Tag: ಹಾಸನಾಂಬೆ ದೇವಿ

  • ಹಾಸನಾಂಬೆ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

    ಹಾಸನಾಂಬೆ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

    ಹಾಸನ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಂದು ಹಾಸನದ (Hassan) ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದರು.

    ಮಂಗಳವಾರ (ಅ.14) ಡಿಸಿಎಂ ಡಿಕೆ ಶಿವಕುಮಾರ್ ದರ್ಶನ ಪಡೆದ ಬೆನ್ನಲ್ಲೇ ಬುಧವಾರ (ಅ.15) ಬೆಳಗ್ಗೆ 12ರ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಹಾಸನಾಂಬೆ ದೇವಿ ದರ್ಶನ ಪಡೆದರು.ಇದನ್ನೂ ಓದಿ: ಡಿಕೆಶಿಗೆ ಹಾಸನಾಂಬೆ ಮಹಾಪ್ರಸಾದ – ಪೂಜೆ ವೇಳೆ ಬಲಗಡೆ ಹೂವು ವರ ನೀಡಿದ ದೇವಿ

    ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ಶಿಷ್ಟಾಚಾರದ ವಾಹನದಲ್ಲೇ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸ್ವಾಗತಿಸಿದರು. ಸಿಎಂ ಬರುತ್ತಿದ್ದಂತೆ ಜಾನಪದ ಕಲಾತಂಡಗಳು ಜಗ್ಗಲಿಗೆ ಬಾರಿಸಿ, ಕೊಂಬು ಕಂಸಾಳೆ ಊದಿ ಸ್ವಾಗತ ಮಾಡಿಕೊಂಡರು. ಸಿದ್ದರಾಮಯ್ಯ ಅವರ ಜೊತೆ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಆಗಮಿಸಿದ್ದರು. ಬಳಿಕ ಜಿಲ್ಲಾಡಳಿತ ಸಿಎಂ ಅವರನ್ನು ಮಂಗಳವಾದ್ಯಗಳೊಂದಿಗೆ ದೇವಿ ದರ್ಶನಕ್ಕೆ ಕರೆದೊಯ್ಯಿತು.

    ಕಳೆದ ಎರಡು ವರ್ಷಗಳಿಂದ ಸಿಎಂ ಸಿದ್ದರಾಮಯ್ಯ ದೇವಿ ದರ್ಶನ ಪಡೆಯುತ್ತಿದ್ದು, ಈ ಮೂಲಕ ಮೂರನೇ ಬಾರೀ ದೇವಿ ದರ್ಶನ ಪಡೆದುಕೊಂಡಿದ್ದಾರೆ. ದೇವಿ ದರ್ಶನ ಪಡೆದು ದರ್ಬಾರ್ ಗಣಪತಿ ಹಾಗೂ ಸಿದ್ದೇಶ್ವರಸ್ವಾಮಿ ದೇವರ ದರ್ಶನ ಪಡೆದರು.

    ಇದೇ ವೇಳೆ ಶಾಸಕ ಹಾಗೂ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಡಿಸಿ ಕೆ.ಎಸ್.ಲತಾಕುಮಾರಿ, ದಕ್ಷಿಣ ವಯಲ ಐಜಿಪಿ, ಬೋರಲಿಂಗಯ್ಯ ಎಸ್ಪಿ ಮಹಮದ್ ಸುಜೀತಾ ಉಪಸ್ಥಿತರಿದ್ದರು. ಸಿಎಂ ಆಗಮನದ ಹಿನ್ನೆಲೆ ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು.ಇದನ್ನೂ ಓದಿ: ಹಂಪಿಗೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್‌ – ದೇಶದ ಹೆಸರಲ್ಲಿ ಪೂಜೆ

  • ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

    ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

    ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ (Hassan) ಅಧಿದೇವತೆ ಹಾಸನಾಂಬೆಯ ಈ ಬಾರಿಯ ದರ್ಶನೋತ್ಸವ ತೆರೆಗೆ ಕ್ಷಣಗಣನೆ ಆರಂಭವಾಗಿದೆ.

    ಭಾನುವಾರ ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಬಾಗಿಲು ಮುಚ್ಚುವ ಮುನ್ನಾ ದಿನವಾದ ಶನಿವಾರ ಗಣ್ಯರು ಹಾಗೂ ಭಕ್ತರು (Devotees) ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಹೀಗಾಗಿ ದೇವಾಲಯದ ಒಳ ಹೊರಗೆ ಭಕ್ತರ ಜಾತ್ರೆಯೇ ನೆರೆದಿತ್ತು. ಈ ಬಾರಿ ಜಾತ್ರಾ ಮಹೋತ್ಸವ ಇತಿಹಾಸ ನಿರ್ಮಿಸಿದ್ದು, ಹಲವು ಹೊಸ ದಾಖಲೆಗಳು ನಿರ್ಮಾಣವಾಗಿದೆ.

