Tag: ಹಿಂದೂ

  • Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    Mandya | 60 ವರ್ಷದ ಹಿಂದೂ ಸ್ಮಶಾನ ಈಗ ಮುಸ್ಲಿಂ ಮಕಾನ್

    – ಗ್ರಾಮಸ್ಥರಿಂದ ಪ್ರತಿಭಟನೆ

    ಮಂಡ್ಯ: 60 ವರ್ಷಗಳಿಂದ ಸರ್ಕಾರಿ ಸ್ಮಶಾನವಾಗಿದ್ದ (Graveyard) ಜಾಗವನ್ನು ಮುಸ್ಲಿಂ ಮಕಾನ್ ಮಾಡಿದ ಹಿನ್ನೆಲೆ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯದ (Mandya) ಹೊಸಬೂದನೂರು (Hosabudanur) ಗ್ರಾಮದಲ್ಲಿ ನಡೆದಿದೆ.

    ಮಂಡ್ಯದ ಹೊಸಬೂದನೂರು ಗ್ರಾಮದಲ್ಲಿ ಕಳೆದ 1963ರಿಂದ 2017ರವರೆಗೆ ಸರ್ವೇ ನಂಬರ್ 313ರಲ್ಲಿ 1 ಎಕರೆ 13 ಗುಂಟೆ ಜಾಗದಲ್ಲಿ ಹಿಂದೂಗಳಿಗಾಗಿ ಸ್ಮಶಾನ ಇತ್ತು. ಆದರೆ 2017ರ ಬಳಿಕ ವಕ್ಫ್ ಬೋರ್ಡ್ ಆಸ್ತಿ ಇದಾಗಿದ್ದು, ಈ ಜಾಗ ಇದೀಗ ಮುಸ್ಲಿಂ ಸಮುದಾಯದ ಮಕಾನ್ (ಸ್ಮಶಾನ) ಆಗಿದೆ. ಇದನ್ನೂ ಓದಿ: ಕೊಪ್ಪಳ | KPCC ಕಾರ್ಮಿಕ ವಿಭಾಗದ ಕಾರ್ಯದರ್ಶಿ ಮೇಲೆ ಹಲ್ಲೆ – ಪಿಎಸ್‌ಐ ಸಸ್ಪೆಂಡ್

    ವಿಶೇಷ ಅಂದ್ರೆ ಈ ಊರಿನಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದವರ ಮನೆ ಇಲ್ಲ. ಹೀಗಿರುವಾಗ ಮುಸ್ಲಿಂ ಸಮುದಾಯಕ್ಕೆ ಹಿಂದೂ ಸ್ಮಶಾನವನ್ನು ಬಿಟ್ಟುಕೊಡಲಾಗಿದೆ. ಇದೀಗ ಈ ಊರಿನಲ್ಲಿ ಹಿಂದೂಗಳು ಸಾವನ್ನಪ್ಪಿದರೆ ಹೂಳಲು ಸ್ಮಶಾನ ಇಲ್ಲದಂತೆ ಆಗಿದೆ. ಈ ಬಗ್ಗೆ ಸಚಿವರಿಗೆ, ಜಿಲ್ಲಾಡಳಿತಕ್ಕೆ, ಶಾಸಕರಿಗೆ ಹೇಳಿದ ವೇಳೆ ಇರುವ ಜಾಗದಲ್ಲಿ 24 ಗುಂಟೆ ಜಾಗವನ್ನು ಹಿಂದೂಗಳ ಸ್ಮಶಾನಕ್ಕಾಗಿ ಬಿಟ್ಟುಕೊಡಲಾಗಿತ್ತು. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    ಇದೀಗ ಮತ್ತೆ ಆ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ತಡೆ ಹಿಡಿಯಲಾಗಿದೆ. ಜೊತೆಗೆ ಗ್ರಾಮ ಪಂಚಾಯ್ತಿಯಿಂದ ಸ್ಮಶಾನ ಅಭಿವೃದ್ಧಿಗೆ ತಹಶೀಲ್ದಾರ್ ತಡೆ ನೀಡಿದ್ದಾರೆ. ಹೀಗಾಗಿ ಇದೀಗ ಹೊಸಬೂದನೂರು ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈಗ ಮುಸ್ಲಿಂ ಮಕಾನ್ ಮಾಡಿರುವ ಹಿಂದೂ ಸ್ಮಶಾನವನ್ನು ವಾಪಸ್ ಹಿಂದೂಗಳಿಗೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲೇ ಸಿಬ್ಬಂದಿಯಿಂದ ಎಣ್ಣೆ ಪಾರ್ಟಿ – ವೀಡಿಯೋ ವೈರಲ್

  • ರಾಜ್ಯದಲ್ಲಿ ಯುಪಿ ಮಾದರಿಯ ಆಡಳಿತ ತರಬೇಕು: ಬಸನಗೌಡ ಪಾಟೀಲ್ ಯತ್ನಾಳ್

    ರಾಜ್ಯದಲ್ಲಿ ಯುಪಿ ಮಾದರಿಯ ಆಡಳಿತ ತರಬೇಕು: ಬಸನಗೌಡ ಪಾಟೀಲ್ ಯತ್ನಾಳ್

    – ದೇಶದಲ್ಲಿ ಮೂರು ಪಾಕಿಸ್ತಾನಗಳಷ್ಟು ವಕ್ಫ್ ಆಸ್ತಿ ಇದೆ ಎಂದ ಶಾಸಕ

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ (Uttar Pradesh Model) ಆಡಳಿತ ಬರಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ರು.

    ಖಾಸಗಿ ಕಾರ್ಯಕ್ರಮ ಪ್ರಯುಕ್ತ ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ರು. ಇದೆ ವೇಳೆ ಮಾತನಾಡಿದ ಅವರು, ಈದ್ ಮಿಲಾದ್ ಹಬ್ಬದ ವೇಳೆ ದೇಶದ ಯಾವುದೇ ಭಾಗದಲ್ಲೂ ಹಿಂದೂಗಳು ಅಶಾಂತಿ ಉಂಟುಮಾಡಿಲ್ಲ. ಆದ್ರೆ ರಾಜ್ಯದ ಮದ್ದೂರು, ನಾಗಮಂಗಲ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮುಸ್ಲಿಮರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ದೂರಿದರು. ಇದನ್ನೂ ಓದಿ: 4 ವರ್ಷದಿಂದ ಗೋಕರ್ಣ ಮಹಾಬಲೇಶ್ವರ ದೇವರಿಗಿಲ್ಲ ಭಕ್ತರಿಂದ ವಿಶೇಷ ಪೂಜೆ

    ಇಸ್ಲಾಂ ಧರ್ಮದಲ್ಲಿ ನಿಜವಾದ ಸೋದರತ್ವದ ಮೌಲ್ಯಗಳು ಕಾಣಿಸುತ್ತಿಲ್ಲ. ಈಗ ಕರ್ನಾಟಕದಲ್ಲಿ ಸಾಬ್ರ ಸರ್ಕಾರವೇ ಆಡಳಿತ ನಡೆಸುತ್ತಿದೆ. ನಮ್ಮ ಮುಖ್ಯಮಂತ್ರಿ ದಸರಾ ವೇಳೆ ಚಾಮುಂಡೇಶ್ವರಿಯ ಕುಂಕುಮ ಹಚ್ಚಿಕೊಳ್ಳುವುದಿಲ್ಲ, ಆದರೆ ಮುಸ್ಲಿಂ ಕಾರ್ಯಕ್ರಮಗಳಲ್ಲಿ ಟೋಪಿ ಧರಿಸಿ ಸಂತೋಷ ವ್ಯಕ್ತಪಡಿಸುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಹಸುವಿನ ಬಾಲಕ್ಕೆ ಬೆಂಕಿ ಹಚ್ಚಿ ವಿಕೃತಿ – ಬಾಲಕನಿಗೆ ಥಳಿಸಿ ಪೊಲೀಸರಿಗೊಪ್ಪಿಸಿದ ಹಿಂದೂ ಕಾರ್ಯಕರ್ತರು

