‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagidaare) ಚಿತ್ರತಂಡ ವಿವಾದದ ಸಂಬಂಧ ರಮ್ಯಾ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ರಮ್ಯಾ, ಚಿತ್ರತಂಡದ ಜೊತೆಗಿನ ವಿವಾದದಲ್ಲಿ ನ್ಯಾಯ ನನ್ನ ಪರ ಇದೆ ಎಂದಿದ್ದಾರೆ. ಇದನ್ನೂ ಓದಿ:6.5 ಲಕ್ಷ ಕೊಡದೇ ವಂಚಿಸಿದ ಆರೋಪ- ನವನಿರ್ದೇಶಕಿ ವಿರುದ್ಧ ದೂರು
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡವು ರಮ್ಯಾ (Ramya) ಅನುಮತಿ ಇಲ್ಲದೇ ಫೋಟೋ, ವಿಡಿಯೋ ಬಳಸಿದ್ದರ ಬಗ್ಗೆ ನಟಿ ಮಾತನಾಡಿ, ಸಿನಿಮಾ ಕುರಿತು ಮಾಡಿಕೊಂಡಿರುವ ಅಗ್ರಿಮೆಂಟ್‌ನಲ್ಲಿ ಸ್ಪಷ್ಟವಾಗಿ ಬರೆದಿದೆ. ನನ್ನ ಒಪ್ಪಿಗೆ ಇಲ್ಲದೇ ಫೋಟೋ ಆಗಲಿ, ವಿಡಿಯೋ ಆಗಲಿ ಬಳಸುವಂತಿಲ್ಲ ಎಂದಿದೆ. ಅದರಂತೆ ಚಿತ್ರದ ನಿರ್ದೇಶಕರು ಕೂಡ ಆಯ್ತು ನಾವು ಬಳಸೋದಿಲ್ಲ ಎಂದಿದ್ದರು.
ಆ ನಂತರ ಸಿನಿಮಾ ರಿಲೀಸ್‌ಗೂ ಮುನ್ನ ಟ್ರೈಲರ್ ಹಾಕಿದ್ದಾರೆ. ಅದರಲ್ಲಿ ನನ್ನ ತುಣುಕನ್ನು ಬಳಸಿದ್ದಾರೆ. ಆದರೆ ಎಲ್ಲೂ ಕ್ಯಾಮಿಯೋ ರೋಲ್ ಮಾಡ್ತಿದ್ದೇನೆ ಅಂತ ಹಾಕಿಯೇ ಇಲ್ಲ. ನಾನೇ ಹೀರೋಯಿನ್ ಎನ್ನುವಂತೆ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಹೀಗೆ ಮಾಡಿರೋದು ನಿಜಕ್ಕೂ ತಪ್ಪು. ಇದನ್ನು ಕೋರ್ಟ್ ಕೂಡ ಒಪ್ಪಿಕೊಂಡಿದೆ. ಈ ವಿಚಾರದಲ್ಲಿ ನ್ಯಾಯ ನನ್ನ ಪರ ಇದೆ. ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕೆಲಸಗಳಿವೆ ಎಂದು ನಟಿ ಮಾತನಾಡಿದ್ದಾರೆ.
ಸದ್ಯ ತಾವು ಇಂದು ಕೋರ್ಟ್ ಕೇಳಿದ ದಾಖಲೆಗಳನ್ನು ನೀಡಿ ಸಹಿ ಹಾಕಿದ್ದೇನೆ. ಮಾರ್ಚ್ 19ರಂದು ಈ ಸಂಬಂಧ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಅಂದಹಾಗೆ, 2023ರಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಿಲೀಸ್ ಆಗಿತ್ತು. ರಮ್ಯಾ ಅನುಮತಿ ಇಲ್ಲದೇ ಫೋಟೋ, ವಿಡಿಯೋ ಬಳಸಿರೋದಕ್ಕೆ ನಟಿ ಕೋರ್ಟ್ ಮೊರೆ ಹೋಗಿದ್ದರು.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekaddare) ಚಿತ್ರತಂಡ ವಿವಾದದ ಸಂಬಂಧ ಇಂದು (ಜ.15) ನ್ಯಾಯಾಲಯಕ್ಕೆ ನಟಿ ರಮ್ಯಾ (Ramya) ಹಾಜರಾಗಲಿದ್ದಾರೆ. ಇದನ್ನೂ ಓದಿ:ಅಪ್ಪ, ಚಿಕ್ಕಪ್ಪನ ಜೊತೆ ವಿನೀಶ್ ಸಂಕ್ರಾಂತಿ ವೈಬ್ಸ್
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿ ಈ ಪ್ರಕರಣದ ಸಂಬಂಧ ಜ.7ರಂದು ರಮ್ಯಾ ವಿಚಾರಣೆಗೆ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ಗೆ ಹಾಜರಾಗಿದ್ದರು. ಆಗ ಜನವರಿ 15ರಂದು ಒರಿಜಿನಲ್ ಅಗ್ರಿಮೆಂಟ್ ಕಾಪಿ ಜೊತೆಗೆ ಕೋರ್ಟ್‌ಗೆ ಬರಲು ರಮ್ಯಾಗೆ ಸೂಚನೆ ನೀಡಲಾಗಿತ್ತು. ಅದರಂತೆ ಇಂದು ದಾಖಲೆಗಳನ್ನು ಸಲ್ಲಿಸಲು ನಟಿ ಕೋರ್ಟ್‌ಗೆ ಹಾಜರಾಗಲಿದ್ದಾರೆ.
ಇನ್ನೂ 2024ರಲ್ಲಿ ರಿಲೀಸ್ ಆಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಚಿತ್ರದ ವಿವಾದಕ್ಕೆ ಸಂಬಂಧಿಸಿದ ಕೇಸ್ ಕುರಿತು ಕೋರ್ಟ್ ವಿಚಾರಣೆಯ ಬಳಿಕ ಮಾಧ್ಯಮಕ್ಕೆ ರಮ್ಯಾ (Ramya) ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣ ಕೋರ್ಟ್‌ನಲ್ಲಿದೆ ಈಗ ಇದರ ಬಗ್ಗೆ ಏನು ಮಾತನಾಡಲ್ಲ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:BBK 11: ಟಾಸ್ಕ್‌ನಲ್ಲಿ ರೊಚ್ಚಿಗೆದ್ದ ಸ್ಪರ್ಧಿ- ಹನುಮಂತನ ಬೆನ್ನಿಗೆ ಬಾರಿಸಿದ ಭವ್ಯಾ
ಕೋರ್ಟ್ ವಿಚಾರಣೆಯ ಬಳಿಕ ರಮ್ಯಾ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೆಲ ದಾಖಲೆಗಳನ್ನು ನೀಡಲು ಹೇಳಿತ್ತು. ಅವರು ಕೇಳಿದ್ದ ಎಲ್ಲಾ ದಾಖಲೆಗಳನ್ನು ಕೊಟ್ಟಿದ್ದೇನೆ. ನೇರವಾಗಿ ಬಂದು ಕೊಡೋಕೆ ಹೇಳಿದ್ದರು. ಹಾಗಾಗಿ ವಿಚಾರಣೆಗೆ ಬಂದಿದ್ದೇನೆ. ಈ ಪ್ರಕರಣ ಕೋರ್ಟ್‌ನಲ್ಲಿರುವ ಕಾರಣಕ್ಕೆ ಹೆಚ್ಚೇನು ಮಾತನಾಡಲ್ಲ ಎಂದು ಮಾತನಾಡಿದ್ದಾರೆ. ಇದೇ ವೇಳೆ, ಮತ್ತೆ ಸಿನಿಮಾ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿ, ಒಳ್ಳೆಯ ಕಥೆ ಸಿಕ್ಕರೆ ಆದಷ್ಟು ಬೇಗ ಬರುತ್ತೇನೆ ಎಂದು ರಮ್ಯಾ ಮಾತನಾಡಿದ್ದಾರೆ. ಜೊತೆಗೆ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ ಎಂದು ನಟಿ ತಿಳಿಸಿದ್ದಾರೆ.
