Tag: ಹಿಂದೂ ಧರ್ಮ

  • ಹಿಂದೂ ಧರ್ಮದ ಜೊತೆ ಕ್ರಿಶ್ಚಿಯನ್ ಸೇರ್ಪಡೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿದೆ: ಸಿದ್ದರಾಮಯ್ಯ

    ಹಿಂದೂ ಧರ್ಮದ ಜೊತೆ ಕ್ರಿಶ್ಚಿಯನ್ ಸೇರ್ಪಡೆ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಆಗಿದೆ: ಸಿದ್ದರಾಮಯ್ಯ

    – ಅನಗತ್ಯ ಇರುವುದನ್ನು ಗಣತಿಯಿಂದ ತಗೆದು ಹಾಕುತ್ತೇವೆ ಎಂದ ಸಿಎಂ

    ಗದಗ: ಹಿಂದೂ (Hindu) ಧರ್ಮದ ಜೊತೆ ಕ್ರಿಶ್ಚಿಯನ್ ಸೇರ್ಪಡೆ ಬಗ್ಗೆ ಸಚಿವ ಸಂಪುಟದಲ್ಲಿ (Cabinet Meet) ಚರ್ಚೆ ಆಗಿದೆ. ಅನಗತ್ಯ ಇರುವುದನ್ನು ಗಣತಿಯಿಂದ (Caste Census) ತಗೆದು ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

    ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣತಿಗೆ 1,45,000 ಶಿಕ್ಷಕರನ್ನು ನೇಮಿಸಲಾಗಿದೆ. 15 ದಿನಗಳ ಕಾಲ ಮನೆ ಮನೆಗೂ ಹೋಗಿ ಸಮೀಕ್ಷೆ ಮಾಡುತ್ತಾರೆ. ಇದು ಜಾತಿ ಗಣತಿ, ಸಮೀಕ್ಷೆ ಅಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಿಕ್ಷೆ ಮಾಡುತ್ತಾರೆ. ಅವಕಾಶದಿಂದ ವಂಚಿತರಾದವರಿಗೆ ಮೊದಲ ಆದ್ಯತೆಗೆ ಸಮೀಕ್ಷೆ ಮಾಡಲಾಗುತ್ತಿದೆ ಎಂದರು. ಸಮೀಕ್ಷೆ ಮೂಲಕ ಸಮಾಜ ಒಡೆಯುವ ಷಡ್ಯಂತರ ನಡೆಯುತ್ತಿದೆ ಎಂಬ ವಚನಾನಂದ ಶ್ರೀ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಂದೆ ಕೇಂದ್ರ ಸರ್ಕಾರ ಜಾತಿಗಣತಿ ಮಾಡುತ್ತಿದೆ, ಅಲ್ಲಿ ಷಡ್ಯಂತ್ರ ಇದೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ತರಾತುರಿ ಜಾತಿಗಣತಿ, ಜಾತಿಗಳ ಜೊತೆ ಕ್ರಿಶ್ಚಿಯನ್ ಧರ್ಮ ಸೇರಿಸುವುದು ಬೇಡ: ನಿರ್ಮಲಾನಂದ ಶ್ರೀಗಳ ಎಚ್ಚರಿಕೆ

    ಸಮೀಕ್ಷೆಗೆ ಕೆಲವು ಸಚಿವರು, ಶಾಸಕರು ವಿರೋಧ ಕುರಿತು ಮಾತನಾಡಿ, ಸಮಿಕ್ಷೆಗೆ ಸಚಿವರು, ಶಾಸಕರು ಯಾರೂ ವಿರೋಧ ಮಾಡಿಲ್ಲ. ಸಮಾಜದಲ್ಲಿ ಸಮಾನತೆ ತರಬೇಕಿದ್ದರೆ ಅವಕಾಶದಿಂದ ವಂಚಿತರಾದವರಿಗೆ ಅವಕಾಶ ಕೊಡಬೇಕು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ತಿಳಿಯಲು ಸಮಿಕ್ಷೆ ಮಾಡಲಾಗುತ್ತಿದೆ. ಹಿಂದುಳಿದ ಆಯೋಗ ಸಮಿಕ್ಷೆ ಮಾಡುತ್ತಿದೆ. ಅದರಲ್ಲಿ ನಾವು ಮಧ್ಯೆ ಪ್ರವೇಶಿಸಲ್ಲ ಎಂದರು. ಇದನ್ನೂ ಓದಿ: ಸಿಎಂ ಆಗೋಕೆ ಹೆಲಿಕಾಪ್ಟರ್ ಖರೀದಿಸಿದ್ದಾರೆ ಅನ್ನೋದು ತಪ್ಪು ಕಲ್ಪನೆ – ಸತೀಶ್ ಜಾರಕಿಹೊಳಿ ಪರ ಬೋಸರಾಜು ಬ್ಯಾಟಿಂಗ್

    ಹಿಂದೂ ಜೊತೆ ಕ್ರಿಶ್ಚಿಯನ್ ಪದ ಬಳಕೆ ಬಗ್ಗೆ ಮರು ಪರಿಶೀಲನೆ ಮಾಡಿ ಎಂದು ರಾಜ್ಯಪಾಲರು ಸಿಎಂಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ಬಿಜೆಪಿಯವರು ಕಳುಹಿಸಿದ ಲೆಟರ್ ರಾಜ್ಯಪಾಲರು ನನಗೆ ಕಳುಹಿಸಿದ್ದಾರೆ. ಬಿಜೆಪಿ ಅವರ ಲೆಟರ್ ಫಾರ್ವಡ್ ಮಾಡಿದ್ದಾರೆ ಅಷ್ಟೇ. ಬಿಜೆಪಿಯವರು ರಾಜಕಿಯಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪ್ರಧಾನಿಗೆ ತಾನು ಬಿಡಿಸಿದ ಚಿತ್ರ ಕೊಟ್ಟು ಭಾವುಕನಾದ ಬಾಲಕ – ವೇದಿಕೆಯಿಂದಲೇ ಸಮಾಧಾನ ಮಾಡಿದ ಮೋದಿ

    ಇನ್ನು ಕುರುಬರನ್ನು ಎಸ್ಟಿಗೆ ಸೇರಿಸುವ ವಿಚಾರದ ಕುರಿತು ಮಾತನಾಡಿ, ಬಿಜೆಪಿಯವರಿದ್ದಾಗ ಕುರುಬರನ್ನು ಎಸ್ಟಿಗೆ ಸೇರಿಸಬೇಕೆಂದು ಮಾಡಿದ್ದರು. ಈಶ್ವರಪ್ಪ, ಕಾಗಿನೇಲೆ ಸ್ವಾಮಿಜಿಗಳು ಈ ಬಗ್ಗೆ ಶಿಫಾರಸು ಕೇಂದ್ರಕ್ಕೆ ಕಳುಹಿಸಿದ್ದರು. ಈ ಬಗ್ಗೆ ಅವರೇ ಉತ್ತರಿಸಬೇಕು. ಇನ್ನು ಎಸ್.ಸಿ, ಎಸ್‌ಟಿ ಪಟ್ಟಿಗೆ ಸೇರಿಸುವುದು ಕೇಂದ್ರದ ಕೆಲಸವಾಗಿದೆ. ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಸತ್ಯ ಹೇಳಿದ್ದಾರೆ. 6 ಸಾವಿರ ಮತಗಳನ್ನು ಕೈಬಿಡಲಾಗಿದೆ. ಆಳಂದ ಮತಗಳ್ಳತನ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿದೆ ಎಂದರು. ಬೆಳೆ ಹಾನಿ ಬಗ್ಗೆ ಸರ್ವೆ ನಡೆಸಿ ಪರಿಹಾರ ಕೊಡುತ್ತೇವೆ. ಮಳೆ ಈ ಬಾರಿ ಜಾಸ್ತಿ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿ ಹೆಚ್ಚಿಸಿ – ಒಕ್ಕಲಿಗ ಸಭೆಯಲ್ಲಿ ನಿರ್ಣಯ

    ಇನ್ನು ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಮಾತನಾಡಿ, ಕಳೆದ ವರ್ಷ ಹಾಗೂ ಈ ವರ್ಷ ಸಾಕಷ್ಟು ಮಳೆ ಆಗಿರುವುದರಿಂದ ರಸ್ತೆಗಳು ಕೆಟ್ಟು ಹೋಗಿದೆ. ಈ ಬಗ್ಗೆ ಮೀಟಿಂಗ್ ಮಾಡಿ, ರಸ್ತೆ ದುರಸ್ಥಿ ಮಾಡುತ್ತೇವೆ. ಬಿಜೆಪಿಯವರಿರುವಾಗ ಒಂದು ದಿನ ಗುಂಡಿ ಮುಚ್ಚಲಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ತಿಮರೋಡಿ ಬಳಿಗೆ ನಮ್ಮನ್ನ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ: ಚಿನ್ನಯ್ಯನ 2ನೇ ಪತ್ನಿ ಬಾಂಬ್‌