    ಇನ್ನೂ ವಕ್ಫ್ ಆಸ್ತಿಗಳ ವಿಷಯ ಪ್ರಸ್ತಾಪಿಸಿ ದೇಶದಲ್ಲಿ ಮೂರು ಪಾಕಿಸ್ತಾನಗಳಷ್ಟು ವಕ್ಫ್ ಆಸ್ತಿಗಳು ಇವೆ. ಮೋದಿ ಸರ್ಕಾರ ವಕ್ಫ್ ಕಾನೂನು ತರದಿದ್ದರೆ ಹಿಂದೂಗಳ ದೇವಾಲಯಗಳ ಜಮೀನುಗಳು ಉಳಿಯುತ್ತಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೆಟ್ರೋ ನಿಲ್ದಾಣಕ್ಕೆ ʻಬಸವಣ್ಣʼ ಹೆಸರು – ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಭರವಸೆ

    2028ರಲ್ಲಿ ಸನಾತನ ಧರ್ಮ ರಕ್ಷಣೆ ಮಾಡುವ ಶಕ್ತಿಯೇ ಅಧಿಕಾರಕ್ಕೆ ಬರಬೇಕು, ಹಿಂದೂಗಳ ದೇವಾಲಯಗಳು, ಕುಂಕುಮ ಮತ್ತು ಸಂಸ್ಕೃತಿಯ ರಕ್ಷಣೆ ಅಗತ್ಯವಾಗಿದೆ. ಉತ್ತರ ಪ್ರದೇಶದ ಯೋಗಿ ಸರ್ಕಾರದಂತೆ ಕರ್ನಾಟಕದಲ್ಲೂ ಜಾರಿಗೆ ಬರಬೇಕು, ಇನ್ನೂ ನನಗೂ ಒಂದು ಅವಕಾಶ ಕೊಡಿ ಮಾದರಿ ಆಡಳಿತ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಆಗುವ ಬಯಕೆ ವ್ಯಕ್ತಪಡಿಸಿದ್ರು.

  • ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ

    ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ

    ಬಾಗಲಕೋಟೆ: ಶಕ್ತಿಶಾಲಿ ಸಮಾಜ ಕಟ್ಟಬೇಕಿದ್ದಲ್ಲಿ ಸಮಸ್ತ ಹಿಂದೂಗಳು (Hindu) ಆಯುಧ ಪೂಜೆ ಮಾಡಬೇಕು. ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ (Narayana Bhandage) ಕರೆ ನೀಡಿದ್ದಾರೆ.

    ನವಮಿ ಅಂದ್ರೆ ಬಹಳಷ್ಟು ಜನ ಮರೆತಿದ್ದು ಕೇವಲ ಊಟ ಮಾಡುವುದು ಹಬ್ಬ ಅಂತಾಗಿದೆ. ನಿಜವಾಗಿಯೂ ನವಮಿ (Navami) ಅಂದರೆ ಆಯುಧ ಪೂಜೆ ಮಾಡಬೇಕು. ಸೈನಿಕರು, ಪೊಲೀಸರು ಆಯುಧ ಪೂಜೆ ಮಾಡ್ತಾರೆ. ನಾಳೆ ಎಲ್ಲರೂ ಆಯುಧ ಪೂಜೆ (Ayudha Puja) ಮಾಡಬೇಕು ಎಂದರು. ಇದನ್ನೂ ಓದಿ:  Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

     

    ದೇಶ, ರಾಷ್ಟ್ರ, ಸಮಾಜ ರಕ್ಷಣೆ ಮಾಡಬೇಕಿದ್ದಲ್ಲಿ ದುರ್ಗಾ ಮಾತೆಯ ಶಕ್ತಿ ನಮಗೆ ಬರಬೇಕು. ಅದಕ್ಕಾಗಿ ಎಲ್ಲರೂ ಆಯುಧ ಪೂಜೆ ಮಾಡಬೇಕು. ಯಾರಲ್ಲಿ ಆಯುಧಗಳು ಇಲ್ವೋ ಅವರೆಲ್ಲಾಹೊಸದಾಗಿಯಾದ್ರೂ ಖರೀದಿ ಮಾಡಬೇಕು. ಮುಂದಿನ ದಿನಗಳಲ್ಲಿ ಆಯುಧಗಳ ಪೂಜೆ ಬಹಳ ಅವಶ್ಯಕತೆ ಇದೆ ಎಂದು ಹೇಳಿದರು.

    ಹಿಂದೂಗಳಿಗೆ ಶಸ್ತ್ರ ಮತ್ತು ಶಾಸ್ತ್ರ ಎರಡೂ ಬೇಕು. ಸಮರಕ್ಕೆ ಶಸ್ತ್ರ ಬೇಕಾಗುತ್ತೆ, ಅಭ್ಯಾಸಕ್ಕೆ ಶಾಸ್ತ್ರ ಬೇಕಾಗುತ್ತದೆ. ಹಿಂದೂ ಸಮಾಜ ಯಾವತ್ತೂ ಶಕ್ತಿಶಾಲಿ ಸಮಾಜ. ಎಂದಿಗೂ ನಿರ್ವೀರ್ಯ ಸಮಾಜ ಅಲ್ಲ, ನಾವು ಯಾರಿಗೂ ಅನ್ಯಾಯ ಮಾಡಲು ಹೋಗುವುದಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

  • ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

    ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

    ಚಿಕ್ಕಮಗಳೂರು: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ ಅಂತ ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ (CT Ravi) ಹೇಳಿದ್ದಾರೆ.

    ಮಂಡ್ಯದ (Mandya) ಮದ್ದೂರಿನ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಸಿ.ಟಿ ರವಿ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಾಗಿದೆ. ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ರಕ್ತ ಪ್ಯೂರ್ ಹಿಂದುತ್ವ ಬೆರಕೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಮಿಸ್ಟರ್ ಮಂಜುನಾಥ್, ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕ ಬಳಸುವಂತಿಲ್ಲ, ಸುಪ್ರೀಂ ಕೋರ್ಟ್ ಆದೇಶವಿದೆ. ನನ್ನ ಮೇಲೆ ಕೇಸ್ ಹಾಕಿ ನಿಯತ್ ತೋರ್ಸೋದಲ್ಲ. ನಾಳೆ ನೀನು ಮದ್ದೂರು ವ್ಯಾಪ್ತಿಯಲ್ಲಿ ಸುಮೋಟೋ ಕೇಸ್ ಹಾಕಬೇಕು. ಯಾರ‍್ಯಾರು ಬೆಳಗ್ಗೆ 5ಕ್ಕೆ ಕೂಗ್ತಾರೆ, ಅವರ ಮೇಲೆ ಕೇಸ್ ಹಾಕಿ ಖಾಕಿ ಬಟ್ಟೆಗೆ ನಿಯತ್ ಇದೆ ಅಂತ ತೋರ್ಸು ಅಂತ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ – ಸಿ.ಟಿ ರವಿ ವಿರುದ್ಧ ಕೇಸ್ ದಾಖಲು

    ಕೇಸ್ ನನಗೆ ಹೊಸದಲ್ಲ, ಕೇಸಿಗೆ ಹೆದರುವ ಜಾಯಮಾನದವನೂ ನಾನಲ್ಲ. ನೀವು ಕಲ್ಲು ಹೊಡೆದು, ತೊಡೆ ತಟ್ಟಿ, ಪೆಟ್ರೋಲ್ ಬಾಂಬ್ ಹಾಕಿದ್ರೆ, ಸಹಿಸುವ ಕಾಲ ಮುಗಿದಿದೆ ಎಂದಿದ್ದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಹೇಳಿದ್ದೆ, ಪ್ರೀತಿಗೆ ಪ್ರೀತಿ-ಕಲ್ಲಿಗೆ ಕಲ್ಲು ಎಂದಿದ್ದೆ. ನನ್ನ ಹೇಳಿಕೆಗೆ ಇಂದಿಗೂ ನಾನು ಬದ್ಧ. ಶಿವನ ನೆಲದಲ್ಲಿ ಅಲ್ಲಾ ಒಬ್ಬನೇ ಅಂತ ಅಂದ್ರೆ ಉಳಿದ ದೇವರ ಅಸ್ತಿತ್ವ ಏನು? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಸೆ.12ರ ನಂತರ ಮದ್ದೂರಿಗೆ ಹೆಚ್‌ಡಿಕೆ

