Tag: ಹಿಂದಿ ಭಾಷೆ

  • ಭಾರತೀಯ ಭಾಷೆಗಳಿಗೆ ಪ್ರತ್ಯೇಕ ಇಲಾಖೆ ಸ್ಥಾಪನೆ – ಅಮಿತ್‌ ಶಾ

    ಭಾರತೀಯ ಭಾಷೆಗಳಿಗೆ ಪ್ರತ್ಯೇಕ ಇಲಾಖೆ ಸ್ಥಾಪನೆ – ಅಮಿತ್‌ ಶಾ

    – ಭಾಷೆಗಳ ನಡುವೆ ಭಾಷಾಂತರಕ್ಕೆ ಶೀಘ್ರದಲ್ಲೇ ಮೊಬೈಲ್ ಆ್ಯಪ್
    – ಹಿಂದಿ ಭಾರತೀಯ ಇತರ ಭಾಷೆಗಳ ಸ್ನೇಹಿತ ಎಂದ ಕೇಂದ್ರ ಸಚಿವ

    ನವದೆಹಲಿ: ಭಾರತೀಯ ಭಾಷೆಗಳು ಈ ದೇಶದ ಸಂಪತ್ತು. ಹೀಗಾಗಿ ಭಾಷೆಯ ಹೆಸರಿನಲ್ಲಿ ವಿಭಜನೆ ಆಗಬಾರದು. ಹೀಗಾಗಿ ಯಾವುದೇ ಭಾಷೆ ಅಥವಾ ರಾಜ್ಯದ ಜನರ ಮೇಲೆ ಹಿಂದಿ ಹೇರುತ್ತಿಲ್ಲ. ಬದಲಿಗೆ ಭಾಷೆಗಳ ಕುರಿತು ರಾಜಭಾಷಾ ವಿಭಾಗದ (ಅಧಿಕೃತ ಭಾಷಾ ಇಲಾಖೆ – Raajbhasha Vibhaag) ಅಡಿಯಲ್ಲಿ ಹೊಸ ಇಲಾಖೆ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ಅಮಿತ್‌ ಶಾ (Amit Shah) ಅವರು ಹೇಳಿದರು.

    ರಾಜ್ಯಸಭೆಯಲ್ಲಿಂದು (Rajya Sabha) ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿವರಿಸಿರುವ ತ್ರಿಭಾಷಾ ಸೂತ್ರದ ಅನುಷ್ಠಾನದ ಕುರಿತು ತೀವ್ರ ಗದ್ದಲದ ನಡುವೆ ಮಾತನಾಡಿದ ಶಾ, ಕೇಂದ್ರ ಸರ್ಕಾರದ ಹಿಂದಿ (Hindi) ಹೇರಿಕೆ ಆರೋಪವನ್ನು ತಳ್ಳಿಹಾಕಿದರು.

    ಭಾಷೆಯ (languages) ಹೆಸರಿನಲ್ಲಿ ರಾಷ್ಟ್ರದಲ್ಲಿ ಸಾಕಷ್ಟು ವಿಭಜನೆಗಳು ನಡೆದಿವೆ. ಇನ್ಮುಂದೆ ಅದು ಸಂಭವಿಸಬಾರದು. ಏಕೆಂದರೆ ಪ್ರತಿಯೊಂದು ಭಾಷೆಯೂ ದೇಶದ ಸಂಪತ್ತು. ಹಿಂದಿ ಸಹ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧೆ ಮಾಡುತ್ತಿಲ್ಲ. ಅದು ಇತರ ಭಾಷೆಗಳ ಸ್ನೇಹಿತನಿದ್ದಂತೆ ಎಂದು ಹೇಳಿದರು.

    ಭಾರತೀಯ ಭಾಷೆಗಳು ಈ ದೇಶದ ಸಂಪತ್ತು. ಹೀಗಾಗಿ ಯಾವುದೇ ಭಾಷೆ ಅಥವಾ ರಾಜ್ಯದ ಜನರ ಮೇಲೆ ಹಿಂದಿ ಹೇರುತ್ತಿಲ್ಲ. ಬದಲಿಗೆ ಭಾಷೆಗಳ ಕುರಿತು ರಾಜಭಾಷಾ ವಿಭಾಗದ (ಅಧಿಕೃತ ಭಾಷಾ ಇಲಾಖೆ) ಅಡಿಯಲ್ಲಿ ಹೊಸ ಇಲಾಖೆ ಆರಂಭಿಸಲಾಗುವುದು. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಎಲ್ಲಾ ಭಾಷೆಗಳನ್ನು ಉತ್ತೇಜಿಸಿ ಬೆಳೆಸುವ ನಿಟ್ಟಿನಲ್ಲಿ ಭಾರತೀಯ ಭಾಷೆಗಳ ಇಲಾಖೆಯನ್ನು ತೆರೆಯಲಿದೆ. ಭಾಷೆಗಳ ನಡುವೆ ಭಾಷಾಂತರಕ್ಕೆ ಮೊಬೈಲ್ ಆ್ಯಪ್ ಸಹ ಹೊರತರಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.

    ಕೇಂದ್ರ ಸರ್ಕಾರ ದಕ್ಷಿಣದ ಭಾಷೆಗಳ ವಿರೋಧಿಯಲ್ಲ. ನಾನು ಗುಜರಾತ್‌ನಿಂದ ಬಂದಿದ್ದೇನೆ. ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನಿಂದ ಬಂದಿದ್ದಾರೆ. ಇಲ್ಲಿ ಭಾಷೆ ಮುಖ್ಯವಲ್ಲ, ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳು ಭಾರತೀಯ ಭಾಷೆಯಲ್ಲಿ ಲಭ್ಯವಾಗಬೇಕು ಎಂಬುದಷ್ಟೇ ಕೇಂದ್ರದ ಉದ್ದೇಶ ಎಂದಿದ್ದಾರೆ.

    ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳನ್ನು ತಮಿಳಿನಲ್ಲಿ ನೀಡಲು ತಮಿಳುನಾಡು ಸರ್ಕಾರಕ್ಕೆ ಈವರೆಗೂ ಸಾಧ್ಯವಾಗಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಅವರ ಆರ್ಥಿಕತೆಗೆ ಪೆಟ್ಟು ಬೀಳಲಿದೆ. ಇದನ್ನು ನಾವು ಕಳೆದ ಎರಡು ವರ್ಷಗಳಿಂದ ಹೇಳುತ್ತಿದ್ದೇವೆ. ಆದರೆ ದಕ್ಷಿಣದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ತಮಿಳಿನಲ್ಲೇ ನಾವು ವೃತ್ತಿಪರ ಶಿಕ್ಷಣ ನೀಡಲಿದ್ದೇವೆ ಎಂದು ಅಮಿತ್ ಶಾ ಭರವಸೆ ನೀಡಿದರು.

    ತಮ್ಮ ಭ್ರಷ್ಟಾಚಾರ ಮರೆ ಮಾಚಲು ಹಾಗೂ ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಭಾಷಾ ವಿವಾದವನ್ನು ಹುಟ್ಟುಹಾಕಿವೆ. ಭಾರತೀಯ ಭಾಷೆಗಳನ್ನು ರಕ್ಷಿಸಲು ನಮ್ಮ ಪಕ್ಷ ಬದ್ಧವಾಗಿದೆ. ಈ ಕುರಿತಂತೆ ಡಿಸೆಂಬರ್ ನಂತರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ, ಸಂಸದರು ಮತ್ತು ಆಯಾ ಭಾಷೆಯ ಜನರೊಂದಿಗೆ ಸಮಾಲೋಚನೆ ನಡೆಸುವೆ. ತಮ್ಮ ಭ್ರಷ್ಟಾಚಾರ ಮರೆಮಾಚಲು ಭಾಷೆಯ ಹಿಂದೆ ನಿಂತು ಆಶ್ರಯ ಪಡೆಯುತ್ತಿರುವವರಿಗೆ ಇದು ನನ್ನ ಖಡಕ್ ಎಚ್ಚರಿಕೆ ಎಂದು ಅಮಿತ್‌ ಶಾ ಹೇಳಿದರು.

  • ಕನ್ನಡ ಚಿತ್ರರಂಗ ದಿಕ್ಕು ತಪ್ಪಿಹೋಗಿದೆ, ಪ್ಯಾನ್ ಇಂಡಿಯಾ ವ್ಯಾಪಾರದ ಸೋಗು ಬಂದಿದೆ – ಹಂಸಲೇಖ ವಿಷಾದ

    ಕನ್ನಡ ಚಿತ್ರರಂಗ ದಿಕ್ಕು ತಪ್ಪಿಹೋಗಿದೆ, ಪ್ಯಾನ್ ಇಂಡಿಯಾ ವ್ಯಾಪಾರದ ಸೋಗು ಬಂದಿದೆ – ಹಂಸಲೇಖ ವಿಷಾದ

    ಮೈಸೂರು: ಇಂದು ಕನ್ನಡ ಚಿತ್ರರಂಗ (Kannada Film Industry) ದಿಕ್ಕು ತಪ್ಪಿಹೋಗಿದೆ. ಪ್ಯಾನ್ ಇಂಡಿಯಾ ವ್ಯಾಪಾರದ ಸೋಗು ಬಂದಿದೆ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ವಿಷಾದ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ (Mysuru) ಮಾಧ್ಯಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಕನ್ನಡ ಚಲನಚಿತ್ರ ಚುಕ್ಕಾಣಿಯೇ ಇಲ್ಲದ ಹಡಗಾಗಿದೆ. ದೊಡ್ಡ-ದೊಡ್ಡ ಮಹನೀಯರು ಸಂಸ್ಥೆ ಕಟ್ಟಿದ್ದಾರೆ. ಮೊದಲು ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ಮೂರೂ ವಲಯವನ್ನ ಒಗ್ಗಟ್ಟಿನ ತ್ರಿಶೂಲವಾಗಿಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ಇವತ್ತು ಪ್ಯಾನ್ ಇಂಡಿಯಾದ  (Pan India) ವ್ಯಾಪಾರದ ಸೋಗು ಬಂದಿದೆ. ಕನ್ನಡ ಚಿತ್ರರಂಗ ದಿಕ್ಕು ತಪ್ಪಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯː ಹಂಸಲೇಖ

    ಮುಂದುವರಿದು, ಕನ್ನಡದಲ್ಲೇ ಬದುಕಬೇಕಾ ಅಥವಾ ಕನ್ನಡವನ್ನ ಕಟ್ಟಿಕೊಂಡು ಎಲ್ಲರ ಜೊತೆಯಲ್ಲಿ ಬದುಕಬೇಕಾ? ಎನ್ನುವ ದೊಡ್ಡ ತಾಪತ್ರೆಯ ಬಂದಿದೆ. ಈ ಹಿಂದೆ ಒಬ್ಬ ಹಿರೋ ಪ್ರತಿ ಕನ್ನಡ ಚಿತ್ರದಲ್ಲಿ ಕನ್ನಡದ ಹಾಡು ಇರುತ್ತಿತ್ತು. ಈಗ ಕನ್ನಡದ ಹಾಡು ಹೇಳಲು ಹೆದರುತ್ತಿದ್ದಾರೆ. ಏಕಂದರೆ ಇಲ್ಲಿ ಹಾಡಿದ ಹಾಡು ಅಲ್ಲಿ ಸಲ್ಲುವುದಿಲ್ಲ. ಅಲ್ಲಿ ಹಾಡಿದ ಹಾಡು ಇಲ್ಲಿ ಸಲ್ಲುವುದಿಲ್ಲ. ಹೀಗಾಗಿ ಬರೀ ಆಕ್ಷನ್ ನೇ ರಿಯಾಕ್ಷನ್ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿನಿಮಾ ರಿಲೀಸ್ ಬಳಿಕ ಮಹಿಳಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ ಅನುಷ್ಕಾ ಶೆಟ್ಟಿ

    ಸಿನಿಮಾಗಳಲ್ಲಿ ಸಂಬಂಧಗಳು ಯಾವುದೂ ಇರುವುದಿಲ್ಲ. ಬರೀ ಹೊಡಿ ಬಡಿ, ಕಿವಿ ಮುಚ್ಚುವ ರೀತಿ ಸಂಗೀತ ಇದು ಎಲ್ಲಾ ಭಾಷೆಗಳಲ್ಲಿ ಮ್ಯಾಚ್ ಆಗುತ್ತೆ ಅಂಥ ತಿಳಿದುಕೊಂಡಿದ್ದಾರೆ. ಕನ್ನಡದಲ್ಲಿ ಹೊಸ ನಿರ್ದೇಶಕರು 250 ಜನ ಇದ್ದರೆ, ಹೊಸ ನಿರ್ಮಾಪಕರು 500 ಜನ ಇದ್ದಾರೆ. ಇವರಾರಿಗೂ ನಮ್ಮ ಚೇಂಬರ್‌ನ ಸಂಪರ್ಕವೇ ಇಲ್ಲ. ಎಲ್ಲರನ್ನ ಕರೆದು ಚರ್ಚೆ ಮಾಡುವವರೇ ಇಲ್ಲದಂತಾಗಿದೆ. ಮುಂದಿನ ದಿನದಿನದಲ್ಲಿ ಯಾರಾದರೂ ಬಂದು ಆ ಚುಕ್ಕಾಣಿಯನ್ನ ಹಿಡಿಯಬೇಕು. ಸಂಸ್ಕೃತಿ ಮಾರ್ಗದಲ್ಲಿ, ಕನ್ನ ಮಾರ್ಗದಲ್ಲಿ ಕನ್ನಡ ಚಿತ್ರರಂಗವನ್ನ ನಡೆಸುವಂತಾಗಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ‘ಜವಾನ್’ ಬಾಕ್ಸ್ ಆಫೀಸ್ ಕಲೆಕ್ಷನ್: ಈವರೆಗೂ ಹರಿದು ಬಂದ ಹಣವೆಷ್ಟು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯː ಹಂಸಲೇಖ

    ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯː ಹಂಸಲೇಖ

    – ದಸರಾ ಉದ್ಘಾಟಕರಾಗಿ ಆಯ್ಕೆಯಾದ ಕುರಿತು ಮಾಧ್ಯಮಗಳೊಂದಿಗೆ ಹಂಸಲೇಖ ಸಂವಾದ

    ಮೈಸೂರು: ಮೈಸೂರು ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ಸಾಮಾಜಿಕ ಕಲಾ ನ್ಯಾಯ ಎಂದು ಹೇಳಿತ್ತೇನೆ. ಸಾಮಾಜಿಕ ನ್ಯಾಯ ಅಥವಾ ಕಾವ್ಯಕ್ಕೆ ಸಿಕ್ಕ ನ್ಯಾಯ ಅಂತ ಹೇಳುವುದಿಲ್ಲ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ತಿಳಿಸಿದ್ದಾರೆ.

    ಮೈಸೂರು ದಸರಾ (Mysuru Dasara) ಉದ್ಘಾಟಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ನನ್ನನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ್ದಕ್ಕೆ ಕೆಲವರು ಸಾಮಾಜಿಕ ನ್ಯಾಯ ಅಂತಾ ಹೇಳಿದ್ರು. ಅದ್ಯಾವುದನ್ನೂ ವ್ಯಾಖ್ಯಾನಿಸಲು ಕಷ್ಟ. ನಾನು ಸಿನಿಮಾ ರೈಟರ್, ನನ್ನನ್ನ ಕವಿ ಅಂದರೆ, ಕವಿ ಪಟ್ಟ ಬೇಡ ಅಂತಿನಿ. ಕವಿ ಪಟ್ಟ ತೆಗೆದುಕೊಂಡರೆ ಮೇಲು, ಮಧ್ಯ, ಕೆಳಗೆ ಅಂತ ಮೂರು ಭಾಗ ಮಾಡುತ್ತಾರೆ. ಆದ್ರೆ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದು ಮಾತ್ರ ಸಾಮಾಜಿಕ ಕಲಾ ನ್ಯಾಯ ಅಂತಾ ಹೇಳ್ತೀನಿ. ಸಾಮಾಜಿಕ ನ್ಯಾಯ ಅಥವಾ ಕಾವ್ಯಕ್ಕೆ ಸಿಕ್ಕ ನ್ಯಾಯ ಅಂತ ಹೇಳುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭತ್ತದ ಬೆಳೆಯಲ್ಲಿ ಸಾಧನೆ: ಬೆಳ್ತಂಗಡಿಯ ಅಮೈ ದೇವರಾವ್‌ಗೆ ರಾಷ್ಟ್ರಪತಿಗಳಿಂದ ಪುರಸ್ಕಾರ

    ಇದೇ ವೇಳೆ ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡಿದ ಹಂಸಲೇಖ, ಇಂದು ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಬೇಕು. ಕನ್ನಡವನ್ನ ರಕ್ಷಿಸುವ ಕೆಲಸಬೇಕು. ಹಿಂದಿ (Hindi) ಹೇರಿಕೆ ಇಂದಿನಿಂದ ಅಲ್ಲ ನಾನು 8ನೇ ತರಗತಿಯಿಂದ ಇದೆ. ದೆಹಲಿಗೆ ಕನ್ನಡ ಬೇಕಾಗಿಲ್ಲ ನಮಗೆ ಹಿಂದಿ ಬೇಕಾಗಿಲ್ಲ. ಆದ್ರೆ ನಮಗೆ ದೆಹಲಿ ಬೇಕಾಗಿದೆ. ಹಿಂದಿ ಹೇರುವ ಹುನ್ನಾರ, ಹಿಂದಿನ ಕಾಲದಿಂದಲೂ ಇದೆ. ಈಗ ಅದು ಜಾಸ್ತಿಯಾಗಿದೆ ಎಂದು ವಿಷಾದಿಸಿದ್ದಾರೆ.  ಇದನ್ನೂ ಓದಿ: ಮಲೇಷ್ಯಾ ಪ್ರಧಾನಿ ಭೇಟಿ ಮಾಡಿದ ರಜನಿಕಾಂತ್: ಅಚ್ಚರಿಯ ಹೇಳಿಕೆ ನೀಡಿದ ಪ್ರಧಾನಿ

    ಇತ್ತೀಚೆಗೆ ಮಕ್ಕಳನ್ನ ಇಂಗ್ಲಿಷ್‌ನಲ್ಲೇ ಓದಿಸಬೇಕು ಎಂದು ಪೋಷಕರು ಆಸೆಪಡುತ್ತಿದ್ದಾರೆ. ಕೆಲಸ ಸಿಗೋದು ಇಂಗ್ಲಿಷ್ ಇದ್ದರೆ ಮಾತ್ರ. ಹಾಗಾಗಿ ಮನೆಯಲ್ಲಿ ಇಂಗ್ಲಿಷ್ ಕಲಿಸುವ ಹಂತಕ್ಕೆ ಹೋಗಿದ್ದಾರೆ. ಇಂಗ್ಲಿಷ್ ಕೆಲಸಕ್ಕೆ ಇಟ್ಟುಕೊಳ್ಳಿ ಕನ್ನಡದ ಅಸ್ಮಿತೆ ಉಳಿಸಲು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ ಆಗಬೇಕು. ಇದರಿಂದ ಕನ್ನಡವನ್ನ ಉಳಿಸಿ ಬೆಳೆಸುವ ಕೆಲಸ ಆಗುತ್ತೆ ಎಂದು ಹಂಸಲೇಖ ಕರೆ ನೀಡಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ, ಕಣ್ಣು ಕಿತ್ತುಹಾಕಬೇಕು: ಗಜೇಂದ್ರ ಸಿಂಗ್‌ ಶೇಖಾವತ್‌

    ದುಂದುವೆಚ್ಚ ಬೇಡ:
    ಬರದ ನಡುವೆಯೂ ಅದ್ಧೂರಿ ದಸರಾ ಆಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರೈತರ ವಿಚಾರವನ್ನ ಗಮನಿಸಬೇಕು. ಹಬ್ಬದ ಮೂಲವೇ ರೈತ, ಅದರ ಬಗ್ಗೆ ನನ್ನ ಚಿಂತೆ ಜಾಸ್ತಿ ಇದೆ. ಸಮಸ್ಯೆಗಳನ್ನ ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನ ಆಸೆ. ರೈತರ ಮನಸ್ಸಿಗೆ ನೋವಾಗುವ ದುಂದುವೆಚ್ಚ ಬೇಡ ಅನ್ನೋದು ನನ್ನ ಭಾವನೆ. ಸ್ಮಾರ್ಟಿ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಆಗಬೇಕಿದೆ. ಕೃಷಿತಜ್ಞರ ಸಹಾಯದಿಂದ ಸ್ಮಾರ್ಟ್ ವಿಲೇಜ್ ಮಾಡಬೇಕಿದೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಂಗ್ರೆಸ್ ಸ್ಥಿತಿ `ಮನೆಯೊಂದು ಮೂರು ಬಾಗಿಲು’ ಆಗಿದೆ – ಜೋಶಿ ಲೇವಡಿ

    ಕಾಂಗ್ರೆಸ್ ಸ್ಥಿತಿ `ಮನೆಯೊಂದು ಮೂರು ಬಾಗಿಲು’ ಆಗಿದೆ – ಜೋಶಿ ಲೇವಡಿ

    ಧಾರವಾಡ: ಕಾಂಗ್ರೆಸ್ (Congress) ಒಡೆದ ಮನೆಯಾಗಿದ್ದು, ಅದಕ್ಕೆ ಮೂರು ಬಾಗಿಲುಗಳಾಗಿವೆ. ಎರಡು ಬಾಗಿಲುಗಳಾಗಿದ್ದವು. ಈಗ ಖರ್ಗೆ (Mallikarjun Kharge) ಅವರದ್ದೊಂದು ಬಾಗಿಲು ಹುಟ್ಟಿಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಲೇವಡಿ ಮಾಡಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲೀಗ (Congress) ಖರ್ಗೆ ಬೆಂಬಲಿಗರ ಗುಂಪೊಂದು ಹುಟ್ಟಿಕೊಂಡಿದೆ. ಹಾಗಾಗಿ ಕಾಂಗ್ರೆಸ್ ಎಷ್ಟು ಯಾತ್ರೆ ಮಾಡಿದರೂ ಸುಧಾರಣೆ ಆಗಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: 8 ನಿಮಿಷವಾಗಿದೆ, ಕೂಡಲೇ ಭಾಷಣ ನಿಲ್ಲಿಸಿ: ಸಭೆಯಲ್ಲೇ ಹರ್ಯಾಣ ಗೃಹ ಸಚಿವರಿಗೆ ಶಾ ಕ್ಲಾಸ್‌


    ಕಾಂಗ್ರೆಸ್ ಸ್ಥಿತಿ ಏನಾಗಿದೆ ಎಂದು ದೇಶವೇ ನೋಡುತ್ತಿದೆ. ಗುಜರಾತ್‌ಗೆ (Gujarat) ಈಗಾಗಲೇ ನಾನು ಎರಡು ಬಾರಿ ಹೋಗಿ ಬಂದಿದ್ದೇನೆ. ಅಲ್ಲಿ ಕಾಂಗ್ರೆಸ್ (Congress) ಅಡ್ರೆಸ್‌ಗಿಲ್ಲದಂತಾಗಿದೆ. ದೇಶದಲ್ಲೂ ಕೂಡ ನಾಪತ್ತೆಯಾಗುತ್ತಿದೆ ಎಂದು ಕುಟುಕಿದ್ದಾರೆ.

    ಹಿಂದಿ ಹೇರಿಕೆ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (NEP) ಇಂಜಿನಿಯರಿಂಗ್, ಮೆಡಿಕಲ್ (Medical Cource) ಎಲ್ಲಾ ಕೋರ್ಸ್‌ಗಳಿರಬೇಕು, ಆಯಾ ರಾಜ್ಯಗಳ ಭಾಷೆಯಲ್ಲೇ ಇರಬೇಕು ಎಂದು ಹೇಳಿದೆ ಎಂದರು. ಇದನ್ನೂ ಓದಿ: ಕರೆನ್ಸಿ ನೋಟುಗಳಲ್ಲಿರಲಿ ಗಣೇಶ, ಲಕ್ಷ್ಮೀ ಚಿತ್ರ – ಮೋದಿಗೆ ಕೇಜ್ರಿವಾಲ್ ಪತ್ರ

    ರವೀಂದ್ರನಾಥ ಠಾಗೋರ್ ಅವರು, ಭಾಷೆಗಳು ಒಂದು ಕಮಲವಿದ್ದಂತೆ ಎಲ್ಲಾ ಭಾಷೆಗಳು ಕಮಲದ ದಳಗಳಿದ್ದಂತೆ, ಆದರೆ ಹಿಂದಿ ದಳ ಮಧ್ಯೆದಲ್ಲಿದೆ ಎಂದಿದ್ದರು. ದಳಗಳಿಲ್ಲದ ಕಮಲ ಹೂವಾಗುವುದಿಲ್ಲ. ಹಾಗಾಗಿ ಹಿಂದಿ ದಳಗಳನ್ನು ಹೊಂದಿದ ಭಾಷೆ. ನಾವು ಎಲ್ಲ ರಾಜ್ಯದಲ್ಲಿ ಅನುಮತಿ ಕೊಟ್ಟಿದ್ದೇವೆ. ಇಷ್ಟು ಅಧಮ್ಯತೆಯನ್ನು ಸರ್ಕಾರ ಕೊಟ್ಟಿದೆ. ಕೆಲವರಿಗೆ ಮಾಡಲಿಕ್ಕೆ ಕೆಲಸವಿಲ್ಲದೇ ಮಾತನಾಡುತ್ತಾರೆ. ಹಿಂದಿ ಹೇರಿಕೆ ನೆಪದಲ್ಲಿ ಇಂಗ್ಲಿಷ್‌ಗೆ ಪ್ರೋತ್ಸಾಹ ಕೊಡುತ್ತಿದ್ದಾರೆ. ಈ ಕಡೆ ಹಿಂದಿ ಬೆಳೆಯಲೂ ಕೊಡುತ್ತಿಲ್ಲ, ಅತ್ತ ಕಡೆ ಕನ್ನಡ ಬೆಳೆಯಲೂ ಬಿಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲಿ ಹಿಂದಿ ಶಿಕ್ಷಣ ಜಾರಿ – ನಾಳೆ 13 ಕಾಲೇಜುಗಳಲ್ಲಿ MBBS ಪಠ್ಯ ರಿಲೀಸ್

    ದೇಶದಲ್ಲಿ ಹಿಂದಿ ಶಿಕ್ಷಣ ಜಾರಿ – ನಾಳೆ 13 ಕಾಲೇಜುಗಳಲ್ಲಿ MBBS ಪಠ್ಯ ರಿಲೀಸ್

    ಭೋಪಾಲ್: ಅಂದುಕೊಂಡಂತೆ ದೇಶದಲ್ಲಿ ಹಿಂದಿ ಶಿಕ್ಷಣ (Hindi Education) ಜಾರಿಯಾಗುತ್ತಿದ್ದು ಭಾನುವಾರ (ಅ.16 ರಂದು) 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ (Medical College) ಭಾಷಾಂತರಿಸಿದ ಎಂಬಿಬಿಎಸ್ (MBBS) ಪ್ರಥಮ ವರ್ಷದ ಹಿಂದಿ ಪುಸ್ತಕಗಳನ್ನು (Hindi TextBooks) ಬಿಡುಗಡೆಗೊಳಿಸಲಾಗುತ್ತಿದೆ.

    ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು, ಎಂಬಿಬಿಎಸ್ (MBBS) ವಿಷಯಗಳಾದ ಅಂಗರಚನಾ ಶಾಸ್ತ್ರ, ಶರೀರ ಶಾಸ್ತ್ರ ಹಾಗೂ ಜೀವ ರಸಾಯನ ಶಾಸ್ತ್ರ ಹಿಂದಿ ಪುಸ್ತಕಗಳನ್ನು ಭೋಪಾಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಹಿಂದಿ ವೈದ್ಯಕೀಯ ಶಿಕ್ಷಣ ಆರಂಭವಾಗಲಿದೆ. ಇದನ್ನೂ ಓದಿ: ನ್ಯಾಯ ಸಿಗೋದು ವಿಳಂಬವಾಗ್ತಿರೋದೇ ಜನರಿಗೆ ಬಹುದೊಡ್ಡ ಸಮಸ್ಯೆ: ಮೋದಿ ವಿಷಾದ

    ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan), ವೈದ್ಯಕೀಯ ಕೋರ್ಸ್ (Medical Course) ಅನ್ನು ಹಿಂದಿಯಲ್ಲಿ ಆರಂಭಿಸುವ ಮೂಲಕ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನು ಹಿಂದಿಯಲ್ಲಿ (Hindi Language) ಕಲಿಯಲು ಹಾಗೂ ಕಲಿಸಲು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಳ್ಳನಂತೆ ಬಂದು ಅಂಗಡಿಯಲ್ಲಿದ್ದ ಬಲ್ಬ್ ಕದ್ದ ಪೊಲೀಸ್- ವೀಡಿಯೋ ವೈರಲ್

    ಹಿಂದಿ ಮಾಧ್ಯಮದ ಶಿಕ್ಷಣದಿಂದಲೂ ಜೀವನದಲ್ಲಿ ಮುನ್ನಡೆಯಬಹುದು ಎಂಬ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಶಿಕ್ಷಣ ಮಾಧ್ಯಮ ಮಾತೃ ಭಾಷೆಯಲ್ಲಿರಬೇಕು ಎಂಬುದು ಪ್ರಧಾನಿ ಮೋದಿ (Naredra Modi) ಅವರ ಸಂಕಲ್ಪ. ಅಂತೆಯೇ ಈ ವರ್ಷ ಸಂಘಟಿತವಾಗಿ ಹಿಂದಿ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ವೈದ್ಯಕೀಯ ಕ್ಷೇತ್ರದ ತಜ್ಞರ ಕಾರ್ಯಪಡೆ, 97 ವೈದ್ಯಕೀಯ ಕಾಲೇಜು ಶಿಕ್ಷಕರು ಹಾಗೂ ತಜ್ಞರು 5,568 ಗಂಟೆಗಳಿಗೂ ಅಧಿಕ ಕಾಲ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಇಂಗ್ಲಿಷ್ ಪುಸ್ತಕಗಳ ಜೊತೆಗೆ ಹಿಂದಿ ಪುಸ್ತಕಗಳೂ ಕಾಲೇಜಿನಲ್ಲಿ ಲಭ್ಯವಿರುತ್ತವೆ. ಆದರೆ ತಾಂತ್ರಿಕ ಪದಗಳು ಇಂಗ್ಲಿಷ್‌ನಲ್ಲೇ ಉಳಿಯುತ್ತವೆ ಎಂದಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಅಂತ್ಯ – ಪುಟಿನ್ ಸ್ಪಷ್ಟನೆ

    ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ಆರಂಭಿಸುವ ದೇಶದ ಮೊದಲ ರಾಜ್ಯ ಮಧ್ಯಪ್ರದೇಶವಾಗಲಿದೆ. ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಗಾಂಧಿ ವೈದ್ಯಕೀಯ ಕಾಲೇಜಿನಿಂದ ಪ್ರಾರಂಭವಾಗಲಿದೆ. ಪ್ರಸಕ್ತ ವರ್ಷದಿಂದಲೇ ಹಿಂದಿಯಲ್ಲಿ ಕಲಿಸಲಾಗುತ್ತದೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ

    ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕರನ್ನೇ ನೇಮಿಸಿ- ನಿರ್ಮಲಾ ಸೀತಾರಾಮನ್ ಸಲಹೆ

    ನವದೆಹಲಿ: ಇನ್ನುಮುಂದೆ ಬ್ಯಾಂಕುಗಳಿಗೆ (Banks) ಸ್ಥಳೀಯ ಭಾಷೆ (Local Language) ಮಾತನಾಡುವವರನ್ನೇ ಸಿಬ್ಬಂದಿಯಾಗಿ ನೇಮಕ ಮಾಡಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸಲಹೆ ನೀಡಿದ್ದಾರೆ.

    ಮುಂಬೈನಲ್ಲಿ (Mumbai) ನಡೆದ ಭಾರತೀಯ ಬ್ಯಾಂಕುಗಳ ಸಂಘದ (Indian Banks Association) 75ನೇ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಅಲ್ಲಿ ಗ್ರಾಹಕರೊಂದಿಗೆ ವ್ಯವಹರಿಸಲು ಇದ್ದೀರೇ ಹೊರತು, ವ್ಯವಸ್ಥೆಯನ್ನು ಬೆಳೆಸಲು ಅಲ್ಲ ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ನಾನ್‍ವೆಜ್ ಊಟಕ್ಕೆಂದು ಬಂದವರಿಗೆ ಗೋಮಾಂಸ ಸರ್ವ್ – ಹೋಟೆಲ್ ಮಾಲೀಕ ಅರೆಸ್ಟ್

    sbi bank
    ಸಾಂದರ್ಭಿಕ ಚಿತ್ರ

    ಶಾಖಾ ಮಟ್ಟದ ಬ್ಯಾಂಕುಗಳನ್ನು ನೋಡಿದಾಗ ಕೆಲವರು `ಹೇ ನೀವು ಹಿಂದಿ ಮಾತನಾಡುವುದಿಲ್ಲವೇ, ನೀವೆಲ್ಲೋ ಭಾರತೀಯರಲ್ಲ ಅನ್ನಿಸುತ್ತದೆ’ ಅಂದುಕೊಳ್ಳುತ್ತಾರೆ. ಇದು ಉತ್ತಮ ವ್ಯಾವಹಾರಿಕ (Business) ಸಂಬಂಧದ ಲಕ್ಷಣವಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಳೆಯಲ್ಲೂ ಮೈಚಳಿ ಬಿಡಿಸುವಂತೆ ಮಾದಕ ಲುಕ್ ನೀಡುವ ಹಾಟ್ ನೈಟ್‌ಡ್ರೆಸ್ ಹೇಗಿವೆ ನೋಡಿ

    nirmala sithraman

    ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಸಾಧ್ಯವಾಗದ ಸಿಬ್ಬಂದಿಯನ್ನು ಪ್ರಾದೇಶಿಕ ಶಾಖೆಗಳಿಗೆ ನೇಮಕ ಮಾಡಬಾರದು. ಹಾಗಾಗಿ ಉತ್ತಮ ಸಿಬ್ಬಂದಿ ನೇಮಕ ಮಾಡಿಕೊಳ್ಳುವಲ್ಲಿ ಹೆಚ್ಚು ಸಂವೇದನಾ ಶೀಲ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‌ನವರು ಚಡ್ಡಿ ಹಾಕಿ ಶಾಖೆಗೆ ಬರೋ ದಿನ ದೂರವಿಲ್ಲ – ಸಿಟಿ ರವಿ ವ್ಯಂಗ್ಯ

    ಕಾಂಗ್ರೆಸ್‌ನವರು ಚಡ್ಡಿ ಹಾಕಿ ಶಾಖೆಗೆ ಬರೋ ದಿನ ದೂರವಿಲ್ಲ – ಸಿಟಿ ರವಿ ವ್ಯಂಗ್ಯ

    ಬೆಂಗಳೂರು: ಕಾಂಗ್ರೆಸ್ ಮನೋಭಾವ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್‌ನವರು (Congress) ಆರ್‌ಎಸ್‌ಎಸ್ (RSS) ಚಡ್ಡಿ ಸುಡಬಹುದೇ ಹೊರತು ವಿಚಾರವನ್ನಲ್ಲ. ಕಾಂಗ್ರೆಸ್‌ನವರೇ ಚಡ್ಡಿಹಾಕಿ ಶಾಖೆಗೆ ಬರೋ ದಿನ ದೂರವಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ಟ್ವೀಟ್ (Congress Tweet) ಮೂಲಕ ಆರ್‌ಎಸ್‌ಎಸ್ ಚಡ್ಡಿ ಸುಡುವ ಫೋಟೋ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಭಾರತ್ ಜೋಡೋ (Bharat jodo yatra) ಹೆಸರಲ್ಲಿ ಭಾರತೀಯತೆ ಸುಡುವ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಭಾರತೀಯತೆ ಇರುವ ಸಂಘಟನೆ. ಹಿಂದಿನ ಯುದ್ಧಗಳ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದೆ. ಕಾಂಗ್ರೆಸ್ ಮನೋಭಾವನೆ ಎಲ್ಲರಿಗೂ ಗೊತ್ತು. ಏಕೆಂದರೆ ಕಾಂಗ್ರೆಸ್ ಉಗ್ರ ಒಸಾಮಾ ಬಿನ್ ಲ್ಯಾಡನ್‌ಗೆ ಜೀ ಎಂದು ಉಲ್ಲೇಖಿಸುತ್ತೆ. ಅಫ್ಜಲ್ ಗುರು ಗಲ್ಲಿಗೇರಿಸಿದ್ರೆ ಮರುಕ ವ್ಯಕ್ತಪಡಿಸುತ್ತೆ, ತುಕುಡೇ-ತುಕುಡೇ ಗ್ಯಾಂಗನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸ್ಪಷ್ಟನೆ ನೀಡಿದ ಮೋಹನ್ ಲಾಲ್

    ಕಾಂಗ್ರೆಸ್ ಭಾರತೀಯತೆಯನ್ನು ಜೋಡಿಸುವ ಕೆಲಸ ಮಾಡುತ್ತಿಲ್ಲ. ಅವರು ಭಾರತೀಯತೆಯನ್ನು ಸುಡುವ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಚಡ್ಡಿ ಸುಡಬಹುದು. ಆದರೆ ಆರ್‌ಎಸ್‌ಎಸ್ ವಿಚಾರ ಸುಡಲು ಸಾಧ್ಯವಿಲ್ಲ. ಚಡ್ಡಿ ಹಾಕಿ ಕಾಂಗ್ರೆಸ್ ನವರೇ ಶಾಖೆಗೆ ಬರುವ ದಿನ ದೂರವಿಲ್ಲ. ಏಕೆಂದರೆ ಆರ್‌ಎಸ್‌ಎಸ್ ಕ್ರಷ್ ಮಾಡುತ್ತೇವೆ ಎಂದಿದ್ದ ನೆಹರೂ (Neharu) ಅವರೇ ಗಣರಾಜ್ಯೋತ್ಸವ (RepublicDay) ಪಥಸಂಚಲನಕ್ಕೆ ಆರ್‌ಎಸ್‌ಎಸ್‌ನ್ನು ಆಹ್ವಾನಿಸಿದ್ದರು ಎಂದು ಹೇಳಿದ್ದಾರೆ.

    `ಸಿದ್ದರಾಮಯ್ಯ (Siddaramaiah) ಕಚ್ಚೆ ಹರುಕ’ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಜನರ ಮಾತು, ನಾನೂ ಸಹ ಜನರ ಮಾತು ಅಂತಾ ಹೇಳಿದ್ದೇನೆ. ಕೆಲವರು ಪ್ರಧಾನಿಗಳು, ಸ್ವಾಮೀಜಿಗಳ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಅಂತವರನ್ನ ನಾವು ನೋಡಿದ್ದೇವೆ, ಅವರು ಮಾತನಾಡುವಾಗ ಹುದ್ದೆಗಳು ನೆನಪಾಗುವುದಿಲ್ಲವಾ? ಎಂದು ಪ್ರಶ್ನಿಸಿದ್ದಾರೆ.

    ಹಿಂದಿ ಹೇರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ.ಟಿ ರವಿ, ಇದು ಹಿಂದಿ ಹೇರುವ ಪ್ರಶ್ನೆ ಅಲ್ಲ. ಭಾರತದ ಎಲ್ಲಾ ಭಾಷೆಗಳು ಸಹ ದೇಶದ ಆತ್ಮ. ಮಾತೃಭಾಷೆಯಲ್ಲೇ ವ್ಯವಹರಿಸಿ, ಮಾತನಾಡಲು ಹೆಮ್ಮೆ ಪಡಿ. ಕೀಳರಿಮೆ ತರುವ ಪ್ರಯತ್ನ ಬ್ರಿಟೀಷ್‌ನವರು ಮಾಡಿದ್ರು, ಈಗ ಕಾಂಗ್ರೆಸ್ ಮಾಡ್ತಾ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಹಿಂದಿ ದಿವಸ್ ನಾವು ಪ್ರಾರಂಭ ಮಾಡಿದ್ದಲ್ಲ. ಯಾವ ಪಕ್ಷದ ಬೆಂಬಲದಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದರೋ ಆ ಪಕ್ಷದವರೇ ಹಿಂದಿ ಹೇರಿಕೆ ಮಾಡಿರೋದು. ಏಕ್ ಭಾರತ್ ಶ್ರೇಷ್ಠ ಭಾರತ್ ಅಂತ ನಮ್ಮ ಪಕ್ಷ ಹೊಸ ಕಲ್ಪನೆ ಜಾರಿ ಮಾಡಿದೆ. ಬೇರೆ ಬೇರೆ ರಾಜ್ಯಗಳ ಉತ್ಸವಗಳನ್ನ ಬೇರೆ ಬೇರೆ ರಾಜ್ಯಗಳಲ್ಲಿ ಮಾಡಬೇಕು. ಭಾಷೆ ಬಾಂಧವ್ಯದ ಸಂಕೇತ ಅಂತಾ ನಾನು ಭಾವಿಸುತ್ತೇನೆ. ಆದ್ರೆ ಕೆಲವರು ಭಾಷೆಯನ್ನ ಬೆಂಕಿ ಹಚ್ಚೋಕೆ ಬಳಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೇರೆ ಬೇರೆ ರಾಜ್ಯಗಳು ಹಾಗೂ ಭಾಷೆಗಳ ಉತ್ಸವ ನಡೆದಾಗ ಸಾಂಸ್ಕೃತಿಕ ಸಂಬಂಧ ಬೆಳೆಯುತ್ತದೆ. ಸ್ವತಂತ್ರ್ಯಪೂರ್ವದಲ್ಲಿ ಎಲ್ಲೂ ಭಾಷೆ ವಿಚಾರದಲ್ಲಿ ಗಲಾಟೆಗಳು ಆಗಲಿಲ್ಲ. ಭಾರತ ಜನನಿಯ ತನುಜಾತೆ ಅಂತಾ ಕುವೆಂಪು ಹೇಳಿದ್ದಾರೆ. ಅದನ್ನ ಅರ್ಥ ಮಾಡಿಕೊಂಡು ಮಾತನಾಡಬೇಕು. ಹಿಂದಿಗೆ ಸಿಗುವ ಸನ್ಮಾನ ಕನ್ನಡಕ್ಕೂ ಸಿಗಬೇಕು. ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2ರ ವರೆಗೆ ʻಸೇವಾ ಪಾಕ್ಷಿಕಾʼ ಅನ್ನೋ ಯೋಜನೆ ಮಾಡುತ್ತಿದ್ದೇವೆ. ಇದರಿಂದ ಖಾದಿ ಉದ್ಯಮ ಸೇರಿದಂತೆ ಹಲವು ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ಕೊಡಲಾಗುವುದು ಎಂದು ಸಿಟಿ ರವಿ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ: ಡಿಕೆಶಿ

    ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ: ಡಿಕೆಶಿ

    ಬೆಂಗಳೂರು: ನಮ್ಮ ದೇಶ ಅನೇಕ ಭಾಷೆಗಳಿಂದ ಕೂಡಿದ್ದು, ಪ್ರತಿಯೊಬ್ಬರಿಗೂ ಅವರವರ ಭಾಷೆ ಸ್ವಾಭಿಮಾನದ ವಿಷಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

    ಹಿಂದಿ ರಾಷ್ಟ್ರಭಾಷೆ ವಿವಾದ ಸಂಬಂಧ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನು ಯಾರ ಟ್ವೀಟ್ ಬಗ್ಗೆಯೂ ಪ್ರತಿಕ್ರಿಯೆ ನೀಡಲು ಸಿದ್ದನಿಲ್ಲ. ದೇಶದಲ್ಲಿ ಯಾವ, ಯಾವ ಭಾಷೆಗೆ ಯಾವ ಮಾನ್ಯತೆ ನೀಡಬೇಕು ಎಂದು ಸರ್ಕಾರ ಈಗಾಗಲೇ ತೀರ್ಮಾನ ಮಾಡಿದೆ. ನಮ್ಮ ದೇಶ ಅನೇಕ ಭಾಷೆಗಳಿಂದ ಕೂಡಿದ್ದು, ಪ್ರತಿಯೊಬ್ಬರಿಗೂ ಅವರವರ ಭಾಷೆ ಸ್ವಾಭಿಮಾನದ ವಿಷಯವಾಗಿದೆ. ನಮ್ಮ ರಾಜ್ಯದ ಕೊಡಗು, ಮಂಗಳೂರು ಭಾಗಗಳಲ್ಲಿ ಬೇರೆ ಭಾಷೆಗಳನ್ನು ಮಾತನಾಡಿದರೂ, ನಾವು ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ : ಕಿಚ್ಚ ಸುದೀಪ್ ಮಾತಿಗೆ ಧ್ವನಿಗೂಡಿಸಿದ ಸಿಎಂ ಬಸವರಾಜ ಬೊಮ್ಮಾಯಿ

    ನಾವೆಲ್ಲ ಕನ್ನಡಿಗರು. ನಮಗೆ ನಮ್ಮದೇ ಆದ ಭಾಷೆ, ಧ್ವಜ, ಸ್ವಾಭಿಮಾನವಿದೆ. ನಮ್ಮ ನೋಟಿನಲ್ಲಿ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ನೀಡಿ ಮುದ್ರಣ ಮಾಡಲಾಗಿದೆ. ಈ ನೋಟು ರಾಜ್ಯ ಸೇರಿದಂತೆ ರಾಷ್ಟ್ರದಲ್ಲಿ ಚಲಾವಣೆಯಾಗುತ್ತದೆ. ಹೀಗಾಗಿ ಭಾಷೆ ವಿಚಾರದಲ್ಲಿ ಚರ್ಚೆಯ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.

    ದೇಶದ ಉತ್ತರ ಭಾಗದಲ್ಲಿ ಹಿಂದಿ ಭಾಷೆ ಮಾತನಾಡುತ್ತಿದ್ದು, ಆ ಭಾಷೆಗೆ ಯಾವ ರೀತಿ ಗೌರವ ನೀಡಬೇಕೋ ಅದನ್ನು ನೀಡಲಾಗುತ್ತಿದೆ. ಚಿತ್ರನಟರ ಮಾತಿಗೆ ನಾವು ಚರ್ಚೆ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಕೇಂದ್ರ ಸಚಿವರು ಯಾರಾದರೂ ಈ ಬಗ್ಗೆ ಚರ್ಚೆ ಮಾಡಿದರೆ ಅದಕ್ಕೆ ಉತ್ತರ ನೀಡೋಣ. ನಮ್ಮ ನೆಲ, ಜಲ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ನಮ್ಮ ಮೊದಲ ಪ್ರಾತಿನಿಧ್ಯ ಕನ್ನಡ ಭಾಷೆಯಾಗಿರುತ್ತದೆ. ನಂತರ ನಾವು ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕಿನ ಪ್ರಕಾರ ಬೇರೆ ಭಾಷೆಗಳನ್ನು ಬಳಸಬಹುದು. ಇದನ್ನೂ ಓದಿ: ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ

    ನಮ್ಮ ಕೆಲವು ಸಂಸದರು ಹಿಂದಿ ಹಾಗೂ ಇಂಗ್ಲಿಷ್ ಭಾಷೆ ತಿಳಿದಿದ್ದರೂ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುತ್ತಾರೆ. ಇದಕ್ಕೆ ಅವಕಾಶವಿದೆ. ನನ್ನ ಸಹೋದರ ಹಲವು ಬಾರಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ವಿರೋಧಪಕ್ಷದ ನಾಯಕರಾಗಿರುವ ಕಾರಣ ಹಿಂದಿಯಲ್ಲಿ ಮಾತನಾಡುತ್ತಾರೆ. ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಭಾಷೆಯ ಗೌರವ ಉಳಿಸಿಕೊಳ್ಳಲು ನಾವು ಏನು ಮಾಡಬೇಕು ಅದನ್ನು ಮಾಡೋಣ ಎಂದಿದ್ದಾರೆ.

  • ಹಿಂದಿಯಲ್ಲಿ MBBS ಶಿಕ್ಷಣ ನೀಡಲು ಮುಂದಾದ ಮಧ್ಯಪ್ರದೇಶ

    ಹಿಂದಿಯಲ್ಲಿ MBBS ಶಿಕ್ಷಣ ನೀಡಲು ಮುಂದಾದ ಮಧ್ಯಪ್ರದೇಶ

    ಭೋಪಾಲ್: ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ (ಎಂಬಿಬಿಎಸ್) ಅನ್ನು ಹಿಂದಿ ಭಾಷೆಯಲ್ಲಿಯೂ ಸಹ ಕಲಿಸಲಾಗುತ್ತದೆ ಎಂದು ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ತಿಳಿಸಿದ್ದಾರೆ.

