Tag: ಹಾಸಿಗೆ

  • ಚಿಕಿತ್ಸೆಗೆಂದು ಬಂದಿದ್ದ ತಾಯಿ, ಮಗಳು – ಆಸ್ಪತ್ರೆಯ ಕಬೋರ್ಡ್‍ನಲ್ಲಿ, ಹಾಸಿಗೆಯ ಕೆಳಗೆ ಶವವಾಗಿ ಪತ್ತೆ

    ಚಿಕಿತ್ಸೆಗೆಂದು ಬಂದಿದ್ದ ತಾಯಿ, ಮಗಳು – ಆಸ್ಪತ್ರೆಯ ಕಬೋರ್ಡ್‍ನಲ್ಲಿ, ಹಾಸಿಗೆಯ ಕೆಳಗೆ ಶವವಾಗಿ ಪತ್ತೆ

    ಗಾಂಧಿನಗರ: ಆಪರೇಷನ್ ಥಿಯೇಟರ್‌ನ ಕಬೋರ್ಡ್‍ನಲ್ಲಿ ಮಗಳ (Daughter) ಹಾಗೂ ಹಾಸಿಗೆಯ ಕೆಳಗೆ ತಾಯಿಯ (Mother) ಶವ ಪತ್ತೆಯಾದ ಘಟನೆ ಅಹಮದಾಬಾದ್‍ನ ಭೂಬಾಯ್ ಪಾರ್ಕ್ ಬಳಿ ಇರುವ ಆಸ್ಪತ್ರೆಯಲ್ಲಿ (Hospital) ನಡೆದಿದೆ.

    ಮೃತರನ್ನು ತಾಯಿಯನ್ನು ಚಂಪಾ ಮತ್ತು ಮಗಳನ್ನು ಭಾರತಿ ವಾಲಾ (30) ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ದುರ್ವಾಸನೆ ಬರುತ್ತಿತ್ತು. ಇದನ್ನು ತಾಳಲಾರದ ಅಲ್ಲಿನ ಸಿಬ್ಬಂದಿ ಅಲ್ಲಿದ್ದ ಕಬೋರ್ಡ್‍ನ್ನು (Cupboard) ತೆರೆದಿದ್ದಾರೆ. ಆ ವೇಳೆ ಭಾರತಿಯ ಮೃತದೇಹ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದಾರೆ.

    crime

    ಸಿಸಿಟಿವಿಯಲ್ಲಿ ಭಾರತಿ ಮತ್ತೊಬ್ಬ ಮಹಿಳೆಯೊಂದಿಗೆ ಇರುವುದು ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಹುಡುಕಿದಾಗ ಕೊಠಡಿಯೊಂದರಲ್ಲಿ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ ತಾಯಿಯ ಶವ ಪತ್ತೆ ಆಗಿದೆ. ಅದಾದ ಬಳಿಕ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಗೆ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಮೆಸ್ಸಿ ಕೈಯಲ್ಲಿ ಕಮಲ – ಬಿಜೆಪಿಗೆ ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೋಲ್

    ಈ ವೇಳೆ ತಾಯಿ, ಮಗಳಿಬ್ಬರೂ ಚಿಕಿತ್ಸೆಗಾಗಿ ಇಬ್ಬರೂ ಆಸ್ಪತ್ರೆಗೆ ಬಂದಿದ್ದರು. ತಾಯಿ ಮತ್ತು ಮಗಳಿಗೆ ಮೊದಲು ಇಂಜೆಕ್ಷನ್ ನೀಡಿ ಕೊಂದಿದ್ದು, ಅದಾದ ಬಳಿಕ ಖಚಿತ ಪಡಿಸಿಕೊಳ್ಳಲು ಕತ್ತು ಹಿಸುಕಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಭಾರತಿ ಮದುವೆಯಾಗಿದ್ದರೂ ತಾಯಿಯೊಂದಿಗೆ ನರೋಲ್‍ನಲ್ಲಿ ನೆಲೆಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದ್ದು, ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮನ್ಸುಖ್ ಎಂಬಾತನನ್ನು ಬಂಧಿಸಲಾಗಿದೆ. ಈತ ಭಾರತಿಯ ಸಂಬಂಧಿಯಾಗಿದ್ದ. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ ಪಂಚಮಸಾಲಿ ಸವಾಲು – ಬೇಡಿಕೆ ಏನು? ವಸ್ತುಸ್ಥಿತಿ ಏನಿದೆ? ಯಾವ ಜಿಲ್ಲೆಗಳಲ್ಲಿಎಷ್ಟಿದೆ ಪ್ರಭಾವ?

    Live Tv
    [brid partner=56869869 player=32851 video=960834 autoplay=true]

  • ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ದರ್ಬಾರ್ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳಿಂದ ಆಕ್ರೋಶ

    ರಿಮ್ಸ್ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ದರ್ಬಾರ್ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ರೋಗಿಗಳಿಂದ ಆಕ್ರೋಶ

    ರಾಯಚೂರು: ನಗರದ ರಿಮ್ಸ್ (RIMS) ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆ ಈಗ ಬೀದಿನಾಯಿಗಳ ನೆಚ್ಚಿನ ತಾಣವಾಗಿದೆ.