    ಕೆಲವರು ನಾನು ಹಿಂದೂ ಅಂತಾರೆ, ನಾಮ ಹಾಕ್ಕೊಂಡ್, ನಾಮ ಅಳಿಸಿ ಟೋಪಿ ಹಾಕಿ ನಮಾಜ್ ಮಾಡೋದು. ಇಂತಹ ತಾರಾತಕಡಿ, ನಾಟಕದ ಜಾಯಮಾನದವನು ನಾನಲ್ಲ. ನನ್ನ ರಕ್ತ ಪ್ಯೂರ್ ಹಿಂದುತ್ವ, ಬೆರಕೆ ಅಲ್ಲ ಅಂತ ʻಕೈʼ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮದ್ದೂರಿನಲ್ಲಿ ʼಕೇಸರಿʼ ಘರ್ಜನೆ; ಬಿಜೆಪಿ-ಜೆಡಿಎಸ್ ಒಗ್ಗೂಡಿ ಗಣೇಶ ಮೆರವಣಿಗೆ – ಶಿಂಷಾ ನದಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ

    ಸಿ.ಟಿ ರವಿ ವಿರುದ್ಧ ಪ್ರಕರಣ ದಾಖಲಾಗಿದ್ದೇಕೆ?
    ಮದ್ದೂರಿನಲ್ಲಿ (Maddur) ಗಣೇಶ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟದ ಬಳಿಕ ಬುಧವಾರ (ಸೆ.10) ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆಯಲ್ಲಿ ಸಿ.ಟಿ.ರವಿ ಭಾಷಣ ಮಾಡಿದ್ದರು. ಭಾಷಣದ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮದ್ದೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ ಮಂಜುನಾಥ್ ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೂರು ದಿನಗಳ ಬಳಿಕ ಸಹಜ ಸ್ಥಿತಿಯತ್ತ ಮದ್ದೂರು

  • ಪಹಲ್ಗಾಮ್ ಬಳಿಕ ಇಂಡಿಯಾ, ಪಾಕಿಸ್ತಾನ ಮ್ಯಾಚ್ ಬೇಕಿತ್ತಾ? – ಸಂತೋಷ್ ಲಾಡ್

    ಪಹಲ್ಗಾಮ್ ಬಳಿಕ ಇಂಡಿಯಾ, ಪಾಕಿಸ್ತಾನ ಮ್ಯಾಚ್ ಬೇಕಿತ್ತಾ? – ಸಂತೋಷ್ ಲಾಡ್

    – ಹಿಂದೂ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಲಿ

    ಕೋಲಾರ: ಬಿಜೆಪಿಯವರಿಗೆ ಹಿಂದೂ-ಮುಸ್ಲಿಂ ಅನ್ನೋ ವಿಚಾರ ಬಿಟ್ರೆ ಇನ್ನೇನಿದೆ? ಪಹಲ್ಗಾಮ್ (Pahalgam Attack) ಆಗಿ ಎಷ್ಟು ದಿನ ಆಗಿದೆ? ಈ ಮಧ್ಯೆ ಇಂಡಿಯಾ ಪಾಕಿಸ್ತಾನ ಮ್ಯಾಚ್ (India-Pakistan Match) ಯಾಕೆ ಬೇಕಾಗಿತ್ತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಕೇಂದ್ರ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

    ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದವರು ಬೇಡ, ಸಿಂಧೂ ನದಿ ನೀರು ಕೊಡಲ್ಲ ಅಂತಾರೆ, ಕ್ರಿಕೆಟ್ ಮಾತ್ರ ಆಡಿಸುತ್ತಾರೆ. ಪಾಕಿಸ್ತಾನದ ಜೊತೆಗೆ ಇಂಡಿಯಾ ಕ್ರಿಕೆಟ್ ಆಡಬಹುದಾ ಎಂದು ಪ್ರಶ್ನಿಸಿದರು. ಇನ್ನೂ ಮೋದಿ ಗ್ರೇಟೆಸ್ಟ್ ಪ್ರೈಮ್ ಮಿನಿಸ್ಟರ್ ಎಂದು ಸಾಬೀತು ಮಾಡಲು ಹೊರಟಿದ್ದಾರೆ. ಬಿಜೆಪಿಯ ಪಿಎಂ ಮೋದಿ, ಅಡ್ವಾನಿ, ವಾಜಪೇಯಿ ಪಾಕಿಸ್ತಾನಕ್ಕೆ ಹೋಗಿದ್ದು, ಅಲ್ಲದೇ ಪಾಕಿಸ್ತಾನಕ್ಕೆ ಬಸ್ ಬಿಟ್ಟಿದ್ದು ಅವರೆ. ಹಾಗಾಗಿ ಎಲ್ಲವೂ ಮಾಡಿದ್ದು ಬಿಜೆಪಿಯವರೆ ಎಂದು ಕಿಡಿಕಾರಿದರು. ಇದನ್ನೂ ಓದಿ: Asia Cup 2025 | ಅಬ್ಬರಿಸಲು ʻಯಂಗ್‌ ಇಂಡಿಯಾʼ ರೆಡಿ – ಪ್ರಾಕ್ಟೀಸ್‌ ಸೆಷನ್‌ನಲ್ಲೇ 30 ಸಿಕ್ಸರ್‌ ಸಿಡಿಸಿದ ಶರ್ಮಾ

    83 ಸಾವಿರ ಕೋಟಿ ಅಭಿವೃದ್ಧಿಗೆ, 60 ಸಾವಿರ ಕೋಟಿ ಗ್ಯಾರಂಟಿಗಳಿಗೆ ಕೊಡುತ್ತಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಕೊಡದೆ ಅಭಿವೃದ್ಧಿಗೆ ಮಾತ್ರ ಅಷ್ಟು ಹಣ ಮೀಸಲಿಟ್ಟಿದ್ದರು, ಉಳಿದ ಹಣ ಎಲ್ಲಿ ಹೋಯ್ತು? ಆಗ ರಾಜ್ಯ ದಿವಾಳಿಯಾಗಿಲ್ವಾ? ದೇಶ ಆರ್ಥಿಕ ಸಂಕಷ್ಟದಲ್ಲಿದೆ, ಆದ್ರೆ ರಾಜ್ಯ ಸುಧಾರಿಸಿದೆ. ಜಿಎಸ್‌ಟಿ ಸೇರಿ ಎಲ್ಲದರಲ್ಲೂ ರಾಜ್ಯ ಮುಂದಿದೆ. ಗುಜರಾತ್ ಮಾಡೆಲ್ ಅಂತಾರೆ ಎಲ್ಲಾಗಿದೆ ಮಾಡೆಲ್? ಗಿಫ್ಟ್ ಸಿಟಿ ಅಂತ ಮಾಡಿ ಮೋದಿ ಅವರು ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ? ಸಾಕಷ್ಟು ಬಾರಿ ಸಿಎಂ ಆಗಿದ್ದವರು ಏನು ಮಾಡಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆಗೈದರು. ಇದನ್ನೂ ಓದಿ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ – ನಿಪ್ಪಾಣಿ ವ್ಯಕ್ತಿಗೆ 30 ವರ್ಷ ಜೈಲು ಶಿಕ್ಷೆ

