Tag: ಹಿಂದಿ

  • ಒಂದು ಭಾಷೆ ಬಿಟ್ಟು 4 ಭಾಷೆಗಳಲ್ಲಿ ಅ.31ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ ರಿಲೀಸ್‌

    ಒಂದು ಭಾಷೆ ಬಿಟ್ಟು 4 ಭಾಷೆಗಳಲ್ಲಿ ಅ.31ಕ್ಕೆ ಅಮೆಜಾನ್‌ ಪ್ರೈಮ್‌ನಲ್ಲಿ ಕಾಂತಾರ ರಿಲೀಸ್‌

    ಕಾಂತಾರ: ಚಾಪ್ಟರ್‌ 1 (Kantara Chapter 1) ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಈ ವರ್ಷದ ಸೂಪರ್‌ ಹಿಟ್‌ ಚಲನಚಿತ್ರ ಅಕ್ಟೋಬರ್‌ 31 ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

    ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಿಡುಗಡುಗಡೆ ಮಾಡಲಾಗುವುದು ಎಂದು ಅಮೆಜಾನ್‌ ಪ್ರೈಮ್‌ (Amazon Prime) ಅಧಿಕೃತವಾಗಿ ತಿಳಿಸಿದೆ.

    ಕಾಂತಾರದ ಎಲ್ಲಾ ಭಾಷೆಗಳ ಒಟಿಟಿ ಹಕ್ಕುಗಳನ್ನು (OTT Rights) ಅಮೆಜಾನ್‌ ಪಡೆದುಕೊಂಡಿದ್ದರೂ ಹಿಂದಿ ಭಾಷೆಗೆ ಡಬ್‌ ಆಗಿರುವ ಸಿನಿಮಾ ರಿಲೀಸ್‌ ಆಗುತ್ತಿಲ್ಲ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ಈಗಲೂ ಕಾಂತಾರ ಟಿಕೆಟ್‌ಗಳು ಸೇಲ್‌ ಆಗುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್‌ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

     

    ಬಿಡುಗಡೆಯಾಗಿ 25 ದಿನ ಕಳೆದರೂ ಕಾಂತಾರ ಕ್ರೇಜ್‌ ಇನ್ನೂ ಕಡಿಮೆಯಾಗಿಲ್ಲ. ನಾಲ್ಕನೇ ವಾರಕ್ಕೆ ಕಾಲಿಟ್ಟರೂ ಈಗಲೂ ಬುಕ್‌ಮೈಶೋದಲ್ಲಿ ಟಿಕೆಟ್‌ ಮಾರಾಟವಾಗುತ್ತಿದೆ. ಹಿಂದಿಯಲ್ಲಿ ಮೊದಲ ವಾರ 110.10 ಕೋಟಿ ರೂ. ಗಳಿಸಿದರೆ ಎರಡನೇ ವಾರದಲ್ಲಿ 54.57 ಕೋಟಿ ರೂ., ಮೂರನೇ ವಾರದಲ್ಲಿ 28.95 ಕೋಟಿ ರೂ., ನಾಲ್ಕನೇ ವಾರದಲ್ಲಿ 11.94 ಕೋಟಿ ರೂ. ಗಳಿಸುವ ಮೂಲಕ ಒಟ್ಟು 205.56 ಕೋಟಿ ರೂ. ಗಳಿಸಿದೆ.

    ಇಲ್ಲಿಯವರೆಗೆ ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ 809 ಕೋಟಿ ರೂ. ಅಧಿಕ ಕಲೆಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ. ಈ ಮೂಲಕ ಈ ವರ್ಷ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಚಾವಾ ಸಿನಿಮಾವನ್ನು ಮೀರಿಸಿದೆ. ಚಾವಾ ಸಿನಿಮಾ 807 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು.

    ಕಾಂತಾರ ಸಿನಿಮಾ ನಿರ್ಮಾಣಕ್ಕೆ ಅಂದಾಜು 125 ಕೋಟಿ ರೂ. ವೆಚ್ಚವಾಗಿದೆ ಎಂದು ಹೇಳಲಾಗುತ್ತಿದೆ. ಒಟಿಟಿ ಹಕ್ಕುಗಳನ್ನು ಅಮೇಜಾನ್‌ ಪ್ರೈಮ್‌ 125 ಕೋಟಿ ರೂ. ನೀಡಿ ಖರೀದಿಸಿದೆ ಎನ್ನಲಾಗುತ್ತಿದೆ. ಕೆಜಿಎಫ್‌ ನಂತರ ಅತಿದೊಡ್ಡ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಮಾರಾಟವಾದ ಎರಡನೇ ಕನ್ನಡ ಚಿತ್ರ ಕಾಂತಾರವಾಗಿದೆ.

    2022 ರಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಬಜೆಟ್‌ ಅಂದಾಜು 16 ಕೋಟಿ ರೂ. ಆಗಿದ್ದರೆ ಬಾಕ್ಸ್‌ ಆಫೀಸ್‌ನಲ್ಲಿ 450 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು.

  • ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್‌ ಹೊಡೆದ ತಮಿಳುನಾಡು ಸರ್ಕಾರ

    ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್‌ ಹೊಡೆದ ತಮಿಳುನಾಡು ಸರ್ಕಾರ

    ಚೆನ್ನೈ: ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಂದಿ ಹೇರಿಕೆಯನ್ನು (Hindi Impostion) ನಿಷೇಧಿಸುವ ಮಸೂದೆಯನ್ನು ಮಂಡನೆ ಮಾಡದೇ ಇರಲು ತಮಿಳುನಾಡು (Tamil Nadu) ಸರ್ಕಾರ ನಿರ್ಧರಿಸಿದೆ.

    ರಾಜ್ಯದ್ಯಂತ ಹಿಂದಿ ಹೋರ್ಡಿಂಗ್‌ಗಳು, ಬೋರ್ಡ್‌ಗಳು, ಚಲನಚಿತ್ರಗಳು ಮತ್ತು ಹಾಡುಗಳನ್ನು ನಿಷೇಧಿಸುವ ಮಸೂದೆ ಮಂಡಿಸಲು ತಮಿಳುನಾಡು ಸರ್ಕಾರ ಮುಂದಾಗಿತ್ತು.

