Tag: ಹಿಂದೂ ಮಹಿಳೆ

  • ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯ – ನಿರಾಕರಿಸಿದ ಹಿಂದೂ ವಿವಾಹಿತೆ ಮೇಲೆ ಅತ್ಯಾಚಾರ

    ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯ – ನಿರಾಕರಿಸಿದ ಹಿಂದೂ ವಿವಾಹಿತೆ ಮೇಲೆ ಅತ್ಯಾಚಾರ

    ಇಸ್ಲಾಮಾಬಾದ್: ವಿವಾಹಿತ ಹಿಂದೂ ಮಹಿಳೆಯೊಬ್ಬರನ್ನು (Hindu Women) ಅಪಹರಿಸಿ, ಆಕೆ ಇಸ್ಲಾಂಗೆ (Islam) ಮತಾಂತರಗೊಳ್ಳಲು (Conversion) ನಿರಾಕರಿಸಿದ್ದಕ್ಕೆ ಸತತ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿರುವ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

    ಅಪಹರಣಕಾರರು ಇಸ್ಲಾಂಗೆ ಮತಾಂತರಗೊಳ್ಳುವಂತೆ ಮಹಿಳೆಯನ್ನ ಬೆದರಿಸಿದ್ದಾರೆ. ಆಕೆ ತನ್ನ ಧರ್ಮ ಬದಲಾಯಿಸಲು ನಿರಾಕರಿಸಿದ್ದರಿಂದ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮೊದಲು ಕ್ಷೇತ್ರ ಹುಡುಕಿಕೊಳ್ಳಲಿ, ಆಮೇಲೆ JDS ಬಗ್ಗೆ ಮಾತಾಡಲಿ – ಸಿ.ಎಂ ಇಬ್ರಾಹಿಂ

    ಪಾಕಿಸ್ತಾನದ (Pakistan) ಉಮರ್‌ಕೋಟ್ ಜಿಲ್ಲೆಯ ಸಮರೋ ಪಟ್ಟಣದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಸಂತ್ರಸ್ತ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿರುವ ವೀಡಿಯೋನಲ್ಲಿ ಹೇಳಿಕೊಂಡಿದ್ದಾರೆ. ಸಂತ್ರಸ್ತೆ ದೂರು ನೀಡಿದ್ದರೂ ಮಿರ್‌ಪುರ್ಖಾಸ್‌ನ ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ. ಸದ್ಯ ಸಂತ್ರಸ್ತ ಮಹಿಳೆ ಹಾಗೂ ಕುಟುಂಬಸ್ಥರು ಪೊಲೀಸ್ ಠಾಣೆಯ ಮುಂದೆಯೇ ಧರಣಿ ಕುಳಿತಿದ್ದು, ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

    ಸಂತ್ರಸ್ತೆ ಹೇಳಿದ ವೀಡಿಯೋನಲ್ಲಿ ಏನಿದೆ?
    ಇಬ್ರಾಹಿಂ ಮ್ಯಾಂಗ್ರಿಯೋ, ಪುನ್ಹೋ ಮ್ಯಾಂಗ್ರಿಯೋ ಮತ್ತವರ ಸಹಚರರು ನನ್ನನ್ನ ಅಪಹರಿಸಿದ್ದರು. ಅಲ್ಲದೇ ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆಯೊಡ್ಡಿದ್ದರು. ಮತಾಂತರಗೊಳ್ಳಲು ನಿರಾಕರಿಸಿದಾಗ ಸತತ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ನಂತರ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಮನೆಗೆ ಮರಳಿದೆ ಎಂದು ಸಂತ್ರಸ್ತೆ ವೀಡಿಯೋನಲ್ಲಿ ನೋವು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾರಿಗೆ ಬಸ್‌ನಲ್ಲಿ ಡ್ರೈವರ್‌ಗೆ ಚಾಕು ತೋರಿಸಿ, ಪ್ರಯಾಣಿಕನ ಹಣ ದರೋಡೆ