    ಹೌದು, ಹಾಸನಾಂಬೆ ದರ್ಶನೋತ್ಸವದ ತೆರೆಗೆ ಕೌಂಟ್‌ಡೌನ್ ಶುರುವಾಗಿದೆ. ನಿನ್ನೆ ವೀಕೆಂಡ್ ಜೊತೆಗೆ ಹಬ್ಬದ ರಜೆಯಿದ್ದಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಅಧಿ ದೇವತೆಯ ದರ್ಶನ ಪಡೆದು ಪುನೀತರಾದ್ರು. ಒಟ್ಟು ದಿನಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಜಟಾಪಟಿ – 1,000, 300 ರೂ. ಪಾಸ್‌ ಮಾರಾಟಕ್ಕೆ ಮರುಚಾಲನೆ

    1,000, 300 ರೂ. ವಿಶೇಷ ದರ್ಶನದ ಟಿಕೆಟ್‌ಗಳು, ಲಾಡು ಮಾರಾಟ ಹಾಗೂ ದೇವರ ಸೀರೆ ಮಾರಾಟದಿಂದ 8 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ಇತಿಹಾಸದಲ್ಲೇ ಈ ಬಾರಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಂಖ್ಯೆಯ ಭಕ್ತರಿಂದ ದೇವಿ ದರ್ಶನ ಹಾಗೂ ಅತಿ ಹೆಚ್ಚು ಆದಾಯ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಂದ ಲಕ್ಷಾಂತರ ಭಕ್ತರು – ಜನರ ನಿಯಂತ್ರಣಕ್ಕೆ ಪಾಸ್‌ ಮಾರಾಟ ರದ್ದು

    ನಿನ್ನೆ ರಾತ್ರಿಯೇ ಸಿದ್ಧೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೊಂಡೋತ್ಸವ ಜರುಗಿತು. ಮುಂಜಾನೆವರೆಗೂ ಭಕ್ತರಿಗೆ ದೇವಿ ಹಾಸನಾಂಬೆ ದರ್ಶನ ದೊರಕಿತ್ತು. 6 ಗಂಟೆ ಬಳಿಕ ಸಾರ್ವಜನಿಕ ದರ್ಶನಕ್ಕೆ ತೆರೆ ಎಳೆಯಲಾಯ್ತು. ಮಧ್ಯಾಹ್ನ 12 ಗಂಟೆ ನಂತರ ವಿಶ್ವರೂಪ ದರ್ಶನದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕ ಎಚ್.ಪಿ ಸ್ವರೂಪ್‌ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ, ಆಡಳಿತಾಧಿಕಾರಿ ಮಾರುತಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಿದ್ದು, ಆ ಮೂಲಕ ಈ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.

    ಒಟ್ಟಿನಲ್ಲಿ ಅಕ್ಟೋಬರ್ 24 ರಿಂದ ಆರಂಭಗೊಂಡಿದ್ದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅದ್ದೂರಿ ಮತ್ತು ವಿಜೃಂಭಣೆಯಿಂದ ಜರುಗಿದ್ದು, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ. ಇವತ್ತು ಮಧ್ಯಾಹ್ನ 12 ಗಂಟೆ ನಂತರ ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಕಾರು ಡಿಕ್ಕಿ- ತಂದೆ, ಮಗಳು ಸಾವು

  • ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಾಳೆ ತೆರೆ – ಇಂದು ಸಾರ್ವಜನಿಕ ದರ್ಶನ ಅಂತ್ಯ

    ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಾಳೆ ತೆರೆ – ಇಂದು ಸಾರ್ವಜನಿಕ ದರ್ಶನ ಅಂತ್ಯ

    ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಅಧಿದೇವತೆ ಹಾಸನಾಂಬೆ (Hasanambe Temple) ಜಾತ್ರಾ ಮಹೋತ್ಸವಕ್ಕೆ ಇನ್ನೊಂದು ದಿನ ಬಾಕಿಯಿದ್ದು, ನಾಳೆ (ನ.3) ತೆರೆ ಬೀಳಲಿದೆ. ಇಂದು (ನ.2) ಸಾರ್ವಜನಿಕ ದರ್ಶನ ಅಂತ್ಯವಾಗಲಿದೆ.

