ನು ಬೆಂಬಲಿಸಿ, ನಾನು ನಿಮಗೆ ಹಿಂದೂ ರಾಷ್ಟ್ರವನ್ನು ನೀಡುತ್ತೇನೆ ಎಂದು ಶಾಸ್ತ್ರೀ ಹಿಂದೂಗಳಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಇದನ್ನು ಸಾಧಿಸಲು ಸನಾತನ ಧರ್ಮದ ಎಲ್ಲಾ ಜನರು ಒಗ್ಗೂಡಬೇಕು. ಒಟ್ಟಾಗಿ ಮುಂದೆ ಬರಬೇಕು. ಮೊದಲ ಪವಾಡವೆಂದರೆ ಇಂದು ಭಾರತದ ಹಿಂದೂಗಳು ಒಂದಾಗುತ್ತಿದ್ದಾರೆ. ಎರಡನೇ ಪವಾಡವನ್ನು ಬಾಗೇಶ್ವರ ಧಾಮದಲ್ಲಿ ನೋಡಬೇಕು. ನೀವೇ ಬಂದು ನೋಡಬೇಕು ಎಂದು ತಿಳಿಸಿದ್ದಾರೆ.

    ಮೂರನೆಯ ಪವಾಡ ಏನೆಂದರೆ, ನಿಮ್ಮಲ್ಲಿ ಸನಾತನದ ಒಂದು ತುಣುಕಾದರೂ ಇದ್ದರೆ, ನೀವು ನನ್ನನ್ನು ಬೆಂಬಲಿಸಿ. ನಾನು ನಿಮಗೆ ಹಿಂದೂ ರಾಷ್ಟ್ರವನ್ನು ನೀಡುತ್ತೇನೆ. ನಾನು ರಾಜಕಾರಣಿಯಾಗಲು ಬಯಸುವುದಿಲ್ಲ. ನಾನು ಯಾವುದೇ ಪಕ್ಷವನ್ನು ಹೊಂದುವುದಿಲ್ಲ. ನಾನು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ. ನಾವು ನಮ್ಮ ಸನಾತನವಾದಿಗಳನ್ನು ಒಗ್ಗೂಡಿಸುವ ಬಗ್ಗೆ ಮಾತ್ರ ಮಾತನಾಡಬೇಕಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಒಂದೇ ವಾರದಲ್ಲಿ ಕರ್ನಾಟಕದ ಟ್ಯಾಬ್ಲೋ ರೆಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ: ಹರಿಯಾಣ ಶಾಸಕ ಅಸೀಮ್‌ ಪ್ರತಿಜ್ಞೆ

    ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ: ಹರಿಯಾಣ ಶಾಸಕ ಅಸೀಮ್‌ ಪ್ರತಿಜ್ಞೆ

    ಚಂಡೀಗಢ: ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಹರಿಯಾಣದ ಹಂಬಾಲ ನಗರ ಕ್ಷೇತ್ರದ ಬಿಜೆಪಿ ಶಾಸಕ ಅಸೀಮ್‌ ಗೋಯೆಲ್‌ ಪ್ರತಿಜ್ಞೆ ಮಾಡಿದ್ದಾರೆ.

    ಹಲವರೊಂದಿಗೆ ಗೋಯೆಲ್‌ ಪ್ರತಿಜ್ಞೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಬಾಬರಿ ಧ್ವಂಸ ವೇಳೆ ಶಿವಸೇನೆ ಎಲ್ಲಿತ್ತು ಎಂದು ನಿಮ್ಮ ನಾಯಕರನ್ನು ಕೇಳಿ: ಬಿಜೆಪಿಗೆ ರಾವತ್ ತಿರುಗೇಟು

    https://twitter.com/anshulsigh/status/1520809833473007616?ref_src=twsrc%5Etfw%7Ctwcamp%5Etweetembed%7Ctwterm%5E1520809833473007616%7Ctwgr%5E%7Ctwcon%5Es1_&ref_url=https%3A%2F%2Fwww.prajavani.net%2Findia-news%2Fharyana-bjp-mla-others-take-oath-to-make-india-hindu-rashtra-933430.html

    ಹಿಂದೂಸ್ತಾನವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಪ್ರತಿಜ್ಞೆ ಮಾಡುತ್ತಿದ್ದೇವೆ. ನಮ್ಮ ಪ್ರತಿಜ್ಞೆಗೆ ನಾವು ಬದ್ಧರಾಗಿದ್ದೇವೆ ಎಂದು ಶಾಸಕ ಇತರರೊಂದಿಗೆ ಪ್ರತಿಜ್ಞೆ ಮಾಡುತ್ತಿರುವ ದೃಶ್ಯ ವೀಡಿಯೋದಲ್ಲಿ ಇದೆ.