    ಹೆಚ್ಚಿನ ಹಿಂದೂಗಳು ನೆಲೆಸಿರುವ ಪಾಕಿಸ್ತಾನದ ಥಾರ್, ಉಮರ್‌ಕೋಟ್, ಮಿರ್‌ಪುರ್ಖಾಸ್, ಘೋಟ್ಕಿ ಮತ್ತು ಖೈರ್‌ಪುರ್ ಪ್ರದೇಶಗಳಲ್ಲಿ ಹೆಣ್ಣುಮಕ್ಕಳ ಅಪಹರಣ, ಬಲವಂತದ ಮತಾಂತರ ಬಹುದೊಡ್ಡ ಸಮಸ್ಯೆಯಾಗಿದೆ. ಕಳೆದ ವರ್ಷವೂ ಹಿಂದೂ ಅಪ್ರಾಪ್ತೆ, ಇಲ್ಲಿನ ನ್ಯಾಯಾಲಯದಲ್ಲಿ ಬಲವಂತದಿಂದ ಇಸ್ಲಾಂಗೆ ಮತಾಂತರಗೊಂಡು ನಂತರ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ, ಬಾಲಕಿಯರ ಕಿಡ್ನಾಪ್- ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮದುವೆ

    ಇಸ್ಲಾಮಾಬಾದ್: ಅಲ್ಪಸಂಖ್ಯಾತ ಹಿಂದೂಗಳ (Hindu Community) ಮೇಲೆ ಪಾಕಿಸ್ತಾನದಲ್ಲಿ (Pakistan) ನಿರಂತರ ದೌರ್ಜನ್ಯ ಮುಂದುವರಿದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮತ್ತೊಂದು ಘಟನೆ ನಡೆದಿದೆ.

    ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆ (Hindu Women) ಮತ್ತು ಇಬ್ಬರು ಬಾಲಕಿಯರನ್ನು ಕಿಡ್ನ್ಯಾಪ್‌ (Kidnap) ಮಾಡಲಾಗಿದ್ದು, ಅವರಲ್ಲಿ ಇಬ್ಬರನ್ನು ಬಲವಂತವಾಗಿ ಇಸ್ಲಾಂಗೆ (Islam) ಮತಾಂತರಿಸಿ, ಮದುವೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಮೀನಾ ಮೇಘವಾರ್ (14) ಎಂಬ ಹಿಂದೂ ಬಾಲಕಿಯನ್ನು ನಾಸರ್‌ಪುರ ಪ್ರದೇಶದಿಂದ ಅಪಹರಿಸಲಾಗಿದೆ. ಮೀರ್‌ಪುರ್‌ಖಾಸ್ ಪಟ್ಟಣದ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದ ಮತ್ತೊಬ್ಬ ಬಾಲಕಿಯನ್ನೂ ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಫ್ರೆಂಡ್ಸ್ ಜೊತೆ ಪಾರ್ಟಿಗೆ ಬಂದಿದ್ದ ಮಹಿಳೆ ಬಟ್ಟೆ ಹರಿದು ಬೌನ್ಸರ್ಸ್‍ನಿಂದ ಹಲ್ಲೆ