    ಈ ಪ್ರಸ್ತಾವಿತ ಮಸೂದೆ ಸಂವಿಧಾನ ವ್ಯಾಪ್ತಿಯ ಒಳಗಡೆ ಇರಲಿದೆ. ಮಸೂದೆಯ ಬಗ್ಗೆ ಮಂಗಳವಾರ ರಾತ್ರಿ ಕಾನೂನು ತಜ್ಞರೊಂದಿಗೆ ತುರ್ತು ಸಭೆ ನಡೆಸಲಾಗಿತ್ತು ಎಂದು ಸರ್ಕಾರ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದವು.

    ಮಸೂದೆಯ ಕುರಿತು ಪ್ರತಿಕ್ರಿಯಿಸಿದ ಹಿರಿಯ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್, ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ನಾವು ಅದನ್ನು ಪಾಲಿಸುತ್ತೇವೆ. ಹಿಂದಿ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:  ಕರ್ನಾಟಕದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ಪವರ್‌ ಕಟ್‌ ಸಮಸ್ಯೆಯಿದೆ: ಆಂಧ್ರ ಐಟಿ ಸಚಿವ

    ತಮಿಳುನಾಡು ಬಿಜೆಪಿಯೂ (BJP) ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದೆ.ಬಿಜೆಪಿಯ ವಿನೋಜ್ ಸೆಲ್ವಂ ಸರ್ಕಾರದ ಕ್ರಮವನ್ನು ಇದೊಂದು ಮೂರ್ಖತನ ಮತ್ತು ಅಸಂಬದ್ಧ ನಿರ್ಧಾರ. ಭಾಷೆಯನ್ನು ರಾಜಕೀಯ ಸಾಧನವಾಗಿ ಬಳಸಬಾರದು ಎಂದಿದ್ದಾರೆ.  ಇದನ್ನೂ ಓದಿ:  ಬೆಂಗಳೂರು | ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಪತ್ನಿಗೆ ಇಂಜೆಕ್ಷನ್‌ ಕೊಟ್ಟು ಕೊಂದ ಕಿಲ್ಲರ್‌ ಡಾಕ್ಟರ್‌

    ತಿರುಪರಾನುಕುಂದ್ರಂ, ಕರೂರ್ ಸಿಬಿಐ ತನಿಖೆ ಮತ್ತು ಆರ್ಮ್‌ಸ್ಟ್ರಾಂಗ್ ವಿಷಯಗಳು ಸೇರಿದಂತೆ ಇತ್ತೀಚಿನ ನ್ಯಾಯಾಲಯದ ಪ್ರಕರಣಗಳಲ್ಲಿ ಆಡಳಿತಾರೂಢ ಡಿಎಂಕೆಗೆ ಹಿನ್ನಡೆಯಾಗಿದೆ. ವಿವಾದಾತ್ಮಕ ಫಾಕ್ಸ್‌ಕಾನ್ ಹೂಡಿಕೆ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಈ ವಿಚಾರವನ್ನು ಮುನ್ನೆಲೆಗೆ ತಂದಿದೆ ಪ್ರತಿಪಕ್ಷಗಳು ದೂರಿವೆ. ಇದನ್ನೂ ಓದಿ:  ತಮಿಳುನಾಡಿನಲ್ಲಿ ಹಿಂದಿ ಹೋರ್ಡಿಂಗ್ಸ್‌, ಸಿನಿಮಾ, ಹಾಡುಗಳ ನಿಷೇಧ?

    ಈ ವರ್ಷದ ಮಾರ್ಚ್‌ನಲ್ಲಿ ಎಂಕೆ ಸ್ಟಾಲಿನ್ ಸರ್ಕಾರವು 2025–26 ರ ರಾಜ್ಯ ಬಜೆಟ್ ಲೋಗೋದಲ್ಲಿ ರಾಷ್ಟ್ರೀಯ ರೂಪಾಯಿ ಚಿಹ್ನೆಅನ್ನು ತಮಿಳು ಅಕ್ಷರ ರೂ.ನೊಂದಿಗೆ ಬದಲಾಯಿಸಿತ್ತು. ಈ ಬದಲಾವಣೆಯನ್ನು ಬಿಜೆಪಿ ನಾಯಕರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದರು. ಆದರೂ ಡಿಎಂಕೆ ತಮಿಳು ಭಾಷೆಯನ್ನು ಉತ್ತೇಜಿಸಿಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

  • ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

    ಮೂರು ದಿನದಲ್ಲಿ 52 ಕೋಟಿ – ಹಿಂದಿಯಲ್ಲೂ ಕಮಾಲ್‌ ಆರಂಭಿಸಿದ ಕಾಂತಾರ

    ಹಿಂದಿಯಲ್ಲೂ ಕಾಂತರ: ಚಾಪ್ಟರ್‌ 1 (Kantara Chapter 1) ಈಗ ಕಮಾಲ್‌ ಮಾಡಲು ಆರಂಭಿಸಿದೆ. ಬಿಡುಗಡೆಯಾದ ಮೂರು ದಿನದಲ್ಲಿ 52 ಕೋಟಿ ರೂ. ಗಳಿಸಿದೆ.

    ಗುರುವಾರ 18.50 ಕೋಟಿ, ಶುಕ್ರವಾರ 13.50 ಕೋಟಿ ರೂ., ಶನಿವಾರ 20 ಕೋಟಿ ರೂ. ಗಳಿಸಿದೆ. ಮೊದಲ ವಾರದಲ್ಲಿ 70 ಕೋಟಿ ರೂ. ಗಳಿಸುವ ಸಾಧ್ಯತೆಯಿದೆ.