    ಕಳೆದ ಹತ್ತು ದಿನಗಳ ಕಾಲ ನಡೆದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ (Jatra Mahostava) ಯಶಸ್ಸು ಕಂಡಿದ್ದು, ಹಲವು ಇಲಾಖೆಗಳು ಶ್ರಮಿಸಿವೆ. ಅ.24ರಿಂದ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಸುಮಾರು 11 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಹದಿಮೂರು ದಿನಗಳ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಪೊಲೀಸ್, ಕಂದಾಯ ಇಲಾಖೆ (Revenue Department) ಸೇರಿದಂತೆ ಹಲವು ಇಲಾಖೆಗಳು ಶ್ರಮಿಸಿವೆ. ಪ್ರಮುಖವಾಗಿ ಪೌರ ಕಾರ್ಮಿಕರು, ಸ್ಕೌಟ್ಸ್ ಅಂಡ್ ಗೈಡ್ಸ್ (Scouts And Guides) ವಿದ್ಯಾರ್ಥಿಗಳು ಹಗಲಿರುಳು ಎನ್ನದೇ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ರಾಜ್ಯ ಹವಾಮಾನ ವರದಿ- 02-11-2024

    ಇಡೀ ದೇವಾಲಯದ ಸುತ್ತಮುತ್ತ ಹಾಗೂ ಇಡೀ ನಗರ ಸ್ವಚ್ಛವಾಗಿ ಕಾಣಲು ಪ್ರಮುಖ ಕಾರಣ ಪೌರಕಾರ್ಮಿಕರು. ಮೂರು ಪಾಳಿಯಲ್ಲಿ 400 ಮಂದಿ ಬೆಳಗ್ಗೆ 4 ಗಂಟೆಯಿಂದ ಮಧ್ಯರಾತ್ರಿ 3 ಗಂಟೆಯವರೆಗೆ ಸ್ವಚ್ಛತೆ ಕಾರ್ಯ ಮಾಡಿದ್ದಾರೆ. ಒಂದೆಡೆ ಪೌರಕಾರ್ಮಿಕರ ಸೇವೆಯಾದರೆ, ಇನ್ನೊಂದೆಡೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಜಾತ್ರಾ ಮಹೋತ್ಸವದ ಯಶಸ್ವಿಗೆ ದುಡಿದಿದ್ದಾರೆ. ಕುಡಿಯುವ ನೀರು, ವಯೋವೃದ್ಧರು, ವಿಶೇಷಚೇತನರನ್ನು ವ್ಹೀಲ್‌ಚೇರ್‌ನಲ್ಲಿ ದೇವಾಲಯಕ್ಕೆ ಕರೆದುಕೊಂಡು ಹೋಗಿ ದೇವಿ ದರ್ಶನ ಮಾಡಿಸಿ ವಾಪಾಸ್ ಕಳುಹಿಸುತ್ತಿದ್ದಾರೆ. ಮಕ್ಕಳ ಸೇವೆಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

    ಇನ್ನೂ ಈ ಬಾರಿ ಹಾಸನ (Hassan) ನಗರ, ಪ್ರಮುಖ ರಸ್ತೆಯಲ್ಲಿರುವ ಸರ್ಕಾರಿ ಕಚೇರಿಗಳು ಮೈಸೂರು ದಸರಾ ಮಾದರಿಯಂತೆ ದೀಪಾಲಂಕಾರದಿಂದ ಮಿಂಚಿದವು. ಮುಖ್ಯರಸ್ತೆಗಳು ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಈ ಹಿಂದೆ ದೇವಾಲಯದ ಬಳಿ ಮತ್ತು ಪ್ರಮುಖ ವೃತ್ತಗಳಲ್ಲಿ ಮಾತ್ರ ಲೈಟಿಂಗ್ಸ್ ಅಳವಡಿಸಲಾಗುತ್ತಿತ್ತು. ಆದರೆ, ಕಳೆದ ಬಾರಿಯಿಂದ ಪ್ರಮುಖ ವೃತ್ತಗಳು ಸೇರಿ ಪ್ರಮುಖ ರಸ್ತೆಯುದ್ದಕ್ಕೂ ದೀಪಾಲಂಕಾರ ಮಾಡುವ ಮೂಲಕ ಇನ್ನಷ್ಟು ವರ್ಣರಂಜಿತಗೊಳಿಸಲಾಗಿದೆ. ಇದರ ಜೊತೆಗೆ ಹಾಸನ ನಗರದ ಮಹಾರಾಜ ಪಾರ್ಕ್ ಮುಂಭಾಗವಿರುವ ಹೇಮಾವತಿ ಪ್ರತಿಮೆ ಅದರ ಸುತ್ತಲೂ ಇರುವ ನೀರಿನ ಕಾರಂಜಿ ಪ್ರವಾಸಿಗರನ್ನು ರಂಜಿಸುತ್ತಿದೆ. ಬಣ್ಣದ ಬಣ್ಣದ ಕಾರಂಜಿ ನೋಡಿ ಭಕ್ತರು ಸಂತಸಪಡುತ್ತಿದ್ದಾರೆ.

