Tag: ಹಾಸ್ಯನಟ

  • ಪ್ರಧಾನಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ – ಹಾಸ್ಯನಟ ಶ್ಯಾಮ್ ರಂಗೀಲಾ

    ಪ್ರಧಾನಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ – ಹಾಸ್ಯನಟ ಶ್ಯಾಮ್ ರಂಗೀಲಾ

    – ಅಂದು ಮೋದಿ ಅಭಿಮಾನಿ, ಇಂದು ಎದುರಾಳಿಯಾಗಿದ್ದೇಕೇ?

    ಜೈಪುರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವುದಾಗಿ ಹಾಸ್ಯನಟ ಶ್ಯಾಮ್ ರಂಗೀಲಾ (Shyam Rangeela) ಘೋಷಿಸಿದ್ದಾರೆ.

    ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ವಾರಣಾಸಿಯಿಂದ (Varanasi) ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದೇನೆ. ನಿಮ್ಮಲ್ಲರಿಂದ ನನಗೆ ಸಿಗುತ್ತಿರುವ ಪ್ರೀತಿ, ಬೆಂಬಲದಿಂದ ನಾನು ಉತ್ಸುಕನಾಗಿದ್ದೇನೆ. ನಾಮಪತ್ರ ಸಲ್ಲಿಕೆ ಹಾಗೂ ಮುಂದಿನ ಮಾಹಿತಿಗಳ ಬಗ್ಗೆ ವೀಡಿಯೋ ಸಂದೇಶಗಳ ಮೂಲಕ ನಿಮಗೆ ತಿಳಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತವರಲ್ಲಿ ಚೆನ್ನೈಗೆ ಹೀನಾಯ ಸೋಲು – ಪಂಜಾಬ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ಅಂದು ಅಭಿಮಾನಿ – ಇಂದು ಎದುರಾಳಿ:
    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2014ರಲ್ಲಿ ನಾನು ಮೋದಿ ಅಭಿಮಾನಿಯಾಗಿದ್ದೆ. ಪ್ರಧಾನಿಗಳನ್ನು ಬೆಂಬಲಿಸುವ ಹಲವು ವೀಡಿಯೋಗಳನ್ನು ಶೇರ್‌ ಮಾಡಿದ್ದೆ. ರಾಹುಲ್‌ ಗಾಂಧಿ (Rahul Gandhi), ಅರವಿಂದ್‌ ಕೇಜ್ರಿವಾಲ್‌ ಅವರಿಗೆ ವಿರುದ್ಧವಾದ ವೀಡಿಯೋಗಳನ್ನು ಶೇರ್‌ ಮಾಡಿದ್ದೆ. ನಾನು ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಮತ ಹಾಕಲ್ಲ ಎಂದು ಶಪಥ ಮಾಡಿದ್ದೆ. ಆದ್ರೆ ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಆದ್ದರಿಂದಲೇ ನಾನು ಈ ಬಾರಿ ವಾರಣಾಸಿಯಿಂದ ಪ್ರಧಾನಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

    ಇದೇ ವಾರ ನಾನು ನಾಮಪತ್ರ ಸಲ್ಲಿಸುತ್ತೇನೆ, ನನ್ನ ನಾಮಪತ್ರ ಸಲ್ಲಿಕೆಯು ವಿಭಿನ್ನವಾಗಿ ಇರಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊನೆಯಲ್ಲಿ ಕ್ರೀಸ್‌ ಬಿಟ್ಟುಕೊಡದ ಮಹಿ – ಡೇರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ ಎಂದು ಫ್ಯಾನ್ಸ್‌ ಗರಂ!

