Tag: ಹಿಂದೂ ಕಾರ್ಯಕರ್ತ

  • ಮೃತ ಹರ್ಷ ಕುಟುಂಬಕ್ಕೆ 6 ಲಕ್ಷ ರೂ. ಕೊಟ್ಟು ಬರುತ್ತೇನೆ: ರೇಣುಕಾಚಾರ್ಯ

    ಮೃತ ಹರ್ಷ ಕುಟುಂಬಕ್ಕೆ 6 ಲಕ್ಷ ರೂ. ಕೊಟ್ಟು ಬರುತ್ತೇನೆ: ರೇಣುಕಾಚಾರ್ಯ

    ಬೆಂಗಳೂರು: ನಿನ್ನೆ ಘೋಷಣೆ ಮಾಡಿದ್ದ 2 ಲಕ್ಷ ರೂ.ಗಳೊಂದಿಗೆ ಮತ್ತೆ 4 ಲಕ್ಷ ರೂ. ಸೇರಿಸಿ ಒಟ್ಟು 6 ಲಕ್ಷ ರೂ. ವನ್ನು ಮೃತ ಹರ್ಷ ಕುಟುಂಬಕ್ಕೆ ಕೊಟ್ಟು ಬರುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಅಪ್ರತಿಮ ದೇಶಭಕ್ತನ ಕೊಲೆಯಾಗಿದೆ. ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ರಾಜ್ಯದಲ್ಲಿ ಮತ್ತು ದೇಶದಲ್ಲಿ ನಮ್ಮದೇ ಸರ್ಕಾರವಿದೆ. ಪ್ರಕರಣದ ತನಿಖೆಯನ್ನು ಎನ್‍ಐಎಗೆ ವಹಿಸಬೇಕು. ಹರ್ಷನ ಕುಟುಂಬಕ್ಕೆ ನಾನು ವೈಯಕ್ತಕವಾಗಿ 2 ಲಕ್ಷ ರೂ. ಕೊಟ್ಟಿದ್ದೇನೆ ಎಂದರು. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

    ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರನ್ನು ಎನ್‍ಕೌಂಟರ್ ಮಾಡಬೇಕು. ಅವರ ಕುಟುಂಬದ ಕಣ್ಣೀರನ್ನು ನೋಡಲು ಆಗುತ್ತಿಲ್ಲ. ಅವನಿಗೆ ಇಬ್ಬರು ಸಹೋದರಿಯರಿದ್ದಾರೆ. ನಿನ್ನೆ ಘೋಷಣೆ ಮಾಡಿದ್ದ 2 ಲಕ್ಷ ರೂ.ಗಳೊಂದಿಗೆ ಮತ್ತೆ 4 ಲಕ್ಷ ರೂ. ಸೇರಿಸಿ ಒಟ್ಟು 6 ಲಕ್ಷ ರೂ. ಕೊಟ್ಟು ಬರುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

    ಮೃತ ಹರ್ಷನ ದೇಹದಲ್ಲಿ ನಮ್ಮದೇ ಹಿಂದೂ ರಕ್ತ ಹರಿಯುತ್ತಿತ್ತು. ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ. ಘಟನೆಗೆ ಸಂಬಂಧಿಸಿದಂತೆ ನಾನು ಮುಸ್ಲಿಮರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಮೃದುಧೋರಣೆ ತೋರಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್

    ಸರ್ಕಾರದ ವೈಫಲ್ಯದಿಂದ ಘಟನೆ ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಪ್ರಚೋದನಕಾರಿ ಹೇಳಿಕೆಗಳು ಇದಕ್ಕೆ ಕಾರಣ. ಇಂತಹ ಸಂದರ್ಭದಲ್ಲಿ ಸರ್ಕಾರದ ಜೊತೆ ನಿಲ್ಲಬೇಕಿತ್ತು. ನನಗೆ ಶಾಸಕ ಸ್ಥಾನ, ಹುದ್ದೆ ಮುಖ್ಯವಲ್ಲ. ನನಗೆ ಹಿಂದುತ್ವ ಮುಖ್ಯ. ಸವಾಲು ಹಾಕ್ತೇನೆ, ಇನ್ಮುಂದೆ ಅಟ್ಯಾಕ್ ಮಾಡಿದ್ರೆ ಸುಮ್ಮನಿರಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು. ಇದನ್ನೂ ಓದಿ: ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

  • ಮಗ ಕೇಸರಿ ಶಾಲು, ಕುಂಕುಮ ಮಾತ್ರ ಬಿಟ್ಟು ಹೋಗಿದ್ದಾನೆ: ಹರ್ಷ ತಾಯಿ

    ಮಗ ಕೇಸರಿ ಶಾಲು, ಕುಂಕುಮ ಮಾತ್ರ ಬಿಟ್ಟು ಹೋಗಿದ್ದಾನೆ: ಹರ್ಷ ತಾಯಿ

    ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯ ಬಳಿಕ ಮನೆಯಲ್ಲಿ ನೀರವಮೌನ ಆವರಿಸಿದೆ. ಮಗನನ್ನು ಕಳೆದುಕೊಂಡು ಹರ್ಷ ಕುಟುಂಬ ಕಣ್ಣೀರಾಕುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹರ್ಷ ತಾಯಿ ಪದ್ಮಾ, ನನ್ನ ಮಗ ಕೇಸರಿ ಶಾಲು, ಕುಂಕುಮವನ್ನು ಮಾತ್ರ ಬಿಟ್ಟು ಹೋಗಿದ್ದಾನೆ. ಪ್ರತಿ ಮನೆಯಲ್ಲಿ ಕೂಡ ನನ್ನ ಮಗ ಹರ್ಷ ಹುಟ್ಟಲಿ. ನಿನ್ನೆ ನನ್ನ ಮಗನ ಅಂತ್ಯಸಂಸ್ಕಾರಕ್ಕೆ ಬಂದವರೇ ನನ್ನ ಮಕ್ಕಳು. ಅವರಲ್ಲಿಯೇ ಹರ್ಷನನ್ನು ನೋಡುತ್ತೇನೆ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತರು. ಇದನ್ನೂ ಓದಿ: ಶಿವಮೊಗ್ಗ ಒಳ್ಳೆಯ ನಾಡು, ಯಡಿಯೂರಪ್ಪ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ: ಡಿಕೆಶಿ