ಅಂದಹಾಗೆ, ಜನವರಿ 15ಕ್ಕೆ ಒರಿಜಿನಲ್ ಅಗ್ರಿಮೆಂಟ್ ಕಾಪಿ ಜೊತೆಗೆ ಕೋರ್ಟ್‌ಗೆ ಬರಲು ರಮ್ಯಾಗೆ ಸೂಚನೆ ನೀಡಲಾಗಿದೆ.
ಇನ್ನೂ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಲ್ಲಿ ಕೆಲ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೆ ಬಳಸಲಾಗಿದೆ. ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ಚಿತ್ರತಂಡದ ಮೇಲೆ ಕೇಸ್ ಹಾಕಿದ್ದರು. 1 ಕೋಟಿ ರೂ. ಪರಿಹಾರ ಕೇಳಿ ನಟಿ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಪ್ರಕರಣದ ವಿಚಾರಣೆಗೆ ಸಂಬಂಧ ಬೆಂಗಳೂರಿನ ಕಮರ್ಷಿಯಲ್ ಕೋರ್ಟ್‌ಗೆ ರಮ್ಯಾ ಹಾಜರಾಗಿದ್ದಾರೆ.
ಇನ್ನೂ 2024ರಲ್ಲಿ ರಿಲೀಸ್ ಆಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ನಟಿಸಿದ್ದರು.
ಹೊಸ ಪ್ರತಿಭೆಗಳ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru Bekagiddare) ಸಿನಿಮಾ ಥಿಯೇಟರ್ ನಲ್ಲಿ ಕಮಾಲ್ ಮಾಡಿತ್ತು. ಕಳೆದ ಜುಲೈ 21ರಂದು ಬಿಡುಗಡೆಯಾಗಿದ್ದ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಕ್ಕಿತ್ತು. ನಕ್ಕು ನಲಿಸಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಒಟಿಟಿಯಲ್ಲಿ ಹವಾಳಿ ಶುರು ಮಾಡಿಕೊಂಡಿದ್ದಾರೆ. ಅಂದರೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜೀ5 ಒಟಿಟಿಗೆ (OTT) ಎಂಟ್ರಿ ಕೊಟ್ಟಿದೆ.
ನಿತಿನ್ ಕೃಷ್ಣಮೂರ್ತಿ (Nitin Krishna) ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಇಡೀ ಸ್ಯಾಂಡಲ್ ವುಡ್ ಸಪೋರ್ಟ್ ಕೊಟ್ಟಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಗೆ ಚಾಲನೆ ನೀಡಿದ್ದರು. ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ಪವನ್ ಕುಮಾರ್ ಹಾಗೂ ರಮ್ಯಾ ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದರು. ಇಡೀ ಚಿತ್ರರಂಗ ಬೆಂಬಲ ಕೊಟ್ಟಿದ್ದ ತುಂಗಾ ಹಾಸ್ಟೆಲ್ ಬಾಯ್ಸ್ ಬೆಳ್ಳಿತೆರೆಯಲ್ಲಿ ಧಮಾಕ ಎಬ್ಬಿಸಿದ್ದರು. ಸಿನಿರಸಿಕರನ್ನು ಸಿನಿಮಾ ಥಿಯೇಟರ್ ನತ್ತ ಮುಖ ಮಾಡುವಂತೆ ಮಾಡಿ ಚಪ್ಪಾಳೆ ಪಡೆದಿದ್ದ ಈ ಸಿನಿಮಾ ತೆಲುಗು, ಹೊರ ದೇಶದಲ್ಲಿಯೂ ಭಾರೀ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದನ್ನೂ ಓದಿ:ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ರಾ ಸೋನು ಗೌಡ
ವರುಣ್ ಗೌಡ, ನಿತಿನ್ ಕೃಷ್ಣಮೂರ್ತಿ, ಪ್ರಜ್ವಲ್ ಬಿ.ಪಿ, ಅರವಿಂದ್ ಎಸ್ ಕಶ್ಯಪ್ ಸಿನಿಮಾಗೆ ಬಂಡವಾಳ ಹೂಡಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮದೇ ಪರವಃ ಪಿಕ್ಚರ್ಸ್ ನಡಿ ಪ್ರೆಸೆಂಟ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ಚಿತ್ರಕ್ಕಿದೆ. ಥಿಯೇಟರ್ ಅಂಗಳದಲ್ಲಿ ಮನರಂಜನೆ ರಸದೌತಣ ನೀಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಜೀ5 ಒಟಿಟಿಗೆ ಎಂಟ್ರಿ ಕೊಟ್ಟಿದೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಕಿರುಚಿತ್ರ ನಿರ್ದೇಶಿಸಲು ವಾರ್ಡನ್ ಸಪೋರ್ಟ್ ಕೊಟ್ಟಿದ್ದರು. ಸಿನಿಮಾ ಒಳಗೊಂದು ಕಿರುಚಿತ್ರ ಕಥೆ ಹೆಣೆಯಲಾಗಿತ್ತು. ಇದೀಗ ಜೀ5 ಅತ್ಯುತ್ತಮ ಕಿರುಚಿತ್ರ ನಿರ್ದೇಶಿಸಿದರಿಗೆ ಆಫರ್ ವೊಂದನ್ನು ಕೊಟ್ಟಿದೆ. ಶಾರ್ಟ್ ಫಿಲ್ಮಂ ಕಂಟೆಸ್ಟ್ ಚಾನ್ಸ್ ನೀಡಿದ್ದು, ಇದರಲ್ಲಿ ಅತ್ಯುತ್ತಮ ಎನಿಸಿದ್ದನ್ನು ಜೀ5 ಒಟಿಟಿಯಲ್ಲಿ ಪ್ರಸಾರ ಮಾಡಲಾಗುತ್ತದೆ.
