Tag: ಹಾಸನಾಂಬೆ ದೇವಸ್ಥಾನ

  • ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

    ಹಾಸನಾಂಬೆ ದರ್ಶನಕ್ಕೆ ವಿದ್ಯುಕ್ತ ತೆರೆಗೆ ಕ್ಷಣಗಣನೆ – ಭಕ್ತ ಸಾಗರ, ದಾಖಲೆಯ ಆದಾಯ

    ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ (Hassan) ಅಧಿದೇವತೆ ಹಾಸನಾಂಬೆಯ ಈ ಬಾರಿಯ ದರ್ಶನೋತ್ಸವ ತೆರೆಗೆ ಕ್ಷಣಗಣನೆ ಆರಂಭವಾಗಿದೆ.

    ಭಾನುವಾರ ಮಧ್ಯಾಹ್ನ 12 ಗಂಟೆ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಿದೆ. ಬಾಗಿಲು ಮುಚ್ಚುವ ಮುನ್ನಾ ದಿನವಾದ ಶನಿವಾರ ಗಣ್ಯರು ಹಾಗೂ ಭಕ್ತರು (Devotees) ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದರು. ಹೀಗಾಗಿ ದೇವಾಲಯದ ಒಳ ಹೊರಗೆ ಭಕ್ತರ ಜಾತ್ರೆಯೇ ನೆರೆದಿತ್ತು. ಈ ಬಾರಿ ಜಾತ್ರಾ ಮಹೋತ್ಸವ ಇತಿಹಾಸ ನಿರ್ಮಿಸಿದ್ದು, ಹಲವು ಹೊಸ ದಾಖಲೆಗಳು ನಿರ್ಮಾಣವಾಗಿದೆ.

    ಹೌದು, ಹಾಸನಾಂಬೆ ದರ್ಶನೋತ್ಸವದ ತೆರೆಗೆ ಕೌಂಟ್‌ಡೌನ್ ಶುರುವಾಗಿದೆ. ನಿನ್ನೆ ವೀಕೆಂಡ್ ಜೊತೆಗೆ ಹಬ್ಬದ ರಜೆಯಿದ್ದಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ಅಧಿ ದೇವತೆಯ ದರ್ಶನ ಪಡೆದು ಪುನೀತರಾದ್ರು. ಒಟ್ಟು ದಿನಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಜಟಾಪಟಿ – 1,000, 300 ರೂ. ಪಾಸ್‌ ಮಾರಾಟಕ್ಕೆ ಮರುಚಾಲನೆ

    1,000, 300 ರೂ. ವಿಶೇಷ ದರ್ಶನದ ಟಿಕೆಟ್‌ಗಳು, ಲಾಡು ಮಾರಾಟ ಹಾಗೂ ದೇವರ ಸೀರೆ ಮಾರಾಟದಿಂದ 8 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ಇತಿಹಾಸದಲ್ಲೇ ಈ ಬಾರಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಇದೇ ಮೊದಲ ಬಾರಿಗೆ ಅತಿ ಹೆಚ್ಚು ಸಂಖ್ಯೆಯ ಭಕ್ತರಿಂದ ದೇವಿ ದರ್ಶನ ಹಾಗೂ ಅತಿ ಹೆಚ್ಚು ಆದಾಯ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಬಂದ ಲಕ್ಷಾಂತರ ಭಕ್ತರು – ಜನರ ನಿಯಂತ್ರಣಕ್ಕೆ ಪಾಸ್‌ ಮಾರಾಟ ರದ್ದು

    ನಿನ್ನೆ ರಾತ್ರಿಯೇ ಸಿದ್ಧೇಶ್ವರ ಸ್ವಾಮಿ ರಥೋತ್ಸವ ಹಾಗೂ ಕೊಂಡೋತ್ಸವ ಜರುಗಿತು. ಮುಂಜಾನೆವರೆಗೂ ಭಕ್ತರಿಗೆ ದೇವಿ ಹಾಸನಾಂಬೆ ದರ್ಶನ ದೊರಕಿತ್ತು. 6 ಗಂಟೆ ಬಳಿಕ ಸಾರ್ವಜನಿಕ ದರ್ಶನಕ್ಕೆ ತೆರೆ ಎಳೆಯಲಾಯ್ತು. ಮಧ್ಯಾಹ್ನ 12 ಗಂಟೆ ನಂತರ ವಿಶ್ವರೂಪ ದರ್ಶನದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಶಾಸಕ ಎಚ್.ಪಿ ಸ್ವರೂಪ್‌ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ, ಆಡಳಿತಾಧಿಕಾರಿ ಮಾರುತಿ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಿದ್ದು, ಆ ಮೂಲಕ ಈ ವರ್ಷದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.

