Tag: ಹಿಂದೂಸ್ತಾನ

  • ಪಾಕಿಸ್ತಾನ, ಹಿಂದೂಸ್ತಾನ ಒಂದಾಗಬೇಕು: ಕೆ.ಎಸ್‌.ಈಶ್ವರಪ್ಪ

    ಪಾಕಿಸ್ತಾನ, ಹಿಂದೂಸ್ತಾನ ಒಂದಾಗಬೇಕು: ಕೆ.ಎಸ್‌.ಈಶ್ವರಪ್ಪ

    ಮೈಸೂರು: (Mysuru) ಪಾಕಿಸ್ತಾನ, ಹಿಂದೂಸ್ತಾನ ಒಡೆದವರು ಕಾಂಗ್ರೆಸ್ಸಿಗರು. ಆದರೆ ಪಾಕಿಸ್ತಾನ (Pakistan), ಹಿಂದೂಸ್ತಾನ (Hidustan) ಒಂದಾಗಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ಅಭಿಪ್ರಾಯಪಟ್ಟಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ಭಾರತವನ್ನು ತುಂಡು ಮಾಡಿದವರು ಕಾಂಗ್ರೆಸ್ಸಿಗರು (Congress). ಪಾಕಿಸ್ತಾನ, ಹಿಂದೂಸ್ತಾನ ಬೇರೆ ಬೇರೆಯಾಗಿರಬಾರದು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರ ಆತ್ಮಕ್ಮೆ ಶಾಂತಿ ಸಿಗಬೇಕಾದರೆ, ಪಾಕಿಸ್ತಾನ – ಹಿಂದೂಸ್ತಾನ ಒಂದಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಾಂಕೇತಿಕ ಚುನಾವಣೆ

    ದೇಶಭಕ್ತ ಮುಸ್ಲಿಮರ ಬಗ್ಗೆ ನಮಗೆ ಯಾವ ಅಸಮಾಧಾನವೂ ಇಲ್ಲ. ನಮ್ಮ ದೇಶದಲ್ಲೇ ಇದ್ದು, ನಮ್ಮ ವಿರುದ್ಧವೇ ಸಂಚು ರೂಪಿಸುವ ರಾಷ್ಟ್ರದ್ರೋಹಿಗಳ ಮೇಲೆ ಮಾತ್ರ ನಮಗೆ ಅಸಮಾಧಾನವಿದೆ ಎಂದು ತಿಳಿಸಿದರು.

    ಮತಾಂತರ ನಿಷೇಧ ವಿಧೇಯಕದ ಅಂಗೀಕಾರ ವಿಚಾರವಾಗಿ ಮಾತನಾಡಿ, ಆಸೆ, ಆಮಿಷವೊಡ್ಡಿ ಮತಾಂತರ ನಡೆಯುತ್ತಿದೆ. ಮತಾಂತರ ನಿಷೇಧ ವಿಧೇಯಕ ಚರಿತ್ರಾರ್ಹ ವಿಧೇಯಕವಾಗಿದೆ. ಬಹುಮತದಿಂದ ಅಂಗೀಕಾರವಾದ ವಿಧೇಯಕವನ್ನು ಕಾಂಗ್ರೆಸ್ ಹರಿದುಹಾಕಿ ಅವಮಾನ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿವಿಲ್ ವರ್ಕ್‍ಗೆ ಇನ್ಮುಂದೆ ಕ್ವಾಲಿಟಿ ಚೆಕ್ ಕಡ್ಡಾಯ – ಆದೇಶ ಹೊರಡಿಸಿದ BBMP

    ಅಧಿವೇಶನಕ್ಕೆ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಕಾಲು ನೋವು ಇದೆ. ಅದಕ್ಕಾಗಿ ವಿಧಾನಮಂಡಲ ಅಧಿವೇಶನಕ್ಕೆ ಹೋಗಿಲ್ಲ. ಮಂತ್ರಿ ಆಗಲಿಲ್ಲ ಎಂಬ ಬೇಸರದಲ್ಲಿ ಅಧಿವೇಶನಕ್ಕೆ ಹೋಗಿಲ್ಲ ಎಂಬ ಮಾತಿನಲ್ಲಿ ಅರ್ಥವಿಲ್ಲ. ವರಿಷ್ಠರು ಮಂತ್ರಿ ಮಾಡಿದರೆ ಸ್ವೀಕರಿಸುತ್ತೇನೆ. ಮಾಡದೆ ಇದ್ದರೂ ಪಕ್ಷಕ್ಕಾಗಿ ದುಡಿಯುತ್ತೇನೆ. ಆರೋಪ ಬಂದ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆರೋಪ ಮುಕ್ತವಾಗಿ ಕ್ಲೀನ್‌ಚಿಟ್ ಸಿಕ್ಕಿದೆ.‌ ಕ್ಲೀನ್‌ಚಿಟ್‌ ಸಿಕ್ಕರೂ ಮಂತ್ರಿ ಆಗಲಿಲ್ಲ ಎಂಬ ಬೇಸರ ಖಂಡಿತ ಇದೆ. ಮಂತ್ರಿ ಮಾಡುತ್ತಾರೆ ಅಂದುಕೊಂಡಿದ್ದೆ, ಮಾಡಿಲ್ಲ. ಹೀಗಾಗಿ ಬೇಸರ ಇರೋದು ಸತ್ಯ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಹಿಂದೂಸ್ತಾನ ಹಿಂದೂಗಳ ರಾಷ್ಟ್ರ, ಹಾಗಂತ ಬೇರೆಯವರನ್ನ ಇಲ್ಲಿ ಹೊರತುಪಡಿಸಿಲ್ಲ: ಮೋಹನ್ ಭಾಗವತ್

    ಹಿಂದೂಸ್ತಾನ ಹಿಂದೂಗಳ ರಾಷ್ಟ್ರ, ಹಾಗಂತ ಬೇರೆಯವರನ್ನ ಇಲ್ಲಿ ಹೊರತುಪಡಿಸಿಲ್ಲ: ಮೋಹನ್ ಭಾಗವತ್

    ಇಂದೋರ್: ಹಿಂದೂಸ್ತಾನ ಹಿಂದೂಗಳ ರಾಷ್ಟ್ರ, ಆದರೆ ಇದರರ್ಥ ಇಲ್ಲಿ ಬೇರೆಯವರು ಇಲ್ಲ ಅಂತೇನೂ ಅಲ್ಲ ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

    ಇಂದೋರ್‍ನ ಕಾರ್ಯಕ್ರಮವೊಂದರಲ್ಲಿ ಕಾಲೇಜು ವಿದ್ಯಾರ್ಥಿಗಳಾದ ಆರ್‍ಎಸ್‍ಎಸ್ ಸ್ವಯಂಸೇವಕರನ್ನ ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಸರ್ಕಾರದಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಮಾಜದಲ್ಲಿನ ಬದಲಾವಣೆಯೂ ಅಗತ್ಯ ಅಂತ ಹೇಳಿದ್ರು.

    ಜರ್ಮನಿ ಯಾರ ದೇಶ? ಅದು ಜರ್ಮನ್‍ಗಳ ರಾಷ್ಟ್ರ, ಬ್ರಿಟನ್ ದೇಶ ಬ್ರಿಟೀಷರದ್ದು, ಅಮೆರಿಕಾ ದೇಶ ಅಮೇರಿಕನ್‍ರದ್ದು. ಹಿಂದೂಸ್ತಾನ ಹಿಂದೂಗಳದ್ದು. ಹಾಗಂತ ಹಿಂದೂಸ್ತಾನ ಬೇರೆಯವರ ರಾಷ್ಟ್ರವಲ್ಲ ಎಂದರ್ಥವಲ್ಲ. ಭಾರತ ಮಾತೆಯ ಎಲ್ಲಾ ಮಕ್ಕಳು, ಭಾರತೀಯ ಪೂರ್ವಜರ ವಂಶಸ್ಥರು, ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ಬದುಕುತ್ತಿರುವವರೆಲ್ಲರೂ ಹಿಂದೂಗಳೇ ಎಂದು ಅವರು ಹೇಳಿದ್ರು.

    ಒಬ್ಬ ನಾಯಕ ಅಥವಾ ಒಂದು ಪಕ್ಷ ದೇಶವನ್ನ ಉದ್ಧರಿಸಲು ಸಾಧ್ಯವಿಲ್ಲ. ಅದಕ್ಕೆ ಬದಲಾವಣೆ ಅಗತ್ಯ. ಅದ್ಕಕಾಗಿ ನಾವು ಸಮಾಜವನ್ನು ಸಿದ್ಧಪಡಿಸಬೇಕಿದೆ. ಪುರಾತನ ಕಾಲದಲ್ಲಿ ಜನ ಅಭಿವೃದ್ಧಿಗಾಗಿ ದೇವರ ಮೊರೆ ಹೋಗ್ತಿದ್ರು. ಕಲಿಯುಗದಲ್ಲಿ ಸರ್ಕಾರದ ಕಡೆ ನೋಡ್ತಾರೆ. ಆದ್ರೆ ವಾಸ್ತವವಾಗಿ ಸಮಾಜಕ್ಕೆ ತಕ್ಕಂತೆ ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದ್ರು

    ಸಮಾಜ ಸರ್ಕಾರದ ತಂದೆಯಿದ್ದಂತೆ. ಹೀಗಾಗಿ ಸರ್ಕಾರ ಸಮಾಜಕ್ಕಾಗಿ ಸೇವೆ ಮಾಡುತ್ತದೆಯೇ ಹೊರತು ಅದನ್ನು ಬದಲಾಯಿಸಲು ಸರ್ಕಾರಕ್ಕೆ ಆಗುವುದಿಲ್ಲ. ಸಮಾಜದಲ್ಲಿ ಬದಲಾವಣೆಯಾದ್ರೆ ಅದು ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯಲ್ಲೂ ಕಾಣಿಸುತ್ತದೆ ಎಂದು ಹೇಳಿದ್ರು.

    ಭಾರತವನ್ನು ಶಕ್ತಿಯುತ, ಶ್ರೀಮಂತ ಮತ್ತು ವಿಶ್ವಗುರುವನ್ನಾಗಿ ಮಾಡಲು ದೇಶದ ಜನರು ತಮ್ಮ ಮನಸ್ಸಿನಿಂದ ಯಾವುದೇ ರೀತಿಯ ತಾರತಮ್ಯವನ್ನು ದೂರ ಮಾಡಬೇಕು ಎಂದು ಹೇಳಿದ್ರು.