  • ಚಿಕ್ಕಬಳ್ಳಾಪುರ | ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 15 ಕುಟುಂಬಗಳು ಹಿಂದೂ ಧರ್ಮಕ್ಕೆ ಘರ್ ವಾಪ್ಸಿ

    ಚಿಕ್ಕಬಳ್ಳಾಪುರ | ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ 15 ಕುಟುಂಬಗಳು ಹಿಂದೂ ಧರ್ಮಕ್ಕೆ ಘರ್ ವಾಪ್ಸಿ

    ಚಿಕ್ಕಬಳ್ಳಾಪುರ: ಕ್ರೈಸ್ತ ಧರ್ಮಕ್ಕೆ (Christianity) ಮತಾಂತರವಾಗಿದ್ದ 15 ಕುಟುಂಬಗಳ 50ಕ್ಕೂ ಹೆಚ್ಚು ಮಂದಿಯನ್ನ ಮರಳಿ ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

    ಅಂದಹಾಗೆ ಗೌರಿಬಿದನೂರು ತಾಲೂಕಿನ ನಾಗಸಂದ್ರ, ಗಾಂಧಿನಗರ, ಕದಿರೇನಹಳ್ಳಿ ಸೇರಿದಂತೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ 15 ಕುಟುಂಬಗಳ 50ಕ್ಕೂ ಹೆಚ್ಚು ಮಂದಿ ಕ್ರಿಶ್ಚಿಯನ್ ಧರ್ಮದ ಆಚಾರಗಳನ್ನ ಪಾಲನೆ ಮಾಡುತ್ತಿದ್ದರು. ದೇವಾಲಯಗಳಿಗೆ ಹೋಗೋದನ್ನೇ ಮರೆತಿದ್ದ ಜನರ ಮನ ಪರಿವರ್ತನೆ ಮಾಡಿದ ಬಿಜೆಪಿ ಮುಖಂಡ ರವಿನಾರಾಯಣರೆಡ್ಡಿ ಎಲ್ಲರನೂ ಮರಳಿ ಘರ್ ವಾಪಾಸಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ‘ಲೋಕಾ’ ಶಾಕ್‌ – ಬೀದರ್‌, ಮೈಸೂರು ಸೇರಿ ಹಲವೆಡೆ ದಾಳಿ

    ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಗ್ರಾಮದ ಅಶ್ವತ್ಥನಾರಾಯಣ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿ ಹೋಮ ಹವನ ಮಾಡಿ ಘರ್ ವಾಪ್ಸಿ ಕಾರ್ಯಕ್ರಮ ನಡೆಸಲಾಗಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ವೀರರಾಣಿ ಅಬ್ಬಕ್ಕ ಹೆಸರಿನ ಮೆರಿಟೈಮ್ ವಿವಿ ಸ್ಥಾಪನೆಗೆ ಕ್ಯಾ.ಚೌಟ ಮನವಿ

    ಇನ್ನೂ ಅನ್ಯ ಧರ್ಮಗಳಿಗೆ ಮತಾಂತರ ಆದವರನ್ನ ಮೂಲ ಧರ್ಮಕ್ಕೆ ಕರೆತರುವ ಕಾಯಕ ಸದಾ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಈಗಲೂ ಇವರನ್ನ ಕರೆತರಲಾಗಿದೆ. ಮಂದಿನ ದಿನಗಳಲ್ಲಿ ಮತ್ತಷ್ಟು ಜನರ ಮನಪರಿವರ್ತನೆ ಮಾಡಿ ಘರ್ ವಾಪ್ಸಿ ಕಾರ್ಯ ಮುಂದುವರಿಸಲಾಗುವುದು ಎಂದ ರವಿನಾರಾಯಣರೆಡ್ಡಿ ತಿಳಿಸಿದರು. ಇದನ್ನೂ ಓದಿ: ಸಂಸತ್‌ ಭವನ ಪಕ್ಕದ ಮಸೀದಿಯಲ್ಲಿ ಎಸ್ಪಿ ಸಂಸದರೊಟ್ಟಿಗೆ ಅಖಿಲೇಶ್‌ ಯಾದವ್‌ ಸಭೆ – ಕೆರಳಿದ ಬಿಜೆಪಿ

  • ಮೋದಿ ಅಂದ್ರೆ ಪೂರ್ಣ ಹಿಂದೂ ಸಮಾಜ ಅಲ್ಲ, ಹಿಂದೂ ಅಂತ ಕರೆಸಿಕೊಳ್ಳೋರು ಹಿಂಸೆ, ದ್ವೇಷ ಹರಡುತ್ತಿದ್ದಾರೆ: ರಾಗಾ ವಾಗ್ದಾಳಿ

    ಮೋದಿ ಅಂದ್ರೆ ಪೂರ್ಣ ಹಿಂದೂ ಸಮಾಜ ಅಲ್ಲ, ಹಿಂದೂ ಅಂತ ಕರೆಸಿಕೊಳ್ಳೋರು ಹಿಂಸೆ, ದ್ವೇಷ ಹರಡುತ್ತಿದ್ದಾರೆ: ರಾಗಾ ವಾಗ್ದಾಳಿ

    ನವದೆಹಲಿ: ಹಿಂದೂ, ಮುಸ್ಲಿಂ,‌ ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳಲ್ಲಿರುವ ಮಹಾಪುರುಷರೆಲ್ಲರೂ ಹೆದರಬೇಡಿ, ಹೆದರಿಸಿಬೇಡಿ ಎನ್ನುವ ಮೂಲಕ ಅಹಿಂಸೆ ಮತ್ತು ಭಯವನ್ನು ಮುಗಿಸುವ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮನ್ನು ತಾವು ಹಿಂದೂ (Hindu) ಎಂದು ಕರೆದುಕೊಳ್ಳುವ ಬಿಜೆಪಿ ನಾಯಕರು ಹಿಂಸೆ, ದ್ವೇಷ ಹರಡುತ್ತಿದ್ದಾರೆ. ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಆಕ್ರೋಶ ಹೊರ ಹಾಕಿದ್ದಾರೆ.

    ರಾಷ್ಟ್ರಪತಿಗಳ (President Of India) ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಧಾರ್ಮಿಕ ಗುರುಗಳ ಫೋಟೋ ಪ್ರದರ್ಶಿಸಿ ಅವರ ತತ್ವಗಳನ್ನು ಪ್ರಸ್ತಾಪಿಸಿದರು. ನರೇಂದ್ರ ಮೋದಿ (Narendra Modi) ಪೂರ್ಣ ಹಿಂದೂ ಸಮಾಜ ಅಲ್ಲ, ಆರ್‌ಎಸ್‌ಎಸ್‌, ಬಿಜೆಪಿ ದೇಶದ ಸಂಪೂರ್ಣ ಹಿಂದೂಗಳ ಪ್ರತಿನಿಧಿಯಲ್ಲ ಎಂದು ಗುಡುಗಿದರಿ. ಈ ವೇಳೆ ಸದನದಲ್ಲಿ ಕೋಲಾಹಲ ಏರ್ಪಟ್ಟಿತು. ವಿಪಕ್ಷ ನಾಯಕರಾಗಿ ಮೊದಲ ಬಾರಿಗೆ ಮಾತನಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ನಿಯಮಗಳನ್ನು ಮೀರಿ ಮಾತನಾಡುವಂತಿಲ್ಲ ಎಂದು ಅಮಿತ್ ಶಾ (Amit Shah) ಆಕ್ಷೇಪ ವ್ಯಕ್ತಪಡಿಸಿದರು. ಧಾರ್ಮಿಕ ವಿಚಾರಗಳನ್ನು ಮಾತನಾಡುವಾಗ ಎಚ್ಚರಿಕೆ ವಹಿಸಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಈ‌ ನಡುವೆ ದೊಡ್ಡ ಮಟ್ಟದಲ್ಲಿ ಗದ್ದಲ ಏರ್ಪಟ್ಟಿತು.

