Tag: ಹಾಸ್ಯ ಕಲಾವಿದ

  • ರಾಕೇಶ್‌ ಪೂಜಾರಿ ನಿವಾಸಕ್ಕೆ ರಿಷಬ್‌ ಶೆಟ್ಟಿ ದಂಪತಿ ಭೇಟಿ – ತಾಯಿ, ತಂಗಿಗೆ ಸಾಂತ್ವನ ಹೇಳಿದ ನಟ

    ರಾಕೇಶ್‌ ಪೂಜಾರಿ ನಿವಾಸಕ್ಕೆ ರಿಷಬ್‌ ಶೆಟ್ಟಿ ದಂಪತಿ ಭೇಟಿ – ತಾಯಿ, ತಂಗಿಗೆ ಸಾಂತ್ವನ ಹೇಳಿದ ನಟ

    ಇತ್ತೀಚೆಗಷ್ಟೇ ನಿಧನರಾದ ʻಕಾಮಿಡಿ ಕಿಲಾಡಿʼ ಸೀಸನ್‌ 3 ವಿನ್ನರ್‌, ಕನ್ನಡದ ಕಿರುತೆರೆಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ (Rakesh Poojary) ಅವರ ನಿವಾಸಕ್ಕೆ ಡಿವೈನ್‌ ನಟ ರಿಷಭ್‌ ಶೆಟ್ಟಿ ದಂಪತಿ ಭೇಟಿ ನೀಡಿದ್ದಾರೆ.

    ರಿಷಬ್ ಶೆಟ್ಟಿ ಹಾಗೂ ಪ್ರಗತಿ ರಿಷಬ್ ಶೆಟ್ಟಿ ಅವರು ಇಂದು ನೀಡಿ ರಾಕೇಶ್ ಅವರ ತಾಯಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ರಾಕೇಶ್‌ ತಂಗಿ ಮದುವೆಗೂ ಆರ್ಥಿಕ ಸಹಾಯ ಮಾಡಿದ್ದಾರೆ. ಮುಂದಿನ ದಿನದಲ್ಲಿ ನಿರ್ಮಾಣವಾಗುವ ರಾಕೇಶ್‌ನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಸದಾಕಾಲ ಕುಟುಂಬದೊಂದಿಗೆ ನಾನಿದ್ದೇನೆ ಎನ್ನುವ ಭರವಸೆಯನ್ನೂ ರಿಷಭ್‌ ಶೆಟ್ಟಿ ನೀಡಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್‌ಗೆ ಕನ್ನಡದ ಪುಸ್ತಕ ನೀಡಿದ ರಂಜನಿ ರಾಘವನ್

    ರಾಕೇಶ್‌ಗೆ ಏನಾಗಿತ್ತು?
    ಉಡುಪಿ ಮೂಲದ ಜನಪ್ರಿಯ ಕಲಾವಿದ, ಕಿರುತೆರೆ, ಸಿನಿಮಾ ಲಭ್ಯ ಲೋಕದಲ್ಲಿ ಅಪಾರ ಖ್ಯಾತಿ ಗಳಿಸಿದ್ದ 34 ವರ್ಷದ ರಾಕೇಶ್ ಪೂಜಾರಿ ಕಳೆದ ಮೇ 12ರ ಬೆಳಗ್ಗಿನ ಜಾವ 3:30ರ ವೇಳೆಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಸಾವಿಗೂ ಮುನ್ನ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡಿದ್ದರು. ಕಾಂತಾರ ಪ್ರಿಕ್ವೆಲ್ ಶೂಟಿಂಗ್‌ ಮುಗಿದ ಬಳಿಕ ರಾಕೇಶ್, ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಸ್ನೇಹಿತರ ಜೊತೆ ಇದ್ದಾಗ ಹೃದಯಘಾತ ಸಂಭವಿಸಿ ನಿಧನ ಹೊಂದಿದ್ದರು. ಇದನ್ನೂ ಓದಿ: ʻಥಗ್‌ ಲೈಫ್‌ʼ ಸಿನಿಮಾಗೆ ಬ್ಯಾನ್‌ ಬಿಸಿ – ಹೈಕೋರ್ಟ್ ಮೆಟ್ಟಿಲೇರಿದ ಕಮಲ್ ಹಾಸನ್

    ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ಮುಗಿಸಿಕೊಟ್ಟಿದ್ದ ರಾಕೇಶ್:
    ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಕೇಶ್ ಪೂಜಾರಿ ಕಿರುತೆರೆಯಲ್ಲಿ ಅಲ್ಲದೇ ಹಿರಿತೆರೆಯಲ್ಲಿಯೂ ಆಕ್ಟೀವ್ ಆಗಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ರಲ್ಲಿ (Kantara Chapter 1) ರಾಕೇಶ್ ನಟಿಸಿದ್ದು, ತಮ್ಮ ಪಾತ್ರದ ಶೂಟಿಂಗ್ ಕೂಡ ಮುಗಿಸಿ ಕೊಟ್ಟಿದ್ದರು. ಇದನ್ನೂ ಓದಿ: ನಿರ್ಮಾಪಕರಿಗೆ ಕತೆ ಹೇಳಿ ವಾಪಸ್ ಆಗುತ್ತಿದ್ದಾಗ ಹೃದಯಾಘಾತ – ತಮಿಳು ನಿರ್ದೇಶಕ ವಿಕ್ರಂ ಸುಗುಮಾರನ್ ನಿಧನ

  • ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್‌ ಪೂಜಾರಿ ನಿಧನ

    ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್‌ ಪೂಜಾರಿ ನಿಧನ

    ʻಕಾಮಿಡಿ ಕಿಲಾಡಿʼ ಸೀಸನ್‌ 3 ವಿನ್ನರ್‌, ಕನ್ನಡದ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜನಪ್ರಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ (Rakesh Poojary) ನಿಧನರಾಗಿದ್ದಾರೆ.

    ಉಡುಪಿ ಮೂಲದ ಜನಪ್ರಿಯ ಕಲಾವಿದ, ಕಿರುತೆರೆ, ಸಿನಿಮಾ ಲಭ್ಯ ಲೋಕದಲ್ಲಿ ಅಪಾರ ಖ್ಯಾತಿ ಗಳಿಸಿದ್ದ 34 ವರ್ಷದ ರಾಕೇಶ್ ಪೂಜಾರಿ ಸೋಮವಾರ ಬೆಳಗ್ಗಿನ ಜಾವ 3:30ರ ವೇಳೆಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್

    ಕಳೆದ ರಾತ್ರಿ ಅವರು ಉಡುಪಿ ಜಿಲ್ಲೆಯ ಕಾರ್ಕಳದ ನಿಟ್ಟೆ ಸಮೀಪದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಡ್ಯಾನ್ಸ್ ಮಾಡಿದ್ದರು. ನಿನ್ನೆಯಷ್ಟೇ ಕಾಂತಾರ ಪ್ರಿಕ್ವೆಲ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ರಾಕೇಶ್, ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಸ್ನೇಹಿತರ ಜೊತೆ ಇದ್ದಾಗ ಹೃದಯಘಾತ ಸಂಭವಿಸಿದೆ. ಲೋ ಬಿಪಿಯಿಂದ ಸಹ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ತಿಳಿದುಬಂದಿದೆ.

