Tag: ಹಾಸ್ಯ ನಟ

  • ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ

    ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ

    – ಕಿಡ್ನಿ ಕಸಿಗೆ ಆರ್ಥಿಕ ಸಹಾಯ ಮಾಡಿದ್ದ ಪವನ್‌ ಕಲ್ಯಾಣ್

    ತೆಲುಗು ಚಿತ್ರರಂಗದಲ್ಲಿ ಖಳನಾಯಕನ ಪಾತ್ರದ ಜೊತೆಗೆ ಹಾಸ್ಯ ಕಲಾವಿದರಾಗಿ ಕಾಣಿಸಿಕೊಂಡಿದ್ದ ಫಿಶ್ ವೆಂಕಟ್‌ (Fish Venkat) ನಿನ್ನೆ (ಜುಲೈ 18) ರಾತ್ರಿ ನಿಧನರಾಗಿದ್ದಾರೆ. ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಫಿಶ್ ವೆಂಕಟೇಶ್ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

    ಫಿಶ್ ವೆಂಕಟೇಶ್ ಅವರ ಮೂಲಕ ಹೆಸರು ಮಂಗಳಂಪಲ್ಲಿ ವೇಂಕಟೇಶ್. ಚಿತ್ರರಂಗದಲ್ಲಿ ಫಿಶ್ ವೆಂಕಟೇಶ್ ಅಂತಲೇ ಫೇಮಸ್ ಆಗಿದ್ದವರು. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಹೊಂದಿದ್ದಾರೆ ಫಿಶ್ ವೆಂಕಟೇಶ್. ಇದನ್ನೂ ಓದಿ: ರಿಯಲ್ ಹೀರೋ ಅಕ್ಷಯ್‌ಕುಮಾರ್ ಮಾಡಿದ ಕಾರ್ಯ ಎಲ್ಲರಿಗೂ ಮಾದರಿ

    ಇತ್ತೀಚೆಗೆ ಆರೋಗ್ಯದ ಸ್ಥಿತಿ ಗಂಭೀರವಾದ ಹಿನ್ನೆಲೆ ಎರಡೂ ಕಿಡ್ನಿಯನ್ನ ಕಸಿ ಮಾಡಲು ವೈದ್ಯರು ಸಲಹೆಯನ್ನ ನೀಡಲಾಗಿ ಅದಕ್ಕಾಗಿ ನಟ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆರ್ಥಿಕ ನೆರವನ್ನ ನೀಡಿದ್ದರು. ಅಲ್ಲದೇ ವೆಂಕಟೇಶ್ ಕುಟುಂಬಸ್ಥರು ಮೂತ್ರಪಿಂಡ ದಾನಿಗಳ ಮೊರೆ ಹೋಗಿದ್ದರು. ಅಷ್ಟರಲ್ಲೇ ಫಿಶ್ ವೆಂಕಟೇಶ್ 53ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ನಟನ ಸಾವಿಗೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ.

    ಮಂಗಳಂಪಲ್ಲಿ ವೇಂಕಟೇಶ್ ಹೈದರಾಬಾದ್‌ನ ಮುಶೀರಾಬಾದ್ ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ಕಾರಣ ಅವರಿಗೆ ಫಿಶ್ ವೆಂಕಟೇಶ್ ಎಂದು ಹೆಸರು ಬಂದಿದೆ. ನಟ ಶ್ರೀಹರಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆದಿ, ದಿಲ್, ಬನ್ನಿ, ಅತ್ತಾರಿಂಟಿಕಿ ದಾರೇದಿ, ಡಿಜೆ ಟಿಲ್ಲು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ ಫಿಶ್ ವೆಂಕಟೇಶ್. ಇದನ್ನೂ ಓದಿ: ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ

  • ದರ್ಶನ್‌ಗೆ ಮಾದರಿಯಾದ ಸಂಜು ಬಸಯ್ಯ – ಪತ್ನಿಗೆ ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಬುದ್ಧಿ ಹೇಳಿದ ನಟ

    ದರ್ಶನ್‌ಗೆ ಮಾದರಿಯಾದ ಸಂಜು ಬಸಯ್ಯ – ಪತ್ನಿಗೆ ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಬುದ್ಧಿ ಹೇಳಿದ ನಟ

    ಬೆಳಗಾವಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡಿತ್ತು. ನಟಿ ಹಾಗೂ ದರ್ಶನ್ (Darshan) ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳಿಸಿದ್ದಕ್ಕೆ ದರ್ಶನ್ ಅಂಡ್ ಗ್ಯಾಂಗ್ ಭೀಕರವಾಗಿ ಹತ್ಯೆ ನಡೆಸಿದ ಆರೋಪ ಈಗಲೂ ಇದೆ. ಇದೇ ರೀತಿ ಪ್ರಕರಣವೊಂದು ಈಗ ಬೆಳಗಾವಿಯಲ್ಲಿ ನಡೆದಿದೆ. ಆದ್ರೆ ಪತ್ನಿಗೆ ಇನ್ಸ್ಟಾಗ್ರಾಮ್‌ ಅಶ್ಲೀಲವಾಗಿ ಮೆಸೇಜ್ ಕಳಿಸಿದ್ದ ಯುವಕನಿಗೆ ಬುದ್ಧಿ ಹೇಳಿ ಕಳುಹಿಸುವ ಮೂಲಕ ಹಾಸ್ಯನಟ ಸಂಜು ಬಸಯ್ಯ (Sanju Basayya) ದರ್ಶನ್‌ಗೆ ಮಾದರಿಯಾಗಿದ್ದಾರೆ.

    ಹೌದು, ಸಂಜು ಬಸಯ್ಯ ಅವರ ಪತ್ನಿ ನಟಿ ಪಲ್ಲವಿ ಸಂಜು ಬಸಯ್ಯ (Pallavi Sanju Basayya) ಅವರಿಗೆ ವಿಜಯನಗರ ಮೂಲದ ಮನೋಜ್ ಎಂಬ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವಕ ಇನ್ಸ್ಟಾಗ್ರಾಮ್‌ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ್ದ. ಇದನ್ನೂ ಓದಿ: ಕಿರುತೆರೆ ನಟಿ ಶ್ರುತಿಗೆ ಮನೆಯಲ್ಲೇ ಚಾಕು ಇರಿದು ಕೊಲೆಗೆ ಯತ್ನ, ಪತಿ ಅರೆಸ್ಟ್‌

    ಅಶ್ಲೀಲ ಮೆಸೇಜ್ ಜೊತೆಗೆ ಅಶ್ಲೀಲ ಫೋಟೊಗಳನ್ನೂ ಕಳಿಸಿದ್ದ. ಇದರಿಂದ ಸಂಯಮ ಕಳೆದುಕೊಳ್ಳದ ಸಂಜು ಬಸಯ್ಯ ಅವರು ಬೈಲಹೊಂಗಲ ಪೊಲೀಸ್ (Bailahongala Police) ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಅಶ್ಲೀಲ ಸಂದೇಶ ಕಳಿಸಿದ ಯುವಕನಿಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಇದನ್ನೂ ಓದಿ: ಗಾರೆ ಕೆಲಸದವನ ಜೊತೆ ಕಂಟ್ರ್ಯಾಕ್ಟರ್ ಮಗಳ ಲವ್ – ಮದ್ವೆಯಾದ 15 ದಿನಕ್ಕೆ ಓಡಿಬಂದ ಗೃಹಿಣಿ!

    ಯುವಕನ ಭವಿಷ್ಯ ಹಾಳಾಗಬಾರದೆಂದು ಸಂಜು ಬಸಯ್ಯ ಅವರು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಇಂತಹದೇ ಪ್ರಕರಣದಲ್ಲಿ ಸದ್ಯ ಬಂಧಿಯಾಗಿದ್ದ ನಟ ದರ್ಶನ್‌ಗೆ ಸಂಜು ಬಸಯ್ಯ ಮಾದರಿಯಾಗಿದ್ದಾರೆ. ಇದನ್ನೂ ಓದಿ: ರೀಲ್ಸ್‌ ಹುಚ್ಚಿನಿಂದ ಎಡವಟ್ಟು, ಸ್ಟಂಟ್‌ ಮಾಡ್ತಿದ್ದಾಗಲೇ 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು – ಎದೆ ಝಲ್ ಎನಿಸುವ ದೃಶ್ಯ ಸೆರೆ!