    ಇದಕ್ಕೂ ಮುನ್ನ ಮಾತನಾಡಿದ ರಾಹುಲ್ ಗಾಂಧಿ, ನಾವು ನೀಟ್ ಕುರಿತು ಒಂದು ದಿನದ ಚರ್ಚೆಯನ್ನು ಬಯಸಿದ್ದೇವೆ. ಇದು ಪ್ರಮುಖ ವಿಷಯವಾಗಿದೆ ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ. 7 ವರ್ಷದಲ್ಲಿ 70 ಬಾರಿ ಪೇಪರ್ ಸೋರಿಕೆಯಾಗಿದೆ. ನೀವು ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ ನಾವು ಸಂತೋಷಪಡುತ್ತೇವೆ ಎಂದು ಮನವಿ ಮಾಡಿದರು.

    ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸದನದ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲೇಖಿಸಿ ಚರ್ಚೆಗೆ ಅವಕಾಶ ನಿರಾಕರಿಸಿದರು. ಸಂಸತ್ ಸದಸ್ಯನಾಗಿ ದಶಕಗಳ ಕಾಲ ನನ್ನ ಅಧಿಕಾರಾವಧಿಯಲ್ಲಿ, ರಾಷ್ಟ್ರಪತಿಗಳ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಸಂದರ್ಭದಲ್ಲಿ ಬೇರೆ ಯಾವುದೇ ವಿಷಯವನ್ನು ಎಂದಿಗೂ ಚರ್ಚೆಗೆ ತೆಗೆದುಕೊಂಡಿಲ್ಲ. ಧನ್ಯವಾದ ನಿರ್ಣಯವನ್ನು ಅಂಗೀಕರಿಸಿದ ನಂತರ ಇತರ ವಿಷಯಗಳನ್ನು ಪ್ರಸ್ತಾಪಿಸಬಹುದು ಹೇಳಿದರು. ಸ್ಪೀಕರ್ ಓಂ ಬಿರ್ಲಾ ಅವರು ಸಿಂಗ್ ಅವರು ನಿಲುವನ್ನು ಬೆಂಬಲಿಸಿದರು ಮತ್ತು ಪ್ರತಿಪಕ್ಷಗಳ ಮನವಿಯನ್ನು ತಿರಸ್ಕರಿಸಿದರು.

    ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, ನಾನು ಅಯೋಧ್ಯೆ ಬಗ್ಗೆ ಮಾತನಾಡುವಾಗ ಮೈಕ್ ಬಂದ್ ಮಾಡಲಾಗುತ್ತದೆ ಎಂದು ಆರೋಪಿಸಿದರು‌. ಭಗವಾನ್ ರಾಮ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ಸೋಲಿಸುವ ಮೂಲಕ ಈ ಎಚ್ಚರಿಕೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ಬಿಜೆಪಿ ಹೇಗೆ ಸೋತಿತು ಎಂದು ಕೇಳಿದೆ. ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದಾರೆ, ಆದರೆ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ಸಣ್ಣ ಪುಟ್ಟ ಅಂಗಡಿ, ಮನೆಗಳನ್ನ ಧ್ವಂಸ ಮಾಡಿದೆ, ಪರಿಹಾರ ನೀಡಿಲ್ಲ, ಅಯೋಧ್ಯೆ ದೇವಸ್ಥಾನದ ಉದ್ಘಾಟನೆಗೆ ಅಂಬಾನಿ-ಅದಾನಿ ಕರೆಯಲಾಯಿತು ಸ್ಥಳೀಯರನ್ನು ಕೈಬಿಡಲಾಯಿತು. ಅಯೋಧ್ಯೆ ಉದ್ಘಾಟನೆ ಸಂದರ್ಭದಲ್ಲಿ ಅಲ್ಲಿನ ಜನರು ದುಃಖದಲ್ಲಿದ್ದರು ಎಂದು ಹೇಳಿದರು.

    ನರೇಂದ್ರ ಮೋದಿ ಅವರು ಅಯೋಧ್ಯೆಯಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು, ಸರ್ವೆ ಮಾಡುವ ಏಜೆನ್ಸಿಗಳು ಬೇಡ ಎಂದು ಸಲಹೆ ನೀಡಿದವು ಹೀಗಾಗೀ ಸ್ಪರ್ಧಿಸಲಿಲ್ಲ. ವಾರಣಾಸಿಯಿಂದ ಸ್ಪರ್ಧಿಸಿ, ಸ್ವಲ್ವದರಲ್ಲೇ ಉಳಿದುಕೊಂಡರು ಎಂದು ವ್ಯಂಗ್ಯವಾಡಿದರು. ರೈತರನ್ನು ಭಯೋತ್ಪಾದಕರು ಎಂದು ಬಿಜೆಪಿಯವರು ಕರೆದಿದ್ದಾರೆ, ಅವರನ್ನು ಬೆದರಿಸಲು ಮೂರು ಕೃಷಿ ಕಾನೂನು ಜಾರಿ ಮಾಡಲಾಯಿತು. ಅಂಬಾನಿ, ಅದಾನಿಗೆ ಅನುಕೂಲವಾಗುವ ಕಾನೂನು ಜಾರಿ ಮಾಡಲಾಯಿತು ರೈತರ ಪ್ರತಿಭಟನೆ ನಡೆಸಿದರು, ಪ್ರತಿಭಟನೆ ನಡೆಸಿದ ರೈತರನ್ನು ಭಯೋತ್ಪಾದಕರು ಎನ್ನಲಾಯಿತು ಎಂದು ಹೇಳಿದರು.

    ರಾಹುಲ್ ಗಾಂಧಿ ಮಾತಿಗೆ ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದರು‌. ಮೊದಲ ವಿಪಕ್ಷ ನಾಯಕನಾಗಿ ಮಾತನಾಡುತ್ತಿದ್ದಾರೆ ಎಂದು ಹೆಚ್ಚು ಹೆಚ್ಚು ರಿಯಾಯಿತಿ ನೀಡಲಾಗುತ್ತಿದೆ ಅವರು ಎಲ್ಲ ನಿಯಮ ಉಲ್ಲಂಘಿಸಿ ಮಾತನಾಡುತ್ತಿದ್ದಾರೆ ನಾವು ರೈತರನ್ನು ಯಾವಗ ಭಯೋತ್ಪಾದಕರು ಎಂದು ಹೇಳಿದ್ದೇವೆ? ಸದನಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದರು. ತಮ್ಮ ಅಸಬ್ಬಂದ್ಧ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

  • ಬಹುತ್ವವನ್ನು ಅಳವಡಿಸಿಕೊಂಡಿರುವುದು ಹಿಂದೂ ಧರ್ಮ ಮಾತ್ರ: ಸಿ.ಟಿ.ರವಿ

    ಬಹುತ್ವವನ್ನು ಅಳವಡಿಸಿಕೊಂಡಿರುವುದು ಹಿಂದೂ ಧರ್ಮ ಮಾತ್ರ: ಸಿ.ಟಿ.ರವಿ

    ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರು (Siddaramaiah) ಯಾವಾಗಲೂ ಬಹುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಬಹುತ್ವವನ್ನ ಒಪ್ಪಿಕೊಂಡು, ಅಳವಡಿಸಿಕೊಂಡಿರುವುದು ಕೇವಲ ಹಿಂದೂ ಧರ್ಮ (Hindu Religion) ಮಾತ್ರ, ಬಹುತ್ವಕ್ಕೆ ಬೆಲೆ ಇರುವುದು ಹಿಂದೂ ಧರ್ಮದಲ್ಲಿಯೇ ಎಂದು ಮಾಜಿ ಸಚಿವ ಸಿ.ಟಿ.ರವಿ (CT Ravi) ಹೇಳಿದ್ದಾರೆ.