    ಆಸ್ಪತ್ರೆಯ ನಾಲ್ಕನೇ ಅಂತಸ್ತಿನವರೆಗೂ ಯಾರ ಭಯವಿಲ್ಲದೇ ನಾಯಿಗಳು ಓಡಾಡಿಕೊಂಡಿವೆ. ನವಜಾತ ಶಿಶು ಕೊಠಡಿ, ಬಾಣಂತಿಯರ ಲೇಬರ್ ರೂಂ ಬಳಿಯೇ ನಾಯಿಗಳು ಮಲಗುವುದರಿಂದ ಆಸ್ಪತ್ರೆಗೆ ಬರುವವರಲ್ಲಿ ಆತಂಕ ಹೆಚ್ಚಾಗಿದೆ. ರಾತ್ರಿಯಾದರೆ ರೋಗಿಗಳ ಹಾಸಿಗೆಯ ಮೇಲೆ ಬಂದು ನಾಯಿಗಳು ಮಲಗುತ್ತಿವೆ ಅಂತ ರೋಗಿಗಳ ಕಡೆಯವರು ಆರೋಪಿಸಿದ್ದಾರೆ.

    ನವಜಾತ ಶಿಶುಗಳಿಗೆ ಅಪಾಯ ಮಾಡಿದರೆ, ರಾತ್ರಿ ವೇಳೆ ಹೊತ್ತೊಯ್ದರೆ ಜವಾಬ್ದಾರಿ ಯಾರು? ಈ ಬಗ್ಗೆ ಸಾಕಷ್ಟು ಬಾರಿ ರಿಮ್ಸ್ ಆಡಳಿತ ಮಂಡಳಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಬಾಣಂತಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶ್ರದ್ಧಾರಂಥ ಹೆಣ್ಣುಮಕ್ಕಳು ಒಳ್ಳೆ ಹುಡುಗರನ್ನ ಆಯ್ಕೆ ಮಾಡ್ಕೋಬೇಕು; ಅಫ್ತಾಬ್‌ನ ನೇಣಿಗೆ ಹಾಕಿ – ರಾವತ್‌

    ಶ್ವಾನಗಳು ನೇರವಾಗಿ ಆಸ್ಪತ್ರೆ ಒಳಗಡೆ ಬಂದು ಅಲ್ಲಲ್ಲಿ ಬೀಸಾಡಿರುವ ವಸ್ತುಗಳಲ್ಲಿ ಆಹಾರ ಹುಡುಕಾಟ ನಡೆಸುತ್ತವೆ. ಕೊನೆಗೆ ಅಲ್ಲಿಯೇ ಮಲಗುತ್ತಿವೆ. ಒಂದು ವೇಳೆ ನಾಯಿ ಕಚ್ಚಿದರೆ ಕೊಡಲು ಔಷಧಿಯ ಕೊರತೆಯೂ ಇದೆ. ಪರಿಸ್ಥಿತಿ ಹೀಗಿದ್ದರೂ ರಿಮ್ಸ್‌ನ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರು – ಅಂಗಡಿಯಲ್ಲಿದ್ದ ವೃದ್ಧೆಯ ಚಿನ್ನದ ಸರ ಕಿತ್ತು ಎಸ್ಕೇಪ್

    Live Tv
    [brid partner=56869869 player=32851 video=960834 autoplay=true]

  • ನಾನ್ ಬೆಡ್‍ಶೀಟ್, ತಲೆದಿಂಬು- ಬೆಡ್‍ರೂಮ್ ಫೋಟೋ ವೈರಲ್

    ನಾನ್ ಬೆಡ್‍ಶೀಟ್, ತಲೆದಿಂಬು- ಬೆಡ್‍ರೂಮ್ ಫೋಟೋ ವೈರಲ್

    ನವದೆಹಲಿ: ಜನಪ್ರಿಯ ಮಾಡೆಲ್ ಪದ್ಮಾ ಲಕ್ಷ್ಮಿ ಭಾರತೀಯ ಖಾದ್ಯಗಳ ಅಭಿಮಾನಿಯಾಗಿದ್ದಾರೆ. ಹೀಗಾಗಿ ಅವರು ಬೆಡ್‍ಶೀಟ್, ತಲೆದಿಂಬನ್ನು ರೊಟ್ಟಿಯಂತೆ ಡಿಸೈನ್ ಇರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಉತ್ತರ ಭಾರತದ ಖ್ಯಾತ ತಿನಿಸುಗಳಲ್ಲೊಂದಾದ ನಾನ್‍ನ (ಮೈದಾಹಿಟ್ಟಿನ ರೊಟ್ಟಿ) 3ಡಿ ಪ್ರಿಂಟ್ ಇರುವ ಬೆಡ್‍ಶೀಟ್ ಹಾಗೂ ತಲೆ ದಿಂಬಿನ ಕವರ್‍ಗಳನ್ನು ಡಿಸೈನ್ ಮಾಡಿಸಿಕೊಂಡಿದ್ದಾರೆ. ಬೆಡ್‍ರೂಮ್‍ನ್ನು ವಿಭಿನ್ನವಾಗಿ ಅಂಕರಿಸುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್