    ಇದೀಗ ಯುವಕ, ನಾನು ಬಹಳ ದಿವಸದಿಂದ ಇನ್‌ಸ್ಟಾಗ್ರಾಂ ಬಳಸುತ್ತಿದ್ದೆ. ಪಲ್ಲು ಸಂಜು ಅಫಿಷಿಯಲ್ ಖಾತೆಗೆ ಕೆಟ್ಟ ಕಾಮೆಂಟ್ ಹಾಗೂ ಅಶ್ಲೀಲ ವಿಡಿಯೋ ಕಳುಹಿಸಿದ್ದೆ. ಈ ಬಗ್ಗೆ ಸಂಜು ಬಸಯ್ಯ ಅವರು ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ನನ್ನನ್ನ ಕರೆಸಿ, ಶಿಕ್ಷೆ ಕೊಟ್ಟಿದ್ದಾರೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ನಾನು ಮಾಡಿದಂತೆ ಇನ್ಯಾರೂ ಈ ರೀತಿ ಮಾಡಬೇಡಿ. ಎಲ್ಲರಲ್ಲೂ ಕ್ಷಮೆ ಕೇಳ್ತೀನಿ ಎಂದು ತಪ್ಪೊಪ್ಪಿಕೊಂಡಿದ್ದಾನೆ.

  • ದರ್ಶನ್‌ ಗ್ಯಾಂಗ್‌ ಅಂದರ್‌ – ಹಾಸ್ಯ ನಟ ಚಿಕ್ಕಣ್ಣಗೆ ನೋಟಿಸ್‌

    ದರ್ಶನ್‌ ಗ್ಯಾಂಗ್‌ ಅಂದರ್‌ – ಹಾಸ್ಯ ನಟ ಚಿಕ್ಕಣ್ಣಗೆ ನೋಟಿಸ್‌

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ದರ್ಶನ್‌ (Darshan) ಗ್ಯಾಂಗ್‌ ಬಂಧನವಾದ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಸ್ಯಾಂಡಲ್‌ವುಡ್‌ (Sandalwood) ಖ್ಯಾತ ಹಾಸ್ಯನಟ ಚಿಕ್ಕಣ್ಣಗೆ (Chikkanna) ಪೊಲೀಸರು ನೋಟಿಸ್‌ ನೀಡಿದ್ದಾರೆ.

    ಹೌದು. ಕೊಲೆ ನಡೆದ ಜೂನ್‌ 8 ಶನಿವಾರದಂದು ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರು ಆರ್‌ಆರ್‌ ನಗರದ ಸ್ಟೋನಿಬ್ರೂಕ್‌ ಪಬ್‌ನಲ್ಲಿ ಮಧ್ಯಾಹ್ನದಿಂದ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಚಿಕ್ಕಣ್ಣ ಭಾಗಿಯಾಗಿದ್ದರು.  ಇದನ್ನೂ ಓದಿ: ಹಾಸನದಲ್ಲಿ ಕಾಣಿಸಿಕೊಂಡ ನೀಲಿ ತಾರೆ- ಶೂಟಿಂಗ್‌ನಲ್ಲಿ ಸನ್ನಿ ಲಿಯೋನ್ ಭಾಗಿ

     

    ಸಂಜೆ ವೇಳೆಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ದರ್ಶನ್ ಹೊರಟಿದ್ದರು. ರೇಣುಕಾಸ್ವಾಮಿ ಕೊಲೆಯಾದ ದಿನವೇ ದರ್ಶನ್‌ ಜೊತೆ ಪಾರ್ಟಿ ಮಾಡಿದ್ದರಿಂದ ಪೊಲೀಸರು ಈಗ ತುರ್ತು ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

    ಕೊಲೆ ವಿಚಾರವಾಗಿ ಪಬ್‌ನಲ್ಲಿ ಏನಾದರೂ ಚರ್ಚೆ ನಡೆದಿತ್ತಾ ಎಂಬುದರ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಈಗ ನೋಟಿಸ್ ಕೊಟ್ಟು ಕರೆಸಬೇಕೇ? ಬೇಡವೇ ಎಂಬುದರ ಬಗ್ಗೆ ಪೊಲೀಸರು ಹಿರಿಯ ಅಧಿಕಾರಿಗಳ ಸಲಹೆ ಕೇಳಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

