Tag: ಹಿಂದು ಸಂಘಟನೆ

  • ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ

    ಸರ್ಕಾರ ಸಾರ್ವಜನಿಕ ಗಣೇಶೋತ್ಸವದ ನಿಷೇಧವನ್ನು ಹಿಂಪಡೆಯಬೇಕು: ಶ್ರೀರಾಮಸೇನೆ

    ಬೆಂಗಳೂರು: ಕೊರೊನಾ ಮೂರನೇ ಅಲೆ ಭೀತಿಯಿಂದ ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿರುವ ಗಣೇಶೋತ್ಸವವನ್ನು ಈ ಬಾರಿಯೂ ಸಾರ್ವಜನಿಕವಾಗಿ ಆಚರಣೆ ಮಾಡದಂತೆ ಆದೇಶ ಹೊರಡಿಸಿದನ್ನು ಶ್ರೀರಾಮಸೇನೆ ಖಂಡಿಸಿದೆ.

    ಮಾನ್ಯ ಮುಖ್ಯಮಂತ್ರಿಗಳೇ ಸ್ವಾತಂತ್ರ್ಯಪೂರ್ವದಲ್ಲಿ ಸ್ವಾತಂತ್ರ್ಯ ಸೇನಾನಿ ಬಾಲ ಗಂಗಾಧರನಾಥ್ ತಿಲಕರು ಸಾರ್ವಜನಿಕರನ್ನು ಒಟ್ಟುಗೂಡಿಸುವ ದೂರದೃಷ್ಟಿಯಿಂದ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿದರು. ಈ ಮುಖಾಂತರ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸಿದ್ದರು. ಇಂತಹ ಐತಿಹಾಸಿಕ ಮಹತ್ವವುಳ್ಳ ಸಾರ್ವಜನಿಕ ಗಣೇಶೋತ್ಸವವನ್ನು ನಿಷೇಧಿಸಿರುವುದು ಖಂಡನೀಯ. ಈ ವಿಷಯವನ್ನು ಹಿಂದೂಗಳು ಮತ್ತು ಹಿಂದೂ ಸಂಘಟನೆಗಳು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಕೂಡಲೇ ಸಾರ್ವಜನಿಕ ಗಣೇಶೋತ್ಸವದ ನಿರ್ಬಂಧವನ್ನು ದಯವಿಟ್ಟು ತೆರವು ಮಾಡಬೇಕು ಎಂದು ಶ್ರೀರಾಮಸೇನೆಯ ರಾಜ್ಯ ಕಾರ್ಯದರ್ಶಿ ಹರೀಶ್ ಒತ್ತಾಯ ಮಾಡಿದ್ದಾರೆ.ಇದನ್ನೂ ಓದಿ: ಗಣೇಶ ಚತುರ್ಥಿ, ಮೊಹರಂ ಹಬ್ಬ ಆಚರಣೆಗೆ ಮಾರ್ಗಸೂಚಿ ಪ್ರಕಟ

    ಒಂದು ಕಡೆ ಖಾಸಗಿ ಶಾಲೆಗಳ ಒತ್ತಾಯಕ್ಕೆ ಮಣಿದು ಶಾಲೆಗಳನ್ನು ಪ್ರಾರಂಭಮಾಡಿ ಮಕ್ಕಳನ್ನು ಗೊಂದಲಕ್ಕೀಡು ಮಾಡಿದ್ದೀರಿ. ಇನ್ನೊಂದು ಕಡೆ ಹಲವು ಮಾರ್ಗಸೂಚಿಗಳನ್ನು ಹೊರಡಿಸುತ್ತಿದ್ದಿರಿ, ಈ ನಿಮ್ಮ ಗೊಂದಲದ ನಿರ್ಧಾರದಿಂದ ದಯವಿಟ್ಟು ಹಿಂದೆ ಸರಿಯಿರಿ. ಇಲ್ಲದೆ ಇದ್ದಲ್ಲಿ ರಾಜ್ಯಾದ್ಯಂತ ಹಿಂದೂ ಸಂಘಟನೆಗಳಿಂದ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

  • ಕರಾವಳಿಯಲ್ಲಿ ಮತ್ತೆ ಪೊಲೀಸ್ ನೈತಿಕಗಿರಿ – ತಮಿಳು ನಟಿಗೆ ಪೊಲೀಸ್, ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

    ಕರಾವಳಿಯಲ್ಲಿ ಮತ್ತೆ ಪೊಲೀಸ್ ನೈತಿಕಗಿರಿ – ತಮಿಳು ನಟಿಗೆ ಪೊಲೀಸ್, ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

    ಮಂಗಳೂರು: ತಮಿಳು ಚಿತ್ರನಟಿ ಅನುಷಾ ಜೊತೆಗೆ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಮುಸ್ಲಿಂ ಯುವಕ ಪರ್ವೇಜ್ ಎಂಬಾತನ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನೆಪದಲ್ಲಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

    ಡಿ. 21 ರಂದು ಘಟನೆ ನಡೆದಿದ್ದು ಆಬಳಿಕ ಸುಬ್ರಹ್ಮಣ್ಯ ಠಾಣೆ ಪೊಲೀಸರು ಕೂಡ ಪರ್ವೇಜ್ ಮೇಲೆ ಹಲ್ಲೆ ನಡೆಸಿದ್ದಾಗಿ ಚಿತ್ರನಟಿ ಅನುಷಾ ಆರೋಪಿಸಿದ್ದಾರೆ. ಈ ಬಗ್ಗೆ ವಾಟ್ಸಪ್ ಮೆಸೇಜ್ ನಲ್ಲಿ ತನ್ನ ಹೇಳಿಕೆ ಪ್ರಕಟಿಸಿರುವ ಅನುಷಾ, `ತಾನು ಪೂಜೆಗೆಂದು ಸುಬ್ರಹ್ಮಣ್ಯಕ್ಕೆ ಬಂದಿದ್ದೆ. ಪರ್ವೇಜ್ ಕೇವಲ ಫ್ರೆಂಡ್ ಆಗಿದ್ದು, ಬೇರೆ ಯಾವುದೇ ಸಂಬಂಧ ಇಲ್ಲ. ಠಾಣೆಯಲ್ಲಿ ಈ ಬಗ್ಗೆ ಹೇಳಿದ್ದರೂ ಕೇಳದೆ ಪರ್ವೇಜ್ ಮತ್ತು ತನ್ನ ಮೇಲೆ ಹಲ್ಲೆ’ ನಡೆಸಿದ್ದಾಗಿ ಆರೋಪ ಮಾಡಿದ್ದಾರೆ.

    ಇದೀಗ ನಟಿಯ ಹೇಳಿಕೆ ವೈರಲ್ ಆಗಿದ್ದು, ಪೊಲೀಸರು ಲವ್ ಜಿಹಾದ್ ನೆಪದಲ್ಲಿ ಹಲ್ಲೆ ನಡೆಸಿದ್ದಾಗಿ ಆರೋಪ ಕೇಳಿಬಂದಿದೆ.