    ಖೇಲೋ ಇಂಡಿಯಾ ಅನ್ನೋ ದೊಡ್ಡ ಕಾರ್ಯಕ್ರಮ 426 ಕೋಟಿ ಗುಜರಾತ್‌ಗೆ ಮಾತ್ರ ಹೋಗುತ್ತೆ, ಎಲ್ಲಿ ಎಷ್ಟು ಮೆಡಲ್ ಬಂದಿದೆ? ಈ ಮೊದಲು ಕಡಿಮೆ ಇತ್ತು, ಈಗಲೂ ಕಡಿಮೆ ಇದೆ. ಗುಜರಾತ್ ಯಾಕೆ ಇಂದಿಗೂ ಮಾಡೆಲ್ ಆಗಿಲ್ಲ? ನಮ್ಮ ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜು, ಸಿಎಸ್ಟಿ, ಎಫ್‌ಡಿಎ ಸೇರಿ ನಾವು ಅಭಿವೃದ್ಧಿಯಲ್ಲಿದ್ದೇವೆ, ಆದ್ರೆ ದೇಶವೆ ಹಿಂದುಳಿದಿದೆ. ಅಭಿವೃದ್ಧಿ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ʻಬೆಂಕಿಯ ಬಲೆʼಯಲ್ಲಿ ನೇಪಾಳ – ಕನ್ನಡಿಗರ ರಕ್ಷಣೆಗೆ ತಂಡ ರಚಿಸಿದ ರಾಜ್ಯ ಸರ್ಕಾರ

    ಇನ್ನು ಮದ್ದೂರು ಕಲ್ಲು ತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೂ ಮುಸ್ಲಿಂ ಗಲಾಟೆ ಬಿಟ್ರೆ ಬಿಜೆಪಿ ಏನೂ ಮಾಡುತ್ತಿಲ್ಲ. ಕಲ್ಲು ತೂರಾಟ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಹಿಂದೂ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಲಿ, ಹಿಂದೂ ಮಾತ್ರ ಎನ್ನುವವರು ಹೀಗೆ ಮಾಡಿ. ಅವರ ಆಸ್ತಿಗಳನ್ನ ಬಡವರಿಗೆ ಕೊಡಿ. ನಾವೆಲ್ಲಾ ಹಿಂದು ನಾವೆಲ್ಲಾ ಒಂದು ಎನ್ನುವವರು ಮೊದಲು ಸಣ್ಣ ಜಾತಿಗಳವರೊಂದಿಗೆ ಮದುವೆ ಮಾಡಿಸಿ ಮಾದರಿಯಾಗಲಿ ಎಂದು ಸವಾಲೆಸೆದರು. ಇದನ್ನೂ ಓದಿ: ಮಂಗಳೂರು | ಬೈಕಂಪಾಡಿಯಲ್ಲಿ ಅಗ್ನಿ ಅವಘಡ – ಅಮೆಜಾನ್ ಸುಗಂಧದ್ರವ್ಯ ತಯಾರಕ ಕಂಪನಿ ಬೆಂಕಿಗಾಹುತಿ

    ಬಿಜೆಪಿ ನಾಯಕರ ಮಕ್ಕಳು ಯಾವ ಪ್ರತಿಭಟನೆಗೆ, ಯಾವ ಹೋರಾಟಕ್ಕೆ ಬಂದಿದ್ದಾರೆ? ಬರಲ್ಲ, ಅಲ್ಲಿ ಹೋರಾಟ ಮಾಡೋದು, ಗಾಯಗಳಾಗೋದು ಎಲ್ಲವೂ ಬಡವರ ಮಕ್ಕಳಿಗೆ. ಇನ್ನೂ ಬಿಜೆಪಿಯವರು ಏನು ಮಾಡಿದ್ದಾರೆ? ಶಕ್ತಿ ಪೀಠಗಳು ಹೆಚ್ಚಾಗಿ ಮಾಡಿರುವುದು ಕಾಂಗ್ರೆಸ್‌ನವರು ಎಂದರು. ಇದನ್ನೂ ಓದಿ: ಸಂಡೂರಿನ ನಾರಿಹಳ್ಳದಲ್ಲಿ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆ

    ಇನ್ನೂ ಭದ್ರಾವತಿ ಶಾಸಕ ಸಂಗಮೇಶ್ ಮುಂದಿನ ಜನ್ಮದಲ್ಲಿ ಮಸ್ಲಿಂ ಆಗಿ ಹುಟ್ಟುತ್ತೇನೆ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ದೇವೇಗೌಡ್ರು ಈ ಹಿಂದೆ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು. ಅವರ ಬಗ್ಗೆ ನನಗೆ ಗೌರವ ಇದೆ. ಆದ್ರೆ ನಮ್ಮ ಶಾಸಕರು ಮಾತ್ರ ಹಾಗೆ ಮಾತನಾಡಬಾರದ? ನಾವು ಮಾತನಾಡಿದ್ರೆ ಓಲೈಕೆನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಹಿಂದೂಗಳನ್ನ ಯಾವ ಸ್ಥಿತಿಗೆ ತಳ್ಳಿರಬಹುದು? – ವಿಜಯೇಂದ್ರ ಆತಂಕ

    ಕಳೆದ 15 ದಿನದಲ್ಲಿ ಕಾಂಗ್ರೆಸ್ ಇಬ್ಬರು ಶಾಸಕರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಡಿ, ಸಿಬಿಐ, ಎಸ್‌ಐಟಿ, ಲೋಕಾಯುಕ್ತ ಯಾವುದೇ ತನಿಖೆಯಾಗಲಿ. ಆದ್ರೆ ಕರ್ಮ ಯಾರನ್ನೂ ಸಮ್ಮನೆ ಬಿಡಲ್ಲ. ಅಂಬಾನಿ ಅವರು ಒಂದು ಕೋಟಿ ಲಾಭ ಮಾಡಿದ್ದಾರೆ, ಅದರ ಲೆಕ್ಕ ಯಾರು ಕೇಳಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕತಾರ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ನಾಯಕನ ಪುತ್ರ ಸೇರಿ 6 ಮಂದಿ ಬಲಿ – ಟಾಪ್‌ ಲೀಡರ್‌ ಪಾರು

    ಇನ್ನೂ ಧರ್ಮಸ್ಥಳಕ್ಕೆ ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಬರುವ ವಿಚಾರವಾಗಿ ಮಾತನಾಡಿದ ಅವರು, ಅಷ್ಟೇ ಬಿಜೆಪಿಯಲ್ಲಿ ಹಿಂದೂ ಅನ್ನೋ ವಿಚಾರ ಬಿಟ್ರೆ ಇನ್ನೇನಿದೆ? ಏನಕ್ಕೆ ಬರ್ತಾರೆ ಬಂದು ಏನು ಮಾಡ್ತಾರೆ? ಧರ್ಮ ರಕ್ಷಣೆ ಅಂತಾರೆ, ಇಷ್ಟೇ ಅವರ ಸಾಧನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಸೆ.12ರ ನಂತರ ಮದ್ದೂರಿಗೆ ಹೆಚ್‌ಡಿಕೆ

  • ಮದ್ದೂರಿನಲ್ಲಿ ಗಣೇಶನಿಗೆ ಕಲ್ಲು – ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್‌

    ಮದ್ದೂರಿನಲ್ಲಿ ಗಣೇಶನಿಗೆ ಕಲ್ಲು – ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್‌

    – ನಾಳೆಯವರೆಗೆ ಮದ್ದೂರು ಪಟ್ಟಣದಲ್ಲಿ ನಿಷೇಧಾಜ್ಞೆ
    – ಭಾನುವಾರ ರಾತ್ರಿ ವಿಸರ್ಜನೆ ವೇಳೆ ಕಲ್ಲು ತೂರಾಟ

    ಮಂಡ್ಯ: ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಹಿಂದೂ (Hindu) ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್‌ (Lathi- Charged) ಮಾಡಿದ್ದಾರೆ.