    ಮತ್ತೊಂದೆಡೆ ವಿವಾಹಿತ ಹಿಂದೂ ಮಹಿಳೆಯೊಬ್ಬರು ಮೀರ್‌ಪುರ್‌ಖಾಸ್‌ನಿಂದ ಕಾಣೆಯಾಗಿದ್ದು, ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ನಂತರ ಅವರು ಮುಸ್ಲಿಂ (Muslim) ವ್ಯಕ್ತಿಯನ್ನು ವಿವಾಹವಾಗಿದ್ದಾರೆ. ಮಹಿಳೆಗೆ ಮೂರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಮಹಿಳೆಯ ಪತಿ ರವಿ ಕುರ್ಮಿ ಅವರು ದೂರು ನೀಡಿದ್ದು, ಎಫ್‌ಐಆರ್ (FIR) ದಾಖಲಿಸಲು ಪೊಲೀಸರು (Police) ನಿರಾಕರಿಸಿದ್ದಾರೆ ಎನ್ನಲಾಗಿದೆ. ನೆರೆಯ ಅಹ್ಮದ್ ಚಾಂಡಿಯೊ ಎಂಬಾತ ತನ್ನ ಪತ್ನಿಗೆ ಹಿಂಸೆ ನೀಡುತ್ತಿದ್ದ. ಬಲವಂತವಾಗಿ ಅಪಹರಿಸಿ ಇಸ್ಲಾಂಗೆ ಮತಾಂತರಿಸಿದ್ದಾನೆ ಎಂದು ರವಿ ಆರೋಪಿಸಿದ್ದಾರೆ.

    ಆದರೆ ವಿವಾಹಿತ ಮಹಿಳೆ ರಾಖಿ ತನ್ನ ಸ್ವಂತ ಇಚ್ಛೆಯ ಮೇರೆಗೆ ಮತಾಂತರಗೊಂಡಿರುವುದಾಗಿಯೂ, ಮುಸ್ಲಿಂ ಪುರುಷನನ್ನು ಮದುವೆಯಾಗಿರುವುದಾಗಿಯೂ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೂರೂ ಪ್ರಕರಣಗಳನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಮೀರ್‌ಪುರ್‌ಖಾಸ್ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಭೋಪಾಲ್: ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದ ಎಂಬ ಕಾರಣಕ್ಕೆ ಮುಸ್ಲಿಂ ವ್ಯಕ್ತಿ ಹಾಗೂ ಹಿಂದೂ ವಿವಾಹಿತೆಯನ್ನು ಬಲವಂತವಾಗಿ ಕೆಳಗಿಳಿಸಿ ಬಜರಂಗದಳದ ಸದಸ್ಯರು ಉಜ್ಜಯಿನಿ ರೈಲ್ವೆ ಪೊಲೀಸ್ ಠಾಣೆಗೆ ಎಳೆದೊಯ್ದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಮುಸ್ಲಿಂ ವ್ಯಕ್ತಿ ಮತ್ತು ಹಿಂದೂ ಮಹಿಳೆ ರೈಲಿನಲ್ಲಿ ಜೊತೆಯಾಗಿ ಪ್ರಯಾಣಿಸಿದ್ದಾರೆ. ಇದು ಲವ್ ಜಿಹಾದ್ ಎಂದು ಭಜರಂಗದಳದ ಸದಸ್ಯರು ಆರೋಪಿಸಿದ್ದಾರೆ. ನಂತರ ಮುಸ್ಲಿಂ ವ್ಯಕ್ತಿಯನ್ನು ರೈಲಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಬಲವಂತವಾಗಿ ಎಳೆದುಕೊಂಡು ಹೋಗಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸ್ನಾನದ ವೀಡಿಯೋ ಚಿತ್ರೀಕರಿಸಿ ಬ್ಲ್ಯಾಕ್‍ಮೇಲ್ ಮಾಡುತ್ತಾ ಅತ್ತಿಗೆಯನ್ನೇ ರೇಪ್ ಮಾಡ್ದ!

    train

    ಇಂದೋರ್‌ನ ಈ ಇಬ್ಬರು ಪ್ರಯಾಣಿಕರು ಮತ್ತು ಕುಟುಂಬದ ಸ್ನೇಹಿತರನ್ನು ಸರ್ಕಾರಿ ರೈಲ್ವೆ ಪೊಲೀಸರು ವಿಚಾರಣೆಗೆ ಒಳಪಡಿಸಿದರು. ಇವರಿಬ್ಬರ ಪೋಷಕರು ಬರುವವರೆಗೂ ಪೊಲೀಸ್ ಠಾಣೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರು. ನಂತರ ಅವರ ಹೇಳಿಕೆಗಳನ್ನು ದಾಖಲಿಸಿ ಬಿಡುಗಡೆ ಮಾಡಿ ಕಳುಹಿಸಿದರು.