    ಚಿಕ್ಕಮಗಳೂರು (Chikkamagaluru) ತಾಲೂಕಿನ ದತ್ತ ಪೀಠದಲ್ಲಿ ನಡೆದ ದತ್ತ ಜಯಂತಿಯ (Datta Jayanthi) ಹೋಮ ಪೂಜೆಯ ಬಳಿಕ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ದತ್ತ ಮಾಲೆ ಜಯಂತಿ ಕಾರ್ಯಕ್ರಮ ವಿದ್ಯುಕ್ತವಾಗಿ ಸಂಪನ್ನಗೊಂಡಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೂಡ ವಿಶೇಷ ಧನ್ಯವಾದ ಎಂದರು. ಸರ್ಕಾರದ ಪ್ರತಿನಿಧಿಯಾಗಿ ಯಾರಾದರೂ ಒಬ್ಬರು ಭಾಗವಹಿಸಬೇಕಾಗಿತ್ತು. ಸರ್ಕಾರದ ಪ್ರತಿನಿಧಿಗಳಾಗಿ ಯಾರು ಬಾರದೇ ಇರುವುದು ದುರಾದೃಷ್ಟಕರ ಹಾಗೂ ನೋವಿನ ಸಂಗತಿ ಎಂದರು. ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ವಿಶ್ವದಾಖಲೆ ಬರೆದ ನರೇಂದ್ರ ಮೋದಿ

    ಇದು ಮುಜರಾಯಿ ಇಲಾಖೆಗೆ ಸೇರಿದ ದತ್ತಾತ್ರೇಯ ಸ್ವಾಮಿ ದೇವಸ್ಥಾನವಾಗಿದ್ದು, ಯಾರಾದರೂ ಒಬ್ಬರು ಭಾಗವಹಿಸಬೇಕಾದದ್ದು ಕ್ರಮವಾಗಿತ್ತು. ಯಾರೂ ಭಾಗವಹಿಸದೇ ಇರುವುದು ದುರಾದೃಷ್ಟಕರ. ಅವರ ಮನಸ್ಸಿನಲ್ಲಿ ಹಿಂದೂ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದರೆ ಜಾತ್ಯಾತೀತತೆಗೆ ಭಂಗ ಬರುತ್ತದೆ ಎಂಬ ಭಾವನೆ ಇರಬಹುದು. ಈದ್ ಮಿಲಾದ್‌ನಲ್ಲಿ ಪಾಲ್ಗೊಳ್ಳುತ್ತಾರೆ. ದತ್ತ ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರೆ ಏನರ್ಥ? ಯಾವ ಸಂದೇಶ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಾಕಿಸ್ತಾನದ ಜೊತೆ ಭಾರತ ಸಂಬಂಧವನ್ನು ಸುಧಾರಿಸದೇ ಇದ್ದಲ್ಲಿ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು: ಫಾರೂಖ್ ಅಬ್ದುಲ್ಲಾ

    ನಾವು ಹಿಂದೂ ಭಾವನೆಗಳ ಜೊತೆಗಿಲ್ಲ ಎಂಬ ಸಂದೇಶವನ್ನು ಅವರು ಕೊಡುತ್ತಿದ್ದಾರೆಂದು ನನಗೆ ಅನಿಸುತ್ತಿದೆ. ಹಿಂದೂ ಧರ್ಮ ಮಾತ್ರ ಜಗತ್ತಿನ ಎಲ್ಲವನ್ನು ಒಳಗೊಳ್ಳುವಂತದ್ದು. ಇಲ್ಲಿ ಬಹುತ್ವಕ್ಕೆ ಅವಕಾಶವಿದೆ. ಅವರವರ ಭಾವಕ್ಕೆ, ಭಕ್ತಿಗೆ ತೆರನಾಗಿ ಇರುತಿಹನು ಶಿವಯೋಗಿ ಎಂಬ ತತ್ವದ ಮೇಲೆ ನಂಬಿಕೆ ಇಟ್ಟಿರುವುದು ಹಿಂದೂ ಧರ್ಮ. ಜಗತ್ತಿನ ಯಾವ ಶಕ್ತಿಯೂ ಕೂಡ ಶಿವನನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರರು ಏಕೀಭಾವವಾಗಿ ಅವತರಿಸಿರುವುದೇ ದತ್ತಾತ್ರೇಯರ ಅವತಾರ. ಯಾವ ಶಕ್ತಿಯೂ ಕೂಡ ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಲ್ಕಡ್ಕ ಪ್ರಭಾಕರ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲು

  • ಅಮೆರಿಕ ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳುತ್ತಾ? – ಪ್ರಶ್ನೆಗೆ ಹಿಂದೂ ಧರ್ಮದ ಮೌಲ್ಯ ತಿಳಿಸಿದ ವಿವೇಕ್‌

    ಅಮೆರಿಕ ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳುತ್ತಾ? – ಪ್ರಶ್ನೆಗೆ ಹಿಂದೂ ಧರ್ಮದ ಮೌಲ್ಯ ತಿಳಿಸಿದ ವಿವೇಕ್‌

    ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಭಾರತ ಮೂಲದ ವಿವೇಕ್‌ ರಾಮಸ್ವಾಮಿ (Vivek Ramaswamy) ಹಿಂದೂ ಧರ್ಮದ ಸಾರ್ವತ್ರಿಕ ಮೌಲ್ಯಗಳ ಬಗ್ಗೆ ಮಾತನಾಡಿದ್ದಾರೆ.

    ಅಮೆರಿಕದ ಸಿಎನ್‌ಎನ್‌ ಟೌನ್‌ ಹಾಲ್‌ನಲ್ಲಿ ವಿವೇಕ್‌ ಮಾತನಾಡುತ್ತಿದ್ದಾಗ, ಅಮೆರಿಕ (America) ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿಬಂತು. ಅದಕ್ಕೆ ವಿವೇಕ್‌ ಪ್ರತಿಕ್ರಿಯಿಸಿ, ನನ್ನದು ‘ನಕಲಿ ಮತಾಂತರ’ ಅಲ್ಲ, ನಾನು ಹಿಂದೂ (Hinduism). ರಾಜಕೀಯ ವೃತ್ತಿಜೀವನವನ್ನು ಹೆಚ್ಚಿಸಲು ಸುಳ್ಳು ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮ ಒಂದೇ ಸಮಾನ ಮೌಲ್ಯವನ್ನು ಹೇಳುತ್ತವೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರು ಅವಿತುಕೊಳ್ಳುತ್ತಿದ್ದ ಸುರಂಗಗಳಿಗೆ ಸಮುದ್ರದ ನೀರು ಹರಿಸಿದ ಇಸ್ರೇಲ್

    ನಾನು ನಕಲಿ ಮತಾಂತರ ಆಗಬಹುದು. ಆದರೆ ಅದನ್ನು ನಾನು ಮಾಡುವುದಿಲ್ಲ. ನನ್ನ ನಂಬಿಕೆಯ ಬಗ್ಗೆ ನಿಮಗೆ ಹೇಳುತ್ತೇನೆ. ನನ್ನ ಪಾಲನೆ ಸಾಕಷ್ಟು ಸಾಂಪ್ರದಾಯಿಕವಾಗಿತ್ತು. ಮದುವೆಗಳು ಪವಿತ್ರವೆಂದು ನನ್ನ ಪೋಷಕರು ನನಗೆ ಹೇಳುತ್ತಿದ್ದರು. ಕುಟುಂಬಗಳು ಸಮಾಜದ ಮೂಲಾಧಾರವಾಗಿದೆ ಎಂದು ತಿಳಿಸಿದ್ದಾರೆ.

    ದೇವರು ಎಂಬುದು ಸತ್ಯ. ದೇವರ ಹೆಸರನ್ನು ವ್ಯರ್ಥವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಹೆತ್ತವರನ್ನು ಗೌರವಿಸಿ. ಕೊಲ್ಲಬೇಡಿ, ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ, ಕದಿಯಬೇಡಿ. ವ್ಯಭಿಚಾರ ಮಾಡಬೇಡಿ, ಆಸೆಪಡಬೇಡ. ನಾವು ಒಂದೇ ಮೌಲ್ಯವನ್ನು ಸಾಮಾನ್ಯವಾಗಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್ ಠಾಣೆ ಮೇಲೆಯೇ ಉಗ್ರರ ದಾಳಿ – 23 ಪೊಲೀಸರ ದುರ್ಮರಣ

    ನನ್ನ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ, ಪ್ರತಿಯೊಬ್ಬ ವ್ಯಕ್ತಿಯು ಒಂದು ಕಾರಣಕ್ಕಾಗಿ ಇಲ್ಲಿದ್ದಾನೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ದೇವರು ಪ್ರತಿಯೊಬ್ಬರೊಳಗೂ ಇದ್ದಾನೆ. ದೇವರು ನಮ್ಮ ಮೂಲಕ ವಿವಿಧ ರೀತಿಯಲ್ಲಿ ಕೆಲಸ ಮಾಡಿದರೂ, ನಾವು ಎಲ್ಲರೂ ಸಮಾನರು ಎಂದು ಹೇಳಿದ್ದಾರೆ.

    ಅಕ್ರಮ ವಲಸಿಗರಿಗೆ ಜನ್ಮಸಿದ್ಧ ಪೌರತ್ವವನ್ನು ನಿಷೇಧಿಸುವ ಕರೆಯನ್ನು ರಾಮಸ್ವಾಮಿ ಪುನರುಚ್ಚರಿಸಿದ್ದಾರೆ. ಕಾನೂನು ಉಲ್ಲಂಘಿಸುವವರಿಗೆ ನಾವು ಬಹುಮಾನ ನೀಡಬಾರದು ಎಂದು ಪ್ರತಿಪಾದಿಸಿದ್ದಾರೆ. ಇದೇ 2024 ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ವಿವೇಕ್‌ ರಾಮಸ್ವಾಮಿ ಸ್ಪರ್ಧಿಸಲಿದ್ದಾರೆ. ಇದನ್ನೂ ಓದಿ: ಮೋದಿಯನ್ನ ಹೆಸರಿಸಬಹುದು ಅಂತ ಊಹಿಸೋಕು ಸಾಧ್ಯವಿಲ್ಲ – ಹಾಡಿ ಹೊಗಳಿದ ಪುಟಿನ್‌

    1985ರ ಆಗಸ್ಟ್ 9 ರಂದು ಜನಿಸಿದ್ದ ವಿವೇಕ್‌ ರಾಮಸ್ವಾಮಿ ನೈಋತ್ಯ ಓಹಿಯೋದ ಮೂಲದವರು. ಅವರ ತಾಯಿ ಜೆರಿಯಾಟ್ರಿಕ್ ಮನೋವೈದ್ಯರಾಗಿದ್ದರು. ಅವರ ತಂದೆ ಜನರಲ್ ಎಲೆಕ್ಟ್ರಿಕ್‌ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪೋಷಕರು ಕೇರಳದಿಂದ ಅಮೆರಿಕಗೆ ವಲಸೆ ಹೋಗಿದ್ದರು.

  • ಹಿಂದೂ ಧರ್ಮಕ್ಕೆ ಸೇರ್ಪಡೆಯಾದ ರಷ್ಯನ್ ಪ್ರಜೆಗಳು – ಅಂಜನಾದ್ರಿಯಲ್ಲಿ ದೀಪಾವಳಿ ಆಚರಣೆ ಇಲ್ಲದ್ದಕ್ಕೆ ಬೇಸರ

    ಹಿಂದೂ ಧರ್ಮಕ್ಕೆ ಸೇರ್ಪಡೆಯಾದ ರಷ್ಯನ್ ಪ್ರಜೆಗಳು – ಅಂಜನಾದ್ರಿಯಲ್ಲಿ ದೀಪಾವಳಿ ಆಚರಣೆ ಇಲ್ಲದ್ದಕ್ಕೆ ಬೇಸರ

    ಕೊಪ್ಪಳ: ಭಾರತೀಯ ಸಂಸ್ಕೃತಿಯನ್ನು (Indian Culture) ಮೆಚ್ಚಿ ರಷ್ಯಾ (Russia) ಮೂಲದ ಪ್ರಜೆಗಳು ಹಿಂದೂ ಧರ್ಮಕ್ಕೆ (Hinduism) ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲದೇ ಹಿಂದೂ ಧರ್ಮದ ಹೆಸರಿಟ್ಟುಕೊಂಡು ಹನುಮನ ನಾಡು ಕೊಪ್ಪಳಕ್ಕೆ (Koppal) ಭೇಟಿ ನೀಡಿದ್ದಾರೆ.

    ರಷ್ಯನ್ ಪ್ರಜೆಗಳಾದ ಮೀನಾಕ್ಷಿಗಿರಿ, ಗಂಗಾ ಹಾಗೂ ಸರಸ್ವತಿ ಹಿಂದೂ ಧರ್ಮಕ್ಕೆ ಸೇರ್ಪಡೆಯಾದ ಪ್ರಜೆಗಳು. ಈ ಮೂವರು ಖಾವಿ ಧರಿಸಿ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಅದೇ ರೀತಿ ಕೊಪ್ಪಳ ಜಿಲ್ಲೆಯ ಹನುಮನ ಜನ್ಮ ಸ್ಥಳ ಅಂಜನಾದ್ರಿಗೆ (Anjanadri) ಬಂದು ದರ್ಶನ ಪಡೆದಿದ್ದಾರೆ. ಇವರು ಹಂಪಿ-ಆನೆಗೊಂದಿ, ಅಂಜನಾದ್ರಿ ಸೇರಿದಂತೆ ದೇಶದ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಉದ್ಘಾಟಿಸಿದ ಆದಿತ್ಯ ಠಾಕ್ರೆ ವಿರುದ್ಧ ದೂರು

    ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭ ಪುರಾಣ ಪವಿತ್ರ ಸ್ಥಳದಲ್ಲಿ ದೀಪ ಹಚ್ಚಲು ಆಗಲ್ವಾ ಎಂದು ಕರ್ನಾಟಕ ಸರ್ಕಾರದ ಮೇಲೆ ವಿದೇಶಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೂ ಧರ್ಮ ಸ್ವೀಕರಿಸಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಬಂದ ರಷ್ಯನ್ ಪ್ರಜೆಗಳು ದೇಶದಲ್ಲಿ ಎಲ್ಲಾ ಕಡೆ ದೀಪಾವಳಿ (Deepavali) ನಡೆಯುತ್ತಿದೆ. ಪುಣ್ಯಭೂಮಿಯಲ್ಲಿ ಬೆಳಕಿಲ್ಲ. ಹನುಮನ ಜನ್ಮ ಸ್ಥಳದಲ್ಲಿ ದೀಪಾವಳಿ ಆಚರಣೆ ಇಲ್ಲವೆಂದು ಅಸಮಾಧಾನಗೊಂಡಿದ್ದಾರೆ. ಇದನ್ನೂ ಓದಿ: ಶಮಿ ತವರಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

    ಭಕ್ತರಿಂದ ಕೋಟಿಗಟ್ಟಲೆ ಆದಾಯ ಪಡೆದರೂ ಸರ್ಕಾರ ಯಾಕಿಷ್ಟು ನಿರ್ಲಕ್ಷ್ಯ ತೋರುತ್ತಿದೆ. ಇದು ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಆಂಜನೇಯ ದೇವಸ್ಥಾನ. ಸನಾತನ ದೇವಸ್ಥಾನದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತಲೆ ಎತ್ತಲಿದೆ ಮತ್ತೊಂದು ಸಸ್ಯಕಾಶಿ – ಡಿಕೆಶಿಗೆ ಪ್ರಸ್ತಾವನೆ ಸಲ್ಲಿಕೆ

  • ಹಿಂದೂ ಧರ್ಮ ರಕ್ಷಣೆಗಾಗಿ ಮಾರ್ಗಸೂಚಿ ಮಾಡಲು ನಿರ್ದೇಶನ ನೀಡಿ – ಅರ್ಜಿ ವಜಾಗೊಳಿಸಿದ ಸುಪ್ರೀಂ

    ಹಿಂದೂ ಧರ್ಮ ರಕ್ಷಣೆಗಾಗಿ ಮಾರ್ಗಸೂಚಿ ಮಾಡಲು ನಿರ್ದೇಶನ ನೀಡಿ – ಅರ್ಜಿ ವಜಾಗೊಳಿಸಿದ ಸುಪ್ರೀಂ

    ನವದೆಹಲಿ: ಭಾರತದಲ್ಲಿ ಹಿಂದೂ ಧರ್ಮದ ‘ರಕ್ಷಣೆ’ಗಾಗಿ (Hinduism) ಮಾರ್ಗಸೂಚಿಗಳನ್ನು ಮಾಡಲು ನಿರ್ದೇಶನವನ್ನು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ (Supreme Court) ವಜಾಗೊಳಿಸಿದೆ.