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagidaare) ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ತೆಲುಗು ವರ್ಷನ್‌ನಲ್ಲಿ ಸಿನಿಮಾ ತರಲು ಚಿತ್ರತಂಡದ ಕಡೆಯಿಂದ ಭರ್ಜರಿ ತಯಾರಿ ನಡೆಯುತ್ತಿದೆ. ಹೀಗಿರುವಾಗ ಮೋಹಕ ತಾರೆ ರಮ್ಯಾ(Ramya) ನಟಿಸಿದ್ದ ಪಾತ್ರದಲ್ಲಿ ಮಿಂಚಲು ತೆಲುಗಿನ ಜನಪ್ರಿಯ ನಟಿ-ನಿರೂಪಕಿ ರಶ್ಮಿ ಗೌತಮ್ (Rashmi Gautham) ಸಜ್ಜಾಗಿದ್ದಾರೆ.
ನಿತಿನ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರೋ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಈಗ ತೆಲುಗು ಅವತರಣಿಕೆಯಲ್ಲಿ ಬರಲು ಸಜ್ಜಾಗ್ತಿದೆ. ಇದೇ ಆಗಸ್ಟ್ 26ಕ್ಕೆ ಹೊರ ರಾಜ್ಯ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ‘ಬಾಯ್ಸ್ ಹಾಸ್ಟೆಲ್’ (Boys Hostel) ಎಂಬ ಹೆಸರಿನಲ್ಲಿ ಡಬ್ ಆಗ್ತಿದೆ. ಈಗ ತೆಲುಗಿನ ಬ್ಯೂಟಿ ರಶ್ಮಿ ಗೌತಮ್ ಚಿತ್ರತಂಡವನ್ನ ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಸಮಂತಾ ಬ್ಯಾಕ್ ಟು ಶೂಟ್- ಹೊಸ ಲುಕ್‌ನಲ್ಲಿ ಕಂಗೊಳಿಸಿದ ನಟಿ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಿಲೀಸ್‌ಗೂ ಮುನ್ನವೇ ಸಾಕಷ್ಟು ವಿಚಾರವಾಗಿ ಸದ್ದು ಮಾಡಿತ್ತು. ಸಿನಿಮಾದಲ್ಲಿ ಕಂಟೆಂಟ್ ಅದೆಷ್ಟರ ಮಟ್ಟಿಗೆ ಪ್ಲಸ್ ಆಗಿತ್ತು. ಸ್ಟಾರ್ ನಟಿ ರಮ್ಯಾ ನಟಿಸಿರೋದು ಕೂಡ ಚಿತ್ರತಂಡಕ್ಕೆ ಪ್ಲಸ್ ಆಗಿತ್ತು. ಈ ಚಿತ್ರದಲ್ಲಿ ಕಾಲೇಜ್ ಹುಡುಗರಿಗೆ ಪಾಠ ಮಾಡುವ ಚೆಂದದ ಟೀಚರ್ ಆಗಿ ರಮ್ಯಾ ನಟಿಸಿದ್ದರು. ರಮ್ಯಾ ಅವರ ಮಸ್ತ್ ಎಂಟ್ರಿ ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಇದೀಗ ಅದೇ ಪಾತ್ರದಲ್ಲಿ ತೆಲುಗು ವರ್ಷನ್ ಡಬ್‌ನಲ್ಲಿ ರಶ್ಮಿ ಗೌತಮ್ ನಟಿಸುತ್ತಿದ್ದಾರೆ.
ಬೆಂಗಳೂರಿನ ನೆಲಮಂಗಲದಲ್ಲಿ ‘ಬಾಯ್ಸ್ ಹಾಸ್ಟೆಲ್’ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದಲ್ಲಿ ರಶ್ಮಿ ಗೌತಮ್ (Rashmi Gautham) ಭಾಗಿಯಾಗಿದ್ದಾರೆ. ಅವರ ಭಾಗದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅವರ ಆ್ಯಕ್ಟಿಂಗ್ ಮತ್ತು ಲುಕ್ ಹೇಗಿರಲಿದೆ ಎಂದು ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಹಾಗಾದ್ರೆ ಆಗಸ್ಟ್ 26ರಂದು ಅಭಿಮಾನಿಗಳ ಕುತೂಹಲಕ್ಕೆ ಉತ್ತರ ಸಿಗಲಿದೆ.
ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagidaare) ಸಿನಿಮಾವೀಗ ತೆಲುಗಿನತ್ತ (Tollywood) ಹೆಜ್ಜೆ ಇಟ್ಟಿದೆ. ಕನ್ನಡ ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆ ಪಡೆದಿಕೊಂಡಿರುವ ಈ ಚಿತ್ರವನ್ನು ’ಬಾಯ್ಸ್ ಹಾಸ್ಟೆಲ್’ ಹೆಸರಿನಡಿ ತೆಲುಗಿಗೆ ಡಬ್ ಮಾಡಲಾಗ್ತಿದೆ. ಇದೇ ತಿಂಗಳ 26ಕ್ಕೆ ಸಿನಿಮಾ ತೆಲುಗು ಪ್ರೇಕ್ಷಕರ ಎದುರು ಸಿನಿಮಾ ಹಾಜರಾಗಲಿದೆ. ಇದನ್ನೂ ಓದಿ:ಎವರ್‌ಗ್ರೀನ್ ನಟಿ ಶ್ರೀದೇವಿ 60ನೇ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ
ನಿತಿನ್ ಕೃಷ್ಣಮೂರ್ತಿ (Nitin Krishnamurthy) ಚೊಚ್ಚಲ ಪ್ರಯತ್ನದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ರಾಜ್ಯ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯ ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಕ್ವಾಟ್ಲೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಇದೀಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಬಾಯ್ಸ್ ಹಾಸ್ಟೆಲ್ ಟೈಲಟ್ ನಡಿ ತೆಲುಗು ಭಾಷೆಗೆ ಡಬ್ ಆಗ್ತಿರೋದು ಖುಷಿ ವಿಚಾರ.