    ಸುಸ್ತು ಅಂತ ಸ್ನೇಹಿತರ ಬಳಿ ಹೇಳಿದಾಗ ತಕ್ಷಣ ರಾಕೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ನಿಧನರಾದರು. ಇದನ್ನೂ ಓದಿ: ಫೈರ್ ಬ್ರ್ಯಾಂಡ್‌ ಚೈತ್ರಾ ಮನೆಗೆ ಮಂಜು ಭೇಟಿ- ನವಜೋಡಿಗೆ ವಿಶೇಷ ಉಡುಗೊರೆ ಕೊಟ್ಟ ನಟ

    ರಾಕೇಶ್, ಕೊನೆಯದಾಗಿ ದಸ್ತಕ್ ಸಿನಿಮಾದ ಪ್ರೀಮಿಯರ್ ಶೋ ನಲ್ಲಿ ಭಾಗಿಯಾಗಿದ್ರು. ಅಲ್ಲದೇ ಇತ್ತಿಚೆಗಷ್ಟೇ ಆಕ್ಸಿಡೆಂಟ್ ಆಗಿತ್ತು, ಹೆಲ್ತ್ ಇಶ್ಯೂ ಇರಲಿಲ್ಲ ಎಂದು ತಿಳಿದುಬಂದಿದೆ. ಸದ್ಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

    ರಾಕೇಶ್‌ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ನಟಿ ರಕ್ಷಿತಾ ಪ್ರೇಮ್ ಇನ್‌ಸ್ಟಾದಲ್ಲಿ ವಿಶೇಷ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಗಾಯಕ ವಾಸುಕಿ ವೈಭವ್ ದಂಪತಿ

    ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು ಸೀಸನ್ -3’ ರ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿದ್ದ ಉಡುಪಿ ನಿವಾಸಿ ರಾಕೇಶ್,ಹೂಡೆ ನಿವಾಸಿಗಳಾದ ದಿನಕರ್ ಪೂಜಾರಿ ಮತ್ತು ಶಾಂಭವಿ ದಂಪತಿಗಳ ಪುತ್ರ. ರಾಕೇಶ್ ತಮ್ಮ ಶಾಲಾ ಶಿಕ್ಷಣವನ್ನ ಕೆಮ್ಮಣ್ಣು ಕಾರ್ಮೆಲ್ ಹೈಸ್ಕೂಲ್ ಮತ್ತು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಪಡೆದರು.ಅಷ್ಟೇ ಅಲ್ಲ ಪೈಲ್ವಾನ್, ಇದು ಎಂತ ಲೋಕವಯ್ಯ ಕನ್ನಡ ಸಿನಿಮಾ, ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳು ನಾಟಕಗಳು, ಪ್ರಹಸನಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ.

  • ನಿನ್ನ ಬಳಿ ದುಡ್ಡಿಲ್ಲ ಎಂದು ಮಜಾ ಭಾರತದ ಕಲಾವಿದನಿಗೆ ಕೈ ಕೊಟ್ಟ ಪತ್ನಿ

    ನಿನ್ನ ಬಳಿ ದುಡ್ಡಿಲ್ಲ ಎಂದು ಮಜಾ ಭಾರತದ ಕಲಾವಿದನಿಗೆ ಕೈ ಕೊಟ್ಟ ಪತ್ನಿ

    ಮಂಡ್ಯ: ನಿನ್ನ ಬಳಿ ದುಡ್ಡಿಲ್ಲ ಎಂದು ಹಾಸ್ಯ ಕಲಾವಿದನಿಗೆ ಪತ್ನಿ ಕೈ ಕೊಟ್ಟು ಬೇರೊಬ್ಬನೊಂದಿಗೆ ಮದುವೆಯಾಗಿರುವ ಪ್ರಸಂಗವೊಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳಸಿದ್ದನಹುಂಡಿಯಲ್ಲಿ ನಡೆದಿದೆ.