     

    ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದ ಕಾರಣ ಚಿಕ್ಕಣ್ಣ ಅವರನ್ನು ಬಂಧನ ಮಾಡುವುದಿಲ್ಲ. ಬದಲಾಗಿ ಸಾಕ್ಷಿಯನ್ನಾಗಿ ಪರಿಗಣಿಸಲಿದ್ದಾರೆ. ಕೊಲೆಯ ಬಗ್ಗೆ ಮಾಹಿತಿ ಇಲ್ಲದೇ ಇದ್ದರೂ ಕೂಡ, ಪಾರ್ಟಿಯಲ್ಲಿದ್ದ ಎಂಬ ಕಾರಣಕ್ಕೆ ಸಾಕ್ಷಿಯಾಗಿ ಪರಿಗಣನೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

  • ದರ್ಶನ್‌ ಗ್ಯಾಂಗ್‌ ಅಂದರ್‌ – ಖ್ಯಾತ ಹಾಸ್ಯ ನಟನ ಎದೆಯಲ್ಲಿ ಢವಢವ!

    ದರ್ಶನ್‌ ಗ್ಯಾಂಗ್‌ ಅಂದರ್‌ – ಖ್ಯಾತ ಹಾಸ್ಯ ನಟನ ಎದೆಯಲ್ಲಿ ಢವಢವ!

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ದರ್ಶನ್‌ (Darshan) ಗ್ಯಾಂಗ್‌ ಬಂಧನವಾದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ (Sandalwood) ಖ್ಯಾತ ಹಾಸ್ಯನಟನಿಗೂ ಪೊಲೀಸರು ನೋಟಿಸ್‌ ನೀಡುವ ಸಾಧ್ಯತೆಯಿದೆ.

    ಹೌದು. ಕೊಲೆ ನಡೆದ ಜೂನ್‌ 8 ಶನಿವಾರದಂದು ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರು ಆರ್‌ಆರ್‌ ನಗರದ ಸ್ಟೋನಿಬ್ರೂಕ್‌ ಪಬ್‌ನಲ್ಲಿ ಮಧ್ಯಾಹ್ನದಿಂದ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯ ನಟ (Comedy Actor) ಭಾಗಿಯಾಗಿದ್ದ.

     

    ಸಂಜೆ ವೇಳೆಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ದರ್ಶನ್ ಹೊರಟಿದ್ದರು. ರೇಣುಕಾಸ್ವಾಮಿ ಕೊಲೆಯಾದ ದಿನವೇ ದರ್ಶನ್‌ ಜೊತೆ ಪಾರ್ಟಿ ಮಾಡಿದ್ದರಿಂದ ಪೊಲೀಸರು ಯಾವುದೇ ಕ್ಷಣದಲ್ಲಿ ನಟನನ್ನು ಸಂಪರ್ಕಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ದರ್ಶನ್‌ಗೂ ಆರೋಪಿಗೂ ಸಂಬಂಧವೇ ಇಲ್ಲ – ಸ್ನೇಹಿತನ ಮಾತು ಕೇಳಿ ಶೆಡ್‌ನಲ್ಲಿ ಎಲೆಕ್ಟ್ರಿಕ್‌ ಶಾಕ್‌ ನೀಡಿ ಸಿಕ್ಕಿಬಿದ್ದ

    ಈಗ ಆ ಖ್ಯಾತ ಹಾಸ್ಯ ನಟನಿಗೆ ನೋಟಿಸ್ ಕೊಡುವ ಚಿಂತನೆಯಲ್ಲಿ ಪೊಲೀಸರಿದ್ದಾರೆ. ಕೊಲೆ ವಿಚಾರವಾಗಿ ಪಬ್‌ನಲ್ಲಿ ಏನಾದರೂ ಚರ್ಚೆ ನಡೆದಿತ್ತಾ ಎಂಬುದರ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಈಗ ನೋಟಿಸ್ ಕೊಟ್ಟು ಕರೆಸಬೇಕೇ? ಬೇಡವೇ ಎಂಬುದರ ಬಗ್ಗೆ ಪೊಲೀಸರು ಹಿರಿಯ ಅಧಿಕಾರಿಗಳ ಸಲಹೆ ಕೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