    ಭಾನುವಾರ ವಿಶ್ವರೂಪ ದರ್ಶನದ ನಂತರ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ಮುಚ್ಚಲಿದೆ. ಆದರೆ ಇಡೀ ಜಾತ್ರಾ ಮಹೋತ್ಸವದ ಯಶಸ್ವಿಗೆ ಪೌರಕಾರ್ಮಿಕರು ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಕೊಡುಗೆ ಮಾತ್ರ ಅಪಾರವಾದದ್ದು. ಇನ್ನು ಹಾಸನಾಂಬೆ ಜಾತ್ರಾ ಮಹೋತ್ಸವ ದೀಪಾಲಂಕಾರ ಕಂಡು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತರು ದೀಪಲಂಕಾರ ಕಂಡು ನಿಬ್ಬೆರಗಾಗಿದ್ದಾರೆ.ಇದನ್ನೂ ಓದಿ: ಬಲಿಪಾಡ್ಯಮಿ; ಬಲಿ ಮೇಲೆ ವಾಮನ ಅವತಾರದಲ್ಲಿ ವಿಷ್ಣುವಿನ ವಿಜಯ

  • ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತಸಾಗರ – ತುಂಬಿ ತುಳುಕುತ್ತಿರುವ ಸರತಿ ಸಾಲು

    ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತಸಾಗರ – ತುಂಬಿ ತುಳುಕುತ್ತಿರುವ ಸರತಿ ಸಾಲು

    – ಇಂದು ನಾಲ್ವರು ಸಚಿವರು, ಹೈಕೋರ್ಟ್ ನ್ಯಾಯಾಧೀಶರಿಂದ ದೇವಿ ದರ್ಶನ

    ಹಾಸನ: ಹಾಸನಾಂಬೆ ದೇವಿ (Hasanamba) ದರ್ಶನಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಕಾರಣ ದೇವಿ ದರ್ಶನ ವಿಳಂಬವಾಗುತ್ತಿದೆ.

    ಮುಂಜಾನೆ ಎರಡು ಗಂಟೆಗೂ ಹೆಚ್ಚು ಕಾಲ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚಿದ್ದರಿಂದ ದೇವಿ ದರ್ಶನ (Hasanamba Darshan) ಇನ್ನೂ ವಿಳಂಬವಾಗಿ ಆರಂಭವಾಗಿದೆ. ಇದರ ನಡುವೆ ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಮಳೆಯಲ್ಲಿಯೇ ಭಕ್ತರು ನಿಂತಿದ್ದರು. ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.

    ದರ್ಶನದ ಎಲ್ಲಾ ಸಾಲುಗಳು ಭರ್ತಿಯಾಗಿವೆ. 1000, 300, ಧರ್ಮ ದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ. ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇನ್ನೂ ಗರ್ಭಗುಡಿ ಬಳಿ ನೂಕುನುಗ್ಗಲು ಉಂಟಾಗಿದ್ದು, ಗರ್ಭಗುಡಿ ಎದುರು ಎಸ್ಪಿ ಮಹಮದ್ ಸುಜೇತಾ ಅವರು ನೆಲದ ಮೇಲೆ ಕುಳಿತು ಜನರನ್ನು ನಿಯಂತ್ರಿಸುತ್ತಿದ್ದಾರೆ.

    ದರ್ಶನ ವಿಳಂಬವಾಗುತ್ತಿರುವ ಹಿನ್ನೆಲೆ ಹಿರಿಯ ನಾಗರಿಕರು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

    ಇಂದು (ಗುರುವಾರ) ನಾಲ್ವರು ಸಚಿವರು ಹಾಗೂ ಹೈಕೋರ್ಟ್ ನ್ಯಾಯಾಧೀಶರುಗಳು ದೇವಿ ದರ್ಶನ ಪಡೆಯಲಿದ್ದಾರೆ.