    ಕೊರೊನಾ ಕಾರಣದಿಂದ ಹಲವಾರು ಜನ ದುಡ್ಡಿಲ್ಲದೆ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ನಟನೆಯೇ ಜೀವನವೆಂದು ಬದುಕುತ್ತಿರುವ ಕಲಾವಿದರು ತಮ್ಮ ದಿನನಿತ್ಯದ ಜೀವನ ಸಾಗಿಸಲು ತುಂಬಾ ಕಷ್ಟ ಪಡುತ್ತಿದ್ದಾರೆ. ಮಜಾಭಾರತ ಕಾಮಿಡಿ ಶೋ ಹಾಸ್ಯ ಕಲಾವಿದ ಕಾಳಸಿದ್ದನಹುಂಡಿಯ ರವಿ ಅವರು, ಸಣ್ಣ-ಪುಟ್ಟ ಸೀರಿಯಲ್‍ಗಳಲ್ಲಿ ನಟಿಸುತ್ತಿದ್ದರು. ಅವರು 4 ವರ್ಷದ ಹಿಂದೆ ಮೈಸೂರು ಮೂಲದ ಬೇಬಿ ಎಂಬಾಕೆಯನ್ನು ಪ್ರೀತಿಸಿ, ಮನೆಯವರ ವಿರೋಧವಿದ್ದರೂ ಮದುವೆಯಾಗಿದ್ದರು. ಆ ಬಳಿಕ ಕೊರೊನಾ ಕಷ್ಟಕಾಲದಲ್ಲಿ ರವಿ ಅವರಿಗೆ ಎಲ್ಲಿಯೂ ಸಹ ಅವಕಾಶಗಳು ಸಿಗದೆ ಕಷ್ಟದ ಜೀವನ ನಡೆಸುತ್ತಿದ್ದರು. ಇದನ್ನೂ ಓದಿ: ಕಿಚ್ಚನ ಹೊಸ ಹೇರ್ ಸ್ಟೈಲ್‍ಗೆ ಫ್ಯಾನ್ಸ್ ಫಿದಾ

    ಈ ಹಿನ್ನೆಲೆ ಪತ್ನಿ ಬೇಬಿ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದರು. ಇದು ರವಿ ಅವರಿಗೆ ತಿಳಿದು ಪ್ರಶ್ನಿಸಿದ್ದಾರೆ. ಬಳಿಕ ನಿನ್ನ ಬಳಿ ದುಡ್ಡಿಲ್ಲ ಎಂದು ಬೇಬಿ ಕಾರಣ ಕೊಟ್ಟು ರವಿ ಅವರನ್ನು ಬಿಟ್ಟು ಹೋಗಿದ್ದಾರೆ. ಅಲ್ಲದೇ ದೂರವಾದ ಬಳಿಕ ಮತ್ತೊಂದು ಮದುವೆಯನ್ನು ಮಾಡಿಕೊಂಡಿದ್ದಾರೆ. ಇದನ್ನು ತಡೆಯಲು ಹೋಗಿದ್ದ ರವಿ ಮೇಲೆ ಬೇಬಿ ಅವರ ಎರಡನೇ ಗಂಡ ಹಾಗೂ ಆಕೆ ತಮ್ಮನಿಂದ ಹಲ್ಲೆ ನಡೆದಿದ್ದು, ಈ ಕುರಿತು ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ವಿಭಿನ್ನವಾಗಿ ರಕ್ಷಾ ಬಂಧನ ಆಚರಿಸಿದ ಸೆಲೆಬ್ರಿಟಿಗಳು

    ರವಿ ಮತ್ತು ಬೇಬಿ 4 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ರಿಜಿಸ್ಟರ್ ಮ್ಯಾರೇಜ್ ಆಗಿದ್ರು. ಇವರು ಮೈಸೂರಿನಲ್ಲಿ 4 ವರ್ಷ ಬಾಡಿಗೆ ಮನೆಯಲ್ಲಿ ಸಂಸಾರ ಮಾಡಿದ್ದರು. ಅದು ಅಲ್ಲದೇ ಖಾಸಗಿ ವಾಹಿನಿಯ ಆದರ್ಶ ದಂಪತಿ ಶೋನಲ್ಲೂ ಸಹ ಭಾಗವಹಿಸಿದ್ದರು. ಈ ಶೋನಲ್ಲಿ ನಿರೂಪಕರು ಅವರ ಮದುವೆಗೆ ಗೈರಾಗಿದ್ದ ತಾಯಿ ಮುಂದೆ ಮತ್ತೊಮ್ಮೆ ಇಬ್ಬರಿಗೂ ತಾಳಿಕಟ್ಟಿಸಿದ್ದರು. ಈ ನಡುವೆ ಕೊರೊನಾ ಮೊದಲನೇ ಅಲೆಯಲ್ಲಿ ಅವರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಅದಕ್ಕೆ ಅವರ ಪತ್ನಿ ಬೇಬಿ ಅವರನ್ನು ತೊರೆದು ಹೋಗಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಬಿಡುಗಡೆಗೆ ದಿನಾಂಕ ನಿಗದಿ – ಏಪ್ರಿಲ್‍ನಲ್ಲಿ ರಾಖಿಬಾಯ್ ಆರ್ಭಟ

