– ರಂಜನ್‌ಗೆ ಮುಸ್ಲಿಂ ಉದ್ಯೋಗಿಗಳಿಗೆ ಅನುಮತಿ ಕೇಳಿದ ಬೆನ್ನಲ್ಲೆ ಹಿಂದೂ ಮುಖಂಡರಿಂದಲೂ ಮನವಿ
ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ತಿಂಗಳಿನಿಂದ ತಣ್ಣಗಿದ್ದ ಧರ್ಮ ದಂಗಲ್ ಈಗ ಮತ್ತೆ ಮುನ್ನಲೆಗೆ ಬಂದಿದ್ದು, ಹಿಂದೂ ಸಂಘಟನೆ ಮುಖಂಡರು ಸರ್ಕಾರದ ಮುಂದೆ ಮತ್ತೊಂದು ವಿಭಿನ್ನ ಬೇಡಿಕೆ ಇಟ್ಟಿದ್ದಾರೆ.
ರಂಜನ್‌ಗಾಗಿ ಆ ಸಮುದಾಯದ ಉದ್ಯೋಗಿಗಳಿಗೆ ನಿತ್ಯ ಒಂದು ಗಂಟೆ ಮುಂಚಿತವಾಗಿ ಕಚೇರಿಯಿಂದ ತೆರಳಲು ಅನುಮತಿ ನೀಡುವಂತೆ ಸಿಎಂಗೆ ಪತ್ರ ಬರೆದ ಬೆನ್ನಲ್ಲೆ, ಈಗ ಹಿಂದೂ ಸಮುದಾಯದ ಮುಖಂಡರು ಬೇಡಿಕೆಯೊಂದನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಹೌದು. ತೆಲಂಗಾಣ, ಆಂಧ್ರದಲ್ಲಿ ಸರ್ಕಾರ ಸ್ವಯಂಪ್ರೇರಿತವಾಗಿ ಮುಸ್ಲಿಂ ಸಮುದಾಯದ ಉದ್ಯೋಗಿಗಳಿಗೆ ರಂಜನ್ ಸಮಯದಲ್ಲಿ ನಿತ್ಯ ಒಂದು ಗಂಟೆ ವಿನಾಯಿತಿ ಕೊಟ್ಟಿದೆ. ಅದರಂತೆ ರಾಜ್ಯದಲ್ಲೂ ಈ ರೀತಿಯ ಅವಕಾಶ ಮಾಡಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಎಆರ್‌ಎಂ ಹುಸೇನ್ ಹಾಗೂ ಸೈಯದ್ ಅಹಮ್ಮದ್, ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದರು. ಈ ಸಂಬಂಧ ಆರಂಭದಲ್ಲಿ ಕಿಡಿಕಾರಿದ್ದ ಹಿಂದೂ ಸಂಘಟನೆಗಳು, ಬಳಿಕ ಅವರದ್ದೇ ದಾರಿಯಲ್ಲಿ ಹೋಗಿ ಮತ್ತೆ ಸರ್ಕಾರದ ಮುಂದೆ ಹಿಂದೂಗಳಿಗೆ ಹಬ್ಬದ ಸಂದರ್ಭಗಳಲ್ಲಿ ಹೆಚ್ಚುವರಿ ರಜೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಶಿವರಾತ್ರಿ ವೇಳೆ ಜನ ಜಾಗರಣೆ ಮಾಡುವ ಕಾರಣ ಮರುದಿನ ಕೆಲಸ ಕಾರ್ಯಗಳಲ್ಲಿ ತೊಡಗಲು ಸಮಸ್ಯೆಯಾಗಲಿದೆ. ಜೊತೆಗೆ ಮರುದಿನ ಪೂಜೆ ಕೈಂಕರ್ಯಗಳು ಮುಂದುವರಿಯುತ್ತವೆ. ಈ ಕಾರಣ ಶಿವರಾತ್ರಿ ಮರುದಿನವೂ ಹಿಂದೂ ಉದ್ಯೋಗಿಗಳಿಗೆ ರಜೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಸಂಬಂಧ ಸರ್ಕಾರ ಮತ್ತು ಸಿಎಂಗೆ ಮನವಿ ಮಾಡಿರುವ ಸಂಘಟನೆಗಳು, ಈ ಬಗ್ಗೆ ಶೀಘ್ರ ಆದೇಶ ಮಾಡಬೇಕು. ಪ್ರತಿವರ್ಷ ಕೂಡ ಇದು ಜಾರಿಯಲ್ಲಿರುವಂತೆ ಆದೇಶ ಹೊರಡಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಯಾನಕ ಸ್ಫೋಟ ನಡೆಸಲು ಸ್ಕೆಚ್ ಹಾಕಿದ್ದ ಐವರು ಶಂಕಿತ ಉಗ್ರರ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, 4 ಸಜೀವ ಗ್ರೆನೇಡ್‌ಗಳನ್ನ ಸಿಸಿಬಿ ಅಧಿಕಾರಿಗಳು (CCB Officers) ಪತ್ತೆಹಚ್ಚಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ, ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ವಿದ್ವಂಸಕ ಕೃತ್ಯಗಳನ್ನ ಎಸಗಲು ಒಳಸಂಚು ನಡೆಸಿರುವುದು ಕಂಡುಬಂದಿತ್ತು. ಆರೋಪಿಗಳು ತಮ್ಮ ಕಾರ್ಯಸಾಧನೆಗಾಗಿ ಕೆಲ ವಾರಗಳಿಂದ ಅಕ್ರಮವಾಗಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ದುಷ್ಕೃತ್ಯಕ್ಕೆ ಬೇಕಾಗುವ ಸಲಕರಣೆಗಳನ್ನ ಸಂಗ್ರಹಿಸಿಕೊಂಡಿದ್ದರು. ಜು.19ರಂದು ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿ ಒಂದು ವಾರ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲು ತನಿಖಾಧಿಕಾರಿ ಸೇರಿ ಇಬ್ಬರು ಎಸಿಪಿ, 6 ಜನ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವಿಶೇಷ ತಂಡ ರಚಿಸಲಾಗಿದ್ದು, ತೀವ್ರಗತಿಯಲ್ಲಿ ಮುಂದುವರಿದಿದೆ ಎಂದು ಹೇಳಿದರು.
ವಿದ್ವಂಸಕ ಕೃತ್ಯ ಎಸಗಲು ಗ್ರೆನೇಡ್ ಸಂಗ್ರಹ:
ಬೆಂಗಳೂರಿನಲ್ಲಿ ದುಷ್ಕೃತ್ಯ ಎಸಗಲು ತಲೆ ಮರೆಸಿಕೊಂಡಿರುವ ಎ-2 ಆರೋಪಿ ಜುನೈದ್, ಎ-5 ಬೇರೋಬ್ಬ ವ್ಯಕ್ತಿಯ ಮೂಲಕ ಎ-5 ಆರೋಪಿ ತಬ್ರೇಜ್‌ಗೆ 4 ಹ್ಯಾಂಡ್ ಗ್ರೆನೇಡ್‌ಗಳನ್ನ ತಲುಪಿಸಿದ್ದಾನೆ. ಅವುಗಳನ್ನ ಕೋಡಿಗೆಹಳ್ಳಿಯ ಮನೆಯೊಂದರಲ್ಲಿ ಅಡಗಿಸಿಟ್ಟಿದ್ದರು. ಪೌಡರ್ ರೂಪದ ಕೆಮಿಕಲ್ ಬಳಸಿ ಪೆಟ್ಟಿಗೆಯೊಂದರಲ್ಲಿ ಅಡಗಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಕಿçಯ ದಳ (BDDS) ಮತ್ತು FSL ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೇನೆಡ್‌ಗಳನ್ನ ಪತ್ತೆಮಾಡಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರಿದಿದೆ.
ಮುಂಬೈ ಮಾದರಿ ಅಟ್ಯಾಕ್‌ಗೆ ಪ್ಲ್ಯಾನ್?