    ನನ್ನ ತಮ್ಮ ಇಷ್ಟೊಂದು ಜನರ ಪ್ರೀತಿ ಗಳಿಸಿದ್ದಾನೆ ಎಂದು ನನಗೆ ಗೊತ್ತಿರಲಿಲ್ಲ. ಆತನನ್ನು ನಾನು ಚಿಕ್ಕ ಮಗು ಎಂದುಕೊಂಡಿದ್ದೆ. ಈ ರೀತಿಯಾಗಿ ಪ್ರೀತಿಯನ್ನು, ಸ್ನೇಹವನ್ನು ಪಡೆದಿದ್ದಾನೆ ಎಂದರೆ ನಮಗೂ ಗೊತ್ತಿರಲ್ಲಿಲ್ಲ. ಈ ಮನೆಯಲ್ಲಿ ಕೇವಲ ಕೇಸರಿ, ಕುಂಕುಮ ಮಾತ್ರ ಇದೆ. ನಿನ್ನೆ ಮಣ್ಣು ಮಾಡಿ ಬಂದಾಗ ನನ್ನ ಮಡಿಲಲ್ಲಿ ಕೇವಲ ಕುಂಕುಮ ಮಾತ್ರ ಇತ್ತು. ಅದೇ ನನ್ನ ತಮ್ಮ ಎಂದು ನೋಡಿಕೊಳ್ಳುತ್ತೇನೆ ಎಂದು ಹರ್ಷ ಸಹೋದರಿ ಅಶ್ವಿನಿ ದುಃಖಿತರಾದರು. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

    ಭಾನುವಾರ ರಾತ್ರಿ ಐವರು ದುಷ್ಕರ್ಮಿಗಳು ಹರ್ಷನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆ ಬಳಿಕದಿಂದ ಶಿವಮೊಗ್ಗ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹರ್ಷ ಮೃತದೇಹದ ಮೆರವಣಿಗೆ ವೇಳೆ ಕಲ್ಲು ತೂರಾಟ. ಬೈಕಿಗೆ ಬೆಂಕಿ ಹಚ್ಚಿರುವ ಮೂಲಕ ಹಿಂಸಾಚಾರಕ್ಕೆ ತಿರುಗಿತ್ತು. ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪೊಲೀಸರು ಅಲರ್ಟ್ ಆಗಿದ್ದು, ಸದ್ಯ ಶಿವಮೊಗ್ಗದಲ್ಲಿ ಸೆಕ್ಷನ್ 144 ಅನ್ನು ನಾಳೆವರೆಗೂ ಜಾರಿ ಮಾಡಲಾಗಿದೆ.

  • ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

    ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ

    ಬೆಂಗಳೂರು: ಶಿವೆಮೊಗ್ಗದಲ್ಲಿ ಕೊಲೆಯಾಗಿರುವ ಹಿಂದೂ ಕಾರ್ಯಕರ್ತನನ್ನು ವಿದೇಶಿ ಪತ್ರಕರ್ತನೊಬ್ಬ ಟೆರರಿಸ್ಟ್ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಡಿಜಿಪಿ ಪ್ರವೀಣ್ ಸೂದ್ ಸ್ಪಷ್ಟಣೆ ನೀಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

    ಸಿಜೆ ವಾರ್ಲೆನ್ ಎಂಬಾತ ತನ್ನ ಟ್ವಿಟ್ಟರ್ ಖಾತೆಯಲ್ಲಿ, ನವೆಂಬರ್ ತಿಂಗಳಲ್ಲಿ ತ್ರಿಪುರಾದಲ್ಲಿ ಭಯೋತ್ಪಾದಕ ದಾಳಿಯನ್ನು ನಡೆಸಿರುವ ಹಿಂದೂ ಉಗ್ರಗಾಮಿ ಸಂಘಟನೆಯಾಗಿರುವ ಭಜರಂಗದಳಕ್ಕೆ ಸೇರಿದ ಭಯೋತ್ಪಾದಕನನ್ನು ಭಾನುವಾರ ರಾತ್ರಿ ಕೊಲ್ಲಲಾಗಿದೆ ಎಂದು ಬರೆದುಕೊಂಡಿದ್ದನು.

    ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರವೀಣ್ ಸೂದ್, ಇದು ಸಂಪೂರ್ಣವಾಗಿ ಸುಳ್ಳು ಸುದ್ದಿಯಾಗಿದೆ. ಹತ್ಯೆಯಾದ ವ್ಯಕ್ತಿಗೆ ಭಯೋತ್ಪಾದನೆ ಅಥವಾ ತ್ರಿಪುರ ಹಿಂಸಾಚಾರದೊಂದಿಗೆ ಯಾವುದೇ ಸಂಬಂಧವಿಲ್ಲ. ಈ ವ್ಯಕ್ತಿಯ ಸಾವಿಗೂ, ಭಯೋತ್ಪಾದನೆಗೂ ಹಾಗೂ ತ್ರಿಪುರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸುವ ಮೂಲಕ ವಾರ್ಲೆನ್ ಆರೋಪವನ್ನು ಡಿಜಿಪಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ಪ್ರಕ್ಷುಬ್ಧಗೊಂಡ ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ – ನಾಳೆ ಬೆಳಗ್ಗೆವರೆಗೂ ನಿಷೇಧಾಜ್ಞೆ, ಖಾಕಿ ಭದ್ರತೆ

    https://twitter.com/DgpKarnataka/status/1495715992361926658

    ಭಾನುವಾರ ರಾತ್ರಿ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಸದ್ಯ ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕಫ್ರ್ಯೂ ಜಾರಿ ಮಾಡಲಾಗಿದೆ.