    ಮದ್ದೂರು ಪಟ್ಟಣದ ರಾಮ್‌ ರಹೀಂ ನಗರಕ್ಕೆ ಹೊಂದಿಕೊಂಡಿರುವ ಚನ್ನೇಗೌಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶಮೂರ್ತಿ ವಿಸರ್ಜನೆ (Ganesh Procession) ವೇಳೆ ಅನ್ಯ ಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಕಲ್ಲು – ನಾಳೆ ಬೆಳಗ್ಗೆಯವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ

    ನಿಷೇಧಾಜ್ಞೆ ನಡುವೆಗೆ ಮದ್ದೂರು ಪಟ್ಟಣದಲ್ಲಿ ಸ್ಥಳೀಯರು, ಮಹಿಳೆಯರು, ಮಕ್ಕಳು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತಾ ಕಲ್ಲು ತೂರಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಸ್ಥಳೀಯರ ಪ್ರತಿಭಟನೆಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಸದಸ್ಯರು ಸಾಥ್‌ ನೀಡಿದರು. ಡಿಜೆ ಸದ್ದಿಗೆ ಯುವಕರು ಕೈಯಲ್ಲಿ ಕೇಸರಿ ಬಾವುಟ ಹಿಡಿದು ನೃತ್ಯ ಮಾಡುತ್ತಿದ್ದರು.  ಇದನ್ನೂ ಓದಿ: ಸ್ಥಳವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ, ಸತ್ರೆ ತಮಟೆಯ ಶಬ್ಧ ಕೇಳಬಾರದು: ಮದ್ದೂರು ಮಹಿಳೆಯ ಆಕ್ರೋಶ

    ಮದ್ದೂರು ಪಟ್ಟಣದ ಜಾಮಿಯಾ ಮಸೀದಿ ಬಳಿ ಪ್ರತಿಭಟನಾ ಮೆರವಣಿಗೆ ಆಗಮಿಸಿತು. ಈ ವೇಳೆ ಮಸೀದಿಯ ರಸ್ತೆಯಲ್ಲಿ ಕರ್ಪೂರ ಕಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಸೀದಿ ಮುಂದೆ ಡಿಜೆ ಹಾಕಿ ಹಿಂದೂ ಕಾರ್ಯಕರ್ತರು ನೃತ್ಯ ಮಾಡಲು ಆರಂಭಿಸಿದರು. ಮಸೀದಿ ಜಾಗ ಬಿಟ್ಟು ಹೋಗುವಂತೆ ಪೊಲೀಸರು ಈ ಸಂದರ್ಭದಲ್ಲಿ ಸೂಚಿಸಿದರು. ಆದರೆ ಹಿಂದೂ ಕಾರ್ಯಕರ್ತರು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸ್ಥಳದಿಂದ ಕದಲಿಲ್ಲ. ಘೋಷಣೆ ಕೂಗುತ್ತಾ ಡ್ಯಾನ್ಸ್‌ ಮಾಡುತ್ತಿದ್ದಂತೆ ಪೊಲೀಸರು ಲಾಠಿ ಬೀಸಿದ್ದಾರೆ. ಲಾಠಿ ಬೀಸುತ್ತಿದ್ದಂತೆ ಯುವಕರು ದಿಕ್ಕಾಪಾಲಾಗಿ ಓಡಿದ್ದಾರೆ.

  • ಭಾನುವಾರ ರಾಹು ಗ್ರಸ್ತ ಚಂದ್ರಗ್ರಹಣ – ಯಾವ ರಾಶಿಗೆ ಏನು ಫಲ?

    ಭಾನುವಾರ ರಾಹು ಗ್ರಸ್ತ ಚಂದ್ರಗ್ರಹಣ – ಯಾವ ರಾಶಿಗೆ ಏನು ಫಲ?

    ಸೆಪ್ಟೆಂಬರ್ 7 ಭಾನುವಾರ ರಾತ್ರಿ ರಾಹು ಗ್ರಸ್ತ ಚಂದ್ರಗ್ರಹಣ ನಡೆಯಲಿದೆ. ರಾತ್ರಿ 09:45ರಿಂದ ಸೆ.8 ರ ನಸುಕಿನ ಜಾವ 1:27ರವರೆಗೆ ಗ್ರಹಣ ನಡೆಯಲಿದೆ. ಈ ಸಮಯದಲ್ಲಿ ದೇವರ ಜಪ, ಸ್ತೋತ್ರ ಪಠಣ, ಹೋಮ, ಪೂಜೆಗಳನ್ನು ಮಾಡಿದರೆ ಒಳ್ಳೆದಾಗುತ್ತದೆ. ಗ್ರಹಣಕ್ಕೆ ಸಂಬಂಧಿಸಿದಂತೆ ರಾಶಿಫಲಗಳನ್ನು ಇಲ್ಲಿ ನೀಡಲಾಗಿದೆ.

    ಮೇಷ: ಉದ್ಯೋಗದಲ್ಲಿ ಕಲಹ, ಆರೋಗ್ಯ ಸಮಸ್ಯೆ, ಗ್ರಹಣ ಬಳಿಕ ಇನ್ನಷ್ಟು ಸಂಕಷ್ಟ, ವ್ಯವಹಾರದಲ್ಲಿ ತೊಂದರೆ.

    ವೃಷಭ: ಯೋಚಿಸಿ ನಿರ್ಧಾರ ಕೈಗೊಳ್ಳಿ, ಅನಗತ್ಯ ಮಾತು ಬೇಡ, ಮಾತಿನ ಮೇಲೆ ನಿಗಾ ಇರಲಿ, ಆರೋಗ್ಯದ ಕಡೆ ಎಚ್ಚರವಿರಲಿ, ಮೊಣಕಾಲು, ಸೊಂಟ ನೋವಿನ ಬಾಧೆ, ರಕ್ತ ಸಂಬಂಧ ಕಾಯಿಲೆ ಬಗ್ಗೆ ಎಚ್ಚರ.

    ಮಿಥುನ: ಗ್ರಹಣದಿಂದ ಲಾಭವೂ ಇಲ್ಲ. ನಷ್ಟವೂ ಇಲ್ಲ, ಮಾನಸಿಕ ಕಿರಿಕಿರಿ, ಒತ್ತಡ, ಜೀವನದಲ್ಲಿ ಬದಲಾವಣೆಯ ಸಮಯ.

    ಕರ್ಕಾಟಕ: ಆರ್ಥಿಕ ಸಂಕಷ್ಟ ಎದುರಾಗಲಿದೆ, ಆಚಾತುರ್ಯ ನಡೆಯಬಹುದು, ಕಷ್ಟ-ಸುಖ ಸಮತೋಲನದಲ್ಲಿರಲಿದೆ.

    ಸಿಂಹ: ನಾನು, ನನ್ನದೆಂಬ ಮೊಂಡಾಟ ಬೇಡ, ಮೊಂಡು ಹಠ ಜಾಸ್ತಿ ಆಗಲಿದೆ, ಗ್ರಹಣದಿಂದ ವಿಶೇಷ ಲಾಭವಿಲ್ಲ, ಈ ರಾಶಿಯವರಿಗೆ ಗುರುಬಲ ಇದೆ. ಮಾನಸಿಕ ಸ್ಥಿತಿ ಹತೋಟಿಯಲ್ಲಿರಲಿದೆ.

    ಕನ್ಯಾ: ಗ್ರಹಣದಿಂದ ಕೊಂಚ ಒಳ್ಳೆಯದಾಗಲಿದೆ, ಸಾಲದಿಂದ ಮುಕ್ತಿ ಸಿಗುವ ಸಾಧ್ಯತೆ.

    ತುಲಾ: ಕೆಲಸವನ್ನು ಮುನ್ನುಗ್ಗಿ ಮಾಡಬೇಕು, ದೇವರು ಕೊಟ್ಟ ವರವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ, ನಿಮ್ಮ ಉದ್ಧಾರದ ಜೊತೆ ಬೇರೆಯವರ ಉದ್ಧಾರವೂ ಸಾಧ್ಯ, ನಿಮ್ಮ ಪ್ರಯತ್ನ ನಿರಂತರವಾಗಿರಲಿ.

