Tag: ಹಿಂದು

  • ಗೆಲ್ಲುವ ವಿಶ್ವಾಸ ಇಲ್ಲದೆ ಸಿದ್ದರಾಮಯ್ಯ ಜಾಗ ಹುಡುಕಾಟ: ಯಡಿಯೂರಪ್ಪ ವ್ಯಂಗ್ಯ

    ಗೆಲ್ಲುವ ವಿಶ್ವಾಸ ಇಲ್ಲದೆ ಸಿದ್ದರಾಮಯ್ಯ ಜಾಗ ಹುಡುಕಾಟ: ಯಡಿಯೂರಪ್ಪ ವ್ಯಂಗ್ಯ

    ತುಮಕೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ನವರು ಇದ್ದ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಯಾಕೆ ಹೋಗ್ತಿದ್ದಾರೆ ಅಂತಾ ನಮಗೆ ಅರ್ಥವಾಗುತ್ತಿಲ್ಲ. ಅಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ, ಮುಂದೆ ಗೆಲ್ತೀನಿ ಅನ್ನೋ ವಿಶ್ವಾಸ ಇಲ್ಲದೇನೆ ಬೇರೆ ಜಾಗ ಹುಡುಕುತ್ತಿದ್ದಾರೆ. ನಾನು ಅದಕ್ಕೆ ಟೀಕೆ ಟಿಪ್ಪಣಿ ಮಾಡಲು ಇಷ್ಟ ಪಡಲ್ಲ. ಜನ ಅದನ್ನ ನಿರ್ಧರಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (B S Yediyurappa) ವ್ಯಂಗ್ಯವಾಡಿದ್ದಾರೆ.

    ಪತ್ನಿಯ ಹೆಸರಿನ ಕಲ್ಯಾಣ ಮಂಟಪ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಮೈತ್ರಾದೇವಿಯವರ ಹೆಸರಿನಲ್ಲಿ ಎಡೆಯೂರಿನಲ್ಲಿ ಬಡವರಿಗೆ, ಕಲ್ಯಾಣ ಮಂಟಪ ಕಟ್ಟಿಸಿಕೊಡಬೇಕು ಅನ್ನೋದು ಬಹಳ ದಿನದ ಕನಸಾಗಿತ್ತು. ಸಾಂಕೇತಿಕವಾಗಿ ಹಣಕೊಟ್ಟು ಬಡವರು ಮದುವೆ (Marriage Hall) ಮಾಡಿಕೊಳ್ಳಲು, ಸಾಮೂಹಿಕ ಕಲ್ಯಾಣವಾಗಲು ಈ ಕಲ್ಯಾಣ ಮಂಟಪ ಕಟ್ಟಿಸಲಾಗಿದೆ. ಬಡವರಿಗಾಗಿ ಕಟ್ಟಿದ ಈ ಕಲ್ಯಾಣ ಭವನ ವರ್ಷದ 365 ದಿನವೂ ಮದುವೆ ಸಮಾರಂಭ ನಡೆದರೆ ನಮ್ಮ ಸೇವೆ ಸಾರ್ಥಕವಾಗುತ್ತೆ. ಇದರ ಹಿಂಭಾಗದಲ್ಲಿ ಗೆಸ್ಟ್ ಹೌಸ್ ಕಟ್ಟಲು ತೀರ್ಮಾನ ಮಾಡಿದ್ದೇವೆ. ಅದರ ಕಾಮಗಾರಿಯನ್ನ ಕೂಡ ಶ್ರೀಘ್ರವಾಗಿ ಆರಂಭಿಸುತ್ತೇವೆ ಎಂದರು.

    ಕೆಂಪೇಗೌಡ ಪ್ರತಿಮೆ ಅನಾವರಣಕ್ಕೆ ದೇವೇಗೌಡ (HD Devegowda) ರಿಗೆ ಆಹ್ವಾನ ನೀಡಿಲ್ಲ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಗೊತ್ತಿರೋ ಪ್ರಕಾರ ಆಮಂತ್ರಣ ಪತ್ರಿಕೆ ಮಾಡಿರಲಿಲ್ಲ. ವೈಯಕ್ತಿಕವಾಗಿ ಪ್ರತಿಯೊಬ್ಬರಿಗೆ ಪತ್ರ ಬರೆದು ಸಿಎಂ ಆಹ್ವಾನಿಸಿದ್ದಾರೆ. ಎಸ್.ಎಂ. ಕೃಷ್ಣ ಸೇರಿದಂತೆ ಉಳಿದೆಲ್ಲ ನಾಯಕರು ಬಂದಿದ್ರು. ದೇವೆಗೌಡರಿಗೂ ಪತ್ರ ಬರೆದು ಸಿಎಂ ದೂರವಾಣಿ ಕರೆ ಮಾಡಿಯೂ ಆಹ್ವಾನಿಸಿದ್ದಾರೆ. ಈ ಬಗ್ಗೆ ಅನಗತ್ಯವಾಗಿ ಚರ್ಚೆಯಾಗ್ತಾ ಇದೆ. ದೇವೇಗೌಡರು ಈ ವಿಚಾರವನ್ನ ವೈಯಕ್ತಿಕವಾಗಿ ತೆಗೆದುಕೊಳ್ಳಲ್ಲ ಅನ್ನೋ ವಿಶ್ವಾಸ ನನಗಿದೆ. ಯಾವುದೋ ಕಾರಣಕ್ಕೆ ಅವರಿಗೆ ಬರಲಿಕ್ಕೆ ಆಗಿಲ್ವೇನೋ. ಅದನ್ನ ದೊಡ್ಡದು ಮಾಡೋ ಅವಶ್ಯಕತೆ ಇಲ್ಲ ಎಂದು ಹೇಳಿದರು.