ಚಾಯ್ ಬಿಸ್ಕೆಟ್ ಫಿಲ್ಮ್ಸ್ ಮತ್ತು ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ ’ಬಾಯ್ಸ್ ಹಾಸ್ಟೆಲ್’ ಶೀರ್ಷಿಕೆಯಲ್ಲಿ ಈ ಚಿತ್ರವನ್ನು ಆಗಸ್ಟ್ 26ರಂದು ಬಿಡುಗಡೆ ಮಾಡುತ್ತಿವೆ. ಕನ್ನಡದಲ್ಲಿ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಪರವಃ ಪಿಕ್ಚರ್ಸ್ ಬ್ಯಾನರ್ ಅಡಿ ಪ್ರೆಸೆಂಟ್ ಮಾಡಿದ್ದಾರೆ. ರಂಗಭೂಮಿ ಹಿನ್ನೆಲೆ ಹೊಂದಿರುವ ಪ್ರತಿಭಾನ್ವಿತ ತಂಡಕ್ಕೆ ರಿಷಬ್ ಶೆಟ್ಟಿ(Rishab Shetty), ರಮ್ಯಾ(Ramya), ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ಹಾಗೂ ಇನ್ನಿತರರು ಸಾಥ್ ಕೊಟ್ಟಿದ್ದಾರೆ. ಗುಲ್ಮೊಹರ್ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಟಾಲಿವುಡ್‌ನಲ್ಲಿ ಈ ಬಾಯ್ಸ್ ಹಾಸ್ಟೆಲ್ ಕಥೆ ಹೇಳಲು ರೆಡಿಯಾಗಿದ್ದಾರೆ. ಆಗಸ್ಟ್ 26ಕ್ಕೆ ರಿಲೀಸ್ ಆಗ್ತಿರೋ ಈ ಚಿತ್ರ ತೆಲುಗಿನಲ್ಲೂ ಸಕ್ಸಸ್ ಕಾಣುತ್ತಾ ಕಾಯಬೇಕಿದೆ.
ಹಳ್ಳಿ ಮೇಷ್ಟ್ರೇ.. ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ ಅಂತ ಬಿಂದಿಯಾ ಕರೆದಾಗ ನಮ್ ರವಿಮಾಮ ದಿಲ್ಲಿ ಮೇಡಂ ದಿಲ್ಲಿ ಮೇಡಂ ಸ್ಲೇಟು ಬಳಪ ತನ್ನಿ ಎಂದಿದ್ದು ನಿಮಗೆಲ್ಲ ಗೊತ್ತೆಯಿದೆ. ಈಗ ಹಳ್ಳಿಮೇಷ್ಟ್ರ ಹಾಡನ್ನ ನೆನಪು ಮಾಡಿಕೊಳ್ಳುವುದಕ್ಕೆ ಕಾರಣ ಹಾಸ್ಟೆಲ್ ಹುಡುಗರು. ಕಳೆದೊಂದು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಈ ಹಾಸ್ಟೆಲ್ ಹುಡುಗರ ಹಾವಳಿ ಜೋರಾಗಿದೆ. ಸಿನಿಮಾ ಲೋಕದಿಂದ ದೂರ ಉಳಿದು ಡೆಲ್ಲಿನಲ್ಲಿ ಕೂತಿದ್ದ ಪದ್ಮಾವತಿನಾ ವಾಪಾಸ್ ಗಾಂಧಿನಗರಕ್ಕೆ ಕರೆತಂದ ಹಾಸ್ಟೆಲ್ ಹುಡುಗರ ಮೇಲೆ ಅಭಿಮಾನವೂ ಹೆಚ್ಚಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್, ಶೈನ್ ಶೆಟ್ಟಿನಾ ಒಟ್ಟಿಗೆ ಸೇರಿಸಿರೋದು ಕ್ಯೂರಿಯಾಸಿಟಿ ಮೂಡಿಸಿದೆ. ಹಾಸ್ಟೆಲ್ ಲೈಫ್ ಹೇಗಿರುತ್ತೆ, ಎಷ್ಟೆಲ್ಲಾ ಎಂಜಾಯ್ ಮಾಡ್ಬೋದು, ಏನೆನೆಲ್ಲಾ ಕಿತಾಪತಿ ಮಾಡ್ಬೋದು, ಕಿರಿಕ್ ಮಾಡುವ ವಾರ್ಡನ್‍ಗೆ ಹೇಗೆಲ್ಲಾ ಕಾಟ ಕೊಡ್ಬೋದು, ಯಾವ್ಯಾವ್ ರೀತಿ ರಾಜಕೀಯ ಮಾಡ್ಬೋದು ಅನ್ನೋದನ್ನ ತೋರಿಸುವುದಕ್ಕೆ ಬರುತ್ತಿರುವ ಹಾಸ್ಟೆಲ್ ಹುಡುಗರ ಮೇಲೆ ಕುತೂಹಲವೂ ದುಪ್ಪಟ್ಟಾಗಿದೆ. ಇದೆಲ್ಲದರ ಮಧ್ಯೆ ತಲೆಗೆ ಚಾಯ್ ಪೇ ಚರ್ಚೆಯಾಗಿರುವುದು `ದಿಲ್ಲಿ ಮೇಡಂ ದಿಲ್ಲಿ ಮೇಡಂ ಸ್ಲೇಟು ಬಳಪ ತನ್ನಿ ಎಂದರಾ ಈ ಹಾಸ್ಟೆಲ್ ಹುಡುಗರು ಅನ್ನೋದು.
`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಚಿತ್ರದಲ್ಲಿ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ (Ramya,) ಬಣ್ಣ ಹಚ್ಚಿರುವುದು ಎಲ್ಲರಿಗೂ ತಿಳಿದಿದೆ. ನಾಗರಹಾವು ಸಿನಿಮಾ ನಂತರ ಬಣ್ಣದ ಜಗತ್ತಿನಿಂದ ಅಂತರಕಾಯ್ದುಕೊಂಡಿದ್ದ ಗೌರಮ್ಮ, ಹಾಸ್ಟೆಲ್ ಹುಡುಗರಿಗಾಗಿ ಮತ್ತೆ ಮುಖಕ್ಕೆ ಮೇಕಪ್ ಹಾಕ್ಕೊಂಡಿದ್ದಾರೆ. ಇದು ನನ್ನ ಕಂಬ್ಯಾಕ್ ಸಿನಿಮಾವಲ್ಲ ಬದಲಾಗಿ ಸೆಕೆಂಡ್ ಇನ್ನಿಂಗ್ಸ್‍ಗೆ ಟೀಸರ್ ಅಷ್ಟೇ ಎಂದಿರುವ ಲಕ್ಕಿಬೆಡಗಿ, `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಪಾತ್ರದ ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಆದರೆ, ಟ್ರೈಲರ್ ನೋಡಿದಾಗ ದಿಲ್ಲಿ ಮೇಡಂ ಲೆಕ್ಚರರ್ ರೋಲ್ ಪ್ಲೇ ಮಾಡಿರಬಹುದು ಎನ್ನುವ ಅನುಮಾನ ಮೂಡುತ್ತೆ. ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿರುವ ಸ್ಯಾಂಡಲ್‍ವುಡ್ ಕ್ವೀನ್, ಕೆಮಿಸ್ಟ್ರಿ ಟೀಚರ್ರಾ? ಫಿಸಿಕ್ಸ್ ಲೆಕ್ಚರ್ರಾ ಅಥವಾ ಮ್ಯಾಥಾಮ್ಯಾಟಿಕ್ಸ್ ಹೇಳಿಕೊಡುವ ಮೇಡಂ ಹಾ ಹೀಗೊಂದು ಕುತೂಹಲದ ಪ್ರಶ್ನೆ ಎಲ್ಲರ ತಲೆಗೆ ಹುಳ ಬಿಟ್ಟಿದೆ. ಜೊತೆಗೆ ಈ ಹಾಸ್ಟೆಲ್ ಹುಡುಗರು `ದಿಲ್ಲಿ ಮೇಡಂಗೇನೆ ಸ್ಲೇಟು ಬಳಪ ತನ್ನಿ, ನಾವ್ ಪಾಠ ಮಾಡ್ತೀವಿ ಎಂದರಾ’? ಹೀಗೊಂದು ಸಂಶಯವೂ ಸಿನಿಮಾಪ್ರೇಮಿಗಳ ನಿದ್ದೆಗೆಡಿಸಿದೆ. ಇದಕ್ಕೆ ಏನ್ ಹೇಳ್ತೀರಿ ಅಂತ
ನಿರ್ದೇಶಕ ನಿತಿನ್ ಕೃಷ್ಣಮೂರ್ತಿಯವರನ್ನು ಸಂಪರ್ಕ ಮಾಡಿದರೆ, `ರಮ್ಯಾ ಲೆಕ್ಚರ್ರಾ ಅಥವಾ ಸ್ಟುಡೆಂಟಾ ಅನ್ನೋದು ನೀವು ಥಿಯೇಟರ್‍ಗೆ ಬಂದ್ಮೇಲೇನೆ ಗೊತ್ತಾಗೋದು. ಸಾಕಷ್ಟು ಸರ್ಪೈಸ್ ಎಲಿಮೆಂಟ್ಸ್‍ಗಳನ್ನ ಇಟ್ಟಿದ್ದೇವೆ, ಇದೇ ಜುಲೈ 21ನೇ ತಾರೀಖು ನಮ್ಮ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗ್ತಿದೆ. ಚಿತ್ರಮಂದಿರಕ್ಕೆ ಬಂದು ತಾವೆಲ್ಲರು ಸಿನಿಮಾ ನೋಡ್ಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ:ಅಭಿಮಾನಿ ವರ್ತನೆಗೆ ಬೆಚ್ಚಿಬಿದ್ದ ವಿಜಯ್ ದೇವರಕೊಂಡ
ನಿರ್ದೇಶಕ ನಿತಿನ್ ಕೃಷ್ಣಮೂರ್ತಿಗೆ ಇದು ಡೆಬ್ಯೂ ಸಿನಿಮಾ. ಆದರೆ, ಮನರಂಜನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಜೀ ಕನ್ನಡದ ಬಹುತೇಕ ಧಾರವಾಹಿ ಹಾಗೂ ರಿಯಾಲಿಟಿ ಶೋಗಳ ಪ್ರೋಮೋ ಡೈರೆಕ್ಷನ್ ಮಾಡುವ ನಿತಿನ್, ಕಿಚ್ಚ ಸುದೀಪ್ ನಿರ್ಮಾಣದ ವಾರಸ್ಧಾರ ಸೀರಿಯಲ್ ಪ್ರೋಮೋ ಡೈರೆಕ್ಟ್ ಮಾಡಿದ್ದರು. ಇಂಟ್ರೆಸ್ಟಿಂಗ್ ಅಂದರೆ ಬಾದ್ ಷಾ ಕಿಚ್ಚ ಕೈನಲ್ಲೇ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಪ್ರಮೋಷನಲ್ ಟೀಸರ್ ರಿಲೀಸ್ ಆಗಿದ್ದು. ಆಗ ತಾನೇ ವಿಕ್ರಾಂತ್ ರೋಣ ಸಿನಿಮಾ ಮುಗಿಸಿ ಬಿಗ್‍ಬಾಸ್‍ನಲ್ಲಿ ತೊಡಗಿಸಿಕೊಂಡಿದ್ದ ಕಿಚ್ಚ, ನಿರ್ದೇಶಕ ನಿತಿನ್ ಹಾಗೂ ನಿರ್ಮಾಪಕ ವರುಣ್‍ಗೆ ಕೈ ಜೋಡಿಸಿದರು. ಅಪ್ಪು ಫಸ್ಟ್ ಲುಕ್ ರಿಲೀಸ್ ಮಾಡಿ ಪವರ್ ತುಂಬಿದರೆ, ಕಿಚ್ಚ ಟೀಸರ್ ಅನಾವರಣ ಮಾಡಿಕೊಟ್ಟು ಹಾಸ್ಟೆಲ್ ಹುಡುಗರಿಗೆ ಬಲ ತುಂಬಿದರು. ಸುಮಾರು ವರ್ಷಗಳಿಂದ ನಿತಿನ್, ಪ್ರಜ್ವಲ್, ಅರವಿಂದ್, ರಾಕೇಶ್‍ನ ಹತ್ತಿರದಿಂದ ನೋಡಿದ್ದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಕ್ವಾಲಿಟಿ ಪ್ಲಸ್ ಕ್ವಾಂಟಿಟಿನಾ ನೋಡಿ ಕ್ಲೀನ್ ಬೋಲ್ಡ್ ಆದರು. ತಮ್ಮ ಪರಂವಃ ಬ್ಯಾನರ್ ಅಡಿಯಲ್ಲೇ ಸಿನಿಮಾನ ಪ್ರಸೆಂಟ್ ಮಾಡಲಿಕ್ಕೆ ಒಪ್ಪಿಕೊಂಡರು. ಅದ್ರಂತೆ, ಗ್ರ್ಯಾಂಡ್ ಆಗಿ ಸಿನಿಮಾನ ಬಿಡುಗಡೆ ಮಾಡ್ತಿದ್ದಾರೆ. 120ಕ್ಕಿಂತ ಅಧಿಕ ಚಿತ್ರಮಂದಿರಗಳಲ್ಲಿ ಕರುನಾಡಿನಾದ್ಯಂತ ತೆರೆಗೆ ತರುತ್ತಿದ್ದಾರೆ.