    ಹಿಂದೂ ಧರ್ಮದ ರಕ್ಷಣೆಗೆ ನಿರ್ದೇಶನ ಕೋರಿ ಅರ್ಜಿ ಸುಪ್ರೀಂ ಕೋರ್ಟ್‌‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಕೆ. ಕೌಲ್ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿಯನ್ನು ವಜಾ ಮಾಡಿದೆ. ಇದನ್ನೂ ಓದಿ: ಎಂಪಿ, ಎಂಎಎಲ್‍ಎಗಳ ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಸುಪ್ರೀಂ ಸೂಚನೆ

    ಶೈಕ್ಷಣಿಕ ಪಠ್ಯಕ್ರಮವು ನಿಮಗೆ ಬೇಕಾದುದನ್ನು ಸೇರಿಸಬೇಕೆಂದು ನೀವು ಬಯಸುತ್ತೀರಿ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೇಗಾಗುತ್ತದೆ? ನೀವು ಸರ್ಕಾರವನ್ನು ಸಂಪರ್ಕಿಸಬಹುದು. ಶೈಕ್ಷಣಿಕ ಪಠ್ಯಕ್ರಮ ಸೇರ್ಪಡೆ ನ್ಯಾಯಾಲಯದ ಜವಾಬ್ದಾರಿಯಲ್ಲ, ಅದು ಸರ್ಕಾರದ ಕೆಲಸ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

    ಹಿಂದೂ ಧರ್ಮದ ರಕ್ಷಣೆಗಾಗಿ ಅಧಿಕಾರಿಗಳಿಗೆ ನಿರ್ದೇಶನಗಳನ್ನು ಕೇಳುತ್ತಿದ್ದೀರಿ. ಭಾರತದಲ್ಲಿ ಇಸ್ಲಾಂ ಧರ್ಮವನ್ನು ರಕ್ಷಿಸಿ, ಕ್ರಿಶ್ಚಿಯನ್ ಧರ್ಮವನ್ನು ರಕ್ಷಿಸಿ ಎಂದು ಯಾರಾದರೂ ಹೇಳುತ್ತಾರೆ. ಹೀಗಾಗಿ ಈ ಅರ್ಜಿಗೆ ಯಾವುದೇ ಅರ್ಹತೆ ಇಲ್ಲ ಎಂದು ವಿಚಾರಣೆ ವೇಳೆ ನ್ಯಾ. ಸಂಜಯ್ ಕಿಷನ್ ಕೌಲ್ ತಿಳಿಸಿದ್ದಾರೆ. ಇದನ್ನೂ ಓದಿ: ಅಪಘಾತವೆಸಗಿ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕಾರುಗಳಿಗೆ ಡಿಕ್ಕಿ – ಮೂವರು ಸಾವು

    ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು (ಶುಕ್ರವಾರ) ನಡೆಯಿತು. ಪ್ರಕರಣದಲ್ಲಿ ವಾದ ಮಂಡಿಸಲು ಅರ್ಜಿದಾರರು ಖುದ್ದು ಹಾಜರಾಗಿದ್ದರು. ಅರ್ಜಿದಾರರು ಶೈಕ್ಷಣಿಕ ಪಠ್ಯಕ್ರಮವನ್ನು ಉಲ್ಲೇಖಿಸಿದಾಗ, ಪಠ್ಯಕ್ರಮವನ್ನು ರೂಪಿಸುವುದು ಸರ್ಕಾರಕ್ಕೆ ಎಂದು ಪೀಠ ತಿಳಿಸಿತು.

    ಅರ್ಜಿದಾರರು ತನಗೆ ಬೇಕಾದುದನ್ನು ಇತರರು ಮಾಡಬೇಕೆಂದು ಹೇಳಲು ಸಾಧ್ಯವಿಲ್ಲ. ನೀವು ಏನನ್ನಾದರೂ ಮಾಡಿದ್ದೀರಿ ಎಂದಾದರೆ, ನೀವು ಅದನ್ನು ಪ್ರಚಾರ ಮಾಡಬಹುದು. ಯಾರೂ ನಿಮ್ಮನ್ನು ತಡೆಯುವುದಿಲ್ಲ. ಆದರೆ ಎಲ್ಲರೂ ಅದನ್ನು ಮಾಡಬೇಕು ಎಂದು ನೀವು ಹೇಳಲು ಸಾಧ್ಯವಿಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿದೆ.

  • ಹಿಂದೂ ಧರ್ಮಕ್ಕೆ ಅಪಮಾನ ಮಾಡಿಲ್ಲ, ಧರ್ಮದ ಬಗ್ಗೆ ಗೌರವವಿದೆ: ಪರಮೇಶ್ವರ್

    ಹಿಂದೂ ಧರ್ಮಕ್ಕೆ ಅಪಮಾನ ಮಾಡಿಲ್ಲ, ಧರ್ಮದ ಬಗ್ಗೆ ಗೌರವವಿದೆ: ಪರಮೇಶ್ವರ್

    ಬೆಂಗಳೂರು: ಹಿಂದೂ ಧರ್ಮದ (Hindu Religion) ವಿರುದ್ಧ ಅವಹೇಳನಕಾರಿಯಾಗಿ ನಾನು ಮಾತಾಡಿಲ್ಲ. ಅದನ್ನ ಬೇರೆ ರೀತಿ ಅರ್ಥೈಸುವ ಕೆಲಸವನ್ನು ನಾನು ಯಾವತ್ತೂ ಮಾಡಿಲ್ಲ. ನಾವೆಲ್ಲ ಹಿಂದೂಗಳು ಎಂದು ಗೇಹ ಸಚಿವ ಪರಮೇಶ್ವರ್ (G. Parameshwar) ಸ್ಪಷ್ಟಣೆ ನೀಡಿದ್ದಾರೆ.

    ಹಿಂದೂ ಧರ್ಮ ಬಗ್ಗೆ ವಿವಾದಿತ ಹೇಳಿಕೆ ಸಂಬಂಧ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬೆಳಗ್ಗೆ ಎದ್ದರೆ ಗಣಪತಿಯನ್ನ ನೆನಪು ಮಾಡಿಕೊಳ್ತೀವಿ. ನಾನು ಬೆಳೆಗ್ಗೆ ಎದ್ದ ಕೂಡಲೇ ಲಕ್ಷ್ಮಿ ಶ್ಲೋಕ ಹೇಳುತ್ತೇನೆ. ಮಲಗೋವಾಗ ಹನುಮನ ಶ್ಲೋಕ ಹೇಳ್ತೀನಿ ಎಂದು ಎರಡೂ ಶ್ಲೋಕ ಹೇಳಿದರು.

    ಬಿಜೆಪಿಯವರಿಗೆ (BJP) ಈ ಶ್ಲೋಕಗಳು ಬರೊಲ್ಲ. ಅವರಿಗೆ ಕೇಳಿ ನೋಡಿ ಇದನ್ನ ಹೇಳ್ತಾರಾ ಅಂತ ಬಿಜೆಪಿ ನಾಯಕರಿಗೆ ಪರಮೇಶ್ವರ್ ಸವಾಲೆಸೆದರು. ಅದಕ್ಕೆ ನಾನು ಹೇಳಿದ್ದು ಕೃಷ್ಣ ಹುಟ್ಟಿದ ದಿನ ಧರ್ಮ ಅಧರ್ಮ ಆದಾಗ, ನೀತಿ, ಅನೀತಿ ಆದಾಗ ಕೃಷ್ಣ ಮತ್ತೆ ಹುಟ್ಟಿ ಬರುತ್ತೇನೆ ಅಂತ ಹೇಳುತ್ತಾನೆ. ಇದನ್ನೇ ನಾನು ಹೇಳಿದ್ದು ಯಧಾ ಯಧಾಹೀ ಧರ್ಮಸ್ಯ ಅಂತ. ಹಿಂದೂ ಧರ್ಮ ಯಾವಾಗ ಹುಟ್ಟಿತು ಅಂತ ನಾನು ಪ್ರಶ್ನೆ ಮಾಡಿಲ್ಲ. ಪದೇ ಪದೇ ನಾನು ಅದನ್ನೇ ಹೇಳಲು ಉದ್ಯೋಗ ಅಲ್ಲ ಎಂದರು.  ಇದನ್ನೂ ಓದಿ: ಇಂಡಿಯಾ, ಭಾರತದ ನಡುವಿನ ವ್ಯತ್ಯಾಸ ವಿವರಿಸಿದ್ದ ಲಾಲೂ ಹಳೆಯ ವೀಡಿಯೋ ವೈರಲ್

    ನಾನು ಹೇಳಿದ್ದು ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಈ ದೇಶದಲ್ಲಿ ಹುಟ್ಟಿದ ಧರ್ಮದ ಬಗ್ಗೆ ಸ್ಟಡಿ ಮಾಡಿದ್ರು. ಅದನ್ನ ನಾನು ಹೇಳಿದ್ದು. ಅವರು ಹೇಳಿದ್ದನ್ನ ನಾನು ಹೇಳಿದ್ದು. ಅವರ ಪ್ರಕಾರ ಜೈನ, ಮುಸ್ಲಿಂ ಧರ್ಮ ಸ್ಥಾಪನೆ ಮಾಡಿದವರು ಇದ್ದರು. ಆದರೆ ಹಿಂದೂ ಧರ್ಮಕ್ಕೆ ಇಲ್ಲ ಅಂತ ಹೇಳಿದ್ದರು. ಅಷ್ಟು ಹೇಳಿದ್ದಕ್ಕೆ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಾನೇನು ಅವಹೇಳನಕಾರಿಯಾಗಿ ಮಾತಾಡಿಲ್ಲ. ಹಿಂದೂ ಧರ್ಮದ ಮೇಲೆ ನಮಗೆ ಇರೋ ಗೌರವ ಅವರಿಗೆ ಇದೆಯಾ ಎಂದು ಪರಂ ಪ್ರಶ್ನಿಸಿದರು.