    ವೃಶ್ಚಿಕ: ಸಮಾಧಾನರಾಗಿರಿ, ಸಂತೃಪ್ತರಾಗಿರಿ, ಕಿರಿಕಿರಿ ಬೇಡ, ದುಡ್ಡು ಬಾರದೇ ಸಮಸ್ಯೆ ಅನುಭವಿಸಿರುತ್ತೀರಿ, ಹಿರಿಯರ ಅನುಭವದ ಮಾತು ಪಾಲಿಸಿ.

    ಮಕರ: ಕಳೆದ ಆರು ತಿಂಗಳಿನಿಂದ ಸಮಸ್ಯೆ ಇದೆ, ಮಾಡದಿರುವ ತಪ್ಪುಗಳಿಗೆ ತಲೆಬಾಗಿಸುವ ಪರಿಸ್ಥಿತಿ ಇದೆ, ಗ್ರಹಣದಿಂದ ಮುಂದಿನ 6 ತಿಂಗಳು ಹುಷಾರಾಗಿರಬೇಕು, ಗುರು, ಶನಿ ವಕ್ರನಿರುವುದರಿಂದ ಸಮಸ್ಯೆ ಇರಲಿದೆ.

    ಧನುಸ್ಸು: ಮುಂದಿನ 3 ತಿಂಗಳು ಲಾಭದಾಯಕವಾಗಿಲ್ಲ, ಜೀವನದಲ್ಲಿ ಪರಿವರ್ತನೆ ಕಾಲ ಸಮೀಪಿಸುತ್ತಿದೆ.

    ಕುಂಭ: ಬಹಳಷ್ಟು ಸಮಸ್ಯೆಗಳಿವೆ, ವಿದ್ಯೆ, ಬುದ್ಧಿಯಿಂದ ಎಲ್ಲ ಸರಿಮಾಡಿಕೊಳ್ಳಬೇಕು, ಸಜ್ಜನರ ಜೊತೆಗೆ ಇರಬೇಕು, ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ಇರಲಿ.

    ಮೀನಾ: ದೂರದ ಪ್ರಯಾಣ ಬೇಡ, ಕೊಟ್ಟಿರೋದನ್ನು ವಾಪಸ್ ತೆಗೆದುಕೊಳ್ಳೋದು ಕಷ್ಟ, ಗ್ರಹಣ ಛಾಯೆಯಿಂದ ಕೆಲ ತೊಂದರೆ ಎದುರಾಗಬಹುದು, ಆರು ತಿಂಗಳ ಬಳಿಕ ಒಳಿತಾಗಲಿದೆ.

  • 75ನೇ ವರ್ಷಕ್ಕೆ ಮೋದಿ ನಿವೃತ್ತಿ ವದಂತಿ – RSS ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟನೆ

    75ನೇ ವರ್ಷಕ್ಕೆ ಮೋದಿ ನಿವೃತ್ತಿ ವದಂತಿ – RSS ಮುಖ್ಯಸ್ಥ ಮೋಹನ್‌ ಭಾಗವತ್‌ ಸ್ಪಷ್ಟನೆ

    ನವದೆಹಲಿ: ಮುಂಬರುವ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅಲ್ಲದೇ 75ನೇ ವಯಸ್ಸಿನಲ್ಲೇ ನಿವೃತ್ತಿ ಆಗಲಿದ್ದಾರೆ ಅನ್ನೋ ಚರ್ಚೆ ಹುಟ್ಟುಹಾಕಿತ್ತು. ಇದೀಗ ಎಲ್ಲ ಊಹಾಪೋಹಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ್ ಭಾಗವತ್ ತೆರೆ ಎಳೆದಿದ್ದಾರೆ.

    ಸ್ವತಃ ಭಾಗವತ್ ಅವರು ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿಯವರಿಗಿಂತ ಆರು ದಿನ ಮುಂಚಿತವಾಗಿ 75ನೇ ವಯಸ್ಸಿಗೆ ಕಾಲಿಡುತ್ತಿರುವುದು ಇಲ್ಲಿ ಗಮನಾರ್ಹ.

    ಆರ್‌ಎಸ್‌ಎಸ್‌ 100ನೇ ವರ್ಷದ‌ ಹಿನ್ನೆಲೆ ನಡೆಸ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಗವತ್‌ ಅವರು, 75 ವರ್ಷವಾದಾಗ ನಾನು ನಿವೃತ್ತಿಯಾಗುತ್ತೇನೆ ಅಥವಾ ಬೇರೆಯವರು ನಿವೃತ್ತಿಯಾಗಬೇಕು ಎಂದು ನಾನು ಎಂದಿಗೂ ಹೇಳಿಲ್ಲ, ಎಂದು ಸ್ಪಷ್ಟಪಡಿಸಿದರು.

    ಸಂಘ ನಮಗೆ ಏನು ಹೇಳುತ್ತದೆಯೋ ಅದನ್ನು ನಾವು ಮಾಡುತ್ತೇವೆ. ನಾವೆಲ್ಲರೂ ಸಂಘದ ಸ್ವಯಂಸೇವಕರು. ನಮಗೆ ಇಷ್ಟವಿರಲಿ, ಇಲ್ಲದಿರಲಿ, ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇವೆ. ನಾನು 80 ವರ್ಷವಾದರೂ ಸಂಘವನ್ನು ಮುನ್ನಡೆಸುತ್ತೇನೆ ಎಂದು ಸಹ ತಿಳಿಸಿದರು. ಇದನ್ನೂ ಓದಿ: ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

  • ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

    ನಾವಿಬ್ಬರು, ನಮಗೆ ಮೂವರು – ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

    – ಸರಿಯಾದ ವಯಸ್ಸಿನಲ್ಲಿ ಮದ್ವೆಯಾದ್ರೆ ಪೋಷಕರು, ಮಕ್ಕಳು ಆರೋಗ್ಯವಾಗಿರ್ತಾರೆ
    – ಹಿಂದೂಗಳು ಎಲ್ಲವನ್ನೂ ಕಿತ್ತುಕೊಳ್ತಾರೆ ಅಂತ ಭಾವಿಸುವಂತೆ ಮಾಡಲಾಗಿದೆ; ಕಳವಳ

    ನವದೆಹಲಿ: ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ (Mohan Bhagwat) ಹೇಳಿದರು.

    ಆರ್‌ಎಸ್‌ಎಸ್‌ (RSS) 100 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು. ಮೂರಕ್ಕಿಂತ ಕಡಿಮೆ ಜನನದರ (Birth Rate) ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸಿಹೋಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ದೇಶಗಳಲ್ಲೂ ಈ ಪ್ರಕ್ರಿಯೆ ಸಹಜ. ಆದ್ದರಿಂದ ಮೂರಕ್ಕಿಂತ ಹೆಚ್ಚಿನ ಜನನ ಪ್ರಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಕೇಂದ್ರದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಗಣೇಶ ಹಬ್ಬದ ಬಂಪರ್‌ ಗಿಫ್ಟ್‌ – ಪಿಎಂ ಸ್ವನಿಧಿ ಯೋಜನೆ 5 ವರ್ಷ ವಿಸ್ತರಣೆ

    ಸರಿಯಾದ ವಯಸ್ಸಿನಲ್ಲಿ ಮದ್ವೆಯಾಗೋದ್ರಿಂದ (Marriage) ಮೂವರು ಮಕ್ಕಳನ್ನು ಹೊಂದಬಹುದು. ಜೊತೆಗೆ ಪೋಷಕರು ಮತ್ತು ಮಕ್ಕಳು ಇಬ್ಬರು ಆರೋಗ್ಯವಾಗಿರ್ತಾರೆ ಅಂತ ವೈದ್ಯರೇ ಹೇಳಿದ್ದಾರೆ. ಮೂವರು ಒಡಹುಟ್ಟಿದವರು ಇರುವ ಮನೆಗಳಲ್ಲಿ ಅಹಂಕಾರ ನಿಯಂತ್ರಿಸೋದನ್ನ ಕಲಿಯುತ್ತಾರೆ. ಇದರಿಂದ ಭವಿಷ್ಯದಲ್ಲಿ ಅವರಿಗೆ ಯಾವುದೇ ತೊಂದರೆ ಇರೋದಿಲ್ಲ. ಇದಕ್ಕೂ ಕೂಡ ವೈದ್ಯರೇ ಹೇಳಿರುವುದಾಗಿ ತಿಳಿಸಿದರು.