    ಒಟ್ಟಿನಲ್ಲಿ ಅಕ್ಟೋಬರ್ 24 ರಿಂದ ಆರಂಭಗೊಂಡಿದ್ದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ಅದ್ದೂರಿ ಮತ್ತು ವಿಜೃಂಭಣೆಯಿಂದ ಜರುಗಿದ್ದು, ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದಿದ್ದಾರೆ. ಇವತ್ತು ಮಧ್ಯಾಹ್ನ 12 ಗಂಟೆ ನಂತರ ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಹಾಸನಾಂಬೆ ದೇವಿ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಕಾರು ಡಿಕ್ಕಿ- ತಂದೆ, ಮಗಳು ಸಾವು

  • ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಾಳೆ ತೆರೆ – ಇಂದು ಸಾರ್ವಜನಿಕ ದರ್ಶನ ಅಂತ್ಯ

    ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ನಾಳೆ ತೆರೆ – ಇಂದು ಸಾರ್ವಜನಿಕ ದರ್ಶನ ಅಂತ್ಯ

    ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಅಧಿದೇವತೆ ಹಾಸನಾಂಬೆ (Hasanambe Temple) ಜಾತ್ರಾ ಮಹೋತ್ಸವಕ್ಕೆ ಇನ್ನೊಂದು ದಿನ ಬಾಕಿಯಿದ್ದು, ನಾಳೆ (ನ.3) ತೆರೆ ಬೀಳಲಿದೆ. ಇಂದು (ನ.2) ಸಾರ್ವಜನಿಕ ದರ್ಶನ ಅಂತ್ಯವಾಗಲಿದೆ.

    ಕಳೆದ ಹತ್ತು ದಿನಗಳ ಕಾಲ ನಡೆದ ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ (Jatra Mahostava) ಯಶಸ್ಸು ಕಂಡಿದ್ದು, ಹಲವು ಇಲಾಖೆಗಳು ಶ್ರಮಿಸಿವೆ. ಅ.24ರಿಂದ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಸುಮಾರು 11 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ಹದಿಮೂರು ದಿನಗಳ ಜಾತ್ರಾ ಮಹೋತ್ಸವ ಯಶಸ್ವಿಯಾಗಲು ಪೊಲೀಸ್, ಕಂದಾಯ ಇಲಾಖೆ (Revenue Department) ಸೇರಿದಂತೆ ಹಲವು ಇಲಾಖೆಗಳು ಶ್ರಮಿಸಿವೆ. ಪ್ರಮುಖವಾಗಿ ಪೌರ ಕಾರ್ಮಿಕರು, ಸ್ಕೌಟ್ಸ್ ಅಂಡ್ ಗೈಡ್ಸ್ (Scouts And Guides) ವಿದ್ಯಾರ್ಥಿಗಳು ಹಗಲಿರುಳು ಎನ್ನದೇ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ರಾಜ್ಯ ಹವಾಮಾನ ವರದಿ- 02-11-2024

    ಇಡೀ ದೇವಾಲಯದ ಸುತ್ತಮುತ್ತ ಹಾಗೂ ಇಡೀ ನಗರ ಸ್ವಚ್ಛವಾಗಿ ಕಾಣಲು ಪ್ರಮುಖ ಕಾರಣ ಪೌರಕಾರ್ಮಿಕರು. ಮೂರು ಪಾಳಿಯಲ್ಲಿ 400 ಮಂದಿ ಬೆಳಗ್ಗೆ 4 ಗಂಟೆಯಿಂದ ಮಧ್ಯರಾತ್ರಿ 3 ಗಂಟೆಯವರೆಗೆ ಸ್ವಚ್ಛತೆ ಕಾರ್ಯ ಮಾಡಿದ್ದಾರೆ. ಒಂದೆಡೆ ಪೌರಕಾರ್ಮಿಕರ ಸೇವೆಯಾದರೆ, ಇನ್ನೊಂದೆಡೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಜಾತ್ರಾ ಮಹೋತ್ಸವದ ಯಶಸ್ವಿಗೆ ದುಡಿದಿದ್ದಾರೆ. ಕುಡಿಯುವ ನೀರು, ವಯೋವೃದ್ಧರು, ವಿಶೇಷಚೇತನರನ್ನು ವ್ಹೀಲ್‌ಚೇರ್‌ನಲ್ಲಿ ದೇವಾಲಯಕ್ಕೆ ಕರೆದುಕೊಂಡು ಹೋಗಿ ದೇವಿ ದರ್ಶನ ಮಾಡಿಸಿ ವಾಪಾಸ್ ಕಳುಹಿಸುತ್ತಿದ್ದಾರೆ. ಮಕ್ಕಳ ಸೇವೆಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

    ಇನ್ನೂ ಈ ಬಾರಿ ಹಾಸನ (Hassan) ನಗರ, ಪ್ರಮುಖ ರಸ್ತೆಯಲ್ಲಿರುವ ಸರ್ಕಾರಿ ಕಚೇರಿಗಳು ಮೈಸೂರು ದಸರಾ ಮಾದರಿಯಂತೆ ದೀಪಾಲಂಕಾರದಿಂದ ಮಿಂಚಿದವು. ಮುಖ್ಯರಸ್ತೆಗಳು ವರ್ಣರಂಜಿತ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಈ ಹಿಂದೆ ದೇವಾಲಯದ ಬಳಿ ಮತ್ತು ಪ್ರಮುಖ ವೃತ್ತಗಳಲ್ಲಿ ಮಾತ್ರ ಲೈಟಿಂಗ್ಸ್ ಅಳವಡಿಸಲಾಗುತ್ತಿತ್ತು. ಆದರೆ, ಕಳೆದ ಬಾರಿಯಿಂದ ಪ್ರಮುಖ ವೃತ್ತಗಳು ಸೇರಿ ಪ್ರಮುಖ ರಸ್ತೆಯುದ್ದಕ್ಕೂ ದೀಪಾಲಂಕಾರ ಮಾಡುವ ಮೂಲಕ ಇನ್ನಷ್ಟು ವರ್ಣರಂಜಿತಗೊಳಿಸಲಾಗಿದೆ. ಇದರ ಜೊತೆಗೆ ಹಾಸನ ನಗರದ ಮಹಾರಾಜ ಪಾರ್ಕ್ ಮುಂಭಾಗವಿರುವ ಹೇಮಾವತಿ ಪ್ರತಿಮೆ ಅದರ ಸುತ್ತಲೂ ಇರುವ ನೀರಿನ ಕಾರಂಜಿ ಪ್ರವಾಸಿಗರನ್ನು ರಂಜಿಸುತ್ತಿದೆ. ಬಣ್ಣದ ಬಣ್ಣದ ಕಾರಂಜಿ ನೋಡಿ ಭಕ್ತರು ಸಂತಸಪಡುತ್ತಿದ್ದಾರೆ.

    ಭಾನುವಾರ ವಿಶ್ವರೂಪ ದರ್ಶನದ ನಂತರ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ಮುಚ್ಚಲಿದೆ. ಆದರೆ ಇಡೀ ಜಾತ್ರಾ ಮಹೋತ್ಸವದ ಯಶಸ್ವಿಗೆ ಪೌರಕಾರ್ಮಿಕರು ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಕೊಡುಗೆ ಮಾತ್ರ ಅಪಾರವಾದದ್ದು. ಇನ್ನು ಹಾಸನಾಂಬೆ ಜಾತ್ರಾ ಮಹೋತ್ಸವ ದೀಪಾಲಂಕಾರ ಕಂಡು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತರು ದೀಪಲಂಕಾರ ಕಂಡು ನಿಬ್ಬೆರಗಾಗಿದ್ದಾರೆ.ಇದನ್ನೂ ಓದಿ: ಬಲಿಪಾಡ್ಯಮಿ; ಬಲಿ ಮೇಲೆ ವಾಮನ ಅವತಾರದಲ್ಲಿ ವಿಷ್ಣುವಿನ ವಿಜಯ

  • ಹಾಸನಾಂಬೆ ದೇವಿ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಕಾರು ಡಿಕ್ಕಿ- ತಂದೆ, ಮಗಳು ಸಾವು

    ಹಾಸನಾಂಬೆ ದೇವಿ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಕಾರು ಡಿಕ್ಕಿ- ತಂದೆ, ಮಗಳು ಸಾವು

    ಹಾಸನ: ಹಾಸನಾಂಬೆ (Hasanamba) ದೇವಿ ದರ್ಶನ ಮುಗಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂದೇ ಕುಟುಂಬದ ಮೂವರಿಗೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ತಂದೆ, ಮಗಳು ಸಾವನ್ನಪ್ಪಿದ್ದು, ತಾಯಿ ಸ್ಥಿತಿ ಗಂಭೀರವಾಗಿದೆ. ಹಾಸನ (Hasana) ನಗರದ ತಣ್ಣೀರಹಳ್ಳ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.

    ಕುಮಾರ್(38), ಕಾವ್ಯ(12) ಮೃತ ದುರ್ದೈವಿಗಳು. ಗುರುವಾರ ರಾತ್ರಿ ಪತ್ನಿ ಪುಟ್ಟಮ್ಮ, ಮಗಳು ಕಾವ್ಯ ಜೊತೆ ಕುಮಾರ್ ಹಾಸನಾಂಬೆ ದೇವಿ ದರ್ಶನಕ್ಕೆ ಹೋಗಿದ್ದರು. ದೇವಿ ದರ್ಶನ ಪಡೆದು ವಿಜಯನಗರದಲ್ಲಿರುವ (Vijayanagara) ಸಂಬಂಧಿಕರ ಮನೆಗೆ ಮೂವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರೊಂದು ಮೂವರಿಗೂ ಡಿಕ್ಕಿ ಹೊಡೆದಿದೆ. ಕುಮಾರ್ ಹಾಗೂ ಕಾವ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಪುಟ್ಟಮ್ಮನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದನ್ನೂ ಓದಿ: ಬೆಳಗಾವಿಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ – 30 ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು!

    ಫೋಟೋಗ್ರಾಫರ್ ಶಶಾಂಕ್ ಅಪಘಾತ ಮಾಡಿದ ಕಾರು ಚಾಲಕ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯದ ಜನತೆಗೆ ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ

  • ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರ ರದ್ದು

    ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರ ರದ್ದು

    ಹಾಸನ: ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್‌ ಸಂಚಾರವನ್ನು ಸರ್ಕಾರ ರದ್ದು ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಗೆ ಪ್ರಾರ್ಥನೆ ಸಲ್ಲಿಸಲು ದೇಶ-ವಿದೇಶಗಳಿಂದ ಭಕ್ತರ ದಂಡು ಹಾಸನಕ್ಕೆ ಹರಿದುಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಜನರು ಬಂದು ದೇವಿ ದರ್ಶನ ಪಡೆಯುತ್ತಿದ್ದಾರೆ.

