Tag: ಹಿಂದೂ ಬಾಲಕಿ

  • 14ರ ಹಿಂದೂ ಬಾಲಕಿ ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರ – ಪೋಷಕರ ಜೊತೆ ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಣೆ

    14ರ ಹಿಂದೂ ಬಾಲಕಿ ಕಿಡ್ನ್ಯಾಪ್‌ ಮಾಡಿ ಇಸ್ಲಾಂಗೆ ಮತಾಂತರ – ಪೋಷಕರ ಜೊತೆ ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಣೆ

    ಇಸ್ಲಾಮಾಬಾದ್: ಕಿಡ್ನ್ಯಾಪ್‌ ಆಗಿ ಬಲವಂತವಾಗಿ ಇಸ್ಲಾಂಗೆ (Islam) ಮತಾಂತರಗೊಂಡು (Conversion) ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದ 14 ವರ್ಷದ ಹಿಂದೂ ಬಾಲಕಿಯನ್ನು ಆಕೆಯ ಪೋಷಕರ ಜೊತೆಗೆ ಕಳುಹಿಸಿಕೊಡಲು ಪಾಕಿಸ್ತಾನ ಕೋರ್ಟ್‌ (Pakistan Court) ನಿರಾಕರಿಸಿದೆ.

    ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 14 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿತ್ತು. ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪೋಷಕರ ಜೊತೆಗೆ ಹೋಗಲು ಆಕೆ ಬಯಸಿದರೂ, ಕಳುಹಿಸಲು ಪಾಕ್‌ ಕೋರ್ಟ್‌ ನಿರಾಕರಿಸಿದೆ. ಇದನ್ನೂ ಓದಿ: ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ

    ಜೂನ್ 2 ರಂದು ದಕ್ಷಿಣ ಸಿಂಧ್ ಪ್ರಾಂತ್ಯದ ಬೆನಜಿರಾಬಾದ್ ಜಿಲ್ಲೆಯ ನಿವಾಸಿಯಾಗಿದ್ದ ಬಾಲಕಿಯನ್ನು ಆಕೆಯ ತಾಯಿಯ ಮುಂದೆಯೇ ಗನ್‌ ತೋರಿಸಿ ಬೆದರಿಸಿ ಅಪಹರಿಸಲಾಗಿತ್ತು. ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಪೊಲೀಸ್‌ ಠಾಣೆಯಲ್ಲಿ ಆಕೆಯ ತಂದೆ ದೂರು ದಾಖಲಿಸಿದ್ದರು.

    ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿ ಮುಸ್ಲಿಂ ವ್ಯಕ್ತಿಯೊಂದಿಗೆ ಆಕೆಯನ್ನು ಮದುವೆ ಮಾಡಲಾಗಿದೆ. ಈ ಸಂಬಂಧದ ವೀಡಿಯೋ ಕೂಡ ಮಾಡಲಾಗಿತ್ತು. ಅಪಹರಣಕ್ಕೊಳಗಾದ ಐದ ದಿನಗಳ ನಂತರ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಳಲು ತೋಡಿಕೊಂಡು ವೀಡಿಯೋ ಮಾಡಿದ್ದಳು. ನಂತರ ಕಾರ್ಯಪ್ರವೃತ್ತರಾದ ಮನೆಯವರು ಮನೆಯೊಂದರಿಂದ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಜಗತ್ತಿನ ಅತ್ಯಂತ ಬಡರಾಷ್ಟ್ರ ಸೊಮಾಲಿಯಾದಲ್ಲಿ ಬಾಂಬ್ ಸ್ಫೋಟವಾಗಿ 25 ಮಕ್ಕಳು ಸಾವು

    PAK

    ನಂತರ ಆಕೆಯನ್ನು ಲರ್ಕಾನಾದ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತನ್ನನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ್ದಾರೆ. ನಾನು ನನ್ನ ಪೋಷಕರ ಬಳಿಗೆ ಹೋಗಬೇಕು ಎಂದು ನ್ಯಾಯಾಧೀಶರ ಮುಂದೆ ಬಾಲಕಿ ಅಳಲು ತೋಡಿಕೊಂಡಿದ್ದಾಳೆ. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜೂ.12 ಕ್ಕೆ ಮುಂದೂಡಿದೆ.