ಗ್ರೆನೇಟ್ ಪತ್ತೆಯಾದ ಬೆನ್ನಲ್ಲೇ ಶಂಕಿತ ಉಗ್ರರಿಂದ ಮುಂಬೈ ದಾಳಿ ಮಾದರಿಯಲ್ಲೇ ಅಟ್ಯಾಕ್‌ಗೆ ಪ್ಲ್ಯಾನ್ ನಡೆದಿತ್ತಾ ಅನ್ನೋ ಅನುಮಾನಗಳು ಹುಟ್ಟಿಕೊಂಡಿದೆ. ಕೂಮು ಸಂಘರ್ಷಕ್ಕೆ ದಾರಿ ಮಾಡಿ ಆ ಸ್ಥಳದಲ್ಲಿ ವಿದ್ವಂಸಕ ಕೃತ್ಯಗಳ ಎಸಗಲು ಪ್ಲ್ಯಾನ್ ಮಾಡಿದ್ರಾ? ಅನ್ನೋ ಪ್ರಶ್ನೆಗಳು ಮೂಡಿವೆ.
ಬೆಂಗಳೂರು: ಸಿಸಿಬಿ ಪೊಲೀಸರಿಂದ (CCB Police) ಬಂಧನಕ್ಕೊಳಗಾದ ಶಂಕಿತ ಉಗ್ರರ (Suspected Terrorists) ಟಾರ್ಗೆಟ್ ಬೆಂಗಳೂರು (Bengaluru) ಮಾತ್ರವಲ್ಲ ಜೊತೆಗೆ ಹಿಂದೂ ನಾಯಕರನ್ನು (Hindu Leaders) ಗುರಿಯಾಗಿಸಿಕೊಂಡಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ.
ಕೇವಲ ಜನನಿಬಿಡ ಪ್ರದೇಶಗಳಷ್ಟೆ ಇವರ ಟಾರ್ಗೆಟ್ ಆಗಿತ್ತು ಎಂದು ಬಂಧನದ ವೇಳೆ ಹೇಳಲಾಗಿತ್ತು. ಈಗ ಹಿಂದುತ್ವ ಪ್ರತಿಪಾದಿಸುವ ಹಿಂದೂ ಮುಖಂಡರು ಹಾಗೂ ರಾಜಕಾರಣಿಗಳ ಮೇಲೂ ಕಣ್ಣಿಟ್ಟಿದ್ದರು. ಇದೇ ಕಾರಣಕ್ಕೆ ಅಪಾರ ಪ್ರಮಾಣದ ಸ್ಫೋಟಕ ಸಾಮಾಗ್ರಿ ಹಾಗೂ ಪಿಸ್ತೂಲ್‍ಗಳನ್ನು ಸಂಗ್ರಹಿಸಿಕೊಂಡಿದ್ದರು ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ರೌಡಿಗಳಾಗಿ ಜೈಲು ಸೇರಿದ್ದವರಿಗೆ ಸಿಕ್ಕಿತು ಉಗ್ರರ ಪಾಠ!
ಶಂಕಿತರು ಉತ್ತರಪ್ರದೇಶದಿಂದ 7 ಕಂಟ್ರಿ ಮೇಡ್ ಪಿಸ್ತೂಲ್‍ಗಳನ್ನು ಬೆಂಗಳೂರಿಗೆ ತರಿಸಿದ್ದರು. ಗುಂಡುಗಳು ಹಾಗೂ ವಾಕಿ ಟಾಕಿಗಳನ್ನು ಸಹಚರರ ಮೂಲಕ ಶಂಕಿತರಿಗೆ ಜುನೈದ್ ತಲುಪಿಸುತ್ತಿದ್ದ. ವಿಶೇಷವೆಂದರೆ ಮದ್ದು ಗುಂಡುಗಳನ್ನು ತಂದುಕೊಟ್ಟವರು ಯಾರು ಎನ್ನುವ ಮಾಹಿತಿ ತಿಳಿಯದಂತೆ ನೋಡಿಕೊಳ್ಳಲಾಗುತ್ತಿತ್ತು. ಇದೇ ಜಾಗದಲ್ಲಿ ವಿದ್ವಂಸಕ ಕೃತ್ಯ ಎಸಗಬೇಕು ಎಂಬ ಟಾರ್ಗೆಟ್ ಇನ್ನೂ ಫಿಕ್ಸ್ ಮಾಡಿಕೊಳ್ಳದ ಶಂಕಿತರು ಜುನೈದ್‍ನ ಆದೇಶಕ್ಕಾಗಿ ಕಾಯುತ್ತಿದ್ದರು. ಅಲ್ಲದೇ ತಾನೇ ವಿದೇಶದಿಂದ ಬಂದು ಟಾರ್ಗೆಟ್ ನೀಡುವುದಾಗಿ ತಿಳಿಸಿದ್ದ.