    ಭಕ್ತರ ಸಾರಿಗೆ ಸೌಲಭ್ಯಕ್ಕಾಗಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ವಿಶೇಷ ಬಸ್‌ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಭಕ್ತರ ಸಂಖ್ಯೆ ಮಿತಿಮೀರಿದ್ದು ನಿಯಂತ್ರಣ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಲ್ಪಿಸಿದ್ದ 300 ಕ್ಕೂ ಹೆಚ್ಚು ವಿಶೇಷ ಬಸ್‌ ಸಂಚಾರವನ್ನು ರದ್ದು ಮಾಡಲಾಗಿದೆ.

    ಹಾಸನಾಂಬೆ ದರ್ಶನಕ್ಕೆ ಕೆನಡಾದಿಂದ ಬಂದ ಮಹಿಳೆ ದೇವಾಲಯದ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪುಟ್ಟ ಮಗು ಜೊತೆ ದೂರದ ದೇಶದಿಂದ ಬಂದ ಮಹಿಳೆ, ದೇವಿ ದರ್ಶನಕ್ಕೆ ಪರದಾಡಿದರು.

    ಸಾವಿರಾರು ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ಐದು ಗಂಟೆ ಕಾದರೂ ಹಾಸನಾಂಬೆ ದರ್ಶನ ಸಿಗಲಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಕೆನಡಾದಿಂದ ಬಂದಿರುವ ಹಾಸನಾಂಬೆ ಭಕ್ತೆ ರೋಷಿಣಿ ಅಸಮಾಧಾನ ಹೊರಹಾಕಿದ್ದಾರೆ.

  • ಉಪಚುನಾವಣೆ ಬ್ಯುಸಿಯಲ್ಲೂ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿ ದರ್ಶನ ಪಡೆದ ಡಿಕೆಶಿ

    ಉಪಚುನಾವಣೆ ಬ್ಯುಸಿಯಲ್ಲೂ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿ ದರ್ಶನ ಪಡೆದ ಡಿಕೆಶಿ

    ಹಾಸನ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ಉಪ ಚುನಾವಣೆಯ ಬ್ಯುಸಿ ನಡುವೆಯೂ ಶುಕ್ರವಾರ ರಾತ್ರಿ ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದೇವಿ (Hasanambe Devi) ದರ್ಶನ ಪಡೆದರು.

    ದೇವಿ ದರ್ಶನದ ಬಳಿಕ ಮಾತನಾಡಿದ ಅವರು, ಶುಭ ಶುಕ್ರವಾರ ತಾಯಿ ಹಾಸನಾಂಬೆ ದರ್ಶನಕ್ಕೆ ನಾನು ನನ್ನ ಕುಟುಂಬ ಸಮೇತ ಆಗಮಿಸಿದ್ದೇನೆ. ಕಣ್ತುಂಬ ದೇವಿಯ ದರ್ಶನವಾಯಿತು ಎಂದರು. ಈ ಬಾರಿಗೆ ಒಳ್ಳೆಯ ಮಳೆ ಬಂದು ಶಾಂತಿ, ನೆಮ್ಮದಿಯನ್ನು ತಾಯಿ ಕರುಣಿಸಿದ್ದಾಳೆ. ಮೈಸೂರು ದಸರಾವನ್ನೂ ಈ ಬಾರಿ ಬಹಳ ವಿಜೃಂಭಣೆಯಿಂದ ಮಾಡಿದ್ದೇವೆ ಎಂದರು. ಅಂತೆಯೇ ಹಾಸನದಲ್ಲೂ ಉತ್ತಮವಾಗಿ ಹಾಸನಾಂಬೆ ದೇವಿ ಉತ್ಸವ ಹಿನ್ನೆಲೆಯಲ್ಲಿ ಆಕರ್ಷಕ ರೀತಿಯಲ್ಲಿ ಅಲಂಕಾರ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿಖಿಲ್ ಸ್ಪರ್ಧೆ ಮಾಡದೆ ಇದ್ದಿದ್ದರೆ ಕುಮಾರಸ್ವಾಮಿ ಮಗ ಹೆದರಿ‌ ಓಡಿ ಹೋದ ಅಂತಿದ್ದರು: ಹೆಚ್.ಡಿ.ರೇವಣ್ಣ