    ಹಿಂದೂಗಳು ಪಾಕಿಸ್ತಾನದಲ್ಲಿ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ. ಅಧಿಕೃತ ಮಾಹಿತಿ ಪ್ರಕಾರ, ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಇದನ್ನೂ ಓದಿ: ಟ್ರಂಪ್‌ ಮನೆಯ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ರಹಸ್ಯ ದಾಖಲೆಗಳು

  • ಪಾಕ್‍ನಲ್ಲಿ 13ರ ಹಿಂದೂ ಬಾಲಕಿಗೆ ಮದ್ಯ ಕುಡಿಸಿ ಗ್ಯಾಂಗ್ ರೇಪ್

    ಪಾಕ್‍ನಲ್ಲಿ 13ರ ಹಿಂದೂ ಬಾಲಕಿಗೆ ಮದ್ಯ ಕುಡಿಸಿ ಗ್ಯಾಂಗ್ ರೇಪ್

    ಇಸ್ಲಮಾಬಾದ್: ಅಪ್ರಾಪ್ತ ಹಿಂದೂ ಬಾಲಕಿಗೆ ಮದ್ಯ ಕುಡಿಸಿ ಇಬ್ಬರು ಕಾಮುಕರು ಸಾಮುಹಿಕ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಪಾಕಿಸ್ತಾನದ ಸಿಂಧ್ ನ ತಾಂಡೋ ಮೊಹಮ್ಮದ್ ಖಾನ್ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ತಾಂಡೋ ಮೊಹಮ್ಮದ್ ಖಾನ್’ನಲ್ಲಿ ಜೂನ್ 7 ರಂದು 13 ವರ್ಷದ ಹಿಂದೂ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಆದರೆ ಘಟನೆ ನಡೆದು ಒಂದು ದಿನದ ಬಳಿಕ ಈ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿಯನ್ನು ಅಪಹರಿಸಿ, ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಇಬ್ಬರು ಆರೋಪಿಗಳು ಈ ದುಷ್ಕೃತ್ಯ ಎಸೆಗಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಟದ ಮೈದಾನದಲ್ಲಿ ಎಸೆದು ಹೋಗಿದ್ದಾರೆ.

    ಶುಕ್ರವಾರದಂದು ನಮ್ಮ ಮಗಳು ಕೆಲವು ದಿನಸಿ ಸಾಮಾಗ್ರಿಗಳನ್ನು ತರಲು ಅಂಗಡಿಗೆ ತೆರಳಿದ್ದಳು. ಈ ವೇಳೆ ಅಂಗಡಿ ಬಳಿ ಇದ್ದ ಯುವಕರು ಆಕೆಯನ್ನು ಕರೆದು ಅಪಹರಿಸಿದ್ದಾರೆ. ಬಳಿಕ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ, ಅತ್ಯಾಚಾರ ಮಾಡಿದ್ದಾರೆ. ಕತ್ತಲಾದರೂ ಮಗಳು ಮನೆಗೆ ವಾಪಾಸ್ ಬರದಿದ್ದಾಗ ನಾನು ಗಾಬರಿಯಾಗಿ ನನ್ನ ಮಗನ ಜೊತೆ ಆಕೆಯನ್ನು ಹುಡುಕಲು ಹೋದೆ. ಆಗ ಸಕ್ಕರೆ ಮಿಲ್ ಬಳಿಯ ಮೈದಾನದಲ್ಲಿ ಪ್ರಜ್ಞೆ ಇಲ್ಲದ ಸ್ಥಿಯಲ್ಲಿ ಬಿದ್ದಿದ್ದಳು. ತಕ್ಷಣ ನಾವು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದೆವು ಎಂದು ಬಾಲಕಿ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

    ಬಾಲಕಿಗೆ ಎಚ್ಚರವಾದ ಬಳಿಕ ಆಕೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ಆಕೆಯನ್ನು ಹೈದಾರಬಾದ್‍ನ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಬಾಲಕಿಗೆ ವಿವಿಧ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿದ ಬಳಿಕ ಅತ್ಯಾಚಾರ ನಡೆದಿರುವ ಬಗ್ಗೆ ಸ್ಪಷ್ಟವಾಗಿದೆ. ತದನಂತರ ಬಾಲಕಿ ತುಸು ಚೇತರಿಸಿಕೊಂಡ ಮೇಲೆ ಆರೋಪಿಗಳನ್ನು ಗುರುತಿಸಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಸದ್ಯ ಇಬ್ಬರೂ ಆರೋಪಿಗಳನ್ನು ಸ್ಥಳೀಯ ನ್ಯಾಯಲಯವೂ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.