Tag: ಹಾವೇರಿ ಹಾಲು ಒಕ್ಕೂಟ

  • ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ದರ ಪರಿಷ್ಕರಣೆ – ಪ್ರತಿ ಲೀಟರ್‌ ಹಾಲಿನ ದರ ಎಷ್ಟು?

    ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ದರ ಪರಿಷ್ಕರಣೆ – ಪ್ರತಿ ಲೀಟರ್‌ ಹಾಲಿನ ದರ ಎಷ್ಟು?

    ಹಾವೇರಿ: ಮಾರ್ಚ್ 28 ರಂದು ಹೊರಡಿಸಿದ್ದ ದರ ಪರಿಷ್ಕರಣೆ ಆದೇಶವನ್ನು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (Haveri Milk Producers Associations) ಹಿಂಪಡೆದು ಏಪ್ರಿಲ್‌ 1 ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್‌ಗೆ 34.05 ರೂಪಾಯಿ ದರವನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ.

    ಈ ಮೊದಲು 31.50 ಪೈಸೆ ದರವಿತ್ತು. ಈಗ ರೈತರಿಗೆ ಎರಡೂವರೆ ರೂಪಾಯಿ ದರ ಹೆಚ್ಚಳ ಮಾಡಲಾಗಿದೆ ಎಂದು ಹಾವೇರಿ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ್‌ ಅವರು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಅಗ್ನಿ ಅವಘಡ | 345 ವಾಹನಗಳು ಭಸ್ಮ – ಬೆಂಕಿ ನಂದಿಸಲು 2ಗಂಟೆ ಕಾಲ ಹರಸಾಹಸ ಪಟ್ಟ ಅಧಿಕಾರಿಗಳು

    ನಗರದ ಒಕ್ಕೂಟದ ಕಚೇರಿಯಲ್ಲಿ ಮಾತನಾಡಿದ ಅವರು, 4 ರೂಪಾಯಿಗೆ ಬದಲಾಗಿ, ಎರಡೂವರೆ ರುಪಾಯಿ ಹೆಚ್ಚಳ ಮಾಡಲಾಗಿದೆ. ಹಾವೇರಿ ಹಾಲು ಒಕ್ಕೂಟ ಅರ್ಥಿಕವಾಗಿ ನಷ್ಟದಲ್ಲಿರುವುದರಿಂದ ಎರಡೂವರೆ ರೂಪಾಯಿ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಒಂದು ದಿನಕ್ಕೆ, 2,87,500 ರೂಪಾಯಿ ಕೊಡಬೇಕಾಗುತ್ತದೆ. ಪ್ರತಿ ತಿಂಗಳಿಗೆ 86,25,000 ರೂಪಾಯಿ ನಷ್ಟವಾಗಲಿದ್ದು, ವರ್ಷಕ್ಕೆ 10.35 ಕೋಟಿ ರೂ. ನಷ್ಟವಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: Bhovi Corporation Scam – ಜನರಲ್ ಮ್ಯಾನೇಜರ್ ನಾಗರಾಜಪ್ಪ 14 ದಿನ ಇಡಿ ಕಸ್ಟಡಿಗೆ

    ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್‌ ಅವರೊಂದಿಗೆ ದರ ಪರಿಷ್ಕರಣೆ ವಿಚಾರವಾಗಿ ಸಭೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾರೆ. ಯುಹೆಚ್‌ಟಿ ಪ್ಲಾಂಟ್‌ನ್ನು ಬೆಂಗಳೂರು ಕೆಎಂಎಫ್‌ಗೆ ವಹಿಸಿಕೊಡುವ ತೀರ್ಮಾನ ಮಾಡಿದ್ದಾರೆ. ಬಾಂಬೆ ಮತ್ತು ಹುಬ್ಬಳ್ಳಿ ಮಾರ್ಕೆಟ್ ಕೊಡಿಸುವುದಾಗಿ ಸಚಿವರು ಹೇಳಿದ್ದಾರೆ. ಬೇರೆ ಮಾರ್ಕೆಟ್ ಕೊಡಿಸಿದರೆ ನಷ್ಟ ಸರಿಯಾಗಲಿದೆ. ಹಾವೇರಿ ಹಾಲು ಒಕ್ಕೂಟವನ್ನು ನಷ್ಟದ ಸುಳಿಯಿಂದ ಪಾರು ಮಾಡಿ ಲಾಭದತ್ತ ತರಲು ಪ್ರಯತ್ನ ಮಾಡಲಾಗುವುದು.

    ಏಪ್ರಿಲ್‌ 12 ರಂದು ಬೆಂಗಳೂರಿನಲ್ಲಿ ಬೆಂಗಳೂರಿನ ಕೆಎಂಎಫ್, ಜಿಲ್ಲೆಯ ಶಾಸಕರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರ ನೇತೃತ್ವದಲ್ಲಿ ಸಭೆ ನಡೆಸಲಾಗುವುದು. ಅಲ್ಲಿ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು. ಇದನ್ನೂ ಓದಿ: ಅಯ್ಯೋ ವಿಧಿಯೇ… ಕಾಲೇಜಿನಲ್ಲಿ ವಿದಾಯ ಭಾಷಣ ಮಾಡುತ್ತಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

  • ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ದರ 3.50 ರೂ. ಇಳಿಕೆ!