    ಬಿಜೆಪಿಯವರು ಇದನ್ನ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಅದೇ ಕೆಲಸ. ಅವರು ಅದನ್ನೆ ಮಾಡಬೇಕು. ಅಭಿವೃದ್ಧಿ ಬಗ್ಗೆ ಮಾತಾಡೋದಿಲ್ಲ. ಕೇಂದ್ರ ಸರ್ಕಾರ ಇನ್ನು ನಮಗೆ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಈ ವರ್ಷದಲ್ಲಿ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಅದರ ಬಗ್ಗೆ ಬಿಜೆಪಿ ಅವರು ಮಾತಾಡಲಿ. ಅಭಿವೃದ್ಧಿ ಬಗ್ಗೆ ಮಾತಾಡಲಿ ಸಲಹೆ ಕೊಡಲಿ. ಅದು ಬಿಟ್ಟು ಯಾವುದರ ಬಗ್ಗೆಯೋ ಮಾತಾಡ್ತಾರೆ ಎಂದು ಬಿಜೆಪಿ ವಿರುದ್ಧ ಪರಮೇಶ್ವರ್ ಕಿಡಿಕಾರಿದರು.

    ಇನ್ನು ಪರಮೇಶ್ವರ್ ಹೇಳಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,‌ ಯಡಿಯೂರಪ್ಪ ಟ್ವೀಟ್ ನೋಡಿದೆ.ಅವರಿಗೂ ಇತ್ತು ಒಂದು ಕಾಲದಲ್ಲಿ ಹಾಗೆ. ಅವರು ದೊಡ್ಡವರು,ಹಿರಿಯರು ಇದ್ದಾರೆ. ನಾನು ಅವರ ಬಗ್ಗೆ ಮಾತಾಡೊಲ್ಲ.ನಾನು ಅವಹೇಳನಕಾರಿಯ ಮಾತು ಆಡಿಲ್ಲ.ಮುಂದೆ ಮತ್ತೆ ಅದನ್ನ ವಿಶ್ಲೇಷಣೆ ಮಾಡೋದು ಅರ್ಥವಿಲ್ಲ ಎಂದರು.

    ಬಿಜೆಪಿಯವರು ಇದನ್ನ ರಾಜಕೀಯಕ್ಕೆ ಬಳಕೆ ಮಾಡಿಕೊಳ್ತಿದ್ದಾರೆ.ಅವರಿಗೆ ಅದೇ ಕೆಲಸ.ಅವರು ಅದನ್ನೆ ಮಾಡಬೇಕು.ಅಭಿವೃದ್ಧಿ ಬಗ್ಗೆ ಮಾತಾಡೋದಿಲ್ಲ. ಕೇಂದ್ರ ಸರ್ಕಾರ ಇನ್ನು ನಮಗೆ ಒಂದು ರೂಪಾಯಿ ಹಣ ಬಿಡುಗಡೆ ‌ಮಾಡಿಲ್ಲ.ಈ ವರ್ಷದಲ್ಲಿ ‌ಒಂದು ರೂಪಾಯಿ ಹಣ ಕೊಟ್ಟಿಲ್ಲ.ಅದರ ಬಗ್ಗೆ ಬಿಜೆಪಿ ಅವರು ಮಾತಾಡಲಿ. ಅಭಿವೃದ್ಧಿ ಬಗ್ಗೆ ಮಾತಾಡಲಿ ಸಲಹೆ ಕೊಡಲಿ. ಅದು ಬಿಟ್ಟು ಯಾವುದರ ಬಗ್ಗೆಯೋ ಮಾತಾಡ್ತಾರೆ ಅಂತ ಬಿಜೆಪಿ ವಿರುದ್ದ ಪರಮೇಶ್ವರ್ ಕಿಡಿಕಾರಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಹಿಂದೂ’ ಭಾರತೀಯ ಪದವೇ ಅಲ್ಲ, ನಾನು ಹೇಳಿದ್ದರಲ್ಲಿ ತಪ್ಪಿಲ್ಲ: ಸತೀಶ್ ಜಾರಕಿಹೊಳಿ

    `ಹಿಂದೂ’ ಭಾರತೀಯ ಪದವೇ ಅಲ್ಲ, ನಾನು ಹೇಳಿದ್ದರಲ್ಲಿ ತಪ್ಪಿಲ್ಲ: ಸತೀಶ್ ಜಾರಕಿಹೊಳಿ

    ಬೆಳಗಾವಿ: `ಹಿಂದೂ’ (Hindu Word) ಶಬ್ಧ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಭಾಷೆಯ (Persian Language) ಪದ, ನಾನು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi)  ಸಮರ್ಥಿಸಿಕೊಂಡಿದ್ದಾರೆ.

    ಈ ಕುರಿತು ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ಜಾರಕಿಹೊಳಿ, 8 ನಿಮಿಷ 17 ಸೆಕೆಂಡ್‌ಗಳ ಸುದೀರ್ಘ ವೀಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ. ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ ಒಂದು ಶಬ್ದದ ವಿಷಯ ಮೇಲೆ ಇವತ್ತು ಇಡೀ ರಾಷ್ಟ್ರ ರಾಜ್ಯದ ಎಲ್ಲಾ ಕಡೆ ಚರ್ಚೆ, ವಿಮರ್ಶೆ ಆಗುತ್ತಿದೆ. ಟೀಕೆಗಳು ಕೇಳಿಬರುತ್ತಿವೆ. ಹೀಗಾಗಿ ಸ್ಪಷ್ಟೀಕರಣ ಕೊಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ – ಅರ್ಥ ಬಹಳ ಅಶ್ಲೀಲವಾಗಿದೆ: ಸತೀಶ್ ಜಾರಕಿಹೊಳಿ

    `ಹಿಂದೂ’ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದ್ದು ಅಂತಾ ಉಲ್ಲೇಖ ಮಾಡಿದ್ದು ನಿಜ. ಹಿಂದೂ ಶಬ್ದದ (Hindu Word) ಬಗ್ಗೆ ಕೆಲವು ನಿಂದನೆ ಮಾಡುವಂತ ಸಾಕಷ್ಟು ಶಬ್ದಗಳು ದಾಖಲೆಗಳಲ್ಲಿ ಸಿಗುತ್ತವೆ. ಅದರ ಬಗ್ಗೆ ನಾನು ಕೋಟ್ ಮಾಡಿದ್ದೇನೆ, ಅದು ಸತೀಶ್ ಜಾರಕಿಹೊಳಿ (Satish Jarkiholi) ಮಾತಲ್ಲ. ಈ ರೀತಿಯ ಭಾಷಣಗಳು ದೇಶದಲ್ಲಿ ಸಾವಿರಾರು ಆಗಿವೆ. ಆದರೂ ಇವತ್ತು ನಾನು ಹೇಳಿದ್ದನ್ನು ದೊಡ್ಡಮಟ್ಟದಲ್ಲಿ ವಿಶ್ಲೇಷಣೆ ಮಾಡ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ತೆಪ್ಪೋತ್ಸವ – ತುಂಗಭದ್ರಾ ನದಿಯಲ್ಲಿ ಬೆಳಕಿನ ಸಂಭ್ರಮ