`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸೆಟ್ಟೇರಿದಾಗಿನಿಂದಲೂ ಸ್ಯಾಂಡಲ್‍ವುಡ್‍ನಲ್ಲಿ ಸಾಕಷ್ಟು ಸೌಂಡ್ ಮಾಡ್ತಿರುವ ಸಿನಿಮಾ. ಅಪ್ಪು, ದೀಪು ಸಾಥ್ ಕೊಟ್ಟಿದ್ದರಿಂದ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್, ಶೈನ್ ಶೆಟ್ಟಿ ಸ್ಪೆಷಲ್ ಅಪಿಯರೆನ್ಸ್ ನಲ್ಲಿ ಮಿಂಚಿದ್ದರಿಂದ ಸಿನಿಮಾಗೆ ಪ್ಲಸ್ ಆಗಿದ್ದೇನೋ ನಿಜ. ಆದರೆ, ಈ ಹಾಸ್ಟೆಲ್ ಹುಡುಗರು ಟೆಕ್ನಿಕಲಿ ಹೊಸ ಪ್ರಯೋಗ ಮಾಡಿದ್ದಾರೆ. ಸಿನಿಮಾ ವೆರೈಟ್ ಸ್ಟೈಲ್ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಕ್ಯಾಮೆರಾ ಹಾಗೂ ಸೌಂಡಿಂಗ್‍ನಲ್ಲಿ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇಡೀ ಕರ್ನಾಟಕ ತುಂಬೆಲ್ಲಾ ಸಂಚರಿಸಿ ಸುಮಾರು 6000 ಹುಡುಗರನ್ನ ಆಡಿಷನ್ ಮಾಡಿ, ಕೊನೆಗೆ 500 ಮಂದಿಯನ್ನ ಆಯ್ಕೆಮಾಡಿಕೊಂಡು `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಚಿತ್ರೀಕರಿಸಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳೇ ತುಂಬಿರುವ ಈ ಚಿತ್ರದಲ್ಲಿ ಪ್ರಜ್ವಲ್ ಎಂಬಾತ ಕಥೆನಾ ಡ್ರೈವ್ ಮಾಡ್ತಾನೆ. ರಾಕೇಶ್, ಶ್ರೀವತ್ಸ, ಮಂಜುನಾಥ್ ನಾಯಕ್, ನಿತಿನ್, ಅರವಿಂದ್, ಅಭಿಷೇಕ್ ದಾಸ್ ಸೇರಿದಂತೆ 40 ಮಂದಿ ಲೀಡ್ ರೋಲ್ನನಲ್ಲಿದ್ದಾರೆ. ಠಾಕೂರ್ ಪಾತ್ರದಲ್ಲಿ ರಿಷಬ್, ದ್ರಾಕ್ಷಿ ರೋಲ್‍ನಲ್ಲಿ ಪವನ್ ಕುಮಾರ್, ಕಬಾಬ್ ಕ್ಯಾರೆಕ್ಟರ್ ನಲ್ಲಿ ಶೈನ್ ಶೆಟ್ಟಿ, ಬಂಟಿಗೌಡನ ಅವತಾರದಲ್ಲಿ ದಿಗಂತ್ ಮಂಚಾಲೆ ಹೊಸ ಮೇನಿಯಾ ಸೃಷ್ಟಿಸಲಿದ್ದಾರೆ.
ಕ್ವಿರ್ಕಿ ಸ್ಟೈಲ್‍ನಲ್ಲಿ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕ್ಯಾರಿ ಮಾಡಲಾಗಿದೆ. ಪಾಪ್ ಕಲ್ಚರ್ ಒಳಗೊಂಡಿರೋ ಈ ಸಿನಿಮಾ ಮಂಗಳೂರು ಹಾಗೂ ಬೆಂಗಳೂರು ಬ್ಯಾಕ್‍ಡ್ರಾಪ್‍ನಲ್ಲಿ ಶೂಟಿಂಗ್ ಮಾಡಲಾಗಿದೆ. ಟೋಟಲ್ 80 ರಿಂದ 100 ರಾತ್ರಿ ಹಾಸ್ಟೆಲ್ ನಲ್ಲೇ ಈ ಸಿನಿಮಾನ ಕ್ಯಾಪ್ಚರ್ ಮಾಡಲಾಗಿದೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್‍ಮೋಹರ್ ಫಿಲ್ಮಂಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಕಾಮಿಡಿ, ಥ್ರಿಲ್, ಸಸ್ಪೆನ್ಸ್ ಒಳಗೊಂಡಿರೋ ಈ ಸಿನಿಮಾ ಹಾಲಿವುಡ್ ಲೆವೆಲ್‍ನಲ್ಲಿ ನಿರ್ಮಾಣಗೊಂಡಿರುವುದು ಮತ್ತೊಂದು ವಿಶೇಷ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರದ ಶ್ರೀಮಂತಿಕೆ ಹೆಚ್ಚಿಸಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಪರಂವಃ ಬ್ಯಾನರ್ ಅಡಿ ಈ ಸಿನಿಮಾನ ಪ್ರಸೆಂಟ್ ಮಾಡಲಾಗ್ತಿದ್ದು, ಇದೇ ಜುಲೈ 21ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ತರಲಾಗ್ತಿದೆ.
ಅನುಮತಿ ಇಲ್ಲದೇ ತಮ್ಮ ಫೋಟೋ ಮತ್ತು ವಿಡಿಯೋವನ್ನು ಹಾಸ್ಟೇಲ್ ಹುಡುಗರು ಬೇಕಾಗಿದ್ದರೆ (Hostel Hudugaru Bekagiddare) ಚಿತ್ರತಂಡ ಬಳಸಿಕೊಂಡಿದೆ ಎಂದು ತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದರು ಮೋಹಕ ತಾರೆ ರಮ್ಯಾ (Ramya). ತಮ್ಮ ಅನುಮತಿ ಇಲ್ಲದೇ ಫೋಟೋ ಮತ್ತು ವಿಡಿಯೋ ಬಳಸಿಕೊಂಡಿದ್ದಕ್ಕೆ ಪರಿಹಾರವಾಗಿ ಒಂದು ಕೋಟಿ ರೂಪಾಯಿ ನೀಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಿದ್ದರು.
ನಿನ್ನೆ ಕೋರ್ಟ್ ಮುಂದೆ ಬಂದಿದ್ದ ಈ ವಿಚಾರಣೆಯನ್ನು ಒಂದು ದಿನ ಮುಂದಕ್ಕೆ ಹಾಕಿ, ಮತ್ತೆ ಇಂದು ವಿಚಾರಣೆ ನಡೆಸಿತು ಮಾನ್ಯ ನ್ಯಾಯಾಲಯ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಟೆಲ್ ಹುಡುಗರಿಗೆ ಜಯ ಸಿಕ್ಕಿದ್ದು, ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು (Application) ಮಾನ್ಯಾ ನಾಯಾಲಯ ವಜಾಗೊಳಿಸಿದೆ. ಇದನ್ನೂ ಓದಿ:ರಮ್ಯಾ ಬದಲು ರಚಿತಾ ರಾಮ್: ಎರಡು ಬಾರಿ ರಮ್ಯಾ ಸ್ಥಾನ ತುಂಬಿದ ರಚ್ಚು
ಕೋರ್ಟ್ (Court) ನಲ್ಲಿಇಂದು ನಡೆದ ವಿಚಾರಣೆಯಲ್ಲಿ ಹಾಸ್ಟೆಲ್ ಹುಡುಗರ ಪರ ಆದೇಶ ಹೊರ ಬಂದಿದ್ದು, ನಾಳೆ ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಆಗಲಿದೆ. ಹಾಸ್ಟೆಲ್ ಹುಡುಗರ ಪರ ವಕೀಲ ವೇಲನ್ ಅವರು ವಾದ ಮಾಡಿದ್ದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯವು, ರಮ್ಯಾ ಹಾಕಿದ್ದ ಕೇಸ್ ತೆರವುಗೊಳಿಸಿ, ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.