    ದಸರಾ ರಜೆ ಇದ್ದ ಕಾರಣ ಶುಕ್ರವಾರ ಕಲೆಕ್ಷನ್‌ ಕಡಿಮೆಯಾಗಿತ್ತು. ಆದರೆ ಶನಿವಾರ ಭರ್ಜರಿ ಕಲೆಕ್ಷನ್‌ ಮಾಡಿತ್ತು ಭಾನುವಾರವೂ ಉತ್ತಮ ಕಲೆಕ್ಷನ್‌ ಮಾಡುವ ಸಾಧ್ಯತೆಯಿದೆ.  ಇದನ್ನೂ ಓದಿ:  ರಾಷ್ಟ್ರಪತಿ ಭವನದಲ್ಲಿ ‘ಕಾಂತಾರ’ ಪ್ರದರ್ಶನ – ರಿಷಬ್‌ ಚಿತ್ರತಂಡದ ಜೊತೆ ದ್ರೌಪದಿ ಮುರ್ಮು ಸಿನಿಮಾ ವೀಕ್ಷಣೆ

     

    2022ರಲ್ಲಿ ಬಿಡುಗಡೆಯಾದ ಕಾಂತಾರ ಆರಂಭದಲ್ಲಿ ಹಿಂದಿಯಲ್ಲಿ (Hindi) ಕಡಿಮೆ ಸಂಖ್ಯೆಯಲ್ಲಿ ಜನ ವೀಕ್ಷಣೆ ಮಾಡಿದ್ದರು. ನಂತರ ನಿಧಾನವಾಗಿ ಪ್ರಚಾರ ಪಡೆಯುತ್ತಿದ್ದಂತೆ ಅಂತಿಮವಾಗಿ ಅಂದಾಜು 96 ಕೋಟಿ ರೂ. ಗಳಿಸಿತ್ತು. ಎಲ್ಲಾ ಭಾಷೆಗಿಂತಲೂ ಅತಿ ಹೆಚ್ಚು ಕಲೆಕ್ಷನ್‌ ಹಿಂದಿಯಲ್ಲಿ ಆಗಿತ್ತು. ಟ್ರೆಂಡ್‌ ಗಮನಿಸಿದರೆ ಈ ಬಾರಿಯೂ ಇದೇ ಪುನಾರವರ್ತನೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ:  ಭಾನುವಾರವೂ ಹೌಸ್‌ಫುಲ್‌ – ಬೆಂಗಳೂರಿನಲ್ಲಿ ದಾಖಲೆ ಬರೆದ ಕಾಂತಾರ

    ಮೊದಲ ಕಾಂತಾರ  ಸಿನಿಮಾ ಸುಮಾರು 16 ಕೋಟಿ ರೂ.ನಲ್ಲಿ ನಿರ್ಮಾಣಗೊಂಡರೆ ಅಂದಾಜು 400 ಕೋಟಿ ರೂ. ಗಳಿಸಿತ್ತು. ಕಾಂತರ: ಚಾಪ್ಟರ್‌ 1 ಸಿನಿಮಾವನ್ನು ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ‌ಕಾಂತಾರ ಭರ್ಜರಿ ಪ್ರದರ್ಶನ – ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ದಾಖಲೆ

  • ಭಾಷೆ ಹೆಸರಲ್ಲಿ ಜನರನ್ನು ವಿಭಜಿಸಬಾರದು: ಮರಾಠಿ-ಹಿಂದಿ ಸಂಘರ್ಷ ಬಗ್ಗೆ ಕಂಗನಾ ಪ್ರತಿಕ್ರಿಯೆ

    ಭಾಷೆ ಹೆಸರಲ್ಲಿ ಜನರನ್ನು ವಿಭಜಿಸಬಾರದು: ಮರಾಠಿ-ಹಿಂದಿ ಸಂಘರ್ಷ ಬಗ್ಗೆ ಕಂಗನಾ ಪ್ರತಿಕ್ರಿಯೆ

    ಧರ್ಮಶಾಲಾ: ನಾವು ದೇಶದ ಏಕತೆಯನ್ನು ಕಾಪಾಡಬೇಕು. ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು ಎಂದು ನಟಿ, ಸಂಸದೆ ಕಂಗನಾ ರಣಾವತ್‌ (Kangana Ranaut) ಹೇಳಿದ್ದಾರೆ.

    ಮಹಾರಾಷ್ಟ್ರದಲ್ಲಿ ಭಾಷಾ ಚರ್ಚೆಯ ಮಧ್ಯೆ ಬಿಜೆಪಿ ಸಂಸದೆ ಈ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಕಾರ್ಯಕರ್ತರು ಮರಾಠಿ ಮಾತನಾಡದ ಕಾರಣ ಅಂಗಡಿಯವನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆಯೂ ಮಾತನಾಡಿದ್ದಾರೆ.

    ನಮ್ಮ ದೇಶವನ್ನು ವಿಭಜಿಸುವವರಿಂದ ನಾವು ದೂರವಿರಬೇಕು. ನಮ್ಮ ದೇಶದ ಜನರು ವಿಭಿನ್ನ ರೀತಿಯಲ್ಲಿ ಪರಸ್ಪರ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಾರೆ. ಇಂತಹ ಕ್ರಮಗಳು ಅವರ ಪ್ರಯತ್ನಗಳಿಗೆ ಅಡ್ಡಿಪಡಿಸುತ್ತವೆ. ಪ್ರವಾಸೋದ್ಯಮಕ್ಕಾಗಿ ಇಲ್ಲಿಗೆ ಅನೇಕ ಜನರು ಬರುತ್ತಾರೆ. ಅವರು ಪಹಾರಿಗಳು ಹೇಗೆ ಮಾತನಾಡುತ್ತಾರೆಂದು ತಿಳಿಯಲು ಬಯಸುತ್ತಾರೆ. ನಾವು ಪ್ರಯಾಣಿಸುವಾಗ, ದಕ್ಷಿಣದ ಜನರು ಹೇಗೆ ಮಾತನಾಡುತ್ತಾರೆಂದು ತಿಳಿಯಲು ನಾವು ಬಯಸುತ್ತೇವೆ. ದೇಶದಲ್ಲಿ ಏಕತೆಯ ಮನೋಭಾವವನ್ನು ನಾವು ಕಾಪಾಡಿಕೊಳ್ಳಬೇಕು. ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು ಎಂದು ತಿಳಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಹಿಂದಿ-ಮರಾಠಿ ಭಾಷಾ ಸಂಘರ್ಷ ಜೋರಾಗಿದೆ. ಮಹಾರಾಷ್ಟ್ರ ಸರ್ಕಾರವು ತ್ರಿಭಾಷಾ ನೀತಿ ಜಾರಿಗೆ ಮುಂದಾಗಿತ್ತು. ಶಾಲೆಗಳಲ್ಲಿ ಹಿಂದಿಯನ್ನೂ ಕಡ್ಡಾಯಗೊಳಿಸಲು ಕ್ರಮಕೈಗೊಂಡಿತ್ತು. ಆದರೆ, ಮರಾಠಿಗರು, ವಿಪಕ್ಷಗಳು ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