ಶಂಕಿತರ ಗುಂಪಿನ ಮಾಸ್ಟರ್ ಮೈಂಡ್ ಜುನೈದ್ ಯಾವುದೇ ಆನ್‍ಲೈನ್ ವ್ಯವಹಾರವನ್ನೂ ಮಾಡುತ್ತಿರಲಿಲ್ಲ. ಬದಲಿಗೆ ವಾಟ್ಸಾಪ್ ಹಾಗೂ ಇನ್ನಿತರೆ ಮೊಬೈಲ್ ಆ್ಯಪ್‌ಗಳ ಮೂಲಕ ಇವರೊಂದಿಗೆ ಸಂಪರ್ಕದಲ್ಲಿದ್ದ. ಶಂಕಿತರ ಮೊಬೈಲ್‍ಗಳಲ್ಲಿ ಹಿಂದುತ್ವವಾದಿಗಳ ಹೆಸರು ಮತ್ತು ಫೋಟೊಗಳು ಶೇರ್ ಆಗಿರುವ ಸಾಧ್ಯತೆ ಇದೆ. ಇದಕ್ಕಾಗಿ ಮೊಬೈಲ್‍ಗಳ ಪರಿಶೀಲನೆಗೆ ಎಫ್‍ಎಸ್‍ಎಲ್‍ಗೆ ಸಿಸಿಬಿ ಪೊಲೀಸರು ಕಳಿಸಿದ್ದಾರೆ. ಇದನ್ನೂ ಓದಿ: 2 ದಿನದೊಳಗೆ ದೊಡ್ಡ ಮಟ್ಟದ ಸ್ಪೋಟಕ್ಕೆ ನಡೆದಿತ್ತು ಸಿದ್ಧತೆ!
ಬೆಂಗಳೂರು: ಹಿಂದೂ ಮುಖಂಡರ ಹತ್ಯೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಹಂತಕರು ದಿನಕ್ಕೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕುತ್ತಿದ್ದಾರೆ. ಮುಸ್ಲಿಂ ವಿರೋಧಿ ಕೆಲಸ ಮಾಡುವವರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ತರಬೇತಿ ಕೊಡಲಾಗುತ್ತಿತ್ತು. ಅಷ್ಟೇ ಅಲ್ಲದೇ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ ವೇತನ ಕೊಡುತ್ತಿದ್ದರಂತೆ.