ರಮ್ಯಾ ಸೇರಿದಂತೆ ಅನೇಕ ಸ್ಟಾರ್ ನಟ-ನಟಿಯರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ದಿಗಂತ್ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ. ರಮ್ಯಾ ಕೂಡ ಈ ಸಿನಿಮಾದಲ್ಲಿ ಉಪನ್ಯಾಸಕಿಯ ಪಾತ್ರ ಮಾಡಿದ್ದರು. ಅದು ಅತಿಥಿ ಪಾತ್ರವಾಗಿತ್ತು. ಈ ಪಾತ್ರದ ವಿರುದ್ದವೇ ಅವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ಈ ಸುದ್ದಿ ಪೂರ್ತಿ ಓದಿದ್ಮೇಲೆ ನೀವೆಲ್ಲ ಸೇರಿಕೊಂಡು ಆ ವಿಧಿಗೆ ಮತ್ತೆ ಶಾಪ ಹಾಕ್ತೀರಿ, ಆಫ್ ಕೋರ್ಸ್ ಹಾಕಲೇಬೇಕು. ಯಾಕಂದ್ರೆ, ಅಪ್ಪು ಸ್ಟಾರ್ ಅನ್ನೋದು ಜನಕ್ಕೆ ಗೊತ್ತಿತ್ತು. ಆದರೆ ಆ ಭಗವಂತನಿಗೆ ಅಪ್ಪು ಬರೀ ನಾಯಕನಟನಾಗಿ ಉಳಿದಿಲ್ಲ ಎನ್ನುವ ಸತ್ಯದ ಅರಿವಾಗಿತ್ತು. ದೊಡ್ಮನೆ ಹುಡುಗ ಯುದ್ದ ಮಾಡದೇ ಕರುನಾಡೆಂಬ ರಾಜ್ಯ ಗೆದ್ದಿದ್ದಾನೆ, ರಾಜನಾಗುವ ಅವಕಾಶ ಇದ್ದರೂ ಸಾಮಾನ್ಯನಂತೆ ಬದುಕುತ್ತಿದ್ದಾನೆನ್ನುವ ಸಂಗತಿಯೂ ದೇವರಿಗೆ ತಿಳಿದಿತ್ತು. ದಾನ ಧರ್ಮದಲ್ಲಿ, ಕಷ್ಟಕ್ಕೆ ಸ್ಪಂದಿಸುವುದರಲ್ಲಿ, ಸಹಾಯಕ್ಕೆ ಧಾವಿಸುವುದರಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆ ಇದ್ದಾನೆ. ಈ ಕಲಿಯುಗದಲ್ಲಿ ದಾನಶೂರ ಕರ್ಣನಾಗಿ, ದೇವತಾ ಮನುಷ್ಯನಾಗಿ ಮುನ್ನಡೆಯುತ್ತಿದ್ದಾನೆನ್ನುವ ವಿಚಾರವೂ ಗೊತ್ತಾಗಿತ್ತು. ಇಷ್ಟಾದ್ರೂ ಕೂಡ ಅಪ್ಪು ಮೇಲೆ ಆ ಭಗವಂತ ಕರುಣೆ ತೋರದೇ ಏಕಾಏಕಿ ಹೊತ್ತೊಯ್ದುಬಿಟ್ಟ. ಆದ್ರೀಗ ಆ ಭಗವಂತನಿಗೆ ಅರಿವಾಗಿದೆ ನಾನು ಕುಣಿಕೆ ಸರಿದಿದ್ದು ಸಾಕ್ಷಾತ್ ಪರಮಾತ್ಮನಿಗೆ ಅಂತ.
ಈ ಕ್ಷಣಕ್ಕೆ ಅಪ್ಪು ಬರೀ ನಟರಾಗಿ ಉಳಿದಿಲ್ಲ ಬದಲಾಗಿ ದೇವರ ಸ್ಥಾನದಲ್ಲಿ ಕೂತಿದ್ದಾರೆ. ಅವರ ಅಭಿಮಾನಿಗಳ ಹಾದಿಯಾಗಿ ಕರುನಾಡಿನ ಎಷ್ಟೋ ಜನ ಅಪ್ಪುನಾ (Puneeth Rajkumar) ಮನೆದೇವರಂತೆ ಪೂಜಿಸ್ತಿದ್ದಾರೆ. ಒಳ್ಳೆ ಕೆಲಸಕ್ಕೆ ಕೈ ಹಾಕುವ ಮುನ್ನ ಹಲವರು ಅಪ್ಪುನಾ ನೆನೆಯುತ್ತಿದ್ದಾರೆ. ಕೆಲವರು ಪರಮಾತ್ಮನ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುತ್ತಿದ್ದಾರೆ. ಆದರೆ ಈ ಹಾಸ್ಟೆಲ್ ಹುಡುಗರಿಗೆ (Hostel Hudugaru Bekagiddare) ಅಂಜನಿಪುತ್ರನ ಆಶೀರ್ವಾದ ಅಂದೇ ಸಿಕ್ಕಿತ್ತು. ಅಚ್ಚರಿ ಅಂದರೆ ಹಾಸ್ಟೆಲ್ ಹುಡುಗರಿಗೆ ಒಳ್ಳೆದಾಗಬೇಕು ಅಂತ ಸ್ವತಃ ಪವರ್ ಸ್ಟಾರ್ ಪರಮಾತ್ಮನ ಮೊರೆ ಹೋಗಿದ್ದರು. ವಿಘ್ನವಿನಾಶಕನಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದದ ಜೊತೆಗೆ ಹಾಸ್ಟೆಲ್ ಹುಡುಗರನ್ನು ಭೇಟಿ ಮಾಡಿದ್ದರು. ಅಷ್ಟಕ್ಕೂ, ಆ ಹಾಸ್ಟೆಲ್ ಹುಡುಗರು ಬೇರಾರು ಅಲ್ಲ ಜುಲೈ 21ರಂದು ನಿಮ್ಮ ಮುಂದೆ ಹಾಜರಾಗಲಿರುವ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಟೀಮ್
`ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಯುವನಿರ್ದೇಶಕ ನಿತಿನ್ ಕೃಷ್ಣಮೂರ್ತಿ (Nitin Krishnamurthy) ಡೈರೆಕ್ಟ್ ಮಾಡಿರುವ ಚಿತ್ರ. ಸಂಪೂರ್ಣ ಹೊಸಬರೇ ತುಂಬಿರುವ ಈ ಚಿತ್ರದಲ್ಲಿ, ಮೋಹಕ ತಾರೆ ರಮ್ಯಾ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಲೂಸಿಯಾ ಪವನ್, ದಿಗಂತ್, ಶೈನ್ ಶೆಟ್ಟಿ ಮಿಂಚಿರೋದ್ರಿಂದ ಹಾಸ್ಟೆಲ್ ಹುಡುಗರು ಸಾಕಷ್ಟು ಸೌಂಡ್ ಮಾಡ್ತಿದ್ದಾರೆ. ಇವತ್ತು ಈ ಚಿತ್ರ ಇಷ್ಟೊಂದು ಸದ್ದು ಸುದ್ದಿ ಮಾಡ್ತಿರುವುದಕ್ಕೆ ಮೊದಲ ಕಾರಣ ಅಪ್ಪು ಅಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಅವತ್ತು ಈ ಚಿತ್ರತಂಡ ಡೇಟ್ಸ್ ಕೇಳಿದಾಗ ಬರೀ ಲಯನ್ ಡೇಟ್ಸ್‍ನ ಕೊಟ್ಟು ಕಳುಹಿಸದೇ ಅಪ್ಪು ಡೇಟ್ ಕೊಟ್ಟರು. ಸದಾಶಿವನಗರದಲ್ಲಿರುವ ತಮ್ಮ ಆಫೀಸ್‍ಗೆ ಬರುವಂತೆ ತಿಳಿಸಿದರು. ಅವರೆಲ್ಲರು ಬಂದು ಆಫೀಸ್‍ನಲ್ಲಿ ಹಾಜರಾಗುವಷ್ಟರಲ್ಲಿ ಸದಾಶಿವನಗರದಲ್ಲಿದ್ದ ಗಣೇಶನ ಸನ್ನಿಧಿಗೆ ಹೋಗಿ ಪುನೀತ್ ಪೂಜೆ ಮಾಡಿಸಿದ್ದಾರೆ. ಅಲ್ಲಿಂದ ಬಂದು ಇಡೀ ಟೀಮ್‍ಗೆ ಪ್ರಸಾದ ನೀಡಿ ಪ್ರೋಮೋ ಶೂಟ್‍ನಲ್ಲಿ ಭಾಗಿಯಾಗಿ ಫಸ್ಟ್ ಲುಕ್ ಲಾಂಚ್ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ:ಅಪಘಾತದಿಂದ ಚೇತರಿಸಿಕೊಂಡ್ರಾ ಸಾಯಿ ಧರಂ ತೇಜ್- ನಟ ಹೇಳೋದೇನು?