    ತಾಯಿ ರಾಜ್ಯದ ಜನತೆಗೆ ನೆಮ್ಮದಿ, ಸುಖ, ಶಾಂತಿ ಕೊಡಲಿ ಎಂದು ಸರ್ಕಾರದಿಂದ ಪ್ರಾರ್ಥನೆ ಮಾಡಿದ್ದೇನೆ. ಹಿಂದೆಯೂ ಹಾಸನಾಂಬೆ ದೇವಿ ದರ್ಶನಕ್ಕೆ ಬಂದಿದ್ದೆ. ಹಾಗೆಯೇ ಇವತ್ತೂ ಕೂಡ ಬಂದಿದ್ದೇನೆ. ರಾಜ್ಯದ ಜನತೆಗೆ ಒಳ್ಳೆಯದಾಗಲಿ, ಐಶ್ವರ್ಯ, ವ್ಯವಸಾಯ-ವ್ಯಾಪಾರದಲ್ಲಿ ಸಮೃದ್ಧಿ ಕೊಡಲಿ ಎಂದು ಬೇಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: 15 ದಿನ ಬಿಟ್ಟು ಶೋಭಾ ಕರಂದ್ಲಾಜೆ ಭ್ರಷ್ಟಾಚಾರ ದಾಖಲೆ ರಿಲೀಸ್‌ ಮಾಡ್ತೀನಿ – ಬೈರತಿ ಸುರೇಶ್‌ ಬಾಂಬ್

    ಇದಕ್ಕೂ ಮುನ್ನ ಡಿಕೆಶಿ ಹಾಗೂ ಅವರ ಪತ್ನಿ ಉಷಾ ಮೊದಲಾದವರನ್ನು ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಎಸ್ಪಿ ಮಹಮದ್ ಸುಜೀತಾ ಮೊದಲಾದವರು ಛತ್ರಿ-ಚಾಮರ, ಕೊಂಬು-ಕಹಳೆ, ಮಂಗಳವಾದ್ಯ ಹಾಗೂ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು. ಮಾಜಿ ಎಂಎಲ್‌ಸಿ ಎಂ.ಎ ಗೋಪಾಲಸ್ವಾಮಿ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಹಾಜರಿದ್ದರು. ಇದನ್ನೂ ಓದಿ: ಖಲಿಸ್ತಾನಿಗಳಿಗೆ ಟ್ರೂಡೋ ಸರ್ಕಾರದ್ದೇ ಬೆಂಬಲ – ಭಾರತೀಯ ಹೈಕಮೀಷನರ್ ಸಂಜಯ್ ವರ್ಮಾ  

  • ಹಾಸನಾಂಬೆ ದರ್ಶನ ಸಿಗದೆ ವಾಪಸ್ ಹೋದ ಬಿಜೆಪಿ ಶಾಸಕ – ಸ್ವಪಕ್ಷದ ಶಾಸಕನ ವಿರುದ್ಧ ಗರಂ

    ಹಾಸನಾಂಬೆ ದರ್ಶನ ಸಿಗದೆ ವಾಪಸ್ ಹೋದ ಬಿಜೆಪಿ ಶಾಸಕ – ಸ್ವಪಕ್ಷದ ಶಾಸಕನ ವಿರುದ್ಧ ಗರಂ

    ಹಾಸನ: ಹಾಸನಾಂಬೆಯ (Hasanamba Temple) ದರ್ಶನ ಸಿಗದೇ ಬಿಜೆಪಿ (BJP) ಶಾಸಕ ಸ್ವಪಕ್ಷದ ಶಾಸಕನ ವಿರುದ್ಧ ಗರಂ ಆಗಿ, ಏಕವಚನದಲ್ಲೇ ಕಿಡಿಕಾರಿದ ಘಟನೆ ಹಾಸನದಲ್ಲಿ ನಡೆದಿದೆ.

    ಮೈಸೂರು (Mysuru) ಜಿಲ್ಲೆಯ ಚಾಮರಾಜ ಕ್ಷೇತ್ರದ ನಾಗೇಂದ್ರ (Nagendra) ಅವರು ಇಂದು ಮಧ್ಯಾಹ್ನ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿ ದರ್ಶನಕ್ಕೆ ಆಗಮಿಸಿದ್ದರು. ಆದರೆ ಆ ವೇಳೆ ನೈವೇದ್ಯಕ್ಕಾಗಿ ಗರ್ಭಗುಡಿ ಹಾಗೂ ದೇವಾಲಯದ ಮುಖ್ಯದ್ವಾರ ಮುಚ್ಚಲಾಗಿತ್ತು. ಆದರೆ ಒಂದು ಗಂಟೆಯಾದರೂ ದೇವಾಲಯದ ಒಳಗೆ ಹೋಗಲಾಗದೇ ಶಾಸಕ ನಾಗೇಂದ್ರ ಹಾಗೂ ಕುಟುಂಬಸ್ಥರು ಪರದಾಡಿದ್ದಾರೆ. ಎಷ್ಟೇ ಸಮಯ ಕಾದರೂ ದರ್ಶನ ಸಿಗದೇ ಬೇಸರದಿಂದ ವಾಪಸ್ ತೆರಳುವ ವೇಳೆ ಬಿಜೆಪಿ ಕಾರ್ಯಕರ್ತರ ಎದುರೇ ಶಾಸಕ ಪ್ರೀತಂಗೌಡ (Preetam Gowda) ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.

