ಹಾಸನ: ಹೆಚ್‍ಡಿ ಕುಮಾರಸ್ವಾಮಿ ಕಿಂಗ್ ಮೇಕರ್ ಆಗ್ತಾರೆ ಎಂಬ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಅವರ ಹೇಳಿಕೆಗೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ.
ದೇವರು, ಜನರ ಅನುಗ್ರಹ ಇದ್ದರೆ ಕುಮಾರಸ್ವಾಮಿ ಅಧಿಕಾರ ಹಿಡಿಯಬಹುದು ಎಂದು ದೇವೇಗೌಡರು ಹೇಳಿದ್ದಾರೆ. ಹಾಸನಾಂಬೆ ದರ್ಶನದ ನಂತರ ಪ್ರತಿಕ್ರಿಯೆ ನೀಡಿದ ಅವರು, ಒಬ್ಬೊಬ್ಬರ ಭಾವನೆ, ನಂಬಿಕೆ ಒಂದೊಂದು ರೀತಿ ಇರುತ್ತದೆ. ನಾನು ದೇವರು ಮತ್ತು ಜ್ಯೋತಿಷ್ಯವನ್ನು ನಂಬುತ್ತೇನೆ. ಆದ್ರೆ ನಾನೊಬ್ಬ ತಂದೆಯಾಗಿ ಮಗನ ಆರೋಗ್ಯ ಕಾಪಾಡಮ್ಮ ಎಂದು ಹಾಸಬಾಂಬೆಯಲ್ಲಿ ಬೇಡಿಕೊಂಡಿದ್ದೇನೆ ಅಂದ್ರು.

ಸಿಎಂ ಸಿದ್ದರಾಮಯ್ಯ ಮರಳಿ ಜೆಡಿಎಸ್‍ಗೆ ಬರೋ ವದಂತಿ ಕುರಿತು ಪ್ರತಿಕ್ರಿಯಿಸಿದ ಹೆಚ್‍ಡಿಡಿ, ಸಿದ್ದರಾಮಯ್ಯು ಜವಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹಾಗೆಲ್ಲಾ ಲಘುವಾಗಿ ಮಾತನಾಡಬೇಡಿ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಬಹುದು ಅಂತ ಹೇಳಿದ್ರು.

ಗುರುವಾರದಂದು ಹಾಸನಾಂಬೆ ದೇವಾಲಯದಲ್ಲಿ ಮಾತನಾಡಿದ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ, ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ. ದೇವರ ಮೊರೆಯಿಂದ ಪರಿಹಾರ ಕಂಡುಕೊಳ್ಳದೇ ಹೋದ್ರೆ ಮೃತ್ಯು ಕೂಡ ಎದುರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಮೋದಿ ಅವರದ್ದು ವೃಶ್ಚಿಕ ರಾಶಿ. ಅದರಲ್ಲಿನ ದೋಷ ಇದಕ್ಕೆ ಕಾರಣ ಎಂದಿದ್ದಾರೆ.

ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್‍ಡಿಕೆ ಕಿಂಗ್ ಮೇಕರ್ ಆಗಲಿದ್ದಾರೆ. ಅವರ ಮೇಲೆ ಉತ್ತರ ಕರ್ನಾಟಕ ಜನ ನಂಬಿಕೆ ಇಟ್ಟಿದ್ದಾರೆ. ಆದರೆ ಅವರು ತಂದೆ ಮಾತು ಕೇಳಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಮತ್ತೊಮ್ಮೆ ಸಿಎಂ ಆಗೋ ಯೋಗ ಅವರಿಗಿದೆ. ಸಿಎಂ ಸಿದ್ದರಾಮಯ್ಯ ಈವರೆಗೆ ಮಾಡಿರುವ ತಪ್ಪು ಸರಿಪಡಿಸಿಕೊಳ್ಳಬೇಕು. ಅವರ ಸುತ್ತಮುತ್ತ ಕೆಲವು ಕಚಡಾ ಮಂತ್ರಿಗಳಿದ್ದಾರೆ ಅಂತ ಹೇಳಿದ್ದಾರೆ.