  • Breaking- ಮಲಯಾಳಂ ಖ್ಯಾತ ಹಾಸ್ಯನಟ ಮಾಮುಕೋಯ ನಿಧನ

    Breaking- ಮಲಯಾಳಂ ಖ್ಯಾತ ಹಾಸ್ಯನಟ ಮಾಮುಕೋಯ ನಿಧನ

    ಭಾರತೀಯ ಸಿನಿಮಾ ರಂಗ ಕಂಡ ಅತ್ಯಂತ ಪ್ರತಿಭಾವಂತ ನಟ, ಮಲಯಾಳಂ (Malayalam) ಸಿನಿಮಾ ರಂಗದ ದೈತ್ಯ ಪ್ರತಿಭೆ ಮಾಮುಕೋಯ (Mamukkoya) ನಿಧನರಾಗಿದ್ದಾರೆ. ಸೋಮವಾರ ಕಾಳಿಕಾವುನಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಾವಳಿಯ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ವಂಡೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯದ ಗಂಭೀರತೆಯನ್ನು ಅರಿತು ಕೋಝಿಕ್ಕೊಡ್ ಖಾಸಗಿ ಆಸ್ಪತ್ರೆಗೆ ನಿನ್ನೆಯಷ್ಟೇ ಸ್ಥಳಾಂತರಿಸಲಾಗಿತ್ತು.

    ಕೋಝಿಕೋಡ್ ನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ನಿನ್ನೆಯಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಲಕ್ಷಾಂತರ ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಆದರೆ, ಅಭಿಮಾನಿಗಳ ಪ್ರಾರ್ಥನೆ ಈಡೇರಲಿಲ್ಲ. ಇಂದು ಚಿಕಿತ್ಸೆ ಫಲಕಾರಿಯಾಗದೇ ಹಾಗೂ ಹೃದಯಾಘಾತದಿಂದಾಗಿ (Heart Attack) ಅವರು ನಿಧನರಾಗಿದ್ದಾರೆ (Passed Away) ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ:ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್

    ಮಲಯಾಳಂ ಸಿನಿಮಾ ರಂಗದ ಹೆಸರಾಂತ ಹಾಸ್ಯ ಕಲಾವಿದರಾಗಿದ್ದ (Comedian) ಮಾಮುಕೋಯ ಈವರೆಗೂ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂನ ಬಹುತೇಕ ನಟರೊಂದಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಅಗಲಿದ ಹಿರಿಯ ನಟನ ಆತ್ಮಕ್ಕೆ ಮಲಯಾಳಂ ಸಿನಿಮಾ ರಂಗಕ್ಕೆ ಕಂಬನಿ ಮಿಡಿದಿದೆ.

  • ಹಾಸ್ಯ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

    ಹಾಸ್ಯ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

    ತೆಲುಗು ಸಿನಿಮಾ ರಂಗದ ಖ್ಯಾತ ಹಾಸ್ಯನಟ (Telugu Comedian) ಅಲ್ಲು ರಮೇಶ್ (Allu Ramesh) ಹೃದಯಾಘಾತದಿಂದ ನಿಧನರಾಗಿದ್ದಾರೆ (Passed Away). ಮಂಗಳವಾರ ವಿಶಾಖಪಟ್ಟಣದಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಅವರು ಕುಟುಂಬಸ್ಥರು ತಿಳಿಸಿದ್ದಾರೆ.

    ರಂಗಭೂಮಿ ಹಿನ್ನೆಲೆಯ ರಮೇಶ್, ವಿಶಾಖಪಟ್ಟಣದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಆನಂತರ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು. ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದ್ದು. ನೆಪೋಲಿಯನ್, ರಾವಣ ದೇಶಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಇದನ್ನೂ ಓದಿ:ಪ್ಯಾಂಟ್ ಧರಿಸದೇ ರಸ್ತೆಗಿಳಿದ ನಿರೂಪಕಿಗೆ ನೆಟ್ಟಿಗರಿಂದ ಕ್ಲಾಸ್

    ‘ಮಾ ವಿದಾಕುಲು’ ಹೆಸರಿನ ವೆಬ್ ಸರಣಿ  ಮೂಲಕ ರಮೇಶ್ ಸಾಕಷ್ಟು ಗುರುತಿಸಿಕೊಂಡಿದ್ದರು. ಅಗಲಿದ ನಟನಿಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲು ರಮೇಶ್ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ.

  • ತಮಿಳಿನ ಹಾಸ್ಯನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ನಿಧನ

    ತಮಿಳಿನ ಹಾಸ್ಯನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ನಿಧನ

    ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ವಾಡಿವೆಲ್ ಬಾಲಾಜಿಯವರು ಟಿವಿಯಲ್ಲಿ ಮಿಮಿಕ್ರಿ ಮಾಡಿಕೊಂಡು ಹಿಟ್ ಆಗಿದ್ದರು. ಜೊತೆಗೆ ಹಲವಾರು ಸಿನಿಮಾದಲ್ಲಿ ನಟಿಸಿದ್ದರು. ತಮಿಳಿನ ಹಿರಿಯ ಹಾಸ್ಯನಟ ವಡಿವೇಲು ಅವರ ಮಿಮಿಕ್ರಿ ಮಾಡಿಕೊಂಡೆ ಕಿರುತೆರೆಯಲ್ಲಿ ವಡಿವೇಲು ಬಾಲಾಜಿ ಎಂಬ ಪ್ರಸಿದ್ಧಿ ಪಡೆದದ್ದ 45 ವರ್ಷದ ನಟ ಹೃದಯಾಘಾದಿಂದ ನಿಧನರಾಗಿದ್ದಾರೆ.

    ವಡಿವೆಲ್ ಬಾಲಜಿಯವರು ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೊದಲಿಗೆ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಅವರನ್ನು ಚೆನ್ನೈನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಬಾಲಾಜಿಯವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಆಗಲಿದ್ದಾರೆ.

    ವಡಿವೆಲ್ ಬಾಲಾಜಿಯವರ ನಿಧನಕ್ಕೆ ಸಂತಾಪ ಸೂಚಿಸಿರುವ ನಟ ಧನುಷ್ ಅವರು, ವಡಿವೆಲ್ ಬಾಲಾಜಿಯವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವಾಯ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಅವರ ಫ್ಯಾಮಿಲಿಗೆ ಅವರ ಸಾವನ್ನು ಭರಿಸುವ ಶಕ್ತಿ ಕೊಡಲಿ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ನಟ ಪ್ರಸನ್ನ, ನಟಿ ಐಶ್ವರ್ಯ ರಾಜೇಶ್ ಮತ್ತು ಚಿತ್ರ ವಿಮರ್ಶಕ ರಮೇಶ್ ಬಾಲ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

    1975ರಲ್ಲಿ ತಮಿಳುನಾಡಿನ ಮಧುರೈನಲ್ಲಿ ಜನಿಸಿದ ವಡಿವೆಲ್ ಬಾಲಾಜಿ, 1991ರಲ್ಲಿ ಎನ್ ರಸಾವಿನ್ ಮನಸಿಲೆ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ರಾಜ್‍ಕಿರಣ್ ಮತ್ತು ಮೀನ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಟಿವಿ ಶೋಗಳಲ್ಲಿ ಮಿಮಿಕ್ರಿ ಮಾಡಿ ಬಾಲಾಜಿ ಹೆಚ್ಚು ಜನಪ್ರಿಯಗೊಂಡಿದ್ದರು. ನಂತರ 2018ರಲ್ಲಿ ನಯನತಾರ ಅಭಿನಯದ ಹಿಟ್ ಸಿನಿಮಾ ಕೋಲಮಾವು ಕೋಕಿಲಾದಲ್ಲಿ ಕೊನೆಯ ಬಾರಿಗೆ ನಟಿಸಿದ್ದರು.

  • ಚಿತ್ರರಂಗದ ಕೆಲವರ ಬಗ್ಗೆ ಸಿದ್ದುಗೆ ದೂರು ಹೇಳಿದ ಟೆನ್ನಿಸ್ ಕೃಷ್ಣ

    ಚಿತ್ರರಂಗದ ಕೆಲವರ ಬಗ್ಗೆ ಸಿದ್ದುಗೆ ದೂರು ಹೇಳಿದ ಟೆನ್ನಿಸ್ ಕೃಷ್ಣ

    ಮೈಸೂರು: ಕನ್ನಡದ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚಿತ್ರರಂಗದಲ್ಲಿರುವ ಎರಡು ಬಣಗಳ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

    ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಟೆನ್ನಿಸ್ ಕೃಷ್ಣ ಚಿತ್ರರಂಗದ ಸದ್ಯದ ಪರಿಸ್ಥಿತಿಯನ್ನು ವಿವರಿಸಿದರು. ಸಿದ್ದು ಭೇಟಿ ಬಳಿಕ ಮಾತನಾಡಿದ ಅವರ, ಇಷ್ಟು ದಿನ ನಾನು ಸಿನಿಮಾದಲ್ಲಿ ಬ್ಯುಸಿಯಿದ್ದೆ. ಹಾಗಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಈಗ ಪಕ್ಕದ ರೋಡಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಎಷ್ಟೋ ಬಾರಿ ಅವರು ನನಗೆ ಕರೆದುಕೊಂಡು ಬಂದು ಊಟ ಮಾಡಿಸಿದ್ದಾರೆ ಎಂದರು.

    ಇದೇ ವೇಳೆ, ಈ ನಡುವೆ ಜನ ಸಿನಿಮಾ ನೋಡುವುದು ಕಡಿಮೆ ಆಗಿದೆ. ಒಳ್ಳೆಯ ಸಿನಿಮಾ ಬರುತ್ತೆ, ಜನರು ಅದನ್ನು ನೋಡಿ ಪ್ರೋತ್ಸಾಹಿಸಬೇಕು. ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿದೆ. ಈ ಮೊದಲು ನಾನು ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿದ್ದೆ. ಹಾಗಾಗಿ ಈಗ ಹಿರಿಯ ನಟರಿಗೆ ಅವಕಾಶ ಸಿಗುತ್ತಿದೆ. ತುಂಬಾ ಜನ ಈ ಬಗ್ಗೆ ಮಾತನಾಡಲು ಹೆದರುಕೊಳ್ಳುತ್ತಿದ್ದರು. ನಾನು ಎಷ್ಟು ದಿನ ಕಾಯಲಿ ಎಂದು ಮಾತನಾಡಿದೆ, ಮಾತನಾಡಿದಕ್ಕೆ ಅವಕಾಶ ಸಿಕ್ತು ಎಂದರು.

    ನನಗೆ ಈಗ ಅನ್ನ ಇದೆ. ನಾನು ಈಗಲೂ ಉತ್ತರ ಕರ್ನಾಟಕಕ್ಕೆ ಹೋಗಿ ನಾಟಕದಲ್ಲಿ ಪಾತ್ರ ಮಾಡಿದ್ರೆ, 35 ಅಡಿ ಕಟೌಟ್ ಹಾಕುತ್ತಾರೆ. ನಾಟಕದಲ್ಲಿ ಪಾತ್ರ ಮಾಡಿದರೆ ನನಗೆ ಅನ್ನ ಸಿಗುತ್ತೆ. ಆದರೆ ಅಭಿಮಾನಿಗಳು ನೀವು ಯಾವಾಗ ಸಿನಿಮಾ ಮಾಡುತ್ತೀರಾ ಎಂದು ಕೇಳುತ್ತಿದ್ದಾರೆ. ಚಿತ್ರರಂಗದಲ್ಲಿ ಪ್ರತ್ಯೇಕ ಗುಂಪೊಂದು ಇದನ್ನು ನಿಯಂತ್ರಿಸುತ್ತಿತ್ತು. ಈಗ ಆ ಗುಂಪು ಒಡೆದು ಹೋಗಿದೆ. ಹಾಗಾಗಿ ನಮಗೆ ಅವಕಾಶಗಳು ಸಿಗುತ್ತಿದೆ ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ.

    ಅಲ್ಲದೆ ಸಿದ್ದರಾಮಯ್ಯ ಅವರ ಮಾತನ್ನು ಚಿತ್ರರಂಗದ ಹಲವರು ಕೇಳುತ್ತಾರೆ. ಹಾಗಾಗಿ ಸಿದ್ದರಾಮಯ್ಯ ಭೇಟಿಗೆ ಬಂದಿದ್ದೆ ಎಂದು ತಿಳಿಸಿದರು.

  • ಖ್ಯಾತ ಹಾಸ್ಯನಟನಿಗೆ ‘ಯುವತಿ’ಯಿಂದ ಸೆಕ್ಸ್ ದೋಖಾ!

    ಖ್ಯಾತ ಹಾಸ್ಯನಟನಿಗೆ ‘ಯುವತಿ’ಯಿಂದ ಸೆಕ್ಸ್ ದೋಖಾ!

    ಮಂಗಳೂರು: ತುಳು ಚಲನಚಿತ್ರ ರಂಗದ ಹಾಸ್ಯನಟರೊಬ್ಬರಿಗೆ ಬೆಂಗಳೂರಿನ ಇಬ್ಬರು ಆರೋಪಿಗಳು ಯುವತಿ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಪ್ರಕರಣ ಸಂಬಂಧ ಮಂಗಳೂರಿನ ಪೊಲೀಸರು ಬೆಂಗಳೂರಿನ ಯಶವಂತಪುರ ನಿವಾಸಿ ಆದಿತ್ಯ ಮತ್ತು ರಾಮನಗರ ಜಿಲ್ಲೆಯ ಕನಕಪುರ ನಿವಾಸಿ ಅರುಣ್ ಎಚ್.ಎಸ್‍ನನ್ನು ಬಂಧಿಸಿದ್ದಾರೆ. ಫೇಸ್ ಬುಕ್ಕಿನಲ್ಲಿ ಆರಾಧ್ಯ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದ ಆದಿತ್ಯ, ಮಂಗಳೂರಿನ 25ರ ಹರೆಯದ ಹಾಸ್ಯನಟನನ್ನು ವಂಚಿಸಿದ್ದಾನೆ.

    ಸಲುಗೆಯ ಮಾತನಾಡಿ ಬಳಿಕ ಚಿತ್ರನಟ, ತನ್ನ ಅರೆನಗ್ನ ಫೋಟೋವನ್ನು ಯುವತಿ ಅಶ್ವಿನಿ ಅಲಿಯಾಸ್ ಆರಾಧ್ಯಗೆ ಸೆಂಡ್ ಮಾಡಿದ್ದರು. ಈ ಫೋಟೋ ಪಡೆದ ಯುವಕ ಆರಾಧ್ಯ, ಚಿತ್ರನಟನನ್ನು ಬ್ಲಾಕ್ ಮೇಲ್ ಮಾಡಿದ್ದು ಬಳಿಕಸ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿ ಬೆಂಗಳೂರಿಗೆ ಕರೆಸಿಕೊಂಡು 65 ಸಾವಿರ ರೂ. ವಸೂಲಿ ಮಾಡಿದ್ದಾನೆ.

    ಆ ನಂತರ ಇನ್ನಷ್ಟು ಹಣಕ್ಕಾಗಿ ಬೇಡಿಕೆ ಇಟ್ಟಾಗ ವ್ಯಕ್ತಿ ಪೊಲೀಸ್ ದೂರು ನೀಡಿದ್ದರು. ತನಿಖಾ ಹಂತದಲ್ಲಿ ಕಮಿಷನರ್ ಹೆಸರಲ್ಲಿ ಮತ್ತು ಗೃಹಮಂತ್ರಿ ಪಿಎ ಹೆಸರಿನಲ್ಲೂ ಫೋನ್ ಕರೆ ಮಾಡಿ ಆರೋಪಿಗಳು ವ್ಯಕ್ತಿಯನ್ನು ಬೆದರಿಸಿದ್ದಾರೆ.

    ಕಾರ್ಯಾಚರಣೆ ನಡೆಸಿದ ಮಂಗಳೂರಿನ ಉರ್ವ ಠಾಣೆ ಪೊಲೀಸ್ ಅಧಿಕಾರಿಯಾದ ರವೀಶ್ ನಾಯ್ಕ್ ನೇತೃತ್ವದ ತಂಡ, ಬೆಂಗಳೂರಿನ ಕೊಲಂಬಿಯಾ ಆಸ್ಪತ್ರೆ ಬಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಪೈಕಿ ಆದಿತ್ಯ 19ರ ಹರೆಯದ ಪಿಯುಸಿ ವಿದ್ಯಾರ್ಥಿ ಆಗಿದ್ದು ಅಶ್ವಿನಿ ಅಲಿಯಾಸ್ ಆರಾಧ್ಯ ಹೆಸರಿನಲ್ಲಿ ಹಲವರನ್ನು ಬ್ಲಾಕ್ ಮೇಲ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ಈತ ಹಲವು ಮಂದಿಗೆ ಇದೇ ರೀತಿ ಮಾಡಿ ವಂಚಿಸಿದ್ದು, ಈ ಬಗ್ಗೆ ಯಾರು ಕೂಡ ದೂರು ನೀಡಿರಲಿಲ್ಲ. ಮನೆಯಲ್ಲಿ ಹುಡುಗನ ವೇಷದಲ್ಲಿರುವ ಈತ ಹೊರಗೆ ಹುಡುಗಿಯ ಥರ ಡ್ರೆಸ್ ಮಾಡಿಕೊಂಡು ವಂಚಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೌಡಿಶೀಟರ್‌ಗೆ ಹಾಸ್ಯನಟ ಸಾಧುಕೋಕಿಲ ಕರೆ!

    ರೌಡಿಶೀಟರ್‌ಗೆ ಹಾಸ್ಯನಟ ಸಾಧುಕೋಕಿಲ ಕರೆ!

    ಬೆಂಗಳೂರು: ರೌಡಿಶೀಟರ್ ಸೈಕಲ್ ರವಿ ಜೊತೆ ಸ್ಯಾಂಡಲ್‍ವುಡ್‍ನ ಜನಪ್ರಿಯ ಹಾಸ್ಯನಟರೊಬ್ಬರು ಸಂಪರ್ಕ ಹೊಂದಿದ್ದ ಎನ್ನುವುದು ಸ್ಫೋಟಕ ಮಾಹಿತಿ ಸಿಸಿಬಿ ತನಿಖೆ ವೇಳೆ ಹೊರಬಿದ್ದಿದೆ.

    ಹೌದು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಸಾಧುಕೋಕಿಲ ಅವರು ಸೈಕಲ್ ರವಿಯೊಂದಿಗೆ ಸಂಪರ್ಕ ಹೊಂದಿದ್ದರಂತೆ. ಸುಮಾರು 10 ಪ್ರಕರಣಗಳಲ್ಲಿ ಬೇಕಾಗಿರುವ ನಗರದ ಕುಖ್ಯಾತ ರೌಡಿಶೀಟರ್ ಸೈಕಲ್ ರವಿಗೆ ಸಾಧುಕೋಕಿಲ ಅವರು 7ರಿಂದ 8 ಬಾರಿ ದೂರವಾಣಿ ಕರೆ ಮಾಡಿ, ಮಾತುಕತೆ ನಡೆಸಿದ್ದರು ಎನ್ನುವುದು ಸಿಸಿಬಿ ತನಿಖೆಯಲ್ಲಿ ಬಹಿರಂಗವಾಗಿದೆ.

    ಜೂನ್ 27ರಂದು ರಾಜರಾಜೇಶ್ವರಿನಗರದ ನೈಸ್‍ರೋಡ್ ಬಳಿ ರೌಡಿ ಸೈಕಲ್ ರವಿ ಬಂಧನಕ್ಕೆ ಪೊಲೀಸರು ಮುಂದಾಗಿದ್ದರು. ಈ ವೇಳೆ ಸೈಕಲ್ ರವಿ ಪೊಲೀಸ್ ಕಾನ್ಸ್ ಟೇಬಲ್ ಸತೀಶ್ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಆತ್ಮ ರಕ್ಷಣೆಗೆ ಮುಂದಾದ ಸಿಸಿಬಿ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಪಿಐ ಮಲ್ಲಿಕಾರ್ಜುನ್ ತಕ್ಷಣವೇ 2 ಸುತ್ತಿನ ಗುಂಡು ಹಾರಿಸಿ, ಸೈಕಲ್ ರವಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನದಲ್ಲಿ ಇರಿಸಿಕೊಂಡು ತನಿಖೆ ನಡೆಸಿದ್ದರು.

    ಸೈಕಲ್ ರವಿಯ ಫಾರ್ಚುನರ್ ಕಾರಿನಲ್ಲಿ 11 ಮೊಬೈಲ್‍ಗಳು ಪತ್ತೆಯಾಗಿದ್ದು, ಪ್ರಕರಣದ ತನಿಖೆ ಬೆನ್ನತ್ತಿರುವ ಸಿಸಿಬಿಗೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ.

  • ಮಹಿಳಾ ಟೆಕ್ಕಿಗೆ ಕಿರುಕುಳ ಆರೋಪ- ಸ್ಯಾಂಡಲ್ ವುಡ್ ಹಾಸ್ಯನಟನ ವಿರುದ್ಧ ಎಫ್‍ಐಆರ್!

    ಮಹಿಳಾ ಟೆಕ್ಕಿಗೆ ಕಿರುಕುಳ ಆರೋಪ- ಸ್ಯಾಂಡಲ್ ವುಡ್ ಹಾಸ್ಯನಟನ ವಿರುದ್ಧ ಎಫ್‍ಐಆರ್!

    ಬೆಂಗಳೂರು: ಸ್ಯಾಂಡಲ್‍ವುಡ್‍  ಹಾಸ್ಯನಟನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಹಾಸ್ಯನಟ ತರಂಗ ವಿಶ್ವ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಟೆಕ್ಕಿಯೊಬ್ಬರು ದೂರು ನೀಡಿದ್ದಾರೆ.

    ಹಾಸ್ಯನಟ ತರಂಗ ವಿಶ್ವ ಹಾಗೂ ಮಹಿಳೆ ಉತ್ತರಹಳ್ಳಿಯ ಪ್ಯಾಷನ್ ಹೌಸ್ ಅಪಾರ್ಟ್‍ಮೆಂಟ್ ನಲ್ಲಿ ವಾಸವಿದ್ದರು. ಮಹಿಳೆ ತನ್ನ ಮಗಳ ಜೊತೆ ಒಂಟಿಯಾಗಿ ವಾಸವಿದ್ದರು. ಈ ವೇಳೆ ವಿಶ್ವ ಹಾಗೂ ಪುಟ್ಟಸ್ವಾಮಿ ಎಂಬವರು ಮಹಿಳೆಯನ್ನ ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ನಾಲ್ವರ ವಿರುದ್ಧ ಎಫ್‍ಐಅರ್ ದಾಖಲಿಸಿದ್ದಾರೆ.

    ಮೊದಲು ಹಾಸ್ಯನಟನ ವಿರುದ್ಧ ದೂರು ದಾಖಲಿಸಲು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಮೀನಾಮೇಷ ಎಣಿಸಿದ್ದಾರೆ. ಬಳಿಕ ಮಹಿಳೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಮೀಷನರ್ ಸೂಚನೆ ಮೇರೆಗೆ ಸಿಕೆ ಅಚ್ಚುಕಟ್ಟು ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.