    ಹಾವೇರಿ ಹಾಲು ಒಕ್ಕೂಟದಿಂದ ಹಾಲಿನ ದರ 3.50 ರೂ. ಇಳಿಕೆ!

    ಹಾವೇರಿ: ರಾಜ್ಯದಲ್ಲಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರೂ. ಏರಿಕೆ (Milk Price Hike) ಮಾಡಿ ಗ್ರಾಹಕರಿಗೆ ಶಾಕ್ ನೀಡಿತ್ತು. ಆದ್ರೆ ಹಾವೇರಿ ಜಿಲ್ಲಾ ಹಾಲು ಒಕ್ಕೂಟ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ. ಪ್ರತಿ ಲೀಟರ್ ಹಾಲಿನ ದರ 3.50 ರೂ. ಇಳಿಕೆ ಮಾಡಿದೆ.

    ಮಾರ್ಚ್ 28 ರಿಂದ ಆದೇಶವನ್ನ ಜಾರಿಗೆ ಮಾಡಿದೆ. ಏಪ್ರೀಲ್ 1 ರಿಂದ ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಿಸಲು ಕೆಎಂಎಫ್ (KMF) ನಿರ್ಧಾರ ಮಾಡಿದೆ. ಆದರೆ ಹಾವೇರಿ ಹಾಲು ಒಕ್ಕೂಟ ಮಾತ್ರ ಲೀಟರ್ ಹಾಲಿಗೆ 3.50 ರೂ.ಪಾಯಿ ಕಡಿಮೆ ಮಾಡಿ ಆದೇಶ ಮಾಡಿದೆ, ಇದು ರೈತರ ಆಕ್ರೋಶ ಕಾರಣವಾಗಿದೆ. ಇದನ್ನೂ ಓದಿ: Milk Price Hike | ಗ್ಯಾರಂಟಿ ಸರ್ಕಾರದ ಬಂದ ಮೇಲೆ ಯಾವುದು ಎಷ್ಟು ಏರಿಕೆ? ಮುಂದೆ ಏನೇನು ಶಾಕ್ ಸಿಗುತ್ತೆ?

    ಎಮ್ಮೆ ಹಾಲಿಗೆ ಲೀಟರ್‌ಗೆ 43 ರೂ. ನೀಡಲಾಗುತ್ತಿತ್ತು. ಹಸುವಿನ ಹಾಲಿಗೆ 30.50 ರೂಪಾಯಿ ನೀಡಲಾಗ್ತಿತ್ತು. ಆದರೆ ಆರ್ಥಿಕ ನಷ್ಟ ಉಂಟಾಗಿದೆ ಎಂಬ ಕಾರಣ ನೀಡಿ 3.50 ರೂಪಾಯಿ ಕಟ್ ಮಾಡಿದೆ. ಮಾರ್ಚ್ 27ರಂದೇ ಹಾವೆಮುಲ್‌ ಆದೇಶ ಮಾಡಿದೆ. ಇದರಿಂದ 43 ರೂ. ಇದ್ದ ಎಮ್ಮೆ ಹಾಲಿನ ದರ 39.50 ರೂ., 30.50 ರೂ. ಇದ್ದ ಹಸುವಿನ ಹಾಲಿನ ದರ 27 ರೂ.ಗಳಿಗೆ ಇಳಿಕೆಯಾಗಿದೆ. ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್‌ ಶಾಕ್‌ – ಫಿಕ್ಸೆಡ್ ಚಾರ್ಜ್ ದರ 25 ರೂ. ಏರಿಕೆ

    ಹಾಲು ಉತ್ಪನ್ನಗಳ ದರ ಕುಸಿತವಾಗಿದೆ. ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಿ ಒಕ್ಕೂಟಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಒಕ್ಕೂಟದ ಆರ್ಥಿಕ ನಷ್ಟ ಕಡಿಮೆ ಮಾಡಲು ದರ ಕಡಿಮೆ ಮಾಡಲಾಗಿದೆ ಎಂದು ಹಾಲು ಒಕ್ಕೂಟ ನಿರ್ದೇಶಕರು ಆದೇಶ ಮಾಡಿದ್ದಾರೆ. ಆದರೆ ಜಿಲ್ಲೆಯ ಹಾಲು ಉತ್ಪಾದಕ ರೈತರು ಗ್ರಾಹಕರಿಗೆ 4 ಏರಿಕೆ ಮಾಡಿದ್ದಾರೆ. ಮೊದಲು ಕೊಡುವ ದರದಲ್ಲಿ ಇಳಿಕೆ ಮಾಡಿದ್ದು ಯಾವ ನ್ಯಾಯ ನಿಮ್ಮದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Exclusive | ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಕೇಸ್‌ – ಆಡಿಯೋದಲ್ಲಿ ಬಯಲಾಯ್ತು ಸಂಚಿನ ರಹಸ್ಯ