ಕಳೆದ ಒಂದೆರಡು ತಿಂಗಳಿಂದ ಈ ಹಣ ಸಂದಾಯ ಆಗುತ್ತಿರಲಿಲ್ಲವಂತೆ. ಬರೋಬ್ಬರಿ ಕಳೆದ ಒಂದೂವರೆ ವರ್ಷದಿಂದ ಹಣ ಸಂದಾಯ ಆಗುತ್ತಿತ್ತು ಎನ್ನುವ ಮಾಹಿತಿಯನ್ನು ಆರೋಪಿಗಳು ಹೊರಹಾಕಿದ್ದಾರೆ. ಆದರೆ ಯಾರು, ಯಾವಾಗ ಎಲ್ಲಿ ಹಣ ಕೊಡುತ್ತಿದ್ದರು ಎನ್ನುವುದು ಮಾತ್ರ ಸ್ಪಷ್ಟವಾಗಿ ಹೇಳಿಲ್ಲ. ಬಂಧಿತರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್
ಈ ಹಂತಕರ ಉದ್ದೇಶ ಕೇವಲ ಸಿಎಎ ಪರ ಜನಜಾಗೃತಿ ಮಾಡಿದವರ ಹತ್ಯೆ ಮಾಡುವುದು ಅಷ್ಟೇ ಆಗಿರಲಿಲ್ಲ. ಮುಸ್ಲಿಂ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಹತ್ಯೆ ಮಾಡುವುದು ಉದ್ದೇಶವನ್ನು ಹೊಂದಿದ್ದರು. ಅದು ಕೂಡ ಇವರ ಮೇಲಿದ್ದ ಮಾಸ್ಟರ್ ಮೈಂಡ್ ಯಾವ ಟಾರ್ಗೆಟ್ ನೀಡುತ್ತಾನೋ ಅದನ್ನು ಮಾಡಿ ಮುಗಿಸುವುದಷ್ಟೇ ಇವರ ಕೆಲಸ ಆಗಿತ್ತು ಎಂಬ ಮೂಲಗಳಿಂದ ಮಾಹಿತಿ ಲಭಿಸಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬ್ಲಾಸ್ಟ್ ಮಾಡಬೇಕು, ಹಿಂದೂ ಮುಖಂಡರ ಹತ್ಯೆ ಮಾಡಬೇಕು ಅಂತ ಅಂದುಕೊಂಡಿದ್ದ ತಂಡವನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮೆಹಬೂಬ್ ಪಾಷಾ ಬಾಯಿಬಿಟ್ಟಿರೋ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.
ಅದು ಕೂಡ ಮುಖ್ಯಮಂತ್ರಿಗಳ ಜಿಲ್ಲೆ ಶಿವಮೊಗ್ಗದಲ್ಲಿ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಇಬ್ಬರು ಮಾಸ್ಟರ್ ಮೈಂಡ್ ಗಳು ಇದ್ದಾರೆ ಅನ್ನೋ ಮಾಹಿತಿಯನ್ನು ಮೆಹಬೂಬ್ ಪಾಷಾ ಬಾಯಿ ಬಿಟ್ಟಿದ್ದಾನೆ. ಮೆಹಬೂಬ್ ಪಾಷಾ ಕೇವಲ ಹುಡುಗರನ್ನು ನೇಮಕಾತಿ ಮಾಡಿಕೊಳ್ಳೋದು ಟ್ರೈನಿಂಗ್ ಕೊಡಿಸೋದು ಅಷ್ಟೇ. ತೀರ್ಥಹಳ್ಳಿಯಲ್ಲಿ ಇದ್ದವರು ಯಾವ ರೀತಿ ಕೆಲಸ ಮುಗಿಸಿಬೇಕು ಅಂತ ತೀರ್ಮಾನ ಮಾಡುತ್ತಾ ಇದ್ದರು. ಇದನ್ನೂ ಓದಿ: ಒಂದು ಹತ್ಯೆ ಯತ್ನ – ಆರು ಕೇಸ್ ರೀ ಓಪನ್
ಶ್ರೀಲಂಕಾದ ಬ್ಲಾಸ್ಟ್ ನಲ್ಲಿ ಪಾಲ್ಗೊಂಡಿದ್ದ ಸಂಘಟನೆಯವರೇ ಇದರಲ್ಲೂ ಇದ್ದಾರೆ ಅನ್ನೋ ಅನುಮಾನ ಕಾಡುತ್ತಾ ಇದೆ. ಮೆಹಬೂಬ್ ಪಾಷಾ ಬಂಧನವಾದ ಕೂಡಲೇ ತೀರ್ಥಹಳ್ಳಿಯ ಇಬ್ಬರು ಪರಾರಿಯಾಗಿದ್ದಾರೆ. ಸದ್ಯ ಆ ಇಬ್ಬರು ಸಿಕ್ಕರೆ ಸ್ಫೋಟಕ ಮಾಹಿತಿ ಬಹಿರಂಗವಾಗಲಿದೆ. ಇದನ್ನೂ ಓದಿ: ಒಬ್ಬ ಹಿಂದೂ ಆಗಿ ಸಾಯೋದಕ್ಕೆ ಹೆದರಿ ಬದುಕುವ ಜೀವ ನನ್ನದಲ್ಲ: ಸೂಲಿಬೆಲೆ