    ಮೇಘಸ್ಫೋಟದಿಂದ ಹಾನಿಗೊಳಗಾದ ಕುಟುಂಬಗಳಿಗೆ ಸಂತಾಪ ಸೂಚಿಸಲು ಕಂಗನಾ, ಮಂಡಿಯ ಸಿರಾಜ್ ಕಣಿವೆಗೆ ಭೇಟಿ ನೀಡಿದ್ದಾರೆ. ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ತುನಾಗ್‌ನಲ್ಲಿ ಹತ್ತು ಜನರು ಸಾವನ್ನಪ್ಪಿದ್ದು, 24 ಜನರು ಕಾಣೆಯಾಗಿದ್ದಾರೆ.

  • ಮಹಾರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿ – ಹಿಂದಿ 3ನೇ ಕಡ್ಡಾಯ ಭಾಷೆ

    ಮಹಾರಾಷ್ಟ್ರದಲ್ಲಿ ಹೊಸ ಶಿಕ್ಷಣ ನೀತಿ ಜಾರಿ – ಹಿಂದಿ 3ನೇ ಕಡ್ಡಾಯ ಭಾಷೆ

    ಮುಂಬೈ: ಮಹಾರಾಷ್ಟ್ರ (Maharashtra) ಸರ್ಕಾರವು ಹೊಸ ಶಿಕ್ಷಣ ನೀತಿ ಜಾರಿಗೊಳಿಸಲಾಗಿದೆ ಎಂದು ಘೋಷಿಸಿದೆ. ಹಿಂದಿಯನ್ನು ಮೂರನೇ ಕಡ್ಡಾಯ ಭಾಷೆಯಾಗಿ ಅನುಷ್ಠಾನ ಮಾಡುವುದು ಯೋಜನೆಯ ಪ್ರಮುಖ ಅಂಶವಾಗಿದೆ.

    2025-26ನೇ ಶೈಕ್ಷಣಿಕ ವರ್ಷದಿಂದ ಎನ್‌ಇಪಿ (New Education Policy) ಜಾರಿಯಾಗಿದೆ. ಮರಾಠಿ ಮತ್ತು ಇಂಗ್ಲಿಷ್‌ ಬಳಿಕ 3ನೇ ಕಡ್ಡಾಯ ಭಾಷೆಯಾಗಿದೆ. 1ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸುತ್ತದೆ. ಹೊಸ ನೀತಿಯಡಿಯಲ್ಲಿ, ಮಹಾರಾಷ್ಟ್ರವು 5+3+3+4 ಶೈಕ್ಷಣಿಕ ರಚನೆಯನ್ನು ಅಳವಡಿಸಿಕೊಳ್ಳಲಿದೆ. ಇದನ್ನೂ ಓದಿ: ಖಾಸಗಿ ಶಾಲೆಗಳ ದಾಖಲಾತಿಗೆ ಸರ್ಕಾರದಿಂದ ರೂಲ್ಸ್ – ಪೋಷಕರ ಸಂದರ್ಶನ, ಮನಸೋ ಇಚ್ಛೆ ಫೀಸ್‌ಗೆ ಬ್ರೇಕ್

    ಮಹಾರಾಷ್ಟ್ರ ಸರ್ಕಾರವು 2025-26ರ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ಜಾರಿಗೆ ತರಲು ವಿವರವಾದ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯ ಪ್ರಮುಖ ಅಂಶವೆಂದರೆ ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲಾಗಿದೆ.

    2025-26 ಶೈಕ್ಷಣಿಕ ವರ್ಷದಲ್ಲಿ 1 ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳಿಗೆ ವಿಸ್ತರಿಸುತ್ತದೆ. ಭಾಷಾ ನೀತಿಯ ಭಾಗವಾಗಿ, ಆರಂಭಿಕ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲಾಗುವುದು. ಈ ಪರಿವರ್ತನೆಯನ್ನು ಬೆಂಬಲಿಸಲು, ರಾಜ್ಯ ಸರ್ಕಾರವು 2025 ರ ವೇಳೆಗೆ 80% ಶಿಕ್ಷಕರಿಗೆ ಹೊಸ ಶಿಕ್ಷಣ ವಿಧಾನಗಳು ಮತ್ತು ಡಿಜಿಟಲ್ ಪರಿಕರಗಳಲ್ಲಿ ತರಬೇತಿ ನೀಡಲು ಯೋಜಿಸಿದೆ. ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್‌ ಆಯ್ಕೆ

    ಹೊಸ ನೀತಿಯಡಿಯಲ್ಲಿ, ಮಹಾರಾಷ್ಟ್ರವು 5+3+3+4 ಶೈಕ್ಷಣಿಕ ರಚನೆಯನ್ನು ಅಳವಡಿಸಿಕೊಳ್ಳಲಿದ್ದು, ಪಠ್ಯಕ್ರಮ ಅಭಿವೃದ್ಧಿಯನ್ನು ಸ್ಥಳೀಯವಾಗಿ SCERT ಮತ್ತು ಬಾಲಭಾರತಿ ನಿರ್ವಹಿಸುತ್ತವೆ.

  • ಮನಮೋಹನ್‌ ಸಿಂಗ್‌ಗೆ ಹಿಂದಿ ಓದಲು ಬರುತ್ತಿರಲಿಲ್ಲ!

    ಮನಮೋಹನ್‌ ಸಿಂಗ್‌ಗೆ ಹಿಂದಿ ಓದಲು ಬರುತ್ತಿರಲಿಲ್ಲ!

    ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ (Manmohan Singh) ಅವರಿಗೆ ಹಿಂದಿ (Hindi) ಓದಲು ಬರುತ್ತಿರಲಿಲ್ಲ. ಅವಿಭಜಿತ ಪಂಜಾಬ್‌ನಲ್ಲಿ (ಈಗಿನ ಪಾಕಿಸ್ತಾನ ಪಂಜಾಬ್‌ನಲ್ಲಿರುವ ಗಾಹ್‌) ಸೆಪ್ಟೆಂಬರ್‌ 26, 1932 ರಲ್ಲಿ ಜನಿಸಿದರೂ ಸಿಂಗ್‌ ಅವರಿಗೆ ಹಿಂದಿ ಭಾಷೆಯನ್ನು ಓದಲು ಬರುತ್ತಿರಲಿಲ್ಲ.

    ಚಿಕ್ಕವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಅವರು ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಅವರ ಜೀವನದ ಮೊದಲ ಹನ್ನೆರಡು ವರ್ಷಗಳಲ್ಲಿ ಅವರ ಹಳ್ಳಿಗೆ ವಿದ್ಯುತ್ ಇರಲಿಲ್ಲ. ಅವರು ದೀಪದ ಬೆಳಕಿನಲ್ಲಿ ಅಧ್ಯಯನ ಮಾಡಿದ್ದರು. 14 ನೇ ವಯಸ್ಸಿನಲ್ಲಿ, ಸಿಂಗ್ ಅವರ ಕುಟುಂಬವು ವಿಭಜನೆಯ ನಂತರ ಭಾರತಕ್ಕೆ ವಲಸೆ ಬಂದು ಅಮೃತಸರದಲ್ಲಿ ವಾಸಿಸುತ್ತಿತ್ತು. ಇದನ್ನೂ ಓದಿ: ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದು ಹೇಗೆ? 2004 ರಲ್ಲಿ ಏನಾಯ್ತು?

    ಪ್ರಾಥಮಿಕ ಶಿಕ್ಷಣವನ್ನು ಉರ್ದುವಿನಲ್ಲಿ (Urdu) ಓದಿದ ಕಾರಣ ಸಿಂಗ್‌ ಅವರಿಗೆ ಹಿಂದಿ ಮಾತನಾಡಲು ಮಾತ್ರ ಬರುತ್ತಿತ್ತು, ವಿನಾ: ಬರೆಯಲು ಮತ್ತು ಓದಲು ಬರುತ್ತಿರಲಿಲ್ಲ. ಇದನ್ನೂ ಓದಿ: ನಾನು ಮನಮೋಹನ್ ಸಿಂಗ್‌ ದೊಡ್ಡ ಅಭಿಮಾನಿ ಎಂದಿದ್ದ ಒಬಾಮಾ!

    ಪ್ರಧಾನಿಯಾಗಿದ್ದ ಸಮಯದಲ್ಲೂ ಅವರು ತಮ್ಮ ಭಾಷಣವನ್ನು ಉರ್ದುವಿನಲ್ಲಿ ಬರೆದು ಓದುತ್ತಿದ್ದರು. ಕೆಲ ಸಂದರ್ಭಗಳಲ್ಲಿ ತಮ್ಮ ಮಾತೃ ಭಾಷೆ ಪಂಜಾಬಿಯನ್ನು ಬರೆಯುವ ಲಿಪಿ ಗುರ್ಮುಖಿಯಲ್ಲಿ ಬರೆದುಕೊಳ್ಳುತ್ತಿದ್ದರು. ಮನಮೋಹನ್‌ ಸಿಂಗ್‌ ಉರ್ದು ಸಾಹಿತ್ಯ ಮತ್ತು ಕವಿತೆಯನ್ನು ಇಷ್ಟ ಪಡುತ್ತಿದ್ದರು.

    ಪ್ರಧಾನಿಯಾಗಿದ್ದ ಸಮಯದಲ್ಲಿ ಸಿಂಗ್‌ ಅವರು ತಮ್ಮ ಜನ್ಮಸ್ಥಳಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಈ ಕನಸು ನನಸಾಗಿರಲಿಲ್ಲ.

    ಮನಮೋಹನ್‌ ಸಿಂಗ್‌ ಅವರ 2012ರ ಸ್ವಾತಂತ್ರ್ಯ ದಿನದ ಭಾಷಣದ 17 ನಿಮಿಷ 58 ಸೆಕೆಂಡ್‌ನಲ್ಲಿ ಉರ್ದುನಲ್ಲಿ ಬರೆದಿರುವ ಪುಟವನ್ನು ನೋಡಬಹುದು

  • ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ

    ಆರ್‌ಸಿಬಿ ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ

    ಬೆಂಗಳೂರು: ಐಪಿಎಲ್‌ನಲ್ಲಿ (IPL) ಬೆಂಗಳೂರನ್ನು (Bengaluru) ಪ್ರತಿನಿಧಿಸುತ್ತಿರುವ ಆರ್‌ಸಿಬಿಗೂ (RCB) ಕನ್ನಡ-ಹಿಂದಿ ಭಾಷಾ ಬಿಸಿ ತಟ್ಟಿದೆ.

    ಸೀಸನ್ 18 ಹರಾಜಿನ ವೇಳೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಹಿಂದಿ ಸೋಷಿಯಲ್ ಮೀಡಿಯಾ ಓಪನ್ ಮಾಡಿದೆ. ವಿರಾಟ್ ಕೊಹ್ಲಿ ಹಿಂದಿಯಲ್ಲಿ ಆರ್‌ಸಿಬಿ ಬಗ್ಗೆ ಮಾತಾಡಿರುವ ವಿಡಿಯೋವನ್ನು ಹಂಚಿಕೊಂಡಿದೆ. ಆರ್‌ಸಿಬಿ ಹಿಂದಿ (Hindi) ಪ್ರೀತಿಗೆ ಕನ್ನಡ ಫ್ಯಾನ್ಸ್ ಸಿಡಿದೆದ್ದಿದ್ದಾರೆ.