  • ಈಶ್ವರಪ್ಪನವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ: ಪ್ರಹ್ಲಾದ್ ಜೋಶಿ

    ಈಶ್ವರಪ್ಪನವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ: ಪ್ರಹ್ಲಾದ್ ಜೋಶಿ

    ಬೆಂಗಳೂರು: ಈಶ್ವರಪ್ಪ ಹಾಗೆ ಹೇಳಿದ್ದಾರೆ ಎಂದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಕೊಲೆ ಪ್ರಕರಣದ ವಿಚಾರವನ್ನು ಸರ್ಕಾರ ಸರಿಯಾಗಿ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆಯೂ ಇಂತಹ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇದರಿಂದಾಗಿ  ಸರ್ಕಾರ ಘಟನೆಯ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ಆದಷ್ಟು ಬೇಗ ಆರೋಪಿಗಳನ್ನು ಬಂಧನ ಮಾಡಬೇಕು ಎಂದು ಒತ್ತಾಯಿಸಿದರು.

    ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪ ಹಾಗೆ ಹೇಳಿದ್ದಾರೆ ಎಂದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ಕೊಲೆಯಿಂದ ಸರ್ಕಾರದ ವೈಫಲ್ಯ ಎಂದು ಹೇಳಲು ಆಗುವುದಿಲ್ಲ. ಸಂಪೂರ್ಣ ತನಿಖೆ ಆಗಬೇಕು. ತಪ್ಪಿತಸ್ಥ ಗೂಂಡಾಗಳನ್ನು ಬಂಧನ ಮಾಡಬೇಕು. ಅದನ್ನು ರಾಜ್ಯ ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.

    ಕಾಂಗ್ರೆಸ್ ಧರಣಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ಗೆ ಬೇರೆ ವಿಚಾರ ಇಲ್ಲ. ಅದಕೋಸ್ಕರ ಅವರು ಪ್ರತಿಭಟನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಧ್ಯೆ ಕಿತ್ತಾಟ ಇದೆ. ಮೊದಲು ಆ ಸಮಸ್ಯೆ ಬಗೆಹರಿಸಿಕೊಳ್ಳಲಿ. ಪ್ರತಿಭಟನೆ ಮಾಡುವ ಹಕ್ಕು ಇದೆ. ಆದರೆ ಪ್ರತಿಭಟನೆ ಮಾಡುವ ವಿಷಯ ಇದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    ಹಿಜಬ್ ಗೊಂದಲ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್‌ಗೆ ಹಿಜಬ್ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಕಾಂಗ್ರೆಸ್ ಗೊಂದಲದ ಪಾರ್ಟಿಯಾಗಿದೆ. ಮುಸ್ಲಿಂ ಓಟ್ ಕೈತಪ್ಪುತ್ತದೆ ಎಂದು ಏನು ಮಾತಾಡುತ್ತಿಲ್ಲ. ಕಾಂಗ್ರೆಸ್ ನಾಯಕರು ಹೈಕೋರ್ಟ್ ಆದೇಶ ಪಾಲನೆ ಮಾಡಿ ಎಂದು ಹೇಳಲಿ ನೋಡೋಣ ಎಂದು ಸವಾಲೆಸೆದ ಅವರು, ಅದನ್ನು ಹೇಳೋ ಧೈರ್ಯ ಅವರಿಗೆ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಇಂಟಲಿಜೆನ್ಸ್ ಈಶ್ವರಪ್ಪ ಹತ್ರ ಇದೆಯಾ..?- ಪ್ರಿಯಾಂಕ್ ಖರ್ಗೆ ಕಿಡಿ

  • ಹತ್ಯೆ ಅಪರಾಧಿಗಳು ಯಾವುದೇ ಸಂಘಟನೆ ಆಗಿದ್ದರೂ ಗಲ್ಲು ಶಿಕ್ಷೆ ವಿಧಿಸಿ: ಸಿದ್ದರಾಮಯ್ಯ

    ಹತ್ಯೆ ಅಪರಾಧಿಗಳು ಯಾವುದೇ ಸಂಘಟನೆ ಆಗಿದ್ದರೂ ಗಲ್ಲು ಶಿಕ್ಷೆ ವಿಧಿಸಿ: ಸಿದ್ದರಾಮಯ್ಯ

    ಬೆಂಗಳೂರು: ಶಿವಮೊಗ್ಗದ ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆಪರಾಧಿಗಳು ಯಾವುದೇ ಸಂಘಟನೆಗೆ ಸೇರಿದ್ದರೂ ಅವರನ್ನು ಸರ್ಕಾರ ಬಂಧಿಸಿ ಗಲ್ಲು ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಿ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ವಿಧಾನಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಘಟನೆಯನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗುತ್ತದೆ. ಗೃಹ ಸಚಿವರ ಸ್ವಂತ ಜಿಲ್ಲೆಯಲ್ಲಿಯೇ ಕೊಲೆ ನಡೆದಿದೆ. ಹೀಗಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡಲೇ ರಾಜಿನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    ಮಾಧ್ಯಮ ಪ್ರತಿನಿಧಿಗಳಿಗೆ ಸಿದ್ದರಾಮಯ್ಯ ಅವರು ಹೇಳಿದ್ದು: ನಾವು ಅಹಿಂಸೆಯಲ್ಲಿ ನಂಬಿಕೆ ಇಟ್ಟವರು. ಯಾರದ್ದೇ ಕೊಲೆಯಾದರೂ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆಯಾಗಬೇಕು. ಹರ್ಷ ಅವರ ಕೊಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು.