    ಟಿಪ್ಪು ಪ್ರತಿಮೆ, ಬಸವಣ್ಣ ಪ್ರತಿಮೆ ನಿರ್ಮಾಣ ವಿಚಾರದ ಕುರಿತು ಮಾತನಾಡಿ, ಟಿಪ್ಪು ಪ್ರತಿಮೆ ನಿರ್ಮಿಸುವುದು ಅವರಿಗೆ ಬಿಟ್ಟ ವಿಚಾರ. ಸರ್ಕಾರ ಏನು ತೀರ್ಮಾನ ಮಾಡುತ್ತೆ ನೋಡೋಣ. ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಲು ಕ್ಯಾಬಿನೆಟ್ ಒಪ್ಪಿಗೆ ದೊರೆತಿದೆ. ಮುಂದೆ ಮುಖ್ಯಮಂತ್ರಿಗಳು ಅದನ್ನ ಮಾಡ್ತಾರೆ ಎಂದು ತಿಳಿಸಿದರು.

    ಇದೇ ವೇಳೆ ಯಡಿಯೂರಪ್ಪ ಹಿಂದೂ ಅಲ್ಲ ಅನ್ನೋ ಬಗ್ಗೆ ಪ್ರತಿಕ್ರಿಯಿಸಿ, ಆ ಹೇಳಿಕೆಗೆಲ್ಲ ನಾನು ಪ್ರತಿಕ್ರಿಯೆ ನೀಡಲ್ಲ. ಹಿಂದೂ ಸಮಾಜ ಬಹಳ ದೊಡ್ಡ ಸಮಾಜ. ಮೊದಲು ನಾವೆಲ್ಲರೂ ಹಿಂದೂ, ಆಮೇಲೆ ಜಾತಿ, ಉಪಪಂಗಡಗಳು. ಅನಗತ್ಯವಾಗಿ ಇದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಹಿಂದೂ ಅನ್ನುವಂತದ್ದು ಒಂದು ದೊಡ್ಡ ಸಮೂಹಕ್ಕೆ ಇರುವಂತಹ ಹೆಸರು. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವುದು ಬೇಡ. ಮುದ್ದಹನುಮೇಗೌಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಆದರೆ ಟಿಕೆಟ್ ಕೊಡ್ತೀವಿ ಅಂತಾ ನಾವು ಯಾರಿಗೂ ಭರವಸೆ ನೀಡಿಲ್ಲ. ಪಕ್ಷ ಆ ಬಗ್ಗೆ ತೀರ್ಮಾನ ಮಾಡುತ್ತೆ ಎಂದರು.

    ಹಿಂದೂ ಅಶ್ಲೀಲ ಪದ ಎಂಬ ಸತೀಶ್ ಜಾರಕಿಹೊಳಿ (Satish Jarakiholi) ಹೇಳಿಕೆ ಬಗ್ಗೆ ಉತ್ತರಿಸಿದ ಬಿಎಸ್‍ವೈ, ಅದರ ಬಗ್ಗೆ ನಾನು ಏನನ್ನೂ ಹೇಳಲೂ ಇಷ್ಟಪಡಲ್ಲ. ಕಾಂಗ್ರೆಸ್ ನ 90% ನಾಯಕರು ಕೂಡ ನಾವು ಮೊದಲು ಹಿಂದೂಗಳು ಅನ್ನೋದನ್ನ ಒಪ್ಪಿಕೊಳ್ತಾರೆ. ಇದನ್ನ ಅರ್ಥ ಮಾಡಿಕೊಂಡು ಎಲ್ಲರೂ ಮುಂದೆ ಹೋಗಬೇಕು ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಯುವತಿ ಮನೆಯವರಿಂದ ಮತಾಂತರಕ್ಕೆ ಒತ್ತಾಯ – ನೇಣುಬಿಗಿದ ಸ್ಥಿತಿಯಲ್ಲಿ ಹಿಂದೂ ಯುವಕನ ಶವ ಪತ್ತೆ

    ಯುವತಿ ಮನೆಯವರಿಂದ ಮತಾಂತರಕ್ಕೆ ಒತ್ತಾಯ – ನೇಣುಬಿಗಿದ ಸ್ಥಿತಿಯಲ್ಲಿ ಹಿಂದೂ ಯುವಕನ ಶವ ಪತ್ತೆ

    ದಿಸ್ಪುರ್: ನೇಣುಬಿಗಿದ ಸ್ಥಿತಿಯಲ್ಲಿ ಹಿಂದೂ ಯುವಕನ (Hindu Youth) ದೇಹ ಪತ್ತೆಯಾಗಿದ್ದು ಅಸ್ಸಾಂನಲ್ಲಿ (Assam) ಈಗ ಪ್ರತಿಭಟನೆ (Protest) ಆರಂಭವಾಗಿದೆ. ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೆ ಗೆಳತಿ ಮನೆಯವರೇ ಯುವಕನನ್ನು ಹತ್ಯೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಬಂದಿದೆ.

    ಯುವಕನನ್ನು ಗೆಳತಿಯ (Lovers) ಮನೆಗೆ ಕರೆಸಿಕೊಂಡ ಒಂದು ದಿನದ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯನ್ನೇ ಬಿಡಲಿಲ್ಲ ಬಾಡಿ ಶೇಮಿಂಗ್‌ ಭೂತ

    ಬಿಕಿ ಬಿಶಾಲ್ ಮೃತ ಯುವಕ. ಈತನ ಸಾವು ಜಿಲ್ಲೆಯಲ್ಲಿ ಉದ್ವಿಗ್ನತೆ ಸೃಷ್ಟಿಸಿದೆ. ಮೃತ ಯುವಕನ ದೇಹದ ಕಣ್ಣು, ಮೂಗು ಹಾಗೂ ಕಿವಿಯ ಭಾಗಗಳಲ್ಲಿ ರಕ್ತ (Blood) ಬಂದಿರುವ ಗುರುತುಗಳಿತ್ತು. ಅವನು ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೇ ಗೆಳತಿ ಮನೆಯವರೇ ಹತ್ಯೆ ಮಾಡಿದ್ದಾರೆ ಎಂದು ಯುವಕನ ಕುಟುಂಬಸ್ಥರು (Family) ಆರೋಪಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಚರ್ಚ್ ಅಧಿಕಾರಿಗಳು (Church Officials), ಹುಡುಗಿಯ ತಂದೆ ಹಾಗೂ ಚಿಕ್ಕಪ್ಪ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಬಿಕಿ ಬಿಶಾಲ್‌ನನ್ನು ಮತಾಂತರಗೊಳಿಸುವ ಉದ್ದೇಶದಿಂದ ಹತ್ಯೆ ಮಾಡಲಾಗಿದೆಯೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಬಿಆರ್‌ಟಿಎಸ್ ಬಸ್‌ನಲ್ಲಿ ಬೆಂಕಿ – ಹೊಗೆ ನೋಡಿ ಎದ್ನೋ ಬಿದ್ನೋ ಓಡಿದ ಪ್ರಯಾಣಿಕರು

    ಏನಿದು ಬಿಕಿ ಲವ್ ಸ್ಟೋರಿ?
    ಇದೇ ತಿಂಗಳ ಸೆಪ್ಟೆಂಬರ್ 3 ರಂದು ಬಿಕಿ ಬಿಶಾಲ್ ತನ್ನ ಗೆಳತಿಯೊಂದಿಗೆ ಓಡಿಹೋಗಿದ್ದ. ಒಂದು ವಾರದ ಬಳಿಕ ಮನೆಗೆ ಕರೆದುಕೊಂಡು ಬಂದಿದ್ದ. ಹುಡುಗಿ ಕ್ರಿಶ್ಚಿಯನ್ ಸಮಯದಾಯಕ್ಕೆ ಸೇರಿದವಳಾಗಿದ್ದಳು. ನಂತರ ಹುಡುಗಿ ಮನೆಯವರು ಕೆಲವು ಚರ್ಚ್ ಅಧಿಕಾರಿಗಳೊಂದಿಗೆ ಬಂದು ಬಲವಂತವಾಗಿ ಹುಡುಗಿಯನ್ನು ಕರೆದೊಯ್ದರು. ಕಳೆದ ಸೋಮವಾರ ಬಿಶಾಲ್‌ಗೆ ಹುಡುಗಿ ಮನೆಯವರಿಂದ ಒಂದು ಫೋನ್ ಕರೆ ಬಂದಿತ್ತು. ಬಳಿಕ ಮನೆಯಿಂದ ಹೊರಟ ಬಿಶಾಲ್ ವಾಪಸ್ ಹಿಂದಿರುಗಲಿಲ್ಲ. ಅವನ ಗೆಳತಿ ಮನೆವರಿಂದಲೇ ಕರೆ ಬಂದಿದ್ದು, ಅವರೇ ಹತ್ಯೆ ಮಾಡಿ ಮರಕ್ಕೆ ನೇತು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಘಟನೆ ಸಂಬಂಧ ಮಾಹಿತಿ ನೀಡಿರುವ ಪೊಲೀಸರು, ಬಿಶಾಲ್ ಹುಡುಗಿಯನ್ನು ಮದುವೆಯಾಗಬೇಕಾದರೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ಇಬ್ಬರು ಚರ್ಚ್ ಅಧಿಕಾರಿಗಳ ಸಹಾಯವನ್ನೂ ಪಡೆದಿದ್ದಾರೆ. ಆದರೆ ಅವನು ಒಪ್ಪಲಿಲ್ಲ ಎಂಬ ಆರೋಪಗಳು ಹೇಳಿಬಂದಿವೆ. ನಾವು ಎಲ್ಲಾ ರೀತಿಯಲ್ಲೂ ತನಿಖೆ ಮಾಡುತ್ತಿದ್ದು, ಐವರನ್ನು ಬಂಧಿಸಿದ್ದೇವೆ. ಇನ್ನಷ್ಟು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಆದರೆ ಪ್ರಕರಣದ ಕುರಿತು ಬಾಲಕಿ ಮತ್ತು ಆಕೆಯ ಕುಟುಂಬದವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಆನಂದ್ ಸ್ವರೂಪ್ ಶುಕ್ಲಾ

    ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು: ಆನಂದ್ ಸ್ವರೂಪ್ ಶುಕ್ಲಾ

    – ಮುಸ್ಲಿಮರು ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು

    ಲಕ್ನೋ: ರಾಮ, ಕೃಷ್ಣ, ಶಿವ ಭಾರತೀಯ ಮುಸ್ಲಿಮರ ಪೂರ್ವಜರಾಗಿದ್ದು, ಈ ಸಮುದಾಯದವರು ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು ಎಂದು ಉತ್ತರ ಪ್ರದೇಶ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ನಾಲ್ಕೂವರೆ ವರ್ಷಗಳ ಮಾಡಿದ ಸಾಧನೆಗಳ ಕುರಿತು ಮಾಹಿತಿ ನೀಡುವುದಕ್ಕಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್ ಅವರು ಭಾರತೀಯ ಸಂಸ್ಕೃತಿ ಮತ್ತು ಹಿಂದುತ್ವದ ಧ್ವಜವನ್ನು ಹಾರಿಸುವ ಮೂಲಕ ದೇಶದಲ್ಲಿ ಇಸ್ಲಾಮಿಕ್ ರಾಜ್ಯ ರಚಿಸಬೇಕೆಂಬ ಉದ್ದೇಶದ ಮನೋಭಾವದವರನ್ನು ಹಿಮ್ಮೆಟ್ಟಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:  ಈ ಸಲ ಕಪ್ ನಮ್ದೆ – ಆರ್‌ಸಿಬಿಗೆ ಶಮಂತ್, ರಘು ಸಪೋರ್ಟ್

    ಶ್ರೀರಾಮ, ಕೃಷ್ಣ ಮತ್ತು ಶಂಕರ(ಶಿವ) ಭಾರತದಲ್ಲಿರುವ ಮುಸ್ಲಿಮರ ಪೂರ್ವಜರು. ಆದ್ದರಿಂದ ಮುಸ್ಲಿಮರು ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು. ಸಿರಿಯಾ ಮತ್ತು ಅಫ್ಗಾನಿಸ್ತಾನ ನಂತರ, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು, ವಿಶ್ವವನ್ನೇ ಇಸ್ಲಾಮಿಕ್ ರಾಷ್ಟ್ರವನ್ನಾಗಿಸಬೇಕು ಎಂದು ಬಯಸಿವೆ. ಭಾರತದಲ್ಲೂ ಇಂಥ ಮನಸ್ಥಿತಿಯವರಿದ್ದಾರೆ. ಆದರೆ ಮೋದಿ ಮತ್ತು ಆದಿತ್ಯನಾಥ್ ನೇತೃತ್ವದ ಸರ್ಕಾರಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿಯ ಧ್ವಜವನ್ನು ಹಾರಿಸುವ ಮೂಲಕ, ಇಸ್ಲಾಂ ರಾಷ್ಟ್ರವಾಗಿಸುವ ಮನಸ್ಥಿತಿಯನ್ನೇ ಸೋಲಿಸಿದ್ದಾರೆ ಎಂದು ಶುಕ್ಲಾ ಹೇಳಿದರು. ಇದನ್ನೂ ಓದಿ: ಯಡಿಯೂರಪ್ಪಗೆ ಅತ್ಯುತ್ತಮ ಶಾಸಕ ಪ್ರಶಸ್ತಿ- ಓಂ ಬಿರ್ಲಾರಿಂದ ಪ್ರಶಸ್ತಿ ಪ್ರದಾನ

    ಇತ್ತೀಚೆಗೆ ಸಂಭಾಲ್‍ನಲ್ಲಿ ಹಾಕಲಾಗಿದ್ದ ವಿವಾದಾತ್ಮಕ ಭಿತ್ತಿಪತ್ರವೊಂದರ ಕುರಿತು ಉಲ್ಲೇಖಿಸಿದ ಶುಕ್ಲಾ, ಇದು ಸಮಾಜವಾದಿ ಪಕ್ಷದವರು ಇಸ್ಲಾಮಿಕ್ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಹಾಗೂ ಆ ಪಕ್ಷದ ಸಂಸದ ಶೈಫುರ್ ರಹಮಾನ್ ಅವರು ತಾಲಿಬಾನ್ ಬೆಂಬಲಿಸುವ ಹೇಳಿಕೆಗಳನ್ನು ನೀಡುತ್ತಿರುವುದರ ಪರಿಣಾಮ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ:  LOVE YOU MY SON: ನಿಖಿಲ್ ಕುಮಾರಸ್ವಾಮಿ

    ಸಂಭಾಲ್‍ನಲ್ಲಿ ಹಾಕಿದ್ದ  ಪೋಸ್ಟರ್‌ನಲ್ಲಿ ಸಂಭಾಲ್ ಘಾಜಿಗಳ ನೆಲ ಎಂದು ಬರೆಯಲಾಗಿತ್ತು. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ ನಂತರ ಅಖಿಲ ಭಾರತ ಮಜ್ಲಿಸ್ ಇತ್ತೇಹಾದುಲ್ ಮುಸ್ಲಿಮೀನ್(ಎಐಎಂಎಐಎಂ) ಕಾರ್ಯಕರ್ತರು ಅವುಗಳನ್ನು ತೆಗೆದು ಹಾಕಿದರು. ಈ ವಾರದ ಆರಂಭದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಭೇಟಿಗೂ ಮುನ್ನ ಸಂಭಾಲ್‍ನಲ್ಲಿ ಈ ಪೋಸ್ಟರ್ ಹಾಕಲಾಗಿತ್ತು. ಉತ್ತರ ಪ್ರದೇಶದಿಂದ ಈಗಾಗಲೇ ಘಾಜಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ಭವಿಷ್ಯದಲ್ಲಿ ಅಂತಹ ಶಕ್ತಿಗಳು ತಲೆ ಎತ್ತಲು ಸಾಧ್ಯವಾಗುವುದಿಲ್ಲ. ಎಐಎಂಎಐಎಂ ನಾಯಕ ಒವೈಸಿ ವಿರುದ್ಧ ವಾಗ್ದಾಳಿ ನಡೆಸಿದ ಶುಕ್ಲಾ, ಇವರ ಪೂರ್ವಿಕರು ದೇಶದಿಂದ ಹೈದರಾಬಾದ್ ಅನ್ನು ಪ್ರತ್ಯೇಕಿಸಲು ಪ್ರಯತ್ನಿಸಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ ಎಂದು ಹೇಳಿದರು.

  • 3 ವರ್ಷದ ಹಿಂದೆ ಮುಸ್ಲಿಂ ಯುವತಿ ಜೊತೆ ನಿಶ್ಚಿತಾರ್ಥ- 3 ದಿನಗಳ ಹಿಂದೆ ಹಿಂದೂ ಯುವತಿಯೊಂದಿಗೆ ಮದುವೆ?

    3 ವರ್ಷದ ಹಿಂದೆ ಮುಸ್ಲಿಂ ಯುವತಿ ಜೊತೆ ನಿಶ್ಚಿತಾರ್ಥ- 3 ದಿನಗಳ ಹಿಂದೆ ಹಿಂದೂ ಯುವತಿಯೊಂದಿಗೆ ಮದುವೆ?

    -ಹಿಂದೂ, ಮುಸ್ಲಿಂ ಯುವತಿಯರ ಬಾಳಲ್ಲಿ ಮುಸ್ಲಿಂ ಯವಕನ ಚೆಲ್ಲಾಟ

    ಚಿಕ್ಕಬಳ್ಳಾಪುರ: ಮೂರು ವರ್ಷದ ಹಿಂದೆ ಮುಸ್ಲಿಂ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಮುಸ್ಲಿಂ ಯುವಕನೊರ್ವ, ಮೂರು ದಿನಗಳ ಹಿಂದೆ ಹಿಂದೂ ಯುವತಿಯ ಜೊತೆ ಪರಾರಿಯಾಗಿ ಮದುವೆಗೆ ಮುಂದಾಗಿದ್ದಾನೆ.

    ಇದರಿಂದ ಒಂದೆಡೆ ಪ್ರೀತಿ-ಪ್ರೇಮ ಅಂತ ನಿಶ್ಚಿತಾರ್ಥ ಮಾಡಿಕೊಂಡು ಮೋಸ ಹೋದ ಮುಸ್ಲಿಂ ಯುವತಿ ಹಾಗೂ ಮತ್ತೊಂದೆಡೆ ಮಗಳ ಮನಸ್ಸು ಕೆಡಿಸಿ ಮೋಸ ಮಾಡಿದ್ದಾನೆ ಅಂತ ಹಿಂದೂ ಯುವತಿಯ ತಂದೆ-ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.

    ಏನಿದು ಪ್ರಕರಣ?:
    ಮೆಹಬೂಬ್ ಪಾಷಾ ಯುವತಿಯರಿಗೆ ಮೋಸ ಮಾಡಿದ ವ್ಯಕ್ತಿ. ಮೆಹಬೂಬ್ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ನಿವಾಸಿ. ಹೋಟೆಲ್ ನಡೆಸ್ತಿರೋ ಮೆಹಬೂಬ್, 3 ವರ್ಷಗಳ ಹಿಂದೆ ರೈಲಿನಲ್ಲಿ ಪರಿಚಯವಾದ ಡಿ ಪಾಳ್ಯ ಗ್ರಾಮದ ಮುಸ್ಲಿಂ ಯುವತಿ ಜೊತೆ ಪ್ರೀತಿ-ಪ್ರೇಮ ಅಂತ ಸುತ್ತಾಡಿ ಕೊನೆಗೆ ಯುವತಿಯ ಮನೆಯವರನ್ನು ಕಾಡಿ-ಬೇಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ನಿಶ್ಚಿತಾರ್ಥ ಆದ ಮೇಲೆ ಮದುವೆ ಮಾಡಿಕೊಳ್ಳುವ ಬದಲು ಕುಂಟು ನೆಪ ಹೇಳಿಕೊಂಡು ಈ ವರ್ಷ, ಮುಂದಿನ ವರ್ಷ ಅಂತ ಮದುವೆ ಮುಂದೂಡಿದ್ದ ಅಸಾಮಿ ಇದೀಗ ಮೂರು ದಿನಗಳ ಹಿಂದೆ ಗಂಗಸಂದ್ರ ಗ್ರಾಮದ ಹಿಂದೂ ಯುವತಿ ಜೊತೆ ಪರಾರಿಯಾಗಿದ್ದಾನೆ. ಸದ್ಯ ಹಿಂದೂ ಯುವತಿ ಹಾಗೂ ಮೆಹಬೂಬ್ ಪಾಷಾ ಇಬ್ಬರು ಗೌರಿಬಿದನೂರು ಉಪನೋಂದಾಣಾಧಿಕಾರಿಗಳ ಕಚೇರಿಯಲ್ಲಿ ವಿವಾಹ ಮಾಡಿಕೊಳ್ಳೋಕೆ ಅರ್ಜಿ ಕೂಡ ಸಲ್ಲಿಸಿದ್ದಾರೆ.

    ಈ ಮೆಹಬೂಬ್ ಪಾಷಾ ಕಳೆದ ವರ್ಷವೂ ಕೂಡ ಬೇರೊಂದು ಯುವತಿ ಜೊತೆಗೆ ವಿವಾಹ ನೋಂದಣಿಗೆ ಅರ್ಜಿ ಸಲ್ಲಿಸಿದ್ದನಂತೆ. ಆ ವೇಳೆ ಮುಸ್ಲಿಂ ಯುವತಿ ಗಲಾಟೆ ಮಾಡಿ ಕ್ಯಾತೆ ತೆಗೆದಾಗ ಮುಂದಿನ ವರ್ಷ ಮದುವೆಯಾಗುವುದಾಗಿ ನಂಬಿಸಿದ್ದನಂತೆ. ಆದರೆ ಈಗ ಮತ್ತೊಂದು ವರ್ಷ ಕಳೆಯೋದ್ರ್ರೊಳಗೆ ಮತ್ತೊಂದು ಯುವತಿ ಜೊತೆ ಮದುವೆಗೆ ಮುಂದಾಗಿದ್ದಾನೆ. ಹೀಗಾಗಿ ಒಂದೆಡೆ ನೊಂದ ಮುಸ್ಲಿಂ ಯುವತಿ, ಮತ್ತೊಂದೆಡೆ ಹಿಂದೂ ಯುವತಿ ತಂದೆ-ತಾಯಿ ಚಿಕ್ಕಬಳ್ಳಾಪರ ಎಸ್‍ಪಿ ಕಾರ್ತಿಕ್ ರೆಡ್ಡಿ, ಗೌರಿಬಿದನೂರು ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ.

    ಇತ್ತ ನಿಶ್ಚಿತಾರ್ಥದ ಹೆಸರಲ್ಲಿ ಮೋಸ ಮಾಡಿದ ಮೆಹಬೂಬ್ ಪಾಷಾ ಗೆ ತಕ್ಕ ಶಿಕ್ಷೆಯಾಗಬೇಕು ಅಂತ ಮುಸ್ಲಿಂ ಯುವತಿ ಪಟ್ಟು ಹಿಡಿದಿದ್ದಾಳೆ. ಮತ್ತೊಂದೆಡೆ ನಮ್ಮ ಮಗಳನ್ನ ಏನಾದ್ರೂ ಮಾಡಿ ನಮಗೆ ನ್ಯಾಯ ಕಳಿಸಿಕೊಡಿ ಅಂತ ಹಿಂದೂ ಯುವತಿಯ ಪೋಷಕರು ಪೊಲೀಸರ ಬಳಿ ಅವಲತ್ತುಕೊಳ್ತಿದ್ದಾರೆ. ಮೆಹಬೂಬ್ ಪಾಷಾ ವಿರುದ್ಧ ಎರಡು ಕುಟುಂಬದವರು ಲವ್-ಜಿಹಾದ್ ಆರೋಪ ಕೂಡ ಹೊರಿಸಿದ್ದಾರೆ. ಹೀಗಾಗಿ ಮೆಹಬೂಬ್ ಪಾಷಾ ಹಾಗೂ ಹಿಂದೂ ಯುವತಿ ಇಬ್ಬರನ್ನ ಕರೆಸಿ ಪೊಲೀಸರು ವಿಚಾರಣೆ ಮಾಡೋಕೆ ಮುಂದಾಗಿದ್ದಾರೆ.

  • ನಾನು ಅನಂತ್‌ಕುಮಾರ್‌ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ : ಸಿಎಂ

    ನಾನು ಅನಂತ್‌ಕುಮಾರ್‌ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ : ಸಿಎಂ

    ಮೈಸೂರು: ನಾನು ಅನಂತ್‌ಕುಮಾರ್‌ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ. ನಾನು ಜಾತ್ಯಾತೀತ ಹಿಂದು. ಅವರೆಲ್ಲರೂ ಕೋಮುವಾದಿ ಹಿಂದೂಗಳು ಎಂದು ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದಾರೆ.

    ಪ್ರತಾಪ್ ಸಿಂಹ ಅವರ ಆರೋಪದ ಬಗ್ಗೆ ಮಾತನಾಡಿದ ಸಿಎಂ, ಘಟನೆ ಎಲ್ಲಿ ನಡೆದಿದೆ ಎನ್ನುವುದು ನನಗೆ ಗೊತ್ತಿಲ್ಲ. ಓವರ್ ಸ್ಪೀಡ್ ನಿಂದ ಇಲ್ಲ ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸುತ್ತವೆ. ಈ ರೀತಿ ಕ್ರಿಮಿನಲ್ ಆಲೋಚನೆಗಳು ಮಾಡಬಾರದು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರ್ ಅಪಘಾತ- ಸಿಎಂಗೆ ಸಂಸದ ಪ್ರತಾಪ್ ಸಿಂಹ ಸವಾಲ್

    ಉತ್ತರ ಕರ್ನಾಟಕದಿಂದ ಕೆಲವು ಮುಖಂಡರು ನಿನ್ನೆ ಭೇಟಿ ಮಾಡಿ ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸ್ವಲ್ಪ ಗೊಂದಲ ಇದೆ ಹಾಗಾಗಿ ಅಭ್ಯರ್ಥಿ ನಿರ್ಧಾರವನ್ನು ಕಾಯ್ದಿರಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ !

    ಇದೇ ವೇಳೆ ಸಿಎಂ ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರಿದರು.

  • ಮಂಗ್ಳೂರಲ್ಲಿ ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಯ್ತು ವಿಶೇಷ ದೋಣಿ ಸೇತುವೆ!

    ಮಂಗ್ಳೂರಲ್ಲಿ ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಯ್ತು ವಿಶೇಷ ದೋಣಿ ಸೇತುವೆ!

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೀಪಕ್ ರಾವ್ ಮತ್ತು ಬಶೀರ್ ಸಾವಿನಿಂದಾಗಿ ಕೆಲ ದಿನಗಳಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು ರಾಜಕೀಯ ನಾಯಕರು ಒಂದೊಂದು ಹೇಳಿಕೆ ನೀಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷ ಬಿತ್ತುವ ಪೋಸ್ಟ್ ಗಳು ಹರಿದಾಡುತ್ತಿದೆ. ಈ ಮಧ್ಯೆ ಕುದುರು ಒಂದರಲ್ಲಿ ನಡೆದ ಊರುಸ್ ಕಾರ್ಯಕ್ರಮ ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಗಿದೆ.

    ಹೌದು. ನಗರದಿಂದ ಸುಮಾರು 10 ಕಿ.ಮೀ. ದೂರದಲ್ಲಿರೋ ಕಣ್ಣೂರಿನಲ್ಲಿ ಇದೇ 6 ಮತ್ತು 7ರಂದು ನೇತ್ರಾವತಿ ನದಿ ಮಧ್ಯೆ ಇರುವ ಕುದುರು `ನಡುಪಳ್ಳಿ’ ಯಲ್ಲಿ ರಹ್ಮಾನಿಯಾ ಮಸೀದಿ ವಠಾರದ ದರ್ಗಾದಲ್ಲಿ ಉರುಸ್ ಉತ್ಸವ ನಡೆದಿತ್ತು. ಈ ಸಂಭ್ರಮದಲ್ಲಿ ಜಾತಿ ಬೇಧವಿಲ್ಲದೇ ಎಲ್ಲಾ ಧರ್ಮದವರೂ ಭಾಗಿಯಾಗಿದ್ದರು. ಅಲ್ಲದೇ ನಡುಪಳ್ಳಿಗೆ ಹೋಗಲು ಸೇತುವೆಯಿಲ್ಲದೇ ಇರುವುದರಿಂದ ಉತ್ಸವಕ್ಕೆ ಬರುವ ಸಾವಿರಾರು ಮಂದಿ ಭಕ್ತರಿಗೆ ಅಡ್ಯಾರ್-ಕಣ್ಣೂರ್ ನಡುಪಳ್ಳಿಯ ಮಧ್ಯೆ ತಾತ್ಕಾಲಿಕವಾಗಿ ದೋಣಿ ಸೇತುವೆ ನಿರ್ಮಾಣ ಮಾಡಲಾಗಿತ್ತು.

    ದೋಣಿ ಸೇತುವೆಯ ವಿಶೇಷತೆ ಏನು?
    ನದಿ ಬದಿಯಲ್ಲಿ ಮರಳುಗಾರಿಕೆ ನಡೆಸುವ ದಕ್ಕೆಯಲ್ಲಿ ಕೆಲಸ ಮಾಡುವ ಮಂದಿ ಒಟ್ಟಾಗಿ ತಮ್ಮ ದೋಣಿಗಳನ್ನೇ ಸಾಲಾಗಿ ನಿಲ್ಲಿಸಿ ಅದರ ಮೇಲೆ ಕಬ್ಬಿಣದ ಹಲಗೆಗಳನ್ನು ಜೋಡಿಸಿ ತಾತ್ಕಾಲಿಕವಾಗಿ ಸೇತುವೆಯೊಂದನ್ನು ನಿರ್ಮಾಣ ಮಾಡಿದ್ದರು. ಶನಿವಾರ ಉತ್ಸವ ಆಯೋಜನೆಗೊಂಡಿದ್ದರಿಂದ ಶುಕ್ರವಾರವೇ ಸೇತುವೆ ನಿರ್ಮಾಣ ಕೆಲಸ ಶುರುವಾಗಿತ್ತು. ಸಂಜೆ ವೇಳೆಗೆ ಒಂದೇ ರೀತಿಯಾಗಿ 67 ದೋಣಿಗಳನ್ನು ಜೋಡಿಸಿ, ಅದರದ ಮೇಲೆ ಕಬ್ಬಿಣದ ಹಲಗೆಯನ್ನು ಇಡಲಾಗಿತ್ತು. ಇದರ ಮೇಲೆ ಕೆಂಪು ಹಾಸು ಹಾಸಿ, ಲೈಟ್ ಕಟ್ಟುವ ಮೂಲಕ ಭಕ್ತರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ವಿಶೇಷ ಏನೆಂದರೆ ಹಿಂದೂಗಳು ದೋಣಿಗಳು ಇದರಲ್ಲಿ ಇದ್ದು, ಸ್ವ-ಇಚ್ಛೆಯಿಂದ ದೋಣಿಯನ್ನು ತಂದು ನಿಲ್ಲಿಸಿದ್ದರು. ಈ ದರ್ಗಾ ಬಹಳ ಪುರಾತನವಾಗಿದ್ದು, 1923ರಲ್ಲಿ ಬೃಹತ್ ನೆರೆ ಬಂದು ಕೊಚ್ಚಿಹೋಗಿತ್ತು.

    ದೋಣಿ ಸೇತುವೆಯೇ ಯಾಕೆ?
    ಇನ್ನು ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಮಸೀದಿಯ ಮದರಸ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್, ಈ ಮೊದಲು ಭಕ್ತರನ್ನು ನಡುಪಳ್ಳಿಗೆ ದೋಣಿ ಮೂಲಕ ಉಚಿತವಾಗಿ ಕರೆದೊಯ್ಯಲಾಗುತ್ತಿತ್ತು. ಆದ್ರೆ ದೋಣಿಯಲ್ಲಿ ಜನರ ಹೊಯ್ದಾಟದಿಂದ ಆತಂಕ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ ತಾತ್ಕಾಲಿಕ ಸೇತುವೆಯ ನಿರ್ಮಿಸಲಾಗುತ್ತಿದೆ. ಇನ್ನು ಇದರಲ್ಲಿ ಹಿಂದೂಗಳ ಅನೇಕ ದೋಣಿಗಳಿವೆ. ಅವರೆಲ್ಲರೂ ಸ್ವ-ಇಚ್ಛೆಯಿಂದ ದೋಣಿ ತಂದು ನಿಲ್ಲಿಸುತ್ತಾರೆ ಎಂದು ಹೇಳಿದರು.

    ಈ ಸೌಹಾರ್ದದ ಕುರಿತು ಮೂರು ವರ್ಷವೂ ತಮ್ಮ ದೋಣಿಗಳನ್ನು ಸೇತುವೆಗೆಂದು ನಿಲ್ಲಿಸುವ ಜಯಶೀಲ ಅಡ್ಯಂತಾಯ ಎಂಬವರು ಮಾತನಾಡಿ, “ಕರಾವಳಿಯಲ್ಲಿ ರಾಜಕೀಯ ಪ್ರೇರಿತವಾಗಿ ಯಾವುದೇ ಘಟನೆಗಳು ನಡೆಯಲಿ. ನಮ್ಮೂರಿನ ಸೌಹಾರ್ದಕ್ಕೆ ಯಾವುದೇ ಧಕ್ಕೆಯಾಗದಂತೆ ನಾವು ನಡೆದುಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ. ಉರುಸ್ ಮುಗಿದ ಬಳಿಕ ಅಂದ್ರೆ ಸೋಮವಾರ ಮುಂಜಾನೆ ದೋಣಿಗಳೆಲ್ಲ ತಮ್ಮ ಕಾರ್ಯದಲ್ಲಿ ತೊಡಗಿಕೊಂಡವು.

  • ಬಿಜೆಪಿಗೆ ಮತ ಹಾಕಿ ಇಲ್ಲವೇ ಪರಿಣಾಮ ಎದುರಿಸಿ- ಮುಸ್ಲಿಮರಿಗೆ ಬಿಜೆಪಿ ಮುಖಂಡ ಎಚ್ಚರಿಕೆ

    ಬಿಜೆಪಿಗೆ ಮತ ಹಾಕಿ ಇಲ್ಲವೇ ಪರಿಣಾಮ ಎದುರಿಸಿ- ಮುಸ್ಲಿಮರಿಗೆ ಬಿಜೆಪಿ ಮುಖಂಡ ಎಚ್ಚರಿಕೆ

    ಲಕ್ನೋ: ನಿಮ್ಮ ಮತವನ್ನು ಬಿಜೆಪಿ ಪಕ್ಷಕ್ಕೆ ನೀಡಿ. ಇಲ್ಲವೆಂದಲ್ಲಿ ಮುಂದೆ ಬರಲಿರುವ ಪರಿಣಾಮವನ್ನು ನೀವೇ ಎದುರಿಸಲಿದ್ದೀರಿ ಅಂತ ಉತ್ತರಪ್ರದೇಶದ ಬಿಜೆಪಿ ಮುಖಂಡ ರಂಜೀತ್ ಕುಮಾರ್ ಶ್ರೀವತ್ಸವ್ ಮುಸ್ಲಿಮರಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.