    ಇದು ಬೆಂಗಳೂರಿನ ಕನ್ನಡ (Kannada) ಸಂಸ್ಕೃತಿಗೆ ಮಾಡಿರುವ ಅವಮಾನ. ಈ ಕ್ಷಣವೇ ಹಿಂದಿ ಪೇಜ್ ಅನ್ನು ರದ್ದು ಮಾಡಿ ಡಿಲೀಟ್ ಮಾಡಿ ಎಂದು ಆಗ್ರಹಿಸಿದ್ದಾರೆ. ಆದರೆ ಆರ್‌ಸಿಬಿ ಕನ್ನಡ ಅಭಿಮಾನಿಗಳ ಆಕ್ಷೇಪಕ್ಕೆ ಇತರೇ ಭಾಷಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.


    ವಿವಾದದ ಬೆನ್ನಲ್ಲೇ ಬಳಿಕ ಎಚ್ಚೆತ್ತ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸ್ಪಷ್ಟನೆ ಕೊಟ್ಟಿದೆ. ಮತ್ತಷ್ಟು ಜನರನ್ನು ತಲುಪುವ ಗುರಿ ಹೊಂದಿದ್ದು, ಕನ್ನಡ, ಹಿಂದಿ ಪೇಜ್ ಓಪನ್ ಮಾಡಿದ್ದೇವೆ. ಜೊತೆಗೆ ಮತ್ತಷ್ಟು ಭಾಷೆಗಳಲ್ಲೂ ಸೋಷಿಯಲ್ ಮೀಡಿಯಾ ಪೇಜ್ ಆರಂಭಿಸುತ್ತೇವೆ ಎಂದು ಸ್ಪಷ್ಟನೆ ಕೊಟ್ಟಿದೆ.  ಇದನ್ನೂ ಓದಿ: ನನ್ನ ಪ್ರೀತಿಯ RCBಗೆ…: ತಂಡದಿಂದ ಕೈಬಿಟ್ಟ ಆರ್‌ಸಿಬಿಗೆ ಸಿರಾಜ್‌ ಭಾವುಕ ವಿದಾಯ

    ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸಮರ್ಥನೆಗೂ ಅಭಿಮಾನಿಗಳು ಕಿಡಿಕಾರಿದ್ದಾರೆ. ಬೇರೆ ತಂಡಗಳು ಕನ್ನಡದಲ್ಲಿ ಪೇಜ್ ಓಪನ್ ಮಾಡುತ್ತಾರಾ? ಸಂವಹನಕ್ಕೆ ಬೇಕಾದರೆ ಕನ್ನಡ-ಇಂಗ್ಲಿಷ್ ಸಾಲದೇ ಅಂತ ಪ್ರಶ್ನಿಸಿದ್ದಾರೆ.

    ಇನ್ನು ಕೆಲವರು ಆರ್‌ಸಿಬಿ ಏನು ರಣಜಿ ಟೀಮ್ ಅಲ್ಲ, ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಹಿಂದಿ ಸೇರಿದಂತೆ ಬೇರೆ ಭಾಷೆಗಳಲ್ಲಿ ಪೋಸ್ಟ್ ಮಾಡಿದರೆ ತಪ್ಪಲ್ಲ. ಕೆಎಂಎಫ್‌ನವರು (KMF) ನಂದಿನಿ ಹಾಲಿನ (Nandini Milk) ಬಗ್ಗೆ ದೆಹಲಿಯಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದರೆ ಇದಕ್ಕೆ ಆಕ್ಷೇಪಿಸ್ತೀರಾ ಎಂದು ವಾದಿಸುತ್ತಿದ್ದಾರೆ.

  • ಹಿಂದಿ ಹೇರಿಕೆ ವಿರುದ್ಧ ದೊಡ್ಡ ಧ್ವನಿ ಎತ್ತಿದ ಕೀರ್ತಿ ಸುರೇಶ್

    ಹಿಂದಿ ಹೇರಿಕೆ ವಿರುದ್ಧ ದೊಡ್ಡ ಧ್ವನಿ ಎತ್ತಿದ ಕೀರ್ತಿ ಸುರೇಶ್

    `ಕೆಜಿಎಫ್ 2′ (Kgf 2) ಮತ್ತು `ಕಾಂತಾರ’ (Kantara), ಸಲಾರ್   ರೀತಿಯ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಸಂಸ್ಥೆಯು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್(Hombale Films) ರೂವಾರಿ ವಿಜಯ್ ಕಿರಗಂದೂರು, ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು (Tamil Films) ನಿರ್ಮಿಸುತ್ತಿದ್ದಾರೆ. ಅದೇ ರಘುತಾತ (Raghutatha). ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಹಿಂದಿ ಹೇರಿಕೆಯ ವಿರುದ್ಧ ಕಥಾ ನಾಯಕಿ ಪ್ರತಿಭಟಿಸುವಂತಹ ಟೀಸರ್ ಇದಾಗಿದೆ.

     

    ಹಿಂದಿ ಹೇರಿಕೆಯ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದೇ ವಿಷಯವನ್ನೇ ಇಟ್ಟುಕೊಂಡು ಟೀಸರ್ ರೆಡಿ ಮಾಡಿದ್ದಾರೆ ನಿರ್ದೇಶಕರು. ಹಿಂದಿ ಹೇರಿಕೆಯ ವಿರುದ್ಧ ಕೀರ್ತಿ ಸುರೇಶ್ (Keerthy Suresh) ಹೊಡೆದ ‘ಹಿಂದಿ ತೆರಿಯಾದ ಪೋಯ’ ಡೈಲಾಗ್ ಪಂಚಿಂಗ್ ಆಗಿದೆ. ಕೀರ್ತಿ ಸುರೇಶ್ ಅದ್ಭುತವಾಗಿಯೇ ನಟಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಮೊದಲ ತಮಿಳು ಚಿತ್ರವಿದು. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗಿದೆ. ಈ ಹಿಂದೆ, `ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ʻರಘುತಥಾʼ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆ.

    ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದ್ದು, ಸಮಾಜದ ವಿರುದ್ದ ಸವಾಲೆಸೆಯುವ ಒಬ್ಬ ಗಟ್ಟಿಗಿತ್ತಿ ಯುವತಿಯ ಸುತ್ತ ಸುತ್ತುತ್ತದೆ. ತನ್ನ ಸಿದ್ಧಾಂತಗಳನ್ನು ಎತ್ತಿಹಿಡಿಯುವುದರ ಜೊತೆಗೆ, ಸಮಾಜದ ವಿರುದ್ಧ ಹೋರಾಡುತ್ತಲೇ, ಆಕೆ ಹೇಗೆ ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ ಎಂಬುದು ಚಿತ್ರದ ಕಥೆ.

     

    ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ಞಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ʻಜೈ ಭೀಮ್ʼ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.

  • ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ‘ಪೆಂಟಗನ್’ ಹಿಂದಿಯಲ್ಲಿ ರಿಲೀಸ್

    ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ನಟನೆಯ ‘ಪೆಂಟಗನ್’ ಹಿಂದಿಯಲ್ಲಿ ರಿಲೀಸ್

    ದ್ಯ ಬಿಗ್ ಬಾಸ್ ಮನೆಯ ಕೇಂದ್ರಬಿಂದು ಆಗಿರುವ ನಟಿ ತನಿಷಾ ಕುಪ್ಪಂಡ ಮತ್ತು ಇತರರು ನಟನೆಯ ‘ಪೆಂಟಗನ್’ ಸಿನಿಮಾ ಹಿಂದಿಯಲ್ಲಿ (Hindi) ಬಿಡುಗಡೆ ಆಗಿದೆ. ‘ಪೆಂಟಗನ್’ ಈಗ ಹಿಂದಿ ಭಾಷೆಯಲ್ಲಿ ‘ಪೆಂಟಗನ್- ಪಾಂಚ್ ಕಾ ಧಮ್’ ಎಂದು dollywood play ನಲ್ಲಿ ಇಂದಿನಿಂದ ಪ್ರಸಾರವಾಗುತ್ತಿದೆ. ಐದು ಕಥೆಗಳು, ಐದು ನಿರ್ದೇಶಕರು ಹಾಗೂ ಹಲವಾರು ನಟರು ಈ ಸಿನಿಮಾದ ಭಾಗವಾಗಿದ್ದಾರೆ. ಗುರು ದೇಶಪಾಂಡೆ (Guru Deshpanda) ಅವರ ನಿರ್ಮಾಣ ಮತ್ತು ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಮತ್ತು ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ. ಕಿಶೋರ್, ಪ್ರಕಾಶ್ ಬೆಳವಾಡಿ, ರವಿಶಂಕರ್ ಸೇರಿದಂತೆ ಹೆಸರಾಂತ ತಾರಾ ಬಳಗವೇ ಸಿನಿಮಾ ದಲ್ಲಿದೆ.

    ನೆನಪಾಗುವ ತನಿಷಾ ವಿವಾದ

    ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ತನಿಷಾ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ಬೋಲ್ಡ್ ಆಗಿ ನಟಿಸಿದ್ದರು. ಈ ನಟಿಗೆ ಅನೇಕ ರೀತಿಯಲ್ಲಿ ಕಿರುಕುಳ ಆಗಿದೆ ಎಂದು ಈ ಹಿಂದೆ ಆರೋಪ ಮಾಡಿದ್ದರು. ಸಿನಿಮಾ ರಿಲೀಸ್ ವೇಳೆ ಯುಟ್ಯೂಬರ್ ಒಬ್ಬನ ಮೇಲೆ ಆರೋಪ ಮಾಡಿದ್ದ ತನಿಷಾ, ನಂತರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸೂಪರ್ ಹಿಟ್ ಸಿನಿಮಾದ ನಟನೊಬ್ಬನ ಮೇಲೆ ಗುರುತರ ಆರೋಪ ಮಾಡಿದ್ದರು.

    ಪೆಂಟಗನ್ (Pentagon) ಸಿನಿಮಾದ ಒಂದು ಕಥೆಯಲ್ಲಿ ತನಿಷಾ ಬೋಲ್ಡ್ ಆಗಿರುವಂಥ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಡೇಟಿಂಗ್ ಆಪ್ ಕುರಿತಾದ ಕಥೆಯಾಗಿದ್ದರಿಂದ, ಪಾತ್ರವೇ ಡಿಮಾಂಡ್ ಮಾಡಿದ್ದರಿಂದ ಅಂಥದ್ದೊಂದು ಪಾತ್ರವನ್ನು ನಿರ್ವಹಿಸಿದ್ದೇನೆ ಎಂದಿದ್ದರು. ಆದರೆ, ರಾಜಾಹುಲಿ ಅಂತಹ ಹಿಟ್ ಸಿನಿಮಾದಲ್ಲಿ ಯಶ್ ಗೆಳೆಯನ ಪಾತ್ರ ಮಾಡಿದ್ದ ನಟನೊಬ್ಬ ತನಿಷಾಗೆ ಬ್ಲೂಫಿಲ್ಮ್ ಮಾಡ್ತೀಯಾ ಎಂದು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಿದ್ದಾರಂತೆ. ಆ ನಟನ ಬಗ್ಗೆ ಮಾತನಾಡಿದ ತನಿಷಾ ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರಿಟ್ಟಿದ್ದರು.

    ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿವೆ. ಕನ್ನಡದ ಪ್ರೇಮ, ಸಾಮಾಜಿಕ ಸಂದೇಶ ಹಾಗೂ ಮನರಂಜನೆ ನೀಡುವಂತಹ ಎಲ್ಲ ಅಂಶಗಳು ಇದ್ದರೂ, ಕೇವಲ ಒಂದೇ ಒಂದು ಕಥೆಯ ಬಗ್ಗೆ ಈ ರೀತಿ ಮಾತನಾಡುವುದು ಸರಿ ಅಲ್ಲ ಎನ್ನುವುದು ತನಿಷಾ ಮಾತಾಗಿತ್ತು. ಐದು ಪ್ರತಿಭಾವಂತ ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅವರು ನನ್ನಿಂದ ಕೆಟ್ಟ ರೀತಿಯಲ್ಲಿ ಪಾತ್ರ ಮಾಡಲು ಸಾಧ್ಯವಾ ಎನ್ನುವುದು ಅವರ ಪ್ರಶ್ನೆಯಾಗಿತ್ತು.