    ಆರೋಪಿಗಳು ಯಾವುದೇ ಸಮುದಾಯ, ಸಂಘಟನೆಗೆ ಸೇರಿದ್ದರೂ ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕು. ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈಶ್ವರಪ್ಪ, ಯುಡಿಯೂರಪ್ಪ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆ ಇದು. ಇದು ಏನನ್ನು ಸೂಚಿಸುತ್ತದೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿರುವುದಕ್ಕೆ ಇದು ಉದಾಹರಣೆ. ಈಶ್ವರಪ್ಪ, ಆರಗ ಜ್ಞಾನೇಂದ್ರ ಇದಕ್ಕೆ ಜವಾಬ್ದಾರರು.

    ಪೊಲೀಸರು ಅಪರಾಧಿಗಳನ್ನು ಮೊದಲು ಬಂಧಿಸಿ ಕಠಿಣವಾದ ತನಿಖೆ ಮಾಡಲಿ. ಬೆಂಗಳೂರಿನಲ್ಲಿ ಕುಳಿತು ಕಾಂಗ್ರೆಸ್ ಅಥವಾ ಯಾರ ಮೇಲೋ ಆರೋಪ ಮಾಡುವುದಲ್ಲ. ಆರೋಪಿಗಳು ಯಾರೇ ಆಗಿದ್ದರೂ ಬಂಧಿಸಿ ಶಿಕ್ಷೆಗೆ ಒಳಪಡಿಸಲಿ. ಗೃಹ ಸಚಿವರು ಶಿವಮೊಗ್ಗ ಜಿಲ್ಲೆಯವರೇ ಆಗಿರುವುದರಿಂದ ಘಟನೆ ಹಿನ್ನೆಲೆಯಲಿ ಅವರು ರಾಜಿನಾಮೆ ಕೊಡಬೇಕು. ಆದರೆ, ಅವರು ಭಂಡರು. ರಾಜಿನಾಮೆ ಕೊಡುವುದಿಲ್ಲ. ನಮ್ಮ ಸರ್ಕಾರ ಇದ್ದಾಗ ಕೆ.ಜೆ. ಜಾರ್ಜ್ ಅವರು ರಾಜಿನಾಮೆ ಕೊಟ್ಟಿದ್ದರು. ರಾಜಿನಾಮೆ ಕೊಡುವುದೇ ಇಲ್ಲ ಎಂದು ಹೇಳಿದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಇದನ್ನೂ ಓದಿ: ಯುವಕನ ಕೊಲೆ ಪ್ರಕರಣ- ಓರ್ವ ಆರೋಪಿ ವಶಕ್ಕೆ, ನಾಲ್ವರಿಗಾಗಿ ಹುಡುಕಾಟ

    ಸದನ ನಡೆಸಲು ಕಾಂಗ್ರೆಸ್‍ನವರಿಗೆ ಆಸಕ್ತಿ ಇಲ್ಲ ಎಂಬ ಸಚಿವ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ರಾಷ್ಟ್ರಧ್ವಜಕ್ಕೆ ಅವಮಾನ ಆಗುವಂಥ ಹೇಳಿಕೆ ನೀಡಿದಾಗ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಾರೆ ಎಂದು ಬಿಜೆಪಿಯವರಿಗೆ ಗೊತ್ತು. 40 ಪರ್ಸೆಂಟ್ ಕಮಿಷನ್, ಬಿಟ್ ಕಾಯಿನ್ ಹಗರಣದ ಬಗ್ಗೆ ನಾವು ಪ್ರಸ್ತಾಪ ಮಾಡುತ್ತೇವೆ ಎಂಬ ಕಾರಣಕ್ಕೆ ಸದನ ನಡೆಯುವುದು ಅವರಿಗೂ ಇಷ್ಟವಿಲ್ಲ. ಹೀಗಾಗಿಯೇ ಈಶ್ವರಪ್ಪ ಅವರಿಂದ ರಾಜಿನಾಮೆ ಕೊಡಿಸುತ್ತಿಲ್ಲ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಅಶೋಕ್ ಅವರು ಸಂಧಾನಕ್ಕೆ ಬಂದಾಗ ಈಶ್ವರಪ್ಪ ಅವರಿಂದ ರಾಜಿನಾಮೆ ಕೊಡಿಸಿ, ನಾವು ಸದನಕ್ಕೆ ಹಾಜರಾಗುತ್ತೇವೆ ಎಂದು ಹೇಳಿದ್ದೆವು.

    ದೇಶದ ಗೌರವದ ಸಂಕೇತವಾದ ರಾಷ್ಟ್ರಧ್ವಜಕ್ಕೆ ಈಶ್ವರಪ್ಪ ಅವರು ಅವಮಾನ ಮಾಡಿದಾಗ ಸುಮ್ಮನೆ ಕೂರಲು ಆಗುವುದಿಲ್ಲ ಎಂದಿದ್ದೆವು. ಆದರೆ, ಅದಕ್ಕೆ ಅವರು ಒಪ್ಪಲು ತಯಾರಿಲ್ಲ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಬಿಜೆಪಿಯವರಿಗೇ ಕಾಳಜಿ ಇಲ್ಲ. ಈಶ್ವರಪ್ಪ ಅವರು ರಾಜಿನಾಮೆ ಕೊಟ್ಟಿದ್ದರೆ ಅಥವಾ ಅವರನ್ನು ಸಂಪುಟದಿಂದ ವಜಾ ಮಾಡಿದ್ದರೆ ನಾವೇಕೆ ಧರಣಿ ಮಾಡುತ್ತಿದ್ದೆವು. ಜೆಡಿಎಸ್ ಶಾಸಕರು ನಮ್ಮ ವಿರುದ್ಧ ಪ್ರತಿಭಟನೆ ಮಾಡಲಿ, ಇದಕ್ಕೆ ನಮ್ಮ ತಕರಾರು ಇಲ್ಲ. ನಾವು ನಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಅವರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ.

    ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವಾಗ ಮೌನದಿಂದ ಇರಲು ಸಾಧ್ಯವೇ ? ಒಂದು ವೇಳೆ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರೆ ನಾವು ಜನತಾ ನ್ಯಾಯಾಲಯಕ್ಕೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

  • 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    ಶಿವಮೊಗ್ಗ: ಯುವಕನ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಹರ್ಷನ ಕೊಲೆಗೆ ಎರಡು ವರ್ಷಗಳ ಹಿಂದೆಯೇ ಸುಪಾರಿ ಕೊಟ್ಟಿದ್ದರು ಎಂದು ಮೃತನ ಸಂಬಂಧಿ ಗಂಭೀರ ಆರೋಪ ಮಾಡಿದ್ದಾರೆ.

    ಮೆಗ್ಗಾನ್ ಆಸ್ಪತ್ರೆಯ ಬಳಿ ಹತ್ಯೆಯಾದ ಯುವಕನ ಸಂಬಂಧಿ ಪ್ರವೀಣ್ ಮಾತನಾಡಿದ್ದು, ಹೊಡೆದು ಹಾಕಿದ್ದಾರೆ ಅಷ್ಟೇ. ಇವನನ್ನು ಹೊಡೆದು ಹಾಕಿದರೆ 10 ಲಕ್ಷ ರೂ. ಕೊಡ್ತೀನಿ ಅಂತ 2 ವರ್ಷದಿಂದಲೂ‌ ಮುಸ್ಲಿಮರು ಹೇಳುತ್ತಿದ್ದರು. ಯಾರು ಹೊಡೆದು ಹಾಕಿದ್ದಾರೆ ಅಂತ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಯುವಕನ ಕೊಲೆ ಪ್ರಕರಣ- ಓರ್ವ ಆರೋಪಿ ವಶಕ್ಕೆ, ನಾಲ್ವರಿಗಾಗಿ ಹುಡುಕಾಟ

    ಪೊಲೀಸರು ಏನು ತನಿಖೆ ಮಾಡುತ್ತಾರೋ ಅದರ ಆಧಾರದ ಮೇಲೆ ನಮಗೆ ಗೊತ್ತಾಗಬೇಕು. ಎರಡು ವರ್ಷದಿಂದಲೂ ಈ ಜಿದ್ದು ಇದ್ದೇ ಇದೆ ಎಂದು ಪ್ರವೀಣ್‌ ಮಾಹಿತಿ ನೀಡಿದ್ದಾನೆ.

    ಹರ್ಷ ಎಂಬಾತ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿದೆ. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಇದನ್ನೂ ಓದಿ: ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ, ಶೀಘ್ರವೇ ಬಂಧನ: ಆರಗ ಜ್ಞಾನೇಂದ್ರ

    ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಎರಡು ಕೋಮಿನ ಯುವಕರ ಗುಂಪು ಮೆಗ್ಗಾನ್ ಆಸ್ಪತ್ರೆ ಬಳಿ ಜಮಾಯಿಸಿತು. ಹೀಗಾಗಿ ಮೆಗ್ಗಾನ್ ಆಸ್ಪತ್ರೆ ಬಳಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

  • ಕೊಪ್ಪಳದಲ್ಲಿ ಮಧುಗಿರಿ ಮೋದಿ ಹುಚ್ಚಾಟ, ಎಫ್‍ಐಆರ್ ದಾಖಲು

    ಕೊಪ್ಪಳದಲ್ಲಿ ಮಧುಗಿರಿ ಮೋದಿ ಹುಚ್ಚಾಟ, ಎಫ್‍ಐಆರ್ ದಾಖಲು

    ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ಅಭಿಮಾನಿ, ಹಿಂದೂ ಕಾರ್ಯಕರ್ತ ಆತುಲ್ ಕುಮಾರ್ ಸಬರಲಾಲ್ ಮಧುಗಿರಿ ಮೋದಿ ಕೋಮುಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾಗಿದೆ.

    ಮಧುಗಿರಿ ಮೋದಿ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರು ಅಂಗಡಿಗಳು ಇಡಬಾರದು ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಗಂಗಾವತಿ ತಹಶಿಲ್ದಾರ್ ಎಫ್‍ಐಆರ್ ದಾಖಲು ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅಬ್ಬರ- ಸಿಡಿಲಿಗೆ ಯುವಕ ಬಲಿ, ಮನೆಗಳಿಗೆ ನುಗ್ಗಿದ ನೀರು

    ಮಧುಗಿರಿ ಮೋದಿ ಅವರ ವಿರುದ್ಧ ತಹಶಿಲ್ದಾರ್ 153(ಎ)(ರಾಷ್ಟೀಯ ಸಮಗ್ರತೆಗೆ ಬಾಧಕವಾಗುವ ಹೇಳಿಕೆ), 505(2)(ವರ್ಗಗಳ ನಡುವೆ ವೈರ, ದ್ವೇಷ ಅಥವಾ ವೈಮನಸ್ಯವನ್ನು ಉಂಟುಮಾಡುವ ಹೇಳಿಕೆ), 506(ಕ್ರಿಮಿನಲ್ ಬೆದರಿಕೆ) ಅಡಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ ಆರೋಪದಡಿ ಕೇಸ್ ದಾಖಲಾಗಿದೆ.