    ಹಾಸಿಗೆಗೆ ಸಾಕಾಗುವಷ್ಟು ನಾನ್ ತಯಾರಿಸಿ ತಂದು ಹಾಸಿಗೆಗೆ ಹೊದಿಸಿದ್ದಾರೆ ಎನ್ನುವ ಹಾಗೆ ಬೆಡ್ ಕಾಣಿಸುತ್ತದೆ. ನಾನ್‍ಬೆಡ್ ಮಾರಾಟಕ್ಕಿದೆ, ನಾನ್‍ನಿಂದ ತಯಾರಿಸಿದ 2 ದಿಂಬುಗಳು ಉಚಿತ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ಟ್ವಿಟರ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ತುಮಕೂರಿನಲ್ಲಿ ಮತ್ತೆ ಕೊರೊನಾ ಭೀತಿ – 42 ಪುಟ್ಟ ಮಕ್ಕಳಿಗೆ ವಕ್ಕರಿಸಿದ ಕೋವಿಡ್

    ನೀವು ಮಲಗಿದ್ದಾಗ ಇಡೀ ಬೇಡ್‍ನ್ನು ಸ್ವಲ್ಪ ಸ್ವಲ್ಪ ತಿನ್ನತ್ತಾ ಹೋದರೆ ಏನು ಗತಿ? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಲಕ್ಷ್ಮಿ ಕೂಡಾ ತಮಾಷೆಯಾಗಿ ಉತ್ತರವನ್ನು ನೀಡಿದ್ದಾರೆ. ಹಾಸ್ಯಾಸ್ಪದವಾದ ಕಲವರು ಕಾಮೆಂಟ್‍ಗಳು ಈ ಪೋಸ್ಟ್‍ಗೆ ಬಂದಿದೆ.

  • ಕೃಷ್ಣಾ ನದಿ ಪಾಲಾಗಿದ್ದ ನಾಲ್ವರು ಸಹೋದರರ ಶವ ಪತ್ತೆ

    ಕೃಷ್ಣಾ ನದಿ ಪಾಲಾಗಿದ್ದ ನಾಲ್ವರು ಸಹೋದರರ ಶವ ಪತ್ತೆ

    ಚಿಕ್ಕೋಡಿ: ಹಾಸಿಗೆ ತೊಳೆಯಲು ಹೋಗಿ ಕೃಷ್ಣಾ ನದಿಯಲ್ಲಿ ನೀರು ಪಾಲಾಗಿದ್ದ ನಾಲ್ವರು ಸಹೋದರರ ಶವಗಳನ್ನು ಎನ್‍ಡಿಆರ್‍ಎಫ್ ತಂಡ ಹಾಗೂ ಸ್ಥಳೀಯರು ಪತ್ತೆ ಹಚ್ಚಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ನಾಲ್ಕು ಜನ ಸಹೋದರರು ನೀರು ಪಾಲಾಗಿದ್ದರು. ಇದೀಗ ನಾಲ್ವರ ಮೃತದೇಹವು ಪತ್ತೆಯಾಗಿದೆ. ನಿನ್ನೆ ಒಬ್ಬ ಹಾಗೂ ಇಂದು ಮೂವರ ಶವಗಳನ್ನು ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಸ್ಥಳೀಯರು ನೀರಿನಲ್ಲಿ ಕಾರ್ಯಚರಣೆ ನಡೆಸಿ ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿ ಪಾಲು

    ನಿನ್ನೆ ಪರಶುರಾಮ ಬನಸೊಡೆ ಎಂಬವರ ಶವ ಪತ್ತೆಯಾಗಿತ್ತು. ಬಳಿಕ ಇಂದು ಸಹೋದರರಾದ ಶಂಕರ್, ಸದಾಶಿವ, ಹಾಗೂ ಧರೆಪ್ಪರವರ ಶವ ಹೊರಕ್ಕೆ ತೆಗೆಯಲಾಗಿದೆ. ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಸಹೋದರರಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಮೂರು ದಿನಗಳ ಹಿಂದೆ ಹಾಸಿಗೆ ತೊಳೆಯಲು ಕೃಷ್ಣಾ ನದಿಗೆ ಹೋಗಿದ್ದಾಗ ಅಚಾನಕ್ಕಾಗಿ ಒಬ್ಬರನ್ನು ಕಾಪಾಡಲು ಹೋಗಿ ಮತ್ತೊಬ್ಬರಂತೆ ನಾಲ್ವರು ಸಹೋದರರು ನದಿ ನೀರು ಪಾಲಾಗಿದ್ದರು. ಇವರ ಶವ ಹೊರತೆಗೆಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಫ್ಲ್ಯಾಟ್‍ನಲ್ಲಿ ಬೆಡ್ ಕೆಳಗೆ ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ

    ಫ್ಲ್ಯಾಟ್‍ನಲ್ಲಿ ಬೆಡ್ ಕೆಳಗೆ ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ

    – ಎರಡು ದಿನದ ಹಿಂದೆಯೇ ಗೆಳೆಯ ನಾಪತ್ತೆ

    ನವದೆಹಲಿ: ಫ್ಲ್ಯಾಟ್‍ನಲ್ಲಿ ಹಾಸಿಗೆ ಕೆಳಗೆ ಕೊಳೆತ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿರುವ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ.