    ತನಗಾದ ಮೋಸದಂತೆ ಮತ್ಯಾರಿಗೂ ಆಗಬಾರದು, ಆಕೆಗೆ ಶಿಕ್ಷೆ ಆಗಬೇಕು ಎಂದು ಕಲಾವಿದ ರವಿ ಪಟ್ಟು ಹಿಡಿದಿದ್ದು, ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

  • ಚಿತ್ರರಂಗದಿಂದ ಯಾಕೆ ದೂರ ಉಳಿದೆ ಎಂಬುದನ್ನು ನಾಗರಾಜ್ ಕೋಟೆ ಹೇಳ್ತಾರೆ ಓದಿ

    ಚಿತ್ರರಂಗದಿಂದ ಯಾಕೆ ದೂರ ಉಳಿದೆ ಎಂಬುದನ್ನು ನಾಗರಾಜ್ ಕೋಟೆ ಹೇಳ್ತಾರೆ ಓದಿ

    ಬೆಂಗಳೂರು: ನಾಗರಾಜ್ ಕೋಟೆ ಸ್ಯಾಂಡಲ್‍ವುಡ್ ಕಂಡ ಅತ್ಯದ್ಭುತ ಹಾಸ್ಯ ಕಲಾವಿದ. ಹಿರಿತೆರೆಯ ಜೊತೆಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಾಗರಾಜ್ ಕೋಟೆ ಕೆಲ ವರ್ಷಗಳಿಂದ ಸಿನಿಮಾ ಮತ್ತು ಧಾರಾವಾಹಿಗಳಿಂದ ದೂರು ಉಳಿದುಕೊಂಡಿದ್ದರು. ಈಗ ಮತ್ತೊಮ್ಮೆ ಕಮ್ ಬ್ಯಾಕ್ ಮಾಡಲು ತಯಾರಾಗಿರುವ ನಾಗರಾಜ್ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಪ್ರಶ್ನೆ: ಏನು ಮಾಡ್ತಿದ್ದಾರೆ ನಾಗರಾಜ್ ಕೋಟೆ?
    ನಾಗರಾಜ್ ಕೋಟೆ: ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ನಟನೆ ಮಾಡ್ತೀನಿ. ಸೀರಿಯಲ್ ಗಳಲ್ಲಿ ನಟಿಸುವುದನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ. ಬೆಂಗಳೂರಿನ ಗಿರಿನಗರದಲ್ಲಿ ‘ಬಣ್ಣ ಅಭಿನಯ ಶಾಲೆ’ಯನ್ನು ಆರಂಭಿಸಿದ್ದು, ಮಕ್ಕಳು ಸಹ ಬರುತ್ತಿದ್ದಾರೆ. ನನಗೆ ಗೊತ್ತಿರುವಷ್ಟನ್ನು ಮಕ್ಕಳಿಗೆ ಕಲಿಸುವುದರ ಜೊತೆಗೆ ನಾನು ಅವರಿಂದ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ. ಸದ್ಯ ಲೈಫ್ ಸೂಪರ್ ಆಗಿದೆ.