    https://twitter.com/AshrafFem/status/1483308207116533760

    ಈ ಘಟನೆ ಜ.14ರಂದು ನಡೆದಿದೆ. ಮುಸ್ಲಿಂ ವ್ಯಕ್ತಿ ಆಸಿಫ್ ಶೇಖ್ ಎಂದು ಗುರುತಿಸಲಾಗಿದ್ದು, ಈತ ಎಲೆಕ್ಟ್ರಾನಿಕ್ ಅಂಗಡಿಯೊಂದರ ಮಾಲೀಕ. ಮಹಿಳೆ ಖಾಸಗಿ ಶಾಲೆಯೊಂದರ ಶಿಕ್ಷಕಿಯಾಗಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಬಾಂಗ್ಲಾ ನಟಿ ಶವವಾಗಿ ಗೋಣಿಚೀಲದಲ್ಲಿ ಪತ್ತೆ

    ನಾವು ಭಜರಂಗದಳದವರು ಎಂದು ಪರಿಚಯಿಸಿಕೊಂಡಿರುವ ಮೂವರು ಸದಸ್ಯರು ಮುಸ್ಲಿಂ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆತನನ್ನು ರೈಲ್ವೆ ಪೊಲೀಸ್ ಠಾಣೆಗೆ ಎಳೆದೊಯ್ಯುತ್ತಿದ್ದಾಗ, ಮಹಿಳೆಯೂ ಅವರ ಹಿಂದೆ ಸಾಗುತ್ತಿರುವ ದೃಶ್ಯದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    POLICE JEEP

    ಮತ್ತೊಂದು ವೀಡಿಯೋದಲ್ಲಿ, ನಿಮ್ಮ ತಪ್ಪು ತಿಳಿವಳಿಕೆಯಿಂದ ನನ್ನ ಜೀವನವೇ ಹಾಳಾಯಿತು. ನಾನು ವಯಸ್ಕಳು, ಶಾಲೆಯಲ್ಲಿ ಶಿಕ್ಷಕಿಯಾಗಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದೇನೆ’ ಎಂದು ಭಜರಂಗದಳದ ಸದಸ್ಯನೊಬ್ಬನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದಳದ ಸದಸ್ಯನೊಬ್ಬ ಪಿಂಟು ಕೌಶಲ್ ಎಂದು ಗುರುತಿಸಲಾಗಿದ್ದು, ನಿನ್ನೊಂದಿಗೆ ನಾನು ಮಾತನಾಡುವುದಿಲ್ಲ ಎಂದು ಮಹಿಳೆಗೆ ಪ್ರತಿಕ್ರಿಯಿಸುತ್ತಿರುವುದು ಕಂಡುಬಂದಿದೆ.

    ಘಟನೆ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಗುಪ್ತ ಮಾತನಾಡಿ, ಶೇಖ್ ಮತ್ತು ಮಹಿಳೆ ತಮ್ಮ ಕುಟುಂಬದವರಿಂದ ಪರಸ್ಪರ ಪರಿಚಿತರು ಮತ್ತು ಸ್ನೇಹಿತರು. ಇದು ಲವ್ ಜಿಹಾದ್ ಎಂದು ಆರೋಪಿಸಿ ಭಜರಂಗದಳದವರು ಇಬ್ಬರನ್ನೂ ಠಾಣೆಗೆ ಕರೆತಂದಿದ್ದರು. ನಾವು ಅವರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ಇಬ್ಬರೂ ವಯಸ್ಕರು, ಯಾವುದೇ ಅಪರಾಧವಿಲ್ಲದ ಕಾರಣ ಬಿಟ್ಟು ಕಳುಹಿಸಿದ್ದೇವೆ. ಭಜರಂಗದಳದವರ ವಿರುದ್ಧವೂ ಯಾವುದೇ ದೂರು ಕೇಳಿಬರದ ಕಾರಣ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ

    ಭಜರಂಗದಳದ ವಿದ್ಯಾರ್ಥಿಗಳ ವಿಭಾಗ ವಿಎಚ್‌ಪಿಯ ಮಾಳವ ಪ್ರಾಂತದ ಪ್ರಚಾರ ಪ್ರಮುಖ್ ಕುಂದನ್ ಚಂದ್ರಾವತ್ ಪ್ರತಿಕ್ರಿಯಿಸಿ, ಹಿಂದೂ ಮಹಿಳೆಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ದಾರಿ ತಪ್ಪಿಸಿ ತನ್ನೊಂದಿಗೆ ಕರೆದೊಯ್ಯುತ್ತಿದ್ದಾನೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿತ್ತು. ಹಿಂದೂ ಸಹೋದರಿಯರ ರಕ್ಷಣೆಗಾಗಿ ನಮ್ಮ ಕಾರ್ಯಕರ್ತರು ಮಧ್ಯಪ್ರವೇಶಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಈ ಪ್ರಕ್ರಿಯೆಯಲ್ಲಿ ವ್ಯಕ್ತಿ ಮತ್ತು ನಮ್ಮ ಸದಸ್ಯರೊಂದಿಗೆ ಸಣ್ಣ ಜಗಳವಾಗಿದೆ ಅಷ್ಟೇ. ಯಾವುದೇ ಹಲ್ಲೆ ಘಟನೆ ನಡೆದಿಲ್ಲ. ನಂತರ ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಹಿಂದೂ ಮಹಿಳೆಯ ಶವವನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದ ಮುಸ್ಲಿಮರು

    ಹಿಂದೂ ಮಹಿಳೆಯ ಶವವನ್ನು ಹೊತ್ತು ಅಂತ್ಯಸಂಸ್ಕಾರ ಮಾಡಿದ ಮುಸ್ಲಿಮರು

    ಶ್ರೀನಗರ: ಕೋಮು ಸೌಹಾರ್ದತೆಗೆ ಸಾಕ್ಷಿ ಎಂಬಂತೆ ಮುಸ್ಲಿಂ ಸಮುದಾಯದ ಮಂದಿ, ಹಿಂದೂ ಪಂಡಿತ ಸಮುದಾಯ ಮಹಿಳೆಯ ಅಂತ್ಯಕ್ರಿಯಲ್ಲಿ ಭಾಗವಹಿಸಿರುವ ಘಟನೆ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಮೋತಿಲಾಲ್ ಕೌಲ್ ಎಂಬವರ ಪತ್ನಿ ರಾಣಿಕೌಲ್(65) ಶನಿವಾರ ಮೃತಪಟ್ಟಿದ್ದಾರೆ. ಮಹಿಳೆಯ ಅಂತ್ಯಕ್ರಿಯೆಗೆ ಆಕೆಯ ಸಂಬಂಧಿಕರು ದೆಹಲಿಯಿಂದ ಬರಬೇಕಾದ್ದರಿಂದ ಒಂದು ದಿನ ತಡವಾಗಿ ಮಹಿಳೆಯ ಅಂತ್ಯಕ್ರಿಯೆಯನ್ನು ನಡೆಸಬೇಕಾಯಿತು.

    ಸುಮಾರು 600 ಮುಸ್ಲಿಂ ಸಮುದಾಯದವರ ಮನೆಯ ಮಧ್ಯೆ ಮೋತಿಲಾಲ್ ಕೌಲ್ ಮನೆ ಇದ್ದು, ಭಾನುವಾರ ಅಲ್ಲಿನ ಸ್ಥಳೀಯ ಮುಸ್ಲಿಮರು ಮಹಿಳೆಯ ಅಂತ್ಯಕ್ರಿಯೆಗೆ ಸಹಾಯವನ್ನು ಮಾಡಿದ್ದಾರೆ. ಮಹಿಳೆಯ ದೇಹವನ್ನು ದಹಿಸಲು ಮರವನ್ನು ಸಂಗ್ರಹಿಸಿ, ಶವವನ್ನು ಸ್ಮಶಾನದವರೆಗೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಅಲ್ಲದೆ ಪಂಡಿತರ ಪದ್ದತಿಗೆ ಅನುಗುಣವಾಗಿ ಕೊನೆಯ ಅಂತಿಮ ವಿಧಿ ವಿಧಾನವನ್ನು ಮಾಡಿದ್ದಾರೆ.

    ಕಾಶ್ಮೀರದ ಬಾರಾಮುಲ್ಲಾದಲ್ಲಿ ಪಂಡಿತ್ ಸಮುದಾಯದ ಮಹಿಳೆಯ ಅಂತಿಮ ವಿಧಿವಿಧಾನ ಮಾಡಿದ ಮುಸ್ಲಿಮರ ವೀಡಿಯೋ ವೈರಲ್ ಆಗುತ್ತಿದೆ.

  • ಪಾಕ್ ವಿಧಾನಸಭಾ ಎಲೆಕ್ಷನ್ ನಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆ ಸ್ಪರ್ಧೆ

    ಪಾಕ್ ವಿಧಾನಸಭಾ ಎಲೆಕ್ಷನ್ ನಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆ ಸ್ಪರ್ಧೆ

    ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಾಂತೀಯ ವಿಧಾನಸಭೆ ಚುನಾವಣೆ ಇದೇ ತಿಂಗಳ 15ರಂದು ನಡೆಯಲಿದ್ದು, ಮೊದಲ ಬಾರಿಗೆ ಹಿಂದೂ ಮಹಿಳೆಯೊಬ್ಬರು ಸ್ಪರ್ಧೆ ಮಾಡುತ್ತಿದ್ದಾರೆ.

    ಸಿಂಧ್ ಪ್ರಾಂತ್ಯಕ್ಕೆ ಸೇರಿರುವ ಸುನೀತಾ ಪರ್ಮಾರ್ (31) ಅಲ್ಪಸಂಖ್ಯಾತ ಸಮುದಾಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮೂಲತಃ ಮೇಘರ್ ಸಮುದಾಯಕ್ಕೆ ಸೇರಿರುವ ಸುನಿತಾ ಅವರು, ಹೆಚ್ಚು ಹಿಂದೂ ಸಮುದಾಯದ ಜನಸಂಖ್ಯೆ ಹೊಂದಿರುವ ಥಾರ್ಪಾರ್ಕರ್ ಜಿಲ್ಲೆಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ.

    ಈ ಕುರಿತು ಸುನಿತಾ ಅವರು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ತಮ್ಮ ಕ್ಷೇತ್ರ ಜನರ ಮೂಲಭೂತ ಅಗತ್ಯತೆಗಳನ್ನು ಪೂರೈಸಲು ಈ ಹಿಂದಿನ ಸರ್ಕಾರಗಳು ವಿಫಲವಾಗಿದೆ. ಆದ್ದರಿಂದ ಜನರು ಉತ್ತಮ ಜೀವನ ನಡೆಸುವಂತೆ ಮಾಡಲು ಹಾಗೂ ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದಾಗಿ ವರದಿಯಾಗಿದೆ.

    ಕಳೆದ ಮಾರ್ಚ್ ನಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮೂಲಕ ಹಿಂದೂ ದಲಿತ ಮಹಿಳೆ ಕೃಷ್ಣ ಕುಮಾರಿ ಎಂಬವರು ಮೊದಲ ಸೆನೆಟರ್ ಆಗಿ ಆಯ್ಕೆ ಆಗಿದ್ದರು.