    ಪ್ರಸ್ತುತ ದೇಶದ ಜನಸಂಖ್ಯೆಯು 2.1 ಜನನ ದರವನ್ನ ಶಿಫಾರಸು ಮಾಡುತ್ತೆ. ಇದು ಉತ್ತಮ ನೀತಿಯಾಗಿದೆ. ಯಾರೊಬ್ಬರು ಒಂದು ಮಗು ಹೊಂದಲು ಸಾಧ್ಯವಿಲ್ಲ. ಗಣಿತದಲ್ಲಿ 2.1 2 ಆಗುತ್ತದೆ. ಆದ್ದರಿಂದ ಮೂರು ಮಕ್ಕಳ ನೀತಿ ಉತ್ತಮ ಎಂದು ಮೋಹನ್‌ ಭಾಗವತ್‌ ಹೇಳಿದರು. ಇದನ್ನೂ ಓದಿ: Jammu Kashmir | ಅಕ್ರಮವಾಗಿ ಗಡಿ ನುಸುಳಲು ಯತ್ನ – ಇಬ್ಬರು ಉಗ್ರರ ಎನ್‌ಕೌಂಟರ್

    ಜನಸಂಖ್ಯೆ ಮೇಲೆ ಮತಾಂತರದ ಪರಿಣಾಮವೇ?
    ಇನ್ನೂ ಜನಸಂಖ್ಯಾ ಮಾದರಿಗಳ ಮೇಲೆ ಪರಿಣಾಮ ಬೀರುವ ಕೆಲವೊಂದು ಅಂಶಗಳನ್ನು ಮೋಹನ್‌ ಭಾಗವತ್‌ ಗುರುತಿಸಿದ್ದು, ಮತಾಂತವೂ ಒಂದು ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಮತಾಂತರವು ಜನಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ ಕಾಥೊಲಿಕರು, ಉಲೇಮಾಗಳು ನಾವು ಮತಾಂತರದಲ್ಲಿ ತೊಡಗುವುದಿಲ್ಲ ಎನ್ನುತ್ತಾರೆ ಎಂದು ವಿವರಿಸಿದರು.

    ಹಿಂದೂ – ಮುಸ್ಲಿಂ ಒಂದೇ
    ಇದೇ ವೇಳೆ ಹಿಂದೂ ಮತ್ತು ಮುಸ್ಲಿಮರ ನಡುವಿನ ಸಂಬಂಧಗಳನ್ನುದ್ದೇಶಿಸಿ ಮಾತನಾಡಿದ ಭಾಗವತ್, ಹಿಂದೂ ಮುಸ್ಲಿಮರು ಮೂಲಭೂತವಾಗಿ ಒಬ್ಬರು, ನಮ್ಮ ನಡುವೆ ಏಕತೆಯಿದೆ. ಆದ್ರೆ ಒಂದು ಭಯವನ್ನು ಸೃಷ್ಟಿಸಲಾಗಿದೆ. ಹಿಂದೂಗಳು ಎಲ್ಲವನ್ನೂ ತೆಗೆದುಕೊಳ್ತಾರೆ ಅಂತ ಭಾವಿಸುವಂತೆ ಮಾಡಲಾಗಿದೆ. ಆದ್ರೆ ವಾಸ್ತವದಲ್ಲಿ ನಮ್ಮ ಗುರುತು ಏಕೀಕೃತವಾಗಿದೆ. ಸಾಂಸ್ಕೃತಿಕವಾಗಿ, ನಾವು ಹಿಂದೂಗಳು ಎಂದು ಬಣ್ಣಿಸಿದರು. ಇದನ್ನೂ ಓದಿ: ಟ್ರಂಪ್‌ ಸೂಚಿಸಿದ 5 ಗಂಟೆಗಳೊಳಗೆ ಪಾಕ್‌ ವಿರುದ್ಧ ಮೋದಿ ಯುದ್ಧ ನಿಲ್ಲಿಸಿದ್ರು: ರಾಹುಲ್‌ ಗಾಂಧಿ ಕಿಡಿ

    ಮುಂದುವರಿದು.. ಅನೇಕ ಹಿಂದೂಗಳು ತಾವು ದುರ್ಬಲರೆಂದು ಭಾವಿಸಿ ಅಸುರಕ್ಷಿತವಾಗಿದ್ದೇವೆ. ಅವರಿಗೊಂದು ಸಲಹೆ ನೀಡುತ್ತೇನೆ. ಇತರರೊಂದಿಗೆ ಸಹಬಾಳ್ವೆ ನಡೆಸುವುದರಿಂದ ಸ್ವಂತ ನಂಬಿಕೆಗೆ ಹಾನಿಯಾಗಲ್ಲ. ಈ ವಿಶ್ವಾಸ ಬೇರೂರಿದರೆ, ಸಂಘರ್ಷ ಕೊನೆಗೊಳ್ಳುತ್ತದೆ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಗುಜರಾತ್‌ನಲ್ಲಿ ಹೆಸರೇ ಕೇಳದ ಪಕ್ಷಗಳಿಗೆ 4,300 ಕೋಟಿ ದೇಣಿಗೆ – ರಾಗಾ ಮತ್ತೊಂದು ಬಾಂಬ್‌

  • ಬಾನು ಮುಷ್ತಾಕ್‌ಗೆ ದಸರಾ ಆಹ್ವಾನ – ಉದ್ದೇಶವೋ, ದುರುದ್ದೇಶವೋ ಬಹಿರಂಗಪಡಿಸಲಿ – ವಿಜಯೇಂದ್ರ

    ಬಾನು ಮುಷ್ತಾಕ್‌ಗೆ ದಸರಾ ಆಹ್ವಾನ – ಉದ್ದೇಶವೋ, ದುರುದ್ದೇಶವೋ ಬಹಿರಂಗಪಡಿಸಲಿ – ವಿಜಯೇಂದ್ರ

    – ನಮ್ಮ ಸಂಸ್ಕೃತಿ, ಪರಂಪರೆ, ಆಚಾರ ವಿಚಾರ ಒಪ್ಪಿ ಬರುವುದಾದ್ರೆ ಸ್ವಾಗತ ಎಂದ ಶಾಸಕ

    ಬೆಂಗಳೂರು: ಬಾನು ಮುಷ್ತಾಕ್ (Banu Mushtaq) ಅವರು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳಿಗೆ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಬೇಕೆಂದು ಅನಿಸುತ್ತದೆ. ಬಾನು ಮುಷ್ತಾಕ್ ಅವರ ಜೊತೆಗೇ ದೀಪಾ ಭಸ್ತಿ ಅವರಿಗೂ ಪ್ರಶಸ್ತಿ ಲಭಿಸಿದೆ. ಅವರನ್ನು ಕರೆಯಬೇಕೆಂದು ಮುಖ್ಯಮಂತ್ರಿಗಳಿಗೆ ಯಾಕೆ ಅನಿಸಿಲ್ಲ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಪ್ರಶ್ನಿಸಿದರು.