    ಮೃತ ಯುವತಿಯನ್ನು ದಿಶು ಕುಮಾರಿ (26) ಎಂದು ಗುರುತಿಸಲಾಗಿದೆ. ಯುವತಿಯ ಕೊಳೆತ ಶವ ಶುಕ್ರವಾರ ಪತ್ತೆಯಾಗಿದೆ. ಮೃತ ದಿಶು ಕುಮಾರಿ ಜಾರ್ಖಂಡ್ ಮೂಲದವಳಾಗಿದ್ದು, ಗುರುಗ್ರಾಮದಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

    ಎರಡು ದಿನಗಳ ಹಿಂದೆಯೇ ಈ ಕುಮಾರಿ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಫ್ಲ್ಯಾಟ್ ಅನ್ನು ಕುಮಾರಿಯ ಗೆಳೆಯ ಬಾಡಿಗೆಗೆ ಪಡೆದಿದ್ದನು. ಆತನ ಜೊತೆಯೇ ಈಕೆಯೂ ವಾಸಿಸುತ್ತಿದ್ದಳು. ಆದರೆ ಈಗ ಗೆಳೆಯ ಪರಾರಿಯಾಗಿದ್ದಾನೆ. ನೆರೆಹೊರೆಯವರು ಪೊಲೀಸರಿಗೆ ಫೋನ್ ಫ್ಲ್ಯಾಟ್‍ವೊಂದರಲ್ಲಿ ದುರ್ವಾಸನೆ ಬರುತ್ತಿದೆ. ಹೀಗಾಗಿ ಇರಲು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಫ್ಲ್ಯಾಟ್ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಅಲ್ಲಿ ಕೊಳೆತ ಸ್ಥಿತಿಯಲ್ಲಿರುವ ಮೃತದೇಹವು ಹಾಸಿಗೆಯ ಕೆಳಗೆ ಪತ್ತೆಯಾಗಿದೆ. ನಾವು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದೇವೆ. ಈ ಕುರಿತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಮೀನಾ ಹೇಳಿದ್ದಾರೆ.

    ಪ್ರಾಥಮಿಕ ತನಿಖೆಯ ಪ್ರಕಾರ ಯುವತಿಯ ಗೆಳೆಯ ಎರಡು ಮೂರು ತಿಂಗಳ ಹಿಂದೆ ಫ್ಲ್ಯಾಟ್ ಬಾಡಿಗೆ ಪಡೆದುಕೊಂಡಿದ್ದನು ಎಂದು ತಿಳಿದುಬಂದಿದೆ. ಆದರೆ ಕಳೆದ ಎರಡು ದಿನಗಳಿಂದ ಕುಮಾರಿಯ ಗೆಳೆಯ ಪರಾರಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಅನೇಕ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕತ್ತು ಹಿಸುಕಿ ಪತಿಯ ಕೊಲೆ – ಹಾಸಿಗೆ ಕೆಳಗೆ ಮೃತದೇಹ ಬಚ್ಚಿಟ್ಟ ಪತ್ನಿ

    ಕತ್ತು ಹಿಸುಕಿ ಪತಿಯ ಕೊಲೆ – ಹಾಸಿಗೆ ಕೆಳಗೆ ಮೃತದೇಹ ಬಚ್ಚಿಟ್ಟ ಪತ್ನಿ

    – 28 ಗಂಟೆಯ ನಂತ್ರ ಪೊಲೀಸರಿಗೆ ಫೋನ್ ಮಾಡಿದ ಪತ್ನಿ

    ಜೈಪುರ: ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿ ಮೃತದೇಹವನ್ನು ಹಾಸಿಗೆಯ ಕೆಳಗೆ ಸುಮಾರು 28 ಗಂಟೆಗಳ ಕಾಲ ಬಚ್ಚಿಟ್ಟಿದ್ದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಈ ಘಟನೆ ರಾಜಸ್ಥಾನದ ಹಮಿರ್ವಾಸ್ ಪಟ್ಟಣದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ನಿರ್ಮಲ್ ಸಿಂಗ್ ಎಂದು ಗುರುತಿಸಲಾಗಿದೆ. 28 ಗಂಟೆಗಳ ನಂತರ ಮಹಿಳೆ ಪೊಲೀಸರಿಗೆ ಫೋನ್ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ.