    ಯಾವುದೇ ಬೆಲೆ ತೆತ್ತಾದರೂ ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿದೆ. ನಾವು ಗುರಿ ಸಾಧಿಸಲು ಪೂರ್ವಜರು ಮತ್ತು ಹಿಂದೂ ದೇವತೆಗಳು ನಮಗೆ ಶಕ್ತಿ ದಯಪಾಲಿಸಲಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಜಹಾಂಗೀರ್‌ಪುರಿ ಹಿಂಸಾಚಾರ – ಆರೋಪಿಗಳನ್ನು ಮುಗ್ದರೆಂದ ಜಮಿಯತ್ ನಿಯೋಗ

    ಈ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಗೋಯೆಲ್‌, ನಾನೊಬ್ಬ ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ನಾನು ಹಿಂದೂ ಆಗಿ ಪ್ರತಿಜ್ಞೆ ಮಾಡುತ್ತಿದ್ದೇನೆಯೇ ಹೊರತು ಬಿಜೆಪಿ ಶಾಸಕನಾಗಿ ಅಲ್ಲ ಎಂದು ತಿಳಿಸಿದ್ದಾರೆ.

  • ಭಯೋತ್ಪಾದನೆ ತಡೆಗಾಗಿ ಭಾರತವನ್ನ ಹಿಂದೂ ರಾಷ್ಟ್ರ ಅಂತ ಘೋಷಿಸಿ: ಶಾಸಕ ಪಿ.ಸಿ.ಜಾರ್ಜ್

    ಭಯೋತ್ಪಾದನೆ ತಡೆಗಾಗಿ ಭಾರತವನ್ನ ಹಿಂದೂ ರಾಷ್ಟ್ರ ಅಂತ ಘೋಷಿಸಿ: ಶಾಸಕ ಪಿ.ಸಿ.ಜಾರ್ಜ್

    ತಿರುವನಂತಪುರ: ದೇಶದಲ್ಲಿ ಭಯೋತ್ಪಾದನೆ ತಡೆಗಾಗಿ ಭಾರತವನ್ನ ಹಿಂದೂ ರಾಷ್ಟ್ರ ಎಂದು ಘೋಷಿಸಿಬೇಕಾಗಿದೆ. ಕೇರಳದಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್ 2030ರೊಳಗೆ ಭಾರತವನ್ನ ಇಸ್ಲಾಮಿಕ್ ಸ್ಟೇಟ್ ಮಾಡಲು ಮುಂದಾಗಿವೆ ಎಂದು ಕೇರಳದ ಜನಪಕ್ಷ (ಸೆಕ್ಯೂಲರ್) ಶಾಸಕ ಪಿ.ಸಿ.ಜಾರ್ಜ್ ಗಂಭೀರ ಆರೋಪ ಮಾಡಿದ್ದಾರೆ.

    ಇಡುಕ್ಕಿ ಜಿಲ್ಲೆಯ ಥೋಡುಪುಜಾದಲ್ಲಿ ಆಯೋಜಿಸಲಾಗಿದ್ದ ಬೈಠಕ್ ನಲ್ಲಿ ಶಾಸಕ ಪಿ.ಸಿ.ಜಾರ್ಜ್ ಭಾಗಿಯಾಗಿದ್ದರು. ಲವ್ ಜಿಹಾದ್ ವಿಷಯದ ಕುರಿತು ಮಾತನಾಡುತ್ತಿರುವ ವೇಳೆ ಭಾರತವನ್ನ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬೇಕಿದೆ. ಎಲ್‍ಡಿಎಫ್ ಮತ್ತು ಯುಡಿಎಫ್ ಭಾರತವನ್ನ ಮುಸ್ಲಿಂ ರಾಷ್ಟ್ರವನ್ನಾಗಿ ಬದಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