    ಮಧುಗಿರಿ ಅವರು ಈ ಕುರಿತು ವೀಡಿಯೋ ಮಾಡಿ ಸೊಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ವೀಡಿಯೋ ಫುಲ್ ವೈರಲ್ ಆಗಿತ್ತು. ಈ ಸಂಬಂಧ ಮಾಧ್ಯಮಗಳಲ್ಲಿಯೂ ವರದಿ ಪ್ರಸಾರವಾಗಿತ್ತು. ಇದನ್ನೂ ಓದಿ: ಸಿಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

    ಮಧುಗಿರಿ ಅವರು ಅನ್ಯ ಧರ್ಮಿಯರು ದುಖಾನ್(ಅಂಗಡಿ) ಎತ್ತುಕೊಂಡು ಹೋಗ್ತಾ ಇರಬೇಕೆಂದು ಎಚ್ಚರಿಕೆ ನೀಡಿದ್ದು, ಈ ಸ್ಥಳದಲ್ಲಿ ಹಿಂದೂಗಳು ಮಾತ್ರ ವ್ಯಾಪಾರ ಮಾಡಲು ಅರ್ಹರು. ದೇವಸ್ಥಾನದ ಎದುರಿಗೆ ಅಂಗಡಿ ಇಟ್ಟವರು ತಾಕತ್ತಿದ್ದರೆ ಜೈ ಶ್ರೀರಾಮ್ ಎಂದು ಹೇಳಿ ಅಂಗಡಿ ಇಟ್ಟುಕೊಟ್ಟಿ. ಆಂಜನೇಯನ ಫೋಟೋ ಹಾಕಿಕೊಂಡು ಅಂಗಡಿ ಇಟ್ಟುಕೊಳ್ಳಿ ಎಂದು ಆಗ್ರಹಿಸಿದ್ದರು.

  • ಹಿಂದೂಗಳ ಪರ ನಿಂತಿದ್ದಕ್ಕೆ ಜಿಹಾದಿಗಳಿಂದ ಬೆದರಿಕೆ ಕರೆ- ಶೋಭಾ ಕರಂದ್ಲಾಜೆ

    ಹಿಂದೂಗಳ ಪರ ನಿಂತಿದ್ದಕ್ಕೆ ಜಿಹಾದಿಗಳಿಂದ ಬೆದರಿಕೆ ಕರೆ- ಶೋಭಾ ಕರಂದ್ಲಾಜೆ

    ಉಡುಪಿ: ತಬ್ಲಿಘಿಗಳ ವಿರುದ್ಧ ಮಾತನಾಡಿದ್ದಕ್ಕೆ ಹಾಗೂ ಕಳೆದ ಎರಡ್ಮೂರು ದಿನಿಗಳಿಂದ ಕೇರಳದ ಹಿಂದೂ ಕಾರ್ಯಕರ್ತ ಕೂವೈತ್ ನಲ್ಲಿ ಮೋದಿ ಪರವಾಗಿ ಮಾತನಾಡಿದ್ದು, ಜಿಹಾದಿಗಳು ಹಲ್ಲೆ ನಡೆಸಿದ್ದಾರೆ. ಹಿಂದೂ ಯುವಕನ ಪರ ನಿಂತಿದ್ದಕ್ಕೆ ನನಗೂ ಬೆದರಿಕೆ ಕರೆ ಮಾಡಿ, ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೇರಳದ ಹಿಂದೂ ಕಾರ್ಯಕರ್ತ ಕೂವೈತ್ ನಲ್ಲಿ ಮೋದಿ ಪರವಾಗಿ ಮಾತನಾಡಿದ್ದಾನೆ. ಇದರಿಂದ ಅಲ್ಲಿನ ಜಿಹಾದಿಗಳು ಆತನ ಮೇಲೆ ಹಲ್ಲೇ ಮಾಡಿದ್ದು, ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೆ ಕ್ಷಮೆಯಾಚಿಸಿ, ಫೀಸ್ಬುಕ್‍ನಿಂದ ಪೋಸ್ಟ್ ತಗೆಯುವಂತೆ ಬೆದರಿಕೆ ಹಾಕಿದ್ದಾರೆ. ಈ ಘಟನೆ ಖಂಡಿಸಿ ಟ್ವೀಟ್ ಮಾಡಿದ್ದೆ, ಮಾಧ್ಯಮದವರ ಜೊತೆ ಸಹ ಮಾತನಾಡಿದ್ದೆ. ಅಲ್ಲದೆ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದೇನೆ. ಹೀಗಾಗಿ ನನಗೆ ಬದರಿಕೆ ಕರೆ ಮಾಡುತ್ತಿದ್ದಾರೆ. ಅಲ್ಲದೆ ತುಂಬಾ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಉಡುಪಿ, ಕುಂದಾಪುರ ಎಂದು ಹೇಳಿಕೊಂಡು ಯಾರೋ ಕರೆ ಮಾಡಿದರು, ಇದಕ್ಕೂ ಮುಂಚೆ ಸಹ ಹಲವರು ಫೋನ್ ಮಾಡಿದ್ದರು. ಲಾಕ್‍ಡೌನ್ ಸಡಿಲಿಕೆ ಕುರಿತು ಮಾತನಾಡಿ, ನಮ್ಮ ವಿರುದ್ಧ ಮಾತನಾಡಲು ಬರುತ್ತದೆ. ಇಂತಹದ್ದೆಲ್ಲ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಅಲ್ಲದೆ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಶೋಭಾ ಆರೋಪಿಸಿದ್ದಾರೆ.