  • ಹಾಸನಾಂಬೆ ದರ್ಶನಕ್ಕೆ ಹೊರಟಿದ್ದ ದಂಪತಿಯ ಕಾರು ಕೆರೆಗೆ ಪಲ್ಟಿ – ಪತ್ನಿ ಸಾವು

    ಹಾಸನಾಂಬೆ ದರ್ಶನಕ್ಕೆ ಹೊರಟಿದ್ದ ದಂಪತಿಯ ಕಾರು ಕೆರೆಗೆ ಪಲ್ಟಿ – ಪತ್ನಿ ಸಾವು

    ಚಿಕ್ಕಮಗಳೂರು: ಹಾಸನಾಂಬೆ ದೇವಿ (Hasanamba Devi) ದರ್ಶನಕ್ಕೆ ಹೊರಟ್ಟಿದ್ದ ದಂಪತಿಯ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿ ಪತ್ನಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಚಿಕ್ಕಮಗಳೂರು (Chikkamagaluru) ತಾಲೂಕಿನ ಗವನಹಳ್ಳಿ ಗ್ರಾಮದ ನಿವಾಸಿ ವನಿತಾ (38) ಗುರುತಿಸಲಾಗಿದೆ. ಪತ್ನಿ ವನಿತಾ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪತಿ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇದನ್ನೂ ಓದಿ: 5 ತಿಂಗಳ ಬಳಿಕ ಜೈಲಿಂದ ದರ್ಶನ್ ರಿಲೀಸ್ – ಹೈಕೋರ್ಟ್‌ನಿಂದ ಜಾಮೀನು ಮಂಜೂರು

    ಇಂದು (ಅ.30) ಬೆಳಗಿನ ಜಾವ ನಾಲ್ಕು ಗಂಟೆಗೆ ಚಿಕ್ಕಮಗಳೂರಿನಿಂದ ಹಾಸನದ ಹಾಸನಾಂಬೆ ದೇವಿ ದರ್ಶನಕ್ಕೆ ಹೊರಟಿದ್ದ ಮಂಜು-ವನಿತಾ ದಂಪತಿಯ ಕಾರು ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿಯಾಗಿದೆ.

    ಕೂಡಲೇ ಗ್ರಾಮಸ್ಥರು ಇಬ್ಬರನ್ನು ಬದುಕಿಸಲು ಹರಸಾಹಸಪಟ್ಟಿದ್ದಾರೆ. ಬೆಳಗಿನ ಜಾವದ ಕತ್ತಲಲ್ಲು ಕೂಡ ಕಲ್ಕೆರೆ ಗ್ರಾಮಸ್ಥರು ಕೆರೆಗೆ ಇಳಿದು ಕಾರಿಗೆ ಹಗ್ಗ ಕಟ್ಟಿ ಎಳೆದಿದ್ದಾರೆ. ಕಾರಿನ ಚಾಲಕ ಮಂಜು ಪ್ರಾಣಾಪಾಯದಿಂದ ಪಾರಾಗಿದ್ದು, ಮಂಜು ಪತ್ನಿ ವನಿತಾ ಸಾವನ್ನಪ್ಪಿದ್ದಾರೆ. ಕಾರಿನಿಂದ ಮಹಿಳೆಯನ್ನು ಹೊರತಂತ ಗ್ರಾಮಸ್ಥರು ಅವರನ್ನ ಬದುಕಿಸಲು ತೀವ್ರ ಹರಸಾಹಸಪಟ್ಟಿದ್ದಾರೆ. ಎದೆ ಬಡಿದು, ಬಾಯಿಗೆ ಉಸಿರು ನೀಡಿ, ಕೈಕಾಲು ಉಜ್ಜಿ ಜೀವ ಉಳಿಸಲು ಪ್ರಯತ್ನಿಸಿದ್ದಾರೆ. ಆದರೆ, ಕಾರು ಕೆರೆಯಲ್ಲಿ ಮುಳುಗಿ ನೀರು ಕುಡಿದಿದ್ದ ವನಿತಾ ಉಸಿರುಗಟ್ಡಿ ಸಾವನ್ನಪ್ಪಿದ್ದಾರೆ.

    ಬೇಲೂರು (Beluru) ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Hyderabad | ಮಗನ ಮೃತದೇಹದೊಂದಿಗೆ ನಾಲ್ಕು ದಿನ ಕಳೆದ ಅಂಧ ದಂಪತಿ