    2016ರಲ್ಲಿ ಮೋದಿ ಸರ್ಕಾರ ನೋಟ್ ಬ್ಯಾನ್ ಮಾಡಿದ್ದರಿಂದ, ಹೊರಗಿನಿಂದ ಬರುತ್ತಿದ್ದ ಹಣ ಸ್ಥಗಿತಗೊಂಡಿದೆ. ಹಾಗಾಗಿ ಅವರ ಕೆಲಸ ನಿಧಾನವಾಗಿದೆ. ಸುಪ್ರೀಂಕೋಟ್ ಮದುವೆಯನ್ನ ಲವ್ ಜಿಹಾದ್ ಅಂತ ಹೇಳಲ್ಲ. ಅದು ಲವ್ ಜಿಹಾದ್ ಅನ್ನೋದು ನನಗೆ ಗೊತ್ತಿದೆ. ಕೇರಳದಲ್ಲಿ ಲವ್ ಜಿಹಾದ್ ತಡೆಯಬೇಕಿದ್ದು, ಅದಕ್ಕಾಗಿ ಮಹಾನ್ ಭಾರತವನ್ನು ಹಿಂದೂ ರಾಷ್ಟ್ರ ಅಂತ ಘೋಷಿಸಿಬೇಕಿದೆ ಎಂದರು.

    ವಿಶ್ವದ ಶೇ.68ರಷ್ಟು ಹಿಂದೂಗಳು ಭಾರತದಲ್ಲಿದ್ದಾರೆ. ವಿಶ್ವದ ಬಹುತೇಕ ದೇಶಗಳು ಒಂದು ಧರ್ಮದ ಬಗ್ಗೆ ಹೆಚ್ಚು ಒಲವು ಹೊಂದಿರೋದನ್ನ ಗಮನಿಸಬಹುದು. ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳನ್ನು ಮುಸ್ಲಿಂ ರಾಷ್ಟ್ರಗಳನ್ನಾಗಿ ಬದಲಿಸುವ ಪ್ರಯತ್ನಗಳು ಜಾಗತೀಕ ಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು.

    ಕೇರಳದ ಕೊಟ್ಟಾಯಂ ಜಿಲ್ಲೆಯ ಪೂಂಜರ್ ಕ್ಷೇತ್ರದ ಶಾಸಕರಾದ ಪಿ.ಸಿ.ಜಾರ್ಜ್ 2016ರ ಚುನಾವಣೆಯಲ್ಲಿ ಯುಡಿಎಫ್ ಮತ್ತು ಎಲ್‍ಡಿಎಫ್ ಅಭ್ಯರ್ಥಿಗಳು ಭಾರೀ ಮತಗಳ ಅಂತರದಲ್ಲಿ ಸೋಲಿಸಿ ಕೇರಳದ ವಿಧಾನಸಭೆ ಪ್ರವೇಶಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಜೊತೆ ತಮ್ಮ ಕೇರಳ ಜನಪಕ್ಷೀಯ ಪಾರ್ಟಿ ಮೈತ್ರಿ ಮಾಡಿಕೊಂಡಿದ್ದರು. ನಂತರ ತಾವೇ ಮೈತ್ರಿಯಿಂದ ಹೊರ ಬಂದಿದ್ದಾರೆ.