    ಬದರಿಕೆ ಕರೆ ಬರುತ್ತಿರುವುದು ಇದೇ ಮೊದಲಲ್ಲ ಹಿಂದೆ ಅಣ್ಣಾಮಲೈ ಎಸ್‍ಪಿ ಆಗಿದ್ದಾಗಲೂ ಹೆಚ್ಚು ಬೆದರಿಕೆ ಕರೆ ಬರುತ್ತಿದ್ದವು. ಪಿಎಫ್‍ಐ(ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಬಗ್ಗೆ ಮಾತನಾಡಿದ್ದೆ. ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಮಾತನಾಡಿದ್ದೆ. ಆಗಲೂ ಬೆದರಿಕೆ ಕರೆ ಬಂದಿದ್ದವು. ಈ ಹಿಂದೆ ಸಹ ದೂರು ನೀಡಿದ್ದೆ, ಇಂಟರ್ನೆಟ್ ಮೂಲಕ ಕರೆ ಬರುತ್ತಿವೆ ಹೀಗಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಕುರಿತು ದೆಹಲಿಯಲ್ಲಿ ಸಹ ದೂರು ನೀಡಿದ್ದೇನೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಾರ್ಯಕಾರಿ ಸಮಿತಿಯ ಸಾಮಾಜಿಕ ಜಾಲತಾಣದ ಕುರಿತ ಸಭೆಯಲ್ಲಿ ಸಹ ದೂರು ನೀಡಿದ್ದೇನೆ ಎಂದರು.

    ಯಾರು ಹಿಂದೂಗಳ ಪರವಾಗಿ ಮಾತನಾಡುತ್ತಾರೋ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಜಿಹಾದಿಗಳು ತುಂಬಾ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದು, ಹಿಂದೂ ವಿರೋಧಿ ಕೆಲಸ ಮಾಡಲು, ಲವ್ ಜಿಹಾದ್ ಮಾಡಲು, ಲ್ಯಾಂಡ್ ಮಾಫಿಯಾ ಮಾಡಲು, ಕೊರೊನಾ ಜಿಹಾದ್ ಮಾಡಲು ಅವರಿಗೆ ವಿದೇಶದಿಂದ ಹಣ ಬರುತ್ತದೆ. ಹೀಗಾಗಿ ವಿದೇಶದಲ್ಲಿ ಕುಳಿತು ಕರೆ ಮಾಡಿ ನಮ್ಮನ್ನು ಹೆದರಿಸುತ್ತಾರೆ. ಅಶ್ಲೀಲವಾಗಿ ಮಾತನಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ.

  • ಬೆಂಗಳೂರು ಚಾರ್ಜ್ ಶೀಟ್ ಆಯ್ತು, ಈಗ ಬಿಜೆಪಿಯ ಮತ್ತೊಂದು ಎಡವಟ್ಟು ಬಹಿರಂಗ!

    ಬೆಂಗಳೂರು ಚಾರ್ಜ್ ಶೀಟ್ ಆಯ್ತು, ಈಗ ಬಿಜೆಪಿಯ ಮತ್ತೊಂದು ಎಡವಟ್ಟು ಬಹಿರಂಗ!

    ಮಂಗಳೂರು: ಬೆಂಗಳೂರು ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಮೇಲೆ ಆರೋಪ ಮಾಡುವ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ಬಿಜೆಪಿ, ಇದೀಗ ಹಿಂದೂ ಕಾರ್ಯಕರ್ತರ ಹತ್ಯೆಯ ವಿಚಾರದಲ್ಲಿ ಮತ್ತೊಮ್ಮೆ ಎಡವಟ್ಟು ಮಾಡಿಕೊಳ್ಳುವ ಮೂಲಕ ಚರ್ಚೆಗೆ ಗ್ರಾಸವಾಗಿದೆ.

    ರಾಜ್ಯದಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದೆ ಎಂದು ಬಿಜೆಪಿ ನಾಯಕರು ಹೇಳಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಮಾರ್ಚ್ 6 ರಂದು ಮಂಗಳೂರಿನಲ್ಲಿ ನಡೆಯಲಿರುವ `ಮಂಗಳೂರು ಚಲೋ’ ಕಾರ್ಯಕ್ರಮದ ಮುದ್ರಿತ ಕರಪತ್ರದಲ್ಲಿ ಕೇವಲ 16 ಮಂದಿಯ ಭಾವಚಿತ್ರ ಸಹಿತ ವಿವರ ನೀಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಬಿಜೆಪಿಯ ಚಾರ್ಜ್ ಶೀಟ್ ನಲ್ಲಿ ಲೋಪ: ವೈರಲ್ ಆಯ್ತು ಎಡವಟ್ಟು

    ಮಾರ್ಚ್ 6 ಮಂಗಳೂರು ಚಲೋ ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಭಾಗವಹಿಸಲಿದ್ದಾರೆ. ಈ ಹಿಂದೆ 23 ಕಾರ್ಯಕರ್ತರ ಪಟ್ಟಿ ಮಾಡಿದ್ದ ಹಾಗೂ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಬಿಜೆಪಿಯು ಈಗ ಏಕಾಏಕಿ 7 ಮಂದಿಯನ್ನು ಕೈಬಿಟ್ಟಿದ್ದು ಯಾಕೆ ಎನ್ನುವುದು ಕೂಡಾ ವಿವಾದಕ್ಕೆ ಕಾರಣವಾಗಿದೆ.