ಫಸ್ಟ್ ಲುಕ್ ಬಿಡುಗಡೆ ಮಾಡಿಕೊಡಲು ಒಪ್ಪಿಕೊಂಡಿದ್ದ ಅಪ್ಪು ನೇರವಾಗಿ ಪೋಸ್ಟರ್ ರಿಲೀಸ್ ಮಾಡಿಕೊಡಬಹುದಿತ್ತು. ಆದರೆ, ಪ್ರತಿಭಾವಂತರ ತಂಡವೊಂದು ಹೊಸ ಪ್ರಯೋಗ ಮಾಡ್ತಿರುವುದನ್ನು ಗಮನಿಸಿದ ಪವರ್ ಸ್ಟಾರ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ಸತ್ಯ ಇಲ್ಲಿವರೆಗೂ ಯಾರಿಗೂ ಗೊತ್ತಿರಲಿಲ್ಲ. ಇತ್ತೀಚೆಗೆ ದೇವಸ್ಥಾನದ ಅರ್ಚಕರೇ ಈ ಸತ್ಯವನ್ನ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಅಂದ್ಹಾಗೇ, ಕಣ್ಣಮುಂದಿನ ಉದಾಹರಣೆ ಅಷ್ಟೇ, ಇಂತಹ ಎಷ್ಟೋ ಘಟನೆಗಳಿಗೆ ಅಪ್ಪು ಸಾಕ್ಷಿಯಾಗಿದ್ದಾರೆ. ಪ್ರತಿಭಾವಂತರನ್ನ ಪ್ರೋತ್ಸಾಹಿಸಿ ಬೆಂಬಲಿಸಿದ್ದಾರೆ. ತಮಗಷ್ಟೇ ಅಲ್ಲ ತಮ್ಮ ಸುತ್ತಮುತ್ತಲಿನವರೆಲ್ಲರಿಗೂ ಒಳ್ಳೆದಾಗಬೇಕು, ಎಲ್ಲರೂ ನೆಮ್ಮದಿಯಿಂದ- ಸಂತೋಷದಿಂದ ಬಾಳಬೇಕು, ಎಲ್ಲರೂ ತಮ್ಮಂತೆಯೇ ಬೆಳಿಬೇಕು ಅಂತ ಹಾರೈಸುವ ದೊಡ್ಡಮನಸ್ಸಿರುವ ದೊಡ್ಮನೆ ರಾಜಕುಮಾರನ್ನ ಆ ದೇವರು ಇಷ್ಟು ಬೇಗ ಕಿತ್ಕೊಂಡಿದ್ದು ನಮ್ಮೆಲ್ಲರ ದೌರ್ಭಾಗ್ಯವೇ ಸರೀ.
ಎನಿವೇ, ಅಪ್ಪು ಆಶೀರ್ವಾದ ಪಡೆದು ನಿಮ್ಮೆಲ್ಲರಿಗೂ ದರ್ಶನ ನೀಡಲು ಬರುತ್ತಿರುವ `ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡವನ್ನ ನೀವೆಲ್ಲರೂ ಪ್ರೋತ್ಸಾಹಿಸಬೇಕಿದೆ. ಅಪ್ಪು ಸ್ಥಾನದಲ್ಲಿ ನಿಂತು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಟ್ರೇಲರ್ ಲಾಂಚ್ ಮಾಡಿಕೊಟ್ಟಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಬೆನ್ನೆಲುಬಾಗಿ ನಿಂತಿದ್ದಾರೆ. ಸಮಸ್ತ ದೊಡ್ಮನೆ ರಾಜಕುಮಾರನ ಅಭಿಮಾನಿ ದೇವರುಗಳು ಹಾಸ್ಟೆಲ್ ಹುಡುಗರಿಗೆ ಸಪೋರ್ಟ್ ಮಾಡ್ತಿದ್ದಾರೆ. ಸರಿಸುಮಾರು 500 ಜನ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು, ಕನ್ನಡ ಕಲಾಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡಲು ಬರ್ತಿದ್ದಾರೆ. ವರುಣ್ ಸ್ಟುಡಿಯೋಸ್ (Varun Studios) ಹಾಗೂ ಗುಲ್‍ಮೋಹರ್ ಫಿಲ್ಮಂಸ್ ಬ್ಯಾನರ್ ಅಡಿ ಪ್ರಜ್ವಲ್ ಬಿ.ಪಿ, ವರುಣ್ ಕುಮಾರ್ ಗೌಡ, ನಿತಿನ್ ಕೃಷ್ಣಮೂರ್ತಿ, ಅರವಿಂದ್ ಕೆ ಕಶ್ಯಪ್ ಬಂಡವಾಳ ಹೂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಸಂಕಲನ ಚಿತ್ರಕ್ಕಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಪರಂವಃ ಬ್ಯಾನರ್ ಅಡಿ ಈ ಸಿನಿಮಾನ ಪ್ರಸೆಂಟ್ ಮಾಡಲಾಗ್ತಿದ್ದು, ಇದೇ ಜುಲೈ 21ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ತರಲಾಗ್ತಿದೆ.