    ಕಾಂಗ್ರೆಸ್ ಸರ್ಕಾರದ (Congress Government) ಅಜೆಂಡಾ ಏನು? ಎಂದು ಕೇಳಿದರು. ನಿಸಾರ್ ಅಹ್ಮದ್ ಅವರೂ ದಸರಾ ಉದ್ಘಾಟಿಸಿದ್ದರು. ಅದು ಬೇರೆ ಪ್ರಶ್ನೆ. ಬಾನು ಮುಷ್ತಾಕ್ ಅವರು ನಮ್ಮ ಸಂಸ್ಕೃತಿ, ಪರಂಪರೆ, ಎಲ್ಲ ಆಚಾರ ವಿಚಾರಗಳನ್ನು ಒಪ್ಪಿ ಬರುವುದಾದ್ರೆ ಅದನ್ನು ನಾವು ಒಪ್ಪಿಕೊಳ್ಳುವುದಾಗಿ ಹೇಳಿದ್ದೇನೆ. ದಸರಾ ಎಂಬುದು ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಲ್ಲ, ಇದು ನಮ್ಮ ಹಿಂದೂ ಸಂಸ್ಕೃತಿ (Hindu Culture), ಹಿಂದೂ ಪರಂಪರೆಯ ಪದ್ಧತಿ. ರಾಜ ಮಹಾರಾಜರ ಕಾಲದಿಂದ ಈ ಪದ್ಧತಿ ಬಂದಿದೆ ಎಂದು ವಿಜಯೇಂದ್ರ ವಿವರಿಸಿದರು. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ದೇಗುಲವಲ್ಲದೇ ಇದ್ದಿದ್ರೆ ಮುಜರಾಯಿ ವ್ಯಾಪ್ತಿಗೆ ತರುತ್ತಿರಲಿಲ್ಲ – ಪ್ರಮೋದಾ ದೇವಿ ಒಡೆಯರ್‌

    ಹಿಂದೂಗಳ ಭಾವನೆಗೆ ಧಕ್ಕೆ ಬರಬಾರದೆಂಬುದು ನಮ್ಮೆಲ್ಲರ ಉದ್ದೇಶ ಎಂದು ನುಡಿದರು. ಹಿಂದೂ ಸಂಸ್ಕೃತಿ – ಪರಂಪರೆಗೆ ಧಕ್ಕೆ ತರುವ ನಿರ್ಧಾರವನ್ನ ಸರಕಾರ ತೆಗೆದುಕೊಳ್ಳಬಾರದು. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಗೃಹ ಸಚಿವರು ಮಂಗಳೂರಿಗೆ ಹೋಗಿದ್ದರು. ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಲು ಹೊರಟ ಸಂದರ್ಭದಲ್ಲಿ ಯಾವುದೋ ಒಂದು ಕೋಮಿಗೆ ಸೇರಿದ ನಾಯಕರು ಹೋಗಬಾರದೆಂದು ಕಟ್ಟಿ ಹಾಕುವ ಕೆಲಸ ಮಾಡಿದ್ದರು. ಗೃಹ ಸಚಿವರು ಹಾಗೇ ವಾಪಸಾದರು. ಅಂದರೆ, ರಾಜ್ಯ ಸರ್ಕಾರದ ನಡವಳಿಕೆಯನ್ನು ಪ್ರತಿ ಸಂದರ್ಭದಲ್ಲೂ ಗಮನಿಸಿದರೆ, ಪ್ರತಿ ಬಾರಿಯೂ ಹಿಂದೂಗಳಿಗೆ ಅಪಮಾನ ಮಾಡುವ ನಿರ್ಧಾರವನ್ನೇ ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ವಿಜಯೇಂದ್ರ ಆಕ್ಷೇಪಿಸಿದರು. ಇದನ್ನೂ ಓದಿ: ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳಲ್ಲ, ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತೆ: ಬಾನು ಮುಷ್ತಾಕ್‌ಗೆ ಪ್ರತಾಪ್ ಸಿಂಹ ಪ್ರಶ್ನೆ

    ಅಪಪ್ರಚಾರ ನಡೆಸಿದವರನ್ನು ಬಂಧಿಸಿಲ್ಲವೇಕೆ?
    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಹಿಂದೂಗಳ ವಿರುದ್ಧ ಕೇಸ್ ದಾಖಲಿಸಿ, 24 ಗಂಟೆಗಳಲ್ಲಿ ಬಂಧಿಸುತ್ತಾರೆ. ಆದರೆ, ಧರ್ಮಸ್ಥಳದ ವಿಷಯದಲ್ಲಿ ಹಿಂದೂ ಭಾವನೆಗೆ ಧಕ್ಕೆ ತರುವಂತೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆದರೂ ಅವರ ವಿರುದ್ಧ ಕೇಸ್ ಹಾಕಿ ಬಂಧಿಸಬೇಕೆಂದು ಯಾಕೆ ಕಾಂಗ್ರೆಸ್ ಸರ್ಕಾರಕ್ಕೆ ಅನಿಸಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದಸರಾ ಉದ್ಘಾಟಿಸುವ ಮುನ್ನ ಭಾನು ಮುಷ್ತಾಕ್ ತಾಯಿ ಭುವನೇಶ್ವರಿ, ಚಾಮುಂಡೇಶ್ವರಿ ಬಗೆಗಿನ ಗೌರವ ಸ್ಪಷ್ಟಪಡಿಸಬೇಕು: ಯದುವೀರ್‌

    ಎಸ್‍ಐಟಿ ತನಿಖೆ ಮಾಡಿಕೊಳ್ಳಲಿ, ದುಷ್ಟ ಶಕ್ತಿಗಳ ಹಿಂದಿರುವ ರಾಷ್ಟ್ರ- ಅಂತರರಾಷ್ಟ್ರೀಯ ಮಟ್ಟದ ದುಷ್ಟ ಶಕ್ತಿಗಳ ಬಗ್ಗೆ ತಿಳಿಯಲು ಮತ್ತು ಅವರನ್ನು ಹೊರಕ್ಕೆ ತರಲು ಎನ್‍ಐಎ, ಸಿಬಿಐ ತನಿಖೆ ಆಗಬೇಕೆಂಬ ಆಗ್ರಹ ಭಕ್ತರದ್ದೂ ಆಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ಕಾಳಜಿ, ಪ್ರಾಮಾಣಿಕತೆ ಇದ್ದಲ್ಲಿ, ಹಿಂದೂಗಳ ಧಾರ್ಮಿಕ ಶ್ರದ್ಧೆ ಬಗ್ಗೆ ಕಿಂಚಿತ್ತಾದರೂ ನಂಬಿಕೆ ಇದ್ದರೆ, ಎಸ್‍ಐಟಿ ತನಿಖೆ ಆಗಲಿ, ಆದರೆ, ಅದಕ್ಕೊಂದು ಕಾಲಮಿತಿ ಬೇಕಲ್ಲವೇ ಎಂದು ಪ್ರಶ್ನಿಸಿದರು.

    ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತ ಈ ಹುಚ್ಚಾಟ ಇನ್ನೆಷ್ಟು ದಿನ ಮುಂದುವರೆಸುತ್ತೀರಿ? ಅಪಪ್ರಚಾರ ಮಾಡುವವರ ವಿರುದ್ಧ ಒಂದೂ ಎಫ್‍ಐಆರ್ ಮಾಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ನಮಗೆ ವಿಶ್ವಾಸ ಇಲ್ಲ, ಷಡ್ಯಂತ್ರ ಮಾಡಿದ್ದು ಯಾರು? ಅಪಪ್ರಚಾರ ಮಾಡಿದ್ದು ಯಾರು? ದುಷ್ಟ ಶಕ್ತಿಗಳಿಗೆ ಹಣ ಕೊಟ್ಟವರು ಯಾರು? ಇವೆಲ್ಲವೂ ಸಮಗ್ರ ತನಿಖೆ ಆಗಲಿ ಎಂದು ವಿಜಯೇಂದ್ರ ಒತ್ತಾಯಿಸಿದರು. ಇದನ್ನೂ ಓದಿ: ಸರ್ಕಾರಿ ಸೌಲಭ್ಯಗಳ ದುರ್ಬಳಕೆ ಆರೋಪ – ಕರ್ನಾಟಕ ಭವನದ ಹೆಚ್ಚುವರಿ ಆಯುಕ್ತೆ ವಿರುದ್ಧ ಸಿಎಸ್‌ಗೆ ದೂರು