  • ಹಿಂದೂ ರಾಷ್ಟ್ರ ಮಾಡುವುದೇ ಪೌರತ್ವ ಕಾಯ್ದೆಯ ಉದ್ದೇಶ: ಜ್ಞಾನ ಪ್ರಕಾಶ ಸ್ವಾಮೀಜಿ

    ಹಿಂದೂ ರಾಷ್ಟ್ರ ಮಾಡುವುದೇ ಪೌರತ್ವ ಕಾಯ್ದೆಯ ಉದ್ದೇಶ: ಜ್ಞಾನ ಪ್ರಕಾಶ ಸ್ವಾಮೀಜಿ

    ಚಾಮರಾಜನಗರ: ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರ ಮಾಡುವುದೇ ಸಿಎಎ, ಎನ್.ಪಿ.ಆರ್ ಹಾಗೂ ಎನ್.ಆರ್.ಸಿ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ನನಗೆ ಕರೆ ಮಾಡಿದ್ದರು ಎಂದು ಉರಿಲಿಂಗಿಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಚಾಮರಾಜನಗರದಲ್ಲಿ ಬಹುಜನ ವಾಲೆಂಟಿಯರ್ ಫೋರ್ಸ್ ಆಯೋಜಿಸಿದ್ದ, ಪೌರತ್ವ ಪರೀಕ್ಷೆ ಏನಿದರ ಮರ್ಮ ಎಂಬ ವಿಚಾರ ಸಂಕೀರಣದಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಕರೆ ಮಾಡಿದ್ದರು. ಮುಸ್ಲಿಮರಿಗೆ ಬೇರೆ ಬೇರೆ ದೇಶಗಳಿವೆ, ಕ್ರೈಸ್ತರಿಗೂ ಹಲವಾರು ದೇಶಗಳಿವೆ ಹಿಂದೂಗಳಿಗೂ ಒಂದು ರಾಷ್ಟ್ರ ಬೇಡವೇ ಎಂದು ಕೇಳಿದ್ದರು. ನೀವು ಯಾಕೆ ನಮ್ಮ ವಿರುದ್ಧ ಹೋರಾಟ ಮಾಡುತ್ತಿದ್ದೀರಾ? ನಮ್ಮ ಜೊತೆ ಕೈಜೋಡಿಸಿ ಎಂದು ರಾಜನಾಥ್ ಸಿಂಗ್ ಹೇಳಿದ್ದರು ಎಂದು ಬಹಿರಂಗ ಪಡಿಸಿದರು.

    ಆಗ ಮೊದಲು ಹಿಂದುಗಳು ಅಂದರೆ ಯಾರು ಪಟ್ಟಿ ಮಾಡಿ ಎಂದೆ. ಆರ್.ಎಸ್.ಎಸ್.ನ ಸಾರ್ವಕರ್ ಹಾಗೂ ಗೋರ್ವಕರ್ ಅವರ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿತ್ತು. ಆರ್.ಎಸ್.ಎಸ್.ಗೆ ನೂರು ವರ್ಷ ತುಂಬುವ ಸಂದರ್ಭದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಬೇಕು ಎಂದು ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇನ್ನು ಮೂರು ವರ್ಷ ಕಳೆದರೆ ಆರ್.ಎಸ್.ಎಸ್. ಗೆ ನೂರು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಅವರ ಉದ್ದೇಶವನ್ನು ಬಿಜೆಪಿ ಸಾಕಾರಗೊಳಿಸಲು ಹೊರಟಿದೆ ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಆರೋಪಿಸಿದರು.

  • ನಮ್ಮ ನಾಯಕರು ಸೀತೆಯಂತೆ ಅಪವಾದ ಗೆದ್ದು ಬಂದರು: ಬಿ.ಎಲ್.ಸಂತೋಷ್

    ನಮ್ಮ ನಾಯಕರು ಸೀತೆಯಂತೆ ಅಪವಾದ ಗೆದ್ದು ಬಂದರು: ಬಿ.ಎಲ್.ಸಂತೋಷ್

    – ನಮ್ಮ ದೇಶ ಹಿಂದೂ ರಾಷ್ಟ್ರ ಅಲ್ಲ, ನಮ್ಮ ದೇಶ ಜಾತ್ಯತೀತ ರಾಷ್ಟ್ರ

    ಮೈಸೂರು: ನಮ್ಮ ಪ್ರಧಾನಮಂತ್ರಿಗೆ, ನಮ್ಮ ಗೃಹ ಮಂತ್ರಿಗೆ ಹಾಗೂ ನಮ್ಮ ಸಿಎಂಗೆ ಒಂದೊಂದು ಕಾಲದಲ್ಲಿ ಒಂದೊಂದು ಕಳಂಕ ಅಂಟಿಸುವ ಕೆಲಸ ಮಾಡಿದರು. ಆದರೆ ನಮ್ಮ ನಾಯಕರು ಸೀತೆಯಂತೆ ಅಪವಾದ ಗೆದ್ದು ಬಂದರು. ಈಗ ಪೌರತ್ವ ಕಾಯ್ದೆ ವಿಚಾರದಲ್ಲೂ ಕಳಂಕ ಅಂಟಿಸಲು ವಿಪಕ್ಷಗಳು ಸಂಕಲ್ಪ ಮಾಡಿವೆ. ಇದನ್ನು ನಾವೆಲ್ಲಾ ಸೇರಿ ತಪ್ಪಿಸಬೇಕು. ಜನರಿಗೆ ವಾಸ್ತವ ತಿಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.