    “ನಿಮ್ಮ ಶಾಸಕ ಈ ಮಟ್ಟಕ್ಕೆ ನಡೆದುಕೊಳ್ತಾನಲ್ಲ, ಒಂದು ಫೋನ್ ತೆಗೆಯೋ ಸೌಜನ್ಯ ಇಲ್ಲ, ನಾವೇನು ಅವನ ನಿಧಿ ಕೇಳ್ತಾ ಇದ್ದೀವಾ, ಆಸ್ತಿ ಕೇಳ್ತಾ ಇದ್ದೀವಾ, ಒಬ್ಬ ಶಾಸಕ ಬಂದು ಇನ್ನೊಬ್ಬ ಶಾಸಕನಿಗೆ ಫೋನ್ ಮಾಡಿದ್ರೆ ಒಂದು ಫೋನ್ ತೆಗೆಯುವ ಸೌಜನ್ಯ ಇಲ್ಲ. ಈ ದೌಲತ್ತು ಹೆಚ್ಚು ದಿನ ನಡೆಯೋದಿಲ್ಲ ಬಿಡಿ. ನನಗೆ ಗೊತ್ತಿದೆ, ನಾಳೆ ಜಿಲ್ಲಾಡಳಿತದ ಕಡೆಯಿಂದ ಬರುತ್ತೇನೆ ಬಿಡಿ. ಇಷ್ಟೆಲ್ಲಾ ವ್ಯವಸ್ಥೆ ಮಾಡಿ ನಾವು ಬಂದ್ರೆ ದರ್ಶನಕ್ಕೆ ಅವಕಾಶ ಕೊಡಲ್ಲ, ಫೋನ್ ರಿಸೀವ್ ಮಾಡಲ್ಲ” ಎಂದು ಸ್ಥಳೀಯ ಶಾಸಕ ಪ್ರೀತಂಗೌಡ ವಿರುದ್ಧ ಶಾಸಕ ನಾಗೇಂದ್ರ ಏಕವಚನದಲ್ಲೇ ಕಿಡಿಕಾರಿದರು.

    ಇದೇ ವೇಳೆ ಹಾಸನ ಎಎಸ್‍ಪಿ ಎಂ.ಕೆ. ತಮ್ಮಯ್ಯ ವಿರುದ್ಧ ಶಾಸಕ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಹಾಸನಾಂಬೆ ದೇವಿ ದರ್ಶನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಮುಖ್ಯದ್ವಾರದ ಬಳಿ ಬಂದಾಗ ಶಾಸಕ ನಾಗೇಂದ್ರರನ್ನು ತಡೆದು ಶಾಸಕರಾದರೆ ನೀವು ಮಾತ್ರ ಒಳಗೆ ಬನ್ನಿ ಎಂದಿದ್ದಾರೆ. ಇದನ್ನೂ ಓದಿ: ಸ್ತ್ರೀ ನಿಂದನೆ, ಶೋಷಣೆ ಬಿಜೆಪಿಯವರ ಹುಟ್ಟುಗುಣ- ಗುಂಡೂರಾವ್ ಟೀಕೆ

    ಇದರಿಂದ ಕೆಂಡಾಮಂಡಲರಾದ ಶಾಸನ ನಾಗೇಂದ್ರ, ದೇವಾಲಯದ ಮುಖ್ಯದ್ವಾರದ ಬಳಿಯೇ ಗೃಹ ಇಲಾಖೆ ಕಚೇರಿಗೆ ಫೋನ್ ಮಾಡಿದ್ದು, ಒಂದು 25 ಜನರು ಹೊರಗಡೆ ನಿಂತಿದ್ದಾರೆ. ಶಾಸಕ ಆದರೆ ನೀವು ಒಬ್ಬರೇ ಬನ್ನಿ ಅಂದರೆ ಏನ್ ಇದರ ಅರ್ಥ, ದಯವಿಟ್ಟು ಅವರಿಗೆ ಸೂಚನೆ ನೀಡಬೇಕು. ನನಗೆ ಗೊತ್ತಿದೆ, ತಮ್ಮಯ್ಯನ ವಿಚಾರವನ್ನು ಗೃಹ ಸಚಿವರ ಹತ್ತಿರ ಮಾತಾಡುತ್ತೇನೆ. ಅವರು ಈ ರೀತಿ ರೂಡ್ ಆಗಿ ನಡೆದುಕೊಂಡರೆ ನಿಮ್ಮ ಡಿಪಾರ್ಟ್‍ಮೆಂಟ್‍ಗೆ ನಾಲಾಯಕ್. ನಾನು ದೇವಸ್ಥಾನದ ಒಳಗೆ ಹೋಗಬೇಕು, ನೀವು ಹಾಸನದ ಎಸ್ಪಿಗೆ ನೀಡಬೇಕು. 25 ಭಕ್ತರು ಇದ್ದಾರೆ. ಅವರ ಮುಂದೆ ನೀವೊಬ್ಬರೆ ಒಳಗೆ ಹೋಗಿ ಎಂದಿದ್ದಾರೆ. ನಮಗೆ ಗೌರವವಿರಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಶ್ರೀಸಾಮಾನ್ಯನನ್ನು ಅವಮಾನಿಸಬೇಡಿ – ಮೋದಿ ವಿರುದ್ಧ ಕೇಜ್ರಿವಾಲ್ ಕಿಡಿ