    ನಿರ್ಮಲ್ ಸಿಂಗ್ ಮೃತದೇಹವು ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಆರೋಪಿ ನೀರಜಾ ಪೊಲೀಸರಿಗೆ ಫೋನ್ ಮಾಡಿ ಪತಿಯ ಕೊಲೆಯ ಬಗ್ಗೆ ತಿಳಿಸಿದ್ದಾಳೆ. ನಿರ್ಮಲ್ ಸಿಂಗ್ ಮತ್ತು ನೀರಜಾಗೆ ಅನೇಕ ವರ್ಷಗಳ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಅದರಂತೆಯೇ ಎರಡು ದಿನಗಳ ಹಿಂದೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಆರೋಪಿ ನೀರಜಾ ಪತಿಯ ಕತ್ತನ್ನು ಹಗ್ಗದಿಂದ ಹಿಸುಕಿ ಕೊಲೆ ಮಾಡಿದ್ದಾಳೆ. ಪತಿಯನ್ನು ಕೊಲೆ ಮಾಡಿದ ನಂತರ ಮೃತದೇಹವನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮೊದಲಿಗೆ ಸಿಂಗ್ ಮೃತದೇಹವನ್ನು ಆತನ ಸಹೋದರ ಅಶೋಕ್ ಸಿಂಗ್ ನೋಡಿದ್ದಾರೆ. ಅಶೋಕ್ ತಮ್ಮನ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಳಿಕ ನೀರಜಾ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಳು.

    ಸದ್ಯಕ್ಕೆ ಆರೋಪಿ ನೀರಜಾ ವಿರುದ್ಧ ಸಿಂಗ್ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಪ್ರತಿದಿನ ರಾತ್ರಿ ನನ್ನ ಪತಿ ಹಲ್ಲೆ ಮತ್ತು ನಿಂದನೆ ಮಾಡುತ್ತಿದ್ದನು. ಹೀಗಾಗಿ ಕೊಲೆ ಮಾಡಿದೆ ಎಂದು ಆರೋಪಿ ನೀರಜಾ ಪೊಲೀಸರಿಗೆ ತಿಳಿಸಿದ್ದಾಳೆ.

  • ಬೆಂಗಳೂರಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ ಖಾಲಿಯಿದೆ – ಮೊಬೈಲ್‌ನಲ್ಲೇ ನೋಡಿ

    ಬೆಂಗಳೂರಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ ಖಾಲಿಯಿದೆ – ಮೊಬೈಲ್‌ನಲ್ಲೇ ನೋಡಿ

    – ಬೆಡ್‌ ವಿವರ ತಿಳಿಸುವ ಡ್ಯಾಶ್‌ಬೋರ್ಡ್‌ ತೆರೆದ ಬಿಬಿಎಂಪಿ

    ಬೆಂಗಳೂರು: ಇನ್ನು ಮುಂದೆ ಬೆಂಗಳೂರಿನಲ್ಲಿರುವ ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ ಎಷ್ಟು ಖಾಲಿ ಇದೆ ಎಂಬ ಮಾಹಿತಿಯನ್ನು ನೀವು ಮೊಬೈಲ್‌ನಲ್ಲೇ ತಿಳಿಯಬಹುದು.

    ಕೋವಿಡ್‌ 19 ನಿಂದಾಗಿ ಈಗ ಇತರ ರೋಗಿಗಳಿಗೂ ಆಸ್ಪತ್ರೆಗಳಲ್ಲಿ ಬೆಡ್‌ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈಗ ಬಿಬಿಎಂಪಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ಖಾಲಿ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಸಲು ಮುಂದಾಗಿದೆ.

    ಈ ಸಂಬಂಧ ಬಿಬಿಎಂಎಂಪಿಯ ಕೋವಿಡ್‌ 19 ವೆಬ್‌ಸೈಟ್‌ನಲ್ಲೇ ಡ್ಯಾಶ್‌ಬೋರ್ಡ್‌ ಆರಂಭಿಸಿದ್ದು, ಇದರಲ್ಲಿ ಭರ್ತಿ ಎಷ್ಟು ಆಗಿದೆ? ಖಾಲಿ ಎಷ್ಟಿದೆ ಎಂಬ ರಿಯಲ್‌ ಟೈಂ ಮಾಹಿತಿಯನ್ನು ನೋಡಬಹುದು.

    ಏನು ಮಾಹಿತಿ ಇದೆ?
    ಯಾವ ಆಸ್ಪತ್ರೆಯಲ್ಲಿ ಎಷ್ಟು ಜನರಲ್‌, ಎಚ್‌ಡಿಯು(ಹೈ ಡಿಪೆಂಡೆನ್ಸಿ ಯೂನಿಟ್‌) ಐಸಿಯು, ಐಸಿಯು+ವೆಂಟಿಲೇಟರ್‌ ಬೆಡ್‌ ಮೀಸಲಿಡಲಾಗಿದೆ ಎಂಬ ಮಾಹಿತಿಯನ್ನು ನೋಡಬಹುದು. ಒಟ್ಟು ಮಾಹಿತಿ ಅಲ್ಲದೇ ಡ್ಯಾಶ್‌ಬೋರ್ಡ್‌ ಕೆಳಗಡೆ ಆಸ್ಪತ್ರೆಗಳ ವಿವರ ಇದ್ದು, ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ ಖಾಲಿ ಇದೆ, ಎಷ್ಟು ಭರ್ತಿ ಆಗಿದೆ ಎಂಬ ವಿವರವನ್ನು ನೋಡಿ ಬೇಕಾದ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಬಹುದು.