     

    ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದ ಕಾರಣ ಹಾಸ್ಯ ನಟನನ್ನು ಬಂಧಿಸುವುದಿಲ್ಲ. ಬದಲಾಗಿ ಸಾಕ್ಷಿಯನ್ನಾಗಿ ಪರಿಗಣಿಸಲಿದ್ದಾರೆ. ಕೊಲೆಯ ಬಗ್ಗೆ ಮಾಹಿತಿ ಇಲ್ಲದೇ ಇದ್ದರೂ ಕೂಡ ಪಾರ್ಟಿಯಲ್ಲಿದ್ದ ಎಂಬ ಕಾರಣಕ್ಕೆ ಸಾಕ್ಷಿಯಾಗಿ ಪರಿಗಣನೆ ಮಾಡಲು ಪೊಲೀಸರು ಮುಂದಾಗಲಿದ್ದಾರೆ. ಹೀಗಾಗಿ ಹಾಸ್ಯ ನಟನಿಗೆ ನೋಟಿಸ್ ನೀಡಿ ಪೊಲೀಸರು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.

  • ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ಚೆನ್ನೈ: ತಮಿಳಿನ (Tamil) ಖ್ಯಾತ ಹಾಸ್ಯ ನಟ (Comedian) ಆರ್ ಮಯಿಲ್‌ಸಾಮಿ (Mayilsamy) (57) ಅವರು ಭಾನುವಾರ ಮುಂಜಾನೆ ಹಠಾತ್ತನೆ ನಿಧನ ಹೊಂದಿದ್ದಾರೆ.

    ವರದಿಗಳ ಪ್ರಕಾರ ಮಯಿಲ್‌ಸಾಮಿ ಅವರಿಗೆ ಶನಿವಾರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಅವರನ್ನು ಕುಟುಂಬಸ್ಥರು ಪೋರೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದಿದ್ದು, ಬಳಿಕ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇದನ್ನೂ ಓದಿ: ನಟ ನಂದಮೂರಿ ತಾರಕ ರತ್ನ ಇನ್ನಿಲ್ಲ

    ಮಯಿಲ್‌ಸಾಮಿ ಅವರು ಹಲವಾರು ತಮಿಳು ಚಲನಚಿತ್ರಗಳಲ್ಲಿ ಹಾಸ್ಯ ಮತ್ತು ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅವರು ಸ್ಟ್ಯಾಂಡ್ ಅಪ್ ಹಾಸ್ಯನಟ, ನಿರೂಪಕ, ರಂಗಭೂಮಿ ಕಲಾವಿದರಾಗಿಯೂ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.

    ಹಾಸ್ಯ ಕಾರ್ಯಕ್ರಮವೊಂದರ ನಿರೂಪಕ ಹಾಗೂ ತೀರ್ಪುಗಾರರಾಗಿ ಮೊದಲ ಬಾರಿಗೆ ಅವರು ದೂರದರ್ಶನಗಳಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 1984ಲ್ಲಿ ಬಿಡುಗಡೆಯಾದ ನಿರ್ಮಾಪಕ ಹಾಗೂ ನಟ ಕೆ ಭಾಗ್ಯರಾಜ್ ಅವರ ಚಿತ್ರ ಧವನಿ ಕನವುಗಲ್ ಮೂಲಕ ಹಾಸ್ಯ ನಟರಾಗಿ ತಮಿಳು ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದನ್ನೂ ಓದಿ: ಅಂಗಾಂಗ ದಾನ ಮಾಡಿದ ಅಭಿಮಾನಿ ಕುಟುಂಬಕ್ಕೆ ಧ್ರುವ ಸರ್ಜಾ ನೆರವು

    ಇದೀಗ ಮಯಿಲ್‌ಸಾಮಿ ಹಠಾತ್ ನಿಧನಕ್ಕೆ ತಮಿಳು ಚಿತ್ರರಂಗ ಸೇರಿದಂತೆ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನ್ನಡ ಚಿತ್ರರಂಗದ ಹಿರಿಯ ನಟ ಮನದೀಪ್ ರಾಯ್ ನಿಧನ

    ಕನ್ನಡ ಚಿತ್ರರಂಗದ ಹಿರಿಯ ನಟ ಮನದೀಪ್ ರಾಯ್ ನಿಧನ

    ಕನ್ನಡ ಚಿತ್ರರಂಗದಲ್ಲಿ (Kannada Film Industry) 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಹಾಸ್ಯ ನಟ ಮನದೀಪ್ ರಾಯ್ (Mandeep Roy) (74) ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

    ಇತ್ತೀಚೆಗೆ ಹೃದಯಾಘಾತವಾಗಿ (Heart Attack) ಆಸ್ಪತ್ರೆ ಸೇರಿದ್ದ ಮನದೀಪ್‌ ರಾಯ್‌ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಚೇತರಿಕೆ ಬಳಿಕ ಮನೆಗೆ ವಾಪಸ್‌ ಆಗಿದ್ದ ಅವರು ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ: 
    1949ರಲ್ಲಿ ಜನಿಸಿದ ಮನದೀಪ್‌ ರಾಯ್‌ ಹಲವು ದಶಕಗಳಿಂದ ಹಾಸ್ಯ ಕಲಾವಿದರಾಗಿ ರಂಜಿಸಿದ್ದಾರೆ. ಅನಂತ್ ನಾಗ್ ಹಾಗೂ ಶಂಕರ್ ನಾಗ್ ಜೊತೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು ಇವರು. ಬೆಳದಿಂಗಳ ಬಾಲೆ, ಆಪ್ತರಕ್ಷಕ, ಪುಷ್ಪಕ ವಿಮಾನ, ಮಿಂಚಿನ ಓಟ , ಬೆಂಕಿಯ ಬಲೆ, ಆಕಸ್ಮಿಕ, ಏಳು ಸುತ್ತಿನ ಕೋಟೆ, ಆಸೆಗೊಬ್ಬ ಮೀಸೆಗೊಬ್ಬ, ಆಪ್ತ ರಕ್ಷಕ , ಆಂಟಿ ಪ್ರೀತ್ಸೆ , ಪ್ರೀತ್ಸೋದ್ ತಪ್ಪಾ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಡಾ.ರಾಜ್ ಕುಮಾರ್ ಅವರಿಂದ ಹಿಡಿದು ಹೊಸ ಕಿರಿಯ ಕಲಾವಿದರೊಂದಿಗೆ ಎಲ್ಲಾ ದಿಗ್ಗಜರ ಜೊತೆಯೂ ನಟಿಸಿರುವ ಹೆಗ್ಗಳಿಕೆ ಇವರದ್ದು.

    ಸ್ಯಾಂಡಲ್‌ವುಡ್‌ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ರಂಗಭೂಮಿ ಕಲಾವಿದರೂ ಆಗಿದ್ದ ಮನದೀಪ್‌ ರಾಯ್‌ ಪೋಷಕ ಪಾತ್ರದಲ್ಲಿ ಖ್ಯಾತಿ ಪಡೆದಿದ್ದರು. ಇದನ್ನೂ ಓದಿ: 

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಸ್ಯ ನಟ ರಾಜು ತಾಳಿಕೋಟೆಗೆ ಜೀವ ಬೆದರಿಕೆ

    ಹಾಸ್ಯ ನಟ ರಾಜು ತಾಳಿಕೋಟೆಗೆ ಜೀವ ಬೆದರಿಕೆ

    ವಿಜಯಪುರ: ಹಾಸ್ಯ ನಟ ರಾಜು ತಾಳಿಕೋಟೆ ಮೇಲೆ ಮಾರಾಣಾಂತಿಕ ಹಲ್ಲೆ ಜೊತೆಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಸದ್ಯ ರಾಜು ತಾಳಿಕೋಟಿ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಅತ್ತ ರಾಜು ತಾಳಿಕೋಟೆ ಅಕ್ಕನ ಮಗನ ಹೆಂಡತಿ ಸನಾಗೆ ರಾಜು ತಾಳಿಕೋಟಿ ವಿಷ ಕುಡಿಸಿರುವುದಾಗಿ ಆರೋಪಿಸಿ ಸನಾ ದೂರು ದಾಖಲಿಸಿದ್ದಾರೆ. ಇತ್ತ ರಾಜು ತಾಳಿಕೋಟೆ ಕೂಡ ಶೇಖ್ ಮೋದಿ,ಸನಾ ಸೇರಿದಂತೆ ಸನಾ ತಂದೆ,ತಾಯಿ ಮೇಲೆ ದೂರು ದಾಖಲಿಸಿದ್ದಾರೆ.

    ಸನಾಳ ಅಕ್ಕನ ಗಂಡ ಶೇಖ್ ಮೋದಿ ಜೊತೆ ಸನಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಅದರ ಹಿನ್ನೆಲೆ ನನ್ನ ಅಳಿಯ ಫಯಾಜ ಪರವಾಗಿ ಕೌಟುಂಬಿಕ ಕಲಹ ಬಗೆಹರಿಸಲು ಹೋದಾಗ ಈ ರೀತಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದಾರೆಂದು ರಾಜು ತಾಳಿಕೋಟೆ ತಮ್ಮ ಮೇಲೆ ಸನಾ ಕುಟುಂಬಸ್ಥರು ಮಾಡಿದ ಆರೋಪವನ್ನ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

    ರಾಜು ತಾಳಿಕೋಟೆ ಅವರ ಅಕ್ಕನ ಮಗ ಫಯಾಜ್ ಹೆಂಡತಿ ಸನಾ ಕೂಡ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದು, ರಾಜು ತಾಳಿಕೋಟೆ, ಗಂಡ ಫಯಾಜ್ ಸೇರಿದಂತೆ ಹಲವರು ನನ್ನ ಮೇಲೆ ಹಲ್ಲೆಗೈದಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದಾಳೆ. ಪತಿಬಫಯಾಜ್ ಅನೈತಿಕ ಸಂಬಂಧ ಹೊಂದಿದ್ದಾನೆ. ಅದನ್ನ ಪ್ರಶ್ನಿಸಿದ್ದಕ್ಕೆ ನನಗೆ ಈ ಶಿಕ್ಷೆ ಎಂದು ದೂರಿದ್ದಾರೆ.

    ಸದ್ಯ ಎರಡು ಕಡೆಯಿಂದ ದೂರು ದಾಖಲಾಗಿದ್ದು, ಪೊಲೀಸರ ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ.

  • ಬೆಟ್ಟದ ಹೂವು ಖ್ಯಾತಿಯ ನಟ ಶಂಖನಾದ ಅರವಿಂದ್ ಕೊರೊನಾ ವೈರಸ್‍ಗೆ ಬಲಿ

    ಬೆಟ್ಟದ ಹೂವು ಖ್ಯಾತಿಯ ನಟ ಶಂಖನಾದ ಅರವಿಂದ್ ಕೊರೊನಾ ವೈರಸ್‍ಗೆ ಬಲಿ

    ಬೆಂಗಳೂರು: ಬೆಟ್ಟದ ಹೂವು ಖ್ಯಾತಿಯ ನಟ ಶಂಖನಾದ ಅರವಿಂದ್ ಅವರಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇಂದು ಮೃತಪಟ್ಟಿದ್ದಾರೆ.

    ಶಂಖನಾದ ಅರವಿಂದ್ (70) ಕೊರೊನಾ ಸೋಂಕು ತಗುಲಿತ್ತು. ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಇಂದು ಕೊನೆಯುಸಿರೆಳೆದಿದ್ದಾರೆ.

    ಜನವರಿ 23ರಂದು ಅರವಿಂದ್ ಪತ್ನಿ ರಮಾ ಕೂಡ ಉಸಿರಾಟದ ತೊಂದರೆಯಿಂದ ಕೊನೆಯುಸಿರೆಳೆದ್ದರು. ರಮಾ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಈ ಹಾಸ್ಯ ನಟ ಮೂರು ಮಕ್ಕಳನ್ನು ಅಗಲಿದ್ದಾರೆ.

    70-80ರ ದಶಕದಲ್ಲಿ ಅರವಿಂದ್ ಬಹು ಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ಕಾಶಿನಾಥ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಇತ್ತೀಚಿಗೆ ಕನ್ನಡದ ಕೆಲವೊಂದು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು. ಕನ್ನಡ ಚಿತ್ರರಂಗ ಇಂದು ಅರವಿಂದ್ ಅವರನ್ನು ಕಳೆದುಕೊಂಡಿದೆ. ಅರವಿಂದ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.

  • ತಮಿಳಿನ ಹಾಸ್ಯ ನಟ ಪಾಂಡು ಕೊರೊನಾಗೆ ಬಲಿ

    ತಮಿಳಿನ ಹಾಸ್ಯ ನಟ ಪಾಂಡು ಕೊರೊನಾಗೆ ಬಲಿ

    ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ಹಾಸ್ಯ ನಟ ಪಾಂಡು ಕೊರೊನಾದಿಂದಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

    ಪಾಂಡು ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೆಲ ದಿನಗಳ ಹಿಂದೆ ಪಾಂಡು ಮತ್ತು ಪತ್ನಿ ಕುಮುದಾ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಬಳಿಕ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ ಎಂದು ವರದಿಯಾಗಿದೆ.

    ಪಾಂಡು ಅವರು ತಮಿಳಿನಲ್ಲಿ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ಆದರೆ ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಇವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಪತ್ನಿ ಕುಮುದಾ ಅವರು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಕೊರೊನಾಗೆ ಬಲಿಯಾಗಿದ್ದರು. ಆ ಬಳಿಕ ಇದೀಗ ಪಾಂಡು  ಮೃತಪಟ್ಟಿದ್ದಾರೆ. ಇದರಿಂದ ತಮಿಳು ಚಿತ್ರರಂಗಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.

  • ರಾಜಕೀಯ ಕನಸು ಕಂಡಿದ್ದ ಬುಲೆಟ್ ಪ್ರಕಾಶ್: ರಂಗಾಯಣ ರಘು

    ರಾಜಕೀಯ ಕನಸು ಕಂಡಿದ್ದ ಬುಲೆಟ್ ಪ್ರಕಾಶ್: ರಂಗಾಯಣ ರಘು

    – ಪ್ರಕಾಶ್‍ಗೆ ಸ್ನೇಹ ಸಾಗರವೇ ಇದೆ

    ಬೆಂಗಳೂರು: ಗೆಳೆಯ ಬುಲೆಟ್ ಪ್ರಕಾಶ್ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ನೋವು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ದೇವರು ನೀಡಲಿ ಎಂದು ಹಾಸ್ಯ ನಟ ರಂಗಾಯಣ ರಘು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ನಾನು ಹಾಗೂ ಬುಲೆಟ್ ಪ್ರಕಾಶ್ ಹೋಗೋ ಬಾರೋ ಫ್ರೆಂಡ್ಸ್. ಅವರಿಗೆ ನಾನಷ್ಟೇ ಅಲ್ಲ ದೊಡ್ಡ ಸಂಖ್ಯೆಯ ಸ್ನೇಹ ಬಳಗವೇ ಇದೆ. ಪ್ರಕಾಶ್ ಅವರ ಏರಿಯಾದಲ್ಲಿ ಅನೇಕ ಸ್ನೇಹಿತರಿದ್ದಾರೆ. ಎಲ್ಲರೊಂದಿಗೂ ಹಾಸ್ಯವಾಗಿ, ನಗು ಮುಖದಿಂದ ಇರುತ್ತಿದ್ದರು. ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದ ಎಂದು ನೆನೆದರು.

    ನೇರ ನುಡಿಯ ಗೆಳೆಯ ಪ್ರಕಾಶ್ ರಾಜಕೀಯ ಕನಸು ಕಂಡಿದ್ದ. ಅದರಂತೆ ಸಿದ್ಧತೆ ಕೂಡ ನಡೆಸಿದ್ದ. ಆದರೆ ಪ್ರಕಾಶ್ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನ್ನ ಅಗಲಿದ್ದು ಭಾರೀ ನೋವು ತಂದಿದೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ ಎಂದು ರಂಗಾಯಣ ರಘು ಹೇಳಿದರು.