    ರಂಜೀತ್ ಪತ್ನಿ ಬರಾಬಂಕಿ ಜಿಲ್ಲೆಯ ಕ್ಷೇತ್ರವೊಂದರಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪತ್ನಿ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ರಂಜೀತ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಈ ಭಾಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋದಲ್ಲಿ ಬಿಜೆಪಿ ಕಾರ್ಪೋರೇಟರ್ ಗಳಿಗೆ ನೀವು ಮತ ಹಾಕಿದ್ದಲ್ಲಿ ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬಹುದು. ಇಲ್ಲವೆಂದಲ್ಲಿ ಅಭಿವೃದ್ಧಿ ಎಂಬ ಪದವನ್ನು ಮರೆತುಬಿಡಿ ಅಂತ ಹೇಳಿದ್ದಾರೆ.

    ಇದು ಸಮಾಜವಾದಿ ಪಕ್ಷದ ಸರ್ಕಾರ ಅಲ್ಲ. ಇಲ್ಲಿ ಯಾವೊಬ್ಬ ಮುಖಂಡನು ನಿಮಗೆ ಸಹಾಯ ಮಾಡಲ್ಲ. ರಸ್ತೆ, ಚರಂಡಿ, ಫುಟ್ಪಾತ್ ಕೆಲಸಕ್ಕಾಗಿ ಮುನಿಸಿಪಲ್ ಬೋರ್ಡ್ ಅನ್ನೇ ಸಂಪರ್ಕಿಸಬೇಕು. ನೀವು ನಮ್ಮ ಕಾರ್ಪೋ ರೇಟರುಗಳನ್ನು ಚುನಾಯಿಸದೇ ಇದ್ದರೆ, ನೀವು ರಂಜೀತ್ ಸಾಹೇಬ್ ಅವರ ಪತ್ನಿಗೆ ಮತ ನೀಡಿ ಆಕೆಯನ್ನು ಆರಿಸದೇ ಇದ್ದರೆ ಆಗ ಸಮಾಜವಾದಿ ಪಕ್ಷ ನಿಮ್ಮ ರಕ್ಷಣೆಗೆ ಬರುವುದಿಲ್ಲ. ಇದು ಬಿಜೆಪಿಯ ಆಡಳಿತ. ನೀವು ಈ ಹಿಂದೆ ಅನುಭವಿಸದೇ ಇದ್ದ ಕಷ್ಟ ಅನುಭವಿಸಬೇಕಾಗಬಹುದು ಅಂತ ಹೇಳಿದ್ದಾರೆ.

    ಮುಸ್ಲಿಮರಲ್ಲಿ ನಾನು ಕೇಳಿಕೊಳ್ಳುವುವು ಏನೆಂದರೆ ಬಿಜೆಪಿಗೆ ಮತ ಹಾಕಿ. ನಾನು ನಿಮ್ಮ ಜೊತೆ ಮತವನ್ನು ಭಿಕ್ಷೆ ತರ ಬೇಡುತ್ತಿಲ್ಲ. ಬಿಜೆಪಿಗೆ ನೀವು ಮತ ಹಾಕಿದ್ರೆ ಮಾತ್ರ ನೀವು ಶಾಂತಿಯುತ ಜೀವನ ನಡೆಸಬಹುದು. ಒಂದು ವೇಳೆ ನೀವು ಮತ ಹಾಕದೇ ಇದ್ದಲ್ಲಿ ಮುಂದೆ ಕಷ್ಟ ಅನುಭವಿಸಲಿದ್ದೀರಿ ಅಂತ ಹೇಳಿದ್ದಾರೆ.

    ನಾನು ಬೆದರಿಕೆ ಹಾಕುತ್ತಿದ್ದೇನೆ ಅಂತ ತಿಳಿದುಕೊಳ್ಳಬೇಡಿ, ನಾನು ಮತ ಹಾಕಿ ಅಂತ ಮುಸ್ಲಿಮರಿಗೆ ಬೆದರಿಕೆ ಹಾಕುತ್ತಿಲ್ಲ. ಅವರ ಮತಗಳನ್ನು ಬಿಜೆಪಿಗೆ ನೀಡುವಂತೆ ಮನವೊಲಿಸುತ್ತಿದ್ದೇನೆ ಅಷ್ಟೇ. ಅಲ್ಲದೇ ಹಿಂದೂ ಹಾಗೂ ಮುಸ್ಲಿಮರಿಗಿರುವ ದೊಡ್ಡ ವ್ಯತ್ಯಾಸದ ಕುರಿತು ಅವರಿಗೆ ಅರ್ಥೈಸಲು ಪ್ರಯತ್ನಿಸಿದ್ದೇನೆ. ಹಿಂದೂ, ಮುಸ್ಲಿಮ್ ಎಂಬ ಬೇಧ-ಭಾವ ಇಲ್ಲಿಗೆ ಕೊನೆಯಾಗಬೇಕು ಎಂದು ಅವರು ಹೇಳಿದ್ದಾರೆ.

    ನವಾಬಗಂಜ್ ನಗರಪಾಲಿಕೆಯ ನಿರ್ಗಮನ ಅಧ್ಯಕ್ಷರಾಗಿರುವ ಶ್ರೀವಾಸ್ತವ ಎಂಬ ಬಿಜೆಪಿ ಮುಖಂಡರ ಪತ್ನಿ ಶಶಿಗೆ ಶ್ರೀವಾತ್ಸವ್ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿದೆ. ಈ ಭಾಷಣ ನವೆಂಬರ್ 13ರಂದು ನಡೆದಿದ್ದು, ಈ ವೇಳೆ ಬಾರಾಬಂಕಿ ಉಸ್ತುವಾರಿ ಸಚಿವರೂ ಆಗಿರುವ ದಾರಾ ಸಿಂಗ್ ಚೌಹಾಣ್ ನಂತರ ಪ್ರತಿಕ್ರಿಯಿಸಿ ಇಂತಹ ಹೇಳಿಕೆಗಳಿಂದ ಪಕ್ಷದ ಸದಸ್ಯರು ದೂರವಿರಬೇಕೆಂದು ತಿಳಿಸಿದ್ದಾರೆ.