    ಪ್ರಶ್ನೆ: ಯಾಕೆ ಟಿವಿಯಲ್ಲಿ ನಟಿಸುತ್ತಿಲ್ಲ?
    ನಾಗರಾಜ್ ಕೋಟೆ: ಕಾಲ ಬದಲಾಗಿದ್ದು ಹೊಸಬರ ಅಲೆ ನುಗ್ಗುತ್ತಿದೆ. ಹಾಗಾಗಿ ನಮ್ಮಂತವರು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವಂತೆ ಆಗಿದೆ. ನಮ್ಮ ಕಾಲದಲ್ಲಿ ಯಾವ ಚಾನೆಲ್ ಹಾಕಿದ್ರೂ ನಾನು ಕಾಣಿಸಿಕೊಳ್ಳುತ್ತಿದ್ದೆ. ಆದ್ರೆ ಇವಾಗ ಸ್ವಲ್ಪ ಟ್ರೆಂಡ್ ಚೇಂಜ್ ಆಗಿದೆ. ಹಾಗಂತ ಸುಮ್ಮನೇ ಕೂರುವ ಜಾಯಮಾನ ನಮ್ಮದಲ್ಲ. ಹೇಗೆ ನಿಮ್ಮ ಮುಂದೆ ಕಾಣಿಸಿಕೊಳ್ಳಬೇಕು, ಹೇಗೆ ನಿಮ್ಮನ್ನ ತಲುಪಬೇಕು ಅಂತಾ ಪ್ಲಾನ್ ಮಾಡಿದ್ದೇನೆ.

    ಪ್ರಶ್ನೆ: ನಾಗರಾಜ್ ಕೋಟೆಯವರ ಪ್ಲಾನ್ ಏನು?
    ನಾಗರಾಜ್ ಕೋಟೆ: ಹಿಂದೆ ಸಿನಿಮಾ ನೋಡಬೇಕೆಂದ್ರೆ ಚಿತ್ರಮಂದಿರಗಳಿಗೆ ಹೋಗಬೇಕಿತ್ತು. ಮನರಂಜನೆಗಾಗಿ ವೇದಿಕೆಗಳಿಗೆ ಹತ್ರ ಜನರು ಹೋಗಬೇಕಿತ್ತು. ಆದ್ರೆ ಇಂದು ಕಾಲ ಬದಲಾಗಿದ್ದು, ಕೈಯಲ್ಲಿರುವ ಮೊಬೈಲ್ ನಲ್ಲಿ ಇಡೀ ಪ್ರಪಂಚವನ್ನ ನೋಡಬಹುದಾಗಿದೆ. ಈಗ ನಾನು ನಾಗರಾಜ್ ಕೋಟೆ ಎಂಬ ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡಿದ್ದು, ನಿಮ್ಮ ಕೈಯಲ್ಲಿರುವ ಮೊಬೈಲ್ ನಲ್ಲಿ ಬರುತ್ತೇನೆ.

    ಪ್ರಶ್ನೆ: ಆರಂಭ ಯಾವಾಗ? ಕಾರ್ಯಕ್ರಮದ ಹೆಸರೇನು?
    ನಾಗರಾಜ್ ಕೋಟೆ: ಏಪ್ರಿಲ್ 18ರಿಂದ ವಿವಿಧ ವಿಚಾರಗಳೊಂದಿಗೆ ‘ಕೋಟೆ ಪಂಚ್’ ಕಾರ್ಯಕ್ರಮದ ಮೂಲಕ ಎಲ್ಲರನ್ನು ನಗಿಸಲು ನಾಗರಾಜ ಕೋಟೆ ಬರಲಿದ್ದಾರೆ.

    ನಾಗರಾಜ್ ಕೋಟೆಯವರ ಹಾಸ್ಯ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ವಿ.ಮನೋಹರ್, ನಟ ಶರತ್ ಲೋಹಿತಾಶ್ವ ಮತ್ತು ನಟಿ ರೂಪಿಕಾ ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ.