Tag: ಹಾಸ್ಟೇಲ್

  • ಓದಿಕೊಳ್ಳುವ ಟೈಂನಲ್ಲಿ ವಾರ್ಡನ್‍ನಿಂದ ಲೈಟ್ಸ್ ಆಫ್ – ಮೊಬೈಲ್ ಟಾರ್ಚ್‍ನಲ್ಲೇ  ವಿದ್ಯಾರ್ಥಿನಿಯರಿಂದ ವಿದ್ಯಾಭ್ಯಾಸ

    ಓದಿಕೊಳ್ಳುವ ಟೈಂನಲ್ಲಿ ವಾರ್ಡನ್‍ನಿಂದ ಲೈಟ್ಸ್ ಆಫ್ – ಮೊಬೈಲ್ ಟಾರ್ಚ್‍ನಲ್ಲೇ ವಿದ್ಯಾರ್ಥಿನಿಯರಿಂದ ವಿದ್ಯಾಭ್ಯಾಸ

    ಬೆಂಗಳೂರು: ಕೆಲ ವಿದ್ಯಾರ್ಥಿನಿಯರಿಗೆ (Student) ಲೇಡಿ ವಾರ್ಡನ್ (Warden) ನಿತ್ಯ ಕಿರುಕುಳ ಕೊಡುತ್ತಿರುವ ಆರೋಪ ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್‍ನಲ್ಲಿ ಕೇಳಿಬಂದಿದೆ.

    ಬೆಂಗಳೂರಿನ (Bengaluru) ಆರ್‌ಆರ್ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್‍ನಲ್ಲಿ ವಾರ್ಡನ್ ಟಾರ್ಚರ್‌ಗೆ ವಿದ್ಯಾರ್ಥಿನಿಯರು ಬೇಸತ್ತಿದ್ದಾರೆ. ಅಲ್ಲಿನ ವಾರ್ಡನ್, ರಾತ್ರಿ ಹೊತ್ತಲ್ಲಿ ವಿದ್ಯಾರ್ಥಿನಿಯರು (Student) ಓದ್ಕೊಳ್ಳುವ ಟೈಮ್‍ನಲ್ಲಿ ಲೈಟ್ ಆಫ್ ಮಾಡುತ್ತಾರೆ. ರಾತ್ರಿ 9 ಘಂಟೆಯಿಂದ 11 ಘಂಟೆಯ ತನಕ ಹಾಸ್ಟೆಲ್‍ಗೆ (Hostel) ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ವಿದ್ಯಾರ್ಥಿನಿಯರು ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರ ಈ ಆರೋಪಕ್ಕೆ ಸ್ಪಷ್ಟನೆ ಕೊಡದ ವಾರ್ಡನ್ ಹಾಸ್ಟೆಲ್‍ನಲ್ಲಿಲ್ಲ.

    ಈ ಹಾಸ್ಟೆಲ್‍ನಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿನಿಗಳಿದ್ದಾರೆ. ವಾರ್ಡನ್, ವಿದ್ಯಾರ್ಥಿನಿಗಳಿಂದಲೇ ಟಾಯ್ಲೆಟ್ ರೂಂ ಕ್ಲೀನ್ ಮಾಡಿಸ್ತಾರಂತೆ. ರೂಂ ಕ್ಲೀನ್ ಮಾಡಲ್ಲ ಅಂದ್ರೆ ಟಾರ್ಗೆಟ್ ಮಾಡಿ, ಟಾರ್ಚರ್ ನೀಡ್ತಾರೆ ಅಂತ ವಿದ್ಯಾರ್ಥಿನಿಗಳು ಆರೋಪಿಸಿದ್ದಾರೆ. ಇನ್ನೂ ಕಾಲೇಜು ಮುಗಿಸಿ ಹಾಸ್ಟೆಲ್‍ನಿಂದ ಹೊರ ಹೋಗುವಾಗ ವಾರ್ಡನ್‍ಗೆ ದುಬಾರಿ ಕೊಡುಗೆಗಳು ನೀಡಬೇಕಂತೆ. ಕಾಲೇಜು ಮುಗಿಸಿಕೊಂಡು, ಸಂಜೆ ಹೊತ್ತಲ್ಲಿ ಹಾಸ್ಟೆಲ್‍ಗೆ ಬರೋದು ಲೇಟಾದರೆ, ಇತರೆ ವಿದ್ಯಾರ್ಥಿನಿಗಳ ಮುಂದೆಯೇ ಅವಮಾನ ಮಾಡ್ತಾರೆ ಅಂತ ವಿದ್ಯಾರ್ಥಿನಿಗಳು ದೂರಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಸೇರ್ತಾರಾ ಸುಮಲತಾ ಅಂಬರೀಶ್?

    ಘಟನೆಯ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೂ ವಿದ್ಯಾರ್ಥಿನಿಗಳು ತಂದಿದ್ದಾರೆ. ಆದರೆ ಇವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಕೆಲ ವಿದ್ಯಾರ್ಥಿನಿಯರು ಲೇಡಿ ವಾರ್ಡನ್ ಟಾರ್ಚರ್ ಬಗ್ಗೆ ಮಾತನಾಡಲು ಭಯಪಡುತ್ತಿದ್ದಾರೆ. ಇದನ್ನೂ ಓದಿ: ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ನಿಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲೇಡಿಸ್ ಹಾಸ್ಟೆಲ್‍ಗೆ ನುಗ್ಗಿ ವಿಡಿಯೋ ಚಿತ್ರೀಕರಿಸ್ತಾನೆ, ಪ್ರಶ್ನಿಸಿದ್ರೆ ನಾನು ಹಿರಿಯ ಅಧಿಕಾರಿ ಅಂತಾನೆ

    ಲೇಡಿಸ್ ಹಾಸ್ಟೆಲ್‍ಗೆ ನುಗ್ಗಿ ವಿಡಿಯೋ ಚಿತ್ರೀಕರಿಸ್ತಾನೆ, ಪ್ರಶ್ನಿಸಿದ್ರೆ ನಾನು ಹಿರಿಯ ಅಧಿಕಾರಿ ಅಂತಾನೆ

    -ಬಿಸಿಎಂ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿನಿಯರ ಆಗ್ರಹ

    ಕಲಬುರಗಿ: ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರಿಗೇ ರಕ್ಷಣೆ ನೀಡಬೇಕಾದ ಬಿಸಿಎಂ ಇಲಾಖೆ ಅಧಿಕಾರಿಯೇ ಅವರಿಗೆ ವಿಲನ್ ಆಗಿರುವ ಘಟನೆ ನಗರದಲ್ಲಿ ನಡೆದಿದೆ.

    ಬಿಸಿಎಂ ಅಧಿಕಾರಿ ಮೆಹಬೂಬ್ ಸಾಬ್ ಕಾರಟಗಿ ಈ ಹಿಂದೆ ಶಾದಿ ಮಹಲ್ ಗೋಲ್ಮಾಲ್ ನಡೆಸಿ ನಂತರ ವಿದ್ಯಾರ್ಥಿನಿಯರನ್ನು ಲಾಡ್ಜ್ ಗೆ ಶಿಫ್ಟ್ ಮಾಡಿ ಸುದ್ದಿಯಲ್ಲಿದ್ದ. ಆದರೆ ಇದೀಗ ಮೆಹಬೂಬ್ ಸಾಬ್‍ನ ಮತ್ತೊಂದು ಮುಖ ಸಹ ಬಯಲಾಗಿದೆ. ಅಧಿಕಾರಿಯ ಅಸಭ್ಯ ವರ್ತನೆ ವಿರುದ್ಧ ವಸತಿ ನಿಲಯದ ವಿದ್ಯಾರ್ಥಿನಿಯರು ಅಸಮಾಧಾನ ಹೊರ ಹಾಕಿದ್ದಾರೆ.

    ಸಂಜೆಯಾದರೆ ಸಾಕು ಮೆಹಬೂಬ್ ಸಾಬ್ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಬಲವಂತವಾಗಿ ನುಗ್ಗುತ್ತಾನಂತೆ. ಈ ವೇಳೆ ವಿದ್ಯಾರ್ಥಿನಿಯರ ಕೋಣೆಗೆ ನುಗ್ಗಿ ತನ್ನ ಮೊಬೈಲ್‍ನಲ್ಲಿ ವಿಡಿಯೋ ಚಿತ್ರೀಕರಿಸಿ ವಿಕೃತ ಅಟ್ಟಹಾಸ ಮೇರೆಯುತ್ತಿದ್ದಾನೆ. ಇದನ್ನು ವಿರೋಧಿಸಿದರೆ, ನಾನು ಹಿರಿಯ ಅಧಿಕಾರಿ ಅಂತ ವಿದ್ಯಾರ್ಥಿನಿಯರಿಗೇ ಏಕವಚನದಲ್ಲಿ ಅಸಭ್ಯ ಪದಗಳಿಂದ ನಿಂದಿಸುತ್ತಾನೆ. ಹೀಗಾಗಿ ಈ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

    ಮೆಹಬೂಬ್ ಸಾಬ್ ವಿರುದ್ಧ ಈ ಹಿಂದೆಯೂ ಸಹ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದವು. ಆದರೆ ತನ್ನ ಅಧಿಕಾರ ಹಾಗೂ ರಾಜಕಾರಣಿಗಳ ಪ್ರಭಾವ ಬಳಸಿ ಎಲ್ಲಾ ಪ್ರಕರಣ ಮುಚ್ಚಿ ಹಾಕಿದ್ದಾನೆ. ಈ ಬಾರಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಹೋಗಿ ವಿಡಿಯೋ ಚಿತ್ರಿಕರಿಸುವದನ್ನು, ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಪಿ.ರಾಜಾ ಸಹ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ನಿಟ್ಟಿನಲ್ಲಿ ಓರ್ವ ಮಹಿಳಾ ಅಧಿಕಾರಿಯನ್ನು ತನಿಖೆಗೆ ನೇಮಿಸಿ, ಮೆಹಬೂಬ್ ಸಾಬ್ ವಿರುದ್ಧ ಬಂದಿರುವ ದೂರಿನಗಳ ವರದಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

    ಮೆಹಬೂಬ್ ಸಾಬ್ ಕಳೆದ ಬಾರಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಸಹಾಯದಿಂದ ತನ್ನ ಹುದ್ದೆಯನ್ನು ಉಳಿಸಿಕೊಂಡಿದ್ದ ಎನ್ನಲಾಗಿದೆ. ಆದರೆ ಈಗ ಯಾರ ಪ್ರಭಾವ ಬಳಸಿ ಸೇಫ್ ಆಗುತ್ತಾನೆ ಎಂಬ ಚರ್ಚೆ ಶುರುವಾಗಿದೆ.

  • ಬೀದಿ ಬದಿಯಲ್ಲಿ ಹುಡುಗರ ಜೊತೆ ಮಾತನಾಡುವಂತಿಲ್ಲ- ವಿವಿ ಆದೇಶ

    ಬೀದಿ ಬದಿಯಲ್ಲಿ ಹುಡುಗರ ಜೊತೆ ಮಾತನಾಡುವಂತಿಲ್ಲ- ವಿವಿ ಆದೇಶ

    ಸಾಂದರ್ಭಿಕ ಚಿತ್ರ

    ಭುವನೇಶ್ವರ್: ವಿದ್ಯಾರ್ಥಿನಿಯರು ಬೀದಿ ಬದಿಯಲ್ಲಿ ನಿಂತು ಹುಡುಗರ ಜೊತೆಗೆ ಮಾತನಾಡುವಂತಿಲ್ಲ ಎಂದು ಒಡಿಶಾದ ವಿಶ್ವವಿದ್ಯಾಲಯವೊಂದು ಖಡಕ್ ಆದೇಶವನ್ನು ಹೊರಡಿಸಿದೆ.

    ಸಂಬಲ್‍ಪುರ್ ಸಮೀಪದ ಬರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ಯುನಿವರ್ಸಿಟಿ ಆಫ್ ಟೆಕ್ನಾಲಜಿ (ವಿಎಸ್‍ಎಸ್‍ಯುಟಿ)ನಲ್ಲಿ ಇಂತಹ ಆದೇಶ ಹೊರಡಿಸಲಾಗಿದೆ. ಯುನಿವರ್ಸಿಟಿಯಲ್ಲಿ ಐದು ವಿದ್ಯಾರ್ಥಿನಿಯರ ವಸತಿ ನಿಲಯಗಳಿದ್ದು, ಅವುಗಳಲ್ಲಿ ರೋಹಿಣಿ ಹಾಲ್ ಆಫ್ ರೆಸಿಡೆನ್ಸ್‍ನ ನೋಟಿಸ್ ಬೋರ್ಡ್ ನಲ್ಲಿ ಆದೇಶ ಪ್ರತಿಯನ್ನು ಹಾಕಲಾಗಿದೆ.

    ಆದೇಶದಲ್ಲಿ ಏನಿದೆ?:
    ಉಪಕುಲಪತಿಗಳ ನಿರ್ದೇಶನದಂತೆ ರೋಹಿಣಿ ಹಾಲ್ ಆಫ್ ರೆಸಿಡೆನ್ಸಿ ವಿದ್ಯಾರ್ಥಿನಿಯರು ರಸ್ತೆ ಬದಿಯಲ್ಲಿ ನಿಂತು ಹುಡುಗರ ಜೊತೆಗೆ ಮಾತನಾಡಬಾರದು. ಈ ಸೂಚನೆ ಪಾಲಿಸಲು ವಿಫಲರಾದರೆ ಅಂಥವರ ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಪತ್ರವೊಂದನ್ನು ನೋಟಿಸ್ ಬೋರ್ಡ್ ನಲ್ಲಿ ಅಂಟಿಸಲಾಗಿದೆ.

    ಈ ಕುರಿತು ಸ್ಪಷ್ಟನೆ ನೀಡಿರುವ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊಫೆಸರ್ ಪಿ.ಸಿ.ಸ್ವೈನ್, ವಿದ್ಯಾರ್ಥಿನಿಯರ ರಕ್ಷಣೆಯ ಹೊಣೆ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಆದೇಶದ ಪ್ರತಿಯನ್ನು ನೋಟಿನ್ ಬೋರ್ಡ್ ಗೆ ಅಂಟಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಮನಿಸಿ: ಮಕ್ಕಳನ್ನು ಹಾಸ್ಟೇಲ್ ಗೆ ಸೇರಿಸೋ ಮುನ್ನ ಈ ಸ್ಟೋರಿ ಓದಿ

    ಗಮನಿಸಿ: ಮಕ್ಕಳನ್ನು ಹಾಸ್ಟೇಲ್ ಗೆ ಸೇರಿಸೋ ಮುನ್ನ ಈ ಸ್ಟೋರಿ ಓದಿ

    ಕೋಲಾರ: ಜಿಲ್ಲೆಯ ಬಂಗಾರಪೇಟೆಯ ಸರ್ಕಾರಿ ಹಾಸ್ಟೇಲೊಂದರಲ್ಲಿ ಐದನೇ ತರಗತಿ ವಿದ್ಯಾರ್ಥಿನಿ ಮೇಲೆ 50 ವರ್ಷದ ಅಡುಗೆ ಸಾಹಾಯಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

    ವಸತಿ ನಿಲಯದ ಅಡುಗೆ ಸಹಾಯಕ ನಾರಾಯಣಪ್ಪ ಎಂಬಾತ ಕಳೆದ ಕೆಲವು ದಿನಗಳಿಂದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗಸ್ಟ್ 16 ರಂದು ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದು, ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುವ ಕಾಮುಕ ಸದ್ಯ ತಲೆಮರೆಸಿಕೊಂಡಿದ್ದಾನೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಕಿರುವ ಸರ್ಕಾರಿ ವಸತಿ ನಿಲಯದಲ್ಲಿ ಘೋರ ಕೃತ್ಯ ನಡೆದಿದ್ದು, ಅಲ್ಲಿಯ ವಾರ್ಡನ್ ಸೇರಿದಂತೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಬಾಲಕಿಯನ್ನ ಹಾಸ್ಟೇಲ್ ನಲ್ಲಿ ಕೂಡಿ ಹಾಕಿ ಅತ್ಯಾಚಾರ ಯತ್ನ ನಡೆಸಿರುವುದಾಗಿ ಬಾಲಕಿ ಪೋಷಕರ ಬಳಿ ಹಾಗೂ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಬಾಲಕಿ ಪೋಷಕರು ಕೋಲಾರ ಸಿಇಒ ಬಿಬಿ ಕಾವೇರಿ ಅವರಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

  • ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

    ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

    ಯಾದಗಿರಿ: ವಿದ್ಯಾರ್ಥಿನಿಯೋರ್ವಳು ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.

    ಇಮಾಂಬಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ನಗರದ ಮಲ್ಲಿಕಾ ಡಿಗ್ರಿ ಕಾಲೇಜಿನಲ್ಲಿ ಬಿಕಾಂ ಪ್ರಥಮ ವರ್ಷದ ವ್ಯಾಸಂಗ ಮಡುತ್ತಿದ್ದು, ಮಾತಾ ಮಾಣಿಕೇಶ್ವರಿ ಕಾಲೊನಿಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಇಮಾಂಬಿ ವಾಸವಾಗಿದ್ದಳು.

    ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಾಚಾವಾರ ಗ್ರಾಮದ ನಿವಾಸಿಯಾಗಿರೋ ಇಮಾಂಬಿ ಯಾದಗಿರಿ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಆಗಮಿಸಿದ್ದಳು. ವಿದ್ಯಾರ್ಥಿನಿಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ನಗರ ಠಾಣಾ ಮತ್ತು ಮಹಿಳಾ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.