    Live Tv
    [brid partner=56869869 player=32851 video=960834 autoplay=true]

  • ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ವಿಐಪಿ ಪಾಲಿಟಿಕ್ಸ್- ಸಾಮಾನ್ಯ ಭಕ್ತರ ಆಕ್ರೋಶ

    ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ವಿಐಪಿ ಪಾಲಿಟಿಕ್ಸ್- ಸಾಮಾನ್ಯ ಭಕ್ತರ ಆಕ್ರೋಶ

    – ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡಿ, ಇಲ್ಲವೇ ಯಾರಿಗೂ  ನೀಡಬೇಡಿ
    – ಕೇವಲ ವಿಐಪಿಗಳಿಗೇಕೆ ಅವಕಾಶ ಎಂದು ಪ್ರಶ್ನೆ

    ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದ ಬಾಗಿಲನ್ನು ನವಂಬರ್ 5ರಿಂದ ತೆರೆಯಲಾಗಿದ್ದು, ಕೊರೊನಾ ಕಾರಣ ನೀಡಿ ಆಹ್ವಾನಿತ ಜನಪ್ರತಿನಿಧಿಗಳು, ವಿಐಪಿಗಳಿಗೆ ಮಾತ್ರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟು ಸಾಮಾನ್ಯ ಭಕ್ತರ ಪ್ರವೇಶ ನಿಷೇಧಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

    ಈ ವರ್ಷ ಕೊರೊನಾ ಕಾರಣ ನೀಡಿ ಆಹ್ವಾನಿತ ಜನಪ್ರತಿನಿಧಿಗಳು, ವಿಐಪಿಗಳಿಗೆ ನವೆಂಬರ್ 16 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಜನಸಾಮಾನ್ಯರ ದರ್ಶನ ನಿಷೇಧಿಸಲಾಗಿದೆ. ಜನಸಾಮಾನ್ಯರಿಗೆ ಒಂದು ಕಾನೂನು, ರಾಜಕಾರಣಿಗಳಿಗೆ ಮತ್ತೊಂದು ಕಾನೂನು. ಇದು ಎಷ್ಟರಮಟ್ಟಿಗೆ ಸರಿ, ದರ್ಶನದ ವ್ಯವಸ್ಥೆ ಇಲ್ಲ ಎಂದರೆ ಯಾರಿಗೂ ಅವಕಾಶ ನೀಡಬೇಡಿ ಎಂದು ಹಾಸನಾಂಬೆ ಭಕ್ತರು ಕಿಡಿಕಾರಿದ್ದಾರೆ.

    ಹಾಸನಾಂಬೆ ದೇವಿ ಹಲವು ಪವಾಡಗಳಿಗೆ, ನಂಬಿಕೆಗಳಿಗೆ ಹೆಸರಾಗಿದ್ದು, ಪೂಜೆ ಸಲ್ಲಿಸಿ ಬಾಗಿಲು ಹಾಕಿದ ನಂತರ ಹಚ್ಚಿಟ್ಟ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಬೆಳಗುತ್ತಿರುತ್ತದೆ. ದೇವರಿಗೆ ಮುಡಿಸಿದ ಹೂ ವರ್ಷವಾದರೂ ಬಾಡಿರುವುದಿಲ್ಲ. ದೇವರ ಮುಂದಿಟ್ಟ ನೈವೇದ್ಯ ಹಳಸಿರುವುದಿಲ್ಲ ಎಂಬ ನಂಬಿಕೆಯಿದೆ. ಅಷ್ಟೆ ಅಲ್ಲದೆ ವರ್ಷಕ್ಕೊಮ್ಮೆ ಹಾಸನಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದರೆ ನಮ್ಮ ಬೇಡಿಕೆ ಈಡೇರಲಿದೆ ಎಂಬ ನಂಬಿಕೆಯಿದೆ. ಹೀಗಾಗಿ ವರ್ಷಕ್ಕೊಮ್ಮೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಾಗ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

  • ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಇಂದು ಕಡೆ ದಿನ

    ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಇಂದು ಕಡೆ ದಿನ

    ಹಾಸನ: ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಇಂದು ಕಡೆಯ ದಿನವಾಗಿದ್ದು, ಮಂಗಳವಾರ ಮಧ್ಯಾಹ್ನ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗುತ್ತದೆ.

    ಅಕ್ಟೋಬರ್ 17ರಂದು ತೆರೆದಿದ್ದ ಹಾಸನಾಂಬ ದೇವಾಲಯ ಬಾಗಿಲು ಅಕ್ಟೋಬರ್ 29ರಂದು ಮುಚ್ಚುತ್ತಾರೆ. ಮೂರು ದಿನಗಳಿಂದ ದೇವಿ ದರ್ಶನಕ್ಕೆ ಭಕ್ತ ಸಾಗರ ಹರಿದುಬಂದಿದ್ದು, ಅಂದಾಜು ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.

    ಈ ಬಾರಿ 13 ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಿದ್ದಾಳೆ. ಮೊದಲ ದಿನ ಭಕ್ತರಿಗೆ ದೇವಿಯ ದರ್ಶನ ಇರಲಿಲ್ಲ. ಹಾಗೆಯೇ ಕೊನೆಯ ದಿನ ಕೂಡ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆದಿತ್ತು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತಸಾಗರ ಹರಿದು ಬಂದಿತ್ತು. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು ದೇವಿಯ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ.

    ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 3.30 ರಿಂದ ದಿನ ಮುಕ್ತಾಯದವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿಶೇಷ ದರ್ಶನಕ್ಕಾಗಿ 300 ಹಾಗೂ 1,000 ರೂ. ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿತ್ತು.

    ಜಿಲ್ಲಾಡಳಿತ ಭಕ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ದೇವಿಯ ಸುಗಮ ದರ್ಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

  • ಜಾಮೀನು ಸಿಕ್ಕಿದ್ದಕ್ಕೆ ಹಾಸನಾಂಬೆಗೆ ಡಿಕೆಶಿ ಪತ್ನಿಯಿಂದ ಪೂಜೆ

    ಜಾಮೀನು ಸಿಕ್ಕಿದ್ದಕ್ಕೆ ಹಾಸನಾಂಬೆಗೆ ಡಿಕೆಶಿ ಪತ್ನಿಯಿಂದ ಪೂಜೆ

    – ತಾಯಿಗೆ ಪುತ್ರಿ ಐಶ್ವರ್ಯ ಸಾಥ್

    ಹಾಸನ: ಮಾಜಿ ಸಚಿವ, ಪತಿ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಪತ್ನಿ ಉಷಾ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ತಾಯಿಗೆ ಪುತ್ರಿ ಐಶ್ವರ್ಯ ಸಾಥ್ ನೀಡಿದ್ದಾರೆ.

    ಹಾಸನಾಂಬೆ ದರ್ಶನದ ಭಾಗ್ಯ ಭಕ್ತರಿಗೆ ವರ್ಷಕ್ಕೊಮ್ಮೆ ಮಾತ್ರ ಇರುತ್ತದೆ. ಜಾರಿ ನಿರ್ದೇಶನಾಲಯದ ಬಲೆಯಲ್ಲಿ ಸಿಲುಕಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಹಾಸನಾಂಬೆಯ ಆಶೀರ್ವಾದ ಸಿಕ್ಕಿದೆ. ಅತ್ತ ಮಾಜಿ ಸಚಿವರು ದೆಹಲಿಯಿಂದ ರಾಜ್ಯಕ್ಕೆ ಬರುವುದು ಖಚಿತವಾಗುತ್ತಿದ್ದಂತೆ, ಇತ್ತ ಕುಟುಂಬಸ್ಥರು ಹಾಸನಾಂಬೆ ದರ್ಶನ ಪಡೆದಿದ್ದಾರೆ.

    ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಮತ್ತು ಪುತ್ರಿ ಐಶ್ವರ್ಯ ಹಾಸನಾಂಬೆ ಸನ್ನಿಧಿಯಲ್ಲಿ ಕುಳಿತು ತಾಯಿಯ ದರ್ಶನ ಪಡೆದರು. ಈ ವೇಳೆ ಗರ್ಭಗುಡಿಯಲ್ಲಿ ಕುಳಿತು ಅರ್ಧ ಗಂಟೆ ಧ್ಯಾನ ಮಾಡಿದರು. ಡಿ.ಕೆ.ಶಿವಕುಮಾರ್ ಕುಟುಂಬಸ್ಥರಿಗೆ ಹಾಸನದ ವಿಧಾನ ಪರಿಷತ್ ಸದಸ್ಯ ಗೋಪಾಲ್ ಸ್ವಾಮಿ ಸಾಥ್ ನೀಡಿದರು.

    ಕಳೆದ ಬಾರಿ ಹಾಸನಾಂಬೆ ದರ್ಶನಕ್ಕೆ ಸ್ವತಃ ಡಿ.ಕೆ.ಶಿಕುಮಾರ್ ಅವರು ಕುಟುಂಬಸ್ಥರೊಂದಿಗೆ ಬಂದು ದರ್ಶನ ಪಡೆದಿದ್ದರು. ಈ ವೇಳೆ ಪ್ರತಿ ವರ್ಷವೂ ಹಾಸನಾಂಬೆ ಸನ್ನಿಧಿಗೆ ಬಂದು ದರ್ಶನಕ್ಕೆ ಬರುವುದಾಗಿ ಹೇಳಿದ್ದರು. ಆದರೆ ಈ ಬಾರಿ ಡಿಕೆ ಶಿವಕುಮಾರ್ ಅವರಿಗೆ ದೇವಿಯ ದರ್ಶನ ಸಿಗದಿದ್ದರೂ ಕುಟುಂಬ ಸದಸ್ಯರು ಬಂದು ಹಾಸನಾಂಬೆ ದರ್ಶನ ಪಡೆದಿದ್ದಾರೆ.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದು ತಿಹಾರ್ ಜೈಲು ಸೇರಿದ್ದರು. 48 ದಿನಗಳ ಕಾಲ ಜೈಲಿನಿದ್ದ ಮಾಜಿ ಸಚಿವರು ಬುಧವಾರ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.