  • ಇಲ್ಲಿ ಪೊಲೀಸ್ರು ಇಲ್ಲದೇ ಇದ್ದರೆ, ನಮ್ಮ ಕೈಯಲ್ಲಿ ಧ್ವಜಗಳ ಬದಲು ತಲ್ವಾರ್ ಇರ್ತಿತ್ತು: ಆರ್‍ಎಸ್‍ಎಸ್ ಮುಖಂಡ

    ಇಲ್ಲಿ ಪೊಲೀಸ್ರು ಇಲ್ಲದೇ ಇದ್ದರೆ, ನಮ್ಮ ಕೈಯಲ್ಲಿ ಧ್ವಜಗಳ ಬದಲು ತಲ್ವಾರ್ ಇರ್ತಿತ್ತು: ಆರ್‍ಎಸ್‍ಎಸ್ ಮುಖಂಡ

    ಹುಬ್ಬಳ್ಳಿ: ಒಂದು ವೇಳೆ ಇಲ್ಲಿ ಇರತಕ್ಕಂತಹ ಪೊಲೀಸರು ಇರದೇ ಇದ್ದಿದ್ದರೆ ನಮ್ಮ ಕೈಯಲ್ಲಿ ಧ್ವಜಗಳ ಬದಲು ತಲ್ವಾರ್ ಇರುತ್ತಿತ್ತು ಎಂದು ಆರ್‍ಎಸ್‍ಎಸ್ ಮುಖಂಡ ರಘುನಂದನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಹುಬ್ಬಳ್ಳಿಯ ದುರ್ಗದ ಬೈಲ್ ನಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ ಸಭೆಯಲ್ಲಿ ರಘುನಂದನ್ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈಗ ನಮ್ಮ ಕೈಯಲ್ಲಿ ಕಲ್ಲುಗಳು ಇದ್ದಿದ್ದರೆ ಇಲ್ಲಿರುವ ಯಾವ ಬಿಲ್ಡಿಂಗ್ ಗಳು ಮತ್ತು ಗ್ಲಾಸ್ ಗಳು ಇರುತ್ತಿರಲಿಲ್ಲ. ಇದೂವರೆಗೂ ನಾವುಗಳು ಯಾಕೆ ಕಲ್ಲುಗಳನ್ನು ಕೈಗೆ ಎತ್ತುಕೊಂಡಿಲ್ಲ ಅಂದ್ರೆ, ನಮಗೆ ಪೊಲೀಸರ ಲಾಠಿಯ ಮೇಲೆ ನಂಬಿಕೆಯಿದೆ ಎಂದರು.

    ಯಾವತ್ತೂ ಪೊಲೀಸರು ಯೋಗ್ಯವಾಗಿ ನಡೆದುಕೊಂಡರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ. ಪೊಲೀಸರ ಕೈಯಲ್ಲಿರುವ ಲಾಠಿ ಹಾಗೂ ಅವರ ಮನಸ್ಸಿನಲ್ಲಿ ಒಂದು ದೇಶ ಭಕ್ತಿಯಿದೆ ಎಂಬ ಏನೋ ಒಂದು ನಂಬಿಕೆಯಿದೆ. ನಮಗಿರುವ ಆ ನಂಬಿಕೆಯನ್ನು ಪೊಲೀಸರು ಹುಸಿ ಮಾಡಬಾರದು. ಒಂದು ವೇಳೆ ಆ ನಂಬಿಕೆ ಹುಸಿಯಾದರೆ ಇಲ್ಲಿ ಯಾವ ಪೊಲೀಸರು ಮತ್ತು ದೇಶ ವಿರೋಧಿಗಳು ಉಳಿಯಲ್ಲ ಎಂದು ಬಹಿರಂಗ ಸಭೆಯಲ್ಲಿ ಆರ್‍ಎಸ್‍ಎಸ್ ಮುಖಂಡ ರಘುನಂದನ್ ಕಿಡಿಕಾರಿದ್ದಾರೆ.

    ಇವತ್ತಿನವರೆಗೂ ಹಿಂದೂ ಸಮಾಜ ಸಭ್ಯ ಸಮಾಜವಾಗಿ ಉಳಿದುಕೊಂಡು ಬಂದಿದೆ. ನಾವು ಎಂದೂ ಪೊಲೀಸರನ್ನು ಎದುರು ಹಾಕಿಕೊಂಡು ಬಂದಿಲ್ಲ. ಯಾಕೆಂದ್ರೆ ಅವರು ದೇಶ ಭಕ್ತರು ಎಂಬ ನಂಬಿಕೆಯಿದೆ. ಅವರು ಕಾನೂನು ಪಾಲಕರು, ದೇಶ ಭಕ್ತರಾಗಿದ್ದಾರೆ. ಇಂದು ನನಗೆ ಅನುಮಾನ ಬರುತ್ತಿದ್ದು ಪೊಲೀಸರೆಲ್ಲಾ ಕಾಂಗ್ರೆಸ್ ಸರ್ಕಾರದ ಪಾಲಕರಾಗಿದ್ದಾರೆ ಅಂತಾ ಅನ್ನಿಸುತ್ತಿದೆ. ಇದು ಖಂಡಿತವಾಗಿಯೂ ಪೊಲೀಸರ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಬಗ್ಗೆ ಪೊಲೀಸರೆಲ್ಲಾ ಯೋಚಿಸಬೇಕು. ಹೀಗೆ ಯಾವುದೇ ಒಂದು ಸರ್ಕಾರದ ಹಿಂಬಾಲಕರಾದ್ರೆ ಮುಂದೊಂದು ದಿನ ಯಾರು ನಿಮ್ಮನ್ನು ನಂಬುವುದಿಲ್ಲ ಮತ್ತು ಮರ್ಯಾದೆಯನ್ನು ಕೊಡಲ್ಲ ಅಂತಾ ರಘುನಂದನ್ ಎಂದು ಹೇಳಿದರು.

    https://youtu.be/e0X91Tn5HiQ