    ಇಂದು ಮೈಸೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ 2019 ಒಂದು ವಿಮರ್ಶೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದ ಎಲ್ಲಾ ಕಡೆ ಮಸೀದಿಗಳಿವೆ. ಎಲ್ಲೂ ಅವರಿಗೆ ಅವಕಾಶ ನಿರಾಕರಿಸಿಲ್ಲ. ಮುಸ್ಲಿಮರು ಈ ದೇಶದಲ್ಲಿ ಏರಬೇಕಾದ ಎಲ್ಲಾ ಉನ್ನತ ಸ್ಥಾನ ಏರಿದ್ದಾರೆ. ಇದಕ್ಕೆ ಯಾರು ಅಡ್ಡಿ ಬಂದಿಲ್ಲ. ಈ ದೇಶದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್‍ರಿಗೆ ಯಾವತ್ತೂ ತೊಂದರೆ ಆಗಿಲ್ಲ. ಮುಸ್ಲಿಮರು ಕ್ರಿಶ್ಚಿಯನ್ ದೊಡ್ಡ ಮಟ್ಟದಲ್ಲಿ ಬೆಳೆದಿದ್ದಾರೆ. ಆದರೆ ಬೇರೆ ದೇಶದಲ್ಲಿ ಹಿಂದೂಗಳ ಸ್ಥಿತಿ ಏನಾಗಿದೆ ನೋಡಿ ಎಂದರು.

    ಭಾರತದಲ್ಲಿ ಸದಾ ಕಾಲಕ್ಕೂ ಮುಸ್ಲಿಮರು ಸುಶಿಕ್ಷಿತರಾಗಿರುತ್ತಾರೆ. ದೇಶದಲ್ಲಿನ ಎಲ್ಲಾ ಅಲ್ಪಸಂಖ್ಯಾತ ಜನರು ಇಲ್ಲಿ ಸದಾ ಸುರಶಿಕ್ಷಿತರಾಗಿರುತ್ತಾರೆ ಅನುಮಾನಗಳೇ ಬೇಡ. ನಮ್ಮ ದೇಶ ಹಿಂದೂ ರಾಷ್ಟ್ರ ಅಲ್ಲ, ನಮ್ಮ ದೇಶ ಜಾತ್ಯತೀತ ರಾಷ್ಟ್ರ. ಆದರೆ ನಮ್ಮ ಪಕ್ಕದ ದೇಶಗಳು ಧರ್ಮದ ದೇಶಗಳಾಗಿವೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬೇರೆ ದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಜನರಲ್ಲಿ ಶೇಕಡಾ 68 ಜನರು ದಲಿತರು, ಅವರಿಗೆ ಪೌರತ್ವ ಕೊಡೋದು ತಪ್ಪಾ? ಅವರಿಗೆ ನಾವು ಪೌರತ್ವ ಕೊಡೋದೆ ಇನ್ಯಾರಿಗೆ ಕೊಡಬೇಕು? ಇದು ದಲಿತರ ವಿರೋಧಿ ಕಾಯ್ದೆ ಎಂದು ಅಪ್ರಚಾರ ಮಾಡ್ತಿರಾ? ಎಂದು ಪ್ರಶ್ನಿಸಿದರು.

    ಪೌರತ್ವ ಕಾಯ್ದೆ ಹೋರಾಟದಿಂದ ಕಾಂಗ್ರೆಸ್‍ನ ಕೆಲ ನಾಯಕರೆ ಹಿಂದೆ ಸರಿಯುತ್ತಿದ್ದಾರೆ. ಅವರಿಗೆ ಇದು ರಾಜಕೀಯವಾಗಿ ತಮಗೆ ತೊಡಕಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ. ನಿಧಾನವಾಗಿ ಮುಸ್ಲಿಮರು ಕೂಡ ಈ ಹೋರಾಟದಿಂದ ಹಿಂದೆ ಸರಿಯುತ್ತಿದ್ದಾರೆ. ಕೆಲ ನಗರ ನಕ್ಸಲರು, ಕೆಲ ವಿಚಾರವಾದಿಗಳು, ಕೆಲ ಮುಸ್ಲಿಂ ಮುಖಂಡರು, ಕೆಲ ನಿರುದ್ಯೋಗಿ ರಾಜಕಾರಣಿಗಳಷ್ಟೇ ಇದರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

