Tag: ಹಿಂದೂಸ್ಥಾನ

  • ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?

    ದೇಶಕ್ಕೆ ಭಾರತ ಎಂಬ ಹೆಸರೇಕೆ ಬಂತು? ಇಂಡಿಯಾ ಹೆಸರು ಹೇಗೆ ಬಂತು?

    ನವದೆಹಲಿ: ದೇಶದ ಹೆಸರನ್ನು ಭಾರತ (Bharath) ಎಂದು ಬದಲಿಸಬೇಕೆಂಬ ಚರ್ಚೆ ಇಂದು ನಿನ್ನೆಯದ್ದಲ್ಲ ವಿಪಕ್ಷ ಕೂಟ ಐಎನ್‍ಡಿಐಎ (INDIA) ಎಂದು ಇಟ್ಟುಕೊಂಡ ನಂತರ ಕೇಳಿಬಂದ ಕೂಗಲ್ಲ ಇದು. 2016, 2020ರಲ್ಲಿ ಈ ಸಂಬಂಧ ಸುಪ್ರೀಂಕೋರ್ಟ್‍ನಲ್ಲಿ (Supreme Court) ವಿಚಾರಣೆ ಕೂಡ ನಡೆದಿತ್ತು. ಆದರೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು.

    ಭಾರತ ಹೆಸರು ಬಂದಿದ್ದೇಗೆ?
    ನಮ್ಮ ದೇಶಕ್ಕೆ ನಾನಾ ಹೆಸರಿವೆ. ಜಂಬೂದ್ವೀಪ, ಭರತಖಂಡ, ಹಿಮವರ್ಷ, ಅಜನಾಭವರ್ಷ, ಆರ್ಯವರ್ಷ, ಹಿಂದೂ, ಹಿಂದೂಸ್ತಾನ್, ಇಂಡಿಯಾ ಎಂಬ ಹೆಸರುಗಳಿವೆ. ಅದರಲ್ಲಿ ಭಾರತ ಹೆಸರು ಪ್ರಸಿದ್ಧವಾಗಿದೆ.

    ಭಾರತ ಹೆಸರಿನ ಹಿಂದೆ ಅದೆಷ್ಟೋ `ಭರತ’ರಿದ್ದಾರೆ. ದುಷ್ಯಂತನ ಪುತ್ರ ಭರತ, ದಶರಥನ ಪುತ್ರ ಭರತ, ನಾಟ್ಯಶಾಸ್ತ್ರದಲ್ಲಿ ಬರುವ ಭರತ ಮುನಿ, ರಾಜರ್ಷಿ ಭರತರಿದ್ದಾರೆ. ದುಷ್ಯಂತನ ಪುತ್ರ ಭರತನಿಂದ ಭಾರತ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಇದನ್ನೂ ಓದಿ: ಹಿಂದೂ ಧರ್ಮವನ್ನು ಹುಟ್ಟಿಸಿದವರು ಯಾರು? – ಉದಯ್‌ನಿಧಿ ಬಳಿಕ ಜಿ. ಪರಮೇಶ್ವರ್ ಪ್ರಶ್ನೆ

     

    ಭರತ್ ಎಂದರೇ ಅಗ್ನಿ/ವಿಶ್ವರಕ್ಷಕ ಎಂದರ್ಥ. ಸಂಸ್ಕೃತದಲ್ಲಿ `ಭರ್’ ಎಂದರೇ ಯುದ್ಧ/ ಸಮೂಹ/ ಜನಗಣ ಎಂದರ್ಥ. ಮಹಾಭಾರತಕ್ಕೆ 2500 ವರ್ಷಗಳ ಹಿಂದೆಯೇ ಭಾರತದ ಬಗ್ಗೆ ಉಲ್ಲೇಖವಿದೆ.

    ವಿಷ್ಣು ಪುರಾಣದಲ್ಲಿ (Vishnu Purana) ʼಭಾರತʼದ ಬಗ್ಗೆ ಪ್ರಸ್ತಾಪವಿದೆ. ಉತ್ತರಂ ಯತ್‌ ಸಮುದ್ರಸ್ಯ ಹಿಮಾದ್ರೆಶ್ಚೈವ ದಕ್ಷಿಣಂ | ವರ್ಷಂ ತದ್‌ ಭಾರತಂ ನಾಮ ಭಾರತೀ ಯತ್ರ ಸಂತತಿ: ದಕ್ಷಿಣದ ಸಮುದ್ರದಿಂದ ಉತ್ತರದ ಹಿಮಪರ್ವತಗಳವರೆಗೆ ಹರಡಿರುವ ದೇಶ ಭಾರತ. ಇಲ್ಲಿರುವವರು ಭರತನ ವಂಶಜರು.

    ಇಂಡಿಯಾ ಪದ ಬಂದಿದ್ದೇಗೆ?
    ಇಂಡಿಯಾ (India) ಪದದ ಮೂಲ ಭಾರತವಲ್ಲ.ಇದು ಗ್ರೀಕ್‍ನ ಇಂಡಿಕಾ (Indica) ಎಂಬ ಪದದಿಂದ ಬಂದಿದೆ. ಇಂಡಿಕಾ ಎಂಬ ಪದವನ್ನು ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್ (Megasthenes) ಪ್ರಯೋಗಿಸಿದ್ದ. ಮೆಗಸ್ತಾನೀಸ್ ಗ್ರೀಕ್ ಉಚ್ಛಾರಣೆಯಂತೆ ಇಂಡಸ್, ಇಂಡಿಯಾ ಎಂದು ಉಲ್ಲೇಖಿಸಿದ್ದರಿಂದ ಇಂಡಿಯಾ ಪದ ಬಂದಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂಸ್ಥಾನ ಹಿಂದೂಸ್ಥಾನವಾಗಿಯೇ ಉಳಿಯಬೇಕು – ಭಾಗವತ್‌ ಹೇಳಿಕೆಗೆ ವಿಪಕ್ಷಗಳ ಟೀಕೆ

    ಹಿಂದೂಸ್ಥಾನ ಹಿಂದೂಸ್ಥಾನವಾಗಿಯೇ ಉಳಿಯಬೇಕು – ಭಾಗವತ್‌ ಹೇಳಿಕೆಗೆ ವಿಪಕ್ಷಗಳ ಟೀಕೆ

    ನವದೆಹಲಿ: ದೇಶದ ಮುಸ್ಲಿಮರ  ಕುರಿತಾಗಿ ಆರ್‌ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ನೀಡಿರುವ ಹೇಳಿಕೆ ಈಗ ಪರ, ವಿರೋಧ ಚರ್ಚೆಗೆ ಗ್ರಾಸವಾಗಿದೆ.

    ಭಾರತದಲ್ಲಿರುವ ಮುಸ್ಲಿಮರಿಗೆ (Indian Muslims) ಯಾವುದೇ ಭಯ ಬೇಕಿಲ್ಲ. ಆದರೆ ಅಧಿಪತ್ಯ ಧೋರಣೆಯನ್ನು ಮುಸ್ಲಿಮರು ಬಿಡಬೇಕು ಎಂದು ಆರ್‍ಎಸ್‍ಎಸ್ ಮುಖವಾಣಿ ಆರ್ಗನೈಸರ್ ಮತ್ತು ಪಾಂಚಜನ್ಯ ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಮೋಹನ್ ಭಾಗವತ್ ಹೇಳಿಕೆ ನೀಡಿದ್ದಾರೆ.

    ಈ ಹಿಂದೆ ಇಂಡಿಯಾ, ಹಿಂದುತ್ವವನ್ನು ಮರೆತ ಸಂದರ್ಭಗಳಲ್ಲೆಲ್ಲಾ ದೇಶ ವಿಭಜನೆಗೊಂಡಿದೆ. ಹಿಂದೂಸ್ಥಾನ (Hindustan) ಹಿಂದೂಸ್ಥಾನವಾಗಿಯೇ ಮುಂದುವರೆಯಬೇಕು ಎಂದಿದ್ದಾರೆ. ದೇಶ ಹಿತ, ಹಿಂದೂಗಳ ಒಳಿತಿಗಾಗಿ ರಾಜಕೀಯದಲ್ಲಿ ನಮ್ಮ ಹಸ್ತಕ್ಷೇಪ ಇರುತ್ತದೆ. ಸ್ವಯಂ ಸೇವಕರ ಬಳಿ ಈಗ ಅಧಿಕಾರ ಸಿಕ್ಕಿದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಇದನ್ನೂ ಓದಿ: ನನ್ನ ರಕ್ತನೇ ಕಾಂಗ್ರೆಸ್, ನಾನು ‘ಕೈ’ ಪಕ್ಷ ಸೇರುತ್ತೇನೆ: ಹೆಚ್‌. ವಿಶ್ವನಾಥ್

    ಮೋಹನ್ ಭಾಗವತ್ ಹೇಳಿಕೆಗೆ ಅಸಾದುದ್ದೀನ್ ಓವೈಸಿ (Asaduddin Owaisi) ಗರಂ ಆಗಿದ್ದಾರೆ. ಮುಸ್ಲಿಮರು ದೇಶ ತೊರೆಯಿರಿ ಅಥ್ವಾ ಅವರ ನಂಬಿಕೆ ಅನುಸರಿಸಿ ಎನ್ನಲು ಮೋಹನ್ ಭಾಗವತ್ ಯಾರು? ನಮ್ಮ ಪೌರತ್ವದ ಮೇಲೆ ಷರತ್ತುಗಳನ್ನು ವಿಧಿಸಲು ಅವರಿಗೆಷ್ಟು ಧೈರ್ಯ ಎಂದು ಪ್ರಶ್ನೆ ಮಾಡಿದ್ದಾರೆ. ನಾವು ಎಂದೆಂದಿಗೂ ಭಾರತೀಯರೇ ಎಂದು ಓವೈಸಿ ಸ್ಪಷ್ಟಪಡಿಸಿದ್ದಾರೆ.

    ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ (Kapil Sibal) ಟ್ವೀಟ್ ಮಾಡಿ, ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಆದರೆ ಅದಕ್ಕೂ ಮುನ್ನ ಮನುಷ್ಯ ಮನುಷ್ಯನಾಗಿಯೇ ಇರಬೇಕು ಎಂದು ಟಾಂಗ್ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k