    ಹಿಂದೂ, ಪಾರ್ಸಿ, ಇಸ್ಲಾಂ (Muslim), ಜೈನ ಹಾಗೂ ಬೌದ್ಧ ಧರ್ಮ ಯಾವುದೇ ಇರಲಿ, ಜಾತಿ – ಧರ್ಮವನ್ನು ಮೀರಿ ನಾವು ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ನಾನು ಹೇಳಿದರಲ್ಲಿ ಯಾವುದೂ ತಪ್ಪಿಲ್ಲ. `ಹಿಂದೂ’ ಶಬ್ಧ ಪರ್ಷಿಯನ್ ಭಾಷೆಯಿಂದ ಬಂದಿದ್ದಕ್ಕೆ ನೂರಾರು ದಾಖಲೆ ಇವೆ. ಆರ್ಯ ಸಮಾಜದ ಸ್ಥಾಪಕರು ದಯಾನಂದ ಸರಸ್ವತಿ ರಚಿಸಿದ `ಸತ್ಯಾರ್ಥ ಪ್ರಕಾಶ’, ಡಾ.ಜಿ.ಎಸ್.ಪಾಟೀಲ ಬರೆದಂತಹ `ಬಸವ ಭಾರತ’ ಪುಸ್ತಕದಲ್ಲಿ ಹಾಗೂ ಬಾಲಗಂಗಾಧರ ತಿಲಕ್‌ರವರ ಕೇಸರಿ ಪತ್ರಿಕೆಯಲ್ಲೂ ಉಲ್ಲೇಖ ಇದೆ. ಸಾಕಷ್ಟು ವೆಬ್‌ಸೈಟ್, ವಿಕಿಪೀಡಿಯದಲ್ಲಿ ಮಾಹಿತಿ ಲಭ್ಯ ಇದೆ. ಆದರೆ ನನ್ನ ಹೇಳಿಕೆಯನ್ನು ಉಕ್ರೇನ್-ರಷ್ಯಾ ಯುದ್ಶ ಮಾದರಿಯಲ್ಲಿ, ಸರ್ಜಿಕಲ್ ಸ್ಟ್ರೈಕ್‌ ಮಾದರಿಯಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹಿಂದೂ ಧರ್ಮದ ವಿಷಯ ಬಂದಾಗ ಇಷ್ಟು ವೈಭವಕರೀಸೋದು ಸರಿಯಲ್ಲ. ಹಿಂದೂಗಳ ಕೊಲೆಯಾದರೆ ಅದಕ್ಕೆ ವಿಶೇಷವಾದ ಸ್ಥಾನಮಾನ, ದಲಿತರು ಯಾರಾದರೂ ತೀರಿಕೊಂಡರೆ ಅದಕ್ಕೆ ಸ್ಥಾನಮಾನ ಇಲ್ಲ ಇದು ನಿಲ್ಲಬೇಕು. ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಭಾಷಣ ಒಮ್ಮೆ ಕೇಳಬೇಕು. ಹಿಂದೂ ಧರ್ಮ ಅಂದ್ರೆ ಅದು `ವೇ ಆಫ್ ಲೈಫ್’ ನಮ್ಮ ಬಾಳ್ವೆ ಅಂದಿದ್ದಾರೆ. ಸುಪ್ರೀಂಕೋರ್ಟ್ ಸಹ ತನ್ನ ತೀರ್ಪಿನಲ್ಲಿ ಹೇಳಿದೆ. ನಾನೇನು ಯಾರನ್ನು ಅಪಮಾನ ಮಾಡುವ ಉದ್ದೇಶ ಇಲ್ಲ. ನನ್ನ ಭಾಷಣ ಇನ್ನೂ ಹತ್ತು ಸಲ ನೋಡಿ, ತಪ್ಪಿದ್ರೆ ಚರ್ಚೆ ಮುಂದುವರಿಸಿ. ಸುಖಾ ಸುಮ್ಮನೇ ಆರೋಪ ಮಾಡುತ್ತಿದ್ದರೆ ಮಾನಹಾನಿ ಮೊಕದ್ದಮೆ, ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಎರಡು ದಿನಗಳ ಹಿಂದೆ ನಡೆದ ಕಾರ್ಯಕ್ರಮವೊಂದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ `ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ ಅದರ ಅರ್ಥ ಬಹಳ ಅಶ್ಲೀಲವಾಗಿದೆ ಎಂದು ಹೇಳಿ ವಿವಾದಕ್ಕೀಡಾದರು.

    Live Tv
    [brid partner=56869869 player=32851 video=960834 autoplay=true]

  • ‘ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ – ಅರ್ಥ ಬಹಳ ಅಶ್ಲೀಲವಾಗಿದೆ: ಸತೀಶ್ ಜಾರಕಿಹೊಳಿ

    ‘ಹಿಂದೂ’ ಭಾರತೀಯ ಪದವೇ ಅಲ್ಲ, ಪರ್ಷಿಯನ್ ಪದ – ಅರ್ಥ ಬಹಳ ಅಶ್ಲೀಲವಾಗಿದೆ: ಸತೀಶ್ ಜಾರಕಿಹೊಳಿ

    ಚಿಕ್ಕೋಡಿ: ಭಾರತಕ್ಕೂ, ಪರ್ಷಿಯನ್‍ಗೂ ಏನ್ ಸಂಬಂಧ? ಹಿಂದೂ (Hindu) ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್ (Persian) ಪದ. ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕಿದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಿಮಗೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರೋ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ ಮನೆ ಮನೆಗೆ ಬುದ್ಧ ಬಸವ ಅಂಬೇಡ್ಕರ್‌ ಎನ್ನುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾತ್ಮಾ ಜ್ಯೋತಿಬಾ ಫುಲೆ ಇಲ್ಲದಿದ್ದರೇ ಛತ್ರಪತಿ ಶಿವಾಜಿ (Shivaji) ಅವರ ಇತಿಹಾಸ ಹೊರಗೆ ಬರುತ್ತಿರಲಿಲ್ಲ. ಅವರ ಇತಿಹಾಸವನ್ನು ಮುಚ್ಚಿಡಲಾಗಿತ್ತು. ಸತ್ಯ ಶೋಧಕ ಸಂಸ್ಥೆಯಿಂದ ಅವರ ಇತಿಹಾಸ ಹೊರಗೆ ಬಂದಿದೆ. ಶಿವಾಜಿ ಎಲ್ಲರನ್ನು ಸಮಾನತೆಯಿಂದ ನೋಡುತ್ತಿದ್ದರು. ವಿಶ್ವದಲ್ಲಿ ಶಿವಾಜಿ ಅವರ ಒಂದೇ ಪೇಂಟಿಂಗ್‌ ಇರುವುದು ಅದನ್ನು ಯಾರೋ ಕುಲಕರ್ಣಿ, ದೇಶಪಾಂಡೆ ಅವರು ತಯಾರಿಸಿಲ್ಲ. ಮೊಹಮ್ಮದ್‌ ಮದಾರಿ ಎನ್ನುವ ಚಿತ್ರಕಾರ ಆ ಪೇಂಟಿಂಗ್‌ ತಯಾರಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ತೆಪ್ಪೋತ್ಸವ – ತುಂಗಭದ್ರಾ ನದಿಯಲ್ಲಿ ಬೆಳಕಿನ ಸಂಭ್ರಮ

    ಪ್ರತಾಪಗಡ್ ಕೋಟೆಯಲ್ಲಿ ಶಿವಾಜಿ ಮಸೀದಿ ನಿರ್ಮಾಣ ಮಾಡಿರುವ ಇತಿಹಾಸವಿದೆ. ಅವರ ಕಾಲದಲ್ಲಿ ಸಮಾನತೆಯಿತ್ತು. ಆದರೆ ಈಗ ಮರಾಠಾ, ಮುಸ್ಲಿಂ, ದಲಿತರ ನಡುವೆ ದಿನನಿತ್ಯ ಜಗಳವಾಗುತ್ತಿವೆ. ಇತಿಹಾಸ ಬೇರೆ ಇದೆ. ನಮಗೆ ಬೇರೆ ಇತಿಹಾಸ ತೋರಿಸಲಾಗುತ್ತಿದೆ. ಬಸವಣ್ಣ, ಶಿವಾಜಿ, ಸಂತ ತುಕಾರಾಮ ಸೇರಿದಂತೆ ಮಹಾನ್ ಪುರುಷರ ಇತಿಹಾಸವನ್ನು ಬೇರೆ ತೋರಿಸಲಾಗುತ್ತಿದೆ. ಬಸವಣ್ಣವರ ಕಾಲದಲ್ಲಿ ಸಾಕಷ್ಟು ಹತ್ಯೆಗಳು ನಡೆದವು ಅದನ್ನು ಮುಸ್ಲಿಮರು ಮಾಡಿದ್ರಾ? ಒಂದು ಲಕ್ಷ ಜೈನರ ಹತ್ಯೆಗಳಾಗಿವೆ ಎಂದು ಜೈನ್ ಸ್ವಾಮೀಜಿ ಹೇಳಿದ್ದಾರೆ. ಜೈನರ ಹತ್ಯೆಯನ್ನು ಆದೀಲ್ ಶಾ ಮಾಡಿದ್ರಾ? ಈ ಎಲ್ಲದರ ಕುರಿತು ಚರ್ಚೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ – ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಯುವ ನಾಯಕ?

    Live Tv
    [brid partner=56869869 player=32851 video=960834 autoplay=true]