  • ಧರ್ಮದ ಹೆಸರಿನಲ್ಲಿ ವಿಭಜನೆಯಾದ ಭಾರತ ಹಿಂದೂ ರಾಷ್ಟ್ರವಾಗಬೇಕಿತ್ತು : ಹೈಕೋರ್ಟ್ ಜಡ್ಜ್

    ಧರ್ಮದ ಹೆಸರಿನಲ್ಲಿ ವಿಭಜನೆಯಾದ ಭಾರತ ಹಿಂದೂ ರಾಷ್ಟ್ರವಾಗಬೇಕಿತ್ತು : ಹೈಕೋರ್ಟ್ ಜಡ್ಜ್

    ಶಿಲ್ಲಾಂಗ್: ಧರ್ಮದ ಹೆಸರಿನಲ್ಲಿ ದೇಶ ವಿಭಜನೆಯಾದ ಬಳಿಕ ಪಾಕಿಸ್ತಾನ ತನ್ನನ್ನು ಮುಸ್ಲಿಂ ರಾಷ್ಟ್ರ ಎಂದು ಕರೆದುಕೊಂಡಿದೆ. ಆದರೆ ಭಾರತ ಮಾತ್ರ ಜ್ಯಾತ್ಯಾತೀತ ರಾಷ್ಟ್ರ ಎಂದು ಕರೆದುಕೊಳ್ಳುತ್ತಿದೆ. ಆದರೆ ಭಾರತವನ್ನ ಹಿಂದೂ ರಾಷ್ಟ್ರ ಎಂದು ಕರೆಯಬೇಕೆಂದು ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಸೇನ್ ಅಭಿಪ್ರಾಯ ಪಟ್ಟಿದ್ದಾರೆ.

    ರಾಣಾ ಎಂಬುವವರಿಗೆ ರಾಜ್ಯ ಸರ್ಕಾರ ನಿವಾಸ ಪ್ರಮಾಣ ಪತ್ರ ನಿರಾಕರಿಸಿದ ಪ್ರಕರಣದ ತೀರ್ಪು ನೀಡಿದ ಸಂದರ್ಭದಲ್ಲಿ ನ್ಯಾ. ಸೇನ್ ಅವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಜಗತ್ತಿನ ಅಥವಾ ಭಾರತದಲ್ಲಿ ಪ್ರಳಯ ಸಂಭವಿಸಿದ ಹೊರತು ಯಾರು ಭಾರತವನ್ನು ಮತ್ತೊಂದು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಬೇಡಿ. ಇಂದಿಗೂ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಉಳಿದಿರುವ ಹಿಂದೂ, ಸಿಖ್, ಜೈನ್, ಬೌದ್ದ, ಕ್ರೈಸ್ತ, ಪಾರ್ಸಿ ಸೇರಿದಂತೆ ವಿವಿಧ ಧರ್ಮದ ಜನರಿಗೆ ಅಲ್ಲಿ ಚಿತ್ರ ಹಿಂಸೆ ನೀಡಲಾಗುತ್ತಿದೆ. ಅಲ್ಲದೇ ವಿಭಜನೆಯ ವೇಳೆ ಪಾಕಿಸ್ತಾನ ತೊರೆದು ಬಂದ ಹಿಂದೂಗಳಿಗೆ ಇಲ್ಲಿ ವಿದೇಶಿಯರಂತೆ ನೋಡಲಾಗುತ್ತಿದೆ. ಇದು ನನ್ನ ಪ್ರಕಾರ ನೈಸರ್ಗಿಕ ನ್ಯಾಯಾಂಗ ತತ್ವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

    ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದ ಹಿಂದೂಗಳು,  ಸಿಖ್, ಬೌದ್ಧರು, ಪಾರ್ಸಿಗಳು ಯಾವುದೇ ದಾಖಲೆ ನೀಡದೇ ಇದ್ದರೂ ಅವರಿಗೆ ಭಾರತದ ಪೌರತ್ವ ನೀಡಬೇಕು ಎಂದು ನ್ಯಾ.ಸೇನ್ ಅವರು ಪ್ರಧಾನಿ ಮೋದಿಗೆ ಆದೇಶ ರೂಪದ ಮನವಿಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾತ್ರ ಆರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು. ಭಾರತದ ಕಾನೂನು ಮತ್ತು ಸಂವಿಧಾನವನ್ನ ಗೌರವಿಸದ ಯಾರೇ ಆಗಲಿ ಅವರನ್ನು ಭಾರತದ ನಾಗರಿಕ ಎಂದು ಗುರುತಿಸಬಾರದು ಎಂದು ತಮ್ಮ 37 ಪುಟಗಳ ಆದೇಶಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv