Tag: ಹಿಂದಿ ಬಿಗ್ ಬಾಸ್

  • ಬಿಗ್‍ಬಾಸ್ ವಿಸ್ತರಣೆ – ಪ್ರತಿ ದಿನಕ್ಕೆ 2 ಕೋಟಿ ಹೆಚ್ಚಾಯ್ತು ಸಲ್ಲು ಸಂಭಾವನೆ

    ಬಿಗ್‍ಬಾಸ್ ವಿಸ್ತರಣೆ – ಪ್ರತಿ ದಿನಕ್ಕೆ 2 ಕೋಟಿ ಹೆಚ್ಚಾಯ್ತು ಸಲ್ಲು ಸಂಭಾವನೆ

    ಮುಂಬೈ: ಹಿಂದಿಯ ಬಿಗ್ ಬಾಸ್ ವಿಸ್ತರಿಕೆಯಾಗಲಿರುವ ಎಪಿಸೋಡಿಗೆ ಸಲ್ಮಾನ್ ಖಾನ್ ಪ್ರತಿ ದಿನಕ್ಕೆ ಹೆಚ್ಚುವರಿಯಾಗಿ 2 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ.

    ವಿವಾದಗಳಿಂದ ಸುದ್ದಿಯಾಗಿ ಉತ್ತಮ ಟಿಆರ್‌ಪಿ ಗಳಿಸುತ್ತಿರುವ 13ನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮವನ್ನು 5 ವಾರಗಳ ಕಾಲ ವಿಸ್ತರಿಸಲು ನಿರ್ಮಾಣ ಸಂಸ್ಥೆ ಮುಂದಾಗುತ್ತಿದೆ. ನಿರ್ಮಾಣ ಸಂಸ್ಥೆ ಅವಧಿ ವಿಸ್ತರಿಸಲು ಮುಂದಾಗಿದ್ದರೂ ಸಲ್ಮಾನ್ ಖಾನ್ ಒಪ್ಪಿಗೆ ನೀಡಿರಲಿಲ್ಲ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಬ್ಬರ ರೊಮ್ಯಾನ್ಸ್: ವಿಡಿಯೋ ವೈರಲ್

    ಈಗ ಪ್ರತಿ ಎಪಿಸೋಡಿಗೆ 2 ಕೋಟಿ ರೂ. ಹೆಚ್ಚುವರಿ ಸಂಭಾವನೆ ಏರಿಸಿದ್ದು ಸಲ್ಮಾನ್ ಖಾನ್ ಕಾರ್ಯಕ್ರಮ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ವಾರಾಂತ್ಯದ ಎರಡು ಸಂಚಿಕೆ  6.5 ಕೋಟಿ ರೂ. ಸಂಭಾವನೆಗೆ ಒಪ್ಪಂದ ನಡೆದಿತ್ತು.  ಆದರೆ ಈಗ 8.5 ಕೋಟಿ ರೂ.ಗೆ ಏರಿಕೆಯಾಗಿದ್ದು ವಾರದ ಎರಡು ದಿನಗಳ ಶೂಟಿಂಗ್‍ಗೆ ಒಟ್ಟು 15 ಕೋಟಿ ರೂ. ಹಣವನ್ನು ಸಲ್ಮಾನ್ ಖಾನ್ ಪಡೆದುಕೊಳ್ಳಲಿದ್ದಾರೆ.

    ಇತ್ತ ಸಲ್ಮಾನ್ ಖಾನ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಾರಣ ಹೆಚ್ಚುವರಿ ಎಪಿಸೋಡ್‍ಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಆದರೆ ಆಯೋಜಕರು ಅವರ ಮನ ಒಲಿಸುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಈ ಬಾರಿಯ ಶೋ ಮತ್ತೆ 5 ವಾರಗಳು ಹೆಚ್ಚುವರಿಯಾದ ಕಾರಣ ಗ್ರಾಂಡ್ ಫಿನಾಲೆ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆಯಿದೆ. ಒಟ್ಟಾರೆ ಸಲ್ಮಾನ್ ಖಾನ್ ಈ ವರ್ಷದ ಬಿಗ್ ಬಾಸ್ ಶೋ ನಿಂದ 200 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎಂದು ವರದಿಯಾಗಿದೆ.

    ಸಲ್ಮಾನ್ ಖಾನ್ ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಬಿಗ್‍ಬಾಸ್ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಸಲ್ಲು ನಡೆಸಿಕೊಡುವ ಸ್ಟೈಲ್‍ಗೆ ಕಿರುತೆರೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಬಿಗ್‍ಬಾಸ್ ಸೀಸನ್ 13ಕ್ಕೆ ಪ್ರತಿ ಎಪಿಸೋಡಿಗೆ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.  ಇದನ್ನೂ ಓದಿ: ನನ್ನನ್ನು ಮದುವೆ ಆಗ್ತೀರಾ: ಸಲ್ಲುಗೆ ದೀಪಿಕಾ ಪ್ರಶ್ನೆ- ವಿಡಿಯೋ