    `ಮಂಗಳಗೌರಿ ಮದುವೆ’ (Mangala Gowri Maduve) ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಮನಗೆದ್ದ ತನಿಷಾ ಕುಪ್ಪಂಡ (Tanisha Kuppanda) ಅವರು (ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಯೂಟ್ಯೂಬರ್ ಅಸಭ್ಯ ಪ್ರಶ್ನೆಗೆ ತನಿಷಾ ಖಡಕ್ ವಾರ್ನಿಂಗ್ ಕೊಟ್ಟಿದ್ದರು.

     

    ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಓರ್ವ ಯೂಟ್ಯೂಬರ್ ಪ್ರಶ್ನೆ ಮಾಡಿದ್ದರು. ಆಗ ಸಿಟ್ಟಾದ ತನಿಷಾ ಕುಪ್ಪಂಡ ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ. ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನ ಕೇಳುತ್ತಿದ್ದೀರಾ? ಎಂದು ಹೇಳಿ ಸಂದರ್ಶನವನ್ನ ಮೊಟಕುಗೊಳಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೇಲ್‍ನಲ್ಲಿ ಕಿರುತೆರೆ ನಟಿ ಮಧುರಾ ನಾಯ್ಕ್ ಕುಟುಂಬಸ್ಥರ ಹತ್ಯೆ

    ಇಸ್ರೇಲ್‍ನಲ್ಲಿ ಕಿರುತೆರೆ ನಟಿ ಮಧುರಾ ನಾಯ್ಕ್ ಕುಟುಂಬಸ್ಥರ ಹತ್ಯೆ

    ಜೆರುಸಲೆಂ: ಇಸ್ರೇಲ್- ಪ್ಯಾಲೆಸ್ಟೈನ್ (Isreal- Palestine) ನಡುವೆ ಯುದ್ಧ ಜೋರಾಗಿದೆ. ಬಹುತೇಕ ಯುದ್ಧ ವಾಯು ಮಾರ್ಗದ ಮೂಲಕವೇ ನಡೆಯುತ್ತಿದೆ. ಇದೀಗ ಇಸ್ರೇಲ್‍ನಲ್ಲಿ ಹಮಾಸ್ ಬಂಡುಕೋರರ ಅಟ್ಟಹಾಸಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.

     

    View this post on Instagram

     

    A post shared by Madhura Naik ???? (@madhura.naik)

    ಹಿಂದಿ ಕಿರುತೆರೆ ನಟಿ ಮಧುರಾ ನಾಯ್ಕ್ (Madhura Naik) ಕುಟುಂಬಸ್ಥರನ್ನು ಇಸ್ರೇಲ್‍ನಲ್ಲಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ನಟಿ ಮಧುರಾ ನಾಯ್ಕ್ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಸಹೋದರಿ ಮತ್ತು ಆಕೆಯ ಪತಿಯನ್ನು ಹಮಾಸ್ (Hamas Terrorists) ಬಂಡೋಕೋರರು ಹತ್ಯೆ ಮಾಡಿದ್ದಾರೆ. ಮಕ್ಕಳ ಎದುರೇ ಅವರನ್ನು ಕೊಲ್ಲಲಾಗಿದೆ ಎಂದುನಟಿ ಮಧುರಾ ನಾಯಕ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಕಣ್ಣೀರಿಟ್ಟಿದ್ದಾರೆ.

    ಒಟ್ಟಿನಲ್ಲಿ ಒಂದು ಕಡೆ ಹಮಾಸ್ ನಿರಂತರ ರಾಕೆಟ್ ದಾಳಿ ನಡೆಸುತ್ತಿದ್ದರೆ ಮತ್ತೊಂದು ಕಡೆ ಇಸ್ರೇಲ್ ಯುದ್ಧ ವಿಮಾನಗಳ ಏರ್ ಸ್ಟೈಕ್ ಮಾಡುತ್ತಿದೆ. ಇಸ್ರೇಲ್‍ನ ಅಶ್ಕೆಲೋನ್ ಮೇಲೆ ಬುಧವಾರ ಹಮಾಸ್ ರಾಕೆಟ್ ದಾಳಿ ಮಾಡಿತ್ತು ಆದರೆ ಇಸ್ರೇಲ್‍ನ ಐರನ್ ಡೋಮ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಯಿಂದ ರಾಕೆಟ್‍ಗಳನ್ನು ತಡೆದು ಗಾಳಿಯಲ್ಲಿ ಅವುಗಳನ್ನು ನಾಶ ಮಾಡಲಾಗಿದೆ. ಇದನ್ನೂ ಓದಿ: ನನ್ನ ಮಗಳು ಬದುಕಿದ್ದಾಳೆ, ಆಕೆಯನ್ನು ರಕ್ಷಿಸಿ – ಅರೆಬೆತ್ತಲೆ ಮೆರವಣಿಗೆಯಾಗಿದ್ದ ಶಾನಿ ಲೌಕ್ ತಾಯಿ ಮನವಿ

    ಇಸ್ರೇಲ್‍ನಲ್ಲಿ ಮೂವರು ಕೆನಡಿಯನ್ನರು ಸಾವನ್ನಪ್ಪಿದ್ದಾರೆ ಮತ್ತು ಮೂವರು ನಾಪತ್ತೆಯಾಗಿದ್ದಾರೆ ಎಂದು ಕೆನಡಾದ ವಿದೇಶಾಂಗ ಸಚಿವ ಮೆಲಾನಿ ಜೋಲಿ ಹೇಳಿದ್ದಾರೆ. ಇಸ್ರೇಲ್, ಗಾಜಾ ಮತ್ತು ವೆಸ್ಟ್‍ಬ್ಯಾಂಕ್‍ನಲ್ಲಿ 4,700ಕ್ಕೂ ಹೆಚ್ಚು ಕೆನಡಾದ ನಾಗರಿಕರು ಮತ್ತು ಖಾಯಂ ನಿವಾಸಿಗಳು ಸರ್ಕಾರದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ ಆರು ಜನರ ಸಂಪರ್ಕ ಇಲ್ಲ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]