    ಭೋಪಾಲ್‍ನ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಶ್ವಾಸ್ ಸಾರಂಗ್ ಅವರು, ಎಂಬಿಬಿಎಸ್ ಅನ್ನು ಇನ್ಮುಂದೆ ಹಿಂದಿ ಭಾಷೆಯಲ್ಲಿ ಸಹ ಕಲಿಸಲಾಗುವುದು. ಭೋಪಾಲ್‍ನ ಗಾಂಧಿ ವೈದ್ಯಕೀಯ ಕಾಲೇಜು ಏಪ್ರಿಲ್‍ನಿಂದ ಹಿಂದಿಯಲ್ಲಿ ಎಂಬಿಬಿಎಸ್ ಕೋರ್ಸ್ ಪ್ರಾರಂಭಿಸಲಿದೆ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್‌ ಹೆಸರಲ್ಲಿ ಧ್ರುವೀಕರಣ ಮಾಡುವ ಬಿಜೆಪಿ ಬಲೆಗೆ ಬೀಳಬೇಡಿ: ರಾಹುಲ್ ಗಾಂಧಿ

    ರಾಷ್ಟ್ರೀಯ ಭಾಷೆಯಲ್ಲಿ ಕಲಿಯುವುದರಿಂದ ಸಹಾಯಕರವಾಗಿದೆ ಮತ್ತು ಉತ್ತಮ ಫಲಿತಾಂಶಗಳನ್ನು ಗಳಿಸಬಹುದು ಎಂದು ವಿವಿಧ ಸಂಶೋಧನೆಗಳಿಂದ ತಿಳಿದುಬಂದಿದೆ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ಸಿಲುಕಿದ್ದಾರೆ 10 ಮಂದಿ ಕರ್ನಾಟಕ ವಿದ್ಯಾರ್ಥಿಗಳು!

  • ಎಲ್ಲ ಭಾಷೆಯನ್ನು ಗೌರವಿಸುತ್ತೇವೆ, ಯಾವುದೇ ಹೇರಿಕೆ ಸಲ್ಲದು: ಧನಂಜಯ್

    ಎಲ್ಲ ಭಾಷೆಯನ್ನು ಗೌರವಿಸುತ್ತೇವೆ, ಯಾವುದೇ ಹೇರಿಕೆ ಸಲ್ಲದು: ಧನಂಜಯ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಧನಂಜಯ್ ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು ಎಂದು ಇಂದು ದೇಶದಲ್ಲಿ ಹಿಂದಿ ದಿವಸ ಆಚರಣೆ ಕುರಿತಾಗಿ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.

    ಎ ಕನ್ನಡ ಕನ್ನಡ ಕನ್ನಡವೆಂದುಲಿ,ಕನ್ನಡ ನಾಡಿನ ಓ ಕಂದ, ಕನ್ನಡ ನಾಡಿನ ಕೀರ್ತಿಯ ಹಬ್ಬಿಸು,ಕನ್ನಡ ತಾಯಿಗೆ ಆನಂದ. ಬಾಲ್ಯದಲ್ಲಿ ಓದಿದ ಪದ್ಯವಾಗಿದೆ. ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು ಎಂದು ಟ್ವೀಟ್ ಮಾಡಿದ್ದಾರೆ.

    ಹಿಂದಿ ಹೇರಿಕೆಯೊಂದಿಗೆ ಇಂಗ್ಲೀಷ್ ಹೇರಿಕೆಯ ವಿರುದ್ಧವೂ ಮಾತನಾಡಿರುವ ಧನಂಜಯ, ಎಲ್ಲರೂ ಈ ಭಾಷೆಗಳನ್ನು ಕಲಿಯಬೇಕು ಎನ್ನುವುದು ಅವಿವೇಕ ಎಂದಿದ್ದಾರೆ. ಯಾವುದೇ ಭಾಷೆಯನ್ನು ಒತ್ತಾಯಪೂರ್ವಕವಾಗಿ ಹೇರುವುದು ದಬ್ಬಾಳಿಕೆಯಲ್ಲದೇ ಮತ್ತೇನಲ್ಲ ಎಂದು ಅವರು ಕಿಡಿಕಾರಿದ್ದಾರೆ.

    ಒಟ್ಟು ಮೂರು ಟ್ವೀಟ್‍ಗಳನ್ನು ಮಾಡಿರುವ ಧನಂಜಯ, ಕೊನೆಯ ಟ್ವೀಟ್‍ನಲ್ಲಿ ಕುವೆಂಪು ಅವರ ಮಾತನ್ನು ಉಲ್ಲೇಖಿಸಿದ್ದಾರೆ. ಭಾರತಕ್ಕೆ ತ್ರಿಭಾಷಾ ಸೂತ್ರದ ಅವಶ್ಯಕತೆ ಇಲ್ಲ. ಎಲ್ಲರಿಗೂ ಎಲ್ಲಾ ಭಾಷೆಯೂ ಏತಕ್ಕೆ ಬೇಕು? ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು ಎಂದು ಕುವೆಂಪುರವರು ಬಹುಭಾಷೆಗಳಲ್ಲಿ ದ್ವಿಭಾಷೆ ಲೇಖನದಲ್ಲಿ ಬರೆದಿರುವ ಮಾತನ್ನು ಉಲ್ಲೇಖಿಸಿರುವ ಚಿತ್ರವನ್ನು ಧನಂಜಯ ಹಂಚಿಕೊಂಡಿದ್ದಾರೆ.

    ಧನಂಜಯ ಅವರಲ್ಲದೇ ಕನ್ನಡ ಚಿತ್ರರಂಗದ ಹಲವರು ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಟ್ವೀಟ್ ಮಾಡಿ ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ. ಕನ್ನಡದ ಖ್ಯಾತ ನಟರ ಅಭಿಮಾನಿಗಳು ಕೂಡ ಹಿಂದಿ ಹೇರಿಕೆಯ ವಿರುದ್ಧ ಧ್ವನಿ ಎತ್ತಿದ್ದಾರೆ.

    ದೇಶದಲ್ಲಿ ಇಂದು ಹಿಂದಿ ದಿವಸ ಆಚರಣೆಗೆ ಪ್ರಾದೇಶಿಕ ಭಾಷೆಗಳ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂಬ ಹ್ಯಾಶ್ ಟ್ಯಾಗ್ ಎಲ್ಲೆಡೆ ಟ್ರೆಂಡ್ ಆಗಿದ್ದು, ವಿವಿಧ ರಂಗದ ತಾರೆಯರು ಇದಕ್ಕೆ ದನಿಗೂಡಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ, ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ನಟಿಸುತ್ತಿರುವ ಧನಂಜಯ, ಟ್ವೀಟ್‍ಗಳ ಮೂಲಕ ಹಿಂದಿ ಹೇರಿಕೆಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.