    ಎಷ್ಟು ಮೀಸಲಿಡಲಾಗಿದೆ?
    ಕೋವಿಡ್‌ ರೋಗಿಗಳಿಗಾಗಿ 3,159 ಜನರಲ್‌, 2,097 ಎಚ್‌ಡಿಯು, 317 ಐಸಿಯು, 306 ಐಸಿಯು+ ವೆಂಟಿಲೇಟರ್‌ ಸೇರಿ ಒಟ್ಟು 5,879 ಬೆಡ್‌ ಮೀಸಲಿಡಲಾಗಿದೆ.

    ಎಷ್ಟು ಭರ್ತಿಯಾಗಿದೆ?
    ಮಂಗಳವಾರದವರೆಗೆ 962 ಜನರಲ್‌, 1,206 ಎಚ್‌ಡಿಯು, 67 ಐಸಿಯು, 122 ಐಸಿಯು+ವೆಂಟಿಲೇಟರ್‌ ಸೇರಿ 2,357 ಬೆಡ್‌ ಭರ್ತಿಯಾಗಿದೆ.

    ಖಾಲಿ ಎಷ್ಟಿದೆ?
    2,197 ಜನರಲ್‌, 891 ಎಚ್‌ಡಿಯು, 250 ಐಸಿಯು,184 ಐಸಿಯು+ ವೆಂಟಿಲೇಟರ್‌ 184 ಸೇರಿ ಒಟ್ಟು 3,522 ಬೆಡ್‌ ಖಾಲಿಯಿದೆ.

    ಸೋಮವಾರ ಸರ್ಕಾರ ಬಿಡುಗಡೆ ಮಾಡಿದ ಬುಲೆಟಿನ್‌ ಪ್ರಕಾರ ಒಟ್ಟು ಬೆಂಗಳೂರು ನಗರದಲ್ಲಿ 19,702 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 15,052 ಸಕ್ರಿಯ ಪ್ರಕರಣಗಳಿದ್ದು, 4,328 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ಬೆಂಗಳೂರು ನಗರದಲ್ಲಿ 317 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ.

    ವೆಬ್‌ಸೈಟ್‌ಗೆ ಭೇಟಿ ನೀಡಲು ಕ್ಲಿಕ್‌ ಮಾಡಿ: www.chbms.bbmpgov.in/portal/reports/

  • ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಸಿಗಲಿದೆ 1 ಲಕ್ಷ

    ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಸಿಗಲಿದೆ 1 ಲಕ್ಷ

    ಬೆಂಗಳೂರು: ಹಾಸಿಗೆಯಲ್ಲಿ ನಿದ್ದೆ ಮಾಡಲಿರುವ 23 ಮಂದಿಗೆ ಭಾರತೀಯ ಕಂಪನಿಯೊಂದು 1 ಲಕ್ಷ ರೂ. ನೀಡಲಿದೆ.

    ಕಳೆದ ನವೆಂಬರ್ ತಿಂಗಳಿನಲ್ಲಿ ವೇಕ್ ಫಿಟ್ ಕಂಪನಿ ನಿದ್ದೆ ಮಾಡಲು ಇಷ್ಟ ಇರುವ ಮಂದಿಗೆ 1 ಲಕ್ಷ ರೂ. ನೀಡುವುದಾಗಿ ತಿಳಿಸಿತ್ತು. ಈ ಸಂಬಂಧ ಅರ್ಜಿ ಆಹ್ವಾನಿಸಿತ್ತು. ಒಟ್ಟು 1.7 ಲಕ್ಷ ಮಂದಿ ನಿದ್ದೆ ಮಾಡಲು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಅಂತಿಮವಾಗಿ ಮೊದಲ ಬ್ಯಾಚಿಗೆ 23 ಮಂದಿಯನ್ನು ಆಯ್ಕೆ ಮಾಡಲಾಗಿದೆ.

    ಈ ಪೈಕಿ ಭಾರತದ 8 ನಗರಗಳಿಂದ 19 ಮಂದಿ, ಅಮೆರಿಕ ಮತ್ತು ಸ್ಲೋವಾಕಿಯಾದಿಂದ ಇಬ್ಬರು ಆಯ್ಕೆ ಆಗಿದ್ದಾರೆ. ಅಂತಿಮ ಪಟ್ಟಿಯಲ್ಲಿ ಬೆಂಗಳೂರಿನ 7 ಮಂದಿ ಆಯ್ಕೆ ಆಗಿರುವುದು ವಿಶೇಷ. 100 ದಿನಗಳ ಕಾಲ ಈ ವ್ಯಕ್ತಿಗಳು ಪ್ರತಿ ರಾತ್ರಿ 9 ಗಂಟೆಗಳ ಕಾಲ ನಿರಂತರ 100 ದಿನ ನಿದ್ದೆ ಮಾಡಿದರೆ ಕಂಪನಿ 1 ಲಕ್ಷ ರೂ. ನೀಡಲಿದೆ.

    ಜಾಹೀರಾತು ನೀಡುವಾಗ ಕಂಪನಿ ನಿದ್ದೆ ಮಾಡುವವರು ಪೈಜಾಮಾ ಹಾಕಿಕೊಂಡೆ ಮಲಗಬೇಕು ಎಂದು ಷರತ್ತು ವಿಧಿಸಿತ್ತು.

    ಜೀವನದಲ್ಲಿ ನಿದ್ದೆಯನ್ನು ಆದ್ಯತೆಯನ್ನಾಗಿ ಮಾಡಲು ಯಾವುದೇ ಹಂತಕ್ಕೆ ಹೋಗುವ ಅಭ್ಯರ್ಥಿಗಾಗಿ ನಾವು ಹುಡುಕುತ್ತಿದ್ದೇವೆ. ಮನುಷ್ಯನ ಮಲಗುವ ಹವ್ಯಾಸ ಹಾಗೂ ಅದರಿಂದ ಅವರ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡುವುದು ನಮ್ಮ ಕಂಪನಿಯ ಉದ್ದೇಶ ಎಂದು ವೇಕ್‍ಫಿಟ್ ಕಂಪನಿಯ ನಿರ್ದೇಶಕ ಹಾಗೂ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅಂದು ತಿಳಿಸಿದ್ದರು.

    ಕಂಪನಿ ಇಂಟರ್ನಿಗಳು ಮಲಗುವ ಮಾದರಿಗಳನ್ನು ಗಮನಿಸುತ್ತದೆ. ಅಲ್ಲದೆ ಕೌನ್ಸಿಲಿಂಗ್ ಸೆಷನ್ಸ್ ಹಾಗೂ ಸ್ಲೀಪ್ ಟ್ರ್ಯಾಕರ್ಸ್‍ಗಳನ್ನು ನೋಡಲಾಗುತ್ತದೆ. ಇದರಿಂದ ಅಭ್ಯರ್ಥಿಗಳು ತಮ್ಮ ಹಾಸಿಗೆಗಳನ್ನು ಬಳಸುವ ಮೊದಲು ಹಾಗೂ ನಂತರ ಅವರು ನಿದ್ರೆಯ ಅನುಭವಗಳನ್ನು ತಿಳಿಯಲು ಇದು ಕಂಪನಿಗೆ ಸಹಾಯ ಮಾಡುತ್ತದೆ. ಕೆಲಸದ ಜೀವನ ಹಾಗೂ ವೈಯಕ್ತಿಕ ಜೀವನವನ್ನು ಬ್ಯಾಲೆನ್ಸ್ ಮಾಡಲು ಈ ರೀತಿಯ ಪ್ರಯೋಗ ಮಾಡಲಾಗಿದೆ ಎಂದು ಅವರು ವಿವರಿಸಿದ್ದರು.

  • ಹಾಸಿಗೆ ಇಲ್ಲವೆಂದು ತಾಯಿ-ಮಗುವನ್ನು ನೆಲದಲ್ಲೇ ಮಲಗಿಸಿದ್ರು!

    ಹಾಸಿಗೆ ಇಲ್ಲವೆಂದು ತಾಯಿ-ಮಗುವನ್ನು ನೆಲದಲ್ಲೇ ಮಲಗಿಸಿದ್ರು!

    ಚಾಮರಾಜನಗರ: ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ಆಗ ತಾನೇ ಜನಿಸಿದ ಮಗುವನ್ನು ತನ್ನ ತಾಯಿಯೊಂದಿಗೆ ನೆಲದ ಮೇಲೆ ಮಲಗಿಸಿರುವ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಚಾಮರಾಜನಗರ ಜಿಲ್ಲೆಯ ಚಿಕ್ಕಹೊಳೆಯ ಜಯಲಕ್ಷ್ಮಿ ಅವರಿಗೆ ಹೆರಿಗೆ ಆಗಿ ಕೆಲ ನಿಮಿಷಗಳಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ತಾಯಿ ಹಾಗೂ ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ನೆಲದ ಮೇಲೆ ಮಲಗಿಸಿದ್ದಾರೆ. ನೆಲದ ಮೇಲೆ ಚಾಪೆ ಹಾಸಿ ಬಾಣಂತಿ ಹಾಗೂ ಎಳೆ ಕಂದಮ್ಮನನ್ನು ಮಲಗಿಸಲಾಗಿದೆ. ಈ ವೇಳೆ ಬಾಣಂತಿಯ ಪೋಷಕರು ತಮ್ಮ ಮನೆಯಿಂದ ತಂದಿದ್ದ ಬೆಟ್ ಶೀಟನ್ನು ತಾಯಿ-ಮಗುವಿಗೆ ಹೊದಿಕೆಯ ರೂಪದಲ್ಲಿ ಹಾಕಿದ್ದಾರೆ.

    ಆಸ್ಪತ್ರೆಯ ಸಿಬ್ಬಂದಿ ಬಾಣಂತಿ ಹಾಗೂ ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಚಾಪೆಯ ಮೇಲೆ ಹಾಸಿಗೆ ಹಾಸಿಕೊಡುವ ಸೌಜನ್ಯಕ್ಕೂ ಮುಂದಾಗಿಲ್ಲ. ಹೀಗಾಗಿ ಬಾಣಂತಿ ಹಾಗೂ ಮಗು ಚಳಿಯಲ್ಲಿ ನಡುಗುತ್ತಿದ್ದಾರೆ. ಹಿಂದುಳಿದ ವರ್ಗ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಸ್ವಕೇತ್ರವಾದ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ನಿತ್ಯ ಇದೇ ರೀತಿ ಒಂದಲ್ಲಾ ಒಂದು ಸಮಸ್ಯೆಗಳಿಂದ ಇಲ್ಲಿನ ಜನರು ಬಳಲುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಡ್ ಖಾಲಿ ಇದ್ರೂ ನೆಲದಲ್ಲಿ ಚಿಕಿತ್ಸೆ: ಸ್ಮಾರ್ಟ್‍ಸಿಟಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದೆ ರೋಗ!

    ಬೆಡ್ ಖಾಲಿ ಇದ್ರೂ ನೆಲದಲ್ಲಿ ಚಿಕಿತ್ಸೆ: ಸ್ಮಾರ್ಟ್‍ಸಿಟಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದೆ ರೋಗ!

    ದಾವಣಗೆರೆ: ಸ್ಮಾರ್ಟ್ ಸಿಟಿಗೆ ನಗರ ಆಯ್ಕೆಯಾದಾಗ ದಾವಣೆಗೆರೆಯ ಜನ ಹೆಮ್ಮೆಪಟ್ಟುಕೊಂಡಿದ್ದರು. ಆದರೆ ಈಗ ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ರೋಗ ಬಂದಿದ್ದು, ದೂರದ ಊರಿನಿಂದ ಬರುವ ರೋಗಿಳನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಜಿಲ್ಲಾಸ್ಪತ್ರೆಯ ಕೆಲ ವಾರ್ಡ್‍ಗಳಲ್ಲಿ ಬೆಡ್ ಗಳು ಖಾಲಿ ಇದ್ದರೂ ಕೂಡ ಮಹಿಳೆಯರನ್ನ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಕೆಲವು ವಾರ್ಡ್ ಗಳಲ್ಲಿ ಮಂಚದ ಕಾಲುಗಳಿಗೆ ಇಟ್ಟಿಗೆಗಳನ್ನು ಇಡಲಾಗಿದೆ.

    ಮಕ್ಕಳು, ಮಹಿಳೆಯರು, ವಿಕಲಚೇತನರು, ವೃದ್ಧರು ಹೀಗೆ ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳನ್ನ ನೆಲದ ಮೇಲೆ ಮಲಗಿಸಲಾಗುತ್ತಿದೆ. ರೋಗಿಗಳು ಈ ಬಗ್ಗೆ ಜಿಲ್ಲಾಸ್ಪತ್ರೆ ಅಧೀಕ್ಷಕಿ ನೀಲಾಂಬಿಕೆ ಅವರನ್ನು ಪ್ರಶ್ನೆಮಾಡಿದರೆ, ನಾನೇನು ಮಾಡಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಯಾರಾದರೂ ಡಿಸ್ಚಾರ್ಜ್ ಆದರೆ ನಿಮಗೆ ಬೆಡ್ ನೀಡುತ್ತೇವೆ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದಾರೆ.

    ಕೆಲ ವಾರ್ಡ್ ಗಳಲ್ಲಿ 2, 3 ರೂಮ್ ಗಳಿದ್ದು, ಸಾಕಷ್ಟು ಬೆಡ್ ಗಳು ಖಾಲಿ ಇವೆ. ಆದರೂ ಕೂಡ ರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂದಿ ಈ ರೀತಿ ಹಿಂಸೆ ನೀಡುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಗಳು ಆರೋಪಿಸಿದ್ದಾರೆ.

    ಆಸ್ಪತ್ರೆ ಅಧೀಕ್ಷಕರಾಗಲಿ, ಜಿಲ್ಲಾಡಳಿತ, ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳ್ಯಾರು ಕೂಡ ರೋಗಿಗಳ ಅಳಲನ್ನ ಕೇಳುತ್ತಿಲ್ಲ. ರೋಗ ಗುಣಪಡಿಸಿಕೊಳ್ಳಲು ಬರುವ ರೋಗಿಗಳು ನೆಲದ ಮೇಲೆ ಮಲಗಿ ಸೊಳ್ಳೆಗಳ ಕಾಟಕ್ಕೆ ಮತ್ತಷ್ಟು ರೋಗ ಉಲ್ಬಣಗೊಳಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ನಿರ್